Proverbs · chapter 28 · verse 1
Proverbs 28:1 in Kannada
ಹಿಂದಟ್ಟುವವನು ಇಲ್ಲದಿದ್ದರೂ ದುಷ್ಟರು ಓಡಿಹೋಗುತ್ತಾರೆ; ಸಿಂಹದ ಹಾಗೆ ನೀತಿವಂತರು ಧೈರ್ಯದಿಂದ ಇರುತ್ತಾರೆ.
Hindattuvavanu illadiddaroo dushtaru odihoguttaare; sinhada haage neetivantaru dhairyadinda iruttaare.
Proverbs 28:1 in English
- King James Version (KJV)
- The wicked flee when no man pursueth: but the righteous are bold as a lion.
- World English Bible (WEB)
- The wicked flee when no one pursues; but the righteous are as bold as a lion.
- American Standard Version (ASV)
- The wicked flee when no man pursueth; But the righteous are bold as a lion.
- Bible in Basic English (BBE)
- The evil man goes running away when no man is after him, but the upright are without fear, like the lion.
- Darby Translation (DBY)
- The wicked flee when no man pursueth; but the righteous are bold as a lion.
- Webster's Bible (WBS)
- The wicked flee when no man pursueth: but the righteous are bold as a lion.
- Young's Literal Translation (YLT)
- The wicked have fled and there is no pursuer. And the righteous as a young lion is confident.
Read in context
- 1ಹಿಂದಟ್ಟುವವನು ಇಲ್ಲದಿದ್ದರೂ ದುಷ್ಟರು ಓಡಿಹೋಗುತ್ತಾರೆ; ಸಿಂಹದ ಹಾಗೆ ನೀತಿವಂತರು ಧೈರ್ಯದಿಂದ ಇರುತ್ತಾರೆ.
- 2ದೇಶದ ದೋಷಕ್ಕಾಗಿ ಅನೇಕ ಪ್ರಭುಗಳು ಇರುತ್ತಾರೆ; ಆದರೆ ಮನುಷ್ಯನ ವಿವೇಕದಿಂದಲೂ ತಿಳುವಳಿಕೆಯಿಂದಲೂ ಅದರ ಸ್ಥಿತಿಯು ವಿಸ್ತರಿಸುತ್ತದೆ.
- 3ಬಡವರನ್ನು ಹಿಂಸಿಸುವ ದರಿದ್ರನು ಆಹಾರವನ್ನು ಉಳಿಸದಂತೆ ಸುರಿಯುವ ಮಳೆಯಂತಿದ್ದಾನೆ.
Cross references
- Deuteronomy 28:7 ಧರ್ಮೋಪದೇಶಕಾಂಡ 28:7ನಿನಗೆ ವಿರೋಧವಾಗಿ ಏಳುವ ನಿನ್ನ ಶತ್ರುಗಳನ್ನು ಕರ್ತನು ನಿನ್ನ ಮುಂದೆ ಹೊಡೆದು ಬಿಡುವನು; ಅವರು ಒಂದೇ ಮಾರ್ಗದಲ್ಲಿ ನಿನಗೆ ವಿರೋಧವಾಗಿ ಹೊರಟು ಏಳು ಮಾರ್ಗಗಳಲ್ಲಿ ನಿನ್ನ ಮುಂದೆ ಓಡಿಹೋಗುವರು.
- Psalm 53:5 ಕೀರ್ತನೆಗಳು 53:5ಭಯವಿಲ್ಲದಿರುವಲ್ಲಿ ಅವರು ಭಯ ಭ್ರಾಂತರಾದರು; ನಿನಗೆ ವಿರೋಧವಾಗಿ ದಂಡು ಇಳಿ ಸುವವನ ಎಲುಬುಗಳನ್ನು ದೇವರು ಚದರಿಸಿ ಬಿಟ್ಟಿ ದ್ದಾನೆ. ನೀನು ಅವರನ್ನು ನಾಚಿಕೆಪಡಿಸಿದ್ದೀ; ದೇವರು ಅವರನ್ನು ತಿರಸ್ಕರಿಸಿದ್ದಾನೆ.ಚೀಯೋನಿನಿಂದ ಇಸ್ರಾಯೇಲಿನ ರಕ್ಷಣೆಯು ಬಂದರೆ ಎಷ್ಟೋ ಒಳ್ಳೇದು. ದೇವರು ತನ್ನ ಜನರನ್ನು ಸೆರೆಯಿಂದ ತಿರುಗಿ ಬರಮಾಡುವಾಗ ಯಾಕೋಬನು ಉಲ್ಲಾಸಿಸುವನು, ಇಸ್ರಾಯೇಲನು ಸಂತೋಷಿ ಸುವನು.
- Isaiah 26:3–4 ಯೆಶಾಯ 26:3–4ದೃಢಮನಸ್ಸುಳ್ಳವನನ್ನು ಪೂರ್ಣ ಸಮಾಧಾನದಲ್ಲಿ ನೆಲೆಗೊಳಿಸಿ ಕಾಯುವಿ. ಅವನಿಗೆ ನಿನ್ನಲ್ಲಿ ಭರವಸವಿದೆ. ನೀವು ಕರ್ತನಲ್ಲಿ ಸದಾ ಭರವಸವಿಡಿರಿ; ಕರ್ತನಾದ ಯೆಹೋವನಲ್ಲಿ ನಿತ್ಯವಾದ ಬಲವುಂಟು.
- Psalm 27:1–2 ಕೀರ್ತನೆಗಳು 27:1–2ಕರ್ತನು ನನ್ನ ಬೆಳಕೂ ರಕ್ಷಣೆಯೂ ಆಗಿದ್ದಾನೆ; ನಾನು ಯಾರಿಗೆ ಭಯಪಡು ವೆನು? ಕರ್ತನು ನನ್ನ ಜೀವದ ಬಲವಾಗಿದ್ದಾನೆ; ನಾನು ಯಾರಿಗೆ ಹೆದರುವೆನು? ನನ್ನ ಮಾಂಸವನ್ನು ತಿನ್ನಬೇಕೆಂದು ದುಷ್ಟರು ಅಂದರೆ ನನ್ನ ವೈರಿಗಳೂ ಶತ್ರುಗಳೂ ಬಂದಾಗ ಅವರು ಎಡವಿಬಿದ್ದರು.
- Psalm 112:7 ಕೀರ್ತನೆಗಳು 112:7ಅವನು ಕೆಟ್ಟಸುದ್ದಿಗೆ ಭಯಪಡನು; ಅವನ ಹೃದಯವು ಕರ್ತನಲ್ಲಿ ಭರವಸವಿಟ್ಟು ಸ್ಥಿರವಾಗಿದೆ.
- 1 Thessalonians 2:2 1 ಥೆಸಲೊನೀಕದವರಿಗೆ 2:2ಫಿಲಿಪ್ಪಿ ಪಟ್ಟಣದಲ್ಲಿ ನಮಗೆ ಹಿಂಸೆ ಮತ್ತು ಅವಮಾನವು ಮೊದಲು ಸಂಭವಿಸಿದರೂ ನಾವು ನಮ್ಮ ದೇವರ ಮೂಲಕ ಧೈರ್ಯಗೊಂಡು ಬಹು ವಿರೋಧವನ್ನು ಅನುಭವಿಸುವವರಾಗಿ ನಿಮಗೆ ದೇವರ ಸುವಾರ್ತೆಯನ್ನು ತಿಳಿಸಿದೆವೆಂಬದನ್ನು ನೀವು ಬಲ್ಲಿರಿ.
- Acts 4:13 ಅಪೊಸ್ತಲರ ಕೃತ್ಯಗಳು 4:13ಅವರು ಪೇತ್ರ ಯೋಹಾನರ ಧೈರ್ಯವನ್ನು ನೋಡಿ ಇವರು ವಿದ್ಯೆಯಿಲ್ಲದವರೂ ತಿಳುವಳಿಕೆ ಯಿಲ್ಲದವರೂ ಎಂದು ಗ್ರಹಿಸಿ ಆಶ್ಚರ್ಯಪಟ್ಟು ಅವರು ಯೇಸುವಿನೊಂದಿಗೆ ಇದ್ದವರೆಂದು ತಿಳಿದುಕೊಂಡರು.
- Daniel 6:10–11 ದಾನಿಯೇಲನು 6:10–11ಯಾವಾಗ ಬರಹಕ್ಕೆ ರುಜುಹಾಕಿದ್ದಾ ಯಿತ್ತೆಂದು ದಾನಿಯೇಲನಿಗೆ ತಿಳಿಯಿತೋ ಆಗ ಅವನು ತನ್ನ ಮನೆಗೆ ಹೋದನು; ಅವನ ಕೋಣೆಯಲ್ಲಿ ಕಿಟಕಿಗಳು ಯೆರೂಸಲೇಮಿಗೆ ಎದುರಾಗಿ ತೆರೆಯಲ್ಪಟ್ಟಿದ್ದ ರಿಂದ ಅವನು ಮೊದಲು ಮಾಡುತ್ತಿದ್ದ ಪ್ರಕಾರವೇ ದಿನಕ್ಕೆ ಮೂರು ಸಾರಿ ಮೊಣಕಾಲೂರಿ ತನ್ನ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆಯನ್ನೂ ಸ್ತೋತ್ರವನ್ನೂ ಸಲ್ಲಿಸಿ ದನು. ಆ ಮೇಲೆ ಆ ಮನುಷ್ಯರೆಲ್ಲಾ ಕೂಡಿ ಬಂದು ದಾನಿಯೇಲನು ತನ್ನ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆಯನ್ನೂ ವಿಜ್ಞಾಪನೆಯನ್ನೂ ಮಾಡುತ್ತಿರುವ ದನ್ನು ಕಂಡರು.
- Acts 14:3 ಅಪೊಸ್ತಲರ ಕೃತ್ಯಗಳು 14:3ಹೀಗಿರಲಾಗಿ ಕರ್ತನು ಅವರ ಕೈಯಿಂದ ಸೂಚಕಕಾರ್ಯಗಳೂ ಅದ್ಭುತಕಾರ್ಯ ಗಳೂ ಆಗುವಂತೆ ದಯಪಾಲಿಸಿ ತನ್ನ ಕೃಪಾವಾಕ್ಯಕ್ಕೆ ಸಾಕ್ಷಿಕೊಟ್ಟದ್ದರಿಂದ ಅವರು ಬಹುಕಾಲ ಅಲ್ಲಿದ್ದು ಆತನಲ್ಲಿ ಧೈರ್ಯದಿಂದ ಮಾತನಾಡುತ್ತಿದ್ದರು.
- Jeremiah 20:4 ಯೆರೆಮೀಯ 20:4ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನಿನ್ನನ್ನು ನಿನ್ನ ಸ್ನೇಹಿತರೆಲ್ಲರೂ ದಿಗಿಲುಪಡುವಂತೆ ಮಾಡುತ್ತೇನೆ; ಅವರು ತಮ್ಮ ಶತ್ರುಗಳ ಕತ್ತಿಯಿಂದ ಬೀಳುವರು; ನಿನ್ನ ಕಣ್ಣುಗಳು ಅದನ್ನು ನೋಡುವವು; ಯೆಹೂದವನ್ನೆಲ್ಲಾ ನಾನು ಬಾಬೆಲಿನ ಅರಸನ ಕೈಗೆ ಒಪ್ಪಿಸುವೆನು; ಅವನು ಅವರನ್ನು ಬಾಬೆಲಿಗೆ ಒಯ್ದು ಕತ್ತಿಯಿಂದ ಕೊಲ್ಲುವನು.
- Leviticus 26:36 ಯಾಜಕಕಾಂಡ 26:36ನಿಮ್ಮಲ್ಲಿ ಯಾರಾರು ಉಳಿದು ಶತ್ರುಗಳ ದೇಶದ ಲ್ಲಿರುವರೋ ಅವರ ಹೃದಯಗಳಲ್ಲಿ ಅಧೈರ್ಯವನ್ನು ಹುಟ್ಟಿಸುವೆನು; ಬಡಿದಾಡುವ ಎಲೆಯ ಶಬ್ದವು ಅವರನ್ನು ಓಡಿಸುವದು, ಕತ್ತಿಗೆ ಓಡಿಹೋದ ಹಾಗೆ ಓಡಿಹೋಗು ವರು; ಓಡಿಸುವವನಿಲ್ಲದೆ ಬೀಳುವರು.
- Daniel 3:16–18 ದಾನಿಯೇಲನು 3:16–18ಆಗ ಶದ್ರಕ್ ಮೇಷಕ್ ಅಬೇದ್ ನೆಗೋ ಎಂಬವರು ಅರಸನಿಗೆ ಪ್ರತ್ಯುತ್ತರವಾಗಿ--ಓ ನೆಬೂಕದ್ನೆಚ್ಚರನೇ, ಈ ವಿಷಯದಲ್ಲಿ ನಾವು ನಿನಗೆ ಉತ್ತರಕೊಡುವ ಅವಶ್ಯಕತೆ ಇಲ್ಲ. ಒಂದು ವೇಳೆ ಹಾಗೆ ಇದ್ದರೆ ನಿಶ್ಚಯವಾಗಿ ನಾವು ಸೇವಿಸುವ ನಮ್ಮ ದೇವರು ಉರಿಯುವ ಬೆಂಕಿಯ ಆವಿಗೆಯೊಳಗಿಂದ ನಮ್ಮನ್ನು ತಪ್ಪಿಸಲು ಸಮರ್ಥನಾಗಿದ್ದಾನೆ. ಓ ಅರಸನೇ, ನಿನ್ನ ಕೈಯಿಂದಲೂ ನಮ್ಮನ್ನು ತಪ್ಪಿಸುವನು. ಆತನು ಒಂದು ವೇಳೆ ತಪ್ಪಿಸದಿದ್ದರೂ ಓ ಅರಸನೇ, ನಾವು ನಿನ್ನ ದೇವರುಗಳನ್ನು ಸೇವಿಸುವದಿಲ್ಲ ನೀನು ನಿಲ್ಲಿಸಿರುವ ಬಂಗಾರದ ಪ್ರತಿಮೆಯನ್ನು ಆರಾಧಿಸುವದಿಲ್ಲವೆಂದೂ ನಿನಗೆ ತಿಳಿದಿರಲಿ ಅಂದರು.