Proverbs · chapter 14 · verse 26
Proverbs 14:26 in Kannada
ಕರ್ತನ ಭಯವೇ ಬಲವಾದ ಭರವಸವು; ಆತನ ಮಕ್ಕಳಿಗೆ ಆಶ್ರಯ ಸ್ಥಳವು ಇರುವದು.
Kartana bhayave balavaada bharavasavu; aatana makkalige aashraya sthalavu iruvadu.
Proverbs 14:26 in English
- King James Version (KJV)
- In the fear of the LORD [is] strong confidence: and his children shall have a place of refuge.
- World English Bible (WEB)
- In the fear of the LORD is a secure fortress, and he will be a refuge for his children.
- American Standard Version (ASV)
- In the fear of Jehovah is strong confidence; And his children shall have a place of refuge.
- Bible in Basic English (BBE)
- For him in whose heart is the fear of the Lord there is strong hope: and his children will have a safe place.
- Darby Translation (DBY)
- In the fear of Jehovah is strong confidence, and his children shall have a place of refuge.
- Webster's Bible (WBS)
- In the fear of the LORD [is] strong confidence: and his children shall have a place of refuge.
- Young's Literal Translation (YLT)
- In the fear of Jehovah [is] strong confidence, And to His sons there is a refuge.
Read in context
- 24ಜ್ಞಾನವಂತರ ಕಿರೀಟವು ಅದರ ಐಶ್ವ ರ್ಯವೇ; ಬುದ್ಧಿಹೀನರ ಬುದ್ಧಿಹೀನತೆಯು ಅವರ ಮೂರ್ಖತನವೇ.
- 25ಸತ್ಯ ಸಾಕ್ಷಿಯು ಪ್ರಾಣಗಳನ್ನು ತಪ್ಪಿಸುತ್ತಾನೆ; ಮೋಸದ ಸಾಕ್ಷಿಯು ಸುಳ್ಳುಗಳನ್ನು ಆಡು ತ್ತಾನೆ.
- 26ಕರ್ತನ ಭಯವೇ ಬಲವಾದ ಭರವಸವು; ಆತನ ಮಕ್ಕಳಿಗೆ ಆಶ್ರಯ ಸ್ಥಳವು ಇರುವದು.
- 27ಮರಣದ ಪಾಶಗಳಿಂದ ತೊಲಗುವದಕ್ಕೆ ಕರ್ತನ ಭಯವು ಜೀವದ ಬುಗ್ಗೆ.
- 28ಜನ ಸಮೂಹದಲ್ಲಿ ಅರಸನ ಘನತೆ ಇದೆ; ಜನರ ಕೊರತೆಯಲ್ಲಿ ರಾಜಪುತ್ರನ ನಾಶ.
Cross references
- Proverbs 19:23 ಜ್ಞಾನೋಕ್ತಿಗಳು 19:23ಕರ್ತನ ಭಯವು ಜೀವಕ್ಕೆ ಒಲಿಯುತ್ತದೆ; ಅದನ್ನು ಹೊಂದಿದ ವನು ತೃಪ್ತನಾಗಿ ನೆಲೆಗೊಳ್ಳುವನು; ಅವನಿಗೆ ಕೇಡು ಸಂಭವಿಸುವದಿಲ್ಲ.
- Jeremiah 32:39–40 ಯೆರೆಮೀಯ 32:39–40ಅವರಿಗೂ ಅವರ ತರುವಾಯ ಅವರ ಮಕ್ಕಳಿಗೂ ಒಳ್ಳೇದಕ್ಕಾಗಿ ಅವರು ಯಾವಾಗಲೂ ನನಗೆ ಭಯ ಪಡುವ ಹಾಗೆ ಅವರಿಗೆ ಒಂದೇ ಹೃದಯವನ್ನೂ ಒಂದೇ ಮಾರ್ಗವನ್ನೂ ಕೊಡುವೆನು. ಅವರಿಗೆ ಒಳ್ಳೇದನ್ನು ಮಾಡುವ ಹಾಗೆ ನಾನು ತಿರುಗಿಸಿ ಬಿಡೆನೆಂದು ನಿತ್ಯವಾದ ಒಡಂಬಡಿಕೆಯನ್ನು ಅವರ ಸಂಗಡ ಮಾಡುತ್ತೇನೆ; ಅವರು ನನ್ನನ್ನು ಬಿಡದ ಹಾಗೆ ನನ್ನ ಭಯವನ್ನು ಅವರ ಹೃದಯಗಳಲ್ಲಿ ಇಡುತ್ತೇನೆ.
- Psalm 115:13–14 ಕೀರ್ತನೆಗಳು 115:13–14ಕರ್ತನಿಗೆ ಭಯ ಪಡುವವರಾದ ಹಿರಿಯರ ಸಂಗಡ ಕಿರಿಯರನ್ನು ಆಶೀರ್ವದಿಸುವನು. ಕರ್ತನು ನಿಮ್ಮನ್ನೂ ನಿಮ್ಮ ಮಕ್ಕಳನ್ನೂ ಅಭಿವೃದ್ಧಿ ಮಾಡುವನು.
- Proverbs 18:10 ಜ್ಞಾನೋಕ್ತಿಗಳು 18:10ಕರ್ತನ ನಾಮವು ಬಲವಾದ ಬುರುಜು; ನೀತಿವಂತನು ಅದರೊಳಕ್ಕೆ ಓಡಿಹೋಗಿ ಭದ್ರವಾಗಿರುತ್ತಾನೆ.
- Proverbs 3:7–8 ಜ್ಞಾನೋಕ್ತಿಗಳು 3:7–8ನಿನ್ನ ದೃಷ್ಟಿಯಲ್ಲಿ ಜ್ಞಾನಿಯಂತೆ ನೀನು ಇರಬೇಡ; ಕರ್ತನಿಗೆ ಭಯಪಟ್ಟು ಕೆಟ್ಟತನದಿಂದ ನೀನು ತೊಲಗಿಹೋಗು. ಅದು ನಿನ್ನ ದೇಹಕ್ಕೆ ಆರೋಗ್ಯವೂ ಎಲುಬುಗಳಿಗೆ ಸಾರವೂ ಆಗಿರುವದು.
- Psalm 34:7–11 ಕೀರ್ತನೆಗಳು 34:7–11ಆತನಿಗೆ ಭಯಪಡುವವರ ಸುತ್ತಲೂ ಕರ್ತನ ದೂತನು ಇಳು ಕೊಂಡು ಅವರನ್ನು ಕಾಪಾಡುತ್ತಾನೆ. ಕರ್ತನು ಒಳ್ಳೆಯವನೆಂದು ರುಚಿಸಿ ನೋಡಿರಿ; ಆತನಲ್ಲಿ ಆಶ್ರ ಯಿಸಿಕೊಳ್ಳುವ ಮನುಷ್ಯನು ಧನ್ಯನು. ಆತನ ಪರಿ ಶುದ್ಧರೇ, ನೀವು ಕರ್ತನಿಗೆ ಭಯಪಡಿರಿ; ಆತನಿಗೆ ಭಯಪಡುವವರಿಗೆ ಏನೂ ಕೊರತೆ ಇಲ್ಲ. ಪ್ರಾಯದ ಸಿಂಹಗಳು ಕೊರತೆಯಾಗಿ ಹಸಿಯುತ್ತವೆ; ಆದರೆ ಕರ್ತನನ್ನು ಹುಡುಕುವವರು ಯಾವ ಒಳ್ಳೆಯ ದಕ್ಕಾದರೂ ಕೊರತೆ ಪಡುವದಿಲ್ಲ. ಮಕ್ಕಳೇ, ನೀವು ಬಂದು ನನ್ನ ಮಾತನ್ನು ಕೇಳಿರಿ; ನಾನು ಕರ್ತನ ಭಯವನ್ನು ನಿಮಗೆ ಕಲಿಸುವೆನು.
- Malachi 4:2 ಮಲಾಕಿಯ 4:2ಆದರೆ ನನ್ನ ಹೆಸರಿಗೆ ಭಯಪಡುವವರಾದ ನಿಮಗೆ ನೀತಿಯ ಸೂರ್ಯನು ತನ್ನ ರೆಕ್ಕೆಗಳಲ್ಲಿ ಸ್ವಸ್ಥತೆಯನ್ನುಂಟು ಮಾಡುವವನಾಗಿ ಉದಯಿಸುವನು; ನೀವು ಹೊರಟು ಕೊಟ್ಟಿಗೆಯಿಂದ ಬಿಟ್ಟ ಕರುಗಳ ಹಾಗೆ ಕುಣಿದಾಡುವಿರಿ.
- Psalm 112:1 ಕೀರ್ತನೆಗಳು 112:1ನೀವು ಕರ್ತನನ್ನು ಸ್ತುತಿಸಿರಿ. ಕರ್ತನಿಗೆ ಭಯಪಟ್ಟು ಆತನ ಆಜ್ಞೆಗಳಲ್ಲಿ ಬಹಳವಾಗಿ ಸಂತೋಷಿಸುವ ಮನುಷ್ಯನು ಧನ್ಯನು.
- Malachi 3:16–18 ಮಲಾಕಿಯ 3:16–18ಆಗ ಕರ್ತನಿಗೆ ಭಯಪಡುವವರು ಒಬ್ಬರ ಸಂಗಡಲೊಬ್ಬರು ಆಗಾಗ್ಗೆ ಮಾತಾಡಿಕೊಂಡರು; ಕರ್ತನು ಕಿವಿಗೊಟ್ಟು ಅದನ್ನು ಕೇಳಿದನು; ಇದಲ್ಲದೆ ಕರ್ತನಿಗೆ ಭಯಪಡುವವರಿಗೋಸ್ಕರವೂ ಆತನ ಹೆಸರನ್ನು ನೆನಸುವವರಿಗೋಸ್ಕರವೂ ಆತನ ಮುಂದೆ ಜ್ಞಾಪಕದ ಪುಸ್ತಕವು ಬರೆಯಲ್ಪಟ್ಟಿತು. ನಾನು ನನ್ನ ಆಭರಣಗಳನ್ನು ಕೂಡಿಸಿಕೊಳ್ಳುವ ಆ ದಿನದಲ್ಲಿ ಅವರು ನನ್ನವರಾಗಿರುವರೆಂದೂ ಒಬ್ಬನು ತನಗೆ ಸೇವೆ ಮಾಡುವ ತನ್ನ ಮಗನನ್ನು ಕನಿಕರಿಸುವ ಪ್ರಕಾರ ಅವರನ್ನು ಕನಿಕರಿಸುವೆನೆಂದೂ ಸೈನ್ಯಗಳ ಕರ್ತನು ಹೇಳುತ್ತಾನೆ.ಆಗ ನೀವು ತಿಳುಕೊಂಡು ನೀತಿವಂತ ನಿಗೂ ದುಷ್ಟನಿಗೂ ದೇವರ ಸೇವೆಮಾಡುವವನಿಗೂ ಮಾಡದವನಿಗೂ ಇರುವ ಹೆಚ್ಚುಕಡಿಮೆಯನ್ನು ತಿಳುಕೊಳ್ಳುವಿರಿ. ಆಗ ನೀವು ತಿಳುಕೊಂಡು ನೀತಿವಂತ ನಿಗೂ ದುಷ್ಟನಿಗೂ ದೇವರ ಸೇವೆಮಾಡುವವನಿಗೂ ಮಾಡದವನಿಗೂ ಇರುವ ಹೆಚ್ಚುಕಡಿಮೆಯನ್ನು ತಿಳುಕೊಳ್ಳುವಿರಿ.
- Acts 9:31 ಅಪೊಸ್ತಲರ ಕೃತ್ಯಗಳು 9:31ಹೀಗಿರಲಾಗಿ ಯೂದಾಯ ಗಲಿಲಾಯ ಸಮಾ ರ್ಯ ಸೀಮೆಗಳಲ್ಲಿದ್ದ ಸಭೆಗಳು ಭಕ್ತಿವೃದ್ಧಿ ಹೊಂದಿದವು; ಕರ್ತನ ಭಯದಲ್ಲಿ ನಡೆದು ಪವಿತ್ರಾತ್ಮನಿಂದ ಆದರಣೆ ಹೊಂದಿ ಹೆಚ್ಚುತ್ತಾ ಬಂದವು.
- Isaiah 33:6 ಯೆಶಾಯ 33:6ನಿನ್ನ ಕಾಲದಲ್ಲಿ ಸ್ಥಿರತೆಯಾ ಗಿಯೂ ರಕ್ಷಣೆ ಜ್ಞಾನ ತಿಳುವಳಿಕೆಗಳ ನಿಕ್ಷೇಪವಾ ಗಿಯೂ ಇರುವನು; ಕರ್ತನ ಭಯವೇ ಅವನ ಬೊಕ್ಕಸವಾಗಿರುವದು.
- Proverbs 3:25–26 ಜ್ಞಾನೋಕ್ತಿಗಳು 3:25–26ಆಕಸ್ಮತ್ತಾದ ಭಯ ಕ್ಕಾಗಲಿ ಇಲ್ಲವೆ ಅವರ ಮೇಲೆ ಬರುವ ದುಷ್ಟರ ನಾಶನಕ್ಕಾಗಲಿ ನೀನು ಭಯಪಡದಿರು. ಕರ್ತನೇ ನಿನಗೆ ಭರವಸನಾಗಿದ್ದು ನಿನ್ನ ಪಾದವು ತೆಗೆಯಲ್ಪಡ ದಂತೆ ಆತನು ಕಾಪಾಡುವನು.