Numbers · chapter 3 · verse 6
Numbers 3:6 in Kannada
ಲೇವಿಯ ಗೋತ್ರವನ್ನು ಹತ್ತಿರ ಸೇರಿಸಿ ಯಾಜಕನಾದ ಆರೋನನ ಮುಂದೆ ನಿಲ್ಲಿಸು; ಅವರು ಅವನಿಗೆ ಸೇವೆಮಾಡಲಿ.
Leviya gotravannu hattira serisi yaajakanaada aaronana munde nillisu; avaru avanige sevemaadali.
Numbers 3:6 in English
- King James Version (KJV)
- Bring the tribe of Levi near, and present them before Aaron the priest, that they may minister unto him.
- World English Bible (WEB)
- “Bring the tribe of Levi near, and set them before Aaron the priest, that they may minister to him.
- American Standard Version (ASV)
- Bring the tribe of Levi near, and set them before Aaron the priest, that they may minister unto him.
- Bible in Basic English (BBE)
- Make the tribe of Levi come near, and put them before Aaron the priest, to be his helpers,
- Darby Translation (DBY)
- Bring the tribe of Levi near, and present them before Aaron the priest, that they may minister unto him;
- Webster's Bible (WBS)
- Bring the tribe of Levi near, and present them before Aaron the priest, that they may minister to him.
- Young's Literal Translation (YLT)
- 'Bring near the tribe of Levi, and thou hast caused it to stand before Aaron the priest, and they have served him,
Read in context
- 4ನಾದಾಬನೂ ಅಬೀಹೂ ಕರ್ತನ ಸಮ್ಮುಖದಲ್ಲಿ ಅನ್ಯಬೆಂಕಿಯನ್ನು ಅರ್ಪಿಸಿದಾಗ ಸೀನಾಯಿ ಅರಣ್ಯದಲ್ಲಿ ಕರ್ತನ ಮುಂದೆ ಸತ್ತರು. ಅವರಿಗೆ ಮಕ್ಕಳು ಇರಲಿಲ್ಲ; ಹೀಗೆ ಎಲ್ಲಾಜಾ ರನು ಈತಾಮಾರನು ತಮ್ಮ ತಂದೆಯಾದ ಆರೋನನ ಎದುರಿನಲ್ಲಿ ಯಾಜಕೋದ್ಯೋಗವನ್ನು ಮಾಡಿದರು.
- 5ಕರ್ತನು ಮೋಶೆಯ ಸಂಗಡ ಮಾತನಾಡಿ ಹೇಳಿ ದ್ದೇನಂದರೆ--
- 6ಲೇವಿಯ ಗೋತ್ರವನ್ನು ಹತ್ತಿರ ಸೇರಿಸಿ ಯಾಜಕನಾದ ಆರೋನನ ಮುಂದೆ ನಿಲ್ಲಿಸು; ಅವರು ಅವನಿಗೆ ಸೇವೆಮಾಡಲಿ.
- 7ಅವರು ಅವನ ಅಪ್ಪಣೆ ಯನ್ನೂ ಸಮಸ್ತ ಸಭೆಯ ಅಪ್ಪಣೆಯನ್ನೂ ಸಮಸ್ತ ಗುಡಾರದ ಮುಂದೆ ಕಾಪಾಡಲಿ, ಮತ್ತು ಗುಡಾರದ ಸೇವೆಯನ್ನು ಮಾಡಲಿ.
- 8ಅವರು ಸಭೆಯ ಗುಡಾರದ ಎಲ್ಲಾ ವಸ್ತುಗಳನ್ನೂ ಇಸ್ರಾಯೇಲ್ ಮಕ್ಕಳ ಅಪ್ಪಣೆ ಯನ್ನೂ ಕಾಪಾಡಿ ಗುಡಾರದ ಸೇವೆಯನ್ನು ಮಾಡ ಬೇಕು.
Cross references
- Numbers 1:49–53 ಅರಣ್ಯಕಾಂಡ 1:49–53ಲೇವಿ ಗೋತ್ರವನ್ನು ಮಾತ್ರ ಎಣಿಸದೆ ಇಸ್ರಾ ಯೇಲ್ ಮಕ್ಕಳೊಳಗೆ ಅವರ ಲೆಕ್ಕವನ್ನು ತಕ್ಕೊಳ್ಳಬೇಡ. ಆದರೆ ನೀನು ಲೇವಿಯರನ್ನು ಸಾಕ್ಷಿಯ ಗುಡಾರ ಕ್ಕೋಸ್ಕರವೂ ಅದರ ಎಲ್ಲಾ ವಸ್ತುಗಳಿಗೋಸ್ಕರವೂ ಅದಕ್ಕೆ ಬೇಕಾದ ಎಲ್ಲವುಗಳಿಗೋಸ್ಕರವೂ ನೇಮಿಸು. ಅವರು ಗುಡಾರವನ್ನೂ ಅದರ ಎಲ್ಲಾ ವಸ್ತುಗಳನ್ನೂ ಹೊತ್ತುಕೊಳ್ಳುವರು, ಇದರ ಸೇವೆಮಾಡಿ ಗುಡಾರದ ಸುತ್ತಮುತ್ತಲೂ ಇಳಿದುಕೊಳ್ಳಬೇಕು. ಗುಡಾರವು ಹೊರಡುವಾಗ ಲೇವಿಯರು ಅದನ್ನು ಬಿಚ್ಚಲಿ; ಗುಡಾರವು ಇಳಿಯುವಾಗ ಲೇವಿಯರು ಅದನ್ನು ನಿಲ್ಲಿಸಲಿ; ಪರಕೀಯನು ಸವಿಾಪಿಸಿದರೆ ಅವನು ಸಾಯಬೇಕು. ಇಸ್ರಾಯೇಲ್ ಮಕ್ಕಳು ತಮ್ಮ ತಮ್ಮ ಸೈನ್ಯಗಳ ಪ್ರಕಾರ ಒಬ್ಬೊಬ್ಬನು ತನ್ನ ದಂಡಿನ ಬಳಿಯಲ್ಲಿ ತನ್ನ ಧ್ವಜದ ಬಳಿಯಲ್ಲಿ ಇಳಿದುಕೊಳ್ಳಬೇಕು. ಆದರೆ ಲೇವಿಯರು ಸಾಕ್ಷಿಯ ಗುಡಾರದ ಸುತ್ತಲೂ ಇಳಿದು ಕೊಳ್ಳಬೇಕು; ಹೀಗೆ ಇಸ್ರಾಯೇಲ್ ಮಕ್ಕಳ ಸಭೆಯ ಮೇಲೆ ಕೋಪಬಾರದಿರುವದು; ಲೇವಿಯರು ಸಾಕ್ಷಿಯ ಗುಡಾರವನ್ನು ಕಾಯುವವರಾಗಿರಬೇಕು.ಇಸ್ರಾಯೇಲ್ ಮಕ್ಕಳು ಹಾಗೆಯೇ ಮಾಡಿದರು. ಕರ್ತನು ಮೋಶೆಗೆ ಆಜ್ಞಾಪಿಸಿದ ಎಲ್ಲವುಗಳ ಪ್ರಕಾರವೇ ಅವರು ಮಾಡಿದರು.
- Numbers 8:6–26 ಅರಣ್ಯಕಾಂಡ 8:6–26ಲೇವಿಯರನ್ನು ಇಸ್ರಾಯೇಲ್ ಮಕ್ಕಳೊಳಗಿಂದ ತೆಗೆದುಕೊಂಡು ಅವರನ್ನು ಶುದ್ಧ ಮಾಡು. ಅವರನ್ನು ಶುದ್ಧಮಾಡುವದಕ್ಕೆ ಅವರಿಗೆ ಮಾಡಬೇಕಾದದ್ದೇನಂದರೆ--ಶುದ್ಧಿಮಾಡುವ ನೀರನ್ನು ಅವರ ಮೇಲೆ ಚಿಮುಕಿಸು. ಆಗ ಅವರು ತಮ್ಮ ಶರೀರವನ್ನೆಲ್ಲಾ ಕ್ಷೌರಮಾಡಿಸಿಕೊಂಡು ಅವರು ತಮ್ಮ ವಸ್ತ್ರಗಳನ್ನು ಒಗೆದುಕೊಳ್ಳಲಿ. ಹೀಗೆ ಅವರು ತಮ್ಮನ್ನು ತಾವೇ ಶುದ್ಧಮಾಡಿಕೊಳ್ಳುವಂತೆ ಮಾಡು. ಅವರು ಒಂದು ಎಳೇ ಹೋರಿಯನ್ನು ಅದರೊಂದಿಗೆ ಆಹಾರ ಸಮರ್ಪಣೆಯನ್ನು ಅಂದರೆ ಎಣ್ಣೇ ಬೆರೆಸಿದ ನಯ ವಾದ ಹಿಟ್ಟನ್ನು ತೆಗೆದುಕೊಳ್ಳಬೇಕು. ಪಾಪದ ಬಲಿ ಗಾಗಿ ಮತ್ತೊಂದು ಎಳೇ ಹೋರಿಯನ್ನೂ ನೀನು ತೆಗೆದುಕೋ. ಆಗ ನೀನು ಲೇವಿಯರನ್ನು ಸಭೆಯ ಗುಡಾರದ ಮುಂದೆ ಕರತಂದು ಇಸ್ರಾಯೇಲ್ಯರ ಸಮಸ್ತ ಸಭೆಯನ್ನು ಒಟ್ಟುಗೂಡಿಸಬೇಕು. ನೀನು ಲೇವಿ ಯರನ್ನು ಕರ್ತನ ಎದುರಿನಲ್ಲಿ ಕರತರಬೇಕು. ಆಗ ಇಸ್ರಾಯೇಲ್ ಮಕ್ಕಳು ತಮ್ಮ ಕೈಗಳನ್ನು ಲೇವಿಯರ ಮೇಲೆ ಇಡಬೇಕು. ಕರ್ತನ ಸೇವೆಯನ್ನು ಮಾಡುವವರಾಗುವಂತೆ ಆರೋನನು ಇಸ್ರಾಯೇಲ್ ಮಕ್ಕಳ ಸಮರ್ಪಣೆಗಾಗಿ ಲೇವಿಯರನ್ನು ಸಮರ್ಪಿಸಬೇಕು. ಲೇವಿಯರು ತಮ್ಮ ಕೈಗಳನ್ನು ಆ ಹೋರಿಗಳ ತಲೆಗಳ ಮೇಲೆ ಇಡಬೇಕು. ಆಗ ನೀನು ಲೇವಿಯರಿಗೋಸ್ಕರ ಪ್ರಾಯಶ್ಚಿತ್ತ ಮಾಡುವದಕ್ಕಾಗಿ ಕರ್ತನಿಗೆ ಒಂದನ್ನು ಪಾಪದ ಬಲಿಗಾಗಿಯೂ ಮತ್ತೊಂದನ್ನು ದಹನ ಬಲಿಗಾಗಿಯೂ ಸಮರ್ಪಿಸಬೇಕು. ತರುವಾಯ ನೀನು ಲೇವಿಯರನ್ನು ಆರೋನನ ಮುಂದೆಯೂ ಅವನ ಕುಮಾರರ ಮುಂದೆಯೂ ನಿಲ್ಲಿಸಿ ಅವರನ್ನು ಕರ್ತನಿಗೆ ಕಾಣಿಕೆಯಂತೆ ಸಮರ್ಪಿಸಬೇಕು. ಹೀಗೆ ನೀನು ಲೇವಿಯರನ್ನು ಇಸ್ರಾಯೇಲ್ ಮಕ್ಕಳೊ ಳಗಿಂದ ಪ್ರತ್ಯೇಕಿಸಬೇಕು; ಲೇವಿಯರು ನನ್ನವರಾಗಿರ ಬೇಕು. ಅದರ ತರುವಾಯ ಲೇವಿಯರು ಸೇವೆ ಮಾಡುವದಕ್ಕೆ ಸಭೆಯ ಗುಡಾರದೊಳಗೆ ಪ್ರವೇಶಿಸು ವರು, ನೀನು ಅವರನ್ನು ಶುದ್ಧಮಾಡಿ ಕಾಣಿಕೆಯಂತೆ ಸಮರ್ಪಿಸಬೇಕು. ಅವರು ಇಸ್ರಾಯೇಲ್ ಮಕ್ಕಳೊ ಳಗಿಂದ ನನಗೆ ಸಂಪೂರ್ಣವಾಗಿ ಕೊಡಲ್ಪಟ್ಟವರು. ಇಸ್ರಾಯೇಲ್ ಮಕ್ಕಳಲ್ಲಿರುವ ಎಲ್ಲಾ ಗರ್ಭಗಳನ್ನು ತೆರೆಯುವಂತದ್ದಕ್ಕೂ ಅಂದರೆ ಚೊಚ್ಚಲಾದವರೆಲ್ಲರಿಗೂ ಬದಲಾಗಿ ಅವರನ್ನು ನನಗೋಸ್ಕರ ತೆಗೆದುಕೊಂಡಿ ದ್ದೇನೆ. ಇಸ್ರಾಯೇಲ್ ಮಕ್ಕಳಲ್ಲಿ ಮನುಷ್ಯರಲ್ಲಾ ದರೂ ಪಶುಗಳಲ್ಲಾದರೂ ಚೊಚ್ಚಲಾದದ್ದೆಲ್ಲಾ ನನ್ನದು; ಐಗುಪ್ತ ದೇಶದಲ್ಲಿ ಎಲ್ಲಾ ಚೊಚ್ಚಲಾದವುಗಳನ್ನು ಹೊಡೆದ ದಿವಸದಲ್ಲಿ ನಾನು ಅವರನ್ನು ನನಗಾಗಿ ಪರಿಶುದ್ಧ ಮಾಡಿಕೊಂಡೆನು. ಇಸ್ರಾಯೇಲ್ ಮಕ್ಕಳಲ್ಲಿರುವ ಎಲ್ಲಾ ಚೊಚ್ಚಲಾದವುಗಳಿಗೋಸ್ಕರ ಲೇವಿಯರನ್ನು ನಾನು ತೆಗೆದುಕೊಂಡೆನು. ಅವರು ಸಭೆಯ ಗುಡಾರದಲ್ಲಿ ಇಸ್ರಾಯೇಲ್ ಮಕ್ಕಳ ಸೇವೆ ಯನ್ನು ಮಾಡುವದಕ್ಕೂ ಪರಿಶುದ್ಧ ಸ್ಥಳಕ್ಕೆ ಇಸ್ರಾಯೇಲ್ ಮಕ್ಕಳು ಸವಿಾಪಿಸುವಾಗ ಇಸ್ರಾಯೇಲ್ ಮಕ್ಕಳೊಳಗೆ ವ್ಯಾಧಿಯು ಇರದಂತೆ ಇಸ್ರಾಯೇಲ್ ಮಕ್ಕಳಿಗೋಸ್ಕರ ಪ್ರಾಯಶ್ಚಿತ್ತಮಾಡುವದಕ್ಕೂ ನಾನು ಲೇವಿಯರನ್ನು ಇಸ್ರಾಯೇಲ್ ಮಕ್ಕಳೊಳಗಿಂದ ಆರೋನನಿಗೂ ಅವನ ಕುಮಾರರಿಗೂ ದಾನವಾಗಿ ಕೊಟ್ಟಿದ್ದೇನೆ. ಮೋಶೆಗೆ ಲೇವಿಯರ ವಿಷಯದಲ್ಲಿ ಕರ್ತನು ಆಜ್ಞಾಪಿಸಿದ್ದೆಲ್ಲಾದರ ಪ್ರಕಾರ ಆಗ ಮೋಶೆಯೂ ಆರೋನನೂ ಇಸ್ರಾಯೇಲ್ ಮಕ್ಕಳ ಸಮಸ್ತ ಸಭೆಯೂ ಲೇವಿಯರಿಗೆ ಮಾಡಿದರು, ಇಸ್ರಾಯೇಲ್ ಮಕ್ಕಳು ಅವರಿಗೆ ಹಾಗೆಯೇ ಮಾಡಿದರು. ಲೇವಿಯರು ತಮ್ಮನ್ನು ಪವಿತ್ರಮಾಡಿಕೊಂಡು ತಮ್ಮ ವಸ್ತ್ರಗಳನ್ನು ತೊಳೆದುಕೊಂಡರು. ಆರೋನನು ಅವರನ್ನು ಕರ್ತನ ಮುಂದೆ ಕಾಣಿಕೆಯಂತೆ ಅರ್ಪಿಸಿದನು; ಅವರು ಶುದ್ಧರಾಗುವ ಹಾಗೆ ಆರೋನನು ಅವರಿಗೋಸ್ಕರ ಪ್ರಾಯಶ್ಚಿತ್ತ ಮಾಡಿದನು. ತರುವಾಯ ಲೇವಿಯರು ಸಭೆಯ ಗುಡಾರದಲ್ಲಿ ಆರೋನನ ಮುಂದೆಯೂ ಅವನ ಕುಮಾರರ ಮುಂದೆಯೂ ಅವರ ಸೇವೆ ಮಾಡು ವದಕ್ಕೆ ಒಳಗೆ ಪ್ರವೇಶಿಸಿದರು. ಕರ್ತನು ಮೋಶೆಗೆ ಲೇವಿಯರ ವಿಷಯವಾಗಿ ಹೇಗೆ ಆಜ್ಞಾಪಿಸಿದನೋ ಹಾಗೆಯೇ ಅವರಿಗೆ ಮಾಡಿದನು. ಕರ್ತನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನಂದರೆ-- ಲೇವಿಯರಿಗೆ ಸಂಬಂಧ ಪಟ್ಟದ್ದು ಇದಾಗಿದೆ; ಇಪ್ಪತ್ತೈದು ವರುಷವೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರೂ ಸಭೆಯ ಗುಡಾರದ ಸೇವೆಗಾಗಿ ಒಳಗೆ ಹೋಗುವರು. ಆದರೆ ಐವತ್ತು ವರುಷದವ ರಾಗಿ ಸೇವೆಯನ್ನು ಬಿಟ್ಟುಬಿಟ್ಟವರು ಇನ್ನು ಮೇಲೆ ಸೇವೆಮಾಡಬಾರದು.ಆದರೆ ಅವರು ಸಭೆಯ ಗುಡಾರದಲ್ಲಿ ಅಪ್ಪಣೆಯನ್ನು ಕೈಕೊಂಡು ತಮ್ಮ ಸಹೋದರರೊಂದಿಗೆ ಕೆಲಸ ಮಾಡಲಿ; ಸೇವೆಯನ್ನು ಮಾತ್ರ ಮಾಡಬಾರದು. ಈ ಪ್ರಕಾರ ನೀನು ಲೇವಿಯ ರಿಗೆ ಕಾಪಾಡಬೇಕಾದವುಗಳ ವಿಷಯದಲ್ಲಿ ಹೀಗೆ ಅವರಿಗೆ ನೇಮಿಸಬೇಕು. ಆದರೆ ಅವರು ಸಭೆಯ ಗುಡಾರದಲ್ಲಿ ಅಪ್ಪಣೆಯನ್ನು ಕೈಕೊಂಡು ತಮ್ಮ ಸಹೋದರರೊಂದಿಗೆ ಕೆಲಸ ಮಾಡಲಿ; ಸೇವೆಯನ್ನು ಮಾತ್ರ ಮಾಡಬಾರದು. ಈ ಪ್ರಕಾರ ನೀನು ಲೇವಿಯ ರಿಗೆ ಕಾಪಾಡಬೇಕಾದವುಗಳ ವಿಷಯದಲ್ಲಿ ಹೀಗೆ ಅವರಿಗೆ ನೇಮಿಸಬೇಕು.
- Malachi 2:4 ಮಲಾಕಿಯ 2:4ಸೈನ್ಯಗಳ ಕರ್ತನು ಹೇಳುವದೇನಂದರೆ--ನನ್ನ ಒಡಂಬಡಿಕೆ ಲೇವಿಯ ಸಂಗಡ ಇರುವ ಹಾಗೆ ಈ ಆಜ್ಞೆಯನ್ನು ನಿಮಗೆ ಕಳುಹಿಸಿದ್ದೇನೆಂದು ತಿಳುಕೊಳ್ಳುವಿರಿ.
- Numbers 18:1–7 ಅರಣ್ಯಕಾಂಡ 18:1–7ಕರ್ತನು ಆರೋನನಿಗೆ--ನೀನೂ ನಿನ್ನ ಕುಮಾರರೂ ನಿನ್ನ ಪಿತೃಗಳ ಮನೆಯೂ ನಿನ್ನೊಂದಿಗೆ ಪರಿಶುದ್ಧ ಸ್ಥಳದ ಅಕ್ರಮವನ್ನು ಹೊತ್ತು ಕೊಳ್ಳಬೇಕು; ನೀನು ನಿನ್ನ ಕುಮಾರರ ಸಹಿತವಾಗಿ ನಿಮ್ಮ ಯಾಜಕತ್ವದ ಅಕ್ರಮವನ್ನು ಹೊತ್ತುಕೊಳ್ಳಬೇಕು. ನಿಮ್ಮ ಪಿತೃವಾದ ಲೇವಿಯ ಗೋತ್ರದವರಾದ ನಿನ್ನ ಸಹೋದರರನ್ನು ಸಹ ನಿನ್ನ ಸಂಗಡ ಸೇರಿಸಿಕೋ. ಅವರು ನಿನ್ನ ಕೂಡ ಇದ್ದು ನಿನಗೆ ಸೇವೆ ಮಾಡಬೇಕು, ಆದರೆ ನೀನು ನಿನ್ನ ಮಕ್ಕಳ ಸಹಿತವಾಗಿ ಸಾಕ್ಷೀ ಗುಡಾರದ ಮುಂದೆ ಸೇವೆಮಾಡಬೇಕು; ಅವರು ನಿನ್ನ ಅಪ್ಪಣೆಯನ್ನೂ ಗುಡಾರವೆಲ್ಲಾದರ ಅಪ್ಪಣೆಯನ್ನೂ ಕಾಪಾಡಬೇಕು. ಪರಿಶುದ್ಧ ಸ್ಥಳದ ಸಾಮಾನುಗಳಿಗೂ ಬಲಿಪೀಠಕ್ಕೂ ಮಾತ್ರ ಅವರೂ ನೀವೂ ಸಾಯದ ಹಾಗೆ ಅವರು ಸವಿಾಪಕ್ಕೆ ಬರಬಾರದು. ಆದರೆ ಅವರು ನಿನ್ನ ಸಹಾಯಕರಾಗಿದ್ದು ಗುಡಾರದ ಎಲ್ಲಾ ಸೇವೆಗೋಸ್ಕರ ಸಭೆಯ ಗುಡಾರದ ಅಪ್ಪಣೆಯನ್ನು ಕಾಪಾಡಬೇಕು; ಪರಕೀಯನು ನಿಮ್ಮ ಸವಿಾಪಕ್ಕೆ ಬರ ಬಾರದು. ಇಸ್ರಾಯೇಲ್ ಮಕ್ಕಳ ಮೇಲೆ ಇನ್ನು ಮುಂದೆ ಎಂದಿಗೂ ರೌದ್ರವು ಬಾರದಹಾಗೆ ಪರಿಶುದ್ಧ ಸ್ಥಳದ ಆಜ್ಞೆಯನ್ನೂ ಬಲಿಪೀಠದ ಆಜ್ಞೆಯನ್ನೂ ನೀವು ಕಾಪಾಡಬೇಕು. ಇಗೋ, ನಾನು ನಿಮ್ಮ ಸಹೋದರ ರಾದ ಲೇವಿಯರನ್ನು ಇಸ್ರಾಯೇಲ್ ಮಕ್ಕಳೊ ಳಗಿಂದ ತೆಗೆದುಕೊಂಡಿದ್ದೇನೆ. ಸಭೆಯ ಗುಡಾರದ ಸೇವೆಯನ್ನು ಮಾಡುವದಕ್ಕೆ ಅವರು ಕರ್ತನಿಗೋಸ್ಕರ ನಿಮಗೆ ದಾನವಾಗಿ ಕೊಡಲ್ಪಟ್ಟವರಾಗಿದ್ದಾರೆ. ಆದದರಿಂದ ನೀನು ನಿನ್ನ ಕುಮಾರರ ಸಹಿತವಾಗಿ ನಿಮ್ಮ ಯಾಜಕತ್ವವನ್ನು ಕಾಪಾಡಬೇಕು. ಬಲಿಪೀಠದ ಸಮಸ್ತ ಕಾರ್ಯಗಳಿಗೋಸ್ಕರ ಪರದೆಯ ಒಳಗೆ ನೀವು ಸೇವೆಮಾಡಬೇಕು. ನಿಮ್ಮ ಯಾಜಕತ್ವವನ್ನು ದಾನದ ಸೇವೆಯಾಗಿ ನಿಮಗೆ ಕೊಟ್ಟಿದ್ದೇನೆ. ಪರಕೀಯನು ಸವಿಾಪಕ್ಕೆ ಬಂದರೆ ಸಾಯಬೇಕು ಎಂದು ಹೇಳಿದನು.
- Exodus 32:26–29 ವಿಮೋಚನಕಾಂಡ 32:26–29ಅವನು ಪಾಳೆಯದ ಬಾಗಿಲಲ್ಲಿ ನಿಂತುಕೊಂಡು--ಕರ್ತನ ಪಕ್ಷದವನು ಯಾರು ಅವನು ನನ್ನ ಬಳಿಗೆ ಬರಲಿ ಅಂದನು. ಆಗ ಲೇವಿಯ ಕುಮಾರರೆಲ್ಲರು ಅವನ ಬಳಿಗೆ ಕೂಡಿ ಬಂದರು. ಅವನು ಅವರಿಗೆ--ಇಸ್ರಾಯೇಲಿನ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಪ್ರತಿಯೊಬ್ಬನು ತನ್ನ ಕತ್ತಿಯನ್ನು ಸೊಂಟಕ್ಕೆ ಕಟ್ಟಿಕೊಂಡು ಪಾಳೆಯದಲ್ಲೆಲ್ಲಾ ಒಳಗಿನಿಂದ ಹೊರಕ್ಕೆ ದ್ವಾರದಿಂದ ದ್ವಾರಕ್ಕೆ ಹೋಗಿ ತನ್ನ ಸಹೋದರನನ್ನೂ ತನ್ನ ಜೊತೆಗಾರನನ್ನೂ ತನ್ನ ನೆರೆಯವನನ್ನೂ ಕೊಲ್ಲಲಿ ಎಂದು ಹೇಳಿದನು. ಲೇವಿಯ ಮಕ್ಕಳು ಮೋಶೆಯ ಮಾತಿನಂತೆ ಮಾಡಿದರು. ಆ ದಿನದಲ್ಲಿ ಜನರೊಳಗೆ ಹೆಚ್ಚು ಕಡಿಮೆ ಮೂರುಸಾವಿರ ಜನರು ಸತ್ತರು. ಮೋಶೆಯು--ಈ ದಿನ ಆತನು ನಿಮ್ಮ ಮೇಲೆ ತನ್ನ ಆಶೀರ್ವಾದವನ್ನು ಅನುಗ್ರಹಿಸುವಂತೆ ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ಮಗನಿಗೋಸ್ಕರವೂ ತನ್ನ ಸಹೋದರನಿಗೋಸ್ಕರವೂ ಈ ದಿನ ಕರ್ತನಿಗೆ ಪ್ರತಿಷ್ಠೆ ಮಾಡಿಕೊಳ್ಳಲಿ ಅಂದನು.
- Numbers 2:17 ಅರಣ್ಯಕಾಂಡ 2:17ತರುವಾಯ ಸಭೆಯ ಗುಡಾರವೂ ಲೇವಿಯರ ಪಾಳೆಯವೂ ಪಾಳೆಯಗಳ ಮಧ್ಯದಲ್ಲಿ ಹೊರಡಬೇಕು. ಅವರು ಇಳುಕೊಳ್ಳುವ ಪ್ರಕಾರವೇ ತಮ್ಮ ತಮ್ಮ ಕಡೆ ಯಲ್ಲಿಯೂ ತಮ್ಮ ತಮ್ಮ ಧ್ವಜಗಳ ಪ್ರಕಾರವಾಗಿಯೂ ಹೊರಡಬೇಕು.
- Deuteronomy 33:8–9 ಧರ್ಮೋಪದೇಶಕಾಂಡ 33:8–9ಲೇವಿಯ ವಿಷಯವಾಗಿ--ನಿನ್ನ ತುವಿಾ್ಮೇಮ್ ನಿನ್ನ ಊರೀಮ್ ಮಸ್ಸದಲ್ಲಿ ನೀನು ಶೋಧಿಸಿದಂಥ ಮೆರೀ ಬಾದ ನೀರಿನ ಬಳಿಯಲ್ಲಿ ನೀನು ವಿವಾದ ಮಾಡಿದಂಥ ನಿನ್ನ ಪರಿಶುದ್ಧನ ಬಳಿಯಲ್ಲಿ ಇರುವವು; ಅವನು ತನ್ನ ತಂದೆ ತಾಯಿಗಳಿಗೆ--ನಾನು ಅವ ನನ್ನು ನೋಡಲಿಲ್ಲ ಅಂದನು. ತನ್ನ ಸಹೋದರರ ಗುರುತನ್ನು ತಿಳುಕೊಳ್ಳಲಿಲ್ಲ. ತನ್ನ ಸ್ವಂತ ಮಕ್ಕಳನ್ನು ಅರಿಯಲಿಲ್ಲ. ಯಾಕಂದರೆ ಅವರು (ಲೇವಿಯರು) ನಿನ್ನ ವಾಕ್ಯವನ್ನು ಕೈಕೊಂಡು ನಿನ್ನ ಒಡಂಬಡಿಕೆಯನ್ನು ಕಾಪಾಡಿದ್ದಾರೆ.
- Deuteronomy 10:8 ಧರ್ಮೋಪದೇಶಕಾಂಡ 10:8ಆ ಕಾಲದಲ್ಲಿ ಕರ್ತನು ಲೇವಿಗೋತ್ರವನ್ನು ಕರ್ತನ ಒಡಂಬಡಿಕೆಯ ಮಂಜೂಷವನ್ನು ಹೊರು ವದಕ್ಕೂ ಕರ್ತನ ಮುಂದೆ ನಿಂತುಕೊಂಡು ಆತನಿಗೆ ಸೇವೆಮಾಡಿ ಆತನ ಹೆಸರಿನಲ್ಲಿ ಆಶೀರ್ವದಿಸುವ ದಕ್ಕೂ ಈ ದಿನದ ವರೆಗೂ ಪ್ರತ್ಯೇಕಿಸಿದನು.
- Numbers 2:33 ಅರಣ್ಯಕಾಂಡ 2:33ಕರ್ತನು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಲೇವಿಯರು ಇಸ್ರಾಯೇಲ್ ಮಕ್ಕಳೊಳಗೆ ಎಣಿಸಲ್ಪಡಲಿಲ್ಲ.ಕರ್ತನು ಮೋಶೆಗೆ ಆಜ್ಞಾಪಿಸಿದ್ದೆಲ್ಲಾದರ ಪ್ರಕಾರ ಇಸ್ರಾಯೇಲ್ ಮಕ್ಕಳು ಮಾಡಿ ತಮ್ಮ ಧ್ವಜಗಳ ಪ್ರಕಾರವೂ ತಮ್ಮ ತಮ್ಮ ವಂಶಗಳ ಪ್ರಕಾರವೂ ತಮ್ಮ ತಂದೆಗಳ ಮನೆಯ ಪ್ರಕಾರವೂ ಇಳುಕೊಳ್ಳುತ್ತಾ ಮುಂದುವರಿಯುತ್ತಿದ್ದರು.
- Numbers 16:9–11 ಅರಣ್ಯಕಾಂಡ 16:9–11ಕರ್ತನ ಗುಡಾರದ ಸೇವೆಯನ್ನು ಮಾಡುವದಕ್ಕೂ ಸಭೆಯ ಮುಂದೆ ಇರುವ ಆತನ ಸೇವೆಯಲ್ಲಿ ನಿಲ್ಲುವದಕ್ಕೂ ಇಸ್ರಾಯೇಲ್ ದೇವರು ನಿಮ್ಮನ್ನು ಹತ್ತಿರ ಬರಮಾಡಿಕೊಳ್ಳುವ ವಿಷಯದಲ್ಲಿ ಇಸ್ರಾಯೇಲ್ಯರ ಸಭೆಯೊಳಗಿಂದ ನಿಮ್ಮನ್ನು ಪ್ರತ್ಯೇಕಿ ಸಿದ್ದು ನಿಮಗೆ ಅಲ್ಪವಾಗಿದೆಯೋ? ಆತನು ನಿನ್ನನ್ನೂ ನಿನ್ನ ಸಂಗಡ ಲೇವಿಯ ಕುಮಾರರಾದ ನಿನ್ನ ಸಹೋದ ರರೆಲ್ಲರನ್ನೂ ತನ್ನ ಹತ್ತಿರ ಬರಮಾಡಿಕೊಂಡಿದ್ದಾನೆ; ನೀವು ಯಾಜಕತ್ವವನ್ನು ಸಹ ಹುಡುಕುತ್ತೀರೋ? ಈ ಕಾರಣದಿಂದ ನೀನೂ ನಿನ್ನ ಸಮಸ್ತ ಗುಂಪೂ ಕರ್ತನಿಗೆ ವಿರೋಧವಾಗಿ ಒಟ್ಟಾಗಿ ಕೂಡಿಕೊಂಡಿರಿ; ನೀವು ಅವನಿಗೆ ವಿರೋಧವಾಗಿ ಗುಣುಗುಟ್ಟುವ ಹಾಗೆ ಆರೋನನು ಯಾರು ಎಂದು ಹೇಳಿದನು.