Micah · chapter 1 · verse 5
Micah 1:5 in Kannada
ಇದೆಲ್ಲಾ ಯಾಕೋಬಿನ ಅಪರಾಧದ ನಿಮಿತ್ತವೂ ಇಸ್ರಾಯೇಲಿನ ಮನೆತನದ ವರ ಪಾಪಗಳ ನಿಮಿತ್ತವೂ ಆಯಿತು; ಯಾಕೋಬಿನ ಅಪರಾಧವೇನು? ಸಮಾರ್ಯವಲ್ಲವೋ? ಯೆಹೂ ದದ ಉನ್ನತಸ್ಥಳಗಳೇನು? ಯೆರೂಸಲೇಮಲ್ಲವೋ?
Idellaa yaakobina aparaadhada nimittavoo israayelina manetanada vara paapagala nimittavoo aayitu; yaakobina aparaadhavenu? Samaaryavallavo? Yehoo dada unnatasthalagalenu? Yeroosalemallavo?
Micah 1:5 in English
- King James Version (KJV)
- For the transgression of Jacob [is] all this, and for the sins of the house of Israel. What [is] the transgression of Jacob? [is it] not Samaria? and what [are] the high places of Judah? [are they] not Jerusalem?
- World English Bible (WEB)
- “All this is for the disobedience of Jacob, and for the sins of the house of Israel. What is the disobedience of Jacob? Isn’t it Samaria? And what are the high places of Judah? Aren’t they Jerusalem?
- American Standard Version (ASV)
- For the transgression of Jacob is all this, and for the sins of the house of Israel. What is the transgression of Jacob? is it not Samaria? and what are the high places of Judah? are they not Jerusalem?
- Bible in Basic English (BBE)
- All this is because of the wrongdoing of Jacob and the sins of the children of Israel. What is the wrongdoing of Jacob? is it not Samaria? and what are the high places of Judah? are they not Jerusalem?
- Darby Translation (DBY)
- For the transgression of Jacob is all this, and for the sins of the house of Israel. Whence is the transgression of Jacob? is it not [from] Samaria? And whence are the high places of Judah? are they not [from] Jerusalem?
- Webster's Bible (WBS)
- For the transgression of Jacob [is] all this, and for the sins of the house of Israel. What [is] the transgression of Jacob? [is it] not Samaria? and what [are] the high places of Judah? [are they] not Jerusalem?
- Young's Literal Translation (YLT)
- For the transgression of Jacob [is] all this, And for the sins of the house of Israel. What [is] the transgression of Jacob? Is it not Samaria? And what the high places of Judah? Is it not Jerusalem?
Read in context
- 3ಇಗೋ, ಕರ್ತನು ತನ್ನ ಸ್ಥಾನದಿಂದ ಹೊರಡುತ್ತಾನೆ; ಆತನು ಇಳಿದು ಭೂಮಿಯ ಉನ್ನತವಾದ ಸ್ಥಳಗಳ ಮೇಲೆ ತುಳಿಯುವನು.
- 4ಬೆಂಕಿಯ ಮುಂದೆ ಮೇಣದ ಹಾಗೆಯೂ ಇಳಿಜಾರಿನ ಸ್ಥಳದಲ್ಲಿ ಸುರಿಯುವ ನೀರಿನ ಹಾಗೆಯೂ ಬೆಟ್ಟಗಳು ಆತನ ಕೆಳಗೆ ಕರಗುವವು; ತಗ್ಗುಗಳು ಸೀಳುವವು.
- 5ಇದೆಲ್ಲಾ ಯಾಕೋಬಿನ ಅಪರಾಧದ ನಿಮಿತ್ತವೂ ಇಸ್ರಾಯೇಲಿನ ಮನೆತನದ ವರ ಪಾಪಗಳ ನಿಮಿತ್ತವೂ ಆಯಿತು; ಯಾಕೋಬಿನ ಅಪರಾಧವೇನು? ಸಮಾರ್ಯವಲ್ಲವೋ? ಯೆಹೂ ದದ ಉನ್ನತಸ್ಥಳಗಳೇನು? ಯೆರೂಸಲೇಮಲ್ಲವೋ?
- 6ಹೀಗಿರುವದರಿಂದ ನಾನು ಸಮಾರ್ಯವನ್ನು ಹೊಲದ ದಿಬ್ಬೆಯಾಗಿಯೂ ದ್ರಾಕ್ಷೇ ಬಳ್ಳಿ ನೆಡುವ ಸ್ಥಳವಾಗಿಯೂ ಮಾಡುವೆನು; ಅದರ ಕಲ್ಲುಗಳನ್ನು ತಗ್ಗಿನಲ್ಲಿ ಸುರಿದುಬಿಟ್ಟು; ಅದರ ಅಸ್ತಿವಾರಗಳನ್ನು ಹೊರ ಗೆಡುವೆನು.
- 7ಅದರ ಕೆತ್ತಿದ ವಿಗ್ರಹಗಳೆಲ್ಲಾ ತುಂಡು ಗಳಾಗುವಂತೆ ಒಡೆಯಲ್ಪಡುವವು. ಅದಕ್ಕೆ ಆದ ಸಂಪಾದನೆಗಳೆಲ್ಲಾ ಬೆಂಕಿಯಿಂದ ಸುಡಲ್ಪಡುವವು; ಅದರ ವಿಗ್ರಹಗಳನ್ನೆಲ್ಲಾ ಹಾಳುಮಾಡುವೆನು; ಸೂಳೆಯ ಕೂಲಿಯಿಂದ ಅವುಗಳನ್ನು ಕೂಡಿಸಿ ಕೊಂಡಿತು, ಸೂಳೆಯ ಕೂಲಿಗೆ ಅವು ತಿರುಗುವವು.
Cross references
- Jeremiah 2:19 ಯೆರೆಮೀಯ 2:19ನಿನ್ನ ಕೆಟ್ಟತನವೇ ನಿನ್ನನ್ನು ತಿದ್ದುವದು; ನಿನ್ನ ಹಿಂಜಾರಿಕೆಗಳೇ ನಿನ್ನನ್ನು ಗದರಿಸುವವು; ಹೀಗಿ ರುವದರಿಂದ ನೀನು ನಿನ್ನ ದೇವರಾದ ಕರ್ತನನ್ನು ಬಿಟ್ಟದ್ದೂ ನನ್ನ ಭಯವೂ ನಿನ್ನಲ್ಲಿ ಇಲ್ಲದಿರುವದೂ ಕೆಟ್ಟದ್ದೂ ಕಹಿಯಾದದ್ದೂ ಎಂದು ತಿಳುಕೊಂಡು ನೋಡು ಎಂದು ಸೈನ್ಯಗಳ ಕರ್ತನಾದ ದೇವರು ಅನ್ನುತ್ತಾನೆ.
- Amos 8:14 ಆಮೋಸ 8:14ಅವರು ಸಮಾರ್ಯದ ಪಾಪದ ಮೇಲೆ ಆಣೆಯಿಟ್ಟುಕೊಂಡು--ಓ ದಾನೇ, ನಿನ್ನ ದೇವರ ಜೀವದಾಣೆ ಎಂದೂ ಬೇರ್ಷೆಬ ಮಾರ್ಗದ ಜೀವದಾಣೆ ಎಂದೂ ಹೇಳುವವರು ಬಿದ್ದು ಮತ್ತೆ ಮೇಲೆ ಏಳಲಾರರು.
- 1 Thessalonians 2:15–16 1 ಥೆಸಲೊನೀಕದವರಿಗೆ 2:15–16ಆ ಯೆಹೂದ್ಯರು ಕರ್ತನಾದ ಯೇಸುವನ್ನು ಮತ್ತು ತಮ್ಮ ಸ್ವಂತ ಪ್ರವಾದಿಗಳನ್ನು ಕೊಂದರು; ನಮ್ಮನ್ನು ಹಿಂಸಿಸಿದರು; ಅವರು ದೇವರನ್ನು ಮೆಚ್ಚಿಸುವವರಲ್ಲ, ಎಲ್ಲಾ ಮನುಷ್ಯರಿಗೂ ವಿರೋಧಿಗಳಾಗಿದ್ದಾರೆ. ಅನ್ಯ ಜನರಿಗೆ ರಕ್ಷಣೆಯಾಗುವಂತೆ ಸುವಾರ್ತೆಯನ್ನು ಹೇಳುವ ನಮಗೆ ಅವರು ಅಡ್ಡಿ ಮಾಡುತ್ತಾರೆ; ಹೀಗೆ ತಮ್ಮ ಪಾಪಗಳನ್ನು ಯಾವಾಗಲೂ ಪರಿಪೂರ್ಣ ಮಾಡುವದಕ್ಕೆ ಹೋಗುತ್ತಾರೆ; ಆದರೆ ದೇವರ ಕೋಪವು ಅವರ ಮೇಲೆ ಸಂಪೂರ್ಣವಾಗುತ್ತಾ ಬಂತು.
- 1 Kings 13:32 1 ಅರಸುಗಳು 13:32ಅವನು ಬೇತೇಲಿನಲ್ಲಿರುವ ಬಲಿಪೀಠಕ್ಕೆ ವಿರೋಧವಾಗಿಯೂ ಸಮಾರ್ಯ ಪಟ್ಟಣಗಳಲ್ಲಿರುವ ಉನ್ನತ ಸ್ಥಳಗಳ ಸಮಸ್ತ ಮನೆಗಳಿಗೆ ವಿರೋಧವಾಗಿಯೂ ಕರ್ತನ ಮಾತಿನಂತೆ ನಿಶ್ಚಯವಾಗಿ ಆಗುವದು ಅಂದನು.
- Isaiah 59:1–15 ಯೆಶಾಯ 59:1–15ಇಗೋ, ಕರ್ತನ ಕೈ ರಕ್ಷಿಸಲಾರದ ಹಾಗೆ ಮೋಟುಗೈಯಲ್ಲ. ಆತನ ಕಿವಿ ಕೇಳ ಲಾರದ ಹಾಗೆ ಕಿವುಡಲ್ಲ. ನಿಮ್ಮ ಅಕ್ರಮಗಳೇ ನಿಮ್ಮನ್ನು ನಿಮ್ಮ ದೇವರಿಂದ ಅಗಲಿಸಿಯವೆ; ನಿಮ್ಮ ಪಾಪಗಳೇ ಆತನು ಕೇಳದ ಹಾಗೆ ಆತನ ಮುಖವನ್ನು ನಿಮಗೆ ಮರೆಮಾಡಿಯವೆ. ನಿಮ್ಮ ಕೈಗಳು ರಕ್ತದಿಂದಲೂ ನಿಮ್ಮ ಬೆರಳುಗಳು ಅಕ್ರಮದಿಂದಲೂ ಮೈಲಿಗೆಯಾಗಿವೆ; ನಿಮ್ಮ ತುಟಿಗಳು ಸುಳ್ಳನ್ನು ಮಾತಾಡುತ್ತವೆ; ನಿಮ್ಮ ನಾಲಿಗೆ ಅನ್ಯಾಯವನ್ನು ನುಡಿಯುತ್ತದೆ. ನ್ಯಾಯಕ್ಕೋಸ್ಕರ ಕರೆಯುವವನು ಯಾವನೂ ಇಲ್ಲ; ಇಲ್ಲವೆ ಸತ್ಯಕ್ಕೋಸ್ಕರ ಬೇಡು ವವನು ಒಬ್ಬನೂ ಇಲ್ಲ. ವ್ಯರ್ಥತ್ವದಲ್ಲಿ ವಿಶ್ವಾಸ ಇಡು ತ್ತಾರೆ. ಸುಳ್ಳನ್ನು ಮಾತಾಡುತ್ತಾರೆ; ಕೇಡನ್ನು ಗರ್ಭಧರಿಸಿ ಕೊಳ್ಳುತ್ತಾರೆ ಅಕ್ರಮವನ್ನು ಹೆರುತ್ತಾರೆ. ಹಾವಿನಂತೆ ಮೊಟ್ಟೆಗಳನ್ನು ಮರಿ ಮಾಡುತ್ತಾರೆ, ಜೇಡಹುಳದ ನೂಲನ್ನು ನೇಯುತ್ತಾರೆ; ಅದರ ಮೊಟ್ಟೆಗಳನ್ನು ತಿನ್ನುವವನು ಸಾಯುವನು; ಒಡೆಯುವಂಥಾದ್ದರಿಂದ ವಿಷದ ಮರಿಯು ಹೊರಡುವದು. ಅವರ ನೂಲು ವಸ್ತ್ರಕ್ಕಾಗದು; ತಮ್ಮ ಕೆಲಸಗಳಿಂದ ತಮ್ಮನ್ನು ಹೊದ್ದು ಕೊಳ್ಳರು; ಅವರ ಕೆಲಸಗಳು ಅಕ್ರಮದ ಕೆಲಸಗಳೇ; ಅವರ ಕೈಗಳಲ್ಲಿ ಹಿಂಸೆಯ ಕ್ರಿಯೆಗಳು ಅವೆ. ಅವರ ಕಾಲುಗಳು ಕೇಡಿಗೆ ಓಡುತ್ತವೆ; ಅಪರಾಧವಿಲ್ಲದ ರಕ್ತ ವನ್ನು ಚೆಲ್ಲುವದಕ್ಕೆ ತ್ವರೆಪಡುತ್ತವೆ. ಅವರ ಆಲೋ ಚನೆ ಗಳು ದುಷ್ಟತನದ ಆಲೋಚನೆಗಳೇ; ನಷ್ಟವೂ ನಾಶವೂ ಅವರ ಮಾರ್ಗಗಳಲ್ಲಿ ಅವೆ. ಸಮಾ ಧಾನದ ಮಾರ್ಗವನ್ನರಿಯರು; ಅವರ ದಾರಿಗಳಲ್ಲಿ ನ್ಯಾಯವಿಲ್ಲ; ತಮ್ಮ ಹಾದಿಗಳನ್ನು ಡೊಂಕು ಮಾಡಿ ಕೊಂಡಿದ್ದಾರೆ; ಅವುಗಳಲ್ಲಿ ನಡೆಯುವವರೆಲ್ಲರು ಸಮಾ ಧಾನವನ್ನರಿಯರು. ಆದದರಿಂದ ನ್ಯಾಯವು ನಮಗೆ ದೂರವಾಯಿತು; ನೀತಿಯು ನಮ್ಮನ್ನು ಸೇರದು; ಬೆಳಕಿ ಗೋಸ್ಕರ ಕಾದುಕೊಳ್ಳುತ್ತೇವೆ, ಆದರೆ ಇಗೋ ಕತ್ತಲೆ, ಪ್ರಕಾಶವನ್ನು ಹಾರೈಸಿ ಅಂಧಕಾರದಲ್ಲಿ ನಡೆದುಕೊಳ್ಳು ತ್ತೇವೆ. ಕುರುಡರ ಹಾಗೆ ಗೋಡೆಯನ್ನು ತಡವರಿ ಸುತ್ತೇವೆ; ಕಣ್ಣಿಲ್ಲದವರ ಹಾಗೆ ತಡವಾಡುತ್ತೇವೆ; ಮಧ್ಯಾಹ್ನದಲ್ಲಿ, ರಾತ್ರಿಯ ಹಾಗೆ ಎಡವುತ್ತೇವೆ, ಸತ್ತವರ ಹಾಗೆ ಹಾಳಾದ ಸ್ಥಳಗಳಲ್ಲಿ ಇದ್ದೇವೆ. ನಾವೆಲ್ಲರೂ ಕರಡಿಗಳ ಹಾಗೆ ಗುರುಗುಟ್ಟುತ್ತೇವೆ; ಪಾರಿವಾಳಗಳ ಹಾಗೆ ಬಹಳವಾಗಿ ಮೂಲ್ಗುತ್ತೇವೆ; ನ್ಯಾಯಕ್ಕಾಗಿ ಕಾದುಕೊಳ್ಳುತ್ತೇವೆ, ಆದರೆ ಅದು ಇಲ್ಲವೇ ಇಲ್ಲ; ರಕ್ಷಣೆಯಾದರೋ ಅದು ನಮಗೆ ದೂರವಾಗಿದೆ. ಯಾಕಂದರೆ, ನಮ್ಮ ದ್ರೋಹಗಳು ನಿನ್ನ ಮುಂದೆ ಬಹಳವಾಗಿವೆ; ನಮ್ಮ ಪಾಪಗಳು ನಮಗೆ ವಿರೋಧವಾಗಿ ಸಾಕ್ಷಿಕೊಡುತ್ತವೆ; ನಮ್ಮ ದ್ರೋಹಗಳು ನಮ್ಮ ಸಂಗಡ ಅವೆ; ನಮ್ಮ ಅಕ್ರಮಗಳ ನ್ನಾದರೋ, ನಾವು ಬಲ್ಲೆವು. ದ್ರೋಹ ಮಾಡಿ ದ್ದೇವೆ, ಕರ್ತನಿಗೆ ಸುಳ್ಳಾಡಿದ್ದೇವೆ; ನಮ್ಮ ದೇವರ ಕಡೆಯಿಂದ ಹಿಂದಿರುಗಿದ್ದೇವೆ; ಬಲಾತ್ಕಾರದಿಂದ ತಿರುಗಿ ಬೀಳುವಿಕೆಯ ಕಾರ್ಯಗಳನ್ನು ಮಾತಾಡಿದ್ದೇವೆ; ಹೃದಯದಲ್ಲಿ ಸುಳ್ಳು ಮಾತುಗಳನ್ನು ಕಲ್ಪಿಸಿಕೊಂಡು ನುಡಿದಿದ್ದೇವೆ. ನ್ಯಾಯವು ಸಹ ಹಿಂದಕ್ಕೆ ತಿರುಗಿ ಸಲ್ಪಟ್ಟಿದೆ. ನೀತಿಯು ದೂರದಲ್ಲಿ ನಿಲ್ಲುತ್ತದೆ; ಸತ್ಯವು ಬೀದಿಯಲ್ಲಿ ಬಿದ್ದುಹೋಯಿತು. ಯಥಾರ್ಥತೆಯು ಪ್ರವೇಶಿಸುವದೇ ಇಲ್ಲ. ಹೌದು, ಸತ್ಯವು ಇಲ್ಲದೇ ಹೋಯಿತು; ಕೆಟ್ಟದ್ದನ್ನು ಬಿಟ್ಟುಬಿಡುವವನು ಸುಲಿಗೆ ಯಾಗುತ್ತಾನೆ; ಕರ್ತನು ಅದನ್ನು ನೋಡಿದನು, ಅದ ರಲ್ಲಿ ನ್ಯಾಯವಿಲ್ಲದ್ದರಿಂದ ಆತನಿಗೆ ಮೆಚ್ಚಿಕೆಯಾಗಲಿಲ್ಲ.
- Jeremiah 6:19 ಯೆರೆಮೀಯ 6:19ಭೂಮಿಯೇ, ಕೇಳು, ಇಗೋ, ನಾನು ಈ ಜನರ ಮೇಲೆ ಕೇಡನ್ನು ಅಂದರೆ ಅವರ ಕಲ್ಪನೆಗಳ ಫಲವನ್ನೇ ಬರಮಾಡುತ್ತೇನೆ. ಅವರು ನನ್ನ ವಾಕ್ಯಗಳನ್ನು ಆಲೈಸದೆ ಹೋದರು, ನನ್ನ ನ್ಯಾಯಪ್ರಮಾಣವನ್ನು ತಿರಸ್ಕರಿಸಿ ದರು.
- Jeremiah 4:18 ಯೆರೆಮೀಯ 4:18ನಿನ್ನ ಮಾರ್ಗಗಳು ನಿನ್ನ ಕ್ರಿಯೆಗಳು ಇವುಗಳನ್ನು ನಿನಗೆ ಉಂಟುಮಾಡಿದವು, ಇದು ನಿನ್ನ ಕೆಟ್ಟತನವೇ; ಅದು ಕಹಿಯಾದದ್ದಲ್ಲವೋ? ನಿನ್ನ ಹೃದಯಕ್ಕೆ ತಾಕುತ್ತದ್ದಲ್ಲವೋ?
- Isaiah 50:1–2 ಯೆಶಾಯ 50:1–2ಕರ್ತನು ಹೀಗನ್ನುತ್ತಾನೆ--ನಾನು ಬಿಟ್ಟು ಬಿಟ್ಟದ್ದಕ್ಕೆ ನಿನ್ನ ತಾಯಿಯ ತ್ಯಾಗಪತ್ರವು ಎಲ್ಲಿ? ಇಲ್ಲವೆ ನಾನು ನನ್ನ ಸಾಲಗಾರರಲ್ಲಿ ಯಾರಿಗೆ ನಿಮ್ಮನ್ನು ಮಾರಿಬಿಟ್ಟೇನು? ಇಗೋ, ನಿಮ್ಮ ಅಕ್ರಮ ಗಳ ನಿಮಿತ್ತ ನಿಮ್ಮನ್ನು ನೀವೇ ಮಾರಿಕೊಂಡಿದ್ದೀರಿ; ನಿಮ್ಮ ದ್ರೋಹಗಳ ನಿಮಿತ್ತವೇ ನಿಮ್ಮ ತಾಯಿಯನ್ನು ಬಿಟ್ಟಿದ್ದೇನೆ. ನಾನು ಬಂದಾಗ ಯಾಕೆ ಅಲ್ಲಿ ಒಬ್ಬನೂ ಇರಲಿಲ್ಲ? ನಾನು ಕರೆದಾಗ ಯಾಕೆ ಯಾರೂ ಉತ್ತರ ಕೊಡಲಿಲ್ಲ? ನನ್ನ ಹಸ್ತವು ವಿಮೋಚಿಸದಂಥಾ ಮೋಟುಗೈಯೋ? ಇಲ್ಲವೇ ಬಿಡಿಸುವದಕ್ಕೆ ನನ್ನಲ್ಲಿ ಶಕ್ತಿಯಿಲ್ಲವೋ? ಇಗೋ, ನನ್ನ ಗದರಿಕೆಯಿಂದ ನಾನು ಸಮುದ್ರವನ್ನು ಒಣಗಿಸುತ್ತೇನೆ. ನಾನು ನದಿಗಳನ್ನು ಅರಣ್ಯವನ್ನಾಗಿ ಮಾಡುತ್ತೇನೆ. ನೀರಿಲ್ಲದ ಕಾರಣ ಅಲ್ಲಿಯ ವಿಾನುಗಳು ಬಾಯಾರಿ ಸತ್ತುನಾರುವವು.
- Lamentations 5:16 ಪ್ರಲಾಪಗಳು 5:16ಕಿರೀಟವು ನಮ್ಮ ತಲೆಯ ಮೇಲಿಂದ ಬಿದ್ದು ಹೋಯಿತು; ನಮಗೆ ಅಯ್ಯೋ, ನಾವು ಪಾಪಮಾಡಿದ್ದೇವೆ.
- 2 Chronicles 28:23–25 2 ಪೂರ್ವಕಾಲವೃತ್ತಾಂತ 28:23–25ಏನಂದರೆ, ಅವನು ಅರಾಮಿನ ಅರಸುಗಳ ದೇವರುಗಳು ಅವರಿಗೆ ಸಹಾಯ ಕೊಟ್ಟದ್ದರಿಂದ--ಅವು ನನಗೆ ಸಹಾಯ ಕೊಡುವ ಹಾಗೆ ನಾನು ಅವುಗಳಿಗೆ ಬಲಿಯನ್ನು ಅರ್ಪಿಸುತ್ತೇನೆ ಎಂದು ಅಂದುಕೊಂಡು ತನ್ನನ್ನು ಹೊಡೆದ ದಮಸ್ಕ ದವರ ದೇವರುಗಳಿಗೆ ಬಲಿಗಳನ್ನು ಅರ್ಪಿಸಿದನು. ಆದರೆ ಅವು ಅವನನ್ನೂ ಸಮಸ್ತ ಇಸ್ರಾಯೇಲ್ಯರನ್ನೂ ಬೀಳುವಂತೆ ಮಾಡಿದವು. ಇದಲ್ಲದೆ ಆಹಾಜನು ದೇವರ ಮನೆಯ ಸಾಮಾನುಗಳನ್ನು ಕೂಡಿಸಿ ದೇವರ ಆಲಯದ ಸಾಮಾನುಗಳನ್ನು ತುಂಡುಗಳಾಗಿ ಕತ್ತರಿಸಿ ಕರ್ತನ ಮನೆಯ ಬಾಗಿಲುಗಳನ್ನು ಮುಚ್ಚಿಬಿಟ್ಟು ಯೆರೂ ಸಲೇಮಿನ ಸಮಸ್ತ ಮೂಲೆಗಳಲ್ಲಿ ಬಲಿಪೀಠಗಳನ್ನು ಕಟ್ಟಿಸಿದನು. ಯೆಹೂದದ ಸಮಸ್ತ ಪಟ್ಟಣಗಳಲ್ಲಿ ಅನ್ಯ ದೇವರುಗಳಿಗೆ ಧೂಪಸುಡುವದಕ್ಕಾಗಿ ಎತ್ತರ ಸ್ಥಳಗಳನ್ನು ಕಟ್ಟಿಸಿ ತನ್ನ ಪಿತೃಗಳ ದೇವರಾದ ಕರ್ತನಿಗೆ ಕೋಪವನ್ನೆಬ್ಬಿಸಿದನು.
- Jeremiah 2:17 ಯೆರೆಮೀಯ 2:17ಆತನು ನಿನ್ನನ್ನು ದಾರಿಯಲ್ಲಿ ನಡೆಸುತ್ತಿರುವಾಗ ನೀನು ನಿನ್ನ ದೇವರಾದ ಕರ್ತನನ್ನು ಬಿಟ್ಟಿದ್ದರಿಂದಲೇ ಇದನ್ನು ನಿನಗೆ ನೀನೇ ಮಾಡಿಕೊಂಡಿ ಅಲ್ಲವೋ?
- 2 Kings 17:7–23 2 ಅರಸುಗಳು 17:7–23ಯಾಕೆ ಹೀಗಾಯಿತಂದರೆ, ಇಸ್ರಾಯೇಲಿನ ಮಕ್ಕಳು, ಐಗುಪ್ತದ ಅರಸನಾದ ಫರೋಹನ ಕೈಯಿಂದ ತಪ್ಪಿಸಿ ಐಗುಪ್ತದೇಶದೊಳಗಿಂದ ಬರ ಮಾಡಿದ ತಮ್ಮ ದೇವರಾದ ಕರ್ತನಿಗೆ ವಿರೋಧ ವಾಗಿ ಪಾಪಮಾಡಿ ಇತರ ದೇವರುಗಳಿಗೆ ಭಯಪಟ್ಟರು. ಇಸ್ರಾಯೇಲ್ಯರ ಮುಂದೆ ಕರ್ತನು ಹೊರ ಡಿಸಿಬಿಟ್ಟ ಅನ್ಯ ಜನಾಂಗಗಳ ಕಟ್ಟಳೆಗಳಲ್ಲಿಯೂ ಇಸ್ರಾ ಯೇಲಿನ ಅರಸುಗಳು ಮಾಡಿದ ಕಟ್ಟಳೆಗಳಲ್ಲಿಯೂ ನಡೆದರು. ಇಸ್ರಾಯೇಲಿನ ಮಕ್ಕಳು ಗುಪ್ತವಾಗಿ ತಮ್ಮ ದೇವರಾದ ಕರ್ತನಿಗೆ ವಿರೋಧವಾಗಿ ಅಯುಕ್ತ ವಾದವುಗಳನ್ನು ಮಾಡಿ ಬರುವ ಸ್ಥಳಗಳು ಮೊದಲು ಗೊಂಡು ಕೋಟೆಯುಳ್ಳ ಪಟ್ಟಣಗಳ ವರೆಗೂ ತಮ್ಮ ಎಲ್ಲಾ ಪಟ್ಟಣಗಳಲ್ಲಿ ತಮಗೆ ಉನ್ನತ ಸ್ಥಳಗಳನ್ನು ಕಟ್ಟಿಸಿ ಕೊಂಡಿದ್ದರು. ಇದಲ್ಲದೆ ಅವರು ಎತ್ತರವಾದ ಎಲ್ಲಾ ಗುಡ್ಡಗಳಲ್ಲಿ ತೋಪುಗಳನ್ನು ಹಾಕಿ ಹಸುರಾದ ಎಲ್ಲಾ ಮರಗಳ ಕೆಳಗೂ ತಮಗೆ ವಿಗ್ರಹಗಳನ್ನು ನಿಲ್ಲಿಸಿ ಅಲ್ಲಿ ಕರ್ತನು ತಮ್ಮ ಮುಂದೆ ಓಡಿಸಿಬಿಟ್ಟ ಅನ್ಯ ಜನಾಂಗಗಳ ಹಾಗೆ ಅವರು ಎಲ್ಲಾ ಉನ್ನತ ಸ್ಥಳಗಳಲ್ಲಿ ಧೂಪವನ್ನು ಸುಟ್ಟು ಕರ್ತನನ್ನು ಸಿಟ್ಟುಗೊಳಿಸುವ ಹಾಗೆ ಕೆಟ್ಟ ಕಾರ್ಯಗಳನ್ನು ಮಾಡಿದರು-- ನೀವು ಈ ಕಾರ್ಯವನ್ನು ಮಾಡಬೇಡಿರೆಂದು ಕರ್ತನು ತಮಗೆ ಹೇಳಿದ ಮಣ್ಣು ಪ್ರತಿಮೆಗಳನ್ನು ಸೇವಿಸಿದರು. ನೀವು ನಿಮ್ಮ ದುರ್ಮಾರ್ಗಗಳನ್ನು ಬಿಟ್ಟು ತಿರುಗಿ ನಾನು ನಿಮ್ಮ ಪಿತೃಗಳಿಗೆ ಆಜ್ಞಾಪಿಸಿದ, ಪ್ರವಾದಿಗಳಾದ ನನ್ನ ಸೇವಕರ ಮುಖಾಂತರ ನಾನು ನಿಮಗೆ ಕಳುಹಿಸಿದ ನ್ಯಾಯಪ್ರಮಾಣದ ಪ್ರಕಾರ ನನ್ನ ಆಜ್ಞೆಗಳನ್ನೂ ಕಟ್ಟಳೆಗಳನ್ನೂ ಕೈಕೊಳ್ಳಿರೆಂದು ಕರ್ತನು ಎಲ್ಲಾ ಪ್ರವಾ ದಿಗಳ ಮುಖಾಂತರವಾಗಿಯೂ ಎಲ್ಲಾ ದರ್ಶಿಗಳ ಮುಖಾಂತರವಾಗಿಯೂ ಇಸ್ರಾಯೇಲಿಗೂ ಯೆಹೂ ದಕ್ಕೂ ಸಾಕ್ಷಿ ಹೇಳಿದನು. ಆದರೆ ಅವರು ಕೇಳ ದೆಯೂ ತಮ್ಮ ದೇವರಾದ ಕರ್ತನಲ್ಲಿ ನಂಬಿಕೆ ಇಡ ದೆಯೂ ತಮ್ಮ ಪಿತೃಗಳ ಕುತ್ತಿಗೆಯ ಹಾಗೆ ತಮ್ಮ ಕುತ್ತಿಗೆಯನ್ನು ಕಠಿಣಪಡಿಸಿ ಆತನ ಕಟ್ಟಳೆಗಳನ್ನೂ ಆತನು ತಮ್ಮ ಪಿತೃಗಳ ಸಂಗಡ ಮಾಡಿದ ಆತನ ಒಡಂಬಡಿಕೆಯನ್ನೂ ಆತನು ಅವರಿಗೆ ಹೇಳಿದ ಸಾಕ್ಷಿ ಗಳನ್ನೂ ಅಲಕ್ಷ್ಯಮಾಡಿ ವ್ಯರ್ಥವಾದದ್ದನ್ನು ಹಿಂಬಾ ಲಿಸಿ ವ್ಯರ್ಥವಾದವರಾಗಿ -- ನೀವು ಅವರ ಹಾಗೆ ಮಾಡಬೇಡಿರೆಂದು ಕರ್ತನು ಅವರಿಗೆ ಆಜ್ಞಾಪಿಸಿದರೂ ಅವರ ಸುತ್ತಲಿರುವ ಅನ್ಯಜನಾಂಗಗಳ ಹಿಂದೆ ಹೋದರು. ಇದಲ್ಲದೆ ಅವರು ತಮ್ಮ ದೇವರಾದ ಕರ್ತನ ಎಲ್ಲಾ ಆಜ್ಞೆಗಳನ್ನು ಬಿಟ್ಟು ತಮಗೆ ತಾವೇ ಎರಕ ಹೊಯ್ದ ವಿಗ್ರಹಗಳಾದ ಎರಡು ಹೋರಿಗಳನ್ನು ಮಾಡಿಕೊಂಡು ವಿಗ್ರಹಗಳ ತೋಪನ್ನು ಮಾಡಿ ಆಕಾಶದ ಸೈನ್ಯಕ್ಕೆಲ್ಲಾ ಅಡ್ಡಬಿದ್ದು ಬಾಳನನ್ನು ಸೇವಿಸಿ ತಮ್ಮ ಕುಮಾರರನ್ನೂ ಕುಮಾರ್ತೆಯರನ್ನೂ ಬೆಂಕಿಯಲ್ಲಿ ದಾಟಮಾಡಿ ಕಣಿಗಳನ್ನೂ ಶಕುನಗಳನ್ನೂ ಬಳಸಿ ಕರ್ತ ನಿಗೆ ಕೋಪ ಬರುವಂತೆ ಆತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಲು ತಮ್ಮನ್ನು ಮಾರಿಬಿಟ್ಟರು. ಆದದರಿಂದ ಕರ್ತನು ಇಸ್ರಾಯೇಲಿನ ಮೇಲೆ ಬಹುಕೋಪ ಗೊಂಡು ಅವರನ್ನು ತನ್ನ ಸಮ್ಮುಖದಿಂದ ತೆಗೆದುಹಾಕಿ ದನು. ಯೆಹೂದದ ಗೋತ್ರದ ಹೊರತಾಗಿ ಇನ್ಯಾರೂ ಉಳಿದದ್ದಿಲ್ಲ. ಆದರೆ ಯೆಹೂದದವರು ತಮ್ಮ ದೇವರಾದ ಕರ್ತನ ಆಜ್ಞೆಗಳನ್ನು ಕೈಕೊಳ್ಳದೆ ಇಸ್ರಾ ಯೇಲು ಮಾಡಿಕೊಂಡ ಕಟ್ಟಳೆಗಳಲ್ಲಿ ನಡೆದರು. ಆದದರಿಂದ ಕರ್ತನು ಇಸ್ರಾಯೇಲಿನ ಸಂತತಿ ಯನ್ನೆಲ್ಲಾ ಅಲಕ್ಷ್ಯಮಾಡಿಬಿಟ್ಟು ಅವರನ್ನು ಕುಂದಿಸಿ ಅವರನ್ನು ತನ್ನ ಸಮ್ಮುಖದಿಂದ ತಳ್ಳಿಬಿಡುವ ವರೆಗೆ ಅವರನ್ನು ಕೊಳ್ಳೆಗಾರರ ಕೈಯಲ್ಲಿ ಒಪ್ಪಿಸಿಕೊಟ್ಟನು. ಅವನು ಇಸ್ರಾಯೇಲನ್ನು ದಾವೀದನ ಮನೆಯಿಂದ ಹರಿದುಬಿಟ್ಟನು; ಅವರು ನೆಬಾಟನ ಮಗನಾದ ಯಾರೊಬ್ಬಾಮನನ್ನು ಅರಸನನ್ನಾಗಿ ಮಾಡಿಕೊಂಡರು. ಆಗ ಯಾರೊಬ್ಬಾಮನು ಇಸ್ರಾಯೇಲ್ಯರನ್ನು ಕರ್ತ ನನ್ನು ಹಿಂಬಾಲಿಸುವದರಿಂದ ತಪ್ಪಿಸಿ ಅವರನ್ನು ಮಹಾ ಪಾಪಮಾಡಲು ಪ್ರೇರೇಪಿಸಿದನು. ಕರ್ತನು ಪ್ರವಾ ದಿಗಳಾದ ತನ್ನ ಸೇವಕರ ಮುಖಾಂತರ ಹೇಳಿದ ಹಾಗೆ ಅವನು ಇಸ್ರಾಯೇಲನ್ನು ತನ್ನ ಸಮ್ಮುಖದಿಂದ ತೆಗೆದು ಹಾಕುವ ವರೆಗೆ ಇಸ್ರಾಯೇಲಿನ ಮಕ್ಕಳು ಯಾರೊ ಬ್ಬಾಮನು ಮಾಡಿದ ಎಲ್ಲಾ ಪಾಪಗಳಲ್ಲಿ ನಡೆದರು; ಅವುಗಳನ್ನು ತೊರೆದು ಬಿಡಲಿಲ್ಲ. ಹೀಗೆಯೇ ಇಸ್ರಾ ಯೇಲಿನವರು ಇಂದಿನ ವರೆಗೂ ತಮ್ಮ ದೇಶದಿಂದ ಅಶ್ಶೂರಿಗೆ ಸೆರೆಯಾಗಿ ಒಯ್ಯಲ್ಪಟ್ಟರು.
Original words (Hebrew)
- transgression · H6588פֶּשַׁע peshaʻ
- Jacob · H3290יַעֲקֹב Yaʻăqôb
- sins · H2403חַטָּאָה chaṭṭâʼâh
- house · H1004בַּיִת bayith
- Israel · H3478יִשְׂרָאֵל Yisrâʼêl
- transgression · H6588פֶּשַׁע peshaʻ
- Jacob · H3290יַעֲקֹב Yaʻăqôb
- Samaria · H8111שֹׁמְרוֹן Shômᵉrôwn
- places · H1116בָּמָה bâmâh
- Judah · H3063יְהוּדָה Yᵉhûwdâh
- Jerusalem · H3389יְרוּשָׁלַ͏ִם Yᵉrûwshâlaim