Nehemiah · chapter 6 · verse 11
Nehemiah 6:11 in Kannada
ಅದಕ್ಕೆ ನಾನು--ನನ್ನಂಥಾ ಮನು ಷ್ಯನು ಓಡಿಹೋಗುವನೋ? ನನ್ನಂಥವನು ಬದುಕ ಬೇಕೆಂದು ಮಂದಿರದೊಳಕ್ಕೆ ಹೋಗುವವನಾರು? ನಾನು ಒಳಗೆ ಹೋಗುವದಿಲ್ಲ ಅಂದೆನು.
Adakke naanu--nannanthaa manu shyanu odihoguvano? Nannanthavanu baduka bekendu mandiradolakke hoguvavanaaru? Naanu olage hoguvadilla andenu.
Nehemiah 6:11 in English
- King James Version (KJV)
- And I said, Should such a man as I flee? and who [is there], that, [being] as I [am], would go into the temple to save his life? I will not go in.
- World English Bible (WEB)
- I said, “Should a man like me flee? Who is there that, being such as I, would go into the temple to save his life? I will not go in.”
- American Standard Version (ASV)
- And I said, Should such a man as I flee? and who is there, that, being such as I, would go into the temple to save his life? I will not go in.
- Bible in Basic English (BBE)
- And I said, Am I the sort of man to go in flight? what man, in my position, would go into the Temple to keep himself safe? I will not go in.
- Darby Translation (DBY)
- And I said, Should such a man as I flee? and who is there, that, being as I am, could go into the temple, and live? I will not go in.
- Webster's Bible (WBS)
- And I said, Should such a man as I flee? and who [is there] , that, [being] as I [am] , would go into the temple to save his life? I will not go in.
- Young's Literal Translation (YLT)
- And I say, 'A man such as I — doth he flee? and who as I, that doth go in unto the temple, and live? — I do not go in.'
Read in context
- 9ಯಾಕಂದರೆ--ಅದು ಆಗದ ಹಾಗೆ ಆ ಕೆಲಸ ಬಿಟ್ಟುಬಿಟ್ಟು ಅವರ ಕೈಗಳು ಬಲಹೀನವಾಗುವವು ಅಂದುಕೊಂಡು ಅವರೆಲ್ಲರೂ ನಮ್ಮನ್ನು ಭಯಪಡಿಸಿದರು.
- 10ಆದದರಿಂದ ಈಗ ಓ ದೇವರೇ, ನನ್ನ ಕೈಗಳನ್ನು ಬಲಪಡಿಸು ಅಂದೆನು. ತರುವಾಯ ನಾನು ಅಡಗಿ ಕೊಂಡಿದ್ದ ಮೆಹೇಟಬೇಲನ ಮಗನಾದ ದೆಲಾಯನ ಮಗನಾದ ಶೆಮಾಯನ ಮನೆಗೆ ಬಂದೆನು. ಅವನುನಿನ್ನನ್ನು ಕೊಂದುಹಾಕಲು ಬರುತ್ತಾರೆ. ಹೌದು, ರಾತ್ರಿಯಲ್ಲಿ ನಿನ್ನನ್ನು ಕೊಂದು ಹಾಕಲು ಬರುತ್ತಾರೆ ಆದದರಿಂದ ನಾವಿಬ್ಬರೂ ದೇವರ ಆಲಯದಲ್ಲಿ ಪ್ರವೇಶಿಸಿ ಮಂದಿರದ ಬಾಗಲುಗಳನ್ನು ಮುಚ್ಚೊಣ ಬಾ ಅಂದನು.
- 11ಅದಕ್ಕೆ ನಾನು--ನನ್ನಂಥಾ ಮನು ಷ್ಯನು ಓಡಿಹೋಗುವನೋ? ನನ್ನಂಥವನು ಬದುಕ ಬೇಕೆಂದು ಮಂದಿರದೊಳಕ್ಕೆ ಹೋಗುವವನಾರು? ನಾನು ಒಳಗೆ ಹೋಗುವದಿಲ್ಲ ಅಂದೆನು.
- 12ಆಗ ಇಗೋ, ದೇವರು ಅವನನ್ನು ಕಳುಹಿಸಲಿಲ್ಲ; ಅವನೇ ನನಗೆ ವಿರೋಧವಾಗಿ ಈ ಪ್ರವಾದನೆ ಹೇಳಿದನೆಂದು ನಾನು ಗ್ರಹಿಸಿಕೊಂಡೆನು. ಟೋಬೀಯನೂ ಸನ್ಬಲ್ಲ ಟನೂ ಅವನಿಗೆ ಕೂಲಿ ಕೊಟ್ಟರು.
- 13ನಾನು ಭಯಪಟ್ಟು ಹೀಗೆ ಮಾಡಿ ಪಾಪಮಾಡುವ ಹಾಗೆಯೂ ಅವರು ನನ್ನನ್ನು ನಿಂದಿಸುವದಕ್ಕೆ ಅಪಕೀರ್ತಿಯಾದ ಕಾರಣವು ಅವರಿಗೆ ಉಂಟಾಗುವ ಹಾಗೆಯೂ ಅವನಿಗೆ ಕೂಲಿ ಕೊಡಲ್ಪಟ್ಟಿತು.
Cross references
- Proverbs 28:1 ಜ್ಞಾನೋಕ್ತಿಗಳು 28:1ಹಿಂದಟ್ಟುವವನು ಇಲ್ಲದಿದ್ದರೂ ದುಷ್ಟರು ಓಡಿಹೋಗುತ್ತಾರೆ; ಸಿಂಹದ ಹಾಗೆ ನೀತಿವಂತರು ಧೈರ್ಯದಿಂದ ಇರುತ್ತಾರೆ.
- Psalm 11:1–2 ಕೀರ್ತನೆಗಳು 11:1–2ಕರ್ತನಲ್ಲಿ ನಾನು ಭರವಸವನ್ನು ಇಟ್ಟಿದ್ದೇನೆ; ಪಕ್ಷಿಯಂತೆ ನಿಮ್ಮ ಬೆಟ್ಟಕ್ಕೆ ಓಡು ಎಂದು ನನ್ನ ಪ್ರಾಣಕ್ಕೆ ನೀವು ಹೇಳುವದು ಹೇಗೆ? ಇಗೋ, ದುಷ್ಟರು ಬಿಲ್ಲು ಬೊಗ್ಗಿಸಿ ಯಥಾರ್ಥ ಹೃದಯವುಳ್ಳವರ ಮೇಲೆ ಗುಪ್ತವಾಗಿ ಎಸೆಯುವದಕ್ಕೆ ತಮ್ಮ ಬಾಣವನ್ನು ಬಿಲ್ಲಿಗೆ ಹೂಡಿ ಸಿದ್ಧಮಾಡುತ್ತಾರೆ.
- Acts 21:13 ಅಪೊಸ್ತಲರ ಕೃತ್ಯಗಳು 21:13ಅದಕ್ಕೆ ಪೌಲನು ಪ್ರತ್ಯುತ್ತರ ವಾಗಿ--ನೀವು ಅತ್ತು ನನ್ನ ಹೃದಯವನ್ನು ಒಡೆಯುವ ದೇನು? ಕರ್ತನಾದ ಯೇಸು ಕ್ರಿಸ್ತನ ಹೆಸರಿನ ನಿಮಿತ್ತವಾಗಿ ಬಂಧಿಸಲ್ಪಡುವದಕ್ಕೆ ಮಾತ್ರವಲ್ಲದೆ ಯೆರೂಸಲೇಮಿನಲ್ಲಿ ಸಾಯುವದಕ್ಕೂ ನಾನು ಸಿದ್ಧ ನಾಗಿದ್ದೇನೆ ಎಂದು ಹೇಳಿದನು.
- Psalm 112:8 ಕೀರ್ತನೆಗಳು 112:8ಅವನ ಹೃದಯವು ದೃಢವಾಗಿದೆ; ತನ್ನ ವೈರಿಗಳ ಮೇಲೆ ತನ್ನ ಇಷ್ಟವನ್ನು ನೋಡುವ ಮಟ್ಟಿಗೂ ಭಯಪಡನು.
- Philippians 2:17 ಫಿಲಿಪ್ಪಿಯವರಿಗೆ 2:17ಹೌದು, ನಿಮ್ಮ ನಂಬಿಕೆಯೆಂಬ ಯಜ್ಞವನ್ನು ಅರ್ಪಿಸುವ ಸೇವೆಯಲ್ಲಿ ನಾನೇ ಅರ್ಪಿತವಾಗ ಬೇಕಾದರೂ ನಾನು ಹರ್ಷಗೊಂಡು ನಿಮ್ಮೆಲ್ಲರ ಕೂಡ ಸಂತೋಷಿಸುವೆನು.
- Luke 13:31–33 ಲೂಕನು 13:31–33ಅದೇ ದಿನದಲ್ಲಿ ಫರಿಸಾಯರಲ್ಲಿ ಕೆಲವರು ಆತನ ಬಳಿಗೆ ಬಂದು--ನೀನು ಇಲ್ಲಿಂದ ಹೊರಟುಹೋಗು; ಯಾಕಂದರೆ ಹೆರೋದನು ನಿನ್ನನ್ನು ಕೊಲ್ಲುವನು ಎಂದು ಆತನಿಗೆ ಹೇಳಿದರು. ಅದಕ್ಕೆ ಆತನು ಅವರಿಗೆ--ಇಗೋ, ನಾನು ಈ ದಿವಸ ಮತ್ತು ನಾಳೆ ದೆವ್ವಗಳನ್ನು ಬಿಡಿಸಿ ಸ್ವಸ್ಥಮಾಡುತ್ತೇನೆ; ಮೂರನೆಯ ದಿನದಲ್ಲಿ ನಾನು ಸಿದ್ಧಿಗೆ ಬರುತ್ತೇನೆ ಎಂದು ನೀವು ಹೋಗಿ ಆ ನರಿಗೆ ಹೇಳಿರಿ. ಆದಾಗ್ಯೂ ಈ ದಿವಸ ನಾಳೆ ಮತ್ತು ನಾಡದ್ದು ನಾನು ಸಂಚರಿಸಲೇಬೇಕು; ಯಾಕಂದರೆ ಒಬ್ಬ ಪ್ರವಾದಿಯು ಯೆರೂಸಲೇಮಿನ ಹೊರಗೆ ಕೊಲ್ಲಲ್ಪಡಲಾರನು.
- Psalm 112:6 ಕೀರ್ತನೆಗಳು 112:6ನಿಶ್ಚಯವಾಗಿ ಅವನು ಎಂದೆಂದಿಗೂ ಕದಲನು; ನೀತಿವಂತನು ನಿತ್ಯವಾಗಿ ಜ್ಞಾಪಕದಲ್ಲಿ ಇರುವನು.
- Acts 20:24 ಅಪೊಸ್ತಲರ ಕೃತ್ಯಗಳು 20:24ಆದಾಗ್ಯೂ ಇವುಗಳಲ್ಲಿ ಯಾವದೊಂದು ನನ್ನನ್ನು ಕದಲಿಸುವದಿಲ್ಲ; ಇಲ್ಲವೆ ನನ್ನ ಪ್ರಾಣವು ನನಗೆ ಪ್ರಿಯವಾದದ್ದೆಂದು ನಾನು ಎಣಿಸುವದಿಲ್ಲ; ಹೀಗೆ ದೇವರ ಕೃಪೆಯ ಸುವಾರ್ತೆಯನ್ನು ಸಾಕ್ಷಿಕರಿಸು ವದಕ್ಕಾಗಿ ನಾನು ಕರ್ತನಾದ ಯೇಸುವಿನಿಂದ ಹೊಂದಿದ ಸೇವೆಯೆಂಬ ಓಟವನ್ನು ಸಂತೋಷದಿಂದ ಕೊನೆಗಾಣಿಸುವ
- 1 Samuel 19:5 1 ಸಮುವೇಲನು 19:5ಅವನು ತನ್ನ ಪ್ರಾಣವನ್ನು ತನ್ನ ಕೈಯಲ್ಲಿ ಹಿಡುಕೊಂಡು ಫಿಲಿಷ್ಟಿಯನನ್ನು ಕೊಂದನು. ಕರ್ತನು ಎಲ್ಲಾ ಇಸ್ರಾಯೇಲಿಗೋಸ್ಕರ ದೊಡ್ಡ ರಕ್ಷಣೆ ಯನ್ನುಂಟು ಮಾಡಿದನು. ನೀನೂ ನೋಡಿ ಸಂತೋಷ ಪಟ್ಟೆ; ಈಗ ಕಾರಣವಿಲ್ಲದೆ ದಾವೀದನನ್ನು ಕೊಂದು ನಿರಪರಾಧಿಯ ರಕ್ತಕ್ಕೆ ವಿರೋಧವಾಗಿ ಪಾಪವನ್ನು ಮಾಡುವದು ಯಾಕೆ ಅಂದನು.
- Ecclesiastes 10:1 ಪ್ರಸಂಗಿ 10:1ಸತ್ತ ನೊಣಗಳು ವೈದ್ಯನ ತೈಲವನ್ನು ದುರ್ವಾಸನೆಗೊಳಿಸುತ್ತವೆ; ಹಾಗೆಯೇ ಸ್ವಲ್ಪ ಮೂಢತನವು ಜ್ಞಾನ ಮತ್ತು ಘನಗಳಿಗೆ ಪ್ರಿಯ ನಾದವನನ್ನು ಕೆಡಿಸುತ್ತದೆ.
- Philippians 2:30 ಫಿಲಿಪ್ಪಿಯವರಿಗೆ 2:30ಹೀಗಿರಲಾಗಿ ನೀವೇ ನನಗೆ ಮಾಡಬೇಕೆಂದಿರುವ ಉಪಚಾರದಲ್ಲಿ ಕಡಿಮೆಯಾದದ್ದನ್ನು ಪೂರ್ತಿ ಮಾಡುವದಕ್ಕಾಗಿ ಅವನು ಜೀವದ ಆಶೆಯನ್ನು ಲಕ್ಷ್ಯ ಮಾಡದೆ ಕ್ರಿಸ್ತನ ಕೆಲಸದ ನಿಮಿತ್ತ ಸಾಯುವಹಾಗಿದ್ದನು.
- Nehemiah 6:3 ನೆಹೆಮೀಯ 6:3ಆದ ಕಾರಣ ನಾನು ಅವರ ಬಳಿಗೆ ಸೇವಕರನ್ನೂ ಕಳು ಹಿಸಿ--ನಾನು ದೊಡ್ಡ ಕಾರ್ಯವನ್ನು ಮಾಡುತ್ತಾ ಇದ್ದೇನೆ; ಬರಲಾರೆನು; ನಾನು ಅದನ್ನು ಬಿಟ್ಟು ನಿಮ್ಮ ಬಳಿಗೆ ಬರುವಲ್ಲಿ ಆ ಕೆಲಸ ಯಾಕೆ ನಿಂತು ಹೋಗ ಬೇಕು ಎಂದು ಹೇಳಿದೆನು.