Proverbs · chapter 20 · verse 4
Proverbs 20:4 in Kannada
ಮೈಗಳ್ಳನು ಚಳಿಯ ನಿಮಿತ್ತವಾಗಿ ಉಳುವದಿಲ್ಲ; ಆದಕಾರಣ ಸುಗ್ಗಿಯಲ್ಲಿ ಅವನು ಬೇಡಿಕೊಂಡರೂ ಏನೂ ಸಿಕ್ಕುವದಿಲ್ಲ.
Maigallanu chaliya nimittavaagi uluvadilla; aadakaarana suggiyalli avanu bedikondaroo enoo sikkuvadilla.
Proverbs 20:4 in English
- King James Version (KJV)
- The sluggard will not plow by reason of the cold; [therefore] shall he beg in harvest, and [have] nothing.
- World English Bible (WEB)
- The sluggard will not plow by reason of the winter; therefore he shall beg in harvest, and have nothing.
- American Standard Version (ASV)
- The sluggard will not plow by reason of the winter; Therefore he shall beg in harvest, and have nothing.
- Bible in Basic English (BBE)
- The hater of work will not do his ploughing because of the winter; so at the time of grain-cutting he will be requesting food and will get nothing.
- Darby Translation (DBY)
- The sluggard will not plough by reason of the winter; he shall beg in harvest, and have nothing.
- Webster's Bible (WBS)
- The sluggard will not plow by reason of the cold; [therefore] shall he beg in harvest, and [have] nothing.
- Young's Literal Translation (YLT)
- Because of winter the slothful plougheth not, He asketh in harvest, and there is nothing.
Read in context
- 2ಅರಸನ ಭಯವು ಸಿಂಹದ ಗರ್ಜನೆಯಂತಿದೆ; ಅವನಿಗೆ ಕೋಪ ವನ್ನೆಬ್ಬಿಸುವವನು ತನ್ನ ಪ್ರಾಣಕ್ಕೆ ವಿರೋಧವಾಗಿ ಪಾಪ ಮಾಡುತ್ತಾನೆ.
- 3ಕಲಹವನ್ನು ತಡೆಯುವವನು ಮಾನಕ್ಕೆ ಯೋಗ್ಯನು; ಪ್ರತಿಯೊಬ್ಬ ಬುದ್ಧಿಹೀನನು ತಲೆಹಾಕು ತ್ತಾನೆ.
- 4ಮೈಗಳ್ಳನು ಚಳಿಯ ನಿಮಿತ್ತವಾಗಿ ಉಳುವದಿಲ್ಲ; ಆದಕಾರಣ ಸುಗ್ಗಿಯಲ್ಲಿ ಅವನು ಬೇಡಿಕೊಂಡರೂ ಏನೂ ಸಿಕ್ಕುವದಿಲ್ಲ.
- 5ಮನುಷ್ಯನ ಹೃದಯದ ಆಲೋ ಚನೆಯು ಆಳವಾದ (ಬಾವಿಯ) ನೀರಿನಂತಿದೆ; ವಿವೇ ಕಿಯು ಅದನ್ನು ಸೇದುವನು.
- 6ಅನೇಕರಲ್ಲಿ ಪ್ರತಿಯೊ ಬ್ಬನು ತಮ್ಮ ಸ್ವಂತ ಸೌಜನ್ಯವನ್ನು ಸಾರುವನು; ನಂಬಿ ಗಸ್ತನಾದ ಮನುಷ್ಯನನ್ನು ಯಾರು ಕಂಡುಕೊಳ್ಳಬಲ್ಲರು?
Cross references
- Proverbs 10:4 ಜ್ಞಾನೋಕ್ತಿಗಳು 10:4ಬಿಗಿ ಇಲ್ಲದ ಕೈಯಿಂದ ವ್ಯಾಪಾರ ಮಾಡುವವನು ದರಿದ್ರನಾಗು ವನು; ಆದರೆ ಚುರುಕಾದ ಕೈ ಐಶ್ವರ್ಯವನ್ನುಂಟು ಮಾಡುತ್ತದೆ.
- Proverbs 19:15 ಜ್ಞಾನೋಕ್ತಿಗಳು 19:15ಮೈಗಳ್ಳತನವು ಗಾಢ ನಿದ್ರೆಯಲ್ಲಿ ಮುಳು ಗಿಸುತ್ತದೆ; ಸೋಮಾರಿಯ ಪ್ರಾಣವು ಹಸಿವೆಗೊಳ್ಳು ವದು.
- Proverbs 13:4 ಜ್ಞಾನೋಕ್ತಿಗಳು 13:4ಸೋಮಾ ರಿಯ ಪ್ರಾಣವು ಅಪೇಕ್ಷಿಸಿದರೂ ಏನೂ ಹೊಂದುವ ದಿಲ್ಲ; ಜಾಗ್ರತೆಯುಳ್ಳವನ ಪ್ರಾಣವು ಪುಷ್ಟಿಯಾಗು ವದು.
- Matthew 25:3–10 ಮತ್ತಾಯನು 25:3–10ಬುದ್ಧಿಹೀನರು ತಮ್ಮ ದೀಪಗಳನ್ನು ತಕ್ಕೊಂಡು ತಮ್ಮೊಂದಿಗೆ ಎಣ್ಣೆಯನ್ನು ತಕ್ಕೊಳ್ಳಲಿಲ್ಲ, ಬುದ್ದಿವಂತೆಯರು ತಮ್ಮ ದೀಪಗಳೊ ಂದಿಗೆ ಪಾತ್ರೆಯಲ್ಲಿ ಎಣ್ಣೆಯನ್ನೂ ತಕ್ಕೊಂಡರು. ಮದಲಿಂಗನು ತಡಮಾಡಿದಾಗ ಅವರೆಲ್ಲರೂ ತೂಕಡಿಸಿ ನಿದ್ರಿಸಿದರು. ಮಧ್ಯರಾತ್ರಿಯಲ್ಲಿ--ಇಗೋ, ಮದಲಿಂಗನು ಬರುತ್ತಾನೆ; ಅವನನ್ನು ಎದುರುಗೊಳ್ಳುವದಕ್ಕಾಗಿ ಹೊರಡಿರಿ ಎಂಬ ಕೂಗಾ ಯಿತು. ಆಗ ಆ ಕನ್ಯೆಯರೆಲ್ಲರೂ ಎದ್ದು ತಮ್ಮ ದೀಪಗಳನ್ನು ಸರಿಪಡಿಸಿಕೊಂಡರು; ಬುದ್ಧಿಹೀನರು ಬುದ್ಧಿವಂತೆಯರಿಗೆ-- ನಿಮ್ಮ ಎಣ್ಣೆಯಲ್ಲಿ ನಮಗೆ ಕೊಡಿರಿ; ಯಾಕಂದರೆ ನಮ್ಮ ದೀಪಗಳು ಆರಿಹೋಗಿವೆ ಅಂದರು. ಆದರೆ ಬುದ್ಧಿವಂತೆಯರು ಪ್ರತ್ಯುತ್ತರ ವಾಗಿ--ಹಾಗಲ್ಲ, ಅದು ನಮಗೂ ನಿಮಗೂ ಸಾಲದೆ ಹೋದೀತು; ಆದದರಿಂದ ನೀವು ಮಾರು ವವರ ಬಳಿಗೆ ಹೋಗಿ ನಿಮಗೋಸ್ಕರ ಕೊಂಡು ಕೊಳ್ಳಿರಿ ಅಂದರು. ಅವರು ಕೊಂಡುಕೊಳ್ಳುವದಕ್ಕೆ ಹೋದಾಗ ಮದಲಿಂಗನು ಬಂದನು. ಆಗ ಸಿದ್ಧವಾಗಿ ದ್ದವರು ಮದುವೆಗೆ ಆತನೊಂದಿಗೆ ಒಳಕ್ಕೆ ಹೊದರು; ತರುವಾಯ ಬಾಗಲು ಮುಚ್ಚಲಾಯಿತು.
- Matthew 25:24–28 ಮತ್ತಾಯನು 25:24–28ಆಗ ಒಂದು ತಲಾಂತು ಹೊಂದಿದ್ದ ವನು ಬಂದು--ಒಡೆಯನೇ, ನೀನು ಬಿತ್ತದಿರುವಲ್ಲಿ ಕೊಯ್ಯುವವನೂ ತೂರದಿರುವಲ್ಲಿ ಕೂಡಿಸುವವನೂ ಆಗಿರುವ ಕಠಿಣ ಮನುಷ್ಯನೆಂದು ನಾನು ಬಲ್ಲೆನು; ಅದಕ್ಕೆ ನಾನು ಭಯಪಟ್ಟು ಹೋಗಿ ನಿನ್ನ ತಲಾಂತನ್ನು ಭೂಮಿಯಲ್ಲಿ ಬಚ್ಚಿಟ್ಟೆನು. ಇಗೋ, ನಿನ್ನದು ನಿನಗೆ ಸಲ್ಲಿದೆ ಅಂದನು. ಅದಕ್ಕೆ ಅವನ ಯಜ ಮಾನನು ಪ್ರತ್ಯುತ್ತರವಾಗಿ--ಮೈಗಳ್ಳನಾದ ಕೆಟ್ಟ ಸೇವಕನೇ, ನಾನು ಬಿತ್ತದಿರುವಲ್ಲಿ ಕೊಯ್ಯುವವನೆ ಂತಲೂ ತೂರದಿರುವಲ್ಲಿ ಕೂಡಿಸುವವನೆಂತಲೂ ನೀನು ತಿಳಿದಿದ್ದೀಯಲ್ಲಾ. ಹಾಗಾದರೆ ನೀನು ನನ್ನ ಹಣವನ್ನು ಬಡ್ಡಿಗಾಗಿ ಕೊಡತಕ್ಕದ್ದಾಗಿತ್ತು; ನಾನು ಬಂದಾಗ ನನ್ನ ಸ್ವಂತದ್ದನ್ನು ಬಡ್ಡಿ ಸಹಿತವಾಗಿ ಹೊಂದಿ ಕೊಳ್ಳುತ್ತಿದ್ದೆನು. ಆ ತಲಾಂತನ್ನು ತೆಗೆದುಕೊಂಡು ಹತ್ತು ತಲಾಂತುಗಳುಳ್ಳವನಿಗೆ ಕೊಡಿರಿ.
- 2 Peter 1:5–11 2 ಪೇತ್ರನು 1:5–11ಈಕಾರಣದಿಂದಲೇ ನೀವು ಪೂರ್ಣ ಜಾಗ್ರತೆಯಿಂದ ನಿಮಗಿರುವ ನಂಬಿಕೆಗೆ ಸದ್ಗುಣವನ್ನೂ ಸದ್ಗುಣಕ್ಕೆ ಜ್ಞಾನವನ್ನೂ ಜ್ಞಾನಕ್ಕೆ ದಮೆಯನ್ನೂ ದಮೆಗೆ ತಾಳ್ಮೆಯನ್ನೂ ತಾಳ್ಮೆಗೆ ಭಕ್ತಿಯನ್ನೂ ಭಕ್ತಿಗೆ ಸಹೋದರ ಕರುಣೆಯನ್ನೂ ಸಹೋದರ ಕರುಣೆಗೆ ಪ್ರೀತಿಯನ್ನೂ ಕೂಡಿಸಿರಿ. ಇವು ನಿಮ್ಮಲ್ಲಿದ್ದು ಹೆಚ್ಚುತ್ತಾ ಬಂದರೆ ನಮ್ಮ ಕರ್ತನಾದ ಯೇಸು ಕ್ರಿಸ್ತನ ಪರಿಜ್ಞಾನದಲ್ಲಿ ನಿಮ್ಮನ್ನು ಬಂಜೆಯರೂ ನಿಷ್ಪಲರೂ ಆಗದಂತೆ ಮಾಡುತ್ತವೆ. ಇವುಗಳಿಲ್ಲದವನು ಕುರುಡನಾಗಿದ್ದಾನೆ; ಅವನು ದೂರದೃಷ್ಟಿಯಿಲ್ಲದವನಾಗಿದ್ದು ತನ್ನ ಹಿಂದಣ ಪಾಪಗಳಿಂದ ಶುದ್ಧನಾದದ್ದನ್ನು ಮರೆತುಬಿಟ್ಟಿದ್ದಾನೆ. ಆದದರಿಂದ ಸಹೋದರರೇ, ನಿಮ್ಮ ಕರೆಯುವಿಕೆ ಯನ್ನೂ ಆಯ್ಕೆಯನ್ನೂ ದೃಢಪಡಿಸಿಕೊಳ್ಳುವದಕ್ಕೆ ಜಾಗ್ರತೆಯಾಗಿರಿ. ಯಾಕಂದರೆ ಇವುಗಳನ್ನು ನೀವು ಮಾಡಿದರೆ ಎಂದಿಗೂ ತಪ್ಪಿಹೋಗುವದಿಲ್ಲ ನಮ್ಮ ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನ ನಿತ್ಯ ರಾಜ್ಯದಲ್ಲಿ ಪ್ರವೇಶಿಸುವ ಹಾಗೆ ನಿಮಗೆ ಧಾರಾಳವಾಗಿ ಅನುಗ್ರಹಿಸಲ್ಪಡುವದು.
- Proverbs 26:13–16 ಜ್ಞಾನೋಕ್ತಿಗಳು 26:13–16ಸೋಮಾರಿಯು --ದಾರಿಯಲ್ಲಿ ಸಿಂಹವಿದೆ, ಬೀದಿಗಳಲ್ಲಿ ಸಿಂಹ ಇದೆ ಎಂದು ಹೇಳುತ್ತಾನೆ. ಬಾಗಲು ತಿರುಗುಣಿಗಳ ಮೇಲೆ ಹೇಗೆ ತಿರುಗುತ್ತದೋ ಹಾಗೆಯೇ ಸೋಮಾರಿಯು ತನ್ನ ಹಾಸಿಗೆಯ ಮೇಲೆ ತಿರುಗುತ್ತಾನೆ. ಸೋಮಾ ರಿಯು ಎದೆಯಲ್ಲಿ ತನ್ನ ಕೈಯನ್ನು ಮುಚ್ಚಿಕೊಳ್ಳುತ್ತಾನೆ; ತಿರುಗಿ ಅದನ್ನು ತನ್ನ ಬಾಯಿಯ ಹತ್ತಿರ ತರುವದಕ್ಕೆ ಕೊರಗುತ್ತಾನೆ. ತನ್ನ ಸ್ವಂತ ಅಭಿಪ್ರಾಯವುಳ್ಳ ಸೋಮಾರಿಯು ನೆವ ಹೇಳುವ ಏಳು ಮಂದಿಗಿಂತ ಜಾಣನಾಗಿದ್ದಾನೆ.
- Proverbs 24:34 ಜ್ಞಾನೋಕ್ತಿಗಳು 24:34ಹೀಗೆ ನಿನ್ನ ಬಡತನವು ಪ್ರಯಾಣಿಕನ ಹಾಗೆಯೂ ನಿನ್ನ ಕೊರತೆಯು ಆಯುಧದಾರ ನಂತೆಯೂ ಬರುವವು.
- Proverbs 6:10–11 ಜ್ಞಾನೋಕ್ತಿಗಳು 6:10–11ಇನ್ನು ಸ್ವಲ್ಪ ನಿದ್ರೆ, ಇನ್ನು ಸ್ವಲ್ಪ ತೂಕಡಿಕೆ, ನಿದ್ರೆಗಾಗಿ ಇನ್ನೂ ಸ್ವಲ್ಪ ಕೈ ಮುದುರಿ ಕೊಳ್ಳುವಿ? ಹೀಗೆ ದಾರಿದ್ರ್ಯವು ಪ್ರಯಾಣ ಮಾಡು ವವನ ಹಾಗೂ ನಿನ್ನ ಕೊರತೆಯು ಯುದ್ಧಸ್ಥರ ಹಾಗೂ ಬರುವದು.
- Proverbs 19:24 ಜ್ಞಾನೋಕ್ತಿಗಳು 19:24ಸೋಮಾರಿಯು ತನ್ನ ಕೈಯನ್ನು ಎದೆಯಲ್ಲಿ ಬಚ್ಚಿಟ್ಟು ತನ್ನ ಬಾಯಿಗೆ ಸಹ ಅದನ್ನು ಎತ್ತುವದಿಲ್ಲ.