Numbers · chapter 15 · verse 30
Numbers 15:30 in Kannada
ಆದರೆ ಯಾವನಾದರೂ ಅಂದರೆ ದೇಶದಲ್ಲಿ ಹುಟ್ಟಿದವನಾಗಲಿ ಪರಕೀಯನಾಗಲಿ ಹಟದಿಂದ ಪಾಪಮಾಡಿದರೆ ಅವನು ಕರ್ತನನ್ನು ನಿಂದಿಸುತ್ತಾನೆ. ಆ ಮನುಷ್ಯನು ತನ್ನ ಜನರ ಮಧ್ಯದಿಂದ ತೆಗೆದುಹಾಕ ಲ್ಪಡಬೇಕು.
Aadare yaavanaadaroo andare deshadalli huttidavanaagali parakeeyanaagali hatadinda paapamaadidare avanu kartanannu nindisuttaane. Aa manushyanu tanna janara madhyadinda tegeduhaaka lpadabeku.
Numbers 15:30 in English
- King James Version (KJV)
- But the soul that doeth [ought] presumptuously, [whether he be] born in the land, or a stranger, the same reproacheth the LORD; and that soul shall be cut off from among his people.
- World English Bible (WEB)
- “‘But the soul who does anything with a high hand, whether he is native-born or a foreigner, blasphemes the LORD. That soul shall be cut off from among his people.
- American Standard Version (ASV)
- But the soul that doeth aught with a high hand, whether he be home-born or a sojourner, the same blasphemeth Jehovah; and that soul shall be cut off from among his people.
- Bible in Basic English (BBE)
- But the person who does wrong in the pride of his heart, if he is one of you or of another nation by birth, is acting without respect for the Lord, and will be cut off from his people.
- Darby Translation (DBY)
- But the soul that doeth ought with a high hand, whether born in the land, or a stranger, he reproacheth Jehovah; and that soul shall be cut off from among his people.
- Webster's Bible (WBS)
- But the soul that doeth [aught] presumptuously, [whether he be] born in the land, or a stranger, the same reproacheth the LORD; and that soul shall be cut off from among his people.
- Young's Literal Translation (YLT)
- 'And the person who doth [aught] with a high hand — of the native or of the sojourner — Jehovah he is reviling, and that person hath been cut off from the midst of his people;
Read in context
- 28ತಿಳಿಯದೆ ಪಾಪಮಾಡಿ ದಂಥ ಆ ಪಾಪಮಾಡಿದವನಿಗೋಸ್ಕರ ಯಾಜಕನು ಕರ್ತನ ಮುಂದೆ ಪ್ರಾಯಶ್ಚಿತ್ತಮಾಡಬೇಕು. ಅದು ಪರಿಹಾರವಾಗುವ ಹಾಗೆ ಅದಕ್ಕೋಸ್ಕರ ಪ್ರಾಯಶ್ಚಿತ್ತ ಮಾಡಬೇಕು.
- 29ಇಸ್ರಾಯೇಲ್ ಮಕ್ಕಳಲ್ಲಿ ಹುಟ್ಟಿದವ ರಿಗೂ ಅವರಲ್ಲಿ ಪ್ರವಾಸಿಯಾಗಿರುವ ಪರಕೀಯನಿಗೂ ನಿಮ್ಮೆಲ್ಲರಿಗೂ ತಿಳಿಯದೆ ಪಾಪಮಾಡಿದವನಿಗೂ ಒಂದೇ ಆಜ್ಞೆ ಇರಬೇಕು.
- 30ಆದರೆ ಯಾವನಾದರೂ ಅಂದರೆ ದೇಶದಲ್ಲಿ ಹುಟ್ಟಿದವನಾಗಲಿ ಪರಕೀಯನಾಗಲಿ ಹಟದಿಂದ ಪಾಪಮಾಡಿದರೆ ಅವನು ಕರ್ತನನ್ನು ನಿಂದಿಸುತ್ತಾನೆ. ಆ ಮನುಷ್ಯನು ತನ್ನ ಜನರ ಮಧ್ಯದಿಂದ ತೆಗೆದುಹಾಕ ಲ್ಪಡಬೇಕು.
- 31ಅವನು ಕರ್ತನ ವಾಕ್ಯವನ್ನು ಅವಮಾನ ಮಾಡಿ ಆತನ ಆಜ್ಞೆಗಳನ್ನು ವಿಾರಿದ್ದರಿಂದ ಆ ಮನು ಷ್ಯನು ನಿಶ್ಚಯವಾಗಿ ತೆಗೆದುಹಾಕಲ್ಪಡಬೇಕು. ಅವನ ಅಕ್ರಮವು ಅವನ ಮೇಲಿರುವದು ಎಂದು ಹೇಳಿದನು.
- 32ಇಸ್ರಾಯೇಲ್ ಮಕ್ಕಳು ಅರಣ್ಯದಲ್ಲಿದ್ದಾಗ ಸಬ್ಬತ್ ದಿನದಲ್ಲಿ ಕಟ್ಟಿಗೆಗಳನ್ನು ಕೂಡಿಸುವ ಮನುಷ್ಯನನ್ನು ಕಂಡರು.
Cross references
- Hebrews 10:26 ಇಬ್ರಿಯರಿಗೆ 10:26ನಾವು ಸತ್ಯದ ಪರಿಜ್ಞಾನವನ್ನು ಹೊಂದಿದ ಮೇಲೆ ಬೇಕೆಂದು ಪಾಪಮಾಡಿದರೆ ಪಾಪಗಳಿಗಾಗಿ ಇನ್ನಾವ ಯಜ್ಞವೂ ಉಳಿದಿರುವದಿಲ್ಲ.
- Psalm 19:13 ಕೀರ್ತನೆಗಳು 19:13ಗರ್ವದ ಪಾಪಗಳಿಂದ ನಿನ್ನ ಸೇವಕನನ್ನು ದೂರ ಮಾಡು. ಅವು ನನ್ನನ್ನು ಆಳದೆ ಇರಲಿ; ಆಗ ನಾನು ಸಂಪೂರ್ಣನಾಗಿದ್ದು ಮಹಾದ್ರೋಹದಿಂದ ನಿರಪರಾ ಧಿಯಾಗುವೆನು.ನನ್ನ ಬಲವೂ ನನ್ನ ವಿಮೋಚ ಕನೂ ಆಗಿರುವ ಕರ್ತನೇ, ನನ್ನ ಬಾಯಿಯ ಮಾತು ಗಳೂ ನನ್ನ ಹೃದಯದ ಧ್ಯಾನವೂ ನಿನ್ನ ಮುಂದೆ ಮೆಚ್ಚಿಕೆಯಾಗಿರಲಿ.
- Deuteronomy 1:43 ಧರ್ಮೋಪದೇಶಕಾಂಡ 1:43ಇದನ್ನು ನಾನು ನಿಮಗೆ ಹೇಳಲಾಗಿ ನೀವು ಕೇಳದೆ ಕರ್ತನ ಅಪ್ಪಣೆಗೆ ತಿರುಗಿಬಿದ್ದು ವ್ಯರ್ಥ ಧೈರ್ಯಮಾಡಿ ಬೆಟ್ಟವನ್ನೇರಿದಿರಿ.
- Deuteronomy 29:19–20 ಧರ್ಮೋಪದೇಶಕಾಂಡ 29:19–20ಈ ಶಾಪದ ಮಾತುಗಳನ್ನು ಕೇಳಿ ಅವನು--ನನ್ನ ಹೃದಯದ ಕಲ್ಪನೆ ಯಲ್ಲಿ ನಡೆದುಕೊಂಡು ದಾಹಕ್ಕೆ ಅಮಲನ್ನು ಕುಡಿಸಿ ದರೂ ನನಗೆ ಸಮಾಧಾನವಿರುವದೆಂದು ಹೇಳಿಕೊಂಡು ತನ್ನ ಹೃದಯದಲ್ಲಿ ತನ್ನನ್ನು ಆಶೀರ್ವದಿಸಿಕೊಳ್ಳುವವ ನಾದರೆ ಅಂಥವನನ್ನು ಕರ್ತನು ಉಳಿಸುವದಿಲ್ಲ; ಆಗಲೇ ಕರ್ತನ ಕೋಪವೂ ರೋಷವೂ ಆ ಮನುಷ್ಯನ ಮೇಲೆ ಹೊಗೆ ಹಾಯುವವು. ಈ ಪುಸ್ತಕದಲ್ಲಿ ಬರೆದಿ ರುವ ಶಾಪವೆಲ್ಲಾ ಅವನ ಮೇಲೆ ನೆಲೆಯಾಗುವದು; ಕರ್ತನು ಅವನ ಹೆಸರನ್ನು ಆಕಾಶದ ಕೆಳಗಿನಿಂದ ಅಳಿಸಿಬಿಡುವನು.
- Hebrews 10:29 ಇಬ್ರಿಯರಿಗೆ 10:29ಯಾವನು ದೇವ ಕುಮಾರನನ್ನು ತುಳಿದು ತನ್ನನ್ನು ಪವಿತ್ರಮಾಡಿದಂಥ ಒಡಂಬಡಿಕೆಯ ರಕ್ತವನ್ನು ಅಶುದ್ಧವೆಂದೆಣಿಸಿ ಕೃಪೆಯ ಆತ್ಮನನ್ನು ತಿರಸ್ಕಾರ ಮಾಡಿದ್ದಾನೋ ಅವನು ಇನ್ನೂ ಎಷ್ಟೋ ಕ್ರೂರವಾದ ದಂಡನೆಗೆ ಪಾತ್ರನಾಗಬೇಕೆಂಬ ದನ್ನು ಯೋಚಿಸಿರಿ.
- Deuteronomy 17:12–13 ಧರ್ಮೋಪದೇಶಕಾಂಡ 17:12–13ಅಲ್ಲಿ ನಿನ್ನ ದೇವ ರಾದ ಕರ್ತನಿಗೆ ಸೇವೆಮಾಡುವದಕ್ಕೆ ನಿಂತ ಯಾಜಕನ ಮಾತಾದರೂ ನ್ಯಾಯಾಧಿಪತಿಯ ಮಾತಾದರೂ ಕೇಳದೆ ಅಹಂಕಾರದಿಂದ ಏನಾದರೂ ಮಾಡುವ ದಾದರೆ ಆ ಮನುಷ್ಯನು ಸಾಯಬೇಕು; ಹೀಗೆ ಕೆಟ್ಟದ್ದನ್ನು ಇಸ್ರಾಯೇಲಿನಿಂದ ತೆಗೆದುಹಾಕಬೇಕು; ಜನರೆಲ್ಲಾ ಕೇಳಿ ಭಯಪಟ್ಟು ಇನ್ನು ಮೇಲೆ ಅಹಂಕಾರದಿಂದ ಏನೂ ಮಾಡುವದಿಲ್ಲ.
- Numbers 14:40–44 ಅರಣ್ಯಕಾಂಡ 14:40–44ಮರುದಿವಸ ಬೆಳಿಗ್ಗೆ ಅವರು ಎದ್ದು ಬೆಟ್ಟದ ತುದಿಯ ಮೇಲಕ್ಕೆ ಏರಿ--ಇಗೋ, ಕರ್ತನು ವಾಗ್ದಾನ ಮಾಡಿದ ಸ್ಥಳಕ್ಕೆ ಏರಿ ಹೋಗುವದಕ್ಕೆ ಇದ್ದೇವೆ; ಯಾಕಂದರೆ ನಾವು ಪಾಪಮಾಡಿದ್ದೇವೆ ಅಂದರು. ಆಗ ಮೋಶೆಯು--ನೀವು ಈ ಪ್ರಕಾರ ಯಾಕೆ ಕರ್ತನ ಆಜ್ಞೆಯನ್ನು ವಿಾರುತ್ತೀರಿ? ಅದು ಸಫಲವಾಗು ವದಿಲ್ಲ. ನಿಮ್ಮ ಶತ್ರುಗಳು ನಿಮ್ಮನ್ನು ಹೊಡೆಯದ ಹಾಗೆ ಏರಿ ಹೋಗಬೇಡಿರಿ. ಯಾಕಂದರೆ ಕರ್ತನು ನಿಮ್ಮ ಸಂಗಡ ಇರುವದಿಲ್ಲ. ಅಮಾಲೇಕ್ಯರೂ ಕಾನಾನ್ಯರೂ ನಿಮ್ಮ ಎದುರಿನಲ್ಲಿರುವದರಿಂದ ನೀವು ಅವರ ಕತ್ತಿಯಿಂದ ಬೀಳುವಿರಿ. ನೀವು ಕರ್ತನ ಕಡೆ ಯಿಂದ ತಿರುಗಿದ ಕಾರಣ ಆತನು ನಿಮ್ಮ ಸಂಗಡ ಇರುವದಿಲ್ಲ ಎಂದು ಹೇಳಿದನು. ಆದರೆ ಅವರು ಹಟಮಾಡಿ ಬೆಟ್ಟದ ತುದಿಯಮೇಲೆ ಏರಿಹೋದರು. ಆದಾಗ್ಯೂ ಕರ್ತನ ಒಡಂಬಡಿಕೆಯ ಮಂಜೂಷವೂ ಮೋಶೆಯೂ ಪಾಳೆಯದಿಂದ ಹೊರಡಲಿಲ್ಲ.ಆಗ ಆ ಬೆಟ್ಟದಲ್ಲಿ ವಾಸವಾಗಿದ್ದ ಅಮಾಲೇಕ್ಯರೂ ಕಾನಾ ನ್ಯರೂ ಇಳಿದು ಅವರನ್ನು ಹೊಡೆದು ಹೊರ್ಮಾದ ವರೆಗೆ ಅಟ್ಟಿಬಿಟ್ಟರು.
- Matthew 12:32 ಮತ್ತಾಯನು 12:32ಮನುಷ್ಯ ಕುಮಾರನಿಗೆ ವಿರೋಧವಾಗಿ ಯಾವನಾದರೂ ಮಾತನಾಡಿದರೆ ಅದು ಅವನಿಗೆ ಕ್ಷಮಿಸಲ್ಪಡುವದು; ಆದರೆ ಪರಿಶುದ್ಧಾ ತ್ಮನಿಗೆ ವಿರೋಧವಾಗಿ ಯಾವನಾದರೂ ಮಾತನಾ ಡಿದರೆ ಈ ಲೋಕದಲ್ಲಿಯಾಗಲೀ ಇಲ್ಲವೆ ಬರುವ ಲೋಕದಲ್ಲಿಯಾಗಲೀ ಅದು ಅವನಿಗೆ ಕ್ಷಮಿಸಲ್ಪಡು ವದಿಲ್ಲ.
- Psalm 74:22 ಕೀರ್ತನೆಗಳು 74:22ಓ ದೇವರೇ, ಏಳು; ನಿನ್ನ ಸ್ವಂತ ವ್ಯಾಜ್ಯವನ್ನು ವಿವಾದಿಸು; ದಿನವೆಲ್ಲಾ ಮೂರ್ಖನು ನಿನ್ನನ್ನು ಹೇಗೆ ನಿಂದಿಸುತ್ತಾನೆಂದು ಜ್ಞಾಪ ಕಮಾಡಿಕೋ.ನಿನ್ನ ವೈರಿಗಳ ಸ್ವರವನ್ನು ಮರೆತು ಬಿಡಬೇಡ; ನಿನ್ನ ವಿರೋಧಿಗಳ ಘೋಷವು ಯಾವಾ ಗಲೂ ಏಳುತ್ತದೆ.
- Psalm 74:18 ಕೀರ್ತನೆಗಳು 74:18ಓ ಕರ್ತನೇ, ವೈರಿಯು ನಿಂದಿಸಿ ಮೂರ್ಖರು ನಿನ್ನ ನಾಮವನ್ನು ದೂಷಿಸಿದ್ದನ್ನು ಜ್ಞಾಪಿಸಿಕೋ.
- Numbers 9:13 ಅರಣ್ಯಕಾಂಡ 9:13ಆದರೆ ಶುದ್ಧನಾದ ಮನುಷ್ಯನೂ ಪ್ರಯಾಣಮಾಡದವನೂ ಪಸ್ಕವನ್ನು ಆಚರಿಸುವದಕ್ಕೆ ತಪ್ಪಿದರೆ ಅವನನ್ನು ಅವನ ಜನರೊಳಗಿಂದ ತೆಗೆದುಹಾಕಬೇಕು; ಅವನು ಕರ್ತನ ಅರ್ಪಣೆಯನ್ನು ಅದರ ಸಮಯದಲ್ಲಿ ತಾರದಿದ್ದ ಕಾರಣ ಆ ಮನುಷ್ಯನು ತನ್ನ ಪಾಪವನ್ನು ಹೊತ್ತುಕೊಳ್ಳಬೇಕು.
- Psalm 79:12 ಕೀರ್ತನೆಗಳು 79:12ಓ ಕರ್ತನೇ, ಅವರು ನಿನ್ನನ್ನು ನಿಂದಿಸಿದ ನಿಂದೆ ಯನ್ನು ನಮ್ಮ ನೆರೆಯವರಿಗೆ ಏಳರಷ್ಟು ಅವರ ಉಡಿ ಯಲ್ಲಿ ತಿರಿಗಿ ಹಾಕು.ಆಗ ನಿನ್ನ ಜನರೂ ನಿನ್ನ ಹುಲ್ಲುಗಾವಲಿನ ಕುರಿಗಳೂ ಆಗಿರುವ ನಾವು ಎಂದೆಂದಿಗೂ ನಿನ್ನನ್ನು ಕೊಂಡಾಡಿ ತಲತಲಾಂತರಕ್ಕೂ ನಿನ್ನ ಸ್ತೋತ್ರವನ್ನು ಸಾರುವೆವು.