Numbers · chapter 10 · verse 17
Numbers 10:17 in Kannada
ಗುಡಾರವನ್ನು ಇಳಿಸಿದಾಗ ಗೇರ್ಷೋನನ ಮಕ್ಕಳೂ ಮೆರಾರೀಯ ಮಕ್ಕಳೂ ಗುಡಾರವನ್ನು ಹೊತ್ತುಕೊಂಡು ಮುಂದೆ ಹೊರಟರು.
Gudaaravannu ilisidaaga gershonana makkaloo meraareeya makkaloo gudaaravannu hottukondu munde horataru.
Numbers 10:17 in English
- King James Version (KJV)
- And the tabernacle was taken down; and the sons of Gershon and the sons of Merari set forward, bearing the tabernacle.
- World English Bible (WEB)
- The tabernacle was taken down; and the sons of Gershon and the sons of Merari, who bore the tabernacle, went forward.
- American Standard Version (ASV)
- And the tabernacle was taken down; and the sons of Gershon and the sons of Merari, who bare the tabernacle, set forward.
- Bible in Basic English (BBE)
- Then the House was taken down; and the sons of Gershon and the sons of Merari, who were responsible for moving the House, went forward.
- Darby Translation (DBY)
- And the tabernacle was taken down; and the sons of Gershon and the sons of Merari set forward bearing the tabernacle.
- Webster's Bible (WBS)
- And the tabernacle was taken down; and the sons of Gershon and the sons of Merari moved forward, bearing the tabernacle.
- Young's Literal Translation (YLT)
- And the tabernacle hath been taken down, and the sons of Gershon and the sons of Merari have journeyed, bearing the tabernacle.
Read in context
- 15ಇಸ್ಸಾಕಾರನ ಮಕ್ಕಳ ಗೋತ್ರದ ಸೈನ್ಯದ ಮೇಲೆ ಚೂವಾರನ ಮಗನಾದ ನೆತನೇಲನು ಇದ್ದನು.
- 16ಜೆಬುಲೂನನ ಮಕ್ಕಳ ಗೋತ್ರದ ಸೈನ್ಯದ ಮೇಲೆ ಹೇಲೋನನ ಮಗನಾದ ಎಲೀಯಾಬನು ಇದ್ದನು.
- 17ಗುಡಾರವನ್ನು ಇಳಿಸಿದಾಗ ಗೇರ್ಷೋನನ ಮಕ್ಕಳೂ ಮೆರಾರೀಯ ಮಕ್ಕಳೂ ಗುಡಾರವನ್ನು ಹೊತ್ತುಕೊಂಡು ಮುಂದೆ ಹೊರಟರು.
- 18ರೂಬೇನನ ಪಾಳೆಯದ ಧ್ವಜವು ಅವರ ಸೈನ್ಯ ಗಳ ಪ್ರಕಾರ ಹೊರಟಿತು; ಅವರ ಸೈನ್ಯದ ಮೇಲೆ ಶೆದೇಯೂರನ ಮಗನಾದ ಎಲೀಚೂರನು ಇದ್ದನು.
- 19ಸಿಮೆಯೋನನ ಮಕ್ಕಳ ಗೋತ್ರದ ಸೈನ್ಯದ ಮೇಲೆ ಚೂರೀಷದ್ದೈಯನ ಮಗನಾದ ಶೆಲುವಿಾಯೇಲನು ಇದ್ದನು.
Cross references
- Numbers 1:51 ಅರಣ್ಯಕಾಂಡ 1:51ಗುಡಾರವು ಹೊರಡುವಾಗ ಲೇವಿಯರು ಅದನ್ನು ಬಿಚ್ಚಲಿ; ಗುಡಾರವು ಇಳಿಯುವಾಗ ಲೇವಿಯರು ಅದನ್ನು ನಿಲ್ಲಿಸಲಿ; ಪರಕೀಯನು ಸವಿಾಪಿಸಿದರೆ ಅವನು ಸಾಯಬೇಕು.
- Numbers 7:6–8 ಅರಣ್ಯಕಾಂಡ 7:6–8ಆಗ ಮೋಶೆಯು ಆ ಬಂಡಿಗಳನ್ನೂ ಎತ್ತುಗಳನ್ನೂ ತೆಗೆದುಕೊಂಡು ಅವು ಗಳನ್ನು ಲೇವಿಯರಿಗೆ ಕೊಟ್ಟನು. ಎರಡು ಬಂಡಿ ಗಳನ್ನೂ ನಾಲ್ಕು ಎತ್ತುಗಳನ್ನೂ ಗೇರ್ಷೋನನ ಕುಮಾರರಿಗೆ ಅವರ ಸೇವೆಯ ಪ್ರಕಾರವಾಗಿ ಕೊಟ್ಟನು. ಯಾಜಕನಾದ ಆರೋನನ ಮಗನಾದ ಈತಾಮಾರನ ಕೈಕೆಳಗಿರುವ ನಾಲ್ಕು ಬಂಡಿಗಳನ್ನೂ ಎಂಟು ಎತ್ತು ಗಳನ್ನೂ ಮೆರಾರೀಯ ಕುಮಾರರಿಗೆ ಅವರ ಸೇವೆಯ ಪ್ರಕಾರ ಕೊಟ್ಟನು.
- Numbers 3:25–26 ಅರಣ್ಯಕಾಂಡ 3:25–26ಸಭೆಯ ಗುಡಾರದಲ್ಲಿ ಗೇರ್ಷೋನನ ಕುಮಾರರು ಕಾಪಾಡಿಕೊಳ್ಳಬೇಕಾದವುಗಳು ಗುಡಾ ರವೂ ಅದರ ಹೊದಿಕೆಯೂ ಸಭೆಯ ಗುಡಾರದ ಬಾಗಲಿನ ತೆರೆಯೂ ಅಂಗಳದ ತೆರೆಗಳೂ ಗುಡಾರಕ್ಕೂ ಬಲಿಪೀಠಕ್ಕೂ ಸುತ್ತಲಿರುವ ಅಂಗಳದ ಪರದೆಯೂ ಅಂಗಳದ ಬಾಗಲಿನ ತೆರೆಯೂ ಅದರ ಸಮಸ್ತ ಸೇವೆಗೆ ಬೇಕಾದ ಹಗ್ಗಗಳೂ ಇವೆ.
- Numbers 4:21–33 ಅರಣ್ಯಕಾಂಡ 4:21–33ಕರ್ತನು ಮೋಶೆಯ ಸಂಗಡ ಮಾತನಾಡಿ ಹೇಳಿ ದ್ದೇನಂದರೆ-- ಗೇರ್ಷೋನನ ಕುಮಾರರ ಲೆಕ್ಕವನ್ನು ಸಹ ಅವರ ತಂದೆ ಮನೆಗಳ ಪ್ರಕಾರವಾಗಿಯೂ ಅವರ ಕುಟುಂಬಗಳ ಪ್ರಕಾರವಾಗಿಯೂ ತೆಗೆದುಕೊಳ್ಳ ಬೇಕು. ಮೂವತ್ತು ವರುಷವೂ ಅದಕ್ಕೆ ಮೇಲ್ಪಟ್ಟ ಐವತ್ತು ವರುಷಗಳ ಪ್ರಾಯವುಳ್ಳವರನ್ನು ಸಭೆಯ ಗುಡಾರದಲ್ಲಿ ಸೇವೆಮಾಡುವದಕ್ಕೂ ಅದನ್ನು ಪೂರೈಸು ವದಕ್ಕೂ ಸೇರುವವರೆಲ್ಲರನ್ನೂ ಎಣಿಸು. ಗೇರ್ಷೋನಿಯರ ಕುಟುಂಬಗಳ ಸೇವೆಯೂ ಹೊರೆಯೂ ಯಾವದಂದರೆ-- ಅವರು ಗುಡಾರದ ತೆರೆಗಳನ್ನೂ ಸಭೆಯ ಗುಡಾರವನ್ನೂ ಅದರ ಹೊದಿಕೆ ಯನ್ನೂ ಅದರ ಮೇಲಿರುವ ಕಡಲು ಹಂದಿಯ ಚರ್ಮದ ಹೊದಿಕೆಯನ್ನೂ ಸಭೆಯ ಗುಡಾರದ ಬಾಗಲಿನ ತೆರೆಯನ್ನೂ ಅಂಗಳದ ಪರದೆಗಳನ್ನೂ ಗುಡಾರವನ್ನೂ ಬಲಿಪೀಠವನ್ನೂ ಇವುಗಳ ಸುತ್ತಲಿರುವ ಅಂಗಳದ ಬಾಗಲಿನ ತೆರೆಯನ್ನೂ ಅವುಗಳ ಹಗ್ಗಗ ಳನ್ನೂ ಅವುಗಳ ಸೇವೆಯ ಎಲ್ಲಾ ವಸ್ತುಗಳನ್ನೂ ಹೊತ್ತು ಕೊಳ್ಳಬೇಕು. ಅವುಗಳಿಗೆ ಮಾಡತಕ್ಕ ಎಲ್ಲಾ ಸೇವೆಯನ್ನು ಹೀಗೆ ಅವರು ಮಾಡಬೇಕು. ಆರೋನನೂ ಅವನ ಕುಮಾರರೂ ನೇಮಿಸುವ ಹಾಗೆಯೇ ಗೇರ್ಷೋನನ ಕುಮಾರರ ಸೇವೆಯೆಲ್ಲಾ ಅವರು ಹೊರತಕ್ಕದ್ದೆಲ್ಲವೂ ಮಾಡತಕ್ಕದ್ದೆಲ್ಲವೂ ಆಗಬೇಕು. ನೀವು ಅವರ ಸಮಸ್ತ ಹೊರೆಯನ್ನೂ ಅಪ್ಪಣೆಯ ಪ್ರಕಾರ ಅವರಿಗೆ ನೇಮಿಸ ಬೇಕು. ಗೇರ್ಷೋನನ ಕುಮಾರರು ಸಭೆಯ ಗುಡಾರದಲ್ಲಿ ಮಾಡುವ ಸೇವೆಯು ಇದೇ: ಯಾಜಕ ನಾದ ಆರೋನನ ಮಗನಾದ ಈತಾಮಾರನ ಕೈಕೆಳಗೆ ಇರುವದು ಅವರಿಗೆ ಕೊಡಲ್ಪಟ್ಟ ಅಪ್ಪಣೆಯಾಗಿದೆ. ಮೆರಾರೀಯ ಕುಮಾರರನ್ನು ಅವರ ಕುಟುಂಬಗಳ ಪ್ರಕಾರವಾಗಿಯೂ ತಂದೆಗಳ ಮನೆಯ ಪ್ರಕಾರ ವಾಗಿಯೂ ಎಣಿಸಬೇಕು. ಮೂವತ್ತು ವರುಷವು ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರನ್ನು ಅಂದರೆ ಐವತ್ತು ವರುಷಗಳ ವರೆಗೆ ಸಭೆಯ ಗುಡಾರದ ಸೇವೆಮಾಡುವ ದಕ್ಕಾಗಿ ಒಳಗೆ ಪ್ರವೇಶಿಸುವವರನ್ನೆಲ್ಲಾ ಎಣಿಸಬೇಕು. ಸಭೆಯ ಗುಡಾರದಲ್ಲಿ ಅವರು ಮಾಡತಕ್ಕ ಸಮಸ್ತ ಸೇವೆಯ ಪ್ರಕಾರ ಅವರು ಹೊರುವದಕ್ಕೆ ಕೊಡಲ್ಪಟ್ಟ ಅಪ್ಪಣೆಯು ಏನಂದರೆ, ಗುಡಾರದ ಹಲಿಗೆಗಳೂ ಅದರ ಅಡ್ಡ ತೊಲೆಗಳೂ ಕಂಬಗಳೂ ಕುಣಿಕೆಗಳೂ. ಸುತ್ತಲಿರುವ ಅಂಗಳದ ಕಂಬಗಳೂ ಕುಣಿಕೆಗಳೂ ಗೂಟಗಳೂ ಅವುಗಳ ಹಗ್ಗಗಳೂ ಎಲ್ಲಾ ವಸ್ತುಗಳ ಪ್ರಕಾರವಾಗಿಯೂ ಅವುಗಳ ಸಮಸ್ತ ಸೇವೆಯ ಪ್ರಕಾರವಾಗಿಯೂ ಅವರು ಹೊರುವದಕ್ಕೆ ಕೊಡಲ್ಪಟ್ಟ ಅಪ್ಪಣೆಯ ವಸ್ತುಗಳನ್ನು ನೀವು ಹೆಸರೆಸರಾಗಿ ಎಣಿಸ ಬೇಕು. ಮೆರಾರೀಯ ಕುಮಾರರ ಕುಟುಂಬಗಳ ಸೇವೆಯೂ ಗುಡಾರದಲ್ಲಿ ಅವರು ಮಾಡುವ ಸಮಸ್ತ ಸೇವೆಯೂ ಇದೇ. ಅದು ಯಾಜಕನಾದ ಆರೋನನ ಮಗನಾದ ಈತಾಮಾರನ ಕೈಕೆಳಗೆ ಇರಬೇಕು.
- 2 Peter 1:14 2 ಪೇತ್ರನು 1:14ನಮ್ಮ ಕರ್ತನಾದ ಯೇಸು ಕ್ರಿಸ್ತನು ನನಗೆ ತೋರಿಸಿದ ಪ್ರಕಾರ ನಾನು ಈ ಗುಡಾರವನ್ನು ತೆಗೆದುಹಾಕುವದು ಬೇಗನೆ ಬರುತ್ತದೆಂದು ಬಲ್ಲೆನು.
- Numbers 3:36–37 ಅರಣ್ಯಕಾಂಡ 3:36–37ಇದಲ್ಲದೆ ಮೆರಾರೀಯ ಕುಮಾ ರರ ಅಪ್ಪಣೆಯೂ ಅವರ ವಶದಲ್ಲಿ ಇರುವವುಗಳೂ ಯಾವವೆಂದರೆ: ಗುಡಾರದ ಹಲಗೆಗಳೂ ಅಗುಳಿಗಳೂ ಕಂಬಗಳೂ ಕುಣಿಕೆಗಳೂ ಎಲ್ಲಾ ವಸ್ತುಗಳೂ ಅವರ ಎಲ್ಲಾ ಸೇವೆಯೂ ಅಂಗಳದ ಸುತ್ತಮುತ್ತಲಿರುವ ಕಂಬಗಳೂ ಅವುಗಳ ಕುಣಿಕೆಗಳೂ ಗೂಟಗಳೂ ಹಗ್ಗಗಳೂ ಇವುಗಳೇ.
- Hebrews 9:11 ಇಬ್ರಿಯರಿಗೆ 9:11ಆದರೆ ಕ್ರಿಸ್ತನು ಬರಬೇಕಾಗಿದ್ದ ಮೇಲುಗಳ ಕುರಿತು ಮಹಾಯಾಜಕನಾಗಿ ಬಂದು ಕೈಯಿಂದ ಕಟ್ಟಲ್ಪಡದಂಥ ಅಂದರೆ ಈ ಕಟ್ಟಡಕ್ಕೆ ಸಂಬಂಧವಾ ಗಿರದೆ ಶ್ರೇಷ್ಠವಾಗಿಯೂ ಪರಿಪೂರ್ಣವಾಗಿಯೂ ಇರುವ ಗುಡಾರದ ಮೂಲಕ
- Hebrews 12:28 ಇಬ್ರಿಯರಿಗೆ 12:28ಆದಕಾರಣ ಯಾರೂ ಕದಲಿಸಲಾರದ ರಾಜ್ಯವನ್ನು ಪಡೆಯುವವರಾದ ನಾವು ವಿನಯದಿಂದಲೂ ದೇವರ ಭಯದಿಂದಲೂ ದೇವರನ್ನು ಯೋಗ್ಯವಾಗಿ ಸೇವಿಸು ವಂತೆ ಕೃಪೆಯನ್ನು ಹೊಂದಿಕೊಳ್ಳೋಣ.ಯಾಕಂದರೆ ನಮ್ಮ ದೇವರು ದಹಿಸುವ ಅಗ್ನಿಯಾಗಿದ್ದಾನೆ.