Nehemiah · chapter 10 · verse 31
Nehemiah 10:31 in Kannada
ಎಂದೂ ದೇಶದ ಜನರು ಸಬ್ಬತ್ ದಿವಸದಲ್ಲಿ ಸರಕುಗಳನ್ನೂ ಧಾನ್ಯವನ್ನೂ ಮಾರಲುತಕ್ಕೊಂಡು ಬಂದರೆ ನಾವು ಅವುಗಳನ್ನು ಸಬ್ಬತ್ ದಿವಸದಲ್ಲಾದರೂ ಪರಿಶುದ್ಧ ದಿವಸದಲ್ಲಾದರೂ ಅವ ರಿಂದ ಕೊಂಡುಕೊಳ್ಳುವದಿಲ್ಲವೆಂದೂ ನಾವು ಏಳನೇ ವರುಷದಲ್ಲಿ ಎಲ್ಲಾ ಕೈ ಸಾಲವನ್ನು ಬಿಟ್ಟುಬಿಡುತ್ತೇ ವೆಂದೂ ಶಪಥಕ್ಕೂ ಆಣೆಗೂ ಒಳಗಾದರು.
Endoo deshada janaru sabbat divasadalli sarakugalannoo dhaanyavannoo maaralutakkondu bandare naavu avugalannu sabbat divasadallaadaroo parishuddha divasadallaadaroo ava rinda kondukolluvadillavendoo naavu elane varushadalli ellaa kai saalavannu bittubidutte vendoo shapathakkoo aanegoo olagaadaru.
Nehemiah 10:31 in English
- King James Version (KJV)
- And [if] the people of the land bring ware or any victuals on the sabbath day to sell, [that] we would not buy it of them on the sabbath, or on the holy day: and [that] we would leave the seventh year, and the exaction of every debt.
- World English Bible (WEB)
- and if the peoples of the land bring wares or any grain on the Sabbath day to sell, that we would not buy from them on the Sabbath, or on a holy day; and that we would forego the seventh year crops and the exaction of every debt.
- American Standard Version (ASV)
- and if the peoples of the land bring wares or any grain on the sabbath day to sell, that we would not buy of them on the sabbath, or on a holy day; and that we would forego the seventh year, and the exaction of every debt.
- Bible in Basic English (BBE)
- And if the peoples of the lands come to do trade in goods or food on the Sabbath day, that we would do no trade with them on the Sabbath or on a holy day: and that in the seventh year we would take no payment from any debtor.
- Darby Translation (DBY)
- and that if the peoples of the land brought wares or any grain on the sabbath day to sell, we would not take it of them on the sabbath, or on [any] holy day; and that we would leave [the land uncultivated] the seventh year, and the exaction of every debt.
- Webster's Bible (WBS)
- And [if] the people of the land should bring wares or any provisions on the sabbath day to sell, [that] we would not buy it of them on the sabbath, or on the holy day: and [that] we would leave the seventh year, and the exaction of every debt.
- Young's Literal Translation (YLT)
- and the peoples of the land who are bringing in the wares and any corn on the sabbath-day to sell, we receive not of them on the sabbath, and on a holy day, and we leave the seventh year, and usury on every hand.
Read in context
- 29ಇವರು ತಮ್ಮ ಸಹೋದರರಾದ ತಮ್ಮ ಮುಖ್ಯಸ್ಥರ ಸಂಗಡ ಕೂಡಿಕೊಂಡು--ದೇವರ ಸೇವಕನಾದ ಮೋಶೆಯ ಕೈಯಿಂದ ಕೊಟ್ಟ ದೇವರ ನ್ಯಾಯಪ್ರಮಾಣದಲ್ಲಿ ನಡೆಯುತ್ತೇವೆಂದೂ ಕರ್ತ ನಾದ ನಮ್ಮ ದೇವರ ಆಜ್ಞೆಗಳನ್ನೂ ಆತನ ನ್ಯಾಯ ಗಳನ್ನೂ ಆತನ ಕಟ್ಟಳೆಗಳನ್ನೂ ಎಲ್ಲವನ್ನೂ ಕೈಕೊಂಡು ಮಾಡುತ್ತೇವೆಂದೂ;
- 30ನಾವು ನಮ್ಮ ಕುಮಾರ್ತೆಯರನ್ನು ಆ ದೇಶದ ಜನರಿಗೆ ಕೊಡುವದಿಲ್ಲ. ನಮ್ಮ ಕುಮಾರರಿಗೆ ಅವರ ಕುಮಾರ್ತೆಯರನ್ನು ತಕ್ಕೊಳ್ಳುವದಿಲ್ಲ
- 31ಎಂದೂ ದೇಶದ ಜನರು ಸಬ್ಬತ್ ದಿವಸದಲ್ಲಿ ಸರಕುಗಳನ್ನೂ ಧಾನ್ಯವನ್ನೂ ಮಾರಲುತಕ್ಕೊಂಡು ಬಂದರೆ ನಾವು ಅವುಗಳನ್ನು ಸಬ್ಬತ್ ದಿವಸದಲ್ಲಾದರೂ ಪರಿಶುದ್ಧ ದಿವಸದಲ್ಲಾದರೂ ಅವ ರಿಂದ ಕೊಂಡುಕೊಳ್ಳುವದಿಲ್ಲವೆಂದೂ ನಾವು ಏಳನೇ ವರುಷದಲ್ಲಿ ಎಲ್ಲಾ ಕೈ ಸಾಲವನ್ನು ಬಿಟ್ಟುಬಿಡುತ್ತೇ ವೆಂದೂ ಶಪಥಕ್ಕೂ ಆಣೆಗೂ ಒಳಗಾದರು.
- 32ಇದಲ್ಲದೆ ಸಮ್ಮುಖದ ರೊಟ್ಟಿಗೋಸ್ಕರವೂ ನಿತ್ಯ ಕಾಣಿಕೆಗೋಸ್ಕರವೂ ಸಬ್ಬತ್ತುಗಳಲ್ಲಿಯೂ ಅಮಾವಾಸ್ಯೆ ಗಳಲ್ಲಿಯೂ ಅರ್ಪಿಸುವ ನಿತ್ಯ ದಹನಬಲಿಗಳಿಗೋ ಸ್ಕರವೂ ನೇಮಿಸಿದ ಹಬ್ಬಗಳಿಗೋಸ್ಕರವೂ ಪರಿಶುದ್ಧ ವಾದವುಗಳಿಗೋಸ್ಕರವೂ
- 33ಇಸ್ರಾಯೇಲ್ಯರ ಪ್ರಾಯ ಶ್ಚಿತ್ತವಾದ ಪಾಪಬಲಿಗೋಸ್ಕರವೂ ನಮ್ಮ ದೇವರ ಆಲಯದ ಸಮಸ್ತ ಕಾರ್ಯಕ್ಕೋಸ್ಕರವೂ ನಮ್ಮ ದೇವರ ಆಲಯದ ಸೇವೆಯ ನಿಮಿತ್ತವಾಗಿ ವರುಷಕ್ಕೆ ಶೆಕೆಲಿನಲ್ಲಿ ಮೂರರಲ್ಲಿ ಒಂದು ಪಾಲು ಕೊಡಲು ನಮಗೆ ನಾವು ನೇಮಕ ಮಾಡಿಕೊಂಡೆವು.
Cross references
- Leviticus 23:3 ಯಾಜಕಕಾಂಡ 23:3ಆರು ದಿವಸ ಕೆಲಸಮಾಡಬೇಕು, ಆದರೆ ಏಳನೆಯ ದಿವಸವು ವಿಶ್ರಾಂತಿಯ ಸಬ್ಬತ್ ದಿವಸವಾಗಿ ಪರಿಶುದ್ಧ ಸಭಾಕೂಟವಾಗಿರುವದು; ನೀವು ಆ ದಿನ ದಲ್ಲಿ ಕೆಲಸಮಾಡಬಾರದು; ನಿಮ್ಮ ಎಲ್ಲಾ ನಿವಾಸಗಳಲ್ಲಿ ಅದು ಕರ್ತನ ಸಬ್ಬತ್ತಾಗಿರುವದು.
- Nehemiah 13:15–22 ನೆಹೆಮೀಯ 13:15–22ಆ ದಿವಸಗಳಲ್ಲಿ ನಾನು ಯೆಹೂದದೊಳಗೆ ಸಬ್ಬತ್ತುಗಳಲ್ಲಿ ಕೆಲವರು ದ್ರಾಕ್ಷೆ ತುಳಿಯುವದನ್ನೂ ಸಿವುಡುಗಳನ್ನು ತರುವದನ್ನೂ ಕತ್ತೆಗಳ ಮೇಲೆ ಹೇರಿ ಕೊಂಡು ಬರುವದನ್ನೂ ಮತ್ತು ಸಬ್ಬತ್ತುಗಳಲ್ಲಿ ಯೆರೂಸಲೇಮಿಗೆ ದ್ರಾಕ್ಷಾರಸವನ್ನೂ ದ್ರಾಕ್ಷೆ ಹಣ್ಣು ಗಳನ್ನೂ ಅಂಜೂರದ ಹಣ್ಣುಗಳನ್ನೂ ಎಲ್ಲಾ ಹೊರೆ ಗಳನ್ನೂ ತರುವದನ್ನು ನಾನು ನೋಡಿದ್ದರಿಂದ ಮಾರುವ ದಿವಸದಲ್ಲಿ ನಾನು ಸಾಕ್ಷಿಯಾಗಿ ಹೇಳಿದೆನು. ಇದಲ್ಲದೆ ವಿಾನುಗಳನ್ನೂ ಎಲ್ಲಾ ಸರುಕುಗಳನ್ನೂ ತಕ್ಕೊಂಡು ಬಂದು ಸಬ್ಬತ್ ದಿವಸದಲ್ಲಿ ಯೆಹೂದದ ಮಕ್ಕಳಿಗೆ ಮಾರುವ ತೂರಿನವರು ಯೆರೂಸಲೇಮಿ ನಲ್ಲಿ ವಾಸವಾಗಿದ್ದರು. ಆಗ ನಾನು ಯೆಹೂದದ ಶ್ರೇಷ್ಠರನ್ನು ಗದರಿಸಿ, ಅವರಿಗೆ -- ಸಬ್ಬತ್ ದಿನವನ್ನು ನೀವು ಅಪವಿತ್ರಮಾಡುವ ಈ ಕೆಟ್ಟಕಾರ್ಯವೇನು? ನಿಮ್ಮ ತಂದೆಗಳು ಈ ಪ್ರಕಾರ ಮಾಡಿದ್ದರಿಂದ ನಮ್ಮ ದೇವರು ನಮ್ಮ ಮೇಲೆಯೂ ಪಟ್ಟಣದ ಮೇಲೆಯೂ ಈ ಕೇಡನ್ನೆಲ್ಲಾ ಬರಮಾಡಲ್ಲಿಲ್ಲವೋ? ಆದರೆ ನೀವು ಸಬ್ಬತ್ ದಿವಸವನ್ನು ಅಪವಿತ್ರ ಮಾಡುವದರಿಂದ ಇಸ್ರಾಯೇಲಿನ ಮೇಲೆ ಇನ್ನೂ ಉರಿಯನ್ನು ಬರಮಾಡುವಿರಿ. ಆದಕಾರಣ ಸಬ್ಬತ್ ಆಗುವದಕ್ಕಿಂತ ಮುಂಚೆ ಯೆರೂಸಲೇಮಿನ ಬಾಗಲು ಗಳಲ್ಲಿ ಕತ್ತಲು ಆಗಲಾರಂಭಿಸಿದಾಗ ಬಾಗಲುಗಳನ್ನು ಹಾಕುವ ಹಾಗೆಯೂ ಸಬ್ಬತ್ ದಿವಸವು ತೀರುವ ವರೆಗೆ ಅವುಗಳನ್ನು ತೆರೆಯದೆ ಇರುವ ಹಾಗೆಯೂ ನಾನು ಅವರಿಗೆ ಹೇಳಿದೆನು. ಮತ್ತು ಸಬ್ಬತ್ ದಿವಸದಲ್ಲಿ ಹೊರೆ ಏನಾದರೂ ಒಳಗೆ ತಾರದ ಹಾಗೆ ನನ್ನ ಸೇವಕರಲ್ಲಿ ಕೆಲವರನ್ನು ಬಾಗಲುಗಳ ಬಳಿಯಲ್ಲಿ ಇಟ್ಟೆನು. ಆಗ ವರ್ತಕರೂ ಎಲ್ಲಾ ಸರಕುಗಳನ್ನು ಮಾರುವವರೂ ಒಂದೆರಡು ಸಾರಿ ಯೆರೂಸಲೇಮಿನ ಹೊರಗೆ ರಾತ್ರಿಯನ್ನು ಕಳೆದರು. ಆಗ ನಾನು ಅವರನ್ನು ಗದರಿಸಿ ಅವರಿಗೆ--ನೀವು ಕೋಟೆಯ ಮುಂದೆ ಇಳುಕೊಂಡಿರುವದೇನು? ನೀವು ಇನ್ನು ಮೇಲೆ ಹಾಗೆ ಮಾಡಿದರೆ ನಿಮ್ಮ ಮೇಲೆ ಕೈ ಹಾಕುವೆನು ಅಂದೆನು. ಆ ಹೊತ್ತಿನಿಂದ ಅವರು ಸಬ್ಬತ್ ದಿವಸದಲ್ಲಿ ಬರಲೇ ಇಲ್ಲ; ಆಗ ಲೇವಿಯರು ತಮ್ಮನ್ನು ಶುಚಿ ಮಾಡಿಕೊಳ್ಳಬೇಕೆಂದೂ ಸಬ್ಬತ್ ದಿವಸವನ್ನು ಪರಿಶುದ್ಧ ಮಾಡುವ ಹಾಗೆ ಅವರು ಬಂದು ಬಾಗಲುಗಳನ್ನು ಕಾಯಬೇಕೆಂದೂ ಅವರಿಗೆ ಹೇಳಿದೆನು. ನನ್ನ ದೇವರೇ, ಇದಕ್ಕೋಸ್ಕರ ನೀನು ನನ್ನನ್ನು ನೆನಸಿ ನಿನ್ನ ಮಹಾ ಕೃಪೆಯ ಪ್ರಕಾರ ನನ್ನನ್ನು ಕರುಣಿಸು ಅಂದೆನು.
- Exodus 23:10–11 ವಿಮೋಚನಕಾಂಡ 23:10–11ಆರು ವರುಷ ನಿನ್ನ ಭೂಮಿಗೆ ಬೀಜಹಾಕಿ ಅದರ ಬೆಳೆಯನ್ನು ಕೂಡಿಸಬೇಕು. ಏಳನೆಯ ವರುಷದಲ್ಲಿ ಅದಕ್ಕೆ ವಿಶ್ರಾಂತಿಯನ್ನು ಕೊಟ್ಟು ಅದನ್ನು ಬೀಳು ಬಿಡಬೇಕು. ಆಗ ನಿನ್ನ ಜನರಲ್ಲಿರುವ ಬಡವರು ಅದರಲ್ಲಿ ಬೆಳೆದದ್ದನ್ನು ತಿನ್ನಲಿ; ಅವರು ಬಿಟ್ಟದ್ದನ್ನು ಹೊಲದ ಪಶುಗಳು ತಿನ್ನಲಿ. ಹೀಗೆ ನಿನ್ನ ದ್ರಾಕ್ಷೇ ತೋಟದಲ್ಲಿಯೂ ಎಣ್ಣೇಮರಗಳ ತೋಪಿನಲ್ಲಿಯೂ ಮಾಡಬೇಕು.
- Exodus 20:10 ವಿಮೋಚನಕಾಂಡ 20:10ಆದರೆ ಏಳನೆಯ ದಿನವು ನಿನ್ನ ದೇವರಾದ ಕರ್ತನ ಸಬ್ಬತ್ ಆಗಿದೆ. ಅದರಲ್ಲಿ ನೀನಾಗಲಿ ನಿನ್ನ ಮಗನಾಗಲಿ ಮಗಳಾ ಗಲಿ ದಾಸನಾಗಲಿ ದಾಸಿಯಾಗಲಿ ಪಶುಗಳಾಗಲಿ ಬಾಗಿಲ ಬಳಿಯಲ್ಲಿರುವ ಪ್ರವಾಸಿಯಾಗಲಿ ಯಾವ ಕೆಲಸವನ್ನೂ ಮಾಡಬಾರದು.
- Jeremiah 17:21–22 ಯೆರೆಮೀಯ 17:21–22ಕರ್ತನು ಹೀಗೆ ಹೇಳುತ್ತಾನೆ--ನಿಮಗೆ ನೀವೇ ಎಚ್ಚರಿಕೆಯಾಗಿರ್ರಿ; ಸಬ್ಬತ್ತಿನ ದಿವಸದಲ್ಲಿ ಹೊರೆಯನ್ನು ಹೊತ್ತುಕೊಂಡು ಇಲ್ಲವೆ ಯೆರೂಸಲೇಮಿನ ಬಾಗಿಲುಗಳೊಳಗೆ ತಕ್ಕೊಂಡು ಬರಬೇಡಿರಿ. ಸಬ್ಬತ್ತಿನ ದಿವಸದಲ್ಲಿ ಹೊರೆಯನ್ನು ನಿಮ್ಮ ಮನೆಗಳೊಳಗಿಂದ ತಕ್ಕೊಂಡು ಹೋಗಬೇಡಿರಿ; ಯಾವ ಕೆಲಸವನ್ನೂ ಮಾಡಬೇಡಿರಿ; ನಾನು ನಿಮ್ಮ ತಂದೆಗಳಿಗೆ ಆಜ್ಞಾಪಿಸಿದ ಪ್ರಕಾರವೇ ಸಬ್ಬತ್ತಿನ ದಿವಸವನ್ನು ಪರಿಶುದ್ಧ ಮಾಡಬೇಕು ಎಂಬದು.
- Leviticus 25:1–7 ಯಾಜಕಕಾಂಡ 25:1–7ತರುವಾಯ ಕರ್ತನು ಸೀನಾಯಿ ಬೆಟ್ಟದಲ್ಲಿ ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇ ನಂದರೆ-- ಇಸ್ರಾಯೇಲ್ ಮಕ್ಕಳೊಂದಿಗೆ ನೀನು ಮಾತನಾಡಿ ಅವರಿಗೆ ಹೀಗೆ ಹೇಳು--ನಾನು ನಿಮಗೆ ಕೊಡುವ ದೇಶದಲ್ಲಿ ನೀವು ಬಂದಾಗ ದೇಶವು ಕರ್ತನಿ ಗಾಗಿ ಸಬ್ಬತ್ತನ್ನು ಕೈಕೊಳ್ಳಬೇಕು. ಆರು ವರುಷ ನೀವು ನಿಮ್ಮ ಹೊಲವನ್ನು ಬಿತ್ತಬೇಕು, ಆರು ವರುಷ ನೀವು ನಿಮ್ಮ ದ್ರಾಕ್ಷೇತೋಟವನ್ನು ಕತ್ತರಿಸಬೇಕು, ಅವು ಗಳಿಂದ ಫಲವನ್ನು ಕೂಡಿಸಬೇಕು. ಆದರೆ ಏಳನೆಯ ವರುಷವು ದೇಶಕ್ಕೆ ವಿಶ್ರಾಂತಿಗಾಗಿ ಸಬ್ಬತ್ತಾಗಿರುವದು, ಕರ್ತನಿಗಾಗಿ ಒಂದು ಸಬ್ಬತ್ತಾಗಿರುವದು. ನೀವು ನಿಮ್ಮ ಹೊಲವನ್ನು ಬಿತ್ತಬಾರದು ಇಲ್ಲವೆ ದ್ರಾಕ್ಷೇತೋಟ ವನ್ನು ಕತ್ತರಿಸಬಾರದು. ತನ್ನಷ್ಟಕ್ಕೆ ತಾನೇ ಬೆಳೆದಿ ರುವ ಪೈರನ್ನು ನೀವು ಕೊಯ್ಯಬಾರದು ಇಲ್ಲವೆ ಕತ್ತರಿಸದಿರುವ ದ್ರಾಕ್ಷೇ ಬಳ್ಳಿಯ ದ್ರಾಕ್ಷೇ ಹಣ್ಣುಗಳನ್ನು ಕೂಡಿಸಬಾರದು; ಅದು ದೇಶಕ್ಕೆ ವಿಶ್ರಾಂತಿಯ ವರುಷವಾಗಿರುವದು. ದೇಶದ ಆ ಸಬ್ಬತ್ತು ನಿಮ್ಮ ಆಹಾರಕ್ಕಾಗಿ ಇರುವದು; ನಿನಗೂ ನಿನ್ನ ದಾಸನಿಗೂ ದಾಸಿಗೂ ಕೂಲಿ ಆಳಿಗೂ ನಿನ್ನೊಂದಿಗೆ ಪ್ರವಾಸಿ ಯಾಗಿರುವ ಪರಕೀಯನಿಗೂ ನಿನ್ನ ದನಗಳಿಗೂ ದೇಶದಲ್ಲಿರುವ ಮೃಗಗಳಿಗೂ ಅದರ ಹುಟ್ಟುವಳಿಯೆಲ್ಲಾ ಆಹಾರಕ್ಕಾಗಿ ಇರಬೇಕು.
- 2 Chronicles 36:21 2 ಪೂರ್ವಕಾಲವೃತ್ತಾಂತ 36:21ದೇಶವು ಎಪ್ಪತ್ತು ವರುಷ ತೀರುವ ಪರ್ಯಂತರ ಹಾಳಾಗಿದ್ದು ಸಬ್ಬತ್ತನ್ನು ಅನುಭವಿಸುತ್ತಾ ಇತ್ತು.
- Deuteronomy 15:1–3 ಧರ್ಮೋಪದೇಶಕಾಂಡ 15:1–3ಪ್ರತಿ ಏಳು ವರುಷಗಳ ಅಂತ್ಯದಲ್ಲಿ ಬಿಡುಗಡೆಯನ್ನು ಮಾಡಬೇಕು. ಬಿಡು ಗಡೆಯ ಕ್ರಮವೇನೆಂದರೆ: ಸಾಲ ಕೊಟ್ಟವರೆಲ್ಲರೂ ತಮ್ಮ ನೆರೆಯವರಿಗೆ ಕೊಟ್ಟ ಸಾಲವನ್ನು ಬಿಟ್ಟುಬಿಡ ಬೇಕು; ಅದು ಕರ್ತನ ಬಿಡುಗಡೆ ಎಂದು ಕರೆಯಲ್ಪಟ್ಟ ಕಾರಣ ತನ್ನ ನೆರೆಯವನಿಂದಲೂ ತನ್ನ ಸಹೋದರ ನಿಂದಲೂ ಸಾಲ ತೆಗೆದುಕೊಳ್ಳಬಾರದು. ಅನ್ಯನಿಂದ ತಿರಿಗಿ ತೆಗೆದುಕೊಳ್ಳಬಹುದು; ಆದರೆ ನಿನ್ನ ಸಹೋದರನ ಬಳಿಯಲ್ಲಿ ನಿನಗಿರುವದನ್ನು ನೀನು ಬಿಟ್ಟುಬಿಡಬೇಕು.
- Leviticus 23:35–36 ಯಾಜಕಕಾಂಡ 23:35–36ಮೊದಲನೆಯ ದಿವಸದಲ್ಲಿ ಪರಿಶುದ್ಧ ಸಭೆಯ ಕೂಟವಿರುವದು; ನೀವು ಅದರಲ್ಲಿ ಕಷ್ಟಕರವಾದ ಕೆಲಸ ವನ್ನು ಮಾಡಬಾರದು. ಏಳು ದಿವಸ ನೀವು ಬೆಂಕಿಯಿಂದ ಮಾಡಿದ ಸಮರ್ಪಣೆಗಳನ್ನು ಕರ್ತನಿಗೆ ಅರ್ಪಿಸಬೇಕು. ಎಂಟನೆಯ ದಿವಸವು ನಿಮಗೆ ಪರಿ ಶುದ್ಧ ಕೂಟವಾಗಿರುವದು; ನೀವು ಬೆಂಕಿಯಿಂದ ಮಾಡಿದ ಸಮರ್ಪಣೆಯನ್ನು ಕರ್ತನಿಗೆ ಅರ್ಪಿಸಬೇಕು; ಅದೊಂದು ಗಂಭೀರ ಸಭೆಯಾಗಿರುವದು; ಅದರಲ್ಲಿ ನೀವು ಕಷ್ಟಕರವಾದ ಕೆಲಸವನ್ನು ಮಾಡಬಾರದು.
- Deuteronomy 5:12–14 ಧರ್ಮೋಪದೇಶಕಾಂಡ 5:12–14ನಿನ್ನ ದೇವರಾದ ಕರ್ತನು ನಿನಗೆ ಆಜ್ಞಾಪಿಸಿದಂತೆ ಸಬ್ಬತ್ ದಿವಸವನ್ನು ಪರಿಶುದ್ಧಮಾಡುವದಕ್ಕೆ ಅದನ್ನು ಕಾಪಾಡು. ಆರು ದಿವಸಗಳಲ್ಲಿ ನೀನು ದುಡಿದು ನಿನ್ನ ಕೆಲಸವನ್ನೆಲ್ಲಾ ಮಾಡಬೇಕು. ಏಳನೇ ದಿವಸವು ನಿನ್ನ ದೇವರಾದ ಕರ್ತನ ಸಬ್ಬತ್ ದಿವಸವೇ; ಅದ ರಲ್ಲಿ ನೀನೂ ನಿನ್ನ ಮಗನೂ ಮಗಳೂ ದಾಸನೂ ದಾಸಿಯೂ ಎತ್ತೂ ಕತ್ತೆಯೂ ಎಲ್ಲಾಪಶುಗಳೂ ನಿನ್ನ ಬಾಗಲುಗಳಲ್ಲಿರುವ ಪರವಾಸಿಯೂ ಯಾವ ಕೆಲಸ ವನ್ನೂ ಮಾಡಬಾರದು. ನಿನ್ನ ದಾಸನೂ ದಾಸಿಯೂ ನಿನ್ನ ಹಾಗೆ ವಿಶ್ರಮಿಸಿಕೊಳ್ಳಬೇಕು.
- Isaiah 58:13–14 ಯೆಶಾಯ 58:13–14ನೀನು ಸಬ್ಬತ್ತಿನಲ್ಲಿ ನಿನ್ನ ಕಾಲನ್ನು ಹಿಂದೆಗೆದು, ನನ್ನ ಪರಿಶುದ್ಧ ದಿವಸದಲ್ಲಿ ನಿನ್ನ ಇಷ್ಟ ವನ್ನು ಮಾಡದೇ ಹೋದರೆ ಸಬ್ಬತ್ತನ್ನು ಆನಂದಕರ ವಾದದ್ದೆಂದೂ ಕರ್ತನ ಪರಿಶುದ್ಧ ದಿವಸವನ್ನು ಘನವುಳ್ಳದ್ದೆಂದೂ ಕರೆದರೆ, ಸ್ವಂತ ಕೆಲಸಗಳನ್ನು ಮಾಡದೆ ಸ್ವಂತ ಇಷ್ಟವನ್ನು ಕಂಡುಕೊಳ್ಳದೆ, ಸ್ವಂತ ಮಾತುಗಳನ್ನು ಆಡದೆ, ಅದನ್ನು ಘನಪಡಿಸಿದರೆ,ಆಗ ಕರ್ತನಲ್ಲಿ ಆನಂದಗೊಳ್ಳುವಿ; ಭೂಮಿಯ ಎತ್ತರವಾದ ಸ್ಥಳಗಳ ಮೇಲೆ ನಿನ್ನನ್ನು ಹತ್ತಿಸಿ, ನಿನ್ನ ತಂದೆಯಾದ ಯಾಕೋಬನ ಬಾಧ್ಯತೆಯನ್ನು ಅನುಭವಿ ಸುವಂತೆ ನಿನಗೆ ಮಾಡುವೆನು. ಕರ್ತನೇ ಇದನ್ನು ನುಡಿದಿದ್ದಾನೆ. ಆಗ ಕರ್ತನಲ್ಲಿ ಆನಂದಗೊಳ್ಳುವಿ; ಭೂಮಿಯ ಎತ್ತರವಾದ ಸ್ಥಳಗಳ ಮೇಲೆ ನಿನ್ನನ್ನು ಹತ್ತಿಸಿ, ನಿನ್ನ ತಂದೆಯಾದ ಯಾಕೋಬನ ಬಾಧ್ಯತೆಯನ್ನು ಅನುಭವಿ ಸುವಂತೆ ನಿನಗೆ ಮಾಡುವೆನು. ಕರ್ತನೇ ಇದನ್ನು ನುಡಿದಿದ್ದಾನೆ.
- Deuteronomy 15:7–9 ಧರ್ಮೋಪದೇಶಕಾಂಡ 15:7–9ನಿನ್ನ ದೇವರಾದ ಕರ್ತನು ನಿನಗೆ ಕೊಡುವ ನಿನ್ನ ದೇಶದಲ್ಲಿ ನಿನ್ನ ಬಾಗಲುಗಳ ಒಂದರಲ್ಲಿ ನಿನ್ನ ಸಹೋದರರಲ್ಲಿ ಒಬ್ಬನಾಗಿರುವ ಬಡವನು ನಿನ್ನಲ್ಲಿದ್ದರೆ ನಿನ್ನ ಹೃದಯವನ್ನು ಕಠಿಣಮಾಡಿಕೊಳ್ಳಬೇಡ. ನಿನ್ನ ಕೈಯನ್ನು ನಿನ್ನ ಬಡ ಸಹೋದರನಿಗೆ ಮುಚ್ಚಿಕೊಳ್ಳ ಬೇಡ. ನಿನ್ನ ಕೈಯನ್ನು ಅವನಿಗೆ ವಿಶಾಲವಾಗಿ ತೆರೆಯಬೇಕು; ಅವನಿಗೆ ಬೇಕಾಗುವದರಲ್ಲಿ ಬೇಕಾದಷ್ಟು ಸಾಲ ಅವನಿಗೆ ಕೊಡಬೇಕು. ಬಿಡುಗಡೆಯ ವರುಷ ವಾದ ಏಳನೇ ವರುಷವು ಸವಿಾಪವಾಯಿತೆಂಬ ದುಷ್ಟಾಲೋಚನೆ ನಿನ್ನ ಹೃದಯದಲ್ಲಿ ಹುಟ್ಟಿ ನಿನ್ನ ಬಡ ಸಹೋದರನ ಮೇಲೆ ನಿನ್ನ ಕಣ್ಣು ಕೆಟ್ಟದ್ದಾಗಿ ನೀನು ಅವನಿಗೆ ಏನೂ ಕೊಡದೆ ಇರುವದರಿಂದ ಅವನು ನಿನಗೆ ವಿರೋಧವಾಗಿ ಕರ್ತನಿಗೆ ಕೂಗುವಾಗ ನಿನ್ನಲ್ಲಿ ಪಾಪ ಉಂಟಾಗದ ಹಾಗೆ ನೋಡಿಕೋ.
Original words (Hebrew)
- people · H5971עַם ʻam
- land · H776אֶרֶץ ʼerets
- bring · H935בּוֹא bôwʼ
- ware · H4728מַקָּחָה maqqâchâh
- victuals · H7668שֶׁבֶר sheber
- sabbath · H7676שַׁבָּת shabbâth
- day · H3117יוֹם yôwm
- sell · H4376מָכַר mâkar
- buy · H3947לָקַח lâqach
- sabbath · H7676שַׁבָּת shabbâth
- holy · H6944קֹדֶשׁ qôdesh
- day · H3117יוֹם yôwm
- leave · H5203נָטַשׁ nâṭash
- seventh · H7637שְׁבִיעִי shᵉbîyʻîy
- year · H8141שָׁנֶה shâneh
- exaction · H4853מַשָּׂא massâʼ
- debt · H3027יָד yâd