Numbers · chapter 16 · verse 28
Numbers 16:28 in Kannada
ಆಗ ಮೋಶೆಯು--ಈ ಕಾರ್ಯಗಳನ್ನೆಲ್ಲಾ ಮಾಡುವದಕ್ಕೆ ಕರ್ತನು ನನ್ನನ್ನು ಕಳುಹಿಸಿದ್ದಾನೆ; ಅವು ಗಳು ನನ್ನ ಸ್ವಂತ ಆಲೋಚನೆಗಳಂತೆ ಮಾಡಲಿಲ್ಲವೆಂದು ನೀವು ಇದರಿಂದ ತಿಳುಕೊಳ್ಳುವಿರಿ.
Aaga mosheyu--ee kaaryagalannellaa maaduvadakke kartanu nannannu kaluhisiddaane; avu galu nanna svanta aalochanegalante maadalillavendu neevu idarinda tilukolluviri.
Numbers 16:28 in English
- King James Version (KJV)
- And Moses said, Hereby ye shall know that the LORD hath sent me to do all these works; for [I have] not [done them] of mine own mind.
- World English Bible (WEB)
- Moses said, “Hereby you shall know that the LORD has sent me to do all these works; for they are not from my own mind.
- American Standard Version (ASV)
- And Moses said, Hereby ye shall know that Jehovah hath sent me to do all these works; for [I have] not [done them] of mine own mind.
- Bible in Basic English (BBE)
- And Moses said, Now you will see that the Lord has sent me to do all these works, and I have not done them of myself.
- Darby Translation (DBY)
- And Moses said, Hereby ye shall know that Jehovah has sent me to do all these deeds, for they are not out of my own heart:
- Webster's Bible (WBS)
- And Moses said, by this ye shall know that the LORD hath sent me to do all these works: for [I have] not [done them] of my own mind.
- Young's Literal Translation (YLT)
- And Moses saith, 'By this ye do know that Jehovah hath sent me to do all these works, that [they are] not from my own heart;
Read in context
- 26ಅವನು ಸಭೆಗೆ--ನೀವು ಈ ದುಷ್ಟ ಮನುಷ್ಯರ ಡೇರೆಗಳ ಬಳಿಯಿಂದ ತೊಲಗಿ ಹೋಗಿರಿ. ನೀವು ಅವರ ಎಲ್ಲಾ ಪಾಪಗಳಲ್ಲಿ ನಾಶವಾಗ ದಂತೆ ಅವರಿಗಿರುವ ಯಾವದನ್ನು ಮುಟ್ಟಬೇಡಿರಿ ಅಂದನು.
- 27ಆಗ ಅವರು ಕೋರಹ ದಾತಾನ್ ಅಬೀರಾಮರ ಡೇರೆಗಳ ಸುತ್ತಲಿಂದ ದೂರಹೋದರು. ದಾತಾನ್ ಅಬೀರಾಮರೂ ಅವರ ತಮ್ಮ ಹೆಂಡತಿಯರೂ ಕುಮಾ ರರೂ ಚಿಕ್ಕ ಮಕ್ಕಳೂ ಹೊರಟು ತಮ್ಮ ಗುಡಾರಗಳ ಬಾಗಲುಗಳಲ್ಲಿ ನಿಂತುಕೊಂಡರು.
- 28ಆಗ ಮೋಶೆಯು--ಈ ಕಾರ್ಯಗಳನ್ನೆಲ್ಲಾ ಮಾಡುವದಕ್ಕೆ ಕರ್ತನು ನನ್ನನ್ನು ಕಳುಹಿಸಿದ್ದಾನೆ; ಅವು ಗಳು ನನ್ನ ಸ್ವಂತ ಆಲೋಚನೆಗಳಂತೆ ಮಾಡಲಿಲ್ಲವೆಂದು ನೀವು ಇದರಿಂದ ತಿಳುಕೊಳ್ಳುವಿರಿ.
- 29ಇವರು ಎಲ್ಲಾ ಮನುಷ್ಯರ ಹಾಗೆ ಸತ್ತರೆ ಇಲ್ಲವೆ ಎಲ್ಲಾ ಮನುಷ್ಯರ ಹಾಗೆ ಶಿಕ್ಷೆ ಇವರಿಗೆ ಪ್ರಾಪ್ತವಾದರೆ ಕರ್ತನು ನನ್ನನ್ನು ಕಳುಹಿಸಲಿಲ್ಲ.
- 30ಆದರೆ ಕರ್ತನು ಹೊಸದನ್ನು ಮಾಡಿ ಭೂಮಿಯು ತನ್ನ ಬಾಯಿತೆರೆದು ಇವರನ್ನೂ ಇವರಿಗಿರು ವದೆಲ್ಲವನ್ನೂ ನುಂಗಿ ಅವರು ತೀವ್ರವಾಗಿ ಪಾತಾಳಕ್ಕೆ ಇಳಿಯುವವರಾದರೆ ಈ ಮನುಷ್ಯರು ಕರ್ತನನ್ನು ರೇಗಿಸಿದ್ದಾರೆಂದು ನೀವು ತಿಳುಕೊಳ್ಳುವಿರಿ ಅಂದನು.
Cross references
- Exodus 3:12 ವಿಮೋಚನಕಾಂಡ 3:12ಆಗ ಆತನು--ನಿಶ್ಚಯವಾಗಿ ನಾನು ನಿನ್ನ ಸಂಗಡ ಇರುವೆನು; ನಾನು ನಿನ್ನನ್ನು ಕಳುಹಿಸುತ್ತೇನೆಂಬದಕ್ಕೆ ಇದೇ ನಿನಗೆ ಗುರುತು. ನೀನು ಜನರನ್ನು ಐಗುಪ್ತದೊಳಗಿಂದ ಹೊರಗೆ ತಂದ ತರುವಾಯ ನೀವು ಈ ಬೆಟ್ಟದಮೇಲೆ ದೇವರನ್ನು ಆರಾಧಿಸುವಿರಿ ಅಂದನು.
- John 6:38 ಯೋಹಾನನು 6:38ನಾನು ನನ್ನ ಸ್ವಂತ ಚಿತ್ತವನ್ನಲ್ಲ; ಆದರೆ ನನ್ನನ್ನು ಕಳುಹಿಸಿದಾತನ ಚಿತ್ತವನ್ನೇ ಮಾಡುವದಕ್ಕೆ ಪರಲೋಕದಿಂದ ಬಂದೆನು.
- Ezekiel 13:17 ಯೆಹೆಜ್ಕೇಲನು 13:17ಇದೇ ರೀತಿ ಮನುಷ್ಯಪುತ್ರನೇ, ತಮ್ಮ ಹೃದಯ ದೊಳಗಿಂದ ಪ್ರವಾದಿಸುವ ನಿನ್ನ ಜನರ ಕುಮಾರ್ತೆ ಯರಿಗೆ ವಿರೋಧವಾಗಿ ನಿನ್ನ ಮುಖವನ್ನು ಮಾಡಿ, ನೀನು ಅವರಿಗೆ ಪ್ರವಾದಿಸಿ ಹೀಗೆ ಹೇಳು ಎಂದು ದೇವರಾದ ಕರ್ತನು ಹೇಳುತ್ತಾನೆ--
- John 5:36 ಯೋಹಾನನು 5:36ಆದರೆ ಯೋಹಾನನಿಗಿಂತಲೂ ಹೆಚ್ಚಿನ ಸಾಕ್ಷಿ ನನಗುಂಟು; ಹೇಗೆಂದರೆ ಪೂರೈಸುವದಕ್ಕಾಗಿ ತಂದೆಯು ನನಗೆ ಕೊಟ್ಟ ಕೆಲಸಗಳು ಅಂದರೆ ನಾನು ಮಾಡುತ್ತಿರುವ ಈ ಕೆಲಸಗಳೇ ತಂದೆಯು ನನ್ನನ್ನು ಕಳುಹಿಸಿದ್ದಾನೆಂದು ನನ್ನ ವಿಷಯವಾಗಿ ಸಾಕ್ಷಿ ಕೊಡುತ್ತವೆ.
- Jeremiah 23:16 ಯೆರೆಮೀಯ 23:16ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ --ನಿಮಗೆ ಪ್ರವಾದಿಸುವ ಪ್ರವಾದಿಗಳ ವಾಕ್ಯಕ್ಕೆ ಕಿವಿ ಗೊಡಬೇಡಿರಿ; ಅವರು ನಿಮ್ಮನ್ನು ನಿಷ್ಫಲಮಾಡುತ್ತಾರೆ; ಕರ್ತನ ಬಾಯಿಂದಲ್ಲ, ಸ್ವಂತ ಹೃದಯದಿಂದ ದರ್ಶನ ವನ್ನು ಹೇಳುತ್ತಾರೆ.
- John 14:11 ಯೋಹಾನನು 14:11ನಾನು ತಂದೆ ಯಲ್ಲಿದ್ದೇನೆಂತಲೂ ತಂದೆಯು ನನ್ನಲ್ಲಿದ್ದಾನೆಂತಲೂ ನನ್ನನ್ನು ನಂಬಿರಿ. ಇಲ್ಲದಿದ್ದರೆ ಆ ಕ್ರಿಯೆಗಳ ನಿಮಿತ್ತವಾದರೂ ನನ್ನನ್ನು ನಂಬಿರಿ.
- John 11:42 ಯೋಹಾನನು 11:42ನೀನು ನನ್ನ ಪ್ರಾರ್ಥನೆಯನ್ನು ಯಾವಾಗಲೂ ಕೇಳುತ್ತೀ ಎಂದು ನಾನು ಬಲ್ಲೆನು. ಆದರೆ ನನ್ನ ಹತ್ತಿರದಲ್ಲಿ ನಿಂತಿರುವ ಜನರ ನಿಮಿತ್ತವಾಗಿ ನೀನು ನನ್ನನ್ನು ಕಳುಹಿಸಿದ್ದೀ ಎಂದು ಅವರು ನಂಬುವಂತೆ ನಾನು ಅದನ್ನು ಹೇಳಿದೆನು ಅಂದನು.
- Exodus 4:1–9 ವಿಮೋಚನಕಾಂಡ 4:1–9ಮೋಶೆಯು ಪ್ರತ್ಯುತ್ತರವಾಗಿ--ಆದರೆ ಇಗೋ, ಅವರು ನನ್ನನ್ನು ನಂಬುವದಿಲ್ಲ, ನನ್ನ ಮಾತನ್ನು ಕೇಳುವದೂ ಇಲ್ಲ. ಅವರು--ಕರ್ತನು ನಿನಗೆ ಕಾಣಿಸಿಕೊಳ್ಳಲಿಲ್ಲ ಎಂದು ಹೇಳುವರು ಅಂದನು. ಕರ್ತನು ಅವನಿಗೆ--ನಿನ್ನ ಕೈಯಲ್ಲಿರುವದೇನು ಅಂದದ್ದಕ್ಕೆ ಅವನು--ಕೋಲು ಅಂದನು. ಕರ್ತನು ಅವನಿಗೆ--ಅದನ್ನು ನೆಲದ ಮೇಲೆ ಬಿಸಾಡು ಅಂದಾಗ ಅವನು ಅದನ್ನು ಬಿಸಾಡಿದನು; ಆಗ ಅದು ಸರ್ಪ ವಾಯಿತು. ಮೋಶೆಯು ಅಲ್ಲಿಂದ ಓಡಿಹೋದನು. ಕರ್ತನು ಮೋಶೆಗೆ--ನಿನ್ನ ಕೈಚಾಚಿ ಅದರ ಬಾಲ ವನ್ನು ಹಿಡಿ ಅಂದಾಗ ಅವನು ಕೈಚಾಚಿ ಅದನ್ನು ಹಿಡಿದ ಕೂಡಲೆ ಅದು ಅವನ ಕೈಯಲ್ಲಿ ಕೋಲಾಯಿತು. ಇದರಿಂದ ಅವರು ತಮ್ಮ ಪಿತೃಗಳಾದ ಅಬ್ರಹಾಮ್ ಇಸಾಕ್ ಯಾಕೋಬ್ ಇವರ ಕರ್ತನಾದ ದೇವರು ನಿನಗೆ ಕಾಣಿಸಿದ್ದನ್ನು ಅವರು ನಂಬುವರು ಅಂದನು. ಇದಲ್ಲದೆ ಕರ್ತನು ಅವನ ಸಂಗಡ ಇನ್ನೂ ಮಾತನಾಡಿ--ನಿನ್ನ ಕೈಯನ್ನು ಉಡಿಯಲ್ಲಿ ಹಾಕು ಅಂದಾಗ ಅವನು ತನ್ನ ಕೈಯನ್ನು ಉಡಿಯಲ್ಲಿ ಹಾಕಿ ಹೊರಗೆ ತೆಗೆಯಲು ಇಗೋ, ಅವನ ಕೈ ಕುಷ್ಠದಿಂದ ಹಿಮದಂತೆ ಆಗಿತ್ತು. ಆತನು ಅವನಿಗೆ--ನಿನ್ನ ಕೈಯನ್ನು ಉಡಿಯಲ್ಲಿ ಹಾಕು ಅಂದಾಗ ಅವನು ತನ್ನ ಕೈಯನ್ನು ಉಡಿಯಲ್ಲಿ ಹಾಕಿ ಉಡಿಯಿಂದ ಹೊರಗೆ ತೆಗೆಯಲು ಇಗೋ, ಅದು ಅವನ ಬೇರೆ ದೇಹದಂತಾಗಿತ್ತು. ಅವರು ನಿನ್ನನ್ನು ನಂಬದೆ ಮೊದಲನೆಯ ಮಹ ತ್ಕಾರ್ಯವನ್ನು ತಿರಸ್ಕರಿಸಿದರೂ ಎರಡನೆಯದನ್ನು ಲಕ್ಷ್ಯವಿಟ್ಟು ನಂಬುವರು. ಆ ಎರಡೂ ಮಹತ್ಕಾರ್ಯ ಗಳನ್ನು ಅವರು ನಂಬದೆಯೂ ನಿನ್ನ ಮಾತನ್ನು ಕೇಳ ದೆಯೂ ಹೋದರೆ ನದಿಯ ನೀರನ್ನು ತೆಗೆದು ಒಣಗಿದ ನೆಲದಮೇಲೆ ಸುರಿಯಬೇಕು. ಆಗ ನೀನು ನದಿಯಿಂದ ತೆಗೆದ ನೀರು ಒಣಗಿದ ನೆಲದ ಮೇಲೆ ರಕ್ತವಾಗುವದು ಅಂದನು.
- John 5:30 ಯೋಹಾನನು 5:30ನನ್ನಷ್ಟಕ್ಕೆ ನಾನೇ ಏನೂ ಮಾಡಲಾರೆನು; ನಾನು ಕೇಳುವಂತೆಯೇ ತೀರ್ಪು ಮಾಡುತ್ತೇನೆ ಮತ್ತು ನನ್ನ ತೀರ್ಪು ನ್ಯಾಯ ವಾದದ್ದು; ಯಾಕಂದರೆ ನಾನು ನನ್ನ ಸ್ವಂತಚಿತ್ತವನ್ನಲ್ಲ, ಆದರೆ ನನ್ನನ್ನು ಕಳುಹಿಸಿದ ತಂದೆಯ ಚಿತ್ತವು ನೆರವೇರ ಬೇಕೆಂದು ಅಪೆಕ್ಷಿಸುತ್ತೇನೆ.
- Zechariah 2:9 ಜೆಕರ್ಯ 2:9ಇಗೋ, ನಾನು ನನ್ನ ಕೈಯನ್ನು ಅವರ ಮೇಲೆ ಜಾಡಿಸುತ್ತೇನೆ; ಆಗ ಅವರು ತಮ್ಮ ದಾಸರಿಗೆ ಕೊಳ್ಳೆಯಾಗುವರು; ಸೈನ್ಯಗಳ ಕರ್ತನು ನನ್ನನ್ನು ಕಳುಹಿಸಿದನೆಂದು ನೀವು ತಿಳಿಯುವಿರಿ.
- Deuteronomy 18:22 ಧರ್ಮೋಪದೇಶಕಾಂಡ 18:22ಪ್ರವಾದಿಯು ಕರ್ತನ ಹೆಸರಿನಲ್ಲಿ ಹೇಳಿದ ಮೇಲೆ ಆಗದೆ ಇಲ್ಲವೆ ಸಂಭವಿಸದೆ ಹೋದರೆ ಅದೇ ಕರ್ತನು ಹೇಳದಂಥ, ಮಾತನಾಡದಂಥ ಕಾರ್ಯವು; ಪ್ರವಾದಿಯು ಅಹಂಕಾರದಿಂದ ಅದನ್ನು ಮಾತನಾಡಿದ್ದರೆ ಅವನಿಗೆ ಭಯಪಡಬಾರದು.
- 1 Kings 18:36 1 ಅರಸುಗಳು 18:36ಸಾಯಂಕಾಲದ ಬಲಿಯನ್ನು ಅರ್ಪಿಸುವ ವೇಳೆ ಯಲ್ಲಿ ಪ್ರವಾದಿಯಾದ ಎಲೀಯನು ಸವಿಾಪಕ್ಕೆ ಬಂದು--ಅಬ್ರಹಾಮನಿಗೂ ಇಸಾಕನಿಗೂ ಇಸ್ರಾ ಯೇಲಿಗೂ ದೇವರಾದ ಕರ್ತನೇ, ಇಸ್ರಾಯೇಲಿನಲ್ಲಿ ನೀನು ದೇವರೆಂದೂ ನಾನು ನಿನ್ನ ಸೇವಕನೆಂದೂ ನಾನು ಈ ಕಾರ್ಯಗಳನ್ನೆಲ್ಲಾ ನಿನ್ನ ಮಾತಿನ ಹಾಗೆಯೇ ಮಾಡಿದೆನೆಂದೂ ಇಂದು ತಿಳಿಯಲ್ಪಡಲಿ.