Proverbs · chapter 14 · verse 13
Proverbs 14:13 in Kannada
ನಗೆಯಲ್ಲಿಯೂ ಹೃದಯವು ದುಃಖದಿಂದ ಇರು ವದು; ಅದರ ಉಲ್ಲಾಸದ ಅಂತ್ಯವು ವ್ಯಾಕುಲವೇ.
Nageyalliyoo hrudayavu duhkhadinda iru vadu; adara ullaasada antyavu vyaakulave.
Proverbs 14:13 in English
- King James Version (KJV)
- Even in laughter the heart is sorrowful; and the end of that mirth [is] heaviness.
- World English Bible (WEB)
- Even in laughter the heart may be sorrowful, and mirth may end in heaviness.
- American Standard Version (ASV)
- Even in laughter the heart is sorrowful; And the end of mirth is heaviness.
- Bible in Basic English (BBE)
- Even while laughing the heart may be sad; and after joy comes sorrow.
- Darby Translation (DBY)
- Even in laughter the heart is sorrowful, and the end of mirth is sadness.
- Webster's Bible (WBS)
- Even in laughter the heart is sorrowful; and the end of that mirth [is] heaviness.
- Young's Literal Translation (YLT)
- Even in laughter is the heart pained, And the latter end of joy [is] affliction.
Read in context
- 11ದುಷ್ಟರ ಮನೆಯು ಕೆಡವಲ್ಪಡುವದು; ಯಥಾರ್ಥವಂತರ ಗುಡಾರವು ಏಳಿಗೆಯಾಗುವದು.
- 12ಒಬ್ಬ ಮನುಷ್ಯನಿಗೆ ಸರಿಯೆಂದು ತೋರುವ ಮಾರ್ಗ ವಿದೆ. ಅದರ ಅಂತ್ಯವು ಮರಣದ ಮಾರ್ಗಗಳೇ.
- 13ನಗೆಯಲ್ಲಿಯೂ ಹೃದಯವು ದುಃಖದಿಂದ ಇರು ವದು; ಅದರ ಉಲ್ಲಾಸದ ಅಂತ್ಯವು ವ್ಯಾಕುಲವೇ.
- 14ಹೃದಯದಲ್ಲಿ ಹಿಂಜರಿಯುವವನು ತನ್ನ ಸ್ವಂತ ಮಾರ್ಗಗಳಿಂದ ತುಂಬಿಕೊಳ್ಳುವನು; ಒಳ್ಳೆಯವನು ತನ್ನಲ್ಲಿ ತಾನೇ ತೃಪ್ತಿಹೊಂದುವನು.
- 15ಮೂಢರು ಪ್ರತಿಯೊಂದು ಮಾತನ್ನು ನಂಬುತ್ತಾರೆ; ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು.
Cross references
- Ecclesiastes 2:2 ಪ್ರಸಂಗಿ 2:2ನಗೆಯ ವಿಷಯವಾಗಿ--ಇದು ಹುಚ್ಚು ಎಂದೂ ಸಂತೋಷದ ವಿಷಯವಾಗಿ--ಇದೇನು ಮಾಡುತ್ತದೆ ಎಂದೂ ನಾನು ಹೇಳಿದೆನು.
- James 4:9 ಯಾಕೋಬನು 4:9ದುಃಖಿಸಿರಿ, ಗೋಳಾಡಿರಿ, ಕಣ್ಣೀರಿಡಿರಿ; ನಿಮ್ಮ ನಗೆಯು ದುಃಖಕ್ಕೂ ನಿಮ್ಮ ಸಂತೋಷವು ವ್ಯಥೆಗೂ ತಿರುಗಿಕೊಳ್ಳಲಿ.
- Ecclesiastes 11:9 ಪ್ರಸಂಗಿ 11:9ಓ ಯೌವನಸ್ಥನೇ, ನಿನ್ನ ಯೌವನದಲ್ಲಿ ಸಂತೋಷಪಡು. ನಿನ್ನ ಯೌವನದ ದಿನಗಳಲ್ಲಿ ನಿನ್ನ ಹೃದಯವು ನಿನ್ನನ್ನು ಆನಂದಪಡಿಸಲಿ; ನೀನು ನಿನ್ನ ಹೃದಯದ ಮಾರ್ಗಗಳಲ್ಲಿಯೂ ನಿನ್ನ ಕಣ್ಣುಗಳ ನೋಟ ದಲ್ಲಿಯೂ ನಡೆ; ಆ ಎಲ್ಲಾ ಸಂಗತಿಗಳಿಗಾಗಿ ದೇವರು ನಿನ್ನನ್ನು ನ್ಯಾಯತೀರ್ಪಿಗೆ ತರುವನೆಂದು ತಿಳಿದುಕೋ.ಆದಕಾರಣ ನಿನ್ನ ಹೃದಯದಿಂದ ದುಃಖವನ್ನು ತೆಗೆದು ಹಾಕು; ನಿನ್ನ ಶರೀರದಿಂದ ಕೆಟ್ಟದ್ದನ್ನು ತೆಗೆದುಬಿಡು; ಬಾಲ್ಯವೂ ಯೌವನವೂ ವ್ಯರ್ಥವಾಗಿವೆ.
- Proverbs 5:4 ಜ್ಞಾನೋಕ್ತಿಗಳು 5:4ಆದರೆ ಅವಳ ಅಂತ್ಯವು ಮಾಚಿ ಪತ್ರೆಯಂತೆ ಕಹಿಯೂ ಇಬ್ಬಾಯಿ ಕತ್ತಿಯಂತೆ ಹರಿತವೂ ಇರುತ್ತದೆ.
- Ecclesiastes 7:5–6 ಪ್ರಸಂಗಿ 7:5–6ಮೂಢರ ಹಾಡನ್ನು ಒಬ್ಬ ಮನುಷ್ಯನು ಕೇಳುವದಕ್ಕಿಂತ ಜ್ಞಾನಿಗಳ ಗದರಿಕೆಯನ್ನು ಕೇಳುವದು ಲೇಸು. ಗಡಿಗೆಯ ಕೆಳಗೆ ಮುಳ್ಳುಗಳ ಚಟಚಟನೆಯ ಶಬ್ದ ಹೇಗೋ ಮೂಢನ ನಗುವು ಹಾಗೆಯೇ ಇರುವದು; ಇದೂ ಕೂಡ ವ್ಯರ್ಥವೇ.
- Luke 16:25 ಲೂಕನು 16:25ಆದರೆ ಅಬ್ರಹಾ ಮನು--ಮಗನೇ, ನೀನು ನಿನ್ನ ಜೀವಿತಕಾಲದಲ್ಲಿ ನಿನ್ನ ಒಳ್ಳೆಯವುಗಳನ್ನು ಹೊಂದಿದಿ; ಅದೇ ರೀತಿಯಲ್ಲಿ ಲಾಜರನು ಕೆಟ್ಟವುಗಳನ್ನು ಹೊಂದಿದ್ದನ್ನು ನೆನಪಿಗೆ ತಂದುಕೋ. ಆದರೆ ಈಗ ಅವನು ಆದರಣೆ ಹೊಂದುತ್ತಾ ಇದ್ದಾನೆ; ನೀನು ಯಾತನೆಪಡುತ್ತಾ ಇದ್ದೀ.
- Ecclesiastes 2:10–11 ಪ್ರಸಂಗಿ 2:10–11ನನ್ನ ಕಣ್ಣುಗಳು ಬಯಸಿದ್ದೆಲ್ಲವನ್ನು ಅವುಗಳಿಂದ ಹಿಂತೆಗೆಯಲಿಲ್ಲ, ಯಾವ ಸಂತೋಷಕ್ಕಾಗಿಯೂ ನನ್ನ ಹೃದಯವನ್ನು ನಾನು ತಡೆಯಲಿಲ್ಲ; ನನ್ನ ಎಲ್ಲಾ ಪ್ರಯಾಸದಲ್ಲಿ ನನ್ನ ಹೃದಯವು ಸಂತೋಷಿಸಿತು; ನನ್ನ ಪ್ರಯಾಸ ದಿಂದೆಲ್ಲಾ ನನಗಾದ ಪಾಲು ಇದೆ. ಆಗ ನನ್ನ ಕೈಗಳು ನಡಿಸಿದವುಗಳೆಲ್ಲವನ್ನು ನಾನು ಪ್ರಯಾಸ ಪಟ್ಟ ಪ್ರಯಾಸವನ್ನು ದೃಷ್ಟಿಸಿದೆನು; ಇಗೋ, ಎಲ್ಲವೂ ವ್ಯರ್ಥ ಮತ್ತು ಮನಸ್ಸಿಗೆ ಆಯಾಸಕರ. ಸೂರ್ಯನ ಕೆಳಗೆ ಯಾವ ಲಾಭವಿಲ್ಲ.
- Revelation 18:7–8 ಪ್ರಕಟನೆ 18:7–8ಅವಳು ಎಷ್ಟರಮಟ್ಟಿಗೆ ತನ್ನನ್ನು ಘನಪಡಿಸಿ ಕೊಂಡು ವೈಭವದಲ್ಲಿ ಜೀವಿಸಿದ್ದಳೋ ಅಷ್ಟರಮಟ್ಟಿಗೆ ಅವಳಿಗೆ ಯಾತನೆಯನ್ನೂ ದುಃಖವನ್ನೂ ಕೊಡಿರಿ; ಯಾಕಂದರೆ ಅವಳು ತನ್ನ ಹೃದಯದಲ್ಲಿ--ನಾನು ರಾಣಿ ಯಾಗಿ ಕೂತುಕೊಂಡಿದ್ದೇನೆ, ನಾನು ವಿಧವೆಯಲ್ಲ, ದುಃಖವನ್ನು ಕಾಣುವದೇ ಇಲ್ಲ ಎಂದು ಹೇಳಿಕೊಳ್ಳು ಆದದರಿಂದ ಅವಳಿಗೆ ಮರಣ ದುಃಖ ಕ್ಷಾಮ ಎಂಬೀ ಉಪದ್ರವಗಳು ಒಂದೇ ದಿನದಲ್ಲಿ ಸಂಭವಿ ಸುವವು; ಅವಳು ಬೆಂಕಿಯಿಂದ ಸಂಪೂರ್ಣವಾಗಿ ಸುಟ್ಟುಹೋಗುವಳು. ಅವಳಿಗೆ ದಂಡನೆಯನ್ನು ವಿಧಿಸಿದ ದೇವರಾಗಿರುವ ಕರ್ತನು ಬಲಿಷ್ಠನಾಗಿದ್ದಾನೆ.