Proverbs · chapter 14 · verse 35
Proverbs 14:35 in Kannada
ಜ್ಞಾನ ವುಳ್ಳ ಸೇವಕನ ಕಡೆಗೆ ಅರಸನ ದಯೆ ಇದೆ; ನಾಚಿಕೆ ಪಡಿಸುವವನ ಕಡೆಗೆ ಅವನ ರೌದ್ರವಿದೆ.
Jnyaana vulla sevakana kadege arasana daye ide; naachike padisuvavana kadege avana raudravide.
Proverbs 14:35 in English
- King James Version (KJV)
- The king’s favour [is] toward a wise servant: but his wrath is [against] him that causeth shame.
- World English Bible (WEB)
- The king’s favor is toward a servant who deals wisely, but his wrath is toward one who causes shame.
- American Standard Version (ASV)
- The king’s favor is toward a servant that dealeth wisely; But his wrath will be [against] him that causeth shame.
- Bible in Basic English (BBE)
- The king has pleasure in a servant who does wisely, but his wrath is against him who is a cause of shame.
- Darby Translation (DBY)
- The king's favour is toward a wise servant; but his wrath is [against] him that causeth shame.
- Webster's Bible (WBS)
- The king's favor [is] towards a wise servant: but his wrath is [against] him that causeth shame.
- Young's Literal Translation (YLT)
- The favour of a king [is] to a wise servant, And an object of his wrath is one causing shame!
Read in context
- 33ತಿಳುವಳಿಕೆಯುಳ್ಳವನ ಹೃದಯದಲ್ಲಿ ಜ್ಞಾನವು ನೆಲೆ ಯಾಗಿದೆ; ಬುದ್ಧಿಹೀನರಲ್ಲಿರುವದು ಪ್ರಕಟವಾಗುತ್ತದೆ.
- 34ನೀತಿಯು ಜನಾಂಗವನ್ನು ವೃದ್ಧಿಮಾಡುತ್ತದೆ; ಯಾವ ಪ್ರಜೆಗಾದರೂ ಪಾಪವು ಅವಮಾನವಾಗಿದೆ.ಜ್ಞಾನ ವುಳ್ಳ ಸೇವಕನ ಕಡೆಗೆ ಅರಸನ ದಯೆ ಇದೆ; ನಾಚಿಕೆ ಪಡಿಸುವವನ ಕಡೆಗೆ ಅವನ ರೌದ್ರವಿದೆ.
- 35ಜ್ಞಾನ ವುಳ್ಳ ಸೇವಕನ ಕಡೆಗೆ ಅರಸನ ದಯೆ ಇದೆ; ನಾಚಿಕೆ ಪಡಿಸುವವನ ಕಡೆಗೆ ಅವನ ರೌದ್ರವಿದೆ.
Cross references
- Matthew 24:45–51 ಮತ್ತಾಯನು 24:45–51ಹಾಗಾದರೆ ತನ್ನ ಮನೆಯಲ್ಲಿದ್ದವರಿಗೆ ತಕ್ಕ ಕಾಲ ದಲ್ಲಿ ಆಹಾರ ಕೊಡುವಂತೆ ಅವರ ಮೇಲೆ ತನ್ನ ಯಜಮಾನನು ನೇಮಿಸಿದ ಅಧಿಕಾರಿಯೂ ನಂಬಿಗಸ್ತನೂ ಜ್ಞಾನಿಯೂ ಆದ ಸೇವಕನು ಯಾರು? ಯಜಮಾನನು ಬಂದು ಯಾವ ಸೇವಕನು ಹಾಗೆ ಮಾಡುವದನ್ನು ನೋಡುವನೋ ಆ ಸೇವಕನೇ ಧನ್ಯನು. ಅವನನ್ನು ಆತನು ತನ್ನ ಎಲ್ಲಾ ಆಸ್ತಿಯ ಮೇಲೆ ನೇಮಿಸುವನೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ. ಆದರೆ ಆ ಕೆಟ್ಟ ಸೇವಕನು ತನ್ನ ಹೃದಯದಲ್ಲಿ--ನನ್ನ ಯಜಮಾನನು ಬರುವದಕ್ಕೆ ತಡಮಾಡುತ್ತಾನೆ ಎಂದು ಅಂದುಕೊಂಡು ತನ್ನ ಜೊತೇ ಸೇವಕರನ್ನು ಹೊಡೆಯುತ್ತಾ ಕುಡುಕರ ಸಂಗಡ ತಿನ್ನುವದಕ್ಕೂ ಕುಡಿಯುವದಕ್ಕೂ ಪ್ರಾರಂಭಿಸು ವದಾದರೆ ಅವನು ನಿರೀಕ್ಷಿಸದೆ ಇರುವ ದಿನದಲ್ಲಿ ಇಲ್ಲವೆ ನೆನಸದ ಗಳಿಗೆಯಲ್ಲಿ ಆ ಸೇವಕನ ಯಜಮಾ ನನು ಬಂದುಅವನನ್ನು ಛೇದಿಸಿ ಕಪಟಿಗಳೊಂದಿಗೆ ಅವನ ಪಾಲನ್ನು ನೇಮಿಸುವನು; ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು. ಅವನನ್ನು ಛೇದಿಸಿ ಕಪಟಿಗಳೊಂದಿಗೆ ಅವನ ಪಾಲನ್ನು ನೇಮಿಸುವನು; ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು.
- Matthew 25:23 ಮತ್ತಾಯನು 25:23ಆಗ ಅವನ ಯಜಮಾನನು ಅವನಿಗೆ--ನಂಬಿಗಸ್ತನಾದ ಒಳ್ಳೇ ಸೇವಕನೇ, ಒಳ್ಳೇ ದನ್ನು ಮಾಡಿದ್ದೀ; ಸ್ವಲ್ಪವಾದವುಗಳಲ್ಲಿ ನೀನು ನಂಬಿಗ ಸ್ತನಾದದ್ದರಿಂದ ನಾನು ನಿನ್ನನ್ನು ಬಹಳವಾದವುಗಳ ಮೇಲೆ ಅಧಿಕಾರಿಯನ್ನಾಗಿ ನೇಮಿಸುವೆನು; ನೀನು ನಿನ್ನ ಯಜಮಾನನ ಸಂತೋಷದಲ್ಲಿ ಪ್ರವೇಶಿಸು ಅಂದನು.
- Proverbs 22:11 ಜ್ಞಾನೋಕ್ತಿಗಳು 22:11ಹೃದಯ ಶುದ್ಧಿಯನ್ನು ಪ್ರೀತಿಸುವವನಿಗೆ ತನ್ನ ತುಟಿಗಳ ಕೃಪೆಗಾಗಿ ಅರಸನು ಅವನಿಗೆ ಸ್ನೇಹಿತ ನಾಗಿರುವನು.
- Proverbs 29:12 ಜ್ಞಾನೋಕ್ತಿಗಳು 29:12ಸುಳ್ಳಿಗೆ ಕಿವಿಗೊಡುವ ಅಧಿಕಾರಿಗೆ ಕಿವಿಗೊಟ್ಟರೆ ಅವನ ಸೇವಕರೆಲ್ಲರೂ ದುಷ್ಟರೇ.
- Proverbs 25:5 ಜ್ಞಾನೋಕ್ತಿಗಳು 25:5ಅರಸನ ಸಮ್ಮುಖದಿಂದ ದುಷ್ಟರನ್ನು ತೆಗೆದುಹಾಕಿದರೆ ಅವನ ಸಿಂಹಾಸನವು ನೀತಿಯಲ್ಲಿ ಸ್ಥಿರವಾಗುವದು.
- Matthew 25:21 ಮತ್ತಾಯನು 25:21ಆಗ ಅವನ ಯಜಮಾನನು ಅವನಿಗೆ--ನಂಬಿಗಸ್ತನಾದ ಒಳ್ಳೇ ಸೇವಕನೇ, ಒಳ್ಳೇದನ್ನು ಮಾಡಿದ್ದೀ. ಸ್ವಲ್ಪವಾದವುಗಳಲ್ಲಿ ನೀನು ನಂಬಿಗಸ್ತ ನಾದದ್ದರಿಂದ ನಾನು ನಿನ್ನನ್ನು ಬಹಳವಾದವುಗಳ ಮೇಲೆ ಅಧಿಕಾರಿಯನ್ನಾಗಿ ನೇಮಿಸುವೆನು; ನೀನು ನಿನ್ನ ಯಜಮಾನನ ಸಂತೋಷದಲ್ಲಿ ಪ್ರವೇಶಿಸು ಅಂದನು.
- Luke 12:42–48 ಲೂಕನು 12:42–48ಕರ್ತನು--ಹಾಗಾದರೆ ತಕ್ಕಕಾಲದಲ್ಲಿ ಅವರ ಪಾಲಿನ ಆಹಾರವನ್ನು ಕೊಡುವದಕ್ಕಾಗಿ ಒಡೆಯನು ತನ್ನ ಮನೆಯಮೇಲೆ ನೇಮಿಸುವ ನಂಬಿಗಸ್ತನೂ ವಿವೇಕಿಯೂ ಆಗಿರುವ ಮನೇವಾರ್ತೆಯವನು ಯಾರು? ತನ್ನ ಒಡೆಯನು ಬಂದಾಗ ಯಾವನು ಹೀಗೆ ಮಾಡುವದನ್ನು ಕಾಣುವನೋ ಆ ಸೇವಕನು ಧನ್ಯನು; ಅವನು ತನಗಿರುವ ಎಲ್ಲಾದರ ಮೇಲೆ ಅವನನ್ನು ಅಧಿಕಾರಿಯನ್ನಾಗಿ ನೇಮಿಸುವನು ಎಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. ಆದರೆ ಆ ಸೇವಕನು--ನನ್ನ ಒಡೆಯನು ಬರುವದಕ್ಕೆ ತಡಮಾಡುತ್ತಾನೆ ಎಂದು ತನ್ನ ಹೃದಯದಲ್ಲಿ ಅಂದು ಕೊಂಡು ಗಂಡಾಳು ಹೆಣ್ಣಾಳುಗಳನ್ನು ಹೊಡೆಯು ವದಕ್ಕೂ ತಿಂದು ಕುಡಿದು ಮತ್ತನಾಗುವದಕ್ಕೂ ಆರಂಭಿಸಿದರೆ ಅವನು ನಿರೀಕ್ಷಿಸದ ದಿನದಲ್ಲಿಯೂ ತಿಳಿಯದ ಗಳಿಗೆಯಲ್ಲಿಯೂ ಆ ಸೇವಕನ ಒಡೆಯನು ಬಂದು ಅವನನ್ನು ಕಠಿಣವಾಗಿ ಛೇದಿಸಿ ಅವನಿಗೆ ನಂಬಿಕೆಯಿಲ್ಲದವರ ಕೂಡ ಪಾಲನ್ನು ನೇಮಕ ಮಾಡುವನು. ಇದಲ್ಲದೆ ತನ್ನ ಒಡೆಯನ ಚಿತ್ತವನ್ನು ತಿಳಿದು ತನ್ನನ್ನು ಸಿದ್ಧಮಾಡಿಕೊಳ್ಳದೆ ಇಲ್ಲವೆ ಅವನ ಚಿತ್ತಕ್ಕೆ ಅನುಸಾರವಾಗಿ ಮಾಡದೆ ಇದ್ದ ಸೇವಕನು ಬಹಳ ಪೆಟ್ಟುಗಳನ್ನು ತಿನ್ನುವನು. ಆದರೆ ಪೆಟ್ಟುಗಳಿಗೆ ಯೋಗ್ಯವಾದವುಗಳನ್ನು ತಿಳಿಯದೆ ಮಾಡಿದವನು ಸ್ವಲ್ಪ ಪೆಟ್ಟುಗಳನ್ನು ತಿನ್ನುವನು. ಯಾಕಂದರೆ ಯಾವನಿಗೆ ಹೆಚ್ಚುಕೊಡಲ್ಪಟ್ಟಿದೆಯೋ ಅವನಿಂದ ಹೆಚ್ಚು ಕೇಳಲ್ಪಡು ವದು; ಯಾವನಿಗೆ ಮನುಷ್ಯರು ಹೆಚ್ಚಾಗಿ ಒಪ್ಪಿಸಿರುವರೋ ಅವನಿಂದ ಅವರು ಹೆಚ್ಚಾಗಿ ಕೇಳುವ
- Proverbs 20:8 ಜ್ಞಾನೋಕ್ತಿಗಳು 20:8ನ್ಯಾಯತೀರ್ಪಿನ ಸಿಂಹಾಸನದ ಮೇಲೆ ಕೂತಿರುವ ಅರಸನು ತನ್ನ ಕಣ್ಣು ದೃಷ್ಟಿಯಿಂದ ಸಕಲ ಕೆಟ್ಟತನವನ್ನು ಚದರಿಸುವನು.
- Proverbs 20:26 ಜ್ಞಾನೋಕ್ತಿಗಳು 20:26ಜ್ಞಾನಿಯಾದ ಅರಸನು ದುಷ್ಟರನ್ನು ಚದರಿಸಿ ಅವರ ಮೇಲೆ ಚಕ್ರವನ್ನು ಎಳೆಯುತ್ತಾನೆ.
- Proverbs 19:26 ಜ್ಞಾನೋಕ್ತಿಗಳು 19:26ತಂದೆಯನ್ನು ನಷ್ಟಪಡಿಸಿ ತಾಯಿಯನ್ನು ಓಡಿಸುವವನು ನಾಚಿಕೆಯನ್ನುಂಟು ಮಾಡಿ ನಿಂದೆಯನ್ನು ತರುತ್ತಾನೆ.
- Proverbs 17:2 ಜ್ಞಾನೋಕ್ತಿಗಳು 17:2ನಾಚಿಕೆಪಡಿಸುವ ಮಗನ ಮೇಲೆ ಜ್ಞಾನಿ ಯಾದ ಸೇವಕನು ಆಳುವವನಾಗಿ ಸಹೋದರರಲ್ಲಿ ಬಾಧ್ಯತೆಗೆ ಪಾಲುಗಾರನಾಗುವನು.
- Proverbs 19:12–13 ಜ್ಞಾನೋಕ್ತಿಗಳು 19:12–13ಅರಸನ ಕೋಪವು ಸಿಂಹದ ಘರ್ಜನೆಯಂತಿದೆ; ಅವನ ದಯೆಯು ಹುಲ್ಲಿನ ಮೇಲಿರುವ ಇಬ್ಬನಿಯಂತಿದೆ. ಬುದ್ಧಿಹೀನನಾದ ಮಗನು ತನ್ನ ತಂದೆಗೆ ಹಾನಿಕ ರನು; ಹೆಂಡತಿಯ ಕಲಹಗಳು ಯಾವಾಗಲೂ ತೊಟ್ಟಿ ಕ್ಕುವ ಹನಿಗಳು.