Nehemiah · chapter 9 · verse 2
Nehemiah 9:2 in Kannada
ಆಗ ಇಸ್ರಾಯೇಲ್ ಸಂತಾನದವರು ತಮ್ಮನ್ನು ಸಮಸ್ತ ಅನ್ಯ ಜನರಿಂದ ಪ್ರತ್ಯೇಕಿಸಿಕೊಂಡು ನಿಂತು ತಮ್ಮ ಪಾಪ ಗಳನ್ನೂ ತಮ್ಮ ತಂದೆಗಳ ಅಕ್ರಮಗಳನ್ನೂ ಅರಿಕೆ ಮಾಡಿದರು.
Aaga israayel santaanadavaru tammannu samasta anya janarinda pratyekisikondu nintu tamma paapa galannoo tamma tandegala akramagalannoo arike maadidaru.
Nehemiah 9:2 in English
- King James Version (KJV)
- And the seed of Israel separated themselves from all strangers, and stood and confessed their sins, and the iniquities of their fathers.
- World English Bible (WEB)
- The offspring of Israel separated themselves from all foreigners and stood and confessed their sins and the iniquities of their fathers.
- American Standard Version (ASV)
- And the seed of Israel separated themselves from all foreigners, and stood and confessed their sins, and the iniquities of their fathers.
- Bible in Basic English (BBE)
- And the seed of Israel made themselves separate from all the men of other nations, publicly requesting forgiveness for their sins and the wrongdoing of their fathers.
- Darby Translation (DBY)
- And the seed of Israel separated themselves from all foreigners, and stood and confessed their sins, and the iniquities of their fathers.
- Webster's Bible (WBS)
- And the seed of Israel separated themselves from all strangers, and stood and confessed their sins, and the iniquities of their fathers.
- Young's Literal Translation (YLT)
- and the seed of Israel are separated from all sons of a stranger, and stand and confess concerning their sins, and the iniquities of their fathers,
Read in context
- 1ಅದೇ ತಿಂಗಳಿನ ಇಪ್ಪತ್ತನಾಲ್ಕನೇ ದಿವಸದಲ್ಲಿ ಇಸ್ರಾಯೇಲ್ ಮಕ್ಕಳು ಉಪವಾಸ ಮಾಡಿ ಗೋಣೀತಟ್ಟನ್ನು ಉಟ್ಟುಕೊಂಡು ತಮ್ಮ ಮೇಲೆ ಧೂಳನ್ನು ಹಾಕಿಕೊಂಡು ನೆರೆದುಬಂದರು.
- 2ಆಗ ಇಸ್ರಾಯೇಲ್ ಸಂತಾನದವರು ತಮ್ಮನ್ನು ಸಮಸ್ತ ಅನ್ಯ ಜನರಿಂದ ಪ್ರತ್ಯೇಕಿಸಿಕೊಂಡು ನಿಂತು ತಮ್ಮ ಪಾಪ ಗಳನ್ನೂ ತಮ್ಮ ತಂದೆಗಳ ಅಕ್ರಮಗಳನ್ನೂ ಅರಿಕೆ ಮಾಡಿದರು.
- 3ಅವರು ತಮ್ಮ ಸ್ಥಳಗಳಲ್ಲಿ ನಿಂತು ಒಂದು ಜಾವ ತಮ್ಮ ದೇವರಾಗಿರುವ ಕರ್ತನ ನ್ಯಾಯ ಪ್ರಮಾಣದ ಪುಸ್ತಕವನ್ನು ಓದಿ ಮತ್ತೊಂದು ಜಾವ ತಮ್ಮ ಪಾಪಗಳನ್ನು ಅರಿಕೆಮಾಡಿ ತಮ್ಮ ದೇವರಾಗಿ ರುವ ಕರ್ತನನ್ನು ಆರಾಧಿಸಿದರು.
- 4ಆಗ ಮೆಟ್ಟಲುಗಳ ಮೇಲೆ ಲೇವಿಯರಲ್ಲಿ ಯೇಷೂವನೂ ಬಾನೀಯೂ ಕದ್ಮೀಯೇಲನೂ ಶೆಬನ್ಯನೂ ಬುನ್ನೀಯೂ ಶೇರೇ ಬ್ಯನೂ ಬಾನೀಯೂ ಕೆನಾನೀಯೂ ನಿಂತು ಮಹಾ ಶಬ್ದದಿಂದ ತಮ್ಮ ದೇವರಾಗಿರುವ ಕರ್ತನನ್ನು ಗಟ್ಟಿ ಯಾದ ಸ್ವರದಿಂದ ಕೂಗಿದರು.
Cross references
- Nehemiah 13:3 ನೆಹೆಮೀಯ 13:3ಆಗ ಏನಾಯಿತಂದರೆ, ಅವರು ನ್ಯಾಯ ಪ್ರಮಾಣವನ್ನು ಕೇಳಿದಾಗ ಇಸ್ರಾಯೆಲ್ಯರೊಳಗಿಂದ ಬೆರಿಕೆಯಾದ ಜನರನ್ನು ಪ್ರತ್ಯೇಕಿಸಿದರು.
- Ezra 10:11 ಎಜ್ರನು 10:11ಆದದರಿಂದ ನೀವು ನಿಮ್ಮ ಪಿತೃಗಳ ದೇವರಾಗಿರುವ ಕರ್ತನ ಮುಂದೆ ಅರಿಕೆಮಾಡಿ, ಆತನ ಚಿತ್ತದ ಪ್ರಕಾರ ಮಾಡಿ, ಈ ದೇಶದ ಜನರಿಂದಲೂ ಅನ್ಯಸ್ತ್ರೀಯ ರಿಂದಲೂ ನಿಮ್ಮನ್ನು ಪ್ರತ್ಯೇಕಿಸಿಕೊಳ್ಳಿರಿ ಅಂದನು.
- Daniel 9:3–10 ದಾನಿಯೇಲನು 9:3–10ಉಪವಾಸದಿಂದ ಗೋಣಿತಟ್ಟನ್ನು ಸುತ್ತಿಕೊಂಡು, ಬೂದಿಯನ್ನು ಬಳಿದು ಕೊಂಡು, ದೇವರಾದ ಕರ್ತನನ್ನು ಹುಡುಕುವದಕ್ಕಾಗಿ ಪ್ರಾರ್ಥನೆಗಳಿಂದಲೂ ವಿಜ್ಞಾಪನೆ ಗಳಿಂದಲೂ ಆತನ ಕಡೆಗೆ ನನ್ನ ಮುಖವನ್ನು ತಿರುಗಿ ಸಿದೆನು. ನಾನು ಕರ್ತನಾದ ನನ್ನ ದೇವರಿಗೆ ಪ್ರಾರ್ಥಿಸಿ ಮತ್ತು ಅರಿಕೆಮಾಡಿ--ಓ ಕರ್ತನೇ, ಅತಿ ಭಯಂಕರ ವಾದ ಮಹಾ ದೇವರೇ, ನನ್ನನ್ನು ಪ್ರೀತಿಮಾಡಿ ನನ್ನ ಆಜ್ಞೆಗಳನ್ನು ಕೈಕೊಂಡು ನಡೆಯುವವರಿಗೆ ಒಡಂಬಡಿಕೆ ಯನ್ನೂ ಕೃಪೆಯನ್ನೂ ತೋರಿಸಿ ಕಾಪಾಡುವಾತನೇ, ನಾವು ಪಾಪ ಅಕ್ರಮವನ್ನು ಮಾಡಿದ್ದೇವೆ; ಇದಲ್ಲದೆ ಕೆಟ್ಟವರಾಗಿ ನಡೆದು ತಿರುಗಿಬಿದ್ದಿದ್ದೇವೆ; ಅಂದರೆ ನಿನ್ನ ಕಟ್ಟಳೆಗಳನ್ನೂ ನ್ಯಾಯಗಳನ್ನೂ ಬಿಟ್ಟುಹೋಗಿದ್ದೇವೆ. ಇಲ್ಲವೆ ನಿನ್ನ ಹೆಸರಿನಲ್ಲಿ ನಮ್ಮ ಅರಸರಿಗೂ ಪ್ರಧಾನ ರಿಗೂ ತಂದೆಗಳಿಗೂ ದೇಶದ ಎಲ್ಲಾ ಜನರಿಗೂ ಮಾತ ನಾಡಿದ ನಿನ್ನ ಸೇವಕರಾದ ಪ್ರವಾದಿಗಳಿಗೆ ಕಿವಿಗೊಡ ಲಿಲ್ಲ. ಓ ಕರ್ತನೇ, ನೀನು ನೀತಿವಂತನು; ಆದರೆ ನಾವು ಈ ದಿನದ ಪ್ರಕಾರ ನಾಚಿಕೆಗೀಡಾದವರು; ಯೆಹೂದದ ಮನುಷ್ಯರನ್ನೂ ಯೆರೂಸಲೇಮಿನ ನಿವಾ ಸಿಗಳನ್ನೂ ಸಮಸ್ತ ಇಸ್ರಾಯೇಲ್ಯರನ್ನೂ ಹತ್ತಿರದಲ್ಲಿ ರುವವರನ್ನೂ ಮತ್ತು ದೂರದಲ್ಲಿರುವವರನ್ನೂ ಅವರು ನಿನಗೆ ವಿರುದ್ಧವಾಗಿ ಮಾಡಿರುವ ಅವರ ಅಪರಾಧದ ನಿಮಿತ್ತ ನೀನು ಅವರನ್ನು ಎಲ್ಲಾ ದೇಶಗಳಲ್ಲಿಯೂ ಓಡಿಸಿ ಬಿಟ್ಟಿದ್ದೀ. ಓ ಕರ್ತನೇ, ನಿನಗೆ ವಿರುದ್ಧವಾಗಿ ನಾವು ಪಾಪಮಾಡಿದ್ದರಿಂದ ನಮ್ಮ ಅರಸರಿಗೂ ಪ್ರಧಾ ನರಿಗೂ ಮತ್ತು ನಮ್ಮ ತಂದೆಗಳಿಗೂ ನಮಗೂ ನಾಚಿಕೆಯ ಮುಖಗಳಿವೆ. ನಾವು ಆತನಿಗೆ ವಿರುದ್ಧ ವಾಗಿ ತಿರುಗಿಬಿದ್ದಿದ್ದರೂ ಕರ್ತನಾದ ನಮ್ಮ ದೇವರ ಕರುಣೆಯೂ ಮತ್ತು ಕ್ಷಮೆಯೂ ನಮಗಿದೆ. ನಾವು ನಮ್ಮ ದೇವರಾದ ಕರ್ತನ ಸ್ವರಕ್ಕೆ ಕಿವಿಗೊಡದೆ ಆತನು ನಮ್ಮ ಮುಂದೆ ಇಟ್ಟ ಆತನ ಸೇವಕರಾದ ಪ್ರವಾದಿಗಳ ನ್ಯಾಯಪ್ರಮಾಣದಂತೆ ನಡೆಯಲಿಲ್ಲ.
- Nehemiah 13:30 ನೆಹೆಮೀಯ 13:30ಹೀಗೆಯೇ ನಾನು ಅವರನ್ನು ಅನ್ಯಜನರಿಂದ ಬಿಡಿಸಿ ಶುಚಿಮಾಡಿ ಅವರ ವರ ಕೆಲಸದ ಪ್ರಕಾರ ಯಾಜಕರಿಗೂ ಲೇವಿಯರಿಗೂವರ್ಗಗಳನ್ನೂ ಅರ್ಪಣೆಯ ಕಟ್ಟಿಗೆಗಳಿಗೋಸ್ಕರವೂ ಪ್ರಥಮ ಫಲಗಳಿಗೋಸ್ಕರವೂ ದೃಢವಾದ ಕಾಲ ಗಳನ್ನೂ ನೇಮಿಸಿದೆನು. ನನ್ನ ದೇವರೇ, ಒಳ್ಳೇದಕ್ಕಾಗಿ ನನ್ನನ್ನು ಜ್ಞಾಪಕಮಾಡು.
- Daniel 9:20 ದಾನಿಯೇಲನು 9:20ನಾನು ಮಾತನಾಡುತ್ತಾ ಪ್ರಾರ್ಥನೆ ಮಾಡುತ್ತಾ ನನ್ನ ಪಾಪವನ್ನೂ ನನ್ನ ಜನರಾದ ಇಸ್ರಾಯೇಲ್ಯರ ಪಾಪವನ್ನೂ ಅರಿಕೆಮಾಡುತ್ತಾ ನನ್ನ ದೇವರ ಪರಿಶುದ್ಧ ಪರ್ವತಕ್ಕೋಸ್ಕರ ನನ್ನ ವಿಜ್ಞಾಪನೆಯನ್ನು ನನ್ನ ದೇವರಾದ ಕರ್ತನ ಮುಂದೆ ಅರ್ಪಿಸುತ್ತಾ ಇದ್ದೆನು.
- Ezra 9:2 ಎಜ್ರನು 9:2ಏನಂದರೆ, ಅವರು ತಮಗೂ ತಮ್ಮ ಕುಮಾರರಿಗೂ ಅವರ ಕುಮಾರ್ತೆಯರನ್ನು ತಕ್ಕೊಂಡರು. ಆದಕಾರಣ ಪರಿಶುದ್ಧ ಸಂತಾನದವರು ಈ ದೇಶದ ಜನರ ಸಂಗಡ ಬೆರೆತುಕೊಂಡಿದ್ದಾರೆ; ನಿಶ್ಚಯವಾಗಿ ಪ್ರಧಾನರ, ಅಧಿಕಾರಸ್ಥರ ಕೈ ಈ ಅಕೃತ್ಯದಲ್ಲಿ ಮುಖ್ಯವಾಗಿದೆ ಎಂದು ಹೇಳಿದರು.
- Hosea 5:7 ಹೋಶೇಯ 5:7ದ್ರೋಹದಿಂದ ಅವರು ಕರ್ತನಿಗೆ ವಿರುದ್ಧವಾಗಿ ನಡೆಸಿದ್ದಾರೆ. ಯಾಕಂದರೆ ಅವರು ಅನ ್ಯಮಕ್ಕಳನ್ನು ಪಡೆದಿದ್ದಾರೆ. ಈಗ ತಿಂಗಳು ತಮ್ಮ ಪಾಲು ಗಳೊಂದಿಗೆ ಅವರನ್ನು ನುಂಗಿ ಬಿಡುವದು.
- 1 John 1:7–9 1 ಯೋಹಾನನು 1:7–9ಆತನು ಬೆಳಕಿನಲ್ಲಿರು ವಂತೆಯೇ ನಾವೂ ಬೆಳಕಿನಲ್ಲಿ ನಡೆದರೆ ನಾವು ಒಬ್ಬರ ಸಂಗಡಲೊಬ್ಬರು ಅನ್ಯೋನ್ಯತೆಯಲ್ಲಿದ್ದೇವೆ; ಆತನ ಮಗನಾದ ಯೇಸುಕ್ರಿಸ್ತನ ರಕ್ತವು ನಮ್ಮನ್ನು ಸಕಲ ಪಾಪದಿಂದ ಶುದ್ಧಿಮಾಡುತ್ತದೆ. ನಮ್ಮಲ್ಲಿ ಪಾಪವಿಲ್ಲ ವೆಂದು ನಾವು ಹೇಳಿದರೆ ನಮ್ಮನ್ನು ನಾವೇ ಮೋಸ ಪಡಿಸಿಕೊಳ್ಳುತ್ತೇವೆ, ಸತ್ಯವು ನಮ್ಮಲ್ಲಿಲ್ಲ. ನಾವು ನಮ್ಮ ಪಾಪಗಳನ್ನು ಅರಿಕೆ ಮಾಡಿದರೆ ಆತನು ನಂಬಿಗಸ್ತನೂ ನೀತಿವಂತನೂ ಆಗಿರುವದರಿಂದ ನಮ್ಮ ಪಾಪಗಳನ್ನು ಕ್ಷಮಿಸಿಬಿಟ್ಟು ಸಕಲ ಅನೀತಿಯಿಂದ ನಮ್ಮನ್ನು ಶುದ್ಧಿ ಮಾಡುವನು.ನಾವು ಪಾಪ ಮಾಡಲಿಲ್ಲವೆಂದು ಹೇಳಿದರೆ ಆತನನ್ನು ಸುಳ್ಳುಗಾರನನ್ನಾಗಿ ಮಾಡುತ್ತೇವೆ, ಮತ್ತು ಆತನ ವಾಕ್ಯವು ನಮ್ಮಲ್ಲಿಲ್ಲ.
- Psalm 144:11 ಕೀರ್ತನೆಗಳು 144:11ಅನ್ಯರ ಮಕ್ಕಳ ಕೈಯಿಂದ ನನ್ನನ್ನು ತಪ್ಪಿಸಿ, ನನ್ನನ್ನು ಬಿಡಿಸು; ಅವರ ಬಾಯಿ ವ್ಯರ್ಥತ್ವವನ್ನು ನುಡಿಯುವದು; ಅವರ ಬಲಗೈ ಮೋಸದ ಬಲಗೈ ಆಗಿದೆ.
- Leviticus 26:39–40 ಯಾಜಕಕಾಂಡ 26:39–40ನಿಮ್ಮಲ್ಲಿ ಉಳಿದವರು ತಮ್ಮ ಅಕ್ರಮದಿಂದ ನಿಮ್ಮ ಶತ್ರುಗಳ ದೇಶದಲ್ಲಿ ಕ್ಷೀಣವಾಗುವರು; ತಮ್ಮ ಪಿತೃಗಳ ಅಕ್ರಮಗಳಿಂದ ಅವರ ಸಂಗಡ ಕ್ಷೀಣವಾಗುವರು. ಆಗ ಅವರು ನನಗೆ ಮಾಡಿದ ತಮ್ಮ ಅಕ್ರಮವನ್ನೂ ತಮ್ಮ ಪಿತೃಗಳಅಕ್ರಮವನ್ನೂ ತಾವು ನನಗೆ ವಿರೋಧವಾಗಿ ನಡೆದು ಕೊಂಡದ್ದರಿಂದ
- Isaiah 2:6 ಯೆಶಾಯ 2:6ಆದದರಿಂದ ಯಾಕೋಬಿನ ಮನೆತನದವರು ಮೂಡಣ ದೇಶ ಗಳಲ್ಲಿ ಮಗ್ನರಾಗಿ ಫಿಲಿಷ್ಟಿಯರಂತೆ ಕಣಿ ಹೇಳುವವ ರಾಗಿಯೂ ಅನ್ಯ ದೇಶಗಳವರ ಮಧ್ಯದಲ್ಲಿ ಮೆಚ್ಚಿಕೆ ಯುಳ್ಳವರಾಗಿಯೂ ಇರುವದರಿಂದ ಈ ನಿನ್ನ ಜನರನ್ನು ತಳ್ಳಿಬಿಟ್ಟಿದ್ದೀ.
- Psalm 144:7 ಕೀರ್ತನೆಗಳು 144:7ನಿನ್ನ ಕೈಯನ್ನು ಉನ್ನತದಿಂದ ಚಾಚಿ, ಮಹಾಜಲಗಳಿಂದಲೂ ಅನ್ಯರ ಮಕ್ಕಳ ಕೈಯಿಂದಲೂ ನನ್ನನ್ನು ತಪ್ಪಿಸು, ನನ್ನನ್ನು ಬಿಡಿಸು.