Numbers · chapter 8 · verse 11
Numbers 8:11 in Kannada
ಕರ್ತನ ಸೇವೆಯನ್ನು ಮಾಡುವವರಾಗುವಂತೆ ಆರೋನನು ಇಸ್ರಾಯೇಲ್ ಮಕ್ಕಳ ಸಮರ್ಪಣೆಗಾಗಿ ಲೇವಿಯರನ್ನು ಸಮರ್ಪಿಸಬೇಕು.
Kartana seveyannu maaduvavaraaguvante aaronanu israayel makkala samarpanegaagi leviyarannu samarpisabeku.
Numbers 8:11 in English
- King James Version (KJV)
- And Aaron shall offer the Levites before the LORD [for] an offering of the children of Israel, that they may execute the service of the LORD.
- World English Bible (WEB)
- and Aaron shall offer the Levites before the LORD for a wave offering on the behalf of the children of Israel, that it may be theirs to do the service of the LORD.
- American Standard Version (ASV)
- and Aaron shall offer the Levites before Jehovah for a wave-offering, on the behalf of the children of Israel, that it may be theirs to do the service of Jehovah.
- Bible in Basic English (BBE)
- And Aaron is to give the Levites to the Lord as a wave offering from the children of Israel, so that they may do the Lord's work.
- Darby Translation (DBY)
- And Aaron shall offer the Levites as a wave-offering before Jehovah from the children of Israel, and they shall perform the service of Jehovah.
- Webster's Bible (WBS)
- And Aaron shall offer the Levites before the LORD [for] an offering of the children of Israel, that they may execute the service of the LORD.
- Young's Literal Translation (YLT)
- and Aaron hath waved the Levites — a wave-offering before Jehovah, from the sons of Israel, and they have been — for doing the service of Jehovah.
Read in context
- 9ಆಗ ನೀನು ಲೇವಿಯರನ್ನು ಸಭೆಯ ಗುಡಾರದ ಮುಂದೆ ಕರತಂದು ಇಸ್ರಾಯೇಲ್ಯರ ಸಮಸ್ತ ಸಭೆಯನ್ನು ಒಟ್ಟುಗೂಡಿಸಬೇಕು.
- 10ನೀನು ಲೇವಿ ಯರನ್ನು ಕರ್ತನ ಎದುರಿನಲ್ಲಿ ಕರತರಬೇಕು. ಆಗ ಇಸ್ರಾಯೇಲ್ ಮಕ್ಕಳು ತಮ್ಮ ಕೈಗಳನ್ನು ಲೇವಿಯರ ಮೇಲೆ ಇಡಬೇಕು.
- 11ಕರ್ತನ ಸೇವೆಯನ್ನು ಮಾಡುವವರಾಗುವಂತೆ ಆರೋನನು ಇಸ್ರಾಯೇಲ್ ಮಕ್ಕಳ ಸಮರ್ಪಣೆಗಾಗಿ ಲೇವಿಯರನ್ನು ಸಮರ್ಪಿಸಬೇಕು.
- 12ಲೇವಿಯರು ತಮ್ಮ ಕೈಗಳನ್ನು ಆ ಹೋರಿಗಳ ತಲೆಗಳ ಮೇಲೆ ಇಡಬೇಕು. ಆಗ ನೀನು ಲೇವಿಯರಿಗೋಸ್ಕರ ಪ್ರಾಯಶ್ಚಿತ್ತ ಮಾಡುವದಕ್ಕಾಗಿ ಕರ್ತನಿಗೆ ಒಂದನ್ನು ಪಾಪದ ಬಲಿಗಾಗಿಯೂ ಮತ್ತೊಂದನ್ನು ದಹನ ಬಲಿಗಾಗಿಯೂ ಸಮರ್ಪಿಸಬೇಕು.
- 13ತರುವಾಯ ನೀನು ಲೇವಿಯರನ್ನು ಆರೋನನ ಮುಂದೆಯೂ ಅವನ ಕುಮಾರರ ಮುಂದೆಯೂ ನಿಲ್ಲಿಸಿ ಅವರನ್ನು ಕರ್ತನಿಗೆ ಕಾಣಿಕೆಯಂತೆ ಸಮರ್ಪಿಸಬೇಕು.
Cross references
- Leviticus 7:30 ಯಾಜಕಕಾಂಡ 7:30ಬೆಂಕಿಯಿಂದ ಮಾಡಿದ ಕರ್ತನ ಅರ್ಪಣೆ ಗಳನ್ನು ತನ್ನ ಸ್ವಂತ ಕೈಗಳಿಂದಲೇ ತರಬೇಕು. ಕರ್ತನ ಮುಂದೆ ಅಲ್ಲಾಡುವ ಸಮರ್ಪಣೆಗಾಗಿ ಎದೆಯು ಅಲ್ಲಾಡಿಸಲ್ಪಡುವಂತೆ ಕೊಬ್ಬಿನೊಂದಿಗೆ ಎದೆಯನ್ನು ತರಬೇಕು.
- Numbers 3:5–43 ಅರಣ್ಯಕಾಂಡ 3:5–43ಕರ್ತನು ಮೋಶೆಯ ಸಂಗಡ ಮಾತನಾಡಿ ಹೇಳಿ ದ್ದೇನಂದರೆ-- ಲೇವಿಯ ಗೋತ್ರವನ್ನು ಹತ್ತಿರ ಸೇರಿಸಿ ಯಾಜಕನಾದ ಆರೋನನ ಮುಂದೆ ನಿಲ್ಲಿಸು; ಅವರು ಅವನಿಗೆ ಸೇವೆಮಾಡಲಿ. ಅವರು ಅವನ ಅಪ್ಪಣೆ ಯನ್ನೂ ಸಮಸ್ತ ಸಭೆಯ ಅಪ್ಪಣೆಯನ್ನೂ ಸಮಸ್ತ ಗುಡಾರದ ಮುಂದೆ ಕಾಪಾಡಲಿ, ಮತ್ತು ಗುಡಾರದ ಸೇವೆಯನ್ನು ಮಾಡಲಿ. ಅವರು ಸಭೆಯ ಗುಡಾರದ ಎಲ್ಲಾ ವಸ್ತುಗಳನ್ನೂ ಇಸ್ರಾಯೇಲ್ ಮಕ್ಕಳ ಅಪ್ಪಣೆ ಯನ್ನೂ ಕಾಪಾಡಿ ಗುಡಾರದ ಸೇವೆಯನ್ನು ಮಾಡ ಬೇಕು. ಲೇವಿಯರನ್ನು ಆರೋನನಿಗೂ ಅವನ ಕುಮಾರರಿಗೂ ಕೊಡಬೇಕು; ಅವರು ಇಸ್ರಾಯೇಲ್ ಮಕ್ಕಳೊಳಗಿಂದ ಅವನಿಗೆ ಪೂರ್ಣವಾಗಿ ಕೊಡಲ್ಪಟ್ಟ ವರೇ. ಇದಲ್ಲದೆ ಆರೋನನನ್ನೂ ಅವನ ಕುಮಾರ ರನ್ನೂ ನೇಮಿಸಬೇಕು. ಅವರು ತಮ್ಮ ಯಾಜಕತ್ವವನ್ನು ನಡಿಸಲಿ. ಪರಕೀಯನು ಸವಿಾಪಿಸಿದರೆ ಸಾಯಬೇಕು. ಕರ್ತನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನಂದರೆ-- ನಾನು ಇಗೋ, ನಾನೇ ಇಸ್ರಾ ಯೇಲ್ ಮಕ್ಕಳಲ್ಲಿ ಗರ್ಭ ತೆರೆಯುವಂಥ ಎಲ್ಲಾ ಚೊಚ್ಚಲಾದವುಗಳಿಗೆ ಬದಲಾಗಿ ಲೇವಿಯರನ್ನು ಇಸ್ರಾಯೇಲ್ ಮಕ್ಕಳೊಳಗಿಂದ ತೆಗೆದುಕೊಂಡಿ ದ್ದೇನೆ. ಆದದರಿಂದ ಲೇವಿಯರು ನನ್ನವರಾಗಿರುವರು. ಚೊಚ್ಚಲಾದವರೆಲ್ಲರೂ ನನ್ನವರೇ. ನಾನು ಐಗುಪ್ತ ದೇಶದಲ್ಲಿ ಚೊಚ್ಚಲಾದವುಗಳನ್ನೆಲ್ಲಾ ಹೊಡೆದ ದಿನ ದಲ್ಲಿ ನಾನು ಇಸ್ರಾಯೇಲಿನಲ್ಲಿ ಮನುಷ್ಯರಲ್ಲಿಯೂ ಪಶುಗಳಲ್ಲಿಯೂ ಚೊಚ್ಚಲಾದದ್ದನ್ನೆಲ್ಲಾ ಪರಿಶುದ್ಧ ಮಾಡಿಕೊಂಡಿದ್ದೇನೆ. ಅವರು ನನ್ನವರಾಗಿರಬೇಕು. ನಾನೇ ಕರ್ತನು. ಕರ್ತನು ಸೀನಾಯಿ ಅರಣ್ಯದಲ್ಲಿ ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನಂದರೆ-- ಲೇವಿಯ ಕುಮಾರರನ್ನು ಅವರ ತಂದೆಗಳ ಮನೆಯ ಪ್ರಕಾರ ವಾಗಿಯೂ ಅವರ ಕುಟುಂಬಗಳ ಪ್ರಕಾರವಾಗಿಯೂ ಎಣಿಸು. ಒಂದು ತಿಂಗಳು ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳ ಗಂಡಸರೆಲ್ಲರನ್ನೂ ನೀನು ಎಣಿಸು ಅಂದನು. ಆಗ ಮೋಶೆಯು ತನಗೆ ಕರ್ತನು ಆಜ್ಞಾಪಿಸಿದ ಮಾತಿನ ಪ್ರಕಾರವಾಗಿ ಎಣಿಸಿದನು. ಲೇವಿಯ ಕುಮಾರರ ಹೆಸರುಗಳು ಇವೇ: ಗೇರ್ಷೋನನೂ ಕೆಹಾತನೂ ಮೆರಾರೀಯೂ. ಗೇರ್ಷೋನನ ಕುಮಾರರ ಹೆಸರುಗಳು ತಮ್ಮ ಕುಟುಂಬಗಳ ಪ್ರಕಾರ ಇವೇ; ಲಿಬ್ನೀಯೂ ಶಿಮ್ಮಿಯೂ. ಕೆಹಾತನ ಕುಮಾರರು ತಮ್ಮ ಕುಟುಂಬಗಳ ಪ್ರಕಾರ ಅಮ್ರಾಮನೂ ಇಚ್ಹಾರನೂ ಹೆಬ್ರೋನನೂ ಉಜ್ಜೀಯೇಲನೂ. ಮೆರಾರೀಯ ಕುಮಾರರು ತಮ್ಮ ಕುಟುಂಬಗಳ ಪ್ರಕಾರ ಮಹ್ಲೀಯೂ ಮೂಷೀಯೂ. ತಂದೆಗಳ ಮನೆಯ ಪ್ರಕಾರವಾಗಿ ಲೇವಿಯರ ಕುಟುಂಬಗಳು ಇವೇ. ಗೇರ್ಷೋನಿಗೆ ಸೇರಿದವರು ಲಿಬ್ನೀಯ ಕುಟುಂಬ ದವರೂ ಶಿವ್ಮೆಾಯ ಕುಟುಂಬದವರೂ, ಗೇರ್ಷೋನನ ಕುಟುಂಬಗಳು ಇವೇ. ಒಂದು ತಿಂಗಳು ಮೊದಲು ಗೊಂಡು ಮೇಲ್ಪಟ್ಟ ಪ್ರಾಯವುಳ್ಳ ಅವರ ಎಲ್ಲಾ ಗಂಡಸರ ಸಂಖ್ಯೆಯ ಪ್ರಕಾರ ಎಣಿಸಲ್ಪಟ್ಟವರು ಏಳು ಸಾವಿರದ ಐನೂರು ಮಂದಿ. ಗೇರ್ಷೋನ್ಯರ ಕುಟುಂಬಗಳು ಗುಡಾರದ ಹಿಂದುಗಡೆ ಪಶ್ಚಿಮದ ಕಡೆಗೆ ಇಳುಕೊಳ್ಳಬೇಕು. ಲಾಯೇಲನ ಮಗನಾದ ಎಲ್ಯಾಸಾಫನು ಗೇರ್ಷೋನ್ಯರ ತಂದೆ ಮನೆಗೆ ಮುಖ್ಯಸ್ಥನು. ಸಭೆಯ ಗುಡಾರದಲ್ಲಿ ಗೇರ್ಷೋನನ ಕುಮಾರರು ಕಾಪಾಡಿಕೊಳ್ಳಬೇಕಾದವುಗಳು ಗುಡಾ ರವೂ ಅದರ ಹೊದಿಕೆಯೂ ಸಭೆಯ ಗುಡಾರದ ಬಾಗಲಿನ ತೆರೆಯೂ ಅಂಗಳದ ತೆರೆಗಳೂ ಗುಡಾರಕ್ಕೂ ಬಲಿಪೀಠಕ್ಕೂ ಸುತ್ತಲಿರುವ ಅಂಗಳದ ಪರದೆಯೂ ಅಂಗಳದ ಬಾಗಲಿನ ತೆರೆಯೂ ಅದರ ಸಮಸ್ತ ಸೇವೆಗೆ ಬೇಕಾದ ಹಗ್ಗಗಳೂ ಇವೆ. ಅಮ್ರಾಮಿಯರ ಕುಟುಂಬವೂ ಇಚ್ಹಾರರ ಕುಟುಂಬವೂ ಹೆಬ್ರೋನಿಯರ ಕುಟುಂಬವೂ ಉಜ್ಜೀ ಯೇಲರ ಕುಟುಂಬವೂ ಇವು ಕೆಹಾತರ ಕುಟುಂಬ ಗಳು. ಪರಿಶುದ್ಧ ಸ್ಥಳದ ಅಪ್ಪಣೆಯನ್ನು ಕಾಪಾಡು ವವರ ಲೆಕ್ಕ ಒಂದು ತಿಂಗಳು ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳ ಗಂಡಸರೆಲ್ಲರೂ ಎಂಟು ಸಾವಿರದ ಆರು ನೂರು. ಕೆಹಾತನ ಕುಮಾರರ ಕುಟುಂಬಗಳು ಗುಡಾರದ ಬಳಿಯಲ್ಲಿ ದಕ್ಷಿಣದ ಕಡೆಗೆ ಇಳುಕೊಳ್ಳಬೇಕು. ಉಜ್ಜೀಯೇಲನ ಕುಮಾರನಾದ ಎಲೀಚಾಫಾನು ಕೆಹಾತರ ಕುಟುಂಬಗಳ ತಂದೆಯ ಮನೆಗೆ ಮುಖ್ಯಸ್ಥನು. ಅವರ ಅಪ್ಪಣೆಯೇನಂದರೆ: ಮಂಜೂಷವೂ ಮೇಜೂ ದೀಪಸ್ತಂಭವೂ ಬಲಿಪೀಠ ಗಳೂ ಅವರು ಸೇವೆಮಾಡುವ ಪರಿಶುದ್ಧ ಸ್ಥಳದ ವಸ್ತುಗಳೂ ತೆರೆಯೂ ಅವುಗಳ ಎಲ್ಲಾ ಸೇವೆಯೂ ಆಗಿದೆ. ಇದಲ್ಲದೆ ಯಾಜಕನಾಗಿರುವ ಆರೋನನ ಮಗನಾದ ಎಲ್ಲಾಜಾರನು ಲೇವಿಯರ ಮುಖ್ಯಸ್ಥರ ಮೇಲೆ ಮುಖ್ಯಸ್ಥನು, ಪರಿಶುದ್ಧ ಸ್ಥಳದ ಅಪ್ಪಣೆಯನ್ನು ಕೈಕೊಳ್ಳುವವರ ಮೇಲೆ ವಿಚಾರಕನು ಅವನೇ. ಮಹ್ಲೀಯರ ಕುಟುಂಬವೂ ಮೂಷೀಯರ ಕುಟುಂಬವೂ ಇವು ಮೆರಾರೀಯರ ಕುಟುಂಬಗಳು. ಅದರಲ್ಲಿ ಎಣಿಸಲ್ಪಟ್ಟವರು ಒಂದು ತಿಂಗಳು ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳ ಗಂಡಸ ರೆಲ್ಲರ ಲೆಕ್ಕದ ಪ್ರಕಾರ ಆರು ಸಾವಿರದ ಇನ್ನೂರು. ಅಬೀಹೈಲನ ಮಗನಾದ ಚೂರೀಯೇಲನು ಮೆರಾ ರೀಯ ಕುಟುಂಬಗಳ ತಂದೆಯ ಮನೆಗೆ ಮುಖ್ಯಸ್ಥನು; ಅವರು ಗುಡಾರದ ಬಳಿಯಲ್ಲಿ ಉತ್ತರದಿಕ್ಕಿನ ಕಡೆಗೆ ಇಳುಕೊಳ್ಳಬೇಕು. ಇದಲ್ಲದೆ ಮೆರಾರೀಯ ಕುಮಾ ರರ ಅಪ್ಪಣೆಯೂ ಅವರ ವಶದಲ್ಲಿ ಇರುವವುಗಳೂ ಯಾವವೆಂದರೆ: ಗುಡಾರದ ಹಲಗೆಗಳೂ ಅಗುಳಿಗಳೂ ಕಂಬಗಳೂ ಕುಣಿಕೆಗಳೂ ಎಲ್ಲಾ ವಸ್ತುಗಳೂ ಅವರ ಎಲ್ಲಾ ಸೇವೆಯೂ ಅಂಗಳದ ಸುತ್ತಮುತ್ತಲಿರುವ ಕಂಬಗಳೂ ಅವುಗಳ ಕುಣಿಕೆಗಳೂ ಗೂಟಗಳೂ ಹಗ್ಗಗಳೂ ಇವುಗಳೇ. ಆದರೆ ಗುಡಾರದ ಎದುರಿನಲ್ಲಿ ಪೂರ್ವದಿಕ್ಕಿಗೆ ಅಂದರೆ ಸಭೆಯ ಗುಡಾರದ ಮುಂದೆ ಪೂರ್ವದಿಕ್ಕಿಗೆ ಇಳುಕೊಳ್ಳುವವರು ಮೋಶೆಯೂ ಆರೋನನೂ ಅವನ ಕುಮಾರರೂ. ಇವರು ಇಸ್ರಾಯೇಲ್ ಮಕ್ಕಳಿಗಾಗಿ ಪರಿಶುದ್ಧಸ್ಥಳದ ಅಪ್ಪಣೆಯನ್ನು ಕಾಪಾ ಡುವವರು. ಪರಕೀಯನು ಸವಿಾಪಿಸಿದರೆ ಅವನು ಸಾಯಬೇಕು. ಮೋಶೆಯೂ ಆರೋನನೂ ಕರ್ತನ ಆಜ್ಞೆಯ ಪ್ರಕಾರ ಕುಟುಂಬಗಳ ಮೇರೆಗೆ ಲೆಕ್ಕ ಮಾಡಿದ ಎಲ್ಲಾ ಲೇವಿಯರು ಒಂದು ತಿಂಗಳು ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳ ಗಂಡಸರೆಲ್ಲರು ಲೆಕ್ಕದ ಪ್ರಕಾರ ಇಪ್ಪತ್ತೆರಡು ಸಾವಿರ ಮಂದಿ. ಇದಲ್ಲದೆ ಕರ್ತನು ಮೋಶೆಗೆ ಹೇಳಿದ್ದೇನಂದರೆ--ಇಸ್ರಾಯೇಲ್ ಮಕ್ಕಳಲ್ಲಿರುವ ಚೊಚ್ಚಲು ಗಂಡಸರನ್ನೆಲ್ಲಾ ಅವರು ಒಂದು ತಿಂಗಳೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರ ಲೆಕ್ಕವನ್ನು ತೆಗೆದುಕೋ. ಇಸ್ರಾಯೇಲ್ ಮಕ್ಕಳಲ್ಲಿರುವ ಚೊಚ್ಚಲಾದವರೆ ಲ್ಲರಿಗೆ ಬದಲಾಗಿ ಲೇವಿಯರನ್ನೂ ಇಸ್ರಾಯೇಲ್ ಮಕ್ಕಳ ದನಗಳಲ್ಲಿರುವ ಸಕಲ ಚೊಚ್ಚಲಾದವುಗಳಿಗೆ ಬದಲಾಗಿ ಲೇವಿಯರ ದನಗಳನ್ನೂ ನನಗೋಸ್ಕರ ತೆಗೆದುಕೋ (ನಾನೇ ಕರ್ತನು) ಎಂದು ಹೇಳಿದನು. ಆಗ ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆ ಅವನು ಇಸ್ರಾಯೇಲ್ ಮಕ್ಕಳಲ್ಲಿ ಚೊಚ್ಚಲಾಗಿರುವದೆ ಲ್ಲವನ್ನು ಎಣಿಸಿದನು. ಒಂದು ತಿಂಗಳು ಮೊದಲು ಗೊಂಡು ಮೇಲ್ಪಟ್ಟ ಪ್ರಾಯವುಳ್ಳ ಗಂಡಸರಲ್ಲಿ ಚೊಚ್ಚ ಲಾದವರೆಲ್ಲರು ಅಂದರೆ ಹೆಸರುಗಳ ಲೆಕ್ಕದಲ್ಲಿ ಎಣಿಸಲ್ಪಟ್ಟವರು ಇಪ್ಪತ್ತೆರಡು ಸಾವಿರದ ಇನ್ನೂರ ಎಪ್ಪತ್ತುಮೂರು ಮಂದಿಯಾಗಿದ್ದರು.
- Leviticus 8:27 ಯಾಜಕಕಾಂಡ 8:27ಅದೆಲ್ಲವನ್ನು ಆರೋನನ ಮತ್ತು ಅವನ ಕುಮಾರರ ಕೈಗಳಿಗೆ ಕೊಟ್ಟು ಕರ್ತನ ಮುಂದೆ ಅಲಾ ್ಲಡುವ ಸಮರ್ಪಣೆಗಾಗಿ ಅವುಗಳನ್ನು ಅಲ್ಲಾಡಿಸಿದನು.
- Numbers 6:20 ಅರಣ್ಯಕಾಂಡ 6:20ಯಾಜಕನು ಅವುಗಳನ್ನು ಆಡಿಸುವ ಅರ್ಪಣೆಗಾಗಿ ಕರ್ತನ ಎದುರಿ ನಲ್ಲಿ ಆಡಿಸಬೇಕು. ಆಡಿಸುವ ಎದೆಯ ಸಂಗಡಲೂ ಎತ್ತುವ ಮುಂದೊಡೆಯ ಸಂಗಡಲೂ ಅದು ಯಾಜಕ ನಿಗೆ ಪರಿಶುದ್ಧವಾಗಿದೆ. ಆ ಮೇಲೆ ನಾಜೀರನು ದ್ರಾಕ್ಷಾ ರಸವನ್ನು ಕುಡಿಯಬಹುದು.
- Numbers 1:49–53 ಅರಣ್ಯಕಾಂಡ 1:49–53ಲೇವಿ ಗೋತ್ರವನ್ನು ಮಾತ್ರ ಎಣಿಸದೆ ಇಸ್ರಾ ಯೇಲ್ ಮಕ್ಕಳೊಳಗೆ ಅವರ ಲೆಕ್ಕವನ್ನು ತಕ್ಕೊಳ್ಳಬೇಡ. ಆದರೆ ನೀನು ಲೇವಿಯರನ್ನು ಸಾಕ್ಷಿಯ ಗುಡಾರ ಕ್ಕೋಸ್ಕರವೂ ಅದರ ಎಲ್ಲಾ ವಸ್ತುಗಳಿಗೋಸ್ಕರವೂ ಅದಕ್ಕೆ ಬೇಕಾದ ಎಲ್ಲವುಗಳಿಗೋಸ್ಕರವೂ ನೇಮಿಸು. ಅವರು ಗುಡಾರವನ್ನೂ ಅದರ ಎಲ್ಲಾ ವಸ್ತುಗಳನ್ನೂ ಹೊತ್ತುಕೊಳ್ಳುವರು, ಇದರ ಸೇವೆಮಾಡಿ ಗುಡಾರದ ಸುತ್ತಮುತ್ತಲೂ ಇಳಿದುಕೊಳ್ಳಬೇಕು. ಗುಡಾರವು ಹೊರಡುವಾಗ ಲೇವಿಯರು ಅದನ್ನು ಬಿಚ್ಚಲಿ; ಗುಡಾರವು ಇಳಿಯುವಾಗ ಲೇವಿಯರು ಅದನ್ನು ನಿಲ್ಲಿಸಲಿ; ಪರಕೀಯನು ಸವಿಾಪಿಸಿದರೆ ಅವನು ಸಾಯಬೇಕು. ಇಸ್ರಾಯೇಲ್ ಮಕ್ಕಳು ತಮ್ಮ ತಮ್ಮ ಸೈನ್ಯಗಳ ಪ್ರಕಾರ ಒಬ್ಬೊಬ್ಬನು ತನ್ನ ದಂಡಿನ ಬಳಿಯಲ್ಲಿ ತನ್ನ ಧ್ವಜದ ಬಳಿಯಲ್ಲಿ ಇಳಿದುಕೊಳ್ಳಬೇಕು. ಆದರೆ ಲೇವಿಯರು ಸಾಕ್ಷಿಯ ಗುಡಾರದ ಸುತ್ತಲೂ ಇಳಿದು ಕೊಳ್ಳಬೇಕು; ಹೀಗೆ ಇಸ್ರಾಯೇಲ್ ಮಕ್ಕಳ ಸಭೆಯ ಮೇಲೆ ಕೋಪಬಾರದಿರುವದು; ಲೇವಿಯರು ಸಾಕ್ಷಿಯ ಗುಡಾರವನ್ನು ಕಾಯುವವರಾಗಿರಬೇಕು.ಇಸ್ರಾಯೇಲ್ ಮಕ್ಕಳು ಹಾಗೆಯೇ ಮಾಡಿದರು. ಕರ್ತನು ಮೋಶೆಗೆ ಆಜ್ಞಾಪಿಸಿದ ಎಲ್ಲವುಗಳ ಪ್ರಕಾರವೇ ಅವರು ಮಾಡಿದರು.
- Exodus 29:24 ವಿಮೋಚನಕಾಂಡ 29:24ನೀನು ತೆಗೆದುಕೊಂಡು ಅವುಗಳನ್ನೆಲ್ಲಾ ಆರೋನನ ಮತ್ತು ಅವನ ಕುಮಾರರ ಕೈಗಳಿಗೆ ಕೊಟ್ಟು ಅವರು ಕರ್ತನ ಮುಂದೆ ಅದನ್ನು ತೂಗು ಅರ್ಪಣೆಗಾಗಿ ತೂಗಬೇಕು.
- Leviticus 8:29 ಯಾಜಕಕಾಂಡ 8:29ಮೋಶೆಯು ಎದೆಯ ಭಾಗವನ್ನು ತೆಗೆದುಕೊಂಡು ಕರ್ತನ ಸನ್ನಿಧಿ ಯಲ್ಲಿ ಆಡಿಸುವ ಸಮರ್ಪಣೆಗಾಗಿ ಅದನ್ನು ಆಡಿಸಿ ದನು; ಕರ್ತನು ಮೋಶೆಗೆ ಆಜ್ಞಾಪಿಸಿದಂತೆಯೇ ಪ್ರತಿ ಷ್ಠಿತ ಟಗರು ಮೋಶೆಯ ಪಾಲಾಗಿತ್ತು.