Nehemiah · chapter 5 · verse 12
Nehemiah 5:12 in Kannada
ಅದಕ್ಕವರುನಾವು ತಿರಿಗಿ ಕೊಡುತ್ತೇವೆ; ಅವರಿಂದ ಏನೂ ಕೇಳು ವದಿಲ್ಲ. ನೀನು ಹೇಳಿದ ಹಾಗೆ ಮಾಡುತ್ತೇವೆ ಅಂದರು. ಆಗ ನಾನು ಯಾಜಕರನ್ನು ಕರೆದು ಅವರು ಈ ಮಾತಿನ ಪ್ರಕಾರ ಮಾಡುವ ಹಾಗೆ ಅವರಿಂದ ಪ್ರಮಾಣವನ್ನು ತಕ್ಕೊಂಡೆನು.
Adakkavarunaavu tirigi kodutteve; avarinda enoo kelu vadilla. Neenu helida haage maadutteve andaru. Aaga naanu yaajakarannu karedu avaru ee maatina prakaara maaduva haage avarinda pramaanavannu takkondenu.
Nehemiah 5:12 in English
- King James Version (KJV)
- Then said they, We will restore [them], and will require nothing of them; so will we do as thou sayest. Then I called the priests, and took an oath of them, that they should do according to this promise.
- World English Bible (WEB)
- Then they said, “We will restore them, and will require nothing of them. We will do so, even as you say.” Then I called the priests, and took an oath of them, that they would do according to this promise.
- American Standard Version (ASV)
- Then said they, We will restore them, and will require nothing of them; so will we do, even as thou sayest. Then I called the priests, and took an oath of them, that they would do according to this promise.
- Bible in Basic English (BBE)
- Then they said, We will give them back, and take nothing for them; we will do as you say. Then I sent for the priests and made them take an oath that they would keep this agreement.
- Darby Translation (DBY)
- And they said, We will restore [them], and will require nothing of them; so will we do, as thou hast said. And I called the priests, and took an oath of them, that they should do according to this promise.
- Webster's Bible (WBS)
- Then said they, We will restore [them] , and will require nothing of them; so will we do as thou sayest. Then I called the priests, and took an oath of them, that they would do according to this promise.
- Young's Literal Translation (YLT)
- And they say, 'We give back, and of them we seek nothing; so we do as thou art saying.' And I call the priests, and cause them to swear to do according to this thing;
Read in context
- 10ನಾನು ನನ್ನ ಸಹೋದರರೂ ನನ್ನ ಸೇವಕರೂ ಅವರಿಂದ ಹಣ ವನ್ನೂ ಧಾನ್ಯವನ್ನೂ ಒತ್ತಾಯದಿಂದ ತಕ್ಕೊಳ್ಳಬಹು ದಾಗಿತ್ತು.
- 11ದಯಮಾಡಿ ಈ ಬಡ್ಡಿಯನ್ನು ಬಿಟ್ಟು ಬಿಡೋಣ. ನೀವು ಅವರಿಂದ ಒತ್ತಾಯದಿಂದ ತೆಗೆದುಕೊಂಡ ಅವರ ಹೊಲಗಳನ್ನೂ ದ್ರಾಕ್ಷಾತೋಟಗಳನ್ನೂ ಇಪ್ಪೇ ತೋಪುಗಳನ್ನೂ ಮನೆಗಳನ್ನೂ ನೂರಕ್ಕೆ ಒಂದಾದ ಹಣವನ್ನೂ ಧಾನ್ಯವನ್ನೂ ದ್ರಾಕ್ಷಾರಸವನ್ನೂ ಎಣ್ಣೇಯನ್ನೂ ಇಂದು ಅವರಿಗೆ ತಿರಿಗಿಕೊಡಿರಿ ಎಂದು ಹೇಳಿದೆನು.
- 12ಅದಕ್ಕವರುನಾವು ತಿರಿಗಿ ಕೊಡುತ್ತೇವೆ; ಅವರಿಂದ ಏನೂ ಕೇಳು ವದಿಲ್ಲ. ನೀನು ಹೇಳಿದ ಹಾಗೆ ಮಾಡುತ್ತೇವೆ ಅಂದರು. ಆಗ ನಾನು ಯಾಜಕರನ್ನು ಕರೆದು ಅವರು ಈ ಮಾತಿನ ಪ್ರಕಾರ ಮಾಡುವ ಹಾಗೆ ಅವರಿಂದ ಪ್ರಮಾಣವನ್ನು ತಕ್ಕೊಂಡೆನು.
- 13ನಾನು ನನ್ನ ಬಟ್ಟೆಯನ್ನು ಝಾಡಿಸಿ -- ಈ ಮಾತಿನ ಪ್ರಕಾರ ಮಾಡದೆ ಇರುವ ಪ್ರತಿ ಮನುಷ್ಯನನ್ನು ದೇವರು ಅವನ ಮನೆಯಿಂದಲೂ ಅವನ ಕಷ್ಟಾರ್ಜಿತದಿಂದಲೂ ಝಾಡಿಸಲಿ. ಅವನು ಇದೇ ಪ್ರಕಾರ ಝಾಡಿಸಲ್ಪಟ್ಟು ಬರಿದಾಗಲಿ ಅಂದೆನು. ಅದಕ್ಕೆ ಸಭೆಯವರೆಲ್ಲರೂ--ಆಮೆನ್ ಎಂದು ಹೇಳಿ ಕರ್ತನನ್ನು ಸ್ತುತಿಸಿದರು. ನನ್ನ ದೇವರೇ, ಜನರು ಈ ಮಾತಿನ ಪ್ರಕಾರ ಮಾಡಿದರು.
- 14ಇದಲ್ಲದೆ ನಾನು ಯೆಹೂದ ದೇಶದಲ್ಲಿ ಅವರ ಅಧಿಪತಿಯಾಗಿದ್ದ ಕಾಲ ಮೊದಲುಗೊಂಡು ಅರಸ ನಾದ ಆರ್ತಷಸ್ತನ ಇಪ್ಪತ್ತನೇ ವರುಷ ಮೊದಲು ಗೊಂಡು ಮೂವತ್ತೆರಡನೇ ವರುಷದ ವರೆಗೆ ಹನ್ನೆರಡು ವರುಷವಾಗಿ ನಾನೂ ನನ್ನ ಸಹೋದರರೂ ಅಧಿ ಪತಿಯಾದವನ ರೊಟ್ಟಿಯನ್ನು ತಿನ್ನಲಿಲ್ಲ.
Cross references
- Ezra 10:5 ಎಜ್ರನು 10:5ಆಗ ಎಜ್ರನು ಎದ್ದು, ಪ್ರಧಾನಯಾಜಕರೂ ಲೇವಿಯರೂ ಸಮಸ್ತ ಇಸ್ರಾ ಯೇಲ್ಯರೂ ಈ ಮಾತಿನ ಪ್ರಕಾರವಾಗಿ ಮಾಡಲು ಅವರು ಆಣೆ ಇಡುವ ಹಾಗೆ ಮಾಡಿದನು. ಅವರು ಆಣೆ ಇಟ್ಟರು.
- Jeremiah 34:8–10 ಯೆರೆಮೀಯ 34:8–10ಅರಸನಾದ ಚಿದ್ಕೀಯನು ಯೆರೂಸಲೇಮಿನಲ್ಲಿದ್ದ ಎಲ್ಲಾ ಜನರ ಸಂಗಡ ಒಡಂಬಡಿಕೆ ಮಾಡಿ ಒಬ್ಬೊಬ್ಬನು ತನ್ನ ತನ್ನ ದಾಸ ದಾಸಿಯನ್ನು ಅವನು ಇಬ್ರೀಯನಾಗಲಿ ಇಬ್ರೀಯಳಾಗಲಿ ಇದ್ದರೆ ಸ್ವತಂತ್ರರಾಗಿ ಕಳುಹಿಸ ಬೇಕೆಂದು ಒಬ್ಬನಾದರೂ ಅವರಿಂದ ಅಂದರೆ ತನ್ನ ಸಹೋದರನಾದ ಯೆಹೂದ್ಯನಿಂದ ಸೇವೆ ತಕ್ಕೊಳ್ಳ ಬೇಡವೆಂದು ಅವರಿಗೆ ಬಿಡುಗಡೆಯನ್ನು ಸಾರಿದ ಮೇಲೆ ಯೆರೆವಿಾಯನಿಗೆ ಕರ್ತನಿಂದ ಉಂಟಾದ ವಾಕ್ಯವು. ಆಗ ಒಡಂಬಡಿಕೆಯಲ್ಲಿ ಸೇರಿದ ಪ್ರಧಾನರೆಲ್ಲರೂ ಜನರೆಲ್ಲರೂ ಒಬ್ಬೊಬ್ಬನು ತನ್ನ ತನ್ನ ದಾಸನನ್ನೂ ತನ್ನ ತನ್ನ ದಾಸಿಯನ್ನೂ ಬಿಡುಗಡೆಯಾಗಿ ಕಳುಹಿಸ ಬೇಕೆಂದೂ ಅವರಿಂದ ಸೇವೆ ತಕ್ಕೊಳ್ಳಬಾರದೆಂದೂ ಕೇಳಿದ ಮೇಲೆ ವಿಧೇಯರಾಗಿದ್ದು ಅವರನ್ನು ಕಳುಹಿಸಿ ಬಿಟ್ಟರು.
- Luke 19:8 ಲೂಕನು 19:8ಆಗ ಜಕ್ಕಾಯನು ನಿಂತುಕೊಂಡು ಕರ್ತನಿಗೆ--ಕರ್ತನೇ, ಇಗೋ, ನನ್ನ ಸೊತ್ತಿನಲ್ಲಿ ಅರ್ಧವನ್ನು ಬಡವರಿಗೆ ಕೊಡುತ್ತೇನೆ; ನಾನು ಯಾರಿಂದಲಾದರೂ ಸುಳ್ಳಾಗಿ ದೂರು ಹೇಳಿ ಏನಾದರೂ ತಕ್ಕೊಂಡಿದ್ದರೆ ಅವನಿಗೆ ನಾಲ್ಕರಷ್ಟು ಹಿಂದಕ್ಕೆ ಕೊಡುತ್ತೇನೆ ಅಂದನು.
- Nehemiah 10:29 ನೆಹೆಮೀಯ 10:29ಇವರು ತಮ್ಮ ಸಹೋದರರಾದ ತಮ್ಮ ಮುಖ್ಯಸ್ಥರ ಸಂಗಡ ಕೂಡಿಕೊಂಡು--ದೇವರ ಸೇವಕನಾದ ಮೋಶೆಯ ಕೈಯಿಂದ ಕೊಟ್ಟ ದೇವರ ನ್ಯಾಯಪ್ರಮಾಣದಲ್ಲಿ ನಡೆಯುತ್ತೇವೆಂದೂ ಕರ್ತ ನಾದ ನಮ್ಮ ದೇವರ ಆಜ್ಞೆಗಳನ್ನೂ ಆತನ ನ್ಯಾಯ ಗಳನ್ನೂ ಆತನ ಕಟ್ಟಳೆಗಳನ್ನೂ ಎಲ್ಲವನ್ನೂ ಕೈಕೊಂಡು ಮಾಡುತ್ತೇವೆಂದೂ;
- Ezra 10:12 ಎಜ್ರನು 10:12ಆಗ ಸಭೆಯೆಲ್ಲಾ ಪ್ರತ್ಯುತ್ತರವಾಗಿ ದೊಡ್ಡ ಶಬ್ದ ದಿಂದ--ನೀನು ಹೇಳಿದ ಪ್ರಕಾರವೇ ನಾವು ಮಾಡ ಬೇಕು,
- Nehemiah 10:31 ನೆಹೆಮೀಯ 10:31ಎಂದೂ ದೇಶದ ಜನರು ಸಬ್ಬತ್ ದಿವಸದಲ್ಲಿ ಸರಕುಗಳನ್ನೂ ಧಾನ್ಯವನ್ನೂ ಮಾರಲುತಕ್ಕೊಂಡು ಬಂದರೆ ನಾವು ಅವುಗಳನ್ನು ಸಬ್ಬತ್ ದಿವಸದಲ್ಲಾದರೂ ಪರಿಶುದ್ಧ ದಿವಸದಲ್ಲಾದರೂ ಅವ ರಿಂದ ಕೊಂಡುಕೊಳ್ಳುವದಿಲ್ಲವೆಂದೂ ನಾವು ಏಳನೇ ವರುಷದಲ್ಲಿ ಎಲ್ಲಾ ಕೈ ಸಾಲವನ್ನು ಬಿಟ್ಟುಬಿಡುತ್ತೇ ವೆಂದೂ ಶಪಥಕ್ಕೂ ಆಣೆಗೂ ಒಳಗಾದರು.
- 2 Chronicles 15:13–14 2 ಪೂರ್ವಕಾಲವೃತ್ತಾಂತ 15:13–14ಯಾವನಾದರೂ ಇಸ್ರಾ ಯೇಲಿನ ದೇವರಾದ ಕರ್ತನನ್ನು ಹುಡುಕದೆ ಹೋದರೆ ಹಿರಿಯನಾದರೂ ಕಿರಿಯನಾದರೂ ಪುರುಷನಾದರೂ ಸ್ತ್ರೀಯಾದರೂ ಸಾಯಬೇಕೆಂದೂ ಒಡಂಬಡಿಕೆಯನ್ನು ಮಾಡಿಕೊಂಡರು. ಮಹಾಶಬ್ದದಿಂದಲೂ ಆರ್ಭಟ ದಿಂದಲೂ ತುತೂರಿಗಳ ಶಬ್ದದಿಂದಲೂ ಕೊಂಬು ಗಳ ಶಬ್ದದಿಂದಲೂ ಕರ್ತನ ಮುಂದೆ ಆಣೆಯಿಟ್ಟರು.
- 2 Chronicles 6:22–23 2 ಪೂರ್ವಕಾಲವೃತ್ತಾಂತ 6:22–23ಯಾವನಾದರೂ ತನ್ನ ನೆರೆಯವ ನಿಗೆ ವಿರೋಧವಾಗಿ ಪಾಪಮಾಡಿ ಅವನು ಆಣೆಇಡಬೇಕೆಂದು ನೇಮಿಸಲು ಈ ಆಲಯದಲ್ಲಿ ನಿನ್ನ ಬಲಿಪೀಠದ ಮುಂದೆ ಈ ಆಣೆ ಬಂದರೆ ನೀನೇ ದುಷ್ಟನ ಮಾರ್ಗವನ್ನು ಅವನ ತಲೆಯ ಮೇಲೆ ಬರ ಮಾಡಿ ಅವನಿಗೆ ಬದಲು ಕೊಡುವ ಹಾಗೆಯೂ ನೀತಿವಂತನನ್ನು ನೀತಿವಂತನಾಗಿ ಮಾಡಿ ಅವನ ನೀತಿಯ ಪ್ರಕಾರ ಅವನಿಗೆ ಕೊಡುವ ಹಾಗೆಯೂ ನೀನು ಆಕಾಶದಿಂದ ಕೇಳಿ ನಡಿಸಿ ನಿನ್ನ ಸೇವಕರ ನ್ಯಾಯವನ್ನು ತೀರಿಸು.
- Matthew 26:63 ಮತ್ತಾಯನು 26:63ಆದರೆ ಯೇಸು ಸುಮ್ಮನಿದ್ದನು. ಆಗ ಮಹಾಯಾಜಕನು ಪ್ರತ್ಯುತ್ತರವಾಗಿ ಆತನಿಗೆ--ನೀನು ದೇವಕುಮಾರನಾದ ಕ್ರಿಸ್ತನಾದರೆ ಅದನ್ನು ನಮಗೆ ಹೇಳಬೇಕೆಂದು ಜೀವಸ್ವರೂಪನಾದ ದೇವರ ಆಣೆಯನ್ನು ನಿನಗೆ ಇಡುತ್ತೇನೆ ಅಂದನು.
- Nehemiah 13:25 ನೆಹೆಮೀಯ 13:25ಆಗ ನಾನು ಅವರನ್ನು ಗದರಿಸಿ ಶಪಿಸಿ ಅವರಲ್ಲಿ ಕೆಲವರನ್ನು ಹೊಡೆದು ಅವರ ಕೂದಲನ್ನು ಕಿತ್ತು--ನೀವು ನಿಮ್ಮ ಕುಮಾರ್ತೆಯರನ್ನು ಅವರ ಕುಮಾರರಿಗೂ ಅವರ ಕುಮಾರ್ತೆಯರನ್ನು ನಿಮ್ಮ ಕುಮಾರರಿಗೂ ನಿಮಗೂ ತಕ್ಕೊಳ್ಳದೆ ಮತ್ತು ಕೊಡದೆ ಇರ್ರಿ ಎಂದು ದೇವರ ಹೆಸರಿನಲ್ಲಿ ಅವರಿಗೆ ಆಣೆ ಇಟ್ಟೆನು;
- 2 Kings 23:2–3 2 ಅರಸುಗಳು 23:2–3ಆಗ ಅರಸನೂ ಅವನ ಸಂಗಡ ಯೆಹೂದದ ಜನರೆಲ್ಲರೂ ಯೆರೂ ಸಲೇಮಿನ ನಿವಾಸಿಗಳೆಲ್ಲರೂ ಯಾಜಕರೂ ಪ್ರವಾದಿ ಗಳೂ ಹಿರಿಕಿರಿಯರಾದ ಎಲ್ಲಾ ಜನರೂ ಕರ್ತನ ಆಲಯಕ್ಕೆ ಹೋದರು. ಅವರು ಕೇಳುವ ಹಾಗೆ ಕರ್ತನ ಆಲಯದಲ್ಲಿ ಸಿಕ್ಕಿದ ಒಡಂಬಡಿಕೆಯ ಪುಸ್ತಕದ ಮಾತುಗಳನೆಲ್ಲಾ ಅವನು ಓದಿದನು. ಅರಸನು ಸ್ತಂಭದ ಬಳಿಯಲ್ಲಿ ನಿಂತು ಕರ್ತನನ್ನು ಹಿಂಬಾಲಿಸು ವದಕ್ಕೂ ಆತನ ಆಜ್ಞೆಗಳನ್ನೂ ಸಾಕ್ಷಿಗಳನ್ನೂ ಕಟ್ಟಳೆ ಗಳನ್ನೂ ಪೂರ್ಣಹೃದಯದಿಂದಲೂ ಪೂರ್ಣಪ್ರಾಣ ದಿಂದಲೂ ಕೈಕೊಳ್ಳುವದಕ್ಕೂ ಈ ಪುಸ್ತಕದಲ್ಲಿ ಬರೆದಿ ರುವ ಒಡಂಬಡಿಕೆಯ ವಾಕ್ಯಗಳನ್ನು ಸ್ಥಿರಪಡಿಸುವ ದಕ್ಕೂ ಕರ್ತನ ಮುಂದೆ ಒಡಂಬಡಿಕೆಯನ್ನು ಮಾಡಿ ದನು; ಜನರೆಲ್ಲರೂ ಒಡಂಬಡಿಕೆಗೆ ಒಪ್ಪಿದರು.
- Matthew 19:21–22 ಮತ್ತಾಯನು 19:21–22ಯೇಸು ಅವನಿಗೆ--ನೀನು ಸಂಪೂರ್ಣನಾಗಲು ಅಪೇಕ್ಷಿಸಿದರೆ ಹೋಗಿ ನಿನಗೆ ಇದ್ದದ್ದನ್ನು ಮಾರಿ ಬಡವರಿಗೆ ಕೊಡು; ಆಗ ನಿನಗೆ ಪರಲೋಕದಲ್ಲಿ ಸಂಪತ್ತಿರುವದು; ಮತ್ತು ನೀನು ಬಂದು ನನ್ನನ್ನು ಹಿಂಬಾಲಿಸು ಎಂದು ಹೇಳಿದನು. ಆದರೆ ಆ ಯೌವನಸ್ಥನು ಆತನು ಹೇಳಿದ್ದನ್ನು ಕೇಳಿ ದುಃಖ ದಿಂದ ಹೊರಟುಹೋದನು. ಯಾಕಂದರೆ ಅವನಿಗೆ ಬಹಳ ಆಸ್ತಿ ಇತ್ತು.