Numbers · chapter 1 · verse 51
Numbers 1:51 in Kannada
ಗುಡಾರವು ಹೊರಡುವಾಗ ಲೇವಿಯರು ಅದನ್ನು ಬಿಚ್ಚಲಿ; ಗುಡಾರವು ಇಳಿಯುವಾಗ ಲೇವಿಯರು ಅದನ್ನು ನಿಲ್ಲಿಸಲಿ; ಪರಕೀಯನು ಸವಿಾಪಿಸಿದರೆ ಅವನು ಸಾಯಬೇಕು.
Gudaaravu horaduvaaga leviyaru adannu bichchali; gudaaravu iliyuvaaga leviyaru adannu nillisali; parakeeyanu saviాpisidare avanu saayabeku.
Numbers 1:51 in English
- King James Version (KJV)
- And when the tabernacle setteth forward, the Levites shall take it down: and when the tabernacle is to be pitched, the Levites shall set it up: and the stranger that cometh nigh shall be put to death.
- World English Bible (WEB)
- When the tabernacle is to move, the Levites shall take it down; and when the tabernacle is to be set up, the Levites shall set it up. The stranger who comes near shall be put to death.
- American Standard Version (ASV)
- And when the tabernacle setteth forward, the Levites shall take it down; and when the tabernacle is to be pitched, the Levites shall set it up: and the stranger that cometh nigh shall be put to death.
- Bible in Basic English (BBE)
- And when the Tent of meeting goes forward, the Levites are to take it down; and when it is to be put up, they are to do it: any strange person who comes near it is to be put to death.
- Darby Translation (DBY)
- and when the tabernacle setteth forward, the Levites shall take it down; and when the tabernacle encampeth, the Levites shall set it up; and the stranger that cometh near shall be put to death.
- Webster's Bible (WBS)
- And when the tabernacle moveth forward, the Levites shall take it down; and when the tabernacle is to be pitched, the Levites shall set it up: and the stranger that cometh nigh shall be put to death.
- Young's Literal Translation (YLT)
- 'And in the journeying of the tabernacle, the Levites take it down, and in the encamping of the tabernacle, the Levites raise it up; and the stranger who is coming near is put to death.'
Read in context
- 49ಲೇವಿ ಗೋತ್ರವನ್ನು ಮಾತ್ರ ಎಣಿಸದೆ ಇಸ್ರಾ ಯೇಲ್ ಮಕ್ಕಳೊಳಗೆ ಅವರ ಲೆಕ್ಕವನ್ನು ತಕ್ಕೊಳ್ಳಬೇಡ.
- 50ಆದರೆ ನೀನು ಲೇವಿಯರನ್ನು ಸಾಕ್ಷಿಯ ಗುಡಾರ ಕ್ಕೋಸ್ಕರವೂ ಅದರ ಎಲ್ಲಾ ವಸ್ತುಗಳಿಗೋಸ್ಕರವೂ ಅದಕ್ಕೆ ಬೇಕಾದ ಎಲ್ಲವುಗಳಿಗೋಸ್ಕರವೂ ನೇಮಿಸು. ಅವರು ಗುಡಾರವನ್ನೂ ಅದರ ಎಲ್ಲಾ ವಸ್ತುಗಳನ್ನೂ ಹೊತ್ತುಕೊಳ್ಳುವರು, ಇದರ ಸೇವೆಮಾಡಿ ಗುಡಾರದ ಸುತ್ತಮುತ್ತಲೂ ಇಳಿದುಕೊಳ್ಳಬೇಕು.
- 51ಗುಡಾರವು ಹೊರಡುವಾಗ ಲೇವಿಯರು ಅದನ್ನು ಬಿಚ್ಚಲಿ; ಗುಡಾರವು ಇಳಿಯುವಾಗ ಲೇವಿಯರು ಅದನ್ನು ನಿಲ್ಲಿಸಲಿ; ಪರಕೀಯನು ಸವಿಾಪಿಸಿದರೆ ಅವನು ಸಾಯಬೇಕು.
- 52ಇಸ್ರಾಯೇಲ್ ಮಕ್ಕಳು ತಮ್ಮ ತಮ್ಮ ಸೈನ್ಯಗಳ ಪ್ರಕಾರ ಒಬ್ಬೊಬ್ಬನು ತನ್ನ ದಂಡಿನ ಬಳಿಯಲ್ಲಿ ತನ್ನ ಧ್ವಜದ ಬಳಿಯಲ್ಲಿ ಇಳಿದುಕೊಳ್ಳಬೇಕು.
- 53ಆದರೆ ಲೇವಿಯರು ಸಾಕ್ಷಿಯ ಗುಡಾರದ ಸುತ್ತಲೂ ಇಳಿದು ಕೊಳ್ಳಬೇಕು; ಹೀಗೆ ಇಸ್ರಾಯೇಲ್ ಮಕ್ಕಳ ಸಭೆಯ ಮೇಲೆ ಕೋಪಬಾರದಿರುವದು; ಲೇವಿಯರು ಸಾಕ್ಷಿಯ ಗುಡಾರವನ್ನು ಕಾಯುವವರಾಗಿರಬೇಕು.ಇಸ್ರಾಯೇಲ್ ಮಕ್ಕಳು ಹಾಗೆಯೇ ಮಾಡಿದರು. ಕರ್ತನು ಮೋಶೆಗೆ ಆಜ್ಞಾಪಿಸಿದ ಎಲ್ಲವುಗಳ ಪ್ರಕಾರವೇ ಅವರು ಮಾಡಿದರು.
Cross references
- Numbers 3:38 ಅರಣ್ಯಕಾಂಡ 3:38ಆದರೆ ಗುಡಾರದ ಎದುರಿನಲ್ಲಿ ಪೂರ್ವದಿಕ್ಕಿಗೆ ಅಂದರೆ ಸಭೆಯ ಗುಡಾರದ ಮುಂದೆ ಪೂರ್ವದಿಕ್ಕಿಗೆ ಇಳುಕೊಳ್ಳುವವರು ಮೋಶೆಯೂ ಆರೋನನೂ ಅವನ ಕುಮಾರರೂ. ಇವರು ಇಸ್ರಾಯೇಲ್ ಮಕ್ಕಳಿಗಾಗಿ ಪರಿಶುದ್ಧಸ್ಥಳದ ಅಪ್ಪಣೆಯನ್ನು ಕಾಪಾ ಡುವವರು. ಪರಕೀಯನು ಸವಿಾಪಿಸಿದರೆ ಅವನು ಸಾಯಬೇಕು.
- Numbers 3:10 ಅರಣ್ಯಕಾಂಡ 3:10ಇದಲ್ಲದೆ ಆರೋನನನ್ನೂ ಅವನ ಕುಮಾರ ರನ್ನೂ ನೇಮಿಸಬೇಕು. ಅವರು ತಮ್ಮ ಯಾಜಕತ್ವವನ್ನು ನಡಿಸಲಿ. ಪರಕೀಯನು ಸವಿಾಪಿಸಿದರೆ ಸಾಯಬೇಕು.
- 2 Samuel 6:7 2 ಸಮುವೇಲನು 6:7ಆಗ ಕರ್ತನ ಕೋಪವು ಉಜ್ಜನ ಮೇಲೆ ಉರಿಯಿತು; ದೇವರು ಅವನ ಅಪ ರಾಧಕ್ಕೋಸ್ಕರ ಅವನನ್ನು ಹೊಡೆದನು; ಅಲ್ಲಿ ಅವನು ದೇವರ ಮಂಜೂಷದ ಬಳಿಯಲ್ಲಿ ಸತ್ತನು.
- 1 Samuel 6:19 1 ಸಮುವೇಲನು 6:19ಆದರೆ ಬೇತ್ಷೆ ಮೆಷಿನ ಜನರು ಕರ್ತನ ಮಂಜೂಷದಲ್ಲಿ ನೋಡಿದ್ದ ರಿಂದ ಕರ್ತನು ಅವರೊಳಗೆ ಐವತ್ತು ಸಾವಿರದ ಎಪ್ಪತ್ತು ಮಂದಿಯನ್ನು ಸಾಯಿಸಿದನು.
- Numbers 18:22 ಅರಣ್ಯಕಾಂಡ 18:22ಇಸ್ರಾಯೇಲ್ ಮಕ್ಕಳು ಪಾಪವನ್ನು ಹೊತ್ತುಕೊಂಡು ಸಾಯದ ಹಾಗೆ ಇನ್ನು ಮೇಲೆ ಸಭೆಯ ಗುಡಾರದ ಸವಿಾಪಕ್ಕೆ ಬರಬಾರದು.
- Numbers 10:11 ಅರಣ್ಯಕಾಂಡ 10:11ಎರಡನೆಯ ವರುಷದ ಎರಡನೇ ತಿಂಗಳಿನ ಇಪ್ಪತ್ತನೇ ದಿವಸದಲ್ಲಿ ಮೇಘವು ಸಾಕ್ಷಿ ಗುಡಾರದ ಮೇಲಿನಿಂದ ಎತ್ತಲ್ಪಟ್ಟಿತು.
- Numbers 16:40 ಅರಣ್ಯಕಾಂಡ 16:40ಆರೋನನ ಸಂತಾನವಲ್ಲದ ಪರಕೀಯನು ಕರ್ತನ ಸಮ್ಮುಖದಲ್ಲಿ ಧೂಪವನ್ನು ಅರ್ಪಿಸುವದಕ್ಕೆ ಸವಿಾಪಿಸದ ಹಾಗೆಯೂ ಕೋರಹನೂ ಅವನ ಸಮೂಹವೂ ಇದ್ದ ಪ್ರಕಾರ ಇರದ ಹಾಗೆಯೂ ಕರ್ತನು ಮೋಶೆಯಿಂದ ಹೇಳಿಸಿದ ಪ್ರಕಾರ ಇಸ್ರಾಯೇಲ್ ಮಕ್ಕಳಿಗೆ ಇದು ಜ್ಞಾಪಕ ವಾಗಿರುವದು ಅಂದನು.
- Numbers 10:17–21 ಅರಣ್ಯಕಾಂಡ 10:17–21ಗುಡಾರವನ್ನು ಇಳಿಸಿದಾಗ ಗೇರ್ಷೋನನ ಮಕ್ಕಳೂ ಮೆರಾರೀಯ ಮಕ್ಕಳೂ ಗುಡಾರವನ್ನು ಹೊತ್ತುಕೊಂಡು ಮುಂದೆ ಹೊರಟರು. ರೂಬೇನನ ಪಾಳೆಯದ ಧ್ವಜವು ಅವರ ಸೈನ್ಯ ಗಳ ಪ್ರಕಾರ ಹೊರಟಿತು; ಅವರ ಸೈನ್ಯದ ಮೇಲೆ ಶೆದೇಯೂರನ ಮಗನಾದ ಎಲೀಚೂರನು ಇದ್ದನು. ಸಿಮೆಯೋನನ ಮಕ್ಕಳ ಗೋತ್ರದ ಸೈನ್ಯದ ಮೇಲೆ ಚೂರೀಷದ್ದೈಯನ ಮಗನಾದ ಶೆಲುವಿಾಯೇಲನು ಇದ್ದನು. ಗಾದನ ಮಕ್ಕಳ ಗೋತ್ರದ ಸೈನ್ಯದ ಮೇಲೆ ದೆಗೂವೇಲನ ಮಗನಾದ ಎಲ್ಯಾಸಾಫನು ಇದ್ದನು. ಪರಿಶುದ್ಧ ಸ್ಥಳವನ್ನು ಹೊರುವ ಕೆಹಾತ್ಯರು ಹೊರಟರು; ಇವರು ಬರುವಷ್ಟರೊಳಗೆ ಅವರು ಗುಡಾರವನ್ನು ನಿಲ್ಲಿಸಿದರು.
- Leviticus 22:10–13 ಯಾಜಕಕಾಂಡ 22:10–13ಪರಿಶುದ್ಧವಾದದ್ದನ್ನು ಪರಕೀಯನು ತಿನ್ನಬಾರದು. ಯಾಜಕನ ಪ್ರವಾಸಿಯಾಗಲಿ ಇಲ್ಲವೆ ಕೂಲಿ ಆಳಾಗಲಿ ಪರಿಶುದ್ಧವಾದವುಗಳಲ್ಲಿ ತಿನ್ನಬಾರದು. ಆದರೆ ಯಾಜಕನು ಯಾವನನ್ನಾದರೂ ತನ್ನ ಹಣದಿಂದ ಕೊಂಡುಕೊಂಡರೆ ಅವನು ಅದರಲ್ಲಿ ತಿನ್ನಬೇಕು, ಅವನ ಮನೆಯಲ್ಲಿ ಹುಟ್ಟಿದವನು ತಿನ್ನಲಿ; ಅವರು ಅವನ ಆಹಾರವನ್ನು ತಿನ್ನಲಿ. ಯಾಜಕನ ಮಗಳು ಒಬ್ಬ ಪರಕೀಯನನ್ನು ಮದುವೆಯಾದರೆ ಅವಳು ಸಮ ರ್ಪಣೆಯಾದ ಪರಿಶುದ್ಧವಾದವುಗಳಲ್ಲಿ ತಿನ್ನಬಾರದು. ಯಾಜಕನ ಮಗಳು ವಿಧವೆಯಾಗಿದ್ದರೆ ಇಲ್ಲವೆ ಬಿಡಲ್ಪಟ್ಟವಳಾಗಿದ್ದರೆ ಮತ್ತು ಮಕ್ಕಳಿಲ್ಲದವಳಾಗಿ ತನ್ನ ಯೌವನದಲ್ಲಿದ್ದಂತೆಯೇ ತನ್ನ ತಂದೆಯ ಮನೆಗೆ ಹಿಂದಿರುಗಿದವಳಾಗಿದ್ದರೆ ಅವಳು ತನ್ನ ತಂದೆಯ ಆಹಾರದಲ್ಲಿ ತಿನ್ನಲಿ; ಆದರೆ ಪರಕೀಯನು ಅದರಲ್ಲಿ ತಿನ್ನಬಾರದು.
- Numbers 4:1–33 ಅರಣ್ಯಕಾಂಡ 4:1–33ಕರ್ತನು ಮೋಶೆ ಆರೋನರ ಸಂಗಡ ಮಾತನಾಡಿ ಹೇಳಿದ್ದೇನಂದರೆ -- ಲೇವಿಯ ಮಕ್ಕಳೊಳಗಿಂದ ಅವರ ತಂದೆಗಳ ಮನೆ ತನದ ಕುಟುಂಬಗಳ ಪ್ರಕಾರವಾಗಿ ಮೂವತ್ತು ವರುಷವಾದವರನ್ನೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ವರನ್ನೂ ಅಂದರೆ ಐವತ್ತು ವರುಷದ ವರೆಗೆ ಸಭೆಯ ಗುಡಾರದಲ್ಲಿ ಕೆಲಸ ಮಾಡುವದಕ್ಕೆ ಸೈನ್ಯದಲ್ಲಿ ಸೇರುವವ ರನ್ನೆಲ್ಲಾ ಎಣಿಸಿ ಕೆಹಾತನ ಮಕ್ಕಳ ಲೆಕ್ಕವನ್ನು ತಕ್ಕೊಳ್ಳಿರಿ. ಸಭೆಯ ಗುಡಾರದಲ್ಲಿ ಕೆಹಾತನ ಮಕ್ಕಳ ಸೇವೆಯು ಅತಿ ಪರಿಶುದ್ಧವಾದದ್ದೇ. ಪಾಳೆಯವು ಹೊರಡು ವಾಗ ಆರೋನನೂ ಅವನ ಮಕ್ಕಳೂ ಒಳಗೆ ಹೋಗಿ ತೆರೆಯನ್ನು ಇಳಿಸಿ ಅದರಿಂದ ಸಾಕ್ಷಿಯ ಮಂಜೂಷವನ್ನು ಮುಚ್ಚಿ ಅದರ ಮೇಲೆ ಕಡಲು ಹಂದಿಯ ಚರ್ಮದ ಹೊದಿಕೆಯನ್ನು ಹೊದಿಸಬೇಕು. ಅದರ ಮೇಲ್ಭಾಗ ದಲ್ಲಿ ಪೂರ್ಣವಾದ ನೀಲಿ ವಸ್ತ್ರವನ್ನು ಹಾಸಿ ಅದರ ಕೋಲುಗಳನ್ನು ಇಡಬೇಕು. 7 ಸಮ್ಮುಖದ ರೊಟ್ಚಿಯ ಮೇಜಿನ ಮೇಲೆ ಅವರು ನೀಲಿ ವಸ್ತ್ರವನ್ನು ಹಾಸಿ ಅದರ ಮೇಲೆ ಪಾತ್ರೆ ಚಮಟಿಕೆ ಪಾನದ ಅರ್ಪ ಣೆಯ ಹೂಜಿ ಇವುಗಳನ್ನು ಇಡಬೇಕು. ನಿತ್ಯವಾದ ರೊಟ್ಟಿಯೂ ಅದರ ಮೇಲೆ ಇರಬೇಕು. ಅವೆ ಲ್ಲವುಗಳ ಮೇಲೆ ಕಡುಗೆಂಪಾದ ವಸ್ತ್ರವನ್ನು ಹಾಸಿ ಅದನ್ನು ಕಡಲು ಹಂದಿಯ ಚರ್ಮಗಳ ಹೊದಿಕೆಯಿಂದ ಹೊದಿಸಿ ಅದರ ಕೋಲುಗಳನ್ನು ಇಡಬೇಕು. ಇದ ಲ್ಲದೆ ಅವರು ನೀಲಿ ವಸ್ತ್ರವನ್ನು ತಕ್ಕೊಂಡು ಅದರಿಂದ ದೀಪಸ್ತಂಭವನ್ನೂ ಅದರ ದೀಪಗಳನ್ನೂ ಚಮಟಿಕೆಗಳನ್ನೂ ದೀಪದ ಕುಡಿತೆಗೆಯುವ ಬಟ್ಟಲುಗಳನ್ನೂ ಅದಕ್ಕೆ ಸೇವೆ ಮಾಡುವ ಸಕಲ ಎಣ್ಣೆಯ ಪಾತ್ರೆಗಳನ್ನೂ ಮುಚ್ಚಬೇಕು. ಅವರು ಅದನ್ನೂ ಅದರ ಎಲ್ಲಾ ವಸ್ತುಗಳನ್ನೂ ಕಡಲು ಹಂದಿಯ ಚರ್ಮಗಳ ಮುಚ್ಚಳ ದೊಳಗೆ ಇಟ್ಟು ಅಡ್ಡದಂಡೆಯ ಮೇಲೆ ಹಾಕಬೇಕು. ಇದಲ್ಲದೆ ಬಂಗಾರದ ಬಲಿಪೀಠದ ಮೇಲೆ ಅವರು ನೀಲಿ ವಸ್ತ್ರವನ್ನು ಹಾಸಿ ಅದನ್ನು ಕಡಲು ಹಂದಿಯ ಚರ್ಮವನ್ನು ಮುಚ್ಚಳ ಹೊದಿಸಿ ಅದರ ಕೋಲುಗಳನ್ನು ಇಡಬೇಕು. ಪರಿಶುದ್ಧ ಸ್ಥಳದಲ್ಲಿ ಸೇವೆಮಾಡುವ ಸೇವೆಯ ಎಲ್ಲಾ ವಸ್ತುಗಳನ್ನು ಅವರು ತಕ್ಕೊಂಡು ನೀಲಿ ವಸ್ತ್ರದಿಂದ ಕಟ್ಟಿ ಕಡಲು ಹಂದಿಯ ಚರ್ಮಗಳ ಹೊದಿಕೆಯಿಂದ ಮುಚ್ಚಿ ಅಡ್ಡದಂಡೆಯ ಮೇಲೆ ಹಾಕಬೇಕು. ಬಲಿಪೀಠದ ಬೂದಿಯನ್ನು ತೆಗೆದು ಅದರ ಮೇಲೆ ಕಡುಗೆಂಪಾದ ವಸ್ತ್ರವನ್ನು ಹಾಸಿ ಸೇವೆ ಮಾಡುವ ಎಲ್ಲಾ ವಸ್ತುಗಳನ್ನೂ ಅಗ್ನಿಪಾತ್ರೆಗಳನ್ನೂ ಮುಳ್ಳುಗಳನ್ನೂ ಸಲಿಕೆಗಳನ್ನೂ ಬೋಗುಣಿಗಳನ್ನೂ ಬಲಿಪೀಠದ ಎಲ್ಲಾ ವಸ್ತುಗಳನ್ನೂ ಅದರ ಮೇಲಿಟ್ಟು ಕಡಲು ಹಂದಿಯ ಚರ್ಮದ ಹೊದಿಕೆಯನ್ನು ಹಾಕಿ ಅದರ ಕೋಲುಗಳನ್ನು ಇಡಬೇಕು. ಆರೋನನೂ ಅವನ ಕುಮಾರರೂ ಪರಿಶುದ್ಧ ಸ್ಥಳವನ್ನು ಅದರ ಎಲ್ಲಾ ವಸ್ತುಗಳನ್ನು ಮುಚ್ಚಿದಮೇಲೆ ಪಾಳೆಯವು ಹೊರಡುವಾಗ ಕೆಹಾತನ ಕುಮಾರರು ಅದನ್ನು ಹೊತ್ತು ಕೊಂಡು ಹೋಗುವದಕ್ಕೆ ಪ್ರವೇಶಿಸಬೇಕು; ಅವರು ಸಾಯದ ಹಾಗೆ ಪರಿಶುದ್ಧವಾದ ಯಾವದನ್ನೂ ಮುಟ್ಟ ಬಾರದು. ಸಭೆಯ ಗುಡಾರದಲ್ಲಿ ಕೆಹಾತನ ಕುಮಾರರ ಹೊರೆಗಳು ಇವೇ ಆಗಿವೆ. ಯಾಜಕನಾದ ಆರೋನನ ಮಗನಾದ ಎಲ್ಲಾಜಾ ರನ ಕೆಲಸ ಯಾವದಂದರೆ: ದೀಪದ ಎಣ್ಣೆಯೂ ಸುಗಂಧ ಧೂಪವೂ ನಿತ್ಯದ ಆಹಾರ ಸಮರ್ಪಣೆಯೂ ಅಭಿಷೇಕದ ತೈಲವೂ ಸಮಸ್ತಗುಡಾರವೂ ಅದರ ಲ್ಲಿರುವ ಸಕಲವೂ ಪರಿಶುದ್ಧ ಸ್ಥಳದಲ್ಲಿಯೂ ಅದರ ವಸ್ತುಗಳೂ ಅವನ ಮೇಲ್ವಿಚಾರಣೆಯಲ್ಲಿರಬೇಕು. ಕರ್ತನು ಮೋಶೆ ಆರೋನರ ಸಂಗಡ ಮಾತನಾಡಿ ಹೇಳಿದ್ದೇನಂದರೆ-- ನೀವು ಲೇವಿಯರೊಳಗಿಂದ ಕೆಹಾತಿಯರ ಗೋತ್ರದ ಕುಟುಂಬಗಳನ್ನು ಕಡಿದು ಹಾಕಬೇಡಿರಿ. ಆದರೆ ಅವರು ಅತಿ ಪರಿಶುದ್ಧವಾ ದವುಗಳನ್ನು ಸವಿಾಪಿಸುವಾಗ ಅವರು ಸಾಯದೆ ಬದುಕುವ ಹಾಗೆ ಅವರಿಗೆ ಮಾಡಬೇಕಾದದ್ದೇ ನೆಂದರೆ--ಆರೋನನೂ ಅವನ ಕುಮಾರರೂ ಒಳಗೆ ಪ್ರವೇಶಿಸಿ ಅವರಲ್ಲಿ ಒಬ್ಬೊಬ್ಬನನ್ನು ಅವನ ಕೆಲಸಕ್ಕೂ ಅವನ ಹೊರೆಗೂ ನೇಮಿಸಬೇಕು. ಆದರೆ ಅವರು ಸಾಯದ ಹಾಗೆ ಪರಿಶುದ್ಧವಾದವುಗಳನ್ನು ನೋಡಲು ಒಳಗೆ ಹೋಗಬಾರದು. ಕರ್ತನು ಮೋಶೆಯ ಸಂಗಡ ಮಾತನಾಡಿ ಹೇಳಿ ದ್ದೇನಂದರೆ-- ಗೇರ್ಷೋನನ ಕುಮಾರರ ಲೆಕ್ಕವನ್ನು ಸಹ ಅವರ ತಂದೆ ಮನೆಗಳ ಪ್ರಕಾರವಾಗಿಯೂ ಅವರ ಕುಟುಂಬಗಳ ಪ್ರಕಾರವಾಗಿಯೂ ತೆಗೆದುಕೊಳ್ಳ ಬೇಕು. ಮೂವತ್ತು ವರುಷವೂ ಅದಕ್ಕೆ ಮೇಲ್ಪಟ್ಟ ಐವತ್ತು ವರುಷಗಳ ಪ್ರಾಯವುಳ್ಳವರನ್ನು ಸಭೆಯ ಗುಡಾರದಲ್ಲಿ ಸೇವೆಮಾಡುವದಕ್ಕೂ ಅದನ್ನು ಪೂರೈಸು ವದಕ್ಕೂ ಸೇರುವವರೆಲ್ಲರನ್ನೂ ಎಣಿಸು. ಗೇರ್ಷೋನಿಯರ ಕುಟುಂಬಗಳ ಸೇವೆಯೂ ಹೊರೆಯೂ ಯಾವದಂದರೆ-- ಅವರು ಗುಡಾರದ ತೆರೆಗಳನ್ನೂ ಸಭೆಯ ಗುಡಾರವನ್ನೂ ಅದರ ಹೊದಿಕೆ ಯನ್ನೂ ಅದರ ಮೇಲಿರುವ ಕಡಲು ಹಂದಿಯ ಚರ್ಮದ ಹೊದಿಕೆಯನ್ನೂ ಸಭೆಯ ಗುಡಾರದ ಬಾಗಲಿನ ತೆರೆಯನ್ನೂ ಅಂಗಳದ ಪರದೆಗಳನ್ನೂ ಗುಡಾರವನ್ನೂ ಬಲಿಪೀಠವನ್ನೂ ಇವುಗಳ ಸುತ್ತಲಿರುವ ಅಂಗಳದ ಬಾಗಲಿನ ತೆರೆಯನ್ನೂ ಅವುಗಳ ಹಗ್ಗಗ ಳನ್ನೂ ಅವುಗಳ ಸೇವೆಯ ಎಲ್ಲಾ ವಸ್ತುಗಳನ್ನೂ ಹೊತ್ತು ಕೊಳ್ಳಬೇಕು. ಅವುಗಳಿಗೆ ಮಾಡತಕ್ಕ ಎಲ್ಲಾ ಸೇವೆಯನ್ನು ಹೀಗೆ ಅವರು ಮಾಡಬೇಕು. ಆರೋನನೂ ಅವನ ಕುಮಾರರೂ ನೇಮಿಸುವ ಹಾಗೆಯೇ ಗೇರ್ಷೋನನ ಕುಮಾರರ ಸೇವೆಯೆಲ್ಲಾ ಅವರು ಹೊರತಕ್ಕದ್ದೆಲ್ಲವೂ ಮಾಡತಕ್ಕದ್ದೆಲ್ಲವೂ ಆಗಬೇಕು. ನೀವು ಅವರ ಸಮಸ್ತ ಹೊರೆಯನ್ನೂ ಅಪ್ಪಣೆಯ ಪ್ರಕಾರ ಅವರಿಗೆ ನೇಮಿಸ ಬೇಕು. ಗೇರ್ಷೋನನ ಕುಮಾರರು ಸಭೆಯ ಗುಡಾರದಲ್ಲಿ ಮಾಡುವ ಸೇವೆಯು ಇದೇ: ಯಾಜಕ ನಾದ ಆರೋನನ ಮಗನಾದ ಈತಾಮಾರನ ಕೈಕೆಳಗೆ ಇರುವದು ಅವರಿಗೆ ಕೊಡಲ್ಪಟ್ಟ ಅಪ್ಪಣೆಯಾಗಿದೆ. ಮೆರಾರೀಯ ಕುಮಾರರನ್ನು ಅವರ ಕುಟುಂಬಗಳ ಪ್ರಕಾರವಾಗಿಯೂ ತಂದೆಗಳ ಮನೆಯ ಪ್ರಕಾರ ವಾಗಿಯೂ ಎಣಿಸಬೇಕು. ಮೂವತ್ತು ವರುಷವು ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರನ್ನು ಅಂದರೆ ಐವತ್ತು ವರುಷಗಳ ವರೆಗೆ ಸಭೆಯ ಗುಡಾರದ ಸೇವೆಮಾಡುವ ದಕ್ಕಾಗಿ ಒಳಗೆ ಪ್ರವೇಶಿಸುವವರನ್ನೆಲ್ಲಾ ಎಣಿಸಬೇಕು. ಸಭೆಯ ಗುಡಾರದಲ್ಲಿ ಅವರು ಮಾಡತಕ್ಕ ಸಮಸ್ತ ಸೇವೆಯ ಪ್ರಕಾರ ಅವರು ಹೊರುವದಕ್ಕೆ ಕೊಡಲ್ಪಟ್ಟ ಅಪ್ಪಣೆಯು ಏನಂದರೆ, ಗುಡಾರದ ಹಲಿಗೆಗಳೂ ಅದರ ಅಡ್ಡ ತೊಲೆಗಳೂ ಕಂಬಗಳೂ ಕುಣಿಕೆಗಳೂ. ಸುತ್ತಲಿರುವ ಅಂಗಳದ ಕಂಬಗಳೂ ಕುಣಿಕೆಗಳೂ ಗೂಟಗಳೂ ಅವುಗಳ ಹಗ್ಗಗಳೂ ಎಲ್ಲಾ ವಸ್ತುಗಳ ಪ್ರಕಾರವಾಗಿಯೂ ಅವುಗಳ ಸಮಸ್ತ ಸೇವೆಯ ಪ್ರಕಾರವಾಗಿಯೂ ಅವರು ಹೊರುವದಕ್ಕೆ ಕೊಡಲ್ಪಟ್ಟ ಅಪ್ಪಣೆಯ ವಸ್ತುಗಳನ್ನು ನೀವು ಹೆಸರೆಸರಾಗಿ ಎಣಿಸ ಬೇಕು. ಮೆರಾರೀಯ ಕುಮಾರರ ಕುಟುಂಬಗಳ ಸೇವೆಯೂ ಗುಡಾರದಲ್ಲಿ ಅವರು ಮಾಡುವ ಸಮಸ್ತ ಸೇವೆಯೂ ಇದೇ. ಅದು ಯಾಜಕನಾದ ಆರೋನನ ಮಗನಾದ ಈತಾಮಾರನ ಕೈಕೆಳಗೆ ಇರಬೇಕು.