Proverbs · chapter 11 · verse 2
Proverbs 11:2 in Kannada
ಗರ್ವ ಬಂದಾಗ ನಾಚಿಕೆಯೂ ಬರುತ್ತದೆ; ದೀನರಲ್ಲಿ ಜ್ಞಾನವಿದೆ.
Garva bandaaga naachikeyoo baruttade; deenaralli jnyaanavide.
Proverbs 11:2 in English
- King James Version (KJV)
- [When] pride cometh, then cometh shame: but with the lowly [is] wisdom.
- World English Bible (WEB)
- When pride comes, then comes shame, but with humility comes wisdom.
- American Standard Version (ASV)
- When pride cometh, then cometh shame; But with the lowly is wisdom.
- Bible in Basic English (BBE)
- When pride comes, there comes shame, but wisdom is with the quiet in spirit.
- Darby Translation (DBY)
- [When] pride cometh, then cometh shame; but with the lowly is wisdom.
- Webster's Bible (WBS)
- [When] pride cometh, then cometh shame: but with the lowly [is] wisdom.
- Young's Literal Translation (YLT)
- Pride hath come, and shame cometh, And with the lowly [is] wisdom.
Read in context
- 1ಮೋಸದ ತಕ್ಕಡಿ ಕರ್ತನಿಗೆ ಅಸಹ್ಯವಾಗಿದೆ; ನ್ಯಾಯದ ತೂಕ ಆತನ ಆನಂದವು.
- 2ಗರ್ವ ಬಂದಾಗ ನಾಚಿಕೆಯೂ ಬರುತ್ತದೆ; ದೀನರಲ್ಲಿ ಜ್ಞಾನವಿದೆ.
- 3ಯಥಾರ್ಥವಂತರ ಪ್ರಾಮಾಣಿಕತೆ ಅವರನ್ನು ನಡಿಸುವದು; ಅಪರಾಧದ ಮೂರ್ಖತನವು ಅವರನ್ನು ನಾಶಪಡಿಸುವದು.
- 4ಉಗ್ರತೆಯ ದಿನದಲ್ಲಿ ಐಶ್ವರ್ಯವು ಲಾಭಕರವಾಗುವದಿಲ್ಲ; ನೀತಿಯು ಮರಣ ದಿಂದ ಬಿಡಿಸುತ್ತದೆ.
Cross references
- Proverbs 29:23 ಜ್ಞಾನೋಕ್ತಿಗಳು 29:23ಮನುಷ್ಯನ ಗರ್ವವು ತನ್ನನ್ನು ಹೀನಸ್ಥಿತಿಗೆ ತರುವದು; ಆತ್ಮದಲ್ಲಿ ದೀನರಾಗಿರುವವರು ಸನ್ಮಾನಹೊಂದುವರು.
- Proverbs 16:18–19 ಜ್ಞಾನೋಕ್ತಿಗಳು 16:18–19ನಾಶನಕ್ಕೆ ಮುಂದಾಗಿ ಗರ್ವ ಹೋಗು ತ್ತದೆ; ಬೀಳುವಿಕೆಯ ಮುಂಚೆ ಜಂಬದ ಮನಸ್ಸು. ಅಹಂಕಾರಿಗಳೊಂದಿಗೆ ಕೊಳ್ಳೆಯನ್ನು ಹಂಚಿಕೊಳ್ಳು ವದಕ್ಕಿಂತ ದೀನರೊಂದಿಗೆ ವಿನಯ ಮನಸ್ಸುಳ್ಳವರಾಗಿ ಇರುವದು ಉತ್ತಮ.
- Proverbs 15:33 ಜ್ಞಾನೋಕ್ತಿಗಳು 15:33ಕರ್ತನ ಭಯವು ಜ್ಞಾನೋ ಪದೇಶ; ಗೌರವಕ್ಕೆ ಮೊದಲು ವಿನಯ.
- Luke 18:14 ಲೂಕನು 18:14ಇವನೇ ಫರಿಸಾಯನಿಗಿಂತ ನೀತಿವಂತನೆಂದು ನಿರ್ಣಯಿಸಲ್ಪಟ್ಟ ವನಾಗಿ ತನ್ನ ಮನೆಗೆ ಹೋದನು; ಯಾಕಂದರೆ ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು ಮತ್ತು ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು ಎಂದು ನಾನು ನಿಮಗೆ ಹೇಳುತ್ತೇನೆ ಅಂದನು.
- Proverbs 18:12 ಜ್ಞಾನೋಕ್ತಿಗಳು 18:12ನಾಶನಕ್ಕೆ ಮುಂದೆ ಮನುಷ್ಯನ ಹೃದಯವು ಗರ್ವವಾಗಿದೆ; ಸನ್ಮಾನಕ್ಕೆ ಮುಂಚೆ ವಿನಯವಾಗಿದೆ.
- Proverbs 3:34–35 ಜ್ಞಾನೋಕ್ತಿಗಳು 3:34–35ಆತನು ನಿಶ್ಚಯವಾಗಿಯೂ ಪರಿಹಾಸ್ಯಕರನ್ನು ತಿರಸ್ಕರಿಸುತ್ತಾನೆ; ಆದರೆ ದೀನರಿಗೆ ಆತನು ಕೃಪೆಯನ್ನು ಕೊಡುತ್ತಾನೆ.ಜ್ಞಾನಿಯು ಮಹಿಮೆಗೆ ಬಾಧ್ಯನಾಗುವನು, ಜ್ಞಾನ ಹೀನರ ಏಳಿಗೆಯು ಅವಮಾನವಾಗುವದು. ಜ್ಞಾನಿಯು ಮಹಿಮೆಗೆ ಬಾಧ್ಯನಾಗುವನು, ಜ್ಞಾನ ಹೀನರ ಏಳಿಗೆಯು ಅವಮಾನವಾಗುವದು.
- 1 Corinthians 8:1–2 1 ಕೊರಿಂಥದವರಿಗೆ 8:1–2ವಿಗ್ರಹಗಳಿಗೆ ಸಮರ್ಪಣೆ ಮಾಡುವವು ಗಳ ವಿಷಯದಲ್ಲಿ ನಮ್ಮೆಲ್ಲರಿಗೂ ಜ್ಞಾನ ವಿದೆಯೆಂದು ನಾವು ಬಲ್ಲೆವು; ಜ್ಞಾನವು ಉಬ್ಬಿಕೊಳ್ಳುತ್ತದೆ, ಆದರೆ ಪ್ರಿತಿಯು ಭಕ್ತಿವೃದ್ಧಿಯನ್ನುಂಟುಮಾಡು ತ್ತದೆ. ಒಬ್ಬನು ತಾನು ಏನಾದರೂ ತಿಳಿದುಕೊಂಡಿ ದ್ದೇನೆಂದು ನೆನಸುವದಾದರೆ ಅವನು ತಿಳಿದುಕೊಳ್ಳ ಬೇಕಾಗಿರುವದನ್ನು ಇನ್ನೂ ತಿಳಿಯದವನಾಗಿದ್ದಾನೆ.
- Luke 14:8–11 ಲೂಕನು 14:8–11ಯಾವನಾದರೂ ನಿನ್ನನ್ನು ಮದುವೆಗೆ ಕರೆದರೆ ಉನ್ನತ ಸ್ಥಳದಲ್ಲಿ ಕೂತುಕೊಳ್ಳಬೇಡ; ಯಾಕಂದರೆ ಅವನು ನಿನಗಿಂತಲೂ ಗೌರವವುಳ್ಳ ಮನುಷ್ಯನನ್ನು ಕರೆದಿರ ಬಹುದು; ಆಗ ನಿನ್ನನ್ನು ಮತ್ತು ಅವನನ್ನು ಕರೆದವನು ಬಂದು ನಿನಗೆ--ಈ ಮನುಷ್ಯನಿಗೆ ಸ್ಥಳಕೊಡು ಎಂದು ಹೇಳುವಾಗ ನೀನು ನಾಚಿಕೆಯಿಂದ ಕಡೇ ಸ್ಥಳದಲ್ಲಿ ಕೂತುಕೊಳ್ಳಬೇಕಾಗಿರುವದು. ಆದರೆ ನೀನು ಕರೆಯಲ್ಪಟ್ಟಾಗ ಹೋಗಿ ಕಡೇ ಸ್ಥಳದಲ್ಲಿ ಕೂತುಕೋ; ಆಗ ನಿನ್ನನ್ನು ಕರೆದಾತನು ಬಂದು ನಿನಗೆ--ಸ್ನೇಹಿತನೇ, ಮೇಲಕ್ಕೆ ಹೋಗು ಎಂದು ಹೇಳುವಾಗ ನಿನ್ನ ಜೊತೆ ಯಲ್ಲಿ ಊಟಕ್ಕೆ ಕೂತವರ ಮುಂದೆ ನಿನಗೆ ಗೌರವ ವಿರುವದು. ಯಾವನು ತನ್ನನ್ನು ತಾನೇ ಹೆಚ್ಚಿಸಿಕೊಳ್ಳು ತ್ತಾನೋ ಅವನು ತಗ್ಗಿಸಲ್ಪಡುವನು ಮತ್ತು ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು ಅಂದನು.
- Daniel 4:30–32 ದಾನಿಯೇಲನು 4:30–32ಆಗ ಅರಸನು ಮಾತನಾಡಿ ಹೇಳಿದ್ದೇನಂದರೆ--ನಾನು ನನ್ನ ಪರಾಕ್ರಮದ ಬಲದಿಂದ ನನ್ನ ಮಹಿ ಮೆಯ ಕೀರ್ತಿಗಾಗಿ ಕಟ್ಟಿಸಿದ ಮಹಾಬಾಬೆಲು ಇದ ಲ್ಲವೇ ಅಂದನು. ಈ ಮಾತು ಅರಸನ ಬಾಯಿಯಲ್ಲಿ ಇರುವಾಗಲೇ ಪರಲೋಕದಿಂದ ಒಂದು ಶಬ್ದವು ಉಂಟಾಯಿತು; ಏನಂದರೆ--ಓ ಅರಸನಾದ ನೆಬೂಕದ್ನೆ ಚ್ಚರನೇ, ನಿನಗೆ ಹೇಳುವದೇನಂದರೆ, ನಿನ್ನ ರಾಜ್ಯವು ನಿನ್ನನ್ನು ಬಿಟ್ಟು ಹೋಯಿತು. ಅವರು ನಿನ್ನನ್ನು ಮನುಷ್ಯರೊಳಗಿಂದ ತಳ್ಳಿಬಿಡುವರು. ನಿನ್ನ ನಿವಾಸವು ಕಾಡುಮೃಗಗಳ ಸಂಗಡ ಇರುವದು, ನಿನಗೆ ಎತ್ತುಗಳ ಹಾಗೆ ಹುಲ್ಲನ್ನು ಮೇಯಿಸುವರು. ಮಹೋ ನ್ನತನು ಮನುಷ್ಯರ ರಾಜ್ಯವನ್ನಾಳುವನೆಂದೂ ತನ್ನ ಮನಸ್ಸಿಗೆ ಸರಿಬಂದವರಿಗೆ ಅದನ್ನು ಕೊಡುವೆನೆಂದೂ ನೀನು ತಿಳಿಯುವಷ್ಟರಲ್ಲಿ ಏಳು ಕಾಲಗಳು ನಿನ್ನನ್ನು ದಾಟಿ ಹೋಗುವವು.