Proverbs · chapter 21 · verse 13
Proverbs 21:13 in Kannada
ಬಡವರ ಕೂಗಿಗೆ ತನ್ನ ಕಿವಿಗಳನ್ನು ಮುಚ್ಚಿಕೊಳ್ಳುವವನು ತಾನು ಕೂಗಿದಾಗ ಯಾರೂ ಅವನಿಗೆ ಉತ್ತರಕೊಡುವದಿಲ್ಲ.
Badavara koogige tanna kivigalannu muchchikolluvavanu taanu koogidaaga yaaroo avanige uttarakoduvadilla.
Proverbs 21:13 in English
- King James Version (KJV)
- Whoso stoppeth his ears at the cry of the poor, he also shall cry himself, but shall not be heard.
- World English Bible (WEB)
- Whoever stops his ears at the cry of the poor, he will also cry out, but shall not be heard.
- American Standard Version (ASV)
- Whoso stoppeth his ears at the cry of the poor, He also shall cry, but shall not be heard.
- Bible in Basic English (BBE)
- He whose ears are stopped at the cry of the poor, will himself get no answer to his cry for help.
- Darby Translation (DBY)
- Whoso stoppeth his ears at the cry of the poor, he also himself shall cry, and shall not be heard.
- Webster's Bible (WBS)
- Whoever stoppeth his ears at the cry of the poor, he also shall cry himself, but shall not be heard.
- Young's Literal Translation (YLT)
- Whoso is shutting his ear from the cry of the poor, He also doth cry, and is not answered.
Read in context
- 11ಪರಿಹಾಸ್ಯಕರನ್ನು ಶಿಕ್ಷಿಸಿ ದರೆ ಬುದ್ಧಿಹೀನರು ಜ್ಞಾನವಂತರಾಗುವರು; ಜ್ಞಾನಿಯು ಶಿಕ್ಷಣ ಹೊಂದಿದರೆ ಅವನು ತಿಳುವಳಿಕೆಯನ್ನು ಹೊಂದು ತ್ತಾನೆ.
- 12ನೀತಿವಂತನು ದುಷ್ಟನ ಮನೆಯನ್ನು ಬುದ್ಧಿ ಯಿಂದ ಲಕ್ಷಿಸುತ್ತಾನೆ; ಅವರ ದುಷ್ಟತನಕ್ಕಾಗಿ ದೇವರು ಅವರನ್ನು ಕೆಡವುತ್ತಾನೆ.
- 13ಬಡವರ ಕೂಗಿಗೆ ತನ್ನ ಕಿವಿಗಳನ್ನು ಮುಚ್ಚಿಕೊಳ್ಳುವವನು ತಾನು ಕೂಗಿದಾಗ ಯಾರೂ ಅವನಿಗೆ ಉತ್ತರಕೊಡುವದಿಲ್ಲ.
- 14ಗುಪ್ತ ಲಂಚವು ಕೋಪವನ್ನು ಅಡಗಿಸುವದು; ಎದೆಯಲ್ಲಿ ಕೊಟ್ಟ ಬಹುಮಾನವು ರೌದ್ರವನ್ನು ಆರಿಸುತ್ತದೆ.
- 15ನ್ಯಾಯತೀರಿಸುವದು ನೀತಿವಂತರಿಗೆ ಸಂತೋಷವಾ ಗಿದೆ; ಅಕ್ರಮವನ್ನು ಮಾಡುವವರಿಗೆ ನಾಶನ.
Cross references
- Proverbs 28:27 ಜ್ಞಾನೋಕ್ತಿಗಳು 28:27ಬಡವರಿಗೆ ದಾನಮಾಡು ವವರು ಕೊರತೆಪಡುವದಿಲ್ಲ; ತನ್ನ ಕಣ್ಣುಗಳನ್ನು ಮುಚ್ಚಿ ಕೊಳ್ಳುವವನಿಗೆ ಅನೇಕ ಶಾಪಗಳು.ದುಷ್ಟರು ಎದ್ದರೆ ಜನರು ಅಡಗಿಕೊಳ್ಳುತ್ತಾರೆ. ಅವರು ನಾಶ ವಾದರೆ ನೀತಿವಂತರು ವೃದ್ಧಿಯಾಗುತ್ತಾರೆ.
- Proverbs 1:28 ಜ್ಞಾನೋಕ್ತಿಗಳು 1:28ಅವರು ನನಗೆ ಮೊರೆಯಿಡುವರು, ಆದರೆ ನಾನು ಅವರಿಗೆ ಉತ್ತರಕೊಡೆನು. ಅವರು ಆತುರದಿಂದ ನನ್ನನ್ನು ಹುಡು ಕಿದರೂ ಕಂಡುಕೊಳ್ಳುವದಿಲ್ಲ.
- Matthew 6:14 ಮತ್ತಾಯನು 6:14ಆದದರಿಂದ ನೀವು ಮನುಷ್ಯರ ಅಪರಾಧ ಗಳನ್ನು ಕ್ಷಮಿಸುವದಾದರೆ ಪರಲೋಕದ ನಿಮ್ಮ ತಂದೆಯು ಸಹ ನಿಮ್ಮನ್ನು ಕ್ಷಮಿಸುವನು.
- James 2:13–16 ಯಾಕೋಬನು 2:13–16ಕರುಣೆ ತೋರಿಸದೆ ಇರುವವನಿಗೆ ನ್ಯಾಯತೀರ್ಪಿನಲ್ಲಿ ಕರುಣೆಯು ತೋರಿಸಲ್ಪಡುವದಿಲ್ಲ. ಕರುಣೆಯು ನ್ಯಾಯತೀರ್ಪಿಗಿಂತ ಮೇಲಾಗಿ ಹಿಗ್ಗುತ್ತದೆ. ನನ್ನ ಸಹೋದರರೇ, ಒಬ್ಬನು ತನಗೆ ನಂಬಿಕೆ ಯುಂಟೆಂದು ಹೇಳಿಕೊಂಡು ಕ್ರಿಯೆಗಳಿಲ್ಲದವನಾಗಿದ್ದರೆ ಪ್ರಯೋಜನವೇನು? ಅಂಥ ನಂಬಿಕೆಯು ಅವನನ್ನು ರಕ್ಷಿಸುವದೋ? ಒಬ್ಬ ಸಹೋದರನಿಗೆ ಇಲ್ಲವೆ ಒಬ್ಬ ಸಹೋದರಿಗೆ ಬಟ್ಟೆಯೂ ಆ ದಿನದ ಆಹಾರವೂ ಇಲ್ಲದಿರುವಾಗ ನಿಮ್ಮಲ್ಲಿ ಒಬ್ಬನು ಅವರಿಗೆ ದೇಹಕ್ಕೆ ಬೇಕಾದವುಗಳನ್ನು ಕೊಡದೆ--ಸಮಾಧಾನದಿಂದ ಹೋಗಿರಿ, ಬೆಂಕಿಕಾಯಿಸಿಕೊಳ್ಳಿರಿ, ಹೊಟ್ಟೆತುಂಬಿಸಿ ಕೊಳ್ಳಿರಿ ಎಂದು ಹೇಳಿದರೆ ಪ್ರಯೋಜನವೇನು?
- Jeremiah 34:16–17 ಯೆರೆಮೀಯ 34:16–17ಆದರೆ ತಿರುಗಿಕೊಂಡು ನನ್ನ ಹೆಸರನ್ನು ಅಪವಿತ್ರ ಮಾಡಿ ನೀವು ಅವರ ಮನಸ್ಸು ಬಂದ ಹಾಗೆ ಬಿಡುಗಡೆಯಾಗಿ ಕಳುಹಿಸಿದ್ದ ನಿಮ್ಮ ನಿಮ್ಮ ದಾಸದಾಸಿ ಯರನ್ನು ಒಬ್ಬೊಬ್ಬನು ತಿರಿಗಿ ಬರಮಾಡಿ ನಿಮಗೆ ದಾಸದಾಸಿಯರಾಗುವ ಹಾಗೆ ವಶಮಾಡಿಕೊಂಡಿ ದ್ದೀರಿ. ಆದದರಿಂದ ಕರ್ತನು ಹೀಗೆ ಹೇಳುತ್ತಾನೆ--ಪ್ರತಿಯೊಬ್ಬನು ತನ್ನ ಸಹೋದರನಿಗೂ ಪ್ರತಿ ಮನುಷ್ಯನು ತನ್ನ ನೆರೆಯವನಿಗೂ ಬಿಡುಗಡೆಯನ್ನು ಸಾರುವದರಲ್ಲಿ ನೀವು ನನಗೆ ಕಿವಿಗೊಡಲಿಲ್ಲ. ಇಗೋ, ನಾನು ಕತ್ತಿ, ಬರ, ಜಾಡ್ಯ ಇವುಗಳಿಗಾಗಿ ನಿಮಗೆ ಬಿಡುಗಡೆಯನ್ನು ಸಾರುತ್ತೇನೆ ಎಂದು ಕರ್ತನು ಹೇಳುತ್ತಾನೆ. ಭೂಮಿಯ ಎಲ್ಲಾ ರಾಜ್ಯಗಳಿಗೆ ನಿಮ್ಮನ್ನು ತೆಗೆದು ಹಾಕುವಂತೆ ಮಾಡುವೆನು.
- Matthew 18:30–35 ಮತ್ತಾಯನು 18:30–35ಅವನು ಅದಕ್ಕೆ ಒಪ್ಪದೆ ಹೊರಟುಹೋಗಿ ತನ್ನ ಸಾಲವನ್ನು ತೀರಿಸುವ ವರೆಗೆ ಅವನನ್ನು ಸೆರೆಮನೆಯಲ್ಲಿ ಹಾಕಿಸಿದನು. ಹೀಗೆ ಅವನ ಜೊತೆ ಸೇವಕರು ನಡೆದದ್ದನ್ನು ನೋಡಿ ಬಹಳ ವ್ಯಥೆಪಟ್ಟು ಹೋಗಿ ತಮ್ಮ ಧಣಿಗೆ ನಡೆದದ್ದೆಲ್ಲವನ್ನು ತಿಳಿಯಪಡಿಸಿದರು. ಆಗ ಅವನ ಧಣಿಯು ಅವನನ್ನು ತನ್ನ ಬಳಿಗೆ ಕರೆದು ಅವನಿಗೆ--ಓ ದುಷ್ಟ ಸೇವಕನೇ, ನೀನು ನನ್ನನ್ನು ಬೇಡಿಕೊಂಡದ್ದರಿಂದ ನಾನು ನಿನ್ನ ಸಾಲವನ್ನೆಲಾ ಮನ್ನಿಸಿದೆನು. ನಾನು ನಿನ್ನ ಮೇಲೆ ಕರುಣೆ ತೋರಿಸಿದಂತೆಯೇ ನೀನು ಸಹ ನಿನ್ನ ಜೊತೇ ಸೇವಕನ ಮೇಲೆ ಕರುಣೆಯನ್ನು ತೋರಿಸಬೇಕಾಗಿ ತ್ತಲ್ಲವೇ ಎಂದು ಹೇಳಿದನು. ಅವನ ಧಣಿಯು ಕೋಪಗೊಂಡು ತನಗೆ ಕೊಡಬೇಕಾದ ಸಾಲವನ್ನೆಲ್ಲಾ ತೀರಿಸುವ ತನಕ ಅವನನ್ನು ಸಂಕಟಪಡಿಸುವವರಿಗೆ ಒಪ್ಪಿಸಿದನು.ಅದರಂತೆಯೇ ನಿಮ್ಮಲ್ಲಿ ಪ್ರತಿಯೊ ಬ್ಬನು ಹೃದಯಪೂರ್ವಕವಾಗಿ ತನ್ನ ಸಹೋದರನ ತಪ್ಪುಗಳನ್ನು ಕ್ಷಮಿಸದೆಹೋದರೆ ಪರಲೋಕದಲ್ಲಿರುವ ನನ್ನ ತಂದೆಯೂ ನಿಮಗೆ ಹಾಗೆಯೇ ಮಾಡುವನು ಅಂದನು. ಅದರಂತೆಯೇ ನಿಮ್ಮಲ್ಲಿ ಪ್ರತಿಯೊ ಬ್ಬನು ಹೃದಯಪೂರ್ವಕವಾಗಿ ತನ್ನ ಸಹೋದರನ ತಪ್ಪುಗಳನ್ನು ಕ್ಷಮಿಸದೆಹೋದರೆ ಪರಲೋಕದಲ್ಲಿರುವ ನನ್ನ ತಂದೆಯೂ ನಿಮಗೆ ಹಾಗೆಯೇ ಮಾಡುವನು ಅಂದನು.
- Matthew 7:2 ಮತ್ತಾಯನು 7:2ನೀವು ಮಾಡುವ ತೀರ್ಪಿ ನಿಂದಲೇ ನಿಮಗೆ ತೀರ್ಪಾಗುವದು; ಮತ್ತು ನೀವು ಅಳೆಯುವ ಅಳತೆಯಿಂದಲೇ ನಿಮಗೆ ತಿರಿಗಿ ಅಳತೆ ಯಾಗುವದು.
- Isaiah 1:15–17 ಯೆಶಾಯ 1:15–17ನೀವು ನಿಮ್ಮ ಕೈಗಳನ್ನು ಚಾಚಲು ನಾನು ನನ್ನ ಕಣ್ಣುಗಳನ್ನು ನಿಮಗೆ ಮರೆಮಾಡುವೆನು; ಹೌದು, ನೀವು ಬಹು ಪ್ರಾರ್ಥನೆಗಳನ್ನು ಮಾಡಿ ದರೂ ನಾನು ಕೇಳೆನು, ನಿಮ್ಮ ಕೈಗಳು ರಕ್ತದಿಂದ ತುಂಬಿಯವೆ. ನಿಮ್ಮನ್ನು ತೊಳೆದುಕೊಂಡು ಶುದ್ಧ ಮಾಡಿಕೊಳ್ಳಿರಿ; ನನ್ನ ಕಣ್ಣೆದುರಿನಿಂದ ನಿಮ್ಮ ದುಷ್ಟ ಕೃತ್ಯಗಳನ್ನು ತೆಗೆದುಹಾಕಿರಿ, ಕೆಟ್ಟದ್ದನ್ನು ನಿಲ್ಲಿಸಿಬಿಡಿರಿ; ಒಳ್ಳೆಯದನ್ನು ಮಾಡಲು ಕಲಿತುಕೊಳ್ಳಿರಿ; ನ್ಯಾಯ ವನ್ನು ಹುಡುಕಿರಿ, ಹಿಂಸೆಪಡುವವರನ್ನು ಉಪಚರಿಸಿರಿ, ಅನಾಥರಿಗೆ ನ್ಯಾಯತೀರಿಸಿರಿ, ವಿಧವೆಯರ ಪರವಾಗಿವಾದಿಸಿರಿ.
- Isaiah 58:6–9 ಯೆಶಾಯ 58:6–9ನಾನು ಆದುಕೊಳ್ಳುವ ಉಪವಾಸವು ಕೇಡಿನ ಬಂಧನಗಳನ್ನು ಬಿಚ್ಚುವದೂ ಭಾರವಾದ ಹೊರೆಯನ್ನು ಬಿಚ್ಚುವದೂ ಹಿಂಸಿಸಲ್ಪಟ್ಟವರು ಬಿಡಿಸ ಲ್ಪಟ್ಟವರಾಗಿ ಹಾಕುವದೂ ಆಗಿದೆಯಲ್ಲವೋ? ನಿನ್ನ ರೊಟ್ಟಿಯನ್ನು ಹಸಿದವರಿಗೆ ಹಂಚುವದೂ ಅಲೆಯು ತ್ತಿರುವ ಬಡವರನ್ನು ನಿನ್ನ ಮನೆಗೆ ಬರಮಾಡಿ ಕೊಳ್ಳುವದೂ ಬೆತ್ತಲೆಯವರನ್ನು ಕಂಡಾಗೆಲ್ಲ ಅವರಿಗೆ ಹೊದಿಸುವದೂ ನಿನ್ನ ಸ್ವಂತ ಶರೀರದಂತಿರುವವ ನಿಗೆ ನಿನ್ನನ್ನು ಮರೆಮಾಡಿಕೊಳ್ಳದಿರುವದೂ ಇದೇ ಅಲ್ಲವೋ? ಹೀಗಾದರೆ ನಿನ್ನ ಬೆಳಕು ಉದಯದಂತೆ ಪ್ರತ್ಯಕ್ಷವಾಗುವದು. ನಿನ್ನ ಕ್ಷೇಮವು ಬೇಗನೆ ಚಿಗುರು ವದು. ನಿನ್ನ ನೀತಿಯು ನಿನಗೆ ಮುಂಬಲವಾಗಿ ಮುಂದ ರಿಯುವದು. ಕರ್ತನ ಮಹಿಮೆಯು ನಿನಗೆ ಹಿಂಬಲ ವಾಗಿರುವದು. ಆಗ ನೀನು ಕರೆದರೆ ಕರ್ತನು ಉತ್ತರ ಕೊಡುವನು; ನೀನು ಕೂಗುವಿ ಆಗ ಆತನು--ನಾನು ಇಲ್ಲಿ ಇದ್ದೇನೆ ಅನ್ನುವನು. ನೀನು ನಿನ್ನ ಮಧ್ಯದೊಳ ಗಿಂದ ನೊಗವನ್ನೂ ಬೆರಳ ಸನ್ನೆಯನ್ನೂ ವ್ಯರ್ಥವಾದ ಸಂಭಾಷಣೆಯನ್ನೂ ತೆಗೆದುಹಾಕಿ,
- Psalm 18:41 ಕೀರ್ತನೆಗಳು 18:41ಅವರು ಮೊರೆಯಿಟ್ಟರು, ಆದರೆ ರಕ್ಷಿಸುವವರು ಯಾರೂ ಇದ್ದಿಲ್ಲ. ಕರ್ತನಿಗೂ ಮೊರೆ ಇಟ್ಟರು, ಆದರೆ ಅವರಿಗೆ ಆತನು ಉತ್ತರ ಕೊಡ ಲಿಲ್ಲ.
- Zechariah 7:9–13 ಜೆಕರ್ಯ 7:9–13ನಿಜವಾದ ನ್ಯಾಯವನ್ನು ತೀರಿಸಿರಿ; ಒಬ್ಬರಿಗೊಬ್ಬರು ಕೃಪೆಯನ್ನೂ ಕನಿಕರವನ್ನೂ ತೋರಿಸಿರಿ; ವಿಧವೆಗೂ ದಿಕ್ಕಿಲ್ಲದವನಿಗೂ ಅನ್ಯ ನಿಗೂ ಬಡವನಿಗೂ ಬಲಾತ್ಕಾರ ಮಾಡಬೇಡಿರಿ; ಯಾರೂ ತನ್ನ ಹೃದಯದಲ್ಲಿ ತನ್ನ ಸಹೋದರನ ಮೇಲೆ ಕೆಟ್ಟದ್ದನ್ನು ಕಲ್ಪಿಸದೆ ಇರಲಿ ಎಂಬದು. ಆದರೆ ಅವರು ಕೇಳುವದಕ್ಕೆ ನಿರಾಕರಿಸಿದರು. ಅವರು ಹೆಗಲನ್ನು ಹಿಂದೆ ಳೆದು ಕೇಳದ ಹಾಗೆ ತಮ್ಮ ಕಿವಿಗಳನ್ನು ಮಂದಮಾಡಿ ಕೊಂಡರು. ಹೌದು, ಅವರು ನ್ಯಾಯಪ್ರಮಾಣ ವನ್ನೂ ಸೈನ್ಯಗಳ ಕರ್ತನು ತನ್ನ ಆತ್ಮದ ಮುಖಾಂತರ ಪೂರ್ವದ ಪ್ರವಾದಿಗಳ ಕೈಯಿಂದ ಕಳುಹಿಸಿದ ವಾಕ್ಯ ಗಳನ್ನೂ ಕೇಳದ ಹಾಗೆ ತಮ್ಮ ಹೃದಯಗಳನ್ನು ವಜ್ರದ ಕಲ್ಲಿನಂತೆ ಮಾಡಿಕೊಂಡರು. ಆದದರಿಂದ ಸೈನ್ಯಗಳ ಕರ್ತನಿಂದ ಮಹಾರೋಷವು ಬಂತು. ಆಗ ಆದದ್ದೇ ನಂದರೆ--ಅವನು ಕೂಗಲು ಅವರು ಕೇಳದೆ ಇದ್ದ ಪ್ರಕಾರ ಅವರು ಕೂಗಲು ನಾನು ಕೇಳದೆ ಇದ್ದೆನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.ಇದಲ್ಲದೆ ಅವರು ಅರಿಯದ ಎಲ್ಲಾ ಜನಾಂಗಗಳೊಳಗೆ ಅವರನ್ನು ಸುಂಟರ ಗಾಳಿಯಿಂದ ಚದರಿಸಿಬಿಟ್ಟೆನು. ಹೀಗೆ ಅವರ ಹಿಂದೆ ದೇಶವು ನಾಶವಾಯಿತು; ಹಾದುಹೋಗುವವನೂ ತಿರುಗಿಕೊಳ್ಳುವವನೂ ಇಲ್ಲದೆ ಹೋದರು. ರಮ್ಯವಾದ ದೇಶವನ್ನು ಹಾಳಾಗಿ ಮಾಡಿದರು.
- Psalm 58:4 ಕೀರ್ತನೆಗಳು 58:4ಹಾವಿನ ವಿಷದ ಹಾಗೆ ಅವರ ವಿಷವುಂಟು; ಅವರು ಕಿವಿಯನ್ನು ಮುಚ್ಚಿಕೊಳ್ಳುವ ಕಿವುಡ ಸರ್ಪದ ಹಾಗಿ ದ್ದಾರೆ.