Philippians · chapter 4 · verse 5
Philippians 4:5 in Kannada
ನಿಮ್ಮ ಸೈರಣೆಯು ಎಲ್ಲಾ ಮನುಷ್ಯರಿಗೆ ಗೊತ್ತಾಗಲಿ; ಕರ್ತನು ಹತ್ತಿರವಾಗಿದ್ದಾನೆ.
Nimma sairaneyu ellaa manushyarige gottaagali; kartanu hattiravaagiddaane.
Philippians 4:5 in English
- King James Version (KJV)
- Let your moderation be known unto all men. The Lord [is] at hand.
- World English Bible (WEB)
- Let your gentleness be known to all men. The Lord is at hand.
- American Standard Version (ASV)
- Let your forbearance be known unto all men. The Lord is at hand.
- Bible in Basic English (BBE)
- Let your gentle behaviour be clear to all men. The Lord is near.
- Darby Translation (DBY)
- Let your gentleness be known of all men. The Lord [is] near.
- Webster's Bible (WBS)
- Let your moderation be known to all men. The Lord [is] at hand.
- Young's Literal Translation (YLT)
- let your forbearance be known to all men; the Lord [is] near;
Read in context
- 3ನಿಜ ಜೊತೆಗಾರನೇ, ನೀನು ಆ ಸ್ತ್ರೀಯರಿಗೆ ಸಹಾಯಕ ನಾಗಿರಬೇಕೆಂದು ನಿನ್ನನ್ನೂ ಕೇಳಿಕೊಳ್ಳುತ್ತೇನೆ. ಅವರು ಕ್ಲೇಮೆನ್ಸ್ ಮುಂತಾದ ನನ್ನ ಜೊತೆಕೆಲಸದವರ ಸಹಿತವಾಗಿ ನನ್ನ ಕೂಡ ಸುವಾರ್ತೆಗೋಸ್ಕರ ಪ್ರಯಾಸ ಪಟ್ಟವರು. ಅವರ ಹೆಸರುಗಳು ಜೀವಗ್ರಂಥದಲ್ಲಿ ಬರೆದವೆ.
- 4ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ; ಸಂತೋಷಪಡಿರಿ ಎಂದು ನಾನು ತಿರಿಗಿ ಹೇಳುತ್ತೇನೆ.
- 5ನಿಮ್ಮ ಸೈರಣೆಯು ಎಲ್ಲಾ ಮನುಷ್ಯರಿಗೆ ಗೊತ್ತಾಗಲಿ; ಕರ್ತನು ಹತ್ತಿರವಾಗಿದ್ದಾನೆ.
- 6ಯಾವ ಸಂಬಂಧ ವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆ ವಿಜ್ಞಾಪನೆ ಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯ ಪಡಿಸಿರಿ.
- 7ಆಗ ಎಲ್ಲಾ ಗ್ರಹಿಕೆಯನ್ನೂ ವಿಾರುವ ದೇವರ ಶಾಂತಿಯು ನಿಮ್ಮ ಹೃದಯಗಳನ್ನೂ ಮನಸ್ಸು ಗಳನ್ನೂ ಕ್ರಿಸ್ತ ಯೇಸುವಿನ ಮೂಲಕ ಕಾಯುವದು.
Cross references
- James 5:8–9 ಯಾಕೋಬನು 5:8–9ನೀವೂ ದೀರ್ಘಶಾಂತಿಯಿಂದಿರ್ರಿ; ನಿಮ್ಮ ಹೃದಯಗಳನ್ನು ದೃಢಪಡಿಸಿಕೊಳ್ಳಿರಿ, ಯಾಕಂದರೆ ಕರ್ತನ ಪ್ರತ್ಯ ಕ್ಷತೆಯು ಹತ್ತಿರವಾಯಿತು. ಸಹೋದರರೇ, ನೀವು ಒಬ್ಬರನ್ನೊಬ್ಬರು ದ್ವೇಷಿಸಬೇಡಿರಿ; ನ್ಯಾಯವಿಚಾರಣೆಗೆ ಗುರಿಯಾದೀರಿ. ಅಗೋ, ನ್ಯಾಯಾಧಿಪತಿಯು ಬಾಗಲಿನ ಮುಂದೆಯೇ ನಿಂತಿದ್ದಾನೆ.
- Matthew 6:25 ಮತ್ತಾಯನು 6:25ಆದಕಾರಣ ನಾನು ನಿಮಗೆ ಹೇಳುವದೇ ನಂದರೆ--ನಿಮ್ಮ ಪ್ರಾಣಕ್ಕೋಸ್ಕರ ನೀವು ಏನು ತಿನ್ನಬೇಕು ಮತ್ತು ಏನು ಕುಡಿಯಬೇಕು ಎಂಬದರ ವಿಷಯಕ್ಕಾಗಲೀ ಇಲ್ಲವೆ ನಿಮ್ಮ ಶರೀರಕ್ಕೆ ನೀವು ಏನು ಹೊದ್ದುಕೊಳ್ಳಬೇಕೆಂತಾಗಲೀ ಚಿಂತೆ ಮಾಡ ಬೇಡಿರಿ; ಊಟಕ್ಕಿಂತ ಪ್ರಾಣವೂ ಉಡುಪಿಗಿಂತ ಶರೀರವೂ ಹೆ
- Titus 3:2 ತೀತನಿಗೆ 3:2ಯಾರ ವಿಷಯವಾಗಿಯೂ ಕೆಟ್ಟ ಮಾತನ್ನಾಡದವರೂ ಜಗಳವಾಡದವರೂ ಆಗಿದ್ದು ಸಾಧು ಸ್ವಭಾವವುಳ್ಳವರಾಗಿ ಎಲ್ಲಾ ಮನುಷ್ಯರಿಗೆ ಪೂರ್ಣ ಸಾತ್ವಿಕತ್ವವನ್ನು ತೋರಿಸಬೇಕೆಂತಲೂ ಅವ ರಿಗೆ ಜ್ಞಾಪಕಮಾಡು.
- Hebrews 10:37 ಇಬ್ರಿಯರಿಗೆ 10:37ನಿಶ್ಚಯವಾಗಿ ಬರುವಾತನು ಇನ್ನು ಸ್ವಲ್ಪ ಕಾಲ ದಲ್ಲಿ ಬರುವನು, ತಡಮಾಡುವದಿಲ್ಲ.
- 1 Peter 4:7 1 ಪೇತ್ರನು 4:7ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ; ಆದದರಿಂದ ನೀವು ಸ್ವಸ್ಥಚಿತ್ತರಾಗಿಯೂ ಪ್ರಾರ್ಥನೆಗೆ ಎಚ್ಚರ ವಾಗಿಯೂ ಇರ್ರಿ.
- Revelation 22:7 ಪ್ರಕಟನೆ 22:7ಇಗೋ, ನಾನು ಬೇಗನೆ ಬರುತ್ತೇನೆ. ಈ ಪುಸ್ತಕದಲ್ಲಿ ಬರೆದಿರುವ ಪ್ರವಾದನೆಗಳನ್ನು ಕಾಪಾಡುವವನು ಧನ್ಯನು ಎಂದು ಹೇಳಿದನು.
- 1 Corinthians 6:7 1 ಕೊರಿಂಥದವರಿಗೆ 6:7ಆದದರಿಂದ ಈಗ ನಿಮ್ಮಲ್ಲಿ ಒಬ್ಬನಿಗೆ ವಿರೋಧವಾಗಿ ಇನ್ನೊಬ್ಬನು ನ್ಯಾಯಸ್ಥಾನಕ್ಕೆ ಹೋಗುವದು ಶುದ್ಧ ತಪ್ಪು; ಇದಕ್ಕಿಂತ ನೀವು ಅನ್ಯಾಯವನ್ನು ಯಾಕೆ ಸಹಿಸಬಾರದು? ಇಲ್ಲವೆ (ಸೊತ್ತನ್ನು ಅಪಹರಿಸುವದನ್ನು) ನೀವು ಯಾಕೆ ಸಹಿಸಿಕೊಳ್ಳಬಾರದು?
- Hebrews 10:25 ಇಬ್ರಿಯರಿಗೆ 10:25ಸಭೆಯಾಗಿ ಕೂಡಿ ಕೊಳ್ಳುವದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟುಬಿಡದೆ ಒಬ್ಬರನ್ನೊಬ್ಬರು ಎಚ್ಚರಿ ಸೋಣ. ಆ ದಿನವು ಸವಿಾಪಿಸುತ್ತಾ ಬರುತ್ತದೆ ಎಂದು ನೀವು ನೋಡುವದರಿಂದ ಇದನ್ನು ಮತ್ತಷ್ಟು ಮಾಡಿರಿ.
- 1 Corinthians 8:13 1 ಕೊರಿಂಥದವರಿಗೆ 8:13ಆದದರಿಂದ ಆಹಾರವು ನನ್ನ ಸಹೋದರನಿಗೆ ಅಭ್ಯಂತರವಾದರೆ ನಾನು ನನ್ನ ಸಹೋದರನಿಗೆ ಅಭ್ಯಂತರಪಡಿಸದಂತೆ ಎಂದಿಗೂ ಮಾಂಸ ತಿನ್ನುವದಿಲ್ಲ.
- 2 Peter 3:8–14 2 ಪೇತ್ರನು 3:8–14ಆದರೆ ಪ್ರಿಯರೇ, ಕರ್ತನ ಎಣಿಕೆಯಲ್ಲಿ ಒಂದು ದಿನವು ಸಾವಿರ ವರುಷಗಳಂತೆಯೂ ಸಾವಿರ ವರುಷಗಳು ಒಂದು ದಿನದಂತೆಯೂ ಅವೆ ಎಂಬದನ್ನು ಮಾತ್ರ ತಿಳಿಯದವರಾಗಿರಬೇಡಿರಿ. ಕರ್ತನು ತನ್ನ ವಾಗ್ದಾನದ ವಿಷಯವಾಗಿ ತಡಮಾಡುತ್ತಾನೆಂಬದಾಗಿ ಕೆಲವರು ಎಣಿಸುವ ಪ್ರಕಾರ ಆತನು ತಡಮಾಡುವಾತನಲ್ಲ. ಆದರೆ ಯಾವನಾದರೂ ನಾಶವಾಗುವದರಲ್ಲಿ ಆತನು ಇಷ್ಟಪಡದೆ ಎಲ್ಲರೂ ಪಶ್ಚಾತ್ತಾಪಪಡಬೇಕೆಂದು ಅಪೇಕ್ಷಿಸುವವನಾಗಿದ್ದು ನಮ್ಮ ಕಡೆಗೆ ದೀರ್ಘಶಾಂತಿ ಯುಳ್ಳವ ಆದರೂ ಕರ್ತನ ದಿನವು ರಾತ್ರಿಯಲ್ಲಿ ಕಳ್ಳನು ಬರುವಂತೆ ಬರುತ್ತದೆ. ಆ ದಿನದಲ್ಲಿ ಆಕಾಶಗಳು ಮಹಾಘೋಷದಿಂದ ಇಲ್ಲದೆ ಹೋಗು ವವು. ಅತಿ ಉಷ್ಣದಿಂದ ಪಂಚಭೂತಗಳು ಉರಿದು ಲಯವಾಗಿ ಹೋಗುವವು; ಭೂಮಿಯೂ ಅದರಲ್ಲಿ ರುವ ಕೆಲಸಗಳೂ ಸುಟ್ಟುಹೋಗುವವು. ಇವೆಲ್ಲವುಗಳು ಹೀಗೆ ಲಯವಾಗಿ ಹೋಗುವದ ರಿಂದ ನೀವು ಎಷ್ಟೋ ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ ಉಳ್ಳವರಾಗಿರಬೇಕು. ದೇವರ ದಿನದ ಪ್ರತ್ಯಕ್ಷತೆಯನ್ನು ಎದುರು ನೋಡುತ್ತಾ ಆತುರಪಡುವ ಆ ದಿನದಲ್ಲಿ ಆಕಾಶಗಳು ಬೆಂಕಿ ಹತ್ತಿ ಲಯವಾಗಿ ಹೋಗುವವು, ಅತಿ ಉಷ್ಣದಿಂದ ಪಂಚಭೂತಗಳು ಉರಿದು ಕರಗಿ ಹೋಗುವವಲ್ಲವೇ? ಆದಾಗ್ಯೂ ನಾವು ಆತನ ವಾಗ್ದಾನದ ಪ್ರಕಾರ ನೂತನ ಆಕಾಶ ಗಳನ್ನೂ ನೂತನ ಭೂಮಿಯನ್ನೂ ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು. ಆದಕಾರಣ ಪ್ರಿಯರೇ, ನೀವು ಇಂಥವುಗಳನ್ನು ಎದುರು ನೋಡುವವರಾಗಿರುವದರಿಂದ ಸಮಾಧಾನ ದಲ್ಲಿದ್ದು ನಿರ್ಮಲರಾಗಿಯೂ ನಿರ್ದೋಷಿಗಳಾಗಿಯೂ ಆತನಿಗೆ ಕಾಣಿಸಿಕೊಳ್ಳುವಂತೆ ಜಾಗ್ರತೆಯುಳ್ಳವ ರಾಗಿರ್ರಿ.
- Hebrews 13:5–6 ಇಬ್ರಿಯರಿಗೆ 13:5–6ನಿಮ್ಮ ನಡತೆಯು ದ್ರವ್ಯಾಶೆ ಯಿಲ್ಲದ್ದಾಗಿರಲಿ; ನಿಮಗಿರುವವುಗಳಲ್ಲಿ ತೃಪ್ತರಾಗಿರ್ರಿ; ಯಾಕಂದರೆ--ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ ಇಲ್ಲವೆ ತೊರೆಯುವದಿಲ್ಲವೆಂದು ಆತನು ಹೇಳಿದ್ದಾನೆ. ಆದದರಿಂದ--ಕರ್ತನು ನನ್ನ ಸಹಾಯಕನು, ಭಯಪಡೆನು, ಮನುಷ್ಯನು ನನಗೆ ಏನು ಮಾಡಾನು ಎಂದು ನಾವು ಧೈರ್ಯವಾಗಿ ಹೇಳಬಲ್ಲೆವು.
- Matthew 6:34 ಮತ್ತಾಯನು 6:34ಆದಕಾರಣ ನಾಳೆಗೋಸ್ಕರ ಚಿಂತೆ ಮಾಡಬೇಡಿರಿ; ಯಾಕಂದರೆ ನಾಳಿನ ದಿನವು ತನಗೆ ಸಂಬಂಧ ಪಟ್ಟವುಗಳಿಗಾಗಿ ತಾನೇ ಚಿಂತಿಸುವದು. ಆ ದಿನಕ್ಕೆ ಅದರ ಕಾಟ ಸಾಕು.