Proverbs · chapter 14 · verse 3
Proverbs 14:3 in Kannada
ಬುದ್ಧಿಹೀನನ ಬಾಯಿ ಯಲ್ಲಿ ಗರ್ವದ ಅಂಕುರವಿದೆ; ಜ್ಞಾನವಂತರ ತುಟಿಗಳು ಅವುಗಳನ್ನು ಕಾಯುವವು.
Buddhiheenana baayi yalli garvada ankuravide; jnyaanavantara tutigalu avugalannu kaayuvavu.
Proverbs 14:3 in English
- King James Version (KJV)
- In the mouth of the foolish [is] a rod of pride: but the lips of the wise shall preserve them.
- World English Bible (WEB)
- The fool’s talk brings a rod to his back, but the lips of the wise protect them.
- American Standard Version (ASV)
- In the mouth of the foolish is a rod for [his] pride; But the lips of the wise shall preserve them.
- Bible in Basic English (BBE)
- In the mouth of the foolish man is a rod for his back, but the lips of the wise will keep them safe.
- Darby Translation (DBY)
- In the fool's mouth is a rod of pride; but the lips of the wise shall preserve them.
- Webster's Bible (WBS)
- In the mouth of the foolish [is] a rod of pride: but the lips of the wise shall preserve them.
- Young's Literal Translation (YLT)
- In the mouth of a fool [is] a rod of pride, And the lips of the wise preserve them.
Read in context
- 1ಜ್ಞಾನಿಯಾದ ಪ್ರತಿ ಸ್ತ್ರೀಯು ತನ್ನ ಮನೆಯನ್ನು ಕಟ್ಟುತ್ತಾಳೆ; ಬುದ್ಧಿಹೀನಳೋ ತನ್ನ ಕೈಗಳಿಂದಲೇ ಅದನ್ನು ಕಿತ್ತುಹಾಕುತ್ತಾಳೆ.
- 2ತನ್ನ ಯಥಾರ್ಥತೆಯಲ್ಲಿ ನಡೆಯುವವನು ಕರ್ತನಿಗೆ ಭಯಪಡುತ್ತಾನೆ; ತನ್ನ ಮಾರ್ಗಗಳಲ್ಲಿ ವಕ್ರತೆಯುಳ್ಳವನು ಆತನನ್ನು ಅಸಡ್ಡೆಮಾಡುತ್ತಾನೆ.
- 3ಬುದ್ಧಿಹೀನನ ಬಾಯಿ ಯಲ್ಲಿ ಗರ್ವದ ಅಂಕುರವಿದೆ; ಜ್ಞಾನವಂತರ ತುಟಿಗಳು ಅವುಗಳನ್ನು ಕಾಯುವವು.
- 4ಎತ್ತುಗಳು ಇಲ್ಲದೆ ಇರು ವಲ್ಲಿ ಗೋದಲಿಯು ಶುದ್ಧಿಯಾಗಿದೆ; ಎತ್ತಿನ ಬಲದಿಂದ ಬಹಳ ವೃದ್ಧಿಯು ಉಂಟಾಗುತ್ತದೆ.
- 5ನಂಬತಕ್ಕ ಸಾಕ್ಷಿಯು ಸುಳ್ಳಾಡನು; ಅಬದ್ದಸಾಕ್ಷಿಯು ಸುಳ್ಳುಗಳನ್ನೇ ಉಚ್ಚರಿ ಸುತ್ತಾನೆ.
Cross references
- Proverbs 12:6 ಜ್ಞಾನೋಕ್ತಿಗಳು 12:6ದುಷ್ಟರ ಮಾತುಗಳು ರಕ್ತಕ್ಕಾಗಿ ಹೊಂಚು ಹಾಕುತ್ತವೆ; ಯಥಾರ್ಥವಂತರ ಬಾಯಿಯು ಅವರನ್ನು ಬಿಡಿಸುವದು.
- James 3:5–6 ಯಾಕೋಬನು 3:5–6ಹಾಗೆಯೇ ನಾಲಿಗೆಯು ಕೂಡ ಚಿಕ್ಕ ಅಂಗವಾಗಿದ್ದರೂ ದೊಡ್ಡ ಕಾರ್ಯಗಳನ್ನು ಕೊಚ್ಚಿಕೊಳ್ಳುತ್ತದೆ. ಇಗೋ, ಎಷ್ಟು ಕೊಂಚ ಕಿಚ್ಚು ದೊಡ್ಡ ಕಾಡನ್ನು ಸುಡುತ್ತದೆ ನೋಡಿರಿ. ನಾಲಿಗೆಯು ಬೆಂಕಿಯೂ ದುಷ್ಟಲೋಕವೂ ಆಗಿದೆ. ಹೀಗೆ ಅದು ನಮ್ಮ ಅಂಗಗಳಲ್ಲಿ ಇದ್ದು ದೇಹವನ್ನೆಲ್ಲಾ ಹೊಲೆಮಾಡಿ ಪ್ರಕೃತಿಯ ಕ್ರಮಕ್ಕೆ ಬೆಂಕಿ ಹಚ್ಚುವ ಹಾಗೆಯೂ ನರಕದ ಬೆಂಕಿಯನ್ನು ಹಚ್ಚಿಕೊಳ್ಳುವ ದಾಗಿಯೂ ಇದೆ.
- Revelation 12:11 ಪ್ರಕಟನೆ 12:11ಅವರು ಪ್ರಾಣದ ಮೇಲಣ ಪ್ರೀತಿಯನ್ನು ತೊರೆದು ಕುರಿಮರಿಯಾದಾತನ ರಕ್ತದಿಂದಲೂ ತಮ್ಮ ಸಾಕ್ಷಿಯ ವಾಕ್ಯದಿಂದಲೂ ಅವ ನನ್ನು ಜಯಿಸಿದರು.
- Revelation 3:10 ಪ್ರಕಟನೆ 3:10ನೀನು ನನ್ನ ಸಹನ ವಾಕ್ಯವನ್ನು ಕಾಪಾಡಿದ್ದರಿಂದ ಭೂಮಿಯ ಮೇಲೆ ವಾಸ ಮಾಡುವವ ರನ್ನು ಪರೀಕ್ಷಿಸುವದಕ್ಕಾಗಿ ಲೋಕದ ಮೇಲೆಲ್ಲಾ ಬರು ವದಕ್ಕಿರುವ ಶೋಧನೆಯ ಸಮಯದಿಂದ ನಾನು ಸಹ ನಿನ್ನನ್ನು ಕಾಪಾಡುವೆನು.
- Romans 10:9–10 ರೋಮಾಪುರದವರಿಗೆ 10:9–10ನೀನು ಕರ್ತನಾದ ಯೇಸು ವನ್ನು ಬಾಯಿಂದ ಅರಿಕೆಮಾಡಿ ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದ್ದಾನೆಂದು ನಿನ್ನ ಹೃದಯದಲ್ಲಿ ನಂಬಿದರೆ ನಿನಗೆ ರಕ್ಷಣೆಯಾಗುವದು ಎಂಬದೇ. ಹೃದಯದಿಂದ ನಂಬುವದರ ಮೂಲಕ ನೀತಿಯು ದೊರೆಯುತ್ತದೆ. ಬಾಯಿಂದ ಅರಿಕೆಮಾಡುವದರ ಮೂಲಕ ರಕ್ಷಣೆಯಾಗುತ್ತದೆ.
- Psalm 57:4 ಕೀರ್ತನೆಗಳು 57:4ನನ್ನ ಪ್ರಾಣವು ಸಿಂಹಗಳ ಮಧ್ಯದಲ್ಲಿದೆ; ಬೆಂಕಿಯಂತೆ ಉರಿಯುವ ಮನುಷ್ಯರ ಮಧ್ಯದಲ್ಲಿ ಬಿದ್ದಿದ್ದೇನೆ. ಅವರ ಹಲ್ಲುಗಳು ಭಲ್ಲೆಬಾಣಗಳೂ; ಅವರ ನಾಲಿಗೆ ಹದವಾದ ಕತ್ತಿ.
- Proverbs 21:24 ಜ್ಞಾನೋಕ್ತಿಗಳು 21:24ಸೊಕ್ಕೇರಿದ ಗರ್ವದಲ್ಲಿ ವರ್ತಿಸುವ ವನ ಹೆಸರು ಅಹಂಕಾರಿ ಮತ್ತು ಪರಿಹಾಸ್ಯಕನು.
- Daniel 7:20 ದಾನಿಯೇಲನು 7:20ಅದರ ತಲೆಯಲ್ಲಿದ್ದ ಹತ್ತು ಕೊಂಬುಗಳ ವಿಷಯವಾಗಿಯೂ ನಾನು ನೋಡುತ್ತಿದ್ದ ಹಾಗೆಯೇ ಯಾವ ಕೊಂಬು ಮೊಳೆತು ಮೂರು ಕೊಂಬುಗಳನ್ನು ಬೀಳಿಸಿ ಆ ಎದ್ದು ಬಂದ ಬೇರೊಂದರ ಕೊಂಬಿನ ವಿಷಯವಾಗಿಯೂ ಹೌದು, ಕಣ್ಣುಗಳು ಳ್ಳಂತ, ಬಹು ದೊಡ್ಡ ಮಾತುಗಳನ್ನು ಮಾತನಾಡಿದ ಬಾಯಿಯಂತ, ತನ್ನ ಜೊತೆಯವರಿಗಿಂತ ಬಲವಾದ ನೋಟವುಳ್ಳಂತ, ಆ ಕೊಂಬಿನ ವಿಷಯವಾಗಿ ಸತ್ಯಾರ್ಥ ವನ್ನು ತಿಳಿಯಬೇಕೆಂದಿದ್ದೆನು.
- Proverbs 28:25 ಜ್ಞಾನೋಕ್ತಿಗಳು 28:25ಗರ್ವದ ಹೃದಯವುಳ್ಳವನು ಕಲಹ ವನ್ನೆಬ್ಬಿಸುವನು; ಕರ್ತನಲ್ಲಿ ಭರವಸವಿಡುವವನು ಪುಷ್ಟ ನಾಗುವನು.
- Psalm 12:3 ಕೀರ್ತನೆಗಳು 12:3ಮುಖಸ್ತುತಿಯ ಎಲ್ಲಾ ತುಟಿಗಳನ್ನೂ ಗರ್ವದಿಂದ ಮಾತನಾಡುವ ನಾಲಿಗೆಯನ್ನೂ ಕರ್ತನು ಕಡಿದು ಬಿಡುವನು.
- Job 5:21 ಯೋಬನು 5:21ನಾಲಿಗೆಯೆಂಬ ಬೆತ್ತಕ್ಕೆ ಮರೆ ಯಾಗುವಿ; ಅದು ಬಂದಾಗ ನೀನು ನಾಶಕ್ಕೆ ಭಯ ಪಡುವದಿಲ್ಲ.
- Proverbs 18:6 ಜ್ಞಾನೋಕ್ತಿಗಳು 18:6ಅವಿವೇಕಿಯ ತುಟಿಗಳು ಕಲಹದಲ್ಲಿ ಸೇರುವದರಿಂದ ಏಟುಗಳನ್ನು ತಿನ್ನುವದಕ್ಕೆ ಅವನ ಬಾಯಿಯು ಕೂಗಿಕೊಳ್ಳುತ್ತದೆ.