Numbers · chapter 13 · verse 27
Numbers 13:27 in Kannada
ಅವರು ಅವ ನಿಗೆ--ನೀನು ನಮ್ಮನ್ನು ಕಳುಹಿಸಿದ ದೇಶಕ್ಕೆ ಹೋದೆವು. ಅದು ನಿಜವಾಗಿಯೂ ಹಾಲೂ ಜೇನೂ ಹರಿಯುವ ದೇಶವೇ; ಅದರ ಫಲವು ಇದೇ.
Avaru ava nige--neenu nammannu kaluhisida deshakke hodevu. Adu nijavaagiyoo haaloo jenoo hariyuva deshave; adara phalavu ide.
Numbers 13:27 in English
- King James Version (KJV)
- And they told him, and said, We came unto the land whither thou sentest us, and surely it floweth with milk and honey; and this [is] the fruit of it.
- World English Bible (WEB)
- They told him, and said, “We came to the land where you sent us. Surely it flows with milk and honey, and this is its fruit.
- American Standard Version (ASV)
- And they told him, and said, We came unto the land whither thou sentest us; and surely it floweth with milk and honey; and this is the fruit of it.
- Bible in Basic English (BBE)
- And they said, We came to the land where you sent us, and truly it is flowing with milk and honey: and here is some of the produce of it.
- Darby Translation (DBY)
- And they told him, and said, We came to the land to which thou didst send us, and surely it floweth with milk and honey; and this is the fruit of it.
- Webster's Bible (WBS)
- And they told him, and said, We came to the land whither thou sentest us, and surely it floweth with milk and honey; and this [is] the fruit of it.
- Young's Literal Translation (YLT)
- And they recount to him, and say, 'We came in unto the land whither thou hast sent us, and also it [is] flowing with milk and honey — and this [is] its fruit;
Read in context
- 25ಅವರು ದೇಶವನ್ನು ಪಾಳತಿ ನೋಡಿ ನಾಲ್ವತ್ತು ದಿವಸಗಳಾದ ಮೇಲೆ ತಿರಿಗಿ ಬಂದರು.
- 26ಅವರು ಹೋಗಿ ಮೋಶೆ ಆರೋನರ ಬಳಿಗೂ ಇಸ್ರಾಯೇಲ್ ಮಕ್ಕಳ ಸಮಸ್ತ ಸಭೆಯ ಬಳಿಗೂ ಪಾರಾನ್ ಅರಣ್ಯದಲ್ಲಿರುವ ಕಾದೇಶಿಗೂ ಬಂದು ಅವರಿಗೂ ಸಮಸ್ತ ಸಭೆಗೂ ವಿಷಯವನ್ನು ವಿವರಿಸಿ ಆ ದೇಶದ ಫಲಗಳನ್ನು ಅವರಿಗೆ ತೋರಿಸಿದರು.
- 27ಅವರು ಅವ ನಿಗೆ--ನೀನು ನಮ್ಮನ್ನು ಕಳುಹಿಸಿದ ದೇಶಕ್ಕೆ ಹೋದೆವು. ಅದು ನಿಜವಾಗಿಯೂ ಹಾಲೂ ಜೇನೂ ಹರಿಯುವ ದೇಶವೇ; ಅದರ ಫಲವು ಇದೇ.
- 28ಆದರೆ ಆ ದೇಶದಲ್ಲಿ ವಾಸವಾಗಿರುವ ಜನರು ಬಲಿಷ್ಠರು; ಪಟ್ಟಣ ಗಳು ಭದ್ರವಾಗಿಯೂ ಬಹಳ ದೊಡ್ಡವುಗಳಾಗಿಯೂ ಅವೆ. ಮತ್ತು ಅನಾಕನ ಮಕ್ಕಳನ್ನು ಅಲ್ಲಿ ನಾವು ಕಂಡೆವು.
- 29ಅಮಾಲೇಕ್ಯರು ದೇಶದ ದಕ್ಷಿಣದಲ್ಲಿ ವಾಸವಾಗಿದ್ದಾರೆ; ಹಿತ್ತಿಯರು ಯೆಬೂಸಿಯರು ಅಮೋ ರಿಯರು ಪರ್ವತಗಳಲ್ಲಿಯೂ ಕಾನಾನ್ಯರು ಸಮುದ್ರದ ಬಳಿಯಲ್ಲಿಯೂ ಯೊರ್ದನಿನ ತೀರದಲ್ಲಿಯೂ ವಾಸ ವಾಗಿದ್ದಾರೆ ಎಂದು ಹೇಳಿದರು.
Cross references
- Exodus 3:8 ವಿಮೋಚನಕಾಂಡ 3:8ಆದಕಾರಣ ಅವರನ್ನು ಐಗುಪ್ತ್ಯರ ಕೈಯೊ ಳಗಿಂದ ಬಿಡುಗಡೆ ಮಾಡುವದಕ್ಕೂ ಆ ದೇಶದಿಂದ ಬಿಡಿಸಿ ಹಾಲೂ ಜೇನೂ ಹರಿಯುವ ವಿಸ್ತಾರವಾದ ಒಳ್ಳೇ ದೇಶಕ್ಕೆ ಅಂದರೆ ಕಾನಾನ್ಯರು, ಹಿತ್ತಿಯರು, ಅಮೋರಿಯರು, ಪೆರಿಜೀಯರು, ಹಿವ್ವಿಯರು, ಯೆಬೂಸಿಯರು ವಾಸವಾಗಿರುವ ದೇಶಕ್ಕೆ ನಡಿಸಿ ಕೊಂಡು ಹೋಗುವದಕ್ಕೂ ಇಳಿದು ಬಂದಿದ್ದೇನೆ.
- Exodus 13:5 ವಿಮೋಚನಕಾಂಡ 13:5ಆದದ ರಿಂದ ನಿನಗೆ ಕೊಡುತ್ತೇನೆಂದು ನಿನ್ನ ಪಿತೃಗಳಿಗೆ ಪ್ರಮಾಣಮಾಡಿದ ದೇಶಕ್ಕೆ ಅಂದರೆ ಕಾನಾನ್ಯರ ಹಿತ್ತಿಯರ ಅಮೋರಿಯರ ಹಿವ್ವಿಯರ ಯೆಬೂಸಿಯರ ಹಾಲೂ ಜೇನೂ ಹರಿಯುವ ದೇಶಕ್ಕೆ ನಿನ್ನನ್ನು ಕರೆ ತಂದಾಗ ಈ ಆಚರಣೆಯನ್ನು ಈ ತಿಂಗಳಲ್ಲಿ ಆಚರಿಸ ಬೇಕು.
- Exodus 3:17 ವಿಮೋಚನಕಾಂಡ 3:17ಐಗುಪ್ತದಲ್ಲಿ ನಿಮಗುಂಟಾಗಿರುವ ಸಂಕಟದಿಂದ ಬಿಡಿಸಿ ನಿಮ್ಮನ್ನು ಕಾನಾನ್ಯರೂ ಹಿತ್ತಿಯರೂ ಅಮೋರಿಯರೂ ಪೆರಿಜೀಯರೂ ಹಿವ್ವಿಯರೂ ಯೆಬೂಸಿಯರೂ ಇರುವ ಹಾಲೂ ಜೇನೂ ಹರಿಯುವ ದೇಶಕ್ಕೆ ಬರಮಾಡುವೆನೆಂದು ಹೇಳಿದ್ದೇನೆ ಎಂದು ಅವರಿಗೆ ಹೇಳು.
- Exodus 33:3 ವಿಮೋಚನಕಾಂಡ 33:3ಹಾಲೂ ಜೇನೂ ಹರಿಯುವ ದೇಶಕ್ಕೆ ಹೋಗು, ನಾನು ನಿಮ್ಮ ಮಧ್ಯದಲ್ಲಿ ಹೋಗು ವದಿಲ್ಲ. ನೀವು ಬಗ್ಗದ ಕುತ್ತಿಗೆಯುಳ್ಳ ಜನವಾಗಿದ್ದೀರಿ; ಮಾರ್ಗದಲ್ಲಿ ನಿಮ್ಮನ್ನು ನಾನು ಸಂಹರಿಸೇನು ಅಂದನು.
- Deuteronomy 31:20 ಧರ್ಮೋಪದೇಶಕಾಂಡ 31:20ನಾನು ಅವರ ಪಿತೃಗಳಿಗೆ ಪ್ರಮಾಣಮಾಡಿದಂಥ ಹಾಲೂ ಜೇನೂ ಹರಿಯುವಂಥ ದೇಶಕ್ಕೆ ಅವರನ್ನು ತರಲಾಗಿ ಅವರು ತಿಂದು ತೃಪ್ತಿಯಾಗಿ ಕೊಬ್ಬಿದವ ರಾದಾಗ ಅವರು ಅನ್ಯದೇವರುಗಳ ಕಡೆಗೆ ತಿರುಗಿ ಕೊಂಡು ಅವುಗಳನ್ನು ಸೇವಿಸಿ ನನಗೆ ಕೋಪವನ್ನೆಬ್ಬಿಸಿ ನನ್ನ ಒಡಂಬಡಿಕೆಯನ್ನು ವಿಾರುವರು.
- Deuteronomy 26:9 ಧರ್ಮೋಪದೇಶಕಾಂಡ 26:9ನಮ್ಮನ್ನು ಈ ಸ್ಥಳಕ್ಕೆ ಕರಕೊಂಡು ಬಂದು ಹಾಲೂ ಜೇನೂ ಹರಿಯುವ ಈ ದೇಶವನ್ನು ನಮಗೆ ಕೊಟ್ಟಿ ದ್ದಾನೆ.
- Deuteronomy 1:25–33 ಧರ್ಮೋಪದೇಶಕಾಂಡ 1:25–33ದೇಶದ ಫಲದಲ್ಲಿ ಕೆಲವನ್ನು ಕೈಯಲ್ಲಿ ತಕ್ಕೊಂಡು ನಮ್ಮ ಬಳಿಗೆ ತಂದು ನಮಗೆ ಸಮಾಚಾರ ವನ್ನು ತಿಳಿಸಿ--ನಮ್ಮ ದೇವರಾದ ಕರ್ತನು ನಮಗೆ ಕೊಡುವ ದೇಶವು ಒಳ್ಳೇದು ಎಂದು ಹೇಳಿದಿರಿ. ಆದರೆ ನೀವು ಮೇಲೆ ಹೋಗುವದಕ್ಕೆ ಮನಸ್ಸಿಲ್ಲದೆ ನಿಮ್ಮ ದೇವರಾದ ಕರ್ತನ ಅಪ್ಪಣೆಗೆ ತಿರುಗಿಬಿದ್ದು ನಿಮ್ಮ ಗುಡಾರಗಳಲ್ಲಿ ಗುಣುಗುಟ್ಟಿ--ಕರ್ತನು ನಮ್ಮನ್ನು ಹಗೆಮಾಡಿದ್ದರಿಂದ ನಮ್ಮನ್ನು ಅಮೋರಿಯರ ಕೈಗೆ ಒಪ್ಪಿಸಿ ನಾಶಮಾಡುವದಕ್ಕೆ ಐಗುಪ್ತದೇಶದೊಳ ಗಿಂದ ಹೊರಗೆ ಬರಮಾಡಿದ್ದಾನೆ. ನಾವು ಎಲ್ಲಿಗೆ ಹೋಗೋಣ? ನಮ್ಮ ಸಹೋದರರು--ಆ ಜನರು ನಮಗಿಂತ ದೊಡ್ಡವರೂ ಉದ್ದವಾದವರೂ; ಪಟ್ಟಣ ಗಳು ದೊಡ್ಡವುಗಳೂ ಆಕಾಶದ ಎತ್ತರಕ್ಕೂ ಗೋಡೆ ಯುಳ್ಳವುಗಳೂ; ಇದಲ್ಲದೆ ಅನಾಕ್ಯರ ಮಕ್ಕಳನ್ನು ಅಲ್ಲಿ ನೋಡಿದೆವು ಎಂದು ಹೇಳಿ ನಮ್ಮ ಹೃದಯಗಳನ್ನು ಅಧೈರ್ಯಪಡಿಸಿದ್ದಾರೆ ಎಂದು ಹೇಳಿದಿರಿ. ಆಗ ನಾನು ನಿಮಗೆ--ಅಂಜಬೇಡಿರಿ; ಅವರಿಗೆ ಭಯಪಡಬೇಡಿರಿ. ನಿಮ್ಮ ಮುಂದೆ ಹೋಗುವ ನಿಮ್ಮ ದೇವರಾದ ಕರ್ತನು, ಆತನೇ ಐಗುಪ್ತದಲ್ಲಿ ನಿಮ್ಮ ಕಣ್ಣುಗಳ ಮುಂದೆಯೂ ಅರಣ್ಯದಲ್ಲಿಯೂ ನಿಮಗೆ ಮಾಡಿದ ಎಲ್ಲಾದರ ಪ್ರಕಾರ ನಿಮಗೋಸ್ಕರ ಯುದ್ಧಮಾಡುವನು. ಈ ಅರಣ್ಯದಲ್ಲಿ ನಿಮ್ಮ ದೇವ ರಾದ ಕರ್ತನು, ನಿಮ್ಮನ್ನು ತಂದೆ ಮಗನನ್ನು ಹೊತ್ತು ಕೊಳ್ಳುವ ಪ್ರಕಾರ ನೀವು ಹೋದ ಮಾರ್ಗದಲ್ಲೆಲ್ಲಾ ಈ ಸ್ಥಳಕ್ಕೆ ಬರುವ ಪರ್ಯಂತರ ಹೊತ್ತುಕೊಂಡನೆಂದು ನೋಡಿದ್ದೀರಲ್ಲಾ ಅಂದೆನು. ಆದರೆ ಈ ಕಾರ್ಯದಲ್ಲಿ ನೀವು ನಿಮ್ಮ ದೇವರಾದ ಕರ್ತನನ್ನು ನಂಬಲಿಲ್ಲ. ಇಳುಕೊಳ್ಳುವದಕ್ಕೆ ನಿಮಗೆ ಸ್ಥಳವನ್ನು ವಿಚಾರಿಸಲೂ ನೀವು ಹೋಗತಕ್ಕ ಮಾರ್ಗ ವನ್ನು ನಿಮಗೆ ತೋರಿಸಲೂ ರಾತ್ರಿಹೊತ್ತು ಬೆಂಕಿ ಯಲ್ಲಿಯೂ ಹಗಲುಹೊತ್ತು ಮೇಘದಲ್ಲಿಯೂ ಮಾರ್ಗದಲ್ಲಿ ಆತನೇ ನಿಮ್ಮ ಮುಂದೆ ಹೋದನು.
- Deuteronomy 27:3 ಧರ್ಮೋಪದೇಶಕಾಂಡ 27:3ನೀನು ದಾಟಿಹೋದ ಮೇಲೆ ನಿನ್ನ ಪಿತೃಗಳ ದೇವರಾದ ಕರ್ತನು ನಿನಗೆ ಹೇಳಿದ ಪ್ರಕಾರ ನಿನ್ನ ದೇವರಾದ ಕರ್ತನು ನಿನಗೆ ಕೊಡುವಂಥ ಹಾಲೂ ಜೇನೂ ಹರಿಯುವಂಥ ದೇಶಕ್ಕೆ ನೀನು ಬರುವ ಹಾಗೆ ಅವುಗಳ ಮೇಲೆ ಈ ನ್ಯಾಯಪ್ರಮಾಣದ ಮಾತುಗಳನ್ನೆಲ್ಲಾ ಬರೆಯಬೇಕು.
- Deuteronomy 26:11–15 ಧರ್ಮೋಪದೇಶಕಾಂಡ 26:11–15ನಿನ್ನ ದೇವರಾದ ಕರ್ತನು ನಿನಗೂ ನಿನ್ನ ಮನೆಗೂ ಕೊಡುವ ಎಲ್ಲಾ ಒಳ್ಳೆ ವಸ್ತುಗಳಲ್ಲಿ ನೀನೂ ಲೇವಿಯರೂ ನಿನ್ನ ಸಂಗಡ ಇರುವ ಪರವಾಸಿಯೂ ಸಂತೋಷಪಡಬೇಕು. ಹತ್ತನೆಯ ಪಾಲನ್ನು ಕೊಡುವ ವರುಷವಾಗಿರುವ ಮೂರನೆಯ ವರುಷದಲ್ಲಿ ನೀನು ನಿನ್ನ ಎಲ್ಲಾ ಹುಟ್ಟು ವಳಿಯ ಹತ್ತನೇ ಪಾಲನ್ನು ಕೊಟ್ಟು ತೀರಿಸಿದ ಮೇಲೆ ಲೇವಿಗೂ ಪರವಾಸಿಗೂ ದಿಕ್ಕಿಲ್ಲದವನಿಗೂ ವಿಧವೆಗೂ ಕೊಡಬೇಕು; ಅವನು ನಿನ್ನ ಬಾಗಲುಗಳಲ್ಲಿ ತಿಂದು ತೃಪ್ತಿ ಹೊಂದಲಿ. ಆಗ ನೀನು ನಿನ್ನ ದೇವರಾದ ಕರ್ತನ ಮುಂದೆ--ನಾನು ಪರಿಶುದ್ಧವಾದವುಗಳನ್ನು ನನ್ನ ಮನೆಯೊಳಗಿಂದ ತಕ್ಕೊಂಡು ನೀನು ನನಗೆ ಆಜ್ಞಾಪಿಸಿದ ಎಲ್ಲಾ ಆಜ್ಞೆಗಳ ಹಾಗೆಯೇ ಲೇವಿಗೂ ಪರವಾಸಿಗೂ ದಿಕ್ಕಿಲ್ಲದವನಿಗೂ ವಿಧವೆಗೂ ಕೊಟ್ಟಿ ದ್ದೇನೆ; ನಿನ್ನ ಆಜ್ಞೆಗಳನ್ನು ವಿಾರಲಿಲ್ಲ, ಮರೆಯಲಿಲ್ಲ. ದುಃಖದಲ್ಲಿರುವಾಗ ಅದರಲ್ಲಿ ತಿನ್ನಲಿಲ್ಲ, ಅದರಲ್ಲಿ ತಕ್ಕೊಂಡು ಅಶುದ್ಧವಾದದ್ದಕ್ಕೂ ಉಪಯೋಗಿಸಲಿಲ್ಲ. ಅದರಲ್ಲಿ ಸತ್ತವರಿಗೋಸ್ಕರ ಏನೂ ಕೊಡಲಿಲ್ಲ; ನನ್ನ ದೇವರಾದ ಕರ್ತನ ಮಾತನ್ನು ಕೇಳಿದ್ದೇನೆ; ನೀನು ನನಗೆ ಆಜ್ಞಾಪಿಸಿದ್ದೆಲ್ಲಾದರ ಪ್ರಕಾರ ಮಾಡಿದ್ದೇನೆ. ಆಕಾಶದೊಳಗಿಂದ, ನಿನ್ನ ಪರಿಶುದ್ಧ ನಿವಾಸದೊ ಳಗಿಂದ ಕಣ್ಣಿಡು; ನಿನ್ನ ಜನರಾದ ಇಸ್ರಾಯೇಲನ್ನೂ ನೀನು ನಮ್ಮ ಪಿತೃಗಳಿಗೆ ಪ್ರಮಾಣಮಾಡಿದ ಪ್ರಕಾರ ನಮಗೆ ಕೊಟ್ಟಂಥ ಹಾಲೂ ಜೇನೂ ಹರಿಯುವ ದೇಶವಾಗಿರುವಂಥ ದೇಶವನ್ನೂ ಆಶೀರ್ವದಿಸು ಎಂದು ಹೇಳಬೇಕು.
- Numbers 14:8 ಅರಣ್ಯಕಾಂಡ 14:8ಕರ್ತನು ನಮ್ಮಲ್ಲಿ ಇಷ್ಟಪಟ್ಟರೆ ಹಾಲು ಜೇನೂ ಹರಿಯುವ ಆ ದೇಶಕ್ಕೆ ನಮ್ಮನ್ನು ಬರಮಾಡಿ ಅದನ್ನು ನಮಗೆ ಕೊಡುವನು.
- Deuteronomy 11:9 ಧರ್ಮೋಪದೇಶಕಾಂಡ 11:9ಕರ್ತನು ನಿಮ್ಮ ಪಿತೃಗಳಿಗೂ ಅವರ ಸಂತತಿಗೂ ಕೊಡುತ್ತೇನೆಂದು ಪ್ರಮಾಣ ಮಾಡಿದ ಭೂಮಿಯಾಗಿರುವ ಆ ಹಾಲೂ ಜೇನೂ ಹರಿಯುವ ದೇಶದಲ್ಲಿ ನಿಮ್ಮ ದಿನಗಳು ಬಹಳವಾಗುವ ಹಾಗೆಯೂ ನಾನು ಈಹೊತ್ತು ನಿಮಗೆ ಆಜ್ಞಾಪಿಸುವ ಆಜ್ಞೆಯನ್ನೆಲ್ಲಾ ಕೈಕೊಳ್ಳಬೇಕು.
- Deuteronomy 6:3 ಧರ್ಮೋಪದೇಶಕಾಂಡ 6:3ಹೀಗಿರುವದರಿಂದ ಓ ಇಸ್ರಾಯೇಲೇ, ನಿನ್ನ ಪಿತೃಗಳ ದೇವರಾದ ಕರ್ತನು ವಾಗ್ದಾನ ಮಾಡಿದ ಪ್ರಕಾರ ಹಾಲೂಜೇನೂ ಹರಿಯುವ ದೇಶ ದಲ್ಲಿ ನಿನಗೆ ಒಳ್ಳೇದಾಗುವ ಹಾಗೆಯೂ ನೀವು ಬಹಳವಾಗಿ ಹೆಚ್ಚುವ ಹಾಗೆಯೂ ಲಕ್ಷ್ಯವಿಟ್ಟು ಕೇಳಿ ಅನುಸರಿಸಬೇಕು.