Nehemiah · chapter 1 · verse 7
Nehemiah 1:7 in Kannada
ನಾನೂ ನನ್ನ ತಂದೆಯ ಮನೆಯವರೂ ಪಾಪಮಾಡಿದ್ದೇವೆ. ನಿನಗೆ ವಿರೋಧವಾಗಿ ಬಹು ಕೆಟ್ಟತನ ಮಾಡಿದ್ದೇವೆ; ನೀನು ನಿನ್ನ ಸೇವಕನಾದ ಮೋಶೆಗೆ ಆಜ್ಞಾಪಿಸಿದ ಆಜ್ಞೆಗಳನ್ನೂ ಕಟ್ಟಳೆಗಳನ್ನೂ ನ್ಯಾಯಗಳನ್ನೂ ನಾವು ಕೈಕೊಳ್ಳಲಿಲ್ಲ.
Naanoo nanna tandeya maneyavaroo paapamaadiddeve. Ninage virodhavaagi bahu kettatana maadiddeve; neenu ninna sevakanaada moshege aajnyaapisida aajnyegalannoo kattalegalannoo nyaayagalannoo naavu kaikollalilla.
Nehemiah 1:7 in English
- King James Version (KJV)
- We have dealt very corruptly against thee, and have not kept the commandments, nor the statutes, nor the judgments, which thou commandedst thy servant Moses.
- World English Bible (WEB)
- We have dealt very corruptly against you, and have not kept the commandments, nor the statutes, nor the ordinances, which you commanded your servant Moses.
- American Standard Version (ASV)
- we have dealt very corruptly against thee, and have not kept the commandments, nor the statutes, nor the ordinances, which thou commandedst thy servant Moses.
- Bible in Basic English (BBE)
- We have done great wrong against you, and have not kept the orders, the rules, and the decisions, which you gave to your servant Moses.
- Darby Translation (DBY)
- We have acted very perversely against thee, and have not kept the commandments, nor the statutes, nor the ordinances that thou commandedst thy servant Moses.
- Webster's Bible (WBS)
- We have dealt very corruptly against thee, and have not kept the commandments, nor the statutes, nor the judgments, which thou commandedst thy servant Moses.
- Young's Literal Translation (YLT)
- we have acted very corruptly against Thee, and have not kept the commands, and the statutes, and the judgments, that Thou didst command Moses Thy servant.
Read in context
- 5ಓ ಪರಲೋ ಕದ ದೇವರಾದ ಕರ್ತನೇ, ನಿನ್ನನ್ನು ಪ್ರೀತಿಮಾಡಿ ನಿನ್ನ ಆಜ್ಞೆಗಳನ್ನು ಕೈಕೊಳ್ಳುವವರಿಗೆ ಒಡಂಬಡಿಕೆಯನ್ನೂ ಕೃಪೆಯನ್ನೂ ಕೈಕೊಳ್ಳುವವನಾದ ಮತ್ತು ಭಯಂಕರವುಳ್ಳ ದೇವರೇ,
- 6ನಿನ್ನ ಸೇವಕರಾದ ಇಸ್ರಾಯೇಲ್ ಮಕ್ಕಳಿ ಗೋಸ್ಕರ ಈಗ ಹಗಲಿರುಳು ನಿನ್ನ ಸೇವಕನು ನಿನ್ನ ಮುಂದೆ ಪ್ರಾರ್ಥಿಸಿದ ಪ್ರಾರ್ಥನೆಯನ್ನೂ ನಿನಗೆ ವಿರೋಧವಾಗಿ ನಾವು ಮಾಡಿದ ಇಸ್ರಾಯೇಲ್ ಮಕ್ಕಳ ಪಾಪಗಳ ಅರಿಕೆಮಾಡುವದನ್ನೂ ನೀನು ಕೇಳುವ ಹಾಗೆ ನಿನ್ನ ಕಿವಿ ಅಲೈಸುತ್ತಾ ಇರಲಿ, ನಿನ್ನ ಕಣ್ಣುಗಳು ತೆರೆದಿರಲಿ.
- 7ನಾನೂ ನನ್ನ ತಂದೆಯ ಮನೆಯವರೂ ಪಾಪಮಾಡಿದ್ದೇವೆ. ನಿನಗೆ ವಿರೋಧವಾಗಿ ಬಹು ಕೆಟ್ಟತನ ಮಾಡಿದ್ದೇವೆ; ನೀನು ನಿನ್ನ ಸೇವಕನಾದ ಮೋಶೆಗೆ ಆಜ್ಞಾಪಿಸಿದ ಆಜ್ಞೆಗಳನ್ನೂ ಕಟ್ಟಳೆಗಳನ್ನೂ ನ್ಯಾಯಗಳನ್ನೂ ನಾವು ಕೈಕೊಳ್ಳಲಿಲ್ಲ.
- 8ದಯಮಾಡಿ ನಿನ್ನ ಸೇವಕನಾದ ಮೋಶೆಗೆ ಹೇಳಿದ ಮಾತನ್ನು ಜ್ಞಾಪಕಮಾಡು, ಏನಂದರೆ--ನೀವು ಅಕೃತ್ಯ ಮಾಡಿದರೆ ನಾನು ನಿಮ್ಮನ್ನು ಜನಾಂಗಗಳನ್ನು ಚದರಿಸುವಂತೆ ಚದರಿಸುವೆನು.
- 9ಆದರೆ ನೀವು ನನ್ನ ಬಳಿಗೆ ತಿರುಗಿ ನನ್ನ ಆಜ್ಞೆಗಳನ್ನು ಕೈಕೊಂಡು ಅವುಗಳ ಪ್ರಕಾರ ಮಾಡಿದರೆ ನಿಮ್ಮಲ್ಲಿರುವವರು ಆಕಾಶದ ಅಂತ್ಯದ ವರೆಗೂ ಹೊರಡಿಸಲ್ಪಟ್ಟಿದ್ದರೂ ನಾನು ಅಲ್ಲಿಂದ ಅವ ರನ್ನು ಕೂಡಿಸಿ ನನ್ನ ಹೆಸರನ್ನಿಡಲು ಆದುಕೊಂಡ ಸ್ಥಳಕ್ಕೆ ಅವರನ್ನು ಬರಮಾಡುವೆನು ಎಂದು ಹೇಳಿದಿ.
Cross references
- Daniel 9:5–6 ದಾನಿಯೇಲನು 9:5–6ನಾವು ಪಾಪ ಅಕ್ರಮವನ್ನು ಮಾಡಿದ್ದೇವೆ; ಇದಲ್ಲದೆ ಕೆಟ್ಟವರಾಗಿ ನಡೆದು ತಿರುಗಿಬಿದ್ದಿದ್ದೇವೆ; ಅಂದರೆ ನಿನ್ನ ಕಟ್ಟಳೆಗಳನ್ನೂ ನ್ಯಾಯಗಳನ್ನೂ ಬಿಟ್ಟುಹೋಗಿದ್ದೇವೆ. ಇಲ್ಲವೆ ನಿನ್ನ ಹೆಸರಿನಲ್ಲಿ ನಮ್ಮ ಅರಸರಿಗೂ ಪ್ರಧಾನ ರಿಗೂ ತಂದೆಗಳಿಗೂ ದೇಶದ ಎಲ್ಲಾ ಜನರಿಗೂ ಮಾತ ನಾಡಿದ ನಿನ್ನ ಸೇವಕರಾದ ಪ್ರವಾದಿಗಳಿಗೆ ಕಿವಿಗೊಡ ಲಿಲ್ಲ.
- Daniel 9:11 ದಾನಿಯೇಲನು 9:11ಹೌದು, ಎಲ್ಲಾ ಇಸ್ರಾಯೇಲ್ಯರು ನಿನ್ನ ನ್ಯಾಯ ಪ್ರಮಾಣವನ್ನು ವಿಾರಿ ನಿನ್ನ ಸ್ವರಕ್ಕೆ ಕಿವಿಗೊಡದೆ ತೊಲಗಿದ್ದದರಿಂದ ಶಾಪವು ದೇವರ ಸೇವಕನಾದ ಮೋಶೆಯು ನ್ಯಾಯ ಪ್ರಮಾಣದಲ್ಲಿ ಬರೆದ ಆಣೆಯು, ಆತನಿಗೆ ವಿರುದ್ಧವಾಗಿ ನಾವು ಮಾಡಿದ ಪಾಪದ ನಿಮಿತ್ತ ನಮ್ಮ ಮೇಲೆ ಹೊಯ್ಯಲ್ಪಟ್ಟಿದೆ.
- Daniel 9:13 ದಾನಿಯೇಲನು 9:13ಮೋಶೆಯ ನ್ಯಾಯಪ್ರಮಾಣದಲ್ಲಿ ಬರೆದಿರುವ ಪ್ರಕಾರ ಈ ಕೇಡು ನಮ್ಮ ಮೇಲೆ ಬಂತು, ಆದಾಗ್ಯೂ ನಾವು ನಮ್ಮ ಅಕ್ರಮಗಳನ್ನು ಬಿಟ್ಟು, ತಿರುಗಿಕೊಂಡು ನಿನ್ನ ಸತ್ಯವನ್ನು ತಿಳಿದುಕೊಳ್ಳುವ ಹಾಗೆ, ನಮ್ಮ ದೇವರಾದ ಕರ್ತನ ಮುಂದೆ ನಾವು ಪ್ರಾರ್ಥನೆ ಗಳನ್ನು ಮಾಡಲಿಲ್ಲ.
- Psalm 106:6 ಕೀರ್ತನೆಗಳು 106:6ನಮ್ಮ ತಂದೆಗಳ ಸಂಗಡ ನಾವು ಪಾಪಮಾಡಿದ್ದೇವೆ, ಅಕ್ರಮಮಾಡಿದ್ದೇವೆ, ದುಷ್ಟತ್ವವನ್ನು ನಡಿಸಿದ್ದೇವೆ.
- 2 Chronicles 27:2 2 ಪೂರ್ವಕಾಲವೃತ್ತಾಂತ 27:2ಇವನು ತನ್ನ ತಂದೆಯಾದ ಉಜ್ಜೀಯನು ಮಾಡಿದ ಎಲ್ಲಾದರ ಪ್ರಕಾರ ಕರ್ತನ ದೃಷ್ಟಿಯಲ್ಲಿ ಸರಿಯಾದ ದ್ದನ್ನು ಮಾಡಿದನು. ಆದರೆ ಕರ್ತನ ಮನೆಯಲ್ಲಿ ಪ್ರವೇಶಿಸಲಿಲ್ಲ. ಜನರು ಇನ್ನೂ ಕೆಟ್ಟದ್ದನ್ನು ಮಾಡುತ್ತಾ ಇದ್ದರು.
- Psalm 19:8–9 ಕೀರ್ತನೆಗಳು 19:8–9ಕರ್ತನ ಕಟ್ಟಳೆಗಳು ನ್ಯಾಯವಾದವುಗಳಾಗಿದ್ದು ಹೃದಯಕ್ಕೆ ಸಂತೋಷಕರವಾಗಿವೆ; ಕರ್ತನ ಆಜ್ಞೆಯು ಶುದ್ಧವಾ ದದ್ದು; ಕಣ್ಣುಗಳನ್ನು ಬೆಳಗಿಸುತ್ತದೆ. ಕರ್ತನ ಭಯವು ಪವಿತ್ರವಾಗಿದ್ದು ಎಂದೆಂದಿಗೂ ನೆಲೆಯಾಗಿದೆ. ಕರ್ತನ ನ್ಯಾಯಗಳು ಸತ್ಯವಾಗಿದ್ದು ಒಟ್ಟಾಗಿ ನೀತಿಯುಳ್ಳವುಗ ಳಾಗಿವೆ.
- Deuteronomy 4:5 ಧರ್ಮೋಪದೇಶಕಾಂಡ 4:5ಇಗೋ, ನೀವು ಹೋಗಿ ಸ್ವತಂತ್ರಿಸಿಕೊಳ್ಳುವ ದೇಶದಲ್ಲಿ ನೀವು ಮಾಡಬೇಕೆಂದು ನನ್ನ ದೇವರಾದ ಕರ್ತನು ನನಗೆ ಆಜ್ಞಾಪಿಸಿದಂತೆ ನಿಯಮಗಳನ್ನೂ ನ್ಯಾಯಗಳನ್ನೂ ನಿಮಗೆ ಬೋಧಿಸಿದ್ದೇನೆ.
- Deuteronomy 5:1 ಧರ್ಮೋಪದೇಶಕಾಂಡ 5:1ಆಗ ಮೋಶೆಯು ಇಸ್ರಾಯೇಲ್ಯರನ್ನೆಲ್ಲಾ ಕರೆದು ಅವರಿಗೆ--ಓ ಇಸ್ರಾಯೇಲೇ, ನಾನು ಈಹೊತ್ತು ನಿಮಗೆ ಹೇಳುವ ನಿಯಮಗಳನ್ನೂ ನ್ಯಾಯಗಳನ್ನೂ ಕೇಳಿರಿ; ಅವುಗಳನ್ನು ಕಲಿತು ಕೈಕೊಂಡು ನಡೆಯಬೇಕು.
- Deuteronomy 4:1 ಧರ್ಮೋಪದೇಶಕಾಂಡ 4:1ಹೀಗಿರುವದರಿಂದ ಈಗ ಇಸ್ರಾಯೇಲೇ, ನೀವು ಬದುಕಿ ನಿಮ್ಮ ಪಿತೃಗಳ ದೇವರಾದ ಕರ್ತನು ನಿಮಗೆ ಕೊಡುವ ದೇಶವನ್ನು ಪ್ರವೇಶಿಸಿ ಸ್ವತಂತ್ರಿಸಿಕೊಳ್ಳುವ ಹಾಗೆ ನಾನು ನಿಮಗೆ ಬೋಧಿಸುವ ನಿಯಮಗಳನ್ನೂ ನ್ಯಾಯಗಳನ್ನೂ ಕೇಳಿ ಅವುಗಳನ್ನು ಮಾಡಿರಿ.
- 2 Chronicles 25:4 2 ಪೂರ್ವಕಾಲವೃತ್ತಾಂತ 25:4ಆದರೆ ತಂದೆಗಳು ಮಕ್ಕಳಿ ಗೋಸ್ಕರ ಸಾಯುವದಿಲ್ಲ, ಮಕ್ಕಳು ತಂದೆಗಳಿಗೋಸ್ಕರ ಸಾಯುವದಿಲ್ಲ; ಪ್ರತಿ ಮನುಷ್ಯನು ತನ್ನ ಪಾಪದಲ್ಲಿ ಸಾಯಬೇಕೆಂದು ಕರ್ತನು ಆಜ್ಞಾಪಿಸಿದ್ದು ಮೋಶೆಯ ನ್ಯಾಯಪ್ರಮಾಣದ ಪುಸ್ತಕದಲ್ಲಿ ಬರೆಯಲ್ಪಟ್ಟ ಹಾಗೆ ಅವನು ಅವರ ಮಕ್ಕಳನ್ನು ಕೊಲ್ಲಲಿಲ್ಲ.
- 1 Kings 2:3 1 ಅರಸುಗಳು 2:3ನೀನು ಏನು ಮಾಡಿದರೂ ಎಲ್ಲಿ ಸಂಚರಿಸಿದರೂ ಎಲ್ಲಾದರಲ್ಲಿ ಬುದ್ಧಿಯುಳ್ಳವನಾಗಿರು ವದಕ್ಕೂ ಕರ್ತನು ನನ್ನನ್ನು ಕುರಿತು--ನಿನ್ನ ಮಕ್ಕಳು ತಾವು ಪೂರ್ಣಹೃದಯದಿಂದಲೂ ಪೂರ್ಣಪ್ರಾಣ ದಿಂದಲೂ ನನ್ನ ಮುಂದೆ ಸತ್ಯವಾಗಿ ನಡೆದುಕೊಳ್ಳುವ ಹಾಗೆ ತಮ್ಮ ಮಾರ್ಗವನ್ನು ಕಾದುಕೊಂಡರೆ ಇಸ್ರಾ ಯೇಲಿನ ಸಿಂಹಾಸನದ ಮೇಲೆ ಕೂಡ್ರತಕ್ಕವರಲ್ಲಿ ನಿನಗೆ ಕೊರತೆ ಇರುವದಿಲ್ಲ ಎಂದು ಹೇಳಿದ ತನ್ನ ವಾಕ್ಯವನ್ನು ಸ್ಥಿರಪಡಿಸುವದಕ್ಕೂ
- Psalm 119:5–8 ಕೀರ್ತನೆಗಳು 119:5–8ನನ್ನ ಮಾರ್ಗಗಳು ನಿನ್ನ ನಿಯಮಗಳನ್ನು ಕೈಕೊಳ್ಳುವದಕ್ಕೆ ನನ್ನನ್ನು ನಡಿ ಸಲಿ. ಆಗ ನಿನ್ನ ಆಜ್ಞೆಗಳನ್ನೆಲ್ಲಾ ದೃಷ್ಟಿಸುವಾಗ ನಾಚಿಕೆ ಪಡೆನು. ನಿನ್ನ ನೀತಿಯ ನ್ಯಾಯಗಳನ್ನು ನಾನು ಕಲಿ ಯುವಾಗ ಯಥಾರ್ಥ ಹೃದಯದಿಂದ ನಿನ್ನನ್ನು ಕೊಂಡಾ ಡುವೆನು. ನಿನ್ನ ನಿಯಮಗಳನ್ನು ಕೈಕೊಳ್ಳುವ ನನ್ನನ್ನು ಸಂಪೂರ್ಣವಾಗಿ ಕೈಬಿಡಬೇಡ.