Proverbs · chapter 19 · verse 23
Proverbs 19:23 in Kannada
ಕರ್ತನ ಭಯವು ಜೀವಕ್ಕೆ ಒಲಿಯುತ್ತದೆ; ಅದನ್ನು ಹೊಂದಿದ ವನು ತೃಪ್ತನಾಗಿ ನೆಲೆಗೊಳ್ಳುವನು; ಅವನಿಗೆ ಕೇಡು ಸಂಭವಿಸುವದಿಲ್ಲ.
Kartana bhayavu jeevakke oliyuttade; adannu hondida vanu truptanaagi nelegolluvanu; avanige kedu sambhavisuvadilla.
Proverbs 19:23 in English
- King James Version (KJV)
- The fear of the LORD [tendeth] to life: and [he that hath it] shall abide satisfied; he shall not be visited with evil.
- World English Bible (WEB)
- The fear of the LORD leads to life, then contentment; he rests and will not be touched by trouble.
- American Standard Version (ASV)
- The fear of Jehovah [tendeth] to life; And he [that hath it] shall abide satisfied; He shall not be visited with evil.
- Bible in Basic English (BBE)
- The fear of the Lord gives life: and he who has it will have need of nothing; no evil will come his way.
- Darby Translation (DBY)
- The fear of Jehovah [tendeth] to life, and he [that hath it] shall rest satisfied without being visited with evil.
- Webster's Bible (WBS)
- The fear of the LORD [tendeth] to life: and [he that hath it] shall abide satisfied; he shall not be visited with evil.
- Young's Literal Translation (YLT)
- The fear of Jehovah [is] to life, And satisfied he remaineth — he is not charged with evil.
Read in context
- 21ಮನುಷ್ಯನ ಹೃದಯದಲ್ಲಿ ಅನೇಕ ಕಲ್ಪನೆಗಳಿವೆ; ಆದರೂ ಕರ್ತನ ಸಂಕಲ್ಪವೇ ಈಡೇರು ವದು.
- 22ಮನುಷ್ಯನ ಆಕಾಂಕ್ಷೆಯು ಆತನ ದಯೆಯೇ; ಬಡವನು ಸುಳ್ಳುಗಾರನಿಗಿಂತ ಒಳ್ಳೆಯವನು.
- 23ಕರ್ತನ ಭಯವು ಜೀವಕ್ಕೆ ಒಲಿಯುತ್ತದೆ; ಅದನ್ನು ಹೊಂದಿದ ವನು ತೃಪ್ತನಾಗಿ ನೆಲೆಗೊಳ್ಳುವನು; ಅವನಿಗೆ ಕೇಡು ಸಂಭವಿಸುವದಿಲ್ಲ.
- 24ಸೋಮಾರಿಯು ತನ್ನ ಕೈಯನ್ನು ಎದೆಯಲ್ಲಿ ಬಚ್ಚಿಟ್ಟು ತನ್ನ ಬಾಯಿಗೆ ಸಹ ಅದನ್ನು ಎತ್ತುವದಿಲ್ಲ.
- 25ಪರಿಹಾಸ್ಯಗಾರರನ್ನು ಹೊಡೆದರೆ ಮೂಢರು ಎಚ್ಚರಗೊಳ್ಳುವರು; ವಿವೇಕಿಯನ್ನು ಗದರಿಸಿ ದರೆ ಅವನು ತಿಳುವಳಿಕೆಯನ್ನು ಗ್ರಹಿಸುವನು.
Cross references
- Matthew 5:6 ಮತ್ತಾಯನು 5:6ನೀತಿಗೋಸ್ಕರ ಹಸಿದು ಬಾಯಾರಿದವರು ಧನ್ಯರು; ಯಾಕಂದರೆ ಅವರು ತೃಪ್ತಿ ಹೊಂದುವರು.
- Proverbs 14:26–27 ಜ್ಞಾನೋಕ್ತಿಗಳು 14:26–27ಕರ್ತನ ಭಯವೇ ಬಲವಾದ ಭರವಸವು; ಆತನ ಮಕ್ಕಳಿಗೆ ಆಶ್ರಯ ಸ್ಥಳವು ಇರುವದು. ಮರಣದ ಪಾಶಗಳಿಂದ ತೊಲಗುವದಕ್ಕೆ ಕರ್ತನ ಭಯವು ಜೀವದ ಬುಗ್ಗೆ.
- Proverbs 12:21 ಜ್ಞಾನೋಕ್ತಿಗಳು 12:21ನೀತಿವಂತನಿಗೆ ಯಾವ ಕೇಡೂ ಸಂಭವಿಸದು; ದುಷ್ಟರಾದರೋ ಕೇಡಿನಿಂದ ತುಂಬಿಕೊಳ್ಳುವರು.
- Isaiah 58:10–11 ಯೆಶಾಯ 58:10–11ಹಸಿದವನ ಕಡೆಗೆ ನಿನ್ನ ಮನಸ್ಸು ಹೋಗುವಂತೆ ಮಾಡಿ, ಕುಂದಿ ಹೋದವನ ಪ್ರಾಣವನ್ನು ತೃಪ್ತಿಪಡಿಸಿದರೆ ಆಗ ನಿನ್ನ ಬೆಳಕು ಕತ್ತಲೆಯಲ್ಲಿ ಉದಯಿಸುವದು. ನಿನ್ನ ಅಂಧ ಕಾರವು ಮಧ್ಯಾಹ್ನದ ಹಾಗೆ ಇರುವದು. ಕರ್ತನು ನಿನ್ನನ್ನು ನಿತ್ಯವೂ ನಡಿಸುತ್ತಾ ಮಳೆಯಿಲ್ಲದ ಕಾಲದಲ್ಲಿ ನಿನ್ನ ಪ್ರಾಣವನ್ನು ತೃಪ್ತಿಗೊಳಿಸಿ ನಿನ್ನ ಎಲುಬುಗಳನ್ನು ಬಲಪಡಿಸುವನು ಮತ್ತು ನೀನು ನೀರು ಹಾಕಿದ ತೋಟದ ಹಾಗೆಯೂ ಮುಗಿಯದ ಜಲಬುಗ್ಗೆಯ ಹಾಗೆಯೂ ಇರುವಿ.
- 1 Timothy 4:8 1 ತಿಮೊಥೆಯನಿಗೆ 4:8ದೇಹಸಾಧನೆಯು ಸ್ವಲ್ಪ ಮಟ್ಟಿಗೆ ಲಾಭಕರವಾಗಿದೆ, ಭಕ್ತಿಯಾದರೋ ಎಲ್ಲಾ ವಿಧದಲ್ಲಿ ಲಾಭಕರವಾದದ್ದು; ಆದಕ್ಕೆ ಈಗಲೂ ಮುಂದೆ ಬರುವದಕ್ಕೂ ಜೀವಾಗ್ದಾನ ಉಂಟು.
- Hebrews 13:5–6 ಇಬ್ರಿಯರಿಗೆ 13:5–6ನಿಮ್ಮ ನಡತೆಯು ದ್ರವ್ಯಾಶೆ ಯಿಲ್ಲದ್ದಾಗಿರಲಿ; ನಿಮಗಿರುವವುಗಳಲ್ಲಿ ತೃಪ್ತರಾಗಿರ್ರಿ; ಯಾಕಂದರೆ--ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ ಇಲ್ಲವೆ ತೊರೆಯುವದಿಲ್ಲವೆಂದು ಆತನು ಹೇಳಿದ್ದಾನೆ. ಆದದರಿಂದ--ಕರ್ತನು ನನ್ನ ಸಹಾಯಕನು, ಭಯಪಡೆನು, ಮನುಷ್ಯನು ನನಗೆ ಏನು ಮಾಡಾನು ಎಂದು ನಾವು ಧೈರ್ಯವಾಗಿ ಹೇಳಬಲ್ಲೆವು.
- Psalm 90:14 ಕೀರ್ತನೆಗಳು 90:14ಬೆಳಿಗ್ಗೆ ನಿನ್ನ ಕರುಣೆಯಿಂದ ನಮಗೆ ತೃಪ್ತಿಪಡಿಸು; ಆಗ ನಮ್ಮ ದಿವಸಗಳಲ್ಲೆಲ್ಲಾ ಉತ್ಸಾಹಧ್ವನಿಗೈದು ಸಂತೋಷ ಪಡುವೆವು.
- Philippians 4:11–12 ಫಿಲಿಪ್ಪಿಯವರಿಗೆ 4:11–12ಕೊರತೆಯಲ್ಲಿದ್ದೇ ನೆಂದು ನಾನು ಇದನ್ನು ಹೇಳುವದಿಲ್ಲ; ನಾನಂತೂ ಇದ್ದ ಸ್ಥಿತಿಯಲ್ಲಿಯೇ ಸಂತುಷ್ಟನಾಗಿರುವದನ್ನು ಕಲಿತು ಕೊಂಡಿದ್ದೇನೆ. ನಾನು ಬಡವನಾಗಿರಲೂ ಬಲ್ಲೆನು, ಸಮೃದ್ಧಿಯುಳ್ಳವನಾಗಿರಲೂ ಬಲ್ಲೆನು, ನಾನು ತೃಪ್ತನಾಗಿ ದ್ದರೂ ಹಸಿದವನಾಗಿದ್ದರೂ ಸಮೃದ್ಧಿಯುಳ್ಳವನಾದರೂ ಕೊರತೆಯುಳ್ಳವನಾದರೂ ಯಾವ ತರದ ಸ್ಥಿತಿಯಲಿರುವವನಾದರೂ ಅವೆಲ್ಲವುಗಳನ್ನು ನಾನು ಕಲಿತು ಕೊಂಡಿದ್ದೇನೆ.
- Malachi 3:16–17 ಮಲಾಕಿಯ 3:16–17ಆಗ ಕರ್ತನಿಗೆ ಭಯಪಡುವವರು ಒಬ್ಬರ ಸಂಗಡಲೊಬ್ಬರು ಆಗಾಗ್ಗೆ ಮಾತಾಡಿಕೊಂಡರು; ಕರ್ತನು ಕಿವಿಗೊಟ್ಟು ಅದನ್ನು ಕೇಳಿದನು; ಇದಲ್ಲದೆ ಕರ್ತನಿಗೆ ಭಯಪಡುವವರಿಗೋಸ್ಕರವೂ ಆತನ ಹೆಸರನ್ನು ನೆನಸುವವರಿಗೋಸ್ಕರವೂ ಆತನ ಮುಂದೆ ಜ್ಞಾಪಕದ ಪುಸ್ತಕವು ಬರೆಯಲ್ಪಟ್ಟಿತು. ನಾನು ನನ್ನ ಆಭರಣಗಳನ್ನು ಕೂಡಿಸಿಕೊಳ್ಳುವ ಆ ದಿನದಲ್ಲಿ ಅವರು ನನ್ನವರಾಗಿರುವರೆಂದೂ ಒಬ್ಬನು ತನಗೆ ಸೇವೆ ಮಾಡುವ ತನ್ನ ಮಗನನ್ನು ಕನಿಕರಿಸುವ ಪ್ರಕಾರ ಅವರನ್ನು ಕನಿಕರಿಸುವೆನೆಂದೂ ಸೈನ್ಯಗಳ ಕರ್ತನು ಹೇಳುತ್ತಾನೆ.ಆಗ ನೀವು ತಿಳುಕೊಂಡು ನೀತಿವಂತ ನಿಗೂ ದುಷ್ಟನಿಗೂ ದೇವರ ಸೇವೆಮಾಡುವವನಿಗೂ ಮಾಡದವನಿಗೂ ಇರುವ ಹೆಚ್ಚುಕಡಿಮೆಯನ್ನು ತಿಳುಕೊಳ್ಳುವಿರಿ.
- Proverbs 10:27 ಜ್ಞಾನೋಕ್ತಿಗಳು 10:27ಕರ್ತನ ಭಯವು ದಿನಗಳನ್ನು ಹೆಚ್ಚಿಸುತ್ತದೆ; ದುಷ್ಟರ ವರುಷ ಗಳು ಕಡಿಮೆ ಮಾಡಲ್ಪಡುವವು.
- Psalm 103:17 ಕೀರ್ತನೆಗಳು 103:17ಆದರೆ ಕರ್ತನ ಕೃಪೆಯು ಆತನಿಗೆ ಭಯಪಡುವವರ ಮೇಲೆಯೂ ಆತನ ನೀತಿಯು ಮಕ್ಕಳ ಮಕ್ಕಳಿಗೂ
- Psalm 33:18–19 ಕೀರ್ತನೆಗಳು 33:18–19ಇಗೋ, ಕರ್ತನ ಕಣ್ಣು ಆತನಿಗೆ ಭಯಪಡುವ ವರ ಮೇಲೆಯೂ ಆತನ ಕರುಣೆಯನ್ನು ಎದುರು ನೋಡುವವರ ಮೇಲೆಯೂ ಅದೆ. ಇದರಿಂದ ಅವರ ಪ್ರಾಣವನ್ನು ಮರಣದಿಂದ ಬಿಡಿಸಿ ಬರಗಾಲ ದಲ್ಲಿ ಅವರ ಜೀವವನ್ನು ಕಾಪಾಡುತ್ತಾನೆ.