Proverbs · chapter 10 · verse 18
Proverbs 10:18 in Kannada
ಸುಳ್ಳಾಡುವ ತುಟಿಗಳಿಂದ ಹಗೆಯನ್ನಿಟ್ಟುಕೊಂಡ ವನೂ ಚಾಡಿಹೇಳುವವನೂ ಮೂರ್ಖನು.
Sullaaduva tutigalinda hageyannittukonda vanoo chaadiheluvavanoo moorkhanu.
Proverbs 10:18 in English
- King James Version (KJV)
- He that hideth hatred [with] lying lips, and he that uttereth a slander, [is] a fool.
- World English Bible (WEB)
- He who hides hatred has lying lips. He who utters a slander is a fool.
- American Standard Version (ASV)
- He that hideth hatred is of lying lips; And he that uttereth a slander is a fool.
- Bible in Basic English (BBE)
- Hate is covered up by the lips of the upright man, but he who lets out evil about another is foolish.
- Darby Translation (DBY)
- He that covereth hatred hath lying lips, and he that sendeth forth a slander is a fool.
- Webster's Bible (WBS)
- He that hideth hatred [with] lying lips, and he that uttereth a slander, [is] a fool.
- Young's Literal Translation (YLT)
- Whoso is covering hatred with lying lips, And whoso is bringing out an evil report is a fool.
Read in context
- 16ನೀತಿವಂತರ ಪ್ರಯಾಸವು ಜೀವಕ್ಕಾಗಿಯೂ ದುಷ್ಟರ ಫಲವು ಪಾಪಕ್ಕಾಗಿಯೂ ಇವೆ.
- 17ಶಿಕ್ಷಣವನ್ನು ಕೈಕೊಳ್ಳುವವನು ಜೀವನದ ಮಾರ್ಗದಲ್ಲಿ ಇದ್ದಾನೆ; ಗದರಿಕೆಯನ್ನು ತಿರಸ್ಕರಿಸುವವನು ತಪ್ಪುಮಾಡುತ್ತಾನೆ.
- 18ಸುಳ್ಳಾಡುವ ತುಟಿಗಳಿಂದ ಹಗೆಯನ್ನಿಟ್ಟುಕೊಂಡ ವನೂ ಚಾಡಿಹೇಳುವವನೂ ಮೂರ್ಖನು.
- 19ಹೆಚ್ಚು ಮಾತುಗಳಿಂದ ಪಾಪಕ್ಕೆ ಕೊರತೆ ಇರುವದಿಲ್ಲ. ತನ್ನ ತುಟಿಗಳನ್ನು ತಡೆಯುವವನು ಜ್ಞಾನವಂತನು.
- 20ನೀತಿ ವಂತರ ನಾಲಿಗೆಯು ಚೊಕ್ಕ ಬೆಳ್ಳಿಯಂತಿದೆ; ದುಷ್ಟರ ಹೃದಯವು ಅಲ್ಪವಾದದ್ದು.
Cross references
- Proverbs 26:24–26 ಜ್ಞಾನೋಕ್ತಿಗಳು 26:24–26ಹಗೆಮಾಡುವವನು ತನ್ನ ತುಟಿಗಳಿಂದ ಮೋಸವನ್ನು ನಟಿಸುತ್ತಾನೆ, ತನ್ನ ಅಂತರಂಗದಲ್ಲಿ ಮೋಸವನ್ನು ಇಟ್ಟುಕೊಳ್ಳುತ್ತಾನೆ. ಸವಿ ಮಾತನ್ನಾಡಿದರೆ ಅವನನ್ನು ನಂಬಬೇಡ; ಅವನ ಹೃದಯದಲ್ಲಿ ಏಳು ಅಸಹ್ಯಗಳಿವೆ. ಯಾವನ ಹಗೆ ತನವು ಮೋಸದಿಂದ ಮುಚ್ಚಲ್ಪಟ್ಟಿದೆಯೋ ಅವನ ಕೆಟ್ಟತನವು ಸಭೆಯಲ್ಲಿ ಬಯಲಾಗುವದು.
- Psalm 55:21 ಕೀರ್ತನೆಗಳು 55:21ಅವನ ಬಾಯಿ ಮಾತುಗಳು ಬೆಣ್ಣೆಗಿಂತ ನುಣುಪಾಗಿವೆ; ಅವನ ಹೃದ ಯವೋ ಕಲಹಮಯವೇ. ಅವನ ಮಾತುಗಳು ಎಣ್ಣೆ ಗಿಂತ ನಯವಾಗಿವೆ; ಆದರೆ ಅವು ಬಿಚ್ಚು ಕತ್ತಿಗಳಾಗಿವೆ.
- 2 Samuel 3:27 2 ಸಮುವೇಲನು 3:27ಅಬ್ನೇರನು ಹೆಬ್ರೋನಿಗೆ ತಿರಿಗಿ ಬಂದ ತರುವಾಯ ಯೋವಾಬನು ಬಾಗಲಲ್ಲಿ ಅವನ ಸಂಗಡ ಸಮಾಧಾನವಾಗಿ ಮಾತ ನಾಡಿ ಅವನನ್ನು ಒಂದು ಕಡೆ ಕರಕೊಂಡು ಹೋಗಿ ತನ್ನ ತಮ್ಮನಾದ ಅಸಾಹೇಲನ ರಕ್ತಾಪರಾಧದ ನಿಮಿತ್ತ ಅಲ್ಲಿ ಅವನ ಪಕ್ಕೆಯ ಐದನೇ ಎಲುಬಿನಲ್ಲಿ ಇರಿದು ಕೊಂದುಹಾಕಿದನು.
- Psalm 15:3 ಕೀರ್ತನೆಗಳು 15:3ಅವನು ತನ್ನ ನಾಲಿಗೆಯಿಂದ ಚಾಡಿ ಹೇಳುವದಿಲ್ಲ; ತನ್ನ ನೆರೆಯವನನ್ನು ನಿಂದಿಸು ವದಿಲ್ಲ;
- 2 Samuel 13:23–29 2 ಸಮುವೇಲನು 13:23–29ಎರಡು ವರುಷ ಪೂರ್ಣಮುಗಿದ ತರುವಾಯ ಏನಾಯಿತಂದರೆ, ಅಬ್ಷಾಲೋಮನಿಗೆ ಎಫ್ರಾಯಾಮ್ ಬಳಿಯಲ್ಲಿರುವ ಬಾಳ್ಹಾಚೋರಿನಲ್ಲಿ ಕುರಿಗಳ ಉಣ್ಣೆ ಕತ್ತರಿಸುವವರಿದ್ದರು. ಆದದರಿಂದ ಅಬ್ಷಾಲೋಮನು ಅರಸನ ಮಕ್ಕಳನ್ನೆಲ್ಲಾ ಔತಣಕ್ಕೆ ಕರೆದನು. ಇದಲ್ಲದೆ ಅಬ್ಷಾಲೋಮನು ಅರಸನ ಬಳಿಗೆ ಹೋಗಿ--ಇಗೋ, ಈಗ ನಿನ್ನ ಸೇವಕನಿಗೆ ಉಣ್ಣೆ ಕತ್ತರಿಸುವವರು ಇದ್ದಾರೆ; ಅರಸನೂ ತನ್ನ ಸೇವಕರೂ ನಿನ್ನ ಸೇವಕನ ಸಂಗಡ ಬರಲಿ ಅಂದನು. ಅದಕ್ಕೆ ಅರಸನು ಅಬ್ಷಾಲೋಮ ನಿಗೆ--ಹಾಗಲ್ಲ; ನನ್ನ ಮಗನೇ, ನಾವು ನಿನಗೆ ಭಾರವಾಗಿರದ ಹಾಗೆ ನಾವೆಲ್ಲರು ಈಗ ಬರುವದಿಲ್ಲ ಅಂದನು. ಅವನು ರಾಜನನ್ನು ಬಲವಂತ ಮಾಡಿದನು; ಆದರೆ ಅವನು ಹೋಗಲೊಲ್ಲದೆ ಅವನನ್ನು ಆಶೀ ರ್ವದಿಸಿದನು. ಆಗ ಅಬ್ಷಾಲೋಮನು--ಹಾಗಾ ದರೆ ನನ್ನ ಸಹೋದರನಾದ ಅಮ್ನೋನನು ನಮ್ಮ ಸಂಗಡ ಬರಲಿ ಅಂದನು. ಅರಸನು ಅವನಿಗೆ--ಯಾಕೆ ಅವನು ನಿಮ್ಮ ಸಂಗಡ ಬರಬೇಕು ಅಂದನು. ಆದರೆ ಅಬ್ಷಾಲೋಮನು ಅವನನ್ನು ಬಲವಂತ ಮಾಡಿದ್ದರಿಂದ ಅವನು ಅಮ್ನೋನನನ್ನೂ ಅರಸನ ಎಲ್ಲಾ ಮಕ್ಕಳನ್ನೂ ಅವನ ಸಂಗಡ ಕಳುಹಿಸಿದನು. ಆದರೆ ಅಬ್ಷಾಲೋಮನು ತನ್ನ ಸೇವಕರಿಗೆ--ನೀವು ನೋಡಿಕೊಳ್ಳಿರಿ; ಅಮ್ನೋನನ ಹೃದಯವು ದ್ರಾಕ್ಷಾರಸ ದಿಂದ ಸಂಭ್ರಮವಾಗಿರುವಾಗ ನಾನು ನಿಮಗೆ ಅಮ್ನೋನ ನನ್ನು ಹೊಡೆಯಿರಿ ಎಂದು ಹೇಳುತ್ತಲೇ ಅವನನ್ನು ಕೊಂದುಹಾಕಿರಿ; ಭಯಪಡಬೇಡಿರಿ ನಾನು ನಿಮಗೆ ಆಜ್ಞಾಪಿಸಿದ್ದೇನಲ್ಲಾ. ಬಲವಾಗಿರಿ; ಪರಾಕ್ರಮಿಗಳಾ ಗಿರ್ರಿ; ಎಂದು ಆಜ್ಞಾಪಿಸಿ ಹೇಳಿದನು. ಅಬ್ಷಾಲೋ ಮನು ಆಜ್ಞಾಪಿಸಿದ ಹಾಗೆಯೇ ಅವನ ಸೇವಕರು ಅಮ್ನೋನನಿಗೆ ಮಾಡಿದರು. ಆಗ ಅರಸನ ಮಕ್ಕಳೆ ಲ್ಲರೂ ಎದ್ದು ತಮ್ಮ ತಮ್ಮ ಹೇಸರ ಕತ್ತೆಗಳನ್ನೇರಿ ಓಡಿಹೋದರು.
- 2 Samuel 11:8–15 2 ಸಮುವೇಲನು 11:8–15ದಾವೀದನು ಊರೀಯನಿಗೆ--ನೀನು ನಿನ್ನ ಮನೆಗೆ ಹೋಗಿ ನಿನ್ನ ಕಾಲುಗಳನ್ನು ತೊಳಕೋ ಅಂದನು. ಊರೀಯನು ಅರಸನ ಮನೆಯಿಂದ ಹೊರಡುವಾಗ ಅರಸನ ಭೋಜನವು ಅವನ ಸಂಗಡವೇ ಹೋಯಿತು. ಆದರೆ ಊರೀಯನು ತನ್ನ ಮನೆಗೆ ಹೋಗದೆ ಅರಮನೆಯ ಬಾಗಲ ಬಳಿಯಲ್ಲಿ ತನ್ನ ಯಜಮಾನನ ಎಲ್ಲಾ ಸೇವಕರ ಸಂಗಡ ಮಲಗಿದ್ದನು. ಊರೀಯನು ತನ್ನ ಮನೆಗೆ ಹೋಗಲಿಲ್ಲವೆಂದು ದಾವೀದನಿಗೆ ತಿಳಿಸ ಲ್ಪಟ್ಟಾಗ ದಾವೀದನು ಊರೀಯನಿಗೆ -- ನೀನು ಪ್ರಯಾಣದಿಂದ ಬರಲಿಲ್ಲವೋ? ಯಾಕೆ ನಿನ್ನ ಮನೆಗೆ ಹೋಗಲಿಲ್ಲ ಅಂದನು. ಊರೀಯನು ದಾವೀದ ನಿಗೆ--ಮಂಜೂಷವೂ ಇಸ್ರಾಯೇಲ್ಯರೂ ಯೆಹೂದ ದವರೂ ಡೇರೆಗಳಲ್ಲಿ ವಾಸಿಸಿರುವಾಗಲೂ ನನ್ನ ಒಡೆಯನಾದ ಯೋವಾಬನೂ ನನ್ನ ಒಡೆಯನ ಸೇವ ಕರೂ ಬೈಲಿನಲ್ಲಿ ದಂಡಿಳಿದಿರುವಾಗ ನಾನು ಉಣ್ಣುವ ದಕ್ಕೂ ಕುಡಿಯುವದಕ್ಕೂ ನನ್ನ ಹೆಂಡತಿಯ ಸಂಗಡ ಮಲಗುವದಕ್ಕೂ ನನ್ನ ಮನೆಗೆ ಹೋಗಲೋ? ನಿನ್ನ ಜೀವದಾಣೆ, ನಿನ್ನ ಪ್ರಾಣದ ಜೀವದಾಣೆ, ನಾನು ಈ ಕಾರ್ಯ ಮಾಡುವದಿಲ್ಲ ಅಂದನು. ಆಗ ದಾವೀದನು ಊರೀಯನಿಗೆ--ಈ ಹೊತ್ತು ಇಲ್ಲಿರು; ನಾಳೆ ನಿನ್ನನ್ನು ಕಳುಹಿಸುತ್ತೇನೆ ಅಂದನು. ಹಾಗೆಯೇ ಊರೀಯನು ಆ ದಿನವೂ ಮಾರನೆ ದಿನವೂ ಯೆರೂಸ ಲೇಮಿನಲ್ಲಿಯೇ ಇದ್ದನು. ದಾವೀದನು ಅವನನ್ನು ಕರೆದಾಗ ಅವನು ಅವನ ಮುಂದೆ ಉಂಡು ಕುಡಿದನು. ಇದಲ್ಲದೆ ದಾವೀದನು ಅವನನ್ನು ಅಮಲೇರುವಂತೆ ಮಾಡಿಸಿದನು. ಅವನು ಸಾಯಂಕಾಲದಲ್ಲಿ ತನ್ನ ಮನೆಗೆ ಹೋಗದೆ ತನ್ನ ಯಜಮಾನನ ಸೇವಕರ ಸಂಗಡ ಮಲಗುವದಕ್ಕೆ ಹೊರಟುಹೋದನು. ಉದಯದಲ್ಲಿ ದಾವೀದನು ಯೋವಾಬನಿಗೆ ಒಂದು ಪತ್ರವನ್ನು ಬರೆದು ಊರೀಯನ ಕೈಯಲ್ಲಿ ಕಳುಹಿಸಿದನು. ಆ ಪತ್ರದಲ್ಲಿ--ಊರೀಯನನ್ನು ಘೋರವಾದ ಯುದ್ಧದ ಮುಂದುಗಡೆ ಸರಿಯಾಗಿ ನಿಲ್ಲಿಸಿ ಅವನು ಹೊಡೆಯಲ್ಪಟ್ಟು ಸಾಯುವ ಹಾಗೆ ಅವನನ್ನು ಬಿಟ್ಟು ನೀವು ಹಿಂದಕ್ಕೆ ಸರಿಯಿರಿ ಎಂದು ಬರೆದಿದ್ದನು.
- 1 Samuel 18:21–22 1 ಸಮುವೇಲನು 18:21–22ಅವನಿಗೆ ಉರುಲಾಗಿರುವ ಹಾಗೆಯೂ ಫಿಲಿಷ್ಟಿಯರ ಕೈ ಅವನ ಮೇಲೆ ಬರುವ ಹಾಗೆಯೂ ಇವಳನ್ನು ಅವನಿಗೆ ಕೊಡುವೆನು ಅಂದುಕೊಂಡನು. ಆದದರಿಂದ ಸೌಲನು ದಾವೀದನಿಗೆ--ನೀನು ಎರಡನೆ ಯವಳಿಂದ ಈ ಹೊತ್ತು ಅಳಿಯನಾಗು ಅಂದನು. ಸೌಲನು ತನ್ನ ಸೇವಕರಿಗೆ--ನೀವು ದಾವೀದನ ಸಂಗಡ ಗುಪ್ತವಾಗಿ ಮಾತನಾಡಿ--ಇಗೋ, ಅರಸನು ನಿನ್ನಲ್ಲಿ ಸಂತೋಷಪಡುತ್ತಾನೆ, ತನ್ನ ಸೇವಕರೆಲ್ಲರೂ ನಿನ್ನನ್ನು ಪ್ರೀತಿಸುತ್ತಾರೆ; ಆದದರಿಂದ ಅರಸನ ಅಳಿಯ ನಾಗು ಎಂದು ಹೇಳಿರಿ ಎಂದು ಆಜ್ಞಾಪಿಸಿದನು.
- 2 Samuel 20:9–10 2 ಸಮುವೇಲನು 20:9–10ಆಗ ಯೋವಾಬನು ಅಮಾಸನಿಗೆ--ನನ್ನ ಸಹೋದರನೇ, ಕ್ಷೇಮವೋ ಅಂದನು. ಯೋವಾಬನು ಮುದ್ದಿಡುವುದಕ್ಕೋಸ್ಕರ ತನ್ನ ಬಲಗೈಯಿಂದ ಅವನ ಗಡ್ಡವನ್ನು ಹಿಡಿದನು. ಆದರೆ ಅಮಾಸನು ಯೋವಾಬನ ಕೈಯಲ್ಲಿದ್ದ ಕತ್ತಿ ಯನ್ನು ಗಮನಿಸದಿದ್ದಾಗ ಯೋವಾಬನು ಅವನನ್ನು ಕರುಳುಗಳು ಹೊರಬರುವ ಹಾಗೆ ಅವನ ಪಕ್ಕೆಯ ಐದನೇ ಎಲುಬಿನಲ್ಲಿ ತಿವಿದನು. ಎರಡನೇ ಸಾರಿ ಹೊಡೆಯಲಿಲ್ಲ, ಅವನು ಸತ್ತನು. ಯೋವಾಬನೂ ಅವನ ಸಹೋದರನಾದ ಅಬೀಷೈಯೂ ಬಿಕ್ರೀಯ ಮಗನಾದ ಶೆಬನನ್ನು ಹಿಂದಟ್ಟಿದರು.
- Psalm 12:2 ಕೀರ್ತನೆಗಳು 12:2ಒಬ್ಬೊಬ್ಬನು ತನ್ನ ನೆರೆಯವನ ಸಂಗಡ ವ್ಯರ್ಥವಾದ ಮಾತನ್ನು ಆಡುತ್ತಾನೆ; ಮುಖಸ್ತುತಿಯ ತುಟಿಯಿಂದಲೂ ವಂಚನೆಯ ಹೃದಯದಿಂದಲೂ ಅವರು ಮಾತನಾಡುತ್ತಾರೆ.
- Luke 20:20–21 ಲೂಕನು 20:20–21ಅವರು ಆತನನ್ನು ಹೊಂಚಿ ನೋಡಿದವರಾಗಿ ಮಾತಿನಲ್ಲಿ ಆತನನ್ನು ಸಿಕ್ಕಿಸುವಂತೆಯೂ ಅಧಿಪತಿಯ ಬಲಕ್ಕೆ ಮತ್ತು ಅಧಿಕಾರಕ್ಕೆ ಒಪ್ಪಿಸುವಂತೆಯೂ ತಾವು ನೀತಿವಂತರೆಂದು ನಟಿಸುವ ಗೂಢಾಚಾರರನ್ನು ಕಳುಹಿಸಿದರು. ಆಗ ಅವರು ಆತನಿಗೆ--ಗುರುವೇ, ನೀನು ಮುಖದಾಕ್ಷಿಣ್ಯವಿಲ್ಲದೆ ಸರಿಯಾಗಿ ಮಾತನಾಡಿ ಬೋಧಿ ಸುತ್ತೀ; ದೇವರ ಮಾರ್ಗವನ್ನು ಸತ್ಯವಾಗಿ ಬೋಧಿಸು ವವನಾಗಿದ್ದೀಯೆಂದು ನಾವು ಬಲ್ಲೆವು.
- Psalm 5:9 ಕೀರ್ತನೆಗಳು 5:9ಅವರ ಬಾಯಲ್ಲಿ ನಂಬಿಗಸ್ತಿಕೆಯು ಇಲ್ಲವೇ ಇಲ್ಲ. ಅವರ ಒಳಭಾಗವು ಅತಿ ದುಷ್ಟತ್ವವೇ. ಅವರ ಗಂಟಲು ತೆರೆದ ಸಮಾ ಧಿಯೇ; ತಮ್ಮ ನಾಲಿಗೆಯಿಂದ ಹೆಮ್ಮೆ ಕೊಚ್ಚಿ ಕೊಳ್ಳುತ್ತಾರೆ.
- Psalm 101:5 ಕೀರ್ತನೆಗಳು 101:5ಮರೆಯಾಗಿ ನೆರೆಯವನ ಮೇಲೆ ಚಾಡಿ ಹೇಳುವವನನ್ನು ಸಂಹರಿಸುವೆನು; ಗರ್ವದ ಕಣ್ಣೂ ಅಹಂಕಾರದ ಹೃದಯವೂ ಉಳ್ಳವನನ್ನು ತಾಳಲಾರೆನು.