Proverbs · chapter 20 · verse 1
Proverbs 20:1 in Kannada
ದ್ರಾಕ್ಷಾರಸವು ಪರಿಹಾಸ್ಯಕರವಾಗಿದೆ; ಮಾದಕ ಮದ್ಯವು ಉದ್ರೇಕಿಸುತ್ತದೆ. ಇದ ರಿಂದ ಮೋಸಹೋದವನು ಜ್ಞಾನಿಯಲ್ಲ.
Draakshaarasavu parihaasyakaravaagide; maadaka madyavu udrekisuttade. Ida rinda mosahodavanu jnyaaniyalla.
Proverbs 20:1 in English
- King James Version (KJV)
- Wine [is] a mocker, strong drink [is] raging: and whosoever is deceived thereby is not wise.
- World English Bible (WEB)
- Wine is a mocker and beer is a brawler. Whoever is led astray by them is not wise.
- American Standard Version (ASV)
- Wine is a mocker, strong drink a brawler; And whosoever erreth thereby is not wise.
- Bible in Basic English (BBE)
- Wine makes men foolish, and strong drink makes men come to blows; and whoever comes into error through these is not wise.
- Darby Translation (DBY)
- Wine is a scorner, strong drink is raging; and whoso erreth thereby is not wise.
- Webster's Bible (WBS)
- Wine [is] a mocker, strong drink [is] raging: and whoever is deceived by it is not wise.
- Young's Literal Translation (YLT)
- Wine [is] a scorner — strong drink [is] noisy, And any going astray in it is not wise.
Read in context
- 1ದ್ರಾಕ್ಷಾರಸವು ಪರಿಹಾಸ್ಯಕರವಾಗಿದೆ; ಮಾದಕ ಮದ್ಯವು ಉದ್ರೇಕಿಸುತ್ತದೆ. ಇದ ರಿಂದ ಮೋಸಹೋದವನು ಜ್ಞಾನಿಯಲ್ಲ.
- 2ಅರಸನ ಭಯವು ಸಿಂಹದ ಗರ್ಜನೆಯಂತಿದೆ; ಅವನಿಗೆ ಕೋಪ ವನ್ನೆಬ್ಬಿಸುವವನು ತನ್ನ ಪ್ರಾಣಕ್ಕೆ ವಿರೋಧವಾಗಿ ಪಾಪ ಮಾಡುತ್ತಾನೆ.
- 3ಕಲಹವನ್ನು ತಡೆಯುವವನು ಮಾನಕ್ಕೆ ಯೋಗ್ಯನು; ಪ್ರತಿಯೊಬ್ಬ ಬುದ್ಧಿಹೀನನು ತಲೆಹಾಕು ತ್ತಾನೆ.
Cross references
- Ephesians 5:18 ಎಫೆಸದವರಿಗೆ 5:18ಮದ್ಯಪಾನ ಮಾಡಿ ಮತ್ತರಾಗಬೇಡಿರಿ, ಯಾಕಂದರೆ ಅದರಿಂದ ಪಟಿಂಗತನವು ಹುಟ್ಟುತ್ತದೆ. ಪವಿತ್ರಾತ್ಮನಿಂದ ತುಂಬಿದವರಾಗಿರ್ರಿ.
- Hosea 4:11 ಹೋಶೇಯ 4:11ವ್ಯಭಿಚಾರವೂ ದ್ರಾಕ್ಷಾರಸವೂ ಹೊಸ ದ್ರಾಕ್ಷಾರಸವೂ ಹೃದಯವನ್ನು ಕೆಡಿಸುತ್ತದೆ.
- Isaiah 28:7 ಯೆಶಾಯ 28:7ಆದರೆ ಇವರು ಸಹ ದ್ರಾಕ್ಷಾರಸದಿಂದ ತಪ್ಪಿ ಮಧ್ಯದಿಂದ ಮೋಸಹೋಗಿದ್ದಾರೆ; ಯಾಜಕನೂ ಪ್ರವಾದಿಯೂ ಮದ್ಯದಿಂದ ತಪ್ಪಿ ದ್ರಾಕ್ಷಾರಸದ ವಶ ವಾಗಿದ್ದು ಮದ್ಯದಿಂದ ಮೋಸಹೋಗಿದ್ದಾರೆ; ದರ್ಶನ ದಲ್ಲಿ ತಪ್ಪುತ್ತಾರೆ. ನ್ಯಾಯತೀರ್ವಿಕೆಯಲ್ಲಿ ತತ್ತರಿಸುತ್ತಾರೆ.
- 1 Corinthians 6:10 1 ಕೊರಿಂಥದವರಿಗೆ 6:10ಕಳ್ಳರು ಲೋಭಿಗಳು ಕುಡುಕರು ಬೈಯುವವರು ಸುಲು ಕೊಳ್ಳುವವರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ.
- Proverbs 31:4 ಜ್ಞಾನೋಕ್ತಿಗಳು 31:4ದ್ರಾಕ್ಷಾರಸವನ್ನು ಕುಡಿ ಯುವದು ರಾಜರಿಗೆ ಯೋಗ್ಯವಲ್ಲ; ಓ ಲೆಮೂ ವೇಲನೇ, ಅದು ಅರಸರಿಗೆ ಬೇಡ; ಇಲ್ಲವೆ ಪ್ರಭುಗ ಳಿಗೆ ಕುಡಿಯುವದು ಹಿತವಲ್ಲ;
- Galatians 5:21 ಗಲಾತ್ಯದವರಿಗೆ 5:21ಅಸೂಯೆ ಗಳು ಕೊಲೆಗಳು ಕುಡುಕತನ ದುಂದೌತನ ಈ ಮೊದಲಾದವುಗಳೇ; ಇಂಥ ಕೃತ್ಯಗಳನ್ನು ನಡಿಸುವವರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲವೆಂದು ನಾನು ನಿಮಗೆ ಮುಂಚೆಯೇ ಹೇಳಿದಂತೆ ಈಗಲೂ ಹೇಳುತ್ತೇನೆ.
- Habakkuk 2:15–16 ಹಬಕ್ಕೂಕ 2:15–16ತನ್ನ ನೆರೆಯವ ನಿಗೆ ಕುಡಿಯಕೊಟ್ಟು ನಿನ್ನ ಬುಟ್ಟಿಯನ್ನು ಹೊಯಿದು ಅವರ ಬೆತ್ತಲೆತನವನ್ನು ನೋಡುವ ಹಾಗೆ ಅಮಲೇರಿ ಸುವವನಿಗೆ ಅಯ್ಯೋ! ಘನತೆಗೆ ಬದಲಾಗಿ ನಿಂದೆ ಯಿಂದ ತುಂಬಿದ್ದೀ; ನೀನು ಸಹ ಕುಡಿದು ನಿನ್ನ ಮುಂದೊಗಲು ಮುಚ್ಚಲ್ಪಡದಿರಲಿ. ಕರ್ತನ ಬಲಗೈಯ ಪಾತ್ರೆ ನಿನ್ನ ಕಡೆಗೆ ತಿರುಗುವದು. ನಿನ್ನ ಘನತೆಯ ಮೇಲೆ ಕಾರುವಿಕೆಯೂ ಲಜ್ಜೆಯೂ ಇರುವದು.
- 2 Samuel 11:13 2 ಸಮುವೇಲನು 11:13ದಾವೀದನು ಅವನನ್ನು ಕರೆದಾಗ ಅವನು ಅವನ ಮುಂದೆ ಉಂಡು ಕುಡಿದನು. ಇದಲ್ಲದೆ ದಾವೀದನು ಅವನನ್ನು ಅಮಲೇರುವಂತೆ ಮಾಡಿಸಿದನು. ಅವನು ಸಾಯಂಕಾಲದಲ್ಲಿ ತನ್ನ ಮನೆಗೆ ಹೋಗದೆ ತನ್ನ ಯಜಮಾನನ ಸೇವಕರ ಸಂಗಡ ಮಲಗುವದಕ್ಕೆ ಹೊರಟುಹೋದನು.
- Isaiah 5:22 ಯೆಶಾಯ 5:22ದ್ರಾಕ್ಷಾರಸ ಕುಡಿಯುವದರಲ್ಲಿ ಶೂರರೂ ಮದ್ಯ ಮಿಶ್ರಣಗಳಲ್ಲಿ ಸಾಹಸಿಗಳೂ
- Proverbs 23:29–35 ಜ್ಞಾನೋಕ್ತಿಗಳು 23:29–35ಯಾರಿಗೆ ಅಯ್ಯೋ? ಯಾರಿಗೆ ದುಃಖ? ಯಾರಿಗೆ ಕಲಹಗಳು? ಯಾರು ಗೋಳಾಡುತ್ತಾರೆ? ಯಾರು ಸುಮ್ಮಸುಮ್ಮನೆ ಗಾಯ ಪಡುತ್ತಾರೆ? ಯಾರಿಗೆ ಕೆಂಪೇ ರಿದ ಕಣ್ಣುಗಳು? ದ್ರಾಕ್ಷಾರಸಕ್ಕಾಗಿ ಕಾದಿರುವಂಥ ವರು ಮಿಶ್ರಿತ ದ್ರಾಕ್ಷಾರಸವನ್ನು ಹುಡುಕುವವರಾಗಿ ಇರುತ್ತಾರೆ. ದ್ರಾಕ್ಷಾರಸವು ಕೆಂಪಾಗಿದ್ದು ಪಾತ್ರೆಯಲ್ಲಿ ಥಳಥಳಿಸುತ್ತಾ ಚಲಿಸಿದರೆ ಅದನ್ನು ನೋಡಬೇಡ. ಕೊನೆಗೆ ಅದು ಹಾವಿನಂತೆ ಮತ್ತು ವಿಷಸರ್ಪದಂತೆ ಕಚ್ಚುತ್ತದೆ. ನಿನ್ನ ಕಣ್ಣುಗಳು ಪರಸ್ತ್ರೀಯರನ್ನು ನೋಡಿ ದರೆ ನಿನ್ನ ಹೃದಯವು ವಕ್ರವಾದ ಭಾಷೆಯನ್ನು ಉಚ್ಚರಿ ಸುವದು. ಹೌದು, ಸಮುದ್ರದ ಮಧ್ಯದಲ್ಲಿ ಮಲಗಿ ರುವವನಂತೆ ಇಲ್ಲವೆ ಹಡಗಿನ ಕಂಬದ ತುದಿಯಲ್ಲಿ ಇದ್ದವನಂತೆ ನೀನು ಇರುವಿ.ನೀನು--ಜನರು ನನ್ನನ್ನು ಹೊಡೆದರೂ ನಾನು ಅಸ್ವಸ್ಥನಾಗಲಿಲ್ಲ; ಅವರು ನನ್ನನ್ನು ಹೊಡೆದರೂ ನನಗೆ ನೋವಾಗಲಿಲ್ಲ; ಯಾವಾಗ ಎಚ್ಚತ್ತೇನು? ಪುನಃ ನಾನು ಅದನ್ನು ತಿರುಗಿ ಹುಡುಕೇನು ಎಂದು ಹೇಳುತ್ತೀ. ನೀನು--ಜನರು ನನ್ನನ್ನು ಹೊಡೆದರೂ ನಾನು ಅಸ್ವಸ್ಥನಾಗಲಿಲ್ಲ; ಅವರು ನನ್ನನ್ನು ಹೊಡೆದರೂ ನನಗೆ ನೋವಾಗಲಿಲ್ಲ; ಯಾವಾಗ ಎಚ್ಚತ್ತೇನು? ಪುನಃ ನಾನು ಅದನ್ನು ತಿರುಗಿ ಹುಡುಕೇನು ಎಂದು ಹೇಳುತ್ತೀ.
- Genesis 19:31–36 ಆದಿಕಾಂಡ 19:31–36ಆಗ ಮೊದಲು ಹುಟ್ಟಿದವಳು ಚಿಕ್ಕವಳಿಗೆ--ನಮ್ಮ ತಂದೆಯು ಮುದುಕನಾಗಿದ್ದಾನೆ. ಲೋಕದ ಎಲ್ಲಾ ಕ್ರಮದ ಪ್ರಕಾರ ನಮ್ಮಲ್ಲಿ ಬರುವ ಹಾಗೆ ಪುರುಷನು ಭೂಮಿಯಲ್ಲಿ ಯಾರೂ ಇಲ್ಲ. ಆದದರಿಂದ ನಾವು ನಮ್ಮ ತಂದೆಗೆ ದ್ರಾಕ್ಷಾರಸವನ್ನು ಕುಡಿಸಿ ನಾವು ಅವನ ಸಂಗಡ ಮಲಗಿಕೊಳ್ಳೋಣ ಬಾ. ಯಾಕಂದರೆ ನಾವು ನಮ್ಮ ತಂದೆಯ ಸಂತಾನವನ್ನು ಉಳಿಸಬೇಕು ಅಂದಳು. ಆ ರಾತ್ರಿಯಲ್ಲಿ ಅವರು ತಮ್ಮ ತಂದೆಗೆ ದ್ರಾಕ್ಷಾ ರಸವನ್ನು ಕುಡಿಸಿದರು. ಆಗ ಮೊದಲು ಹುಟ್ಟಿದವಳು ಬಂದು ತನ್ನ ತಂದೆಯ ಸಂಗಡ ಮಲಗಿಕೊಂಡಳು. ಅವಳು ಮಲಗಿಕೊಳ್ಳುವಾಗಲೂ ಏಳುವಾಗಲೂ ಅವನಿಗೆ ತಿಳಿಯಲಿಲ್ಲ. ಮರುದಿನ ಮೊದಲು ಹುಟ್ಟಿದವಳು ಚಿಕ್ಕವಳಿಗೆ--ಇಗೋ, ಕಳೆದ ರಾತ್ರಿ ನನ್ನ ತಂದೆಯ ಸಂಗಡ ನಾನು ಮಲಗಿಕೊಂಡೆನು; ಈ ರಾತ್ರಿಯಲ್ಲಿಯೂ ಅವನಿಗೆ ದ್ರಾಕ್ಷಾರಸವನ್ನು ಕುಡಿಸಿ ನೀನು ಹೋಗಿ ಅವನ ಸಂಗಡ ಮಲಗಿಕೋ; ಯಾಕಂದರೆ ನಾವು ನಮ್ಮ ತಂದೆಯ ಸಂತಾನವನ್ನು ಉಳಿಸಬೇಕು ಅಂದಳು. ಹಾಗೆ ಆ ರಾತ್ರಿಯಲ್ಲಿಯೂ ತಮ್ಮ ತಂದೆಗೆ ದ್ರಾಕ್ಷಾರಸವನ್ನು ಕುಡಿಸಿದರು; ಆಗ ಚಿಕ್ಕವಳು ಎದ್ದು ಅವನ ಸಂಗಡ ಮಲಗಿ ಕೊಂಡಳು. ಅವಳು ಮಲಗುವಾಗಲೂ ಏಳುವಾಗಲೂ ಅವನಿಗೆ ತಿಳಿಯಲಿಲ್ಲ. ಈ ಪ್ರಕಾರ ಲೋಟನ ಇಬ್ಬರು ಕುಮಾರ್ತೆಯರು ತಮ್ಮ ತಂದೆಯಿಂದ ಗರ್ಭಿಣಿಯಾದರು.
- Hosea 7:5 ಹೋಶೇಯ 7:5ನಮ್ಮ ಅರಸನ ದಿನದಲ್ಲಿ ಪ್ರಧಾನರು ದ್ರಾಕ್ಷಾರಸದ ಬುದ್ದಲಿಗಳಿಂದ ಅಸ್ವಸ್ಥರಾ ಗುತ್ತಾರೆ, ಅವನು ಪರಿಹಾಸ್ಯಗಾರರ ಸಂಗಡ ತನ್ನ ಕೈಚಾಚುತ್ತಾನೆ.