Numbers · chapter 5 · verse 3
Numbers 5:3 in Kannada
ಗಂಡಸನ್ನಾಗಲಿ ಹೆಂಗಸನ್ನಾಗಲಿ ನೀವು ಹೊರಗೆ ಕಳುಹಿಸಬೇಕು. ನಾನು ಅವರ ಮಧ್ಯದಲ್ಲಿ ವಾಸ ಮಾಡುವ ಪಾಳೆಯವನ್ನು ಅವರು ಅಶುದ್ಧ ಮಾಡದ ಹಾಗೆ ನೀವು ಅವರನ್ನು ಹೊರಗೆ ಕಳುಹಿಸಬೇಕು ಎಂಬದೇ.
Gandasannaagali hengasannaagali neevu horage kaluhisabeku. Naanu avara madhyadalli vaasa maaduva paaleyavannu avaru ashuddha maadada haage neevu avarannu horage kaluhisabeku embade.
Numbers 5:3 in English
- King James Version (KJV)
- Both male and female shall ye put out, without the camp shall ye put them; that they defile not their camps, in the midst whereof I dwell.
- World English Bible (WEB)
- You shall put both male and female outside of the camp so that they don’t defile their camp, in the midst of which I dwell.”
- American Standard Version (ASV)
- both male and female shall ye put out, without the camp shall ye put them; that they defile not their camp, in the midst whereof I dwell.
- Bible in Basic English (BBE)
- Male or female they are to be put outside the tent-circle, so that they may not make unclean my resting-place among them.
- Darby Translation (DBY)
- both male and female shall ye put out; outside the camp shall ye put them, that they defile not their camps, in the midst whereof I dwell.
- Webster's Bible (WBS)
- Both male and female shall ye put out, without the camp shall ye put them; that they defile not their camps, in the midst of which I dwell.
- Young's Literal Translation (YLT)
- from male unto female ye do send out; unto the outside of the camp ye do send them; and they defile not their camps in the midst of which I do tabernacle.'
Read in context
- 1ಇದಲ್ಲದೆ ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನಂದರೆ--
- 2ಕುಷ್ಠವಿ ರುವವರೆಲ್ಲರನ್ನೂ ಮೇಹವುಳ್ಳವರೆಲ್ಲರನ್ನೂ ಹೆಣದಿಂದ ಅಶುದ್ಧವಾದವರೆಲ್ಲರನ್ನೂ ಪಾಳೆಯದೊಳಗಿಂದ ಕಳು ಹಿಸಬೇಕೆಂದು ಇಸ್ರಾಯೇಲ್ ಮಕ್ಕಳಿಗೆ ಆಜ್ಞಾಪಿಸು.
- 3ಗಂಡಸನ್ನಾಗಲಿ ಹೆಂಗಸನ್ನಾಗಲಿ ನೀವು ಹೊರಗೆ ಕಳುಹಿಸಬೇಕು. ನಾನು ಅವರ ಮಧ್ಯದಲ್ಲಿ ವಾಸ ಮಾಡುವ ಪಾಳೆಯವನ್ನು ಅವರು ಅಶುದ್ಧ ಮಾಡದ ಹಾಗೆ ನೀವು ಅವರನ್ನು ಹೊರಗೆ ಕಳುಹಿಸಬೇಕು ಎಂಬದೇ.
- 4ಆಗ ಇಸ್ರಾಯೇಲ್ ಮಕ್ಕಳು ಹಾಗೆ ಮಾಡಿ ಅವರನ್ನು ಪಾಳೆಯದ ಹೊರಗೆ ಕಳುಹಿಸಿದರು. ಕರ್ತನು ಮೋಶೆಗೆ ಹೇಳಿದ ಹಾಗೆ ಇಸ್ರಾಯೇಲ್ ಮಕ್ಕಳು ಮಾಡಿದರು.
- 5ಕರ್ತನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನಂದರೆ--
Cross references
- Deuteronomy 23:14 ಧರ್ಮೋಪದೇಶಕಾಂಡ 23:14ನಿನ್ನ ದೇವರಾದ ಕರ್ತನು ನಿನ್ನನ್ನು ರಕ್ಷಿಸುವದಕ್ಕೂ ನಿನ್ನ ಶತ್ರುಗಳನ್ನು ನಿನ್ನ ಮುಂದೆ ಒಪ್ಪಿಸಿಬಿಡುವದಕ್ಕೂ ಪಾಳೆಯದ ಮಧ್ಯದಲ್ಲಿ ಸಂಚಾರ ಮಾಡುತ್ತಾನೆ. ಆತನು ನಿನ್ನಲ್ಲಿ ಅಶುದ್ಧವಾದ ಕಾರ್ಯ ವನ್ನು ನೋಡಿ ನಿನ್ನನ್ನು ಬಿಟ್ಟು ತಿರುಗದ ಹಾಗೆ ನಿನ್ನ ಪಾಳೆಯವು ಪರಿಶುದ್ಧವಾಗಿರಬೇಕು.
- Leviticus 26:11–12 ಯಾಜಕಕಾಂಡ 26:11–12ಇದಲ್ಲದೆ ನಾನು ನನ್ನ ಗುಡಾರವನ್ನು ನಿಮ್ಮ ಮಧ್ಯದಲ್ಲಿ ಮಾಡಿಕೊಳ್ಳು ವೆನು. ನನ್ನ ಪ್ರಾಣವು ನಿಮ್ಮನ್ನು ಅಸಹ್ಯಿಸದೆ ಇರುವದು. ನಾನು ನಿಮ್ಮ ಮಧ್ಯದಲ್ಲಿ ನಡೆದು ನಿಮ್ಮ ದೇವ ರಾಗಿರುವೆನು; ನೀವು ನನ್ನ ಜನರಾಗಿರುವಿರಿ.
- Numbers 35:34 ಅರಣ್ಯಕಾಂಡ 35:34ಆದದರಿಂದ ನೀವು ವಾಸಮಾಡುವ ದೇಶವನ್ನು ನೀವು ಅಶುದ್ಧಮಾಡಬೇಡಿರಿ; ಯಾಕಂದರೆ ನಾನು ಅದರೊಳಗೆ ವಾಸಿಸುತ್ತೇನೆ; ಕರ್ತನಾಗಿರುವ ನಾನೇ ಇಸ್ರಾಯೇಲ್ ಮಕ್ಕಳ ಮಧ್ಯದಲ್ಲಿ ವಾಸಿಸುತ್ತೇನೆ.
- Revelation 21:3 ಪ್ರಕಟನೆ 21:3ಇದಲ್ಲದೆ ಪರಲೋಕದೊಳಗಿಂದ ಬಂದ ಮಹಾಶಬ್ದವು ನನಗೆ ಕೇಳಿಸಿತು. ಅದು-ಇಗೋ, ದೇವರ ಗುಡಾರವು ಮನುಷ್ಯರೊಂದಿಗೆ ಅದೆ; ಆತನು ಅವರೊಡನೆ ವಾಸ ಮಾಡುವನು, ಅವರು ಆತನ ಪ್ರಜೆಗಳಾಗಿರುವರು; ದೇವರು ತಾನೇ ಅವರ ಸಂಗಡ ಇರುವನು, ಇದಲ್ಲದೆ ಆತನು ಅವರ ದೇವರಾಗಿ
- Psalm 68:18 ಕೀರ್ತನೆಗಳು 68:18ನೀನು ಉನ್ನತಕ್ಕೆ ಏರಿಹೋಗಿ ಸೆರೆಯವರನ್ನು ಸೆರೆಯಾಗಿ ನಡೆಸಿದಿ, ಕರ್ತನಾದ ದೇವರು ಅವರ ಮಧ್ಯದಲ್ಲಿ ವಾಸಿಸುವ ಹಾಗೆ ಮನುಷ್ಯರಿಗಾಗಿಯೂ ಹೌದು, ತಿರುಗಿ ಬಿದ್ದವರಿಗಾಗಿಯೂ ಸ್ವೀಕರಿಸಿದಿ.
- 2 Corinthians 6:16–17 2 ಕೊರಿಂಥದವರಿಗೆ 6:16–17ವಿಗ್ರಹಗಳ ಕೂಡ ದೇವರ ಮಂದಿರಕ್ಕೆ ಒಪ್ಪಿಗೆ ಏನು? ಯಾಕಂದರೆ ನೀವು ಜೀವವುಳ್ಳ ದೇವರ ಮಂದಿರವಾಗಿದ್ದೀರಲ್ಲಾ, ಇದರ ಸಂಬಂಧವಾಗಿ ದೇವರು--ನಾನು ಅವರಲ್ಲಿ ವಾಸಿಸುತ್ತಾ ತಿರುಗಾಡುವೆನು, ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು ಎಂದು ಹೇಳಿದ್ದಾನೆ. ಆದದರಿಂದ--ಅವರ ಮಧ್ಯದಲ್ಲಿಂದ ನೀವು ಹೊರಗೆ ಬಂದು ಪ್ರತ್ಯೇಕವಾಗಿರಿ. ಇದಲ್ಲದೆ ಅಶುದ್ಧವಾದ ಯಾವದನ್ನೂ ಮುಟ್ಟದಿರಿ ಎಂದು ಕರ್ತನು ಹೇಳುತ್ತಾನೆ.ನಾನು ನಿಮ್ಮನ್ನು ಸೇರಿಸಿಕೊಂಡು ನಿಮಗೆ ತಂದೆಯಾಗಿರುವೆನು; ನೀವು ನನಗೆ ಕುಮಾರ ಕುಮಾರ್ತೆಯರಾಗಿರುವಿರಿ ಎಂದು ಸರ್ವಶಕ್ತನಾದ ಕರ್ತನು ಹೇಳುತ್ತಾನೆ.
- Titus 3:10 ತೀತನಿಗೆ 3:10ಭೇದ ಹುಟ್ಟಿಸುವ ಮನುಷ್ಯನನ್ನು ಒಂದೆರಡು ಸಾರಿ ಬುದ್ಧಿ ಹೇಳಿದ ಮೇಲೆ ಬಿಟ್ಟುಬಿಡು;
- 2 Thessalonians 3:6 2 ಥೆಸಲೊನೀಕದವರಿಗೆ 3:6ಸಹೋದರರೇ, ನಮ್ಮಿಂದ ಹೊಂದಿದ ಬೋಧನೆ ಯನ್ನು ಅನುಸರಿಸದೆ ಅಕ್ರಮವಾಗಿ ನಡೆಯುವ ಪ್ರತಿ ಸಹೋದರನಿಗೆ ನೀವು ದೂರವಾಗಿರಬೇಕೆಂದು ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಾವು ನಿಮಗೆ ಆಜ್ಞಾಪಿಸುತ್ತೇವೆ.
- 1 Corinthians 5:7–13 1 ಕೊರಿಂಥದವರಿಗೆ 5:7–13ಆದದರಿಂದ ನೀವು ಹುಳಿ ಇಲ್ಲದ ವರಾದ ಕಾರಣ ಹೊಸ ಕಣಿಕವಾಗಿರುವಂತೆ ಆ ಹಳೇ ಹುಳಿಯನ್ನು ತೆಗೆದುಹಾಕಿರಿ. ಯಾಕಂದರೆ ನಮ್ಮ ಪಸ್ಕವಾಗಿರುವ ಕ್ರಿಸ್ತನೇ ನಮಗೋಸ್ಕರ ಯಜ್ಞಾರ್ಪಿತ ನಾಗಿದ್ದಾನೆ. ಆದಕಾರಣ ನಾವು ಹಳೇ ಹುಳಿಯನ್ನು ಅಂದರೆ ದುರ್ಮಾರ್ಗತ್ವ ದುಷ್ಟತ್ವ ಎಂಬ ಹುಳಿಯನ್ನು ಇಟ್ಟುಕೊಳ್ಳದೆ ಸರಳತೆ ಸತ್ಯತೆ ಎಂಬ ಹುಳಿಯಿಲ್ಲದ ರೊಟ್ಟಿಯಿಂದ ಹಬ್ಬವನ್ನು ಆಚರಿಸೋಣ. ಜಾರರ ಸಹವಾಸವನ್ನು ಮಾಡಬಾರದೆಂದು ಒಂದು ಪತ್ರಿಕೆಯಲ್ಲಿ ನಿಮಗೆ ಬರೆದಿದ್ದೆನು. ಈ ಲೋಕದಲ್ಲಿರುವ ಜಾರರು, ಲೋಭಿಗಳು, ಸುಲು ಕೊಳ್ಳುವವರು, ವಿಗ್ರಹಾರಾಧಕರು ಇವರನ್ನು ಬಿಟ್ಟು ಬಿಡಬೇಕೆಂದು ನನ್ನ ತಾತ್ವರ್ಯವಲ್ಲ; ಹಾಗೆ ಬಿಡ ಬೇಕಾದರೆ ನೀವು ಈ ಲೋಕವನ್ನೇ ಬಿಟ್ಟು ಹೋಗ ಬೇಕಾಗುವದು. ಆದರೆ ಸಹೋದರ ನೆನಿಸಿಕೊಂಡ ವನು ಜಾರನಾದರೂ ಲೋಭಿಯಾದರೂ ವಿಗ್ರಹಾ ರಾಧಕನಾದರೂ ಬೈಯುವವನಾದರೂ ಕುಡುಕ ನಾದರೂ ಸುಲುಕೊಳ್ಳುವವನಾದರೂ ಆಗಿದ್ದ ಪಕ್ಷದಲ್ಲಿ ಅಂಥವನ ಸಹವಾಸ ಮಾಡಬಾರದು, ಅಂಥವನ ಸಂಗಡ ಊಟ ಮಾಡಲೂಬಾರದು ಎಂದು ನಾನು ಈಗ ಬರೆದಿದ್ದೇನೆ. ಹೊರಗಿನವರಿಗೆ ಸಹ ತೀರ್ಪು ಮಾಡುವದಕ್ಕೆ ನನಗೇನಿದೆ? ಒಳಗಿನವರಿಗೆ ತೀರ್ಪು ಮಾಡುವವರು ನೀವೇ ಅಲ್ಲವೇ?ಹೊರಗಿನವರಿಗೆ ತೀರ್ಪುಮಾಡುವಾತನು ದೇವರು. ಆದದರಿಂದ ಆ ದುಷ್ಟನನ್ನು ನಿಮ್ಮ ಮಧ್ಯದಿಂದ ಹೊರಗೆ ಹಾಕಿರಿ. ಹೊರಗಿನವರಿಗೆ ತೀರ್ಪುಮಾಡುವಾತನು ದೇವರು. ಆದದರಿಂದ ಆ ದುಷ್ಟನನ್ನು ನಿಮ್ಮ ಮಧ್ಯದಿಂದ ಹೊರಗೆ ಹಾಕಿರಿ.
- Hebrews 12:15–16 ಇಬ್ರಿಯರಿಗೆ 12:15–16ನಿಮ್ಮಲ್ಲಿ ಯಾವನಾದರೂ ದೇವರ ಕೃಪೆಗೆ ತಪ್ಪಿ ಹೋಗ ದಂತೆಯೂ ಯಾವ ವಿಷವುಳ್ಳ ಬೇರೂ ನಿಮ್ಮಲ್ಲಿ ಚಿಗುರಿ ಕಳವಳ ಹುಟ್ಟಿಸಿ ಅದರಿಂದ ಅನೇಕರು ಅಶುದ್ಧರಾಗ ದಂತೆಯೂ ಯಾವ ಜಾರನಾಗಲಿ--ಏಸಾವನಂಥ ಪ್ರಾಪಂಚಿಕನಾಗಲಿ ನಿಮ್ಮಲ್ಲಿ ಇರದಂತೆಯೂ ಜಾಗ್ರತೆ ಯಿಂದ ನೋಡಿಕೊಳ್ಳಿರಿ. ಆ ಏಸಾವನು ಒಂದು ತುತ್ತನ್ನಕ್ಕಾಗಿ ತನ್ನ ಚೊಚ್ಚಲತನದ ಹಕ್ಕನ್ನು ಮಾರಿ ಬಿಟ್ಟನು;
- 1 Kings 7:3 1 ಅರಸುಗಳು 7:3ಒಂದೊಂದು ಸಾಲು ಹದಿನೈದು ಕಂಭಗಳಾಗಿ ನಾಲ್ವತ್ತೈದು ಕಂಭ ಗಳ ಮೇಲೆ ಇರುವ ತೊಲೆಗಳು ದೇವದಾರುಗಳಿಂದ ಮುಚ್ಚಲ್ಪಟ್ಟವು.
- Numbers 19:22 ಅರಣ್ಯಕಾಂಡ 19:22ಇದಲ್ಲದೆ ಅಪವಿತ್ರನಾದವನು ಮುಟ್ಟು ವಂಥದ್ದೆಲ್ಲಾ ಅಪವಿತ್ರವಾಗುವದು; ಅವನನ್ನು ಮುಟ್ಟಿ ದವನು ಸಾಯಂಕಾಲದ ವರೆಗೆ ಅಪವಿತ್ರನಾಗಿರಬೇಕು ಎಂದು ಹೇಳಿದನು.