Proverbs · chapter 13 · verse 15
Proverbs 13:15 in Kannada
ಸುವಿವೇಕವು ದಯಾ ಸ್ಪದವು; ದೋಷಕರ ಮಾರ್ಗವು ಕಠಿಣವಾಗಿದೆ.
Suvivekavu dayaa spadavu; doshakara maargavu kathinavaagide.
Proverbs 13:15 in English
- King James Version (KJV)
- Good understanding giveth favour: but the way of transgressors [is] hard.
- World English Bible (WEB)
- Good understanding wins favor, but the way of the unfaithful is hard.
- American Standard Version (ASV)
- Good understanding giveth favor; But the way of the transgressor is hard.
- Bible in Basic English (BBE)
- Wise behaviour gets approval, but the way of the false is their destruction.
- Darby Translation (DBY)
- Good understanding procureth favour; but the way of the treacherous is hard.
- Webster's Bible (WBS)
- Good understanding giveth favor: but the way of transgressors [is] hard.
- Young's Literal Translation (YLT)
- Good understanding giveth grace, And the way of the treacherous [is] hard.
Read in context
- 13ವಾಕ್ಯವನ್ನು ಉಲ್ಲಂಘಿಸುವ ವನು ನಾಶವಾಗುವನು; ಆಜ್ಞೆಗೆ ಭಯಪಡುವವನು ಪ್ರತಿಫಲ ಹೊಂದುವನು.
- 14ಮರಣದ ಪಾಶಗ ಳಿಂದ ತಪ್ಪಿಸಿಕೊಳ್ಳುವದಕ್ಕೆ ಜ್ಞಾನವಂತರ ಕಟ್ಟಳೆಯು ಜೀವದ ಬುಗ್ಗೆಯಾಗಿದೆ.
- 15ಸುವಿವೇಕವು ದಯಾ ಸ್ಪದವು; ದೋಷಕರ ಮಾರ್ಗವು ಕಠಿಣವಾಗಿದೆ.
- 16ಪ್ರತಿ ಜಾಣನು ತಿಳುವಳಿಕೆಯಿಂದ ವರ್ತಿಸುತ್ತಾನೆ; ಅವಿವೇಕಿಯು ತನ್ನ ಮೂಢತ್ವವನ್ನು ಹೊರಗೆಡವು ತ್ತಾನೆ.
- 17ದುಷ್ಟ ಸೇವಕನು ಕೇಡಿಗೆ ಬೀಳುತ್ತಾನೆ; ನಂಬಿಕೆಯಾದ ರಾಯಭಾರಿಯು ಆರೋಗ್ಯದಾಯಕ.
Cross references
- Jeremiah 2:19 ಯೆರೆಮೀಯ 2:19ನಿನ್ನ ಕೆಟ್ಟತನವೇ ನಿನ್ನನ್ನು ತಿದ್ದುವದು; ನಿನ್ನ ಹಿಂಜಾರಿಕೆಗಳೇ ನಿನ್ನನ್ನು ಗದರಿಸುವವು; ಹೀಗಿ ರುವದರಿಂದ ನೀನು ನಿನ್ನ ದೇವರಾದ ಕರ್ತನನ್ನು ಬಿಟ್ಟದ್ದೂ ನನ್ನ ಭಯವೂ ನಿನ್ನಲ್ಲಿ ಇಲ್ಲದಿರುವದೂ ಕೆಟ್ಟದ್ದೂ ಕಹಿಯಾದದ್ದೂ ಎಂದು ತಿಳುಕೊಂಡು ನೋಡು ಎಂದು ಸೈನ್ಯಗಳ ಕರ್ತನಾದ ದೇವರು ಅನ್ನುತ್ತಾನೆ.
- Proverbs 4:19 ಜ್ಞಾನೋಕ್ತಿಗಳು 4:19ದುಷ್ಟರ ಮಾರ್ಗವು ಕತ್ತಲೆ ಯಂತಿದೆ. ಅವರು ಯಾವದಕ್ಕೆ ಎಡವಿ ಬೀಳುತ್ತಾರೋ ಅದು ಅವರಿಗೆ ಗೊತ್ತಾಗದು.
- Proverbs 15:10 ಜ್ಞಾನೋಕ್ತಿಗಳು 15:10ಮಾರ್ಗವನ್ನು ತೊರೆದುಬಿಟ್ಟವನಿಗೆ ಶಿಕ್ಷೆಯು ಕಠಿಣವಾಗಿದೆ; ಗದರಿಕೆಯನ್ನು ಹಗೆಮಾಡುವವನು ಸಾಯುವನು.
- Romans 6:21 ರೋಮಾಪುರದವರಿಗೆ 6:21ನೀವು ಆಗ ಮಾಡಿ ದವುಗಳಿಂದ ನಿಮಗುಂಟಾದ ಫಲವೇನು? ಈಗ ಅವುಗಳ ವಿಷಯದಲ್ಲಿ ನಿಮಗೆ ನಾಚಿಕೆಯುಂಟಷ್ಟೆ; ಅವುಗಳ ಅಂತ್ಯವು ಮರಣವೇ.
- Psalm 111:10 ಕೀರ್ತನೆಗಳು 111:10ಕರ್ತನ ಭಯವು ಜ್ಞಾನದ ಮೂಲವು; ಆತನ ಆಜ್ಞೆಗಳನ್ನು ಕೈಕೊಳ್ಳುವವರಿಗೆ ತಿಳುವಳಿಕೆಯಿದೆ; ಆತನ ಸ್ತೋತ್ರವು ಎಂದೆಂದಿಗೂ ನಿಲ್ಲುತ್ತದೆ.
- Acts 7:10 ಅಪೊಸ್ತಲರ ಕೃತ್ಯಗಳು 7:10ಅವನಿಗೆ ಬಂದ ಎಲ್ಲಾ ಸಂಕಟಗಳಿಂದ ಅವನನ್ನು ಬಿಡಿಸಿ ಐಗುಪ್ತ ದೇಶದ ಅರಸನಾದ ಫರೋಹನ ಸಮ್ಮುಖದಲ್ಲಿ ದಯಾ ಪಾತ್ರನೂ ಜ್ಞಾನವುಳ್ಳವನೂ ಆಗಿರುವಂತೆ ಅನುಗ್ರಹಿ ಸಿದನು. ಫರೋಹನು ಅವನನ್ನು ಐಗುಪ್ತ ದೇಶದ ಮೇಲೆಯೂ ತನ್ನ ಎಲ್ಲಾ ಮನೆಯ ಮೇಲೆಯೂ ಅಧಿಕಾರಿಯನ್ನಾಗಿ ನೇಮಿಸಿದನು.
- Proverbs 3:4 ಜ್ಞಾನೋಕ್ತಿಗಳು 3:4ಹೀಗೆ ನೀನು ದೇವರ ಮುಂದೆಯೂ ಮನುಷ್ಯನ ಮುಂದೆಯೂ ದಯೆಯನ್ನೂ ಒಳ್ಳೆಯ ವಿವೇಕವನ್ನೂ ಪಡೆದುಕೊಳ್ಳುವಿ.
- Psalm 95:9–11 ಕೀರ್ತನೆಗಳು 95:9–11ಅಲ್ಲಿ ನಿಮ್ಮ ತಂದೆಗಳು ನನ್ನನ್ನು ಶೋಧಿಸಿ, ಪರೀಕ್ಷಿಸಿದರು; ನನ್ನ ಕೆಲಸವನ್ನು ನೋಡಿದರು. ನಾಲ್ವತ್ತು ವರುಷ ಆ ಸಂತತಿಗೆ ಬೇಸರಗೊಂಡು--ಇವರು ತಮ್ಮ ಹೃದಯ ದಲ್ಲಿ ತಪ್ಪಿ ಹೋಗುವ ಜನರಾಗಿದ್ದಾರೆ; ನನ್ನ ಮಾರ್ಗ ಗಳನ್ನು ಅವರು ಅರಿಯರು ಅಂದೆನು.ಆದದರಿಂದ ನನ್ನ ವಿಶ್ರಾಂತಿಯಲ್ಲಿ ಅವರು ಪ್ರವೇಶಿಸರೆಂದು ಕೋಪ ದಿಂದ ಆಣೆ ಇಟ್ಟುಕೊಂಡೆನು. ಆದದರಿಂದ ನನ್ನ ವಿಶ್ರಾಂತಿಯಲ್ಲಿ ಅವರು ಪ್ರವೇಶಿಸರೆಂದು ಕೋಪ ದಿಂದ ಆಣೆ ಇಟ್ಟುಕೊಂಡೆನು.
- Luke 2:52 ಲೂಕನು 2:52ಯೇಸು ಜ್ಞಾನದಲ್ಲಿಯೂ ದೇಹದ ಬೆಳವಣಿಗೆ ಯಲ್ಲಿಯೂ ದೇವರ ಮತ್ತು ಮನುಷ್ಯರ ದಯೆಯಲ್ಲಿಯೂ ವೃದ್ಧಿಯಾದನು.
- 1 Samuel 18:14–16 1 ಸಮುವೇಲನು 18:14–16ದಾವೀದನು ತನ್ನ ಸಕಲ ಮಾರ್ಗಗಳಲ್ಲಿ ಬುದ್ಧಿಯುಳ್ಳವನಾಗಿ ವರ್ತಿಸಿದನು. ಕರ್ತನು ಅವನ ಸಂಗಡ ಇದ್ದನು. ಅವನು ಮಹಾಬುದ್ಧಿವಂತನಾಗಿ ನಡೆಯುವದನ್ನು ಸೌಲನು ನೋಡಿ ಅವನಿಗೆ ಭಯ ಪಟ್ಟಿದ್ದನು. ಇಸ್ರಾಯೇಲ್ ಜನರೂ ಯೆಹೂದ ಜನರೂ ದಾವೀದನು ತಮ್ಮ ಮುಂದೆ ಹೋಗುತ್ತಾ ಬರುತ್ತಾ ಇರುವದರಿಂದ ಅವನನ್ನು ಪ್ರೀತಿ ಮಾಡಿದರು.
- Proverbs 14:35 ಜ್ಞಾನೋಕ್ತಿಗಳು 14:35ಜ್ಞಾನ ವುಳ್ಳ ಸೇವಕನ ಕಡೆಗೆ ಅರಸನ ದಯೆ ಇದೆ; ನಾಚಿಕೆ ಪಡಿಸುವವನ ಕಡೆಗೆ ಅವನ ರೌದ್ರವಿದೆ.