Micah · chapter 6 · verse 9
Micah 6:9 in Kannada
ಕರ್ತನ ಸ್ವರವು ಪಟ್ಟಣಕ್ಕೆ ಕೂಗುತ್ತದೆ, ಮತ್ತು ಬುದ್ಧಿವಂತನು ನಿನ್ನ ಹೆಸರನ್ನು ನೋಡುವನು; ಬೆತ್ತ ವನ್ನೂ ಅದನ್ನು ನೇಮಿಸಿದವನನ್ನೂ ಕೇಳಿರಿ.
Kartana svaravu pattanakke kooguttade, mattu buddhivantanu ninna hesarannu noduvanu; betta vannoo adannu nemisidavanannoo keliri.
Micah 6:9 in English
- King James Version (KJV)
- The LORD’s voice crieth unto the city, and [the man of] wisdom shall see thy name: hear ye the rod, and who hath appointed it.
- World English Bible (WEB)
- The LORD’s voice calls to the city— and wisdom fears your name— “Listen to the rod, and he who appointed it.
- American Standard Version (ASV)
- The voice of Jehovah crieth unto the city, and [the man of] wisdom will see thy name: hear ye the rod, and who hath appointed it.
- Bible in Basic English (BBE)
- The voice of the Lord is crying out to the town: Give ear, you tribes and the meeting of the town.
- Darby Translation (DBY)
- Jehovah's voice crieth unto the city, and wisdom looketh on thy name. Hear ye the rod, and who hath appointed it.
- Webster's Bible (WBS)
- The LORD'S voice crieth to the city, and [the man of] wisdom shall see thy name: hear ye the rod, and who hath appointed it.
- Young's Literal Translation (YLT)
- A voice of Jehovah to the city calleth, And wisdom doth fear Thy name, Hear ye the rod, and Him who appointed it.
Read in context
- 7ಸಾವಿರ ಟಗರುಗಳಿಗಾದರೂ ಎಣ್ಣೆಯ ಹತ್ತು ಸಾವಿರ ನದಿಗಳಿಗಾದರೂ ಕರ್ತನು ಮೆಚ್ಚು ವನೋ? ನನ್ನ ದ್ರೋಹಕ್ಕಾಗಿ ನನ್ನ ಚೊಚ್ಚಲ ಮಗ ನನ್ನೂ ನನ್ನ ಆತ್ಮದ ಪಾಪಕ್ಕಾಗಿ ನನ್ನ ಗರ್ಭದ ಫಲ ವನ್ನೂ ಕೊಡಲೋ?
- 8ಮನುಷ್ಯನೇ, ಉತ್ತಮವಾದ ದ್ದನ್ನು ನಿನಗೆ ಆತನು ತಿಳಿಸಿದ್ದಾನೆ; ಹೌದು, ನ್ಯಾಯ ವನ್ನು ಮಾಡುವದೂ ಕರುಣೆಯನ್ನು ಪ್ರೀತಿಮಾಡು ವದೂ ನಿನ್ನ ದೇವರ ಸಂಗಡ ವಿನಯವಾಗಿ ನಡ ಕೊಳ್ಳುವದೂ ಇದನ್ನೇ ಹೊರತು ಕರ್ತನು ಇನ್ನೇನು ನಿನ್ನಿಂದ ಕೇಳುತ್ತಾನೆ.
- 9ಕರ್ತನ ಸ್ವರವು ಪಟ್ಟಣಕ್ಕೆ ಕೂಗುತ್ತದೆ, ಮತ್ತು ಬುದ್ಧಿವಂತನು ನಿನ್ನ ಹೆಸರನ್ನು ನೋಡುವನು; ಬೆತ್ತ ವನ್ನೂ ಅದನ್ನು ನೇಮಿಸಿದವನನ್ನೂ ಕೇಳಿರಿ.
- 10ದುಷ್ಟರ ಮನೆಯಲ್ಲಿ ದುಷ್ಟತ್ವದ ಬೊಕ್ಕಸಗಳೂ ಅಸಹ್ಯವಾದಂಥ ಕಡಿಮೆಯಾದ ಅಳತೆಯೂ ಉಂಟೋ?
- 11ನಾನು ದುಷ್ಟತ್ವದ ತ್ರಾಸುಗಳುಳ್ಳವರನ್ನು ಮೋಸವಾದ ಕಲ್ಲು ಗಳ ಚೀಲವುಳ್ಳವರನ್ನು ನಿರ್ಮಲರೆಂದೆಣಿಸುವೆನೋ?
Cross references
- Revelation 3:19 ಪ್ರಕಟನೆ 3:19ನಾನು ಯಾರಾರನ್ನು ಪ್ರೀತಿಸುತ್ತೇನೋ ಅವರನ್ನು ಗದರಿಸುತ್ತೇನೆ ಮತ್ತು ಶಿಕ್ಷಿಸುತ್ತೇನೆ; ಆದದರಿಂದ ನೀನು ಆಸಕ್ತನಾಗಿರು; ಮಾನಸಾಂತರಪಡು.
- Hosea 14:9 ಹೋಶೇಯ 14:9ಈ ಸಂಗತಿಗಳನ್ನು ಗ್ರಹಿಸುವ ಜ್ಞಾನಿಯು ಯಾರು? ವಿವೇಕವುಳ್ಳವನು ಅವುಗಳನ್ನು ತಿಳಿದುಕೊಳ್ಳುವನೋ? ಕರ್ತನ ಮಾರ್ಗ ಗಳು ನ್ಯಾಯವಾಗಿದೆ; ಮತ್ತು ನೀತಿವಂತರು ಅದರಲ್ಲಿ ನಡೆಯುವರು; ಆದರೆ ಅಕ್ರಮಗಾರರು ಅವುಗಳಲ್ಲಿ ಬೀಳುವರು.
- Isaiah 30:27 ಯೆಶಾಯ 30:27ಇಗೋ, ಕರ್ತನ ನಾಮವು ದೂರದಿಂದ ಬರು ತ್ತದೆ. ಆತನ ಕೋಪವು ಉರಿಯುತ್ತದೆ. ಅದರಿಂದೇ ಳುವ ಉರಿಯು ದಟ್ಟವಾಗಿದೆ. ಆತನ ತುಟಿಗಳು ರೋಷದಿಂದ ತುಂಬಿವೆ. ನಾಲಿಗೆಯು ದಹಿಸುವ ಅಗ್ನಿ ಯಂತಿದೆ.
- Zephaniah 3:2 ಚೆಫನ್ಯ 3:2ಅವಳು ಶಬ್ದಕ್ಕೆ ವಿಧೇಯಳಾಗಲಿಲ್ಲ, ಶಿಕ್ಷೆಗೆ ಒಳಪಡಲಿಲ್ಲ, ಕರ್ತನಲ್ಲಿ ಭರವಸವಿಡ ಲಿಲ್ಲ. ತನ್ನ ದೇವರ ಸವಿಾಪಕ್ಕೆ ಬರಲಿಲ್ಲ.
- Isaiah 27:10 ಯೆಶಾಯ 27:10ಕೋಟೆಯ ಪಟ್ಟಣವಾಗಿದ್ದಾಗ್ಯೂ ಹಾಳಾಗಿ ಕಾಡಿನಂತೆ ಜನರಿಲ್ಲದೆ ಶೂನ್ಯ ನಿವಾಸಸ್ಥಾನವಾಗಿದೆ; ಅಲ್ಲಿ ಕರುಗಳು ಮೇದು ಮಲಗುವವು. ಅಲ್ಲಿನ ಚಿಗುರುಗಳನ್ನು ತಿಂದು ಬಿಡು ವವು.
- Micah 3:12 ಮೀಕ 3:12ಆದಕಾರಣ ನಿಮ್ಮ ನಿಮಿತ್ತವೇ, ಚೀಯೋನು ಹೊಲದ ಹಾಗೆ ಉಳಲ್ಪಡುವದು; ಯೆರೂಸಲೇಮು ದಿಬ್ಬೆಗಳಾಗುವದು, ಆಲಯದ ಪರ್ವತವು ಅಡವಿಯ ಉನ್ನತ ಸ್ಥಳಗಳ ಹಾಗಾಗುವದು.
- 2 Kings 22:11–20 2 ಅರಸುಗಳು 22:11–20ಅರಸನು ನ್ಯಾಯಪ್ರಮಾಣದ ಪುಸ್ತಕದ ಮಾತು ಗಳನ್ನು ಕೇಳಿದಾಗ ತನ್ನ ವಸ್ತ್ರಗಳನ್ನು ಹರಿದುಕೊಂಡನು. ಇದಲ್ಲದೆ ಅರಸನು ಯಾಜಕನಾದ ಹಿಲ್ಕೀಯನಿಗೂ ಶಾಫಾನನ ಮಗನಾದ ಅಹೀಕಾಮ್ನಿಗೂ ವಿಾಕಾ ಯನ ಮಗನಾದ ಅಕ್ಬೋರ್ನಿಗೂ ಲೇಖಕನಾದ ಶಾಫಾನನಿಗೂ ಅರಸನ ಸೇವಕನಾದ ಅಸಾಯನಿಗೂ ಆಜ್ಞಾಪಿಸಿ ಹೇಳಿದ್ದೇನಂದರೆ-- ನೀವು ಹೋಗಿ ಸಿಕ್ಕಿದ ಈ ಪುಸ್ತಕದ ಮಾತುಗಳನ್ನು ಕುರಿತು ನನಗೋಸ್ಕರವೂ ಜನರಿಗೋಸ್ಕರವೂ ಎಲ್ಲಾ ಯೆಹೂದ್ಯರಿಗೋಸ್ಕರವೂ ಕರ್ತನ ಬಳಿಯಲ್ಲಿ ವಿಚಾರಿಸಿರಿ. ಯಾಕಂದರೆ ನಮ್ಮನ್ನು ಕುರಿತು ಬರೆಯಲ್ಪಟ್ಟ ಎಲ್ಲಾದರ ಪ್ರಕಾರ ಮಾಡಲು ನಮ್ಮ ಪಿತೃಗಳು ಈ ಪುಸ್ತಕದ ಮಾತುಗಳನ್ನು ಕೇಳದೆ ಹೋದದರಿಂದ ನಮಗೆ ವಿರೋಧವಾಗಿ ಉರಿ ಯುವ ದೇವರ ಕೋಪವು ದೊಡ್ಡದಾಗಿದೆ ಅಂದನು. ಹಾಗೆಯೇ ಯಾಜಕನಾದ ಹಿಲ್ಕೀಯನೂ ಅಹೀಕಾ ಮನೂ ಅಕ್ಬೋರನೂ ಶಾಫಾನನೂ ಅಸಾಯನೂ ಹರ್ಹಸನ ಮೊಮ್ಮಗನೂ ತಿಕ್ವನ ಮಗನೂ ಆದ ವಸ್ತ್ರಗಳ ಕೆಲಸಗಾರರಾದ ಶಲ್ಲೂಮನ ಹೆಂಡತಿಯಾದ ಪ್ರವಾದಿನಿಯಾದ ಹುಲ್ದಳ ಬಳಿಗೆ ಹೋಗಿ ಅವಳ ಸಂಗಡ ಮಾತನಾಡಿದರು. ಅವಳು ಯೆರೂಸಲೇಮಿ ನೊಳಗೆ ಎರಡನೇ ಭಾಗದಲ್ಲಿ ವಾಸವಾಗಿದ್ದಳು. ಆಗ ಅವಳು--ಅವರಿಗೆ ಹೇಳಿದ್ದು--ಇಸ್ರಾಯೇಲಿನ ದೇವ ರಾದ ಕರ್ತನು ಹೇಳುವದೇನಂದರೆ--ನಿಮ್ಮನ್ನು ನನ್ನ ಬಳಿಗೆ ಕಳುಹಿಸಿದವನಿಗೆ ನೀವು ಹೇಳಬೇಕಾದದ್ದು ಇದೇ--ಇಗೋ, ನಾನು ಈ ಸ್ಥಳದ ಮೇಲೆಯೂ ಅದರ ನಿವಾಸಿಗಳ ಮೇಲೆಯೂ ಕೇಡನ್ನು ಅಂದರೆ ಯೆಹೂದದ ಅರಸನು ಓದಿದ ಪುಸ್ತಕದ ಮಾತುಗ ಳನ್ನೆಲ್ಲಾ ಬರಮಾಡುವೆನು. ಅವರು ತಮ್ಮ ಎಲ್ಲಾ ಕೈ ಕೆಲಸಗಳಿಂದ ನನಗೆ ಕೋಪವನ್ನು ಎಬ್ಬಿಸುವ ಹಾಗೆ ನನ್ನನ್ನು ಬಿಟ್ಟು ಇತರ ದೇವರುಗಳಿಗೆ ಧೂಪವನ್ನು ಸುಟ್ಟಿದ್ದಾರೆ. ನನ್ನ ಕೋಪ ಈ ಸ್ಥಳದ ಮೇಲೆ ಹೊತ್ತಿ ಉರಿಯುವದು, ಆರಿಹೋಗದು ಎಂದು ಕರ್ತನು ಹೇಳುತ್ತಾನೆ. ಆದರೆ ಕರ್ತನಿಂದ ವಿಚಾರಿಸಲು ನಿಮ್ಮನ್ನು ಕಳುಹಿಸಿದ ಯೆಹೂದದ ಅರಸನಿಗೆ ನೀವು ಹೇಳಬೇಕಾದದ್ದು ಇದೇ--ನೀವು ಕೇಳಿದ ಮಾತು ಗಳನ್ನು ಕುರಿತು ಇಸ್ರಾಯೇಲಿನ ದೇವರಾದ ಕರ್ತನು ಹೇಳುವದೇನಂದರೆ -- ಈ ಸ್ಥಳಕ್ಕೂ ಅದರ ನಿವಾಸಿಗಳಿಗೂ ವಿರೋಧವಾಗಿ ಅವರು ನಾಶವೂ ಶಾಪವೂ ಆಗುವದೆಂದು ನಾನು ಹೇಳಿದ್ದನ್ನು ನೀನು ಕೇಳಿದಾಗ ನಿನ್ನ ಹೃದಯವು ಮೆತ್ತಗಾಗಿ ನೀನು ನಿನ್ನನ್ನು ಕರ್ತನ ಮುಂದೆ ತಗ್ಗಿಸಿ ನಿನ್ನ ವಸ್ತ್ರಗಳನ್ನು ಹರಿದುಕೊಂಡು ನನ್ನ ಮುಂದೆ ಅತ್ತದ್ದನ್ನು ನಾನೇ ಕೇಳಿದ್ದೇನೆಂದು ಕರ್ತನು ಹೇಳುತ್ತಾನೆ.ಆದದರಿಂದ ಇಗೋ, ನಾನು ನಿನ್ನನ್ನು ನಿನ್ನ ಪಿತೃಗಳ ಬಳಿಯಲ್ಲಿ ಸೇರಿಸಿಕೊಳ್ಳುವೆನು; ನೀನು ಸಮಾಧಾನದಿಂದ ನಿನ್ನ ಸಮಾಧಿಗೆ ಸೇರುವಿ; ನಾನು ಈ ಸ್ಥಳದ ಮೇಲೆ ಬರಮಾಡುವ ಕೇಡನ್ನು ನಿನ್ನ ಕಣ್ಣುಗಳು ಕಾಣುವದಿಲ್ಲ ಎಂಬದು. ಅವರು ಹೋಗಿ ಈ ಪ್ರತ್ಯುತ್ತರವನ್ನು ಅರಸನಿಗೆ ತಿಳಿಸಿದರು. ಆದದರಿಂದ ಇಗೋ, ನಾನು ನಿನ್ನನ್ನು ನಿನ್ನ ಪಿತೃಗಳ ಬಳಿಯಲ್ಲಿ ಸೇರಿಸಿಕೊಳ್ಳುವೆನು; ನೀನು ಸಮಾಧಾನದಿಂದ ನಿನ್ನ ಸಮಾಧಿಗೆ ಸೇರುವಿ; ನಾನು ಈ ಸ್ಥಳದ ಮೇಲೆ ಬರಮಾಡುವ ಕೇಡನ್ನು ನಿನ್ನ ಕಣ್ಣುಗಳು ಕಾಣುವದಿಲ್ಲ ಎಂಬದು. ಅವರು ಹೋಗಿ ಈ ಪ್ರತ್ಯುತ್ತರವನ್ನು ಅರಸನಿಗೆ ತಿಳಿಸಿದರು.
- Isaiah 32:13–14 ಯೆಶಾಯ 32:13–14ನನ್ನ ಜನರ ಭೂಮಿಯ ಮೇಲೂ ಹೌದು, ಉತ್ಸಾಹ ಪಟ್ಟಣದಲ್ಲಿ ಉಲ್ಲಾಸಗೊಳ್ಳುವ ಎಲ್ಲಾ ಮನೆ ಗಳ ಮೇಲೂ ಮುಳ್ಳು ಮತ್ತು ದತ್ತೂರಿ ಬೆಳೆಯುವವು. ಅರಮನೆಗಳು ಕೈಬಿಡಲ್ಪಡುವವು. (ವಿಸರ್ಜಿಸು ವವು) ಸಮೂಹಗಳಿಂದ ತುಂಬಿದ್ದ ಪಟ್ಟಣವು ನಿರ್ಜನ ವಾಗುವದು. ದುರ್ಗಗಳೂ ಕೋಟೆಗಳೂ ಯಾವಾ ಗಲೂ ಗುಹೆ (ಗವಿ)ಗಳಾಗಿಯೂ ಕಾಡುಕತ್ತೆಗಳಿಗೆ ಸಂತೋಷವಾಗಿಯೂ ಮಂದೆಗಳಿಗೆ ಮೇಯುವ ಸ್ಥಳವಾಗಿಯೂ ಇರುವವು.
- Job 10:2 ಯೋಬನು 10:2ನಾನು ದೇವರಿಗೆ ಹೀಗೆ ಹೇಳುತ್ತೇನೆ--ನನ್ನನ್ನು ಖಂಡಿಸಬೇಡ; ಯಾವದಕ್ಕೋ ಸ್ಕರ ನನ್ನ ಸಂಗಡ ವ್ಯಾಜ್ಯಮಾಡುತ್ತೀ ಎಂದು ನನಗೆ ತಿಳಿಸು.
- Amos 6:1 ಆಮೋಸ 6:1ಚೀಯೋನಿನಲ್ಲಿ ನಿಶ್ಚಿಂತೆಯಿಂದಿರುವವ ರಿಗೂ ಸಮಾರ್ಯ ಬೆಟ್ಟದಲ್ಲಿ ನಂಬಿಕೆ ಯಿಡುವವರಿಗೂ ಇಸ್ರಾಯೇಲಿನ ಮನೆತನದವರ ಯಾರ ಬಳಿಗೆ ಬರುತ್ತಾರೋ ಆ ಪ್ರಮುಖ ಜನಾಂಗ ದಲ್ಲಿ ಹೆಸರುಗೊಂಡವರಿಗೂ ಅಯ್ಯೋ!
- Isaiah 10:5–6 ಯೆಶಾಯ 10:5–6ಓ ನನ್ನ ಕೋಪದ ಕೋಲಾದ ಅಶ್ಶೂರವೇ, ಕೈಯಲ್ಲಿರುವ ಬೆತ್ತವು ನನ್ನ ರೌದ್ರವೇ. ನಾನು ಅವನನ್ನು ಭ್ರಷ್ಠಜನರಿಗೆ ವಿರುದ್ಧವಾಗಿ ಕಳುಹಿಸಿ ನನ್ನ ಕೋಪಕ್ಕೆ ಗುರಿಯಾದ (ನನ್ನ) ಪ್ರಜೆಯನ್ನು ಸೂರೆ ಮಾಡಿ ಕೊಳ್ಳೆಹೊಡೆದು ಬೀದಿಯ ಕೆಸರನ್ನೋ ಎಂಬಂತೆ ತುಳಿದು ಹಾಕಬೇಕೆಂದು ಅಪ್ಪಣೆ ಕೊಡು ವೆನು.
- Hosea 13:16 ಹೋಶೇಯ 13:16ಸಮಾರ್ಯವು ಹಾಳಾಗಿ ಹೋಗುವದು; ಅವಳು ತನ್ನ ದೇವರಿಗೆ ವಿರುದ್ಧವಾಗಿ ತಿರಿಗಿ ಬಿದ್ದಿದ್ದಾಳೆ; ಅವರೆಲ್ಲರೂ ಕತ್ತಿ ಯಿಂದ ಬೀಳುವರು; ಅವರ ಎಳೇ ಕೂಸುಗಳು ಚೂರು ಚೂರಾಗಿ ಬಡಿಯಲ್ಪಡುವವು; ಅವರ ಗರ್ಭಿಣಿಯರು ಸೀಳಲ್ಪಡುವರು.