Numbers · chapter 23 · verse 24
Numbers 23:24 in Kannada
ಇಗೋ, ಜನವು ದೊಡ್ಡ ಸಿಂಹದ ಹಾಗೆ ಏಳುವದು; ಸಿಂಹದ ಮರಿಯ ಹಾಗೆ ಎದ್ದೇಳುವದು; ಅದು ಬೇಟೆಯನ್ನು ತಿಂದು ಹತವಾದವರ ರಕ್ತವನ್ನು ಕುಡಿಯುವ ವರೆಗೆ ಮಲಗದು ಅಂದನು.
Igo, janavu dodda sinhada haage eluvadu; sinhada mariya haage eddeluvadu; adu beteyannu tindu hatavaadavara raktavannu kudiyuva varege malagadu andanu.
Numbers 23:24 in English
- King James Version (KJV)
- Behold, the people shall rise up as a great lion, and lift up himself as a young lion: he shall not lie down until he eat [of] the prey, and drink the blood of the slain.
- World English Bible (WEB)
- Behold, a people rises up as a lioness. As a lion he lifts himself up. He shall not lie down until he eats of the prey, and drinks the blood of the slain.”
- American Standard Version (ASV)
- Behold, the people riseth up as a lioness, And as a lion doth he lift himself up: He shall not lie down until he eat of the prey, And drink the blood of the slain.
- Bible in Basic English (BBE)
- See, Israel comes up like a she-lion, lifting himself up like a lion: he will take no rest till he has made a meal of those he has overcome, drinking the blood of those he has put to death.
- Darby Translation (DBY)
- Lo, the people will rise up as a lioness, and lift himself up as a lion. He shall not lie down until he have eaten the prey and drunk the blood of the slain.
- Webster's Bible (WBS)
- Behold, the people shall rise up as a great lion, and lift up himself as a young lion: he shall not lie down until he shall eat [of] the prey, and drink the blood of the slain.
- Young's Literal Translation (YLT)
- Lo, the people as a lioness riseth, And as a lion he lifteth himself up, He lieth not down till he eateth prey, And blood of pierced ones doth drink.'
Read in context
- 22ದೇವರು ಅವರನ್ನು ಐಗುಪ್ತದೊಳಗಿಂದ ಹೊರಗೆ ಬರಮಾಡಿದ್ದಾನೆ. ಅವನಿಗೆ ಒಂದು ಕೊಂಬುಳ್ಳ ಪ್ರಾಣಿಯಂತೆ ಬಲ ಉಂಟು.
- 23ನಿಶ್ಚಯ ವಾಗಿ ಯಾಕೋಬನಿಗೆ ವಿರೋಧವಾಗಿ ಶಕುನವಿಲ್ಲ; ಇಸ್ರಾಯೇಲನಿಗೆ ವಿರೋಧವಾಗಿ ಯಾವ ಕಣಿ ಇಲ್ಲ; ತತ್ಕಾಲದಲ್ಲಿ ದೇವರು ಏನು ಮಾಡಿದನೆಂದು ಯಾಕೋಬನ ವಿಷಯವಾಗಿಯೂ ಇಸ್ರಾಯೇಲಿನ ವಿಷಯವಾಗಿಯೂ ಹೇಳುವರು.
- 24ಇಗೋ, ಜನವು ದೊಡ್ಡ ಸಿಂಹದ ಹಾಗೆ ಏಳುವದು; ಸಿಂಹದ ಮರಿಯ ಹಾಗೆ ಎದ್ದೇಳುವದು; ಅದು ಬೇಟೆಯನ್ನು ತಿಂದು ಹತವಾದವರ ರಕ್ತವನ್ನು ಕುಡಿಯುವ ವರೆಗೆ ಮಲಗದು ಅಂದನು.
- 25ಆಗ ಬಾಲಾಕನು ಬಿಳಾಮ ನಿಗೆ--ಅವರನ್ನು ಶಪಿಸಲೂ ಬೇಡ, ಆಶೀರ್ವದಿಸಲೂ ಬೇಡ ಅಂದನು.
- 26ಆದರೆ ಬಿಳಾಮನು ಪ್ರತ್ಯುತ್ತರ ವಾಗಿ ಬಾಲಾಕನಿಗೆ ಕರ್ತನು ಹೇಳುವದನ್ನೆಲ್ಲಾ ನಾನು ಮಾಡುವನೆಂದು ನಿನಗೆ ಹೇಳಲಿಲ್ಲವೋ? ಅಂದನು.
Cross references
- Genesis 49:27 ಆದಿಕಾಂಡ 49:27ಬೆನ್ಯಾವಿಾನನು ತೋಳದಂತೆ ಸೀಳುವನು. ಬೆಳಿಗ್ಗೆ ಸುಲಿಗೆಯನ್ನು ತಿಂದುಬಿಡುವನು. ಸಾಯಂಕಾಲದಲ್ಲಿ ಕೊಳ್ಳೆಯನ್ನು ಪಾಲುಮಾಡುವನು.
- Genesis 49:9 ಆದಿಕಾಂಡ 49:9ಯೆಹೂದನು ಸಿಂಹದ ಮರಿಯಾಗಿದ್ದಾನೆ. ನನ್ನ ಮಗನೇ, ಕೊಳ್ಳೆಯಿಂದ ಮೇಲಕ್ಕೆ ಬಂದಿ. ಅವನು ಸಿಂಹದಂತೆಯೂ ಪ್ರಾಯದ ಸಿಂಹದ ಹಾಗೆಯೂ ಮುದುರಿಕೊಂಡು ಮಲಗಿದ್ದಾನೆ. ಅವನನ್ನು ಕೆಣಕು ವವರು ಯಾರು?
- Numbers 24:17 ಅರಣ್ಯಕಾಂಡ 24:17ನಾನು ಅವನನ್ನು ನೋಡು ವೆನು, ಈಗಲ್ಲ; ಅವನನ್ನು ದೃಷ್ಟಿಸುವೆನು, ಸವಿಾಪದಲ್ಲಿ ಅಲ್ಲ; ಯಾಕೋಬನಿಂದ ನಕ್ಷತ್ರ ಉದಯಿಸುವದು; ಇಸ್ರಾಯೇಲ್ನಿಂದ ರಾಜದಂಡ ಏಳುವದು; ಅದು ಮೋವಾಬಿನ ಮೂಲೆಗಳನ್ನು ಹೊಡೆದು ಶೇತನ ಸಕಲ ಮಕ್ಕಳನ್ನು ಸಂಹರಿಸುವದು.
- Zechariah 12:6 ಜೆಕರ್ಯ 12:6ಆ ದಿನದಲ್ಲಿ ನಾನು ಯೆಹೂದದ ದೊರೆಗಳನ್ನು ಕಟ್ಟಿಗೆಯ ಮಧ್ಯದಲ್ಲಿರುವ ಬೆಂಕಿಯ ಒಲೆಯ ಹಾಗೆಯೂ ಸಿವುಡುಗಳಲ್ಲಿರುವ ಬೆಂಕಿಯ ಕೊಳ್ಳಿಯ ಹಾಗೆಯೂ ಮಾಡುವೆನು. ಅವರು ಬಲಗಡೆಯಲ್ಲಿಯೂ ಎಡಗಡೆ ಯಲ್ಲಿಯೂ ಸುತ್ತಲಿರುವ ಎಲ್ಲಾ ಜನಗಳನ್ನು ನುಂಗಿ ಬಿಡುವರು; ಯೆರೂಸಲೇಮು ತಿರುಗಿ ತನ್ನ ಸ್ಥಳದಲ್ಲಿ, ಯೆರೂಸಲೇಮಿನಲ್ಲಿಯೇ ವಾಸಿಸುವದು.
- Revelation 5:5 ಪ್ರಕಟನೆ 5:5ಆಗ ಹಿರಿಯರಲ್ಲಿ ಒಬ್ಬನು ನನಗೆ--ಅಳಬೇಡ; ಅಗೋ, ಯೂದಾ ಗೋತ್ರದ ಸಿಂಹವೂ ದಾವೀದನ ಅಂಕುರದವನೂ ಆಗಿರುವಾತನು ಆ ಪುಸ್ತಕವನ್ನು ತೆರೆಯುವದಕ್ಕೂ ಅದರ ಏಳು ಮುದ್ರೆ ಗಳನ್ನು ಬಿಚ್ಚುವದಕ್ಕೂ ಜಯಹೊಂದಿದ್ದಾನೆ ಎಂದು ಹೇಳಿದನು.
- Numbers 24:8–9 ಅರಣ್ಯಕಾಂಡ 24:8–9ದೇವರು ಅವನನ್ನು ಐಗುಪ್ತದಿಂದ ಹೊರಗೆ ತಂದನು. ಒಂದು ಕೊಂಬುಳ್ಳ ಪ್ರಾಣಿಯಂತೆ ಬಲ ಅವನಿಗೆ ಉಂಟು. ಅವನು ತನ್ನ ವೈರಿಗಳಾಗಿರುವ ಜನಾಂಗಗಳನ್ನು ತಿಂದು ಅವರ ಎಲುಬುಗಳನ್ನು ಚೂರು ಮಾಡಿ ತನ್ನ ಬಾಣ ಗಳಿಂದ ಗಾಯಮಾಡುವನು. ಅವನು ಸಿಂಹದ ಹಾಗೆಯೂ ದೊಡ್ಡ ಸಿಂಹದ ಹಾಗೆಯೂ ಬಾಗಿ ಮಲಗುತ್ತಾನೆ; ಅವನನ್ನು ಎಬ್ಬಿಸುವವರು ಯಾರು? ನಿನ್ನನ್ನು ಆಶೀರ್ವದಿಸುವವರಿಗೆ ಆಶೀರ್ವಾದ, ನಿನ್ನನ್ನು ಶಪಿಸುವವರಿಗೆ ಶಾಪ ಉಂಟು.
- Amos 3:8 ಆಮೋಸ 3:8ಸಿಂಹವು ಗರ್ಜಿಸಿದರೆ ಭಯಪಡದೆ ಇರುವ ವರು ಯಾರು? ಕರ್ತನಾದ ದೇವರು ಮಾತನಾಡಿದರೆ ಅದನ್ನು ಪ್ರವಾದಿಸದೆ ಇರುವವರು ಯಾರು?
- Proverbs 30:30 ಜ್ಞಾನೋಕ್ತಿಗಳು 30:30ಮೃಗಗಳಲ್ಲಿ ಬಲಿಷ್ಠವಾಗಿ ರುವ ಸಿಂಹವು ಯಾವದಕ್ಕೂ ಹೆದರುವುದಿಲ್ಲ.
- Psalm 17:12 ಕೀರ್ತನೆಗಳು 17:12ಅವನು ತನ್ನ ಬೇಟೆಯ ದುರಾಶೆಯಿಂದಿರುವ ಸಿಂಹದ ಹಾಗೆಯೂ ಗುಪ್ತವಾದ ಸ್ಥಳಗಳಲ್ಲಿ ಹೊಂಚು ಹಾಕಿರುವ ಸಿಂಹದ ಮರಿಯ ಹಾಗೆಯೂ ಇದ್ದಾನೆ.
- Zechariah 10:4–5 ಜೆಕರ್ಯ 10:4–5ಆತ ನಿಂದ ಮೂಲೆಗಲ್ಲೂ ಆತನಿಂದ ಮೊಳೆಯೂ ಆತನಿಂದ ಯುದ್ಧದ ಬಿಲ್ಲೂ ಆತನಿಂದ ಹಿಂಸಿಸುವವರೆಲ್ಲರೂ ಕೂಡಿಕೊಂಡು ಹೊರಡುತ್ತಾರೆ. ಅವರು ಯುದ್ಧ ದಲ್ಲಿ ಶತ್ರುವನ್ನು ಬೀದಿಗಳ ಕೆಸರಿನಲ್ಲಿ ತುಳಿಯುವ ಶೂರರ ಹಾಗಿರುವರು; ಕರ್ತನು ಅವರ ಸಂಗಡ ಇರುವದರಿಂದ ಯುದ್ಧಮಾಡುವರು; ಕುದುರೆಗಳ ಮೇಲೆ ಸವಾರಿ ಮಾಡುವವರನ್ನು ನಾಚಿಕೆಪಡಿಸುವರು.
- Revelation 19:11–21 ಪ್ರಕಟನೆ 19:11–21ಪರಲೋಕವು ತೆರೆದಿರುವದನ್ನು ನಾನು ಕಂಡೆನು. ಆಗ ಬಿಳೀ ಕುದುರೆಯು ಕಾಣಿಸಿತು; ಅದರ ಮೇಲೆ ಕೂತಿದ್ದಾತನು ನಂಬಿಗಸ್ತನೂ ಸತ್ಯವಂತನೂ ಎಂದು ಕರೆಯಲ್ಪಟ್ಟನು. ಆತನು ನೀತಿಯಿಂದ ನ್ಯಾಯವಿಚಾರಣೆ ಮಾಡಿ ಯುದ್ಧ ಮಾಡುತ್ತಾನೆ; ಆತನ ಕಣ್ಣುಗಳು ಬೆಂಕಿಯ ಉರಿಯಂತಿದ್ದವು; ಆತನ ತಲೆಯ ಮೇಲೆ ಅನೇಕ ಕಿರೀಟಗಳು ಇದ್ದವು. ಬರೆಯಲ್ಪಟ್ಟ ಹೆಸರು ಆತನಿಗೆ ಇತ್ತು. ಅದು ಆತನಿಗೇ ಹೊರತು ಮತ್ತಾರಿಗೂ ತಿಳಿದಿರಲಿಲ್ಲ. ಆತನು ರಕ್ತದಲ್ಲಿ ಅದ್ದಿದ ವಸ್ತ್ರವನ್ನು ಧರಿಸಿ ಕೊಂಡಿದ್ದನು. ಆತನ ಹೆಸರು ದೇವರವಾಕ್ಯ ವೆಂದು ಕರೆಯಲ್ಪಡುತ್ತದೆ. ಪರಲೋಕದಲ್ಲಿರುವ ಸೈನ್ಯಗಳು ಶುಭ್ರವಾಗಿಯೂ ನಿರ್ಮಲವಾಗಿಯೂ ಇರುವ ನಯವಾದ ನಾರುಮಡಿಯನ್ನು ಧರಿಸಿಕೊಂಡು ಬಿಳೀ ಕುದುರೆಗಳ ಮೇಲೆ ಆತನ ಹಿಂದೆ ಬರುತ್ತಿದ್ದವು. ಜನಾಂಗಗಳನ್ನು ಹೊಡೆಯುವದಕ್ಕಾಗಿ ಹದವಾದ ಕತ್ತಿಯು ಆತನ ಬಾಯಿಂದ ಹೊರಡುತ್ತದೆ. ಆತನು ಅವರನ್ನು ಕಬ್ಬಿಣದ ಕೋಲಿನಿಂದ ಆಳುವನು. ಆತನು ಸರ್ವಶಕ್ತನಾದ ದೇವರ ಉಗ್ರಕೋಪವೆಂಬ ದ್ರಾಕ್ಷೆಯ ತೊಟ್ಟಿಯಲ್ಲಿರುವದನ್ನು ತುಳಿಯುತ್ತಾನೆ. ಆತನ ತೊಡೆಯ ಮೇಲೆಯೂ ವಸ್ತ್ರದ ಮೇಲೆಯೂ--ರಾಜಾ ಧಿರಾಜನೂ ಕರ್ತರ ಕರ್ತನೂ ಎಂಬ ಹೆಸರು ಬರೆದದೆ. ಆಮೇಲೆ ಒಬ್ಬ ದೂತನು ಸೂರ್ಯನಲ್ಲಿ ನಿಂತಿರುವದನ್ನು ನಾನು ಕಂಡೆನು. ಅವನು ಮಹಾ ಶಬ್ದದಿಂದ ಕೂಗುತ್ತಾ ಆಕಾಶದಲ್ಲಿ ಹಾರಾಡುವ ಎಲ್ಲಾ ಪಕ್ಷಿಗಳಿಗೆ--ಬನ್ನಿರಿ, ಮಹಾ ದೇವರ ಭೋಜನಕ್ಕೆ ಕೂಡಿಕೊಳ್ಳಿರಿ, ರಾಜರ ಮಾಂಸವನ್ನೂ ಸೈನ್ಯಾಧಿಪತಿ ಗಳ ಮಾಂಸವನ್ನೂ ಪರಾಕ್ರಮಶಾಲಿಗಳ ಮಾಂಸವನ್ನೂ ಕುದುರೆಗಳ ಮಾಂಸವನ್ನೂ ಅವುಗಳ ಮೇಲೆ ಕೂತವರ ಮಾಂಸವನ್ನೂ ಮತ್ತು ಸ್ವತಂತ್ರರೂ ದಾಸರೂ ಚಿಕ್ಕವರೂ ದೊಡ್ಡವರೂ ಇವರೆಲ್ಲರ ಮಾಂಸವನ್ನೂ ತಿನ್ನುವದಕ್ಕೆ ಬನ್ನಿರಿ ಎಂದು ಹೇಳಿದನು. ತರುವಾಯ ಆ ಮೃಗವೂ ಭೂರಾಜರೂ ಅವರ ಸೈನ್ಯಗಳೂ ಆ ಕುದುರೆಯ ಮೇಲೆ ಕೂತಿದ್ದಾತನ ಮೇಲೆಯೂ ಆತನ ಸೈನ್ಯದ ಮೇಲೆಯೂ ಯುದ್ಧ ಮಾಡುವದಕ್ಕಾಗಿ ಕೂಡಿಬಂದಿರುವದನ್ನು ನಾನು ಕಂಡೆನು. ಆಗ ಮೃಗವು ಸೆರೆಸಿಕ್ಕಿತು; ಇದಲ್ಲದೆ ಮೃಗದ ಮುಂದೆ ಮಹತ್ಕಾರ್ಯಗಳನ್ನು ಮಾಡಿ ಮೃಗದ ಗುರುತು ಹಾಕಿಸಿಕೊಂಡವರನ್ನೂ ಅದರ ವಿಗ್ರಹವನ್ನು ಆರಾಧಿಸಿದವರನ್ನೂ ಮರುಳುಗೊಳಿಸಿದ ಆ ಸುಳ್ಳು ಪ್ರವಾದಿಯೂ ಆದರ ಜೊತೆಯಲ್ಲಿ ಸೆರೆ ಸಿಕ್ಕಿದನು. ಇವರಿಬ್ಬರೂ ಜೀವಸಹಿತವಾಗಿ ಗಂಧಕ ದಿಂದಮಿಕ್ಕಾದವರು ಆ ಕುದುರೆಯ ಮೇಲೆ ಕೂತಿದ್ದಾತನ ಕತ್ತಿಯಿಂದ ಅಂದರೆ ಆತನ ಬಾಯಿಂದ ಬಂದ ಕತ್ತಿ ಯಿಂದ ಹತರಾದರು; ಹಕ್ಕಿಗಳೆಲ್ಲಾ ಅವರ ಮಾಂಸವನು ಹೊಟ್ಟೆತುಂಬಾ ತಿಂದವು. ಮಿಕ್ಕಾದವರು ಆ ಕುದುರೆಯ ಮೇಲೆ ಕೂತಿದ್ದಾತನ ಕತ್ತಿಯಿಂದ ಅಂದರೆ ಆತನ ಬಾಯಿಂದ ಬಂದ ಕತ್ತಿ ಯಿಂದ ಹತರಾದರು; ಹಕ್ಕಿಗಳೆಲ್ಲಾ ಅವರ ಮಾಂಸವನು ಹೊಟ್ಟೆತುಂಬಾ ತಿಂದವು.
- Micah 5:8–9 ಮೀಕ 5:8–9ಯಾಕೋಬಿನ ಶೇಷವು ಅನೇಕ ಜನಗಳ ಮಧ್ಯದಲ್ಲಿ, ಜನಾಂಗಗಳೊಳಗೆ ಅಡವಿಯ ಮೃಗಗಳಲ್ಲಿ ಸಿಂಹದಂತೆಯೂ ಕುರಿಮಂದೆಗಳಲ್ಲಿ ಪ್ರಾಯದ ಸಿಂಹದಂತೆಯೂ ಇರುವದು; ಅದು ಹಾದುಹೋದರೆ ಇಳಿದುಬಿಟ್ಟು ಹರಿದುಬಿಡುತ್ತದೆ, ಯಾರೂ ಬಿಡಿಸ ಲಾರರು. ನಿನ್ನ ಕೈ ನಿನ್ನ ವೈರಿಗಳೆಲ್ಲರ ಮೇಲೆ ಉನ್ನತ ವಾಗಿರುವದು; ನಿನ್ನ ಶತ್ರುಗಳೆಲ್ಲರು ಕಡಿದು ಬಿಡಲ್ಪಡುವರು.