1 Kings · chapter 13 · verse 32
1 Kings 13:32 in Kannada
ಅವನು ಬೇತೇಲಿನಲ್ಲಿರುವ ಬಲಿಪೀಠಕ್ಕೆ ವಿರೋಧವಾಗಿಯೂ ಸಮಾರ್ಯ ಪಟ್ಟಣಗಳಲ್ಲಿರುವ ಉನ್ನತ ಸ್ಥಳಗಳ ಸಮಸ್ತ ಮನೆಗಳಿಗೆ ವಿರೋಧವಾಗಿಯೂ ಕರ್ತನ ಮಾತಿನಂತೆ ನಿಶ್ಚಯವಾಗಿ ಆಗುವದು ಅಂದನು.
Avanu betelinalliruva balipeethakke virodhavaagiyoo samaarya pattanagalalliruva unnata sthalagala samasta manegalige virodhavaagiyoo kartana maatinante nishchayavaagi aaguvadu andanu.
1 Kings 13:32 in English
- King James Version (KJV)
- For the saying which he cried by the word of the LORD against the altar in Beth-el, and against all the houses of the high places which [are] in the cities of Samaria, shall surely come to pass.
- World English Bible (WEB)
- For the saying which he cried by the LORD’s word against the altar in Bethel, and against all the houses of the high places which are in the cities of Samaria, will surely happen.”
- American Standard Version (ASV)
- For the saying which he cried by the word of Jehovah against the altar in Beth-el, and against all the houses of the high places which are in the cities of Samaria, shall surely come to pass.
- Bible in Basic English (BBE)
- For the outcry he made by the word of the Lord against the altar in Beth-el and against all the houses of the high places in the towns of Samaria, will certainly come about.
- Darby Translation (DBY)
- For the word that he cried by the word of Jehovah against the altar in Bethel, and against all the houses of the high places that are in the cities of Samaria, shall certainly come to pass.
- Webster's Bible (WBS)
- For the saying which he cried by the word of the LORD against the altar in Beth-el, and against all the houses of the high places which [are] in the cities of Samaria, shall surely come to pass.
- Young's Literal Translation (YLT)
- for the word certainly cometh to pass that he called by the word of Jehovah concerning the altar which [is] Beth-El, and concerning all the houses of the high places that [are] in cities of Samaria.'
Read in context
- 30ಅವನ ಹೆಣವನ್ನು ತನ್ನ ಸಮಾ ಧಿಯಲ್ಲಿ ಹೂಣಿಟ್ಟನು. ಆಗ ಅವರು--ಅಯ್ಯೋ, ನಮ್ಮ ಸಹೋದರನೇ ಎಂದು ಅವನಿಗೋಸ್ಕರ ಗೋಳಾ ಡಿದರು.
- 31ಅವನು ಇವನನ್ನು ಹೂಣಿಟ್ಟ ತರುವಾಯ ಏನಾಯಿತಂದರೆ, ಅವನು ತನ್ನ ಮಕ್ಕಳಿಗೆ--ನಾನು ಸತ್ತಾಗ ದೇವರ ಮನುಷ್ಯನನ್ನು ಹೂಣಿಟ್ಟ ಸಮಾಧಿ ಯಲ್ಲಿ ನನ್ನನ್ನು ಹೂಣಿಡಿರಿ; ನನ್ನ ಎಲುಬುಗಳನ್ನು ಅವನ ಎಲುಬುಗಳ ಬಳಿಯಲ್ಲಿ ಇಡಿರಿ.
- 32ಅವನು ಬೇತೇಲಿನಲ್ಲಿರುವ ಬಲಿಪೀಠಕ್ಕೆ ವಿರೋಧವಾಗಿಯೂ ಸಮಾರ್ಯ ಪಟ್ಟಣಗಳಲ್ಲಿರುವ ಉನ್ನತ ಸ್ಥಳಗಳ ಸಮಸ್ತ ಮನೆಗಳಿಗೆ ವಿರೋಧವಾಗಿಯೂ ಕರ್ತನ ಮಾತಿನಂತೆ ನಿಶ್ಚಯವಾಗಿ ಆಗುವದು ಅಂದನು.
- 33ಈ ಕಾರ್ಯದ ತರುವಾಯ ಯಾರೊಬ್ಬಾಮನು ತನ್ನ ಕೆಟ್ಟ ಮಾರ್ಗವನ್ನು ಬಿಟ್ಟು ತಿರುಗದೆ ಉನ್ನತ ಸ್ಥಳಗಳಿಗೆ ಕನಿಷ್ಠ ಯಾಜಕರನ್ನಾಗಿ ನೇಮಿಸಿದನು. ಯಾವನಿಗೆ ಮನಸ್ಸಿತ್ತೋ ಅವನನ್ನು ಇವನು ಪ್ರತಿಷ್ಠೆ ಮಾಡಿಸಿದ್ದರಿಂದ ಉನ್ನತ ಸ್ಥಳಗಳ ಯಾಜಕರಲ್ಲಿ ಒಬ್ಬ ನಾಗುವನು.ಯಾರೊಬ್ಬಾಮನ ಮನೆಯವರನ್ನು ಭೂಲೋಕದಿಂದ ಸಂಹರಿಸುವದಕ್ಕೂ ನಾಶಮಾಡು ವದಕ್ಕೂ ಈ ಕಾರ್ಯವು ಅವರಿಗೆ ಪಾಪವಾಯಿತು.
- 34ಯಾರೊಬ್ಬಾಮನ ಮನೆಯವರನ್ನು ಭೂಲೋಕದಿಂದ ಸಂಹರಿಸುವದಕ್ಕೂ ನಾಶಮಾಡು ವದಕ್ಕೂ ಈ ಕಾರ್ಯವು ಅವರಿಗೆ ಪಾಪವಾಯಿತು.
Cross references
- 1 Kings 16:24 1 ಅರಸುಗಳು 16:24ತಿರ್ಚದಲ್ಲಿ ಆರು ವರುಷ ಆಳಿದನು ಅವನು ಶೆಮೆರ್ ನಿಗೆ ಎರಡು ತಲಾಂತು ಬೆಳ್ಳಿಯನ್ನು ಕೊಟ್ಟು ಸಮಾರ್ಯ ವೆಂಬ ಬೆಟ್ಟವನ್ನು ಕೊಂಡುಕೊಂಡು ಆ ಬೆಟ್ಟದ ಮೇಲೆ ಪಟ್ಟಣವನ್ನು ಕಟ್ಟಿಸಿ ಶೆಮೆರನೆಂಬ ಬೆಟ್ಟದ ಯಜಮಾನನ ಹೆಸರಿನ ಹಾಗೆ ತಾನು ಕಟ್ಟಿಸಿದ ಪಟ್ಟಣಕ್ಕೆ ಸಮಾರ್ಯ ವೆಂದು ಹೆಸರಿಟ್ಟನು.
- 1 Kings 13:2 1 ಅರಸುಗಳು 13:2ಅವನು ಆ ಪೀಠಕ್ಕೆ ವಿರೋಧವಾಗಿ ಕರ್ತನ ಮಾತಿನಲ್ಲಿ ಕೂಗಿ--ಪೀಠವೇ, ಪೀಠವೇ, ಇಗೋ, ದಾವೀದನ ಸಂತಾನದಲ್ಲಿ ಯೋಷೀಯನೆಂದು ಹೆಸರುಳ್ಳ ಒಬ್ಬ ಕುಮಾರನು ಹುಟ್ಟುವನು; ಅವನು ನಿನ್ನ ಮೇಲೆ ಧೂಪವನ್ನರ್ಪಿಸುವ ಉನ್ನತ ಸ್ಥಳಗಳ ಯಾಜಕರನ್ನು ಬಲಿಯಾಗಿ ಅರ್ಪಿಸುವನು; ಮನುಷ್ಯರ ಎಲುಬುಗಳು ನಿನ್ನ ಮೇಲೆ ಸುಡಲ್ಪಡುವವೆಂದು ಕರ್ತನು ಹೇಳುತ್ತಾನೆ ಅಂದನು.
- 1 Kings 12:31 1 ಅರಸುಗಳು 12:31ಇದಲ್ಲದೆ ಅವನು ಉನ್ನತ ಸ್ಥಳಗಳ ಒಂದು ಮನೆಯನ್ನು ಕಟ್ಟಿಸಿ ಲೇವಿಯ ಮಕ್ಕಳಲ್ಲದ ಜನರಲ್ಲಿ ಕನಿಷ್ಠ ಜನರೊಳಗಿಂದ ಯಾಜಕರನ್ನು ನೇಮಿಸಿ ದನು.
- Leviticus 26:30 ಯಾಜಕಕಾಂಡ 26:30ಇದಲ್ಲದೆ ನಾನು ನಿಮ್ಮ ಉನ್ನತ ಸ್ಥಳಗಳನ್ನು ಹಾಳುಮಾಡಿ ನಿಮ್ಮ ಪ್ರತಿಮೆಗಳನ್ನು ಕಡಿದುಹಾಕಿ ವಿಗ್ರಹಗಳ ಮೇಲೆ ನಿಮ್ಮ ಹೆಣಗಳನ್ನು ಹಾಕುವೆನು; ನನ್ನ ಪ್ರಾಣವು ನಿಮ್ಮನ್ನು ಹೇಸಿಕೊಳ್ಳು ವದು.
- 2 Kings 23:16–19 2 ಅರಸುಗಳು 23:16–19ಯೋಷೀಯನು ತಿರುಗಿಕೊಂಡು ಅಲ್ಲಿ ಬೆಟ್ಟದಲ್ಲಿದ್ದ ಸಮಾಧಿಗಳನ್ನು ಕಂಡು, ಕಳುಹಿಸಿ, ಸಮಾಧಿಗಳಿಂದ ಎಲುಬುಗಳನ್ನು ತೆಗೆದುಕೊಂಡು ಈ ಮಾತುಗಳನ್ನು ಪ್ರಕಟಿಸಿದ ದೇವರ ಮನುಷ್ಯನು ಸಾರಿದ ಕರ್ತನ ವಾಕ್ಯದ ಪ್ರಕಾರ ಬಲಿಪೀಠದ ಮೇಲೆ ಅವುಗಳನ್ನು ಸುಟ್ಟುಬಿಟ್ಟು ಅದನ್ನು ಹೊಲೆಮಾಡಿದನು. ಆಗ ಅವನು--ನಾನು ನೋಡಿದ ಆ ಶಿರೋನಾಮವೇನು ಅಂದನು. ಅದಕ್ಕೆ ಆ ಪಟ್ಟಣದ ಜನರು ಅವನಿಗೆಯೆಹೂದದಿಂದ ಬಂದು ಬೇತೇಲಿನ ಬಲಿಪೀಠಕ್ಕೆ ವಿರೋಧವಾಗಿ ನೀನು ಮಾಡಿದ ಈ ಕಾರ್ಯಗಳನ್ನು ಸಾರಿ ಹೇಳಿದ ದೇವರ ಮನುಷ್ಯನ ಸಮಾಧಿ ಅಂದರು. ಆಗ ಅವನು--ಅವನನ್ನು ಬಿಟ್ಟುಬಿಡಿರಿ; ಯಾವನೂ ಅವನ ಎಲುಬುಗಳನ್ನು ಮುಟ್ಟದೆ ಇರಲಿ ಅಂದನು. ಹಾಗೆಯೇ ಅವರು ಅವನ ಎಲುಬುಗಳನ್ನು ಸಮಾರ್ಯ ದಿಂದ ಬಂದ ಪ್ರವಾದಿಯ ಎಲುಬುಗಳ ಸಂಗಡ ಸುಮ್ಮನೆ ಬಿಟ್ಟರು. ಕೋಪವನ್ನೆಬ್ಬಿಸುವದಕ್ಕೆ ಇಸ್ರಾ ಯೇಲಿನ ಅರಸುಗಳು ಸಮಾರ್ಯದ ಪಟ್ಟಣಗಳಲ್ಲಿ ಮಾಡಿದ, ಕರ್ತನ ಕೋಪವನ್ನೆಬ್ಬಿಸಿದ ಉನ್ನತ ಸ್ಥಳಗಳ ಮನೆಗಳನ್ನೆಲ್ಲಾ ಯೋಷೀಯನು ಕೆಡವಿಹಾಕಿ ಬೇತೇಲಿ ನಲ್ಲಿ ತಾನು ಮಾಡಿದ ಎಲ್ಲಾ ಕ್ರಿಯೆಗಳ ಪ್ರಕಾರ ಅವುಗಳಿಗೆ ಮಾಡಿ,
- 1 Kings 12:29 1 ಅರಸುಗಳು 12:29ಅವನು ಒಂದನ್ನು ಬೇತೇಲಿನಲ್ಲಿಯೂ ಮತ್ತೊಂದನ್ನು ದಾನಿನಲ್ಲಿಯೂ ಇಟ್ಟನು.
- 2 Chronicles 25:13 2 ಪೂರ್ವಕಾಲವೃತ್ತಾಂತ 25:13ಆದರೆ ಅವರು ತಮ್ಮ ಸಂಗಡ ಯುದ್ಧಕ್ಕೆ ಹೋಗದ ಹಾಗೆ ಅಮಚ್ಯನು ಹಿಂದಕ್ಕೆ ಕಳುಹಿಸಿದ ಗುಂಪಿನವರು ಯೆಹೂದದ ಪಟ್ಟಣಗಳ ಮೇಲೆ ಬಿದ್ದು ಸಮಾರ್ಯ ಮೊದಲುಗೊಂಡು ಬೇತ್ಹೋರೋನಿನ ಮಟ್ಟಿಗೂ ಮೂರು ಸಾವಿರ ಮಂದಿಯನ್ನು ಹೊಡೆದುಬಿಟ್ಟು ಬಹುಕೊಳ್ಳೆಯನ್ನು ತೆಗೆದುಕೊಂಡರು.
- Ezra 4:10 ಎಜ್ರನು 4:10ಸಮಾರ್ಯದ ಪಟ್ಟಣಗಳಲ್ಲಿ ಇರಿಸಿದ ಮಿಕ್ಕಾದ ಜನಗಳೂ ನದಿಯ ಈಚೆಯಲ್ಲಿರುವ ಇತರ ಜನಗಳೂ--
- John 4:4–5 ಯೋಹಾನನು 4:4–5ಆತನು ಸಮಾರ್ಯದ ಮಾರ್ಗವಾಗಿ ಹೋಗಬೇಕಾದದ್ದು ಅವಶ್ಯವಾಗಿತ್ತು. ಆಗ ಯಾಕೋ ಬನು ತನ್ನ ಮಗನಾದ ಯೋಸೇಫನಿಗೆ ಕೊಟ್ಟ ಭೂಮಿಯ ಸವಿಾಪದಲ್ಲಿರುವ ಸುಖರ್ ಎಂಬ ಸಮಾರ್ಯದ ಪಟ್ಟಣಕ್ಕೆ ಆತನು ಬಂದನು.