Proverbs · chapter 21 · verse 27
Proverbs 21:27 in Kannada
ದುಷ್ಟರ ಯಜ್ಞವು ಅಸಹ್ಯ; ಹೀಗಾದರೆ ದುರ್ಬುದ್ಧಿ ಯಿಂದ ಅದನ್ನು ಅರ್ಪಿಸಿದರೆ ಇನ್ನೂ ಎಷ್ಟೋ ಅಸಹ್ಯ ಕರವಾಗಿದೆ.
Dushtara yajnyavu asahya; heegaadare durbuddhi yinda adannu arpisidare innoo eshto asahya karavaagide.
Proverbs 21:27 in English
- King James Version (KJV)
- The sacrifice of the wicked [is] abomination: how much more, [when] he bringeth it with a wicked mind?
- World English Bible (WEB)
- The sacrifice of the wicked is an abomination— how much more, when he brings it with a wicked mind!
- American Standard Version (ASV)
- The sacrifice of the wicked is an abomination; How much more, when he bringeth it with a wicked mind!
- Bible in Basic English (BBE)
- The offering of evil-doers is disgusting: how much more when they give it with an evil purpose!
- Darby Translation (DBY)
- The sacrifice of the wicked is abomination: how much more when they bring it with a wicked purpose!
- Webster's Bible (WBS)
- The sacrifice of the wicked [is] abomination: how much more, [when] he bringeth it with a wicked mind?
- Young's Literal Translation (YLT)
- The sacrifice of the wicked [is] abomination, Much more when in wickedness he bringeth it.
Read in context
- 25ಸೋಮಾರಿಯ ಆಶೆಯು ಅವನನ್ನು ಕೊಲ್ಲುತ್ತವೆ. ಅವನ ಕೈಗಳು ದುಡಿಯುವದಕ್ಕೆ ನಿರಾಕರಿಸುತ್ತವೆ.
- 26ದಿನವೆಲ್ಲಾ ಅವನು ದುರಾಶೆಯಿಂದ ಆಶಿಸುತ್ತಾನೆ; ಆದರೆ ನೀತಿವಂತನು ಹಿಂತೆಗೆಯದೇ ಕೊಡುತ್ತಾನೆ.
- 27ದುಷ್ಟರ ಯಜ್ಞವು ಅಸಹ್ಯ; ಹೀಗಾದರೆ ದುರ್ಬುದ್ಧಿ ಯಿಂದ ಅದನ್ನು ಅರ್ಪಿಸಿದರೆ ಇನ್ನೂ ಎಷ್ಟೋ ಅಸಹ್ಯ ಕರವಾಗಿದೆ.
- 28ಸುಳ್ಳುಸಾಕ್ಷಿಯವನು ನಾಶವಾಗುವನು; ಕೇಳುವವನು ಬಿಡದೆ ಮಾತಾಡುವನು.
- 29ದುಷ್ಟನು ತನ್ನ ಮುಖವನ್ನು ಕಠಿಣಮಾಡಿಕೊಳ್ಳುತ್ತಾನೆ; ಯಥಾ ರ್ಥವಂತನಾದರೋ ತನ್ನ ಮಾರ್ಗವನ್ನು ಸರಿಪಡಿಸಿ ಕೊಳ್ಳುತ್ತಾನೆ.
Cross references
- Isaiah 66:3 ಯೆಶಾಯ 66:3ಎತ್ತನ್ನು ಕೊಂದುಹಾಕುವವನು ಮನುಷ್ಯನನ್ನು ಹತ್ಯೆ ಮಾಡು ವವನ ಹಾಗಿದ್ದಾನೆ; ಕುರಿಮರಿಯನ್ನು ಬಲಿಯಾಗಿ ಕೊಡುವವನು ನಾಯಿಯ ಕುತ್ತಿಗೆಯನ್ನು ಕಡಿಯು ವವನ ಹಾಗಿದ್ದಾನೆ; ಕಾಣಿಕೆಯನ್ನು ಅರ್ಪಿಸುವವನು ಹಂದಿಯ ರಕ್ತವನ್ನು ಅರ್ಪಿಸುವವನ ಹಾಗಿದ್ದಾನೆ. ಧೂಪವನ್ನು ಸುಡುವವನು ವಿಗ್ರಹವನ್ನು ಆಶೀರ್ವದಿ ಸುವವನ ಹಾಗಿದ್ದಾನೆ. ಹೌದು, ಅವರು ಸ್ವಂತ ಮಾರ್ಗಗಳನ್ನು ಆದುಕೊಂಡಿದ್ದಾರೆ; ಅವರ ಪ್ರಾಣವು ಅವರ ಅಸಹ್ಯವಾದವುಗಳಲ್ಲಿ ಹರ್ಷಿಸುತ್ತವೆ.
- Matthew 23:13 ಮತ್ತಾಯನು 23:13ಆದರೆ ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಅಯ್ಯೋ! ನೀವು ಮನುಷ್ಯರ ಮುಂದೆ ಪರ ಲೋಕರಾಜ್ಯವನ್ನು ಮುಚ್ಚುತ್ತೀರಿ. ನೀವಂತೂ ಪ್ರವೇಶಿ ಸುವದಿಲ್ಲ, ಪ್ರವೇಶಿಸುವವರನ್ನೂ ನೀವು ಒಳಗೆ ಹೋಗಗೊಡಿಸುವದಿಲ್ಲ.
- Proverbs 15:8 ಜ್ಞಾನೋಕ್ತಿಗಳು 15:8ದುಷ್ಟರ ಯಜ್ಞವು ಕರ್ತನಿಗೆ ಅಸಹ್ಯ; ಯಥಾರ್ಥವಂತರ ಪ್ರಾರ್ಥನೆಯು ಆತನ ಆನಂದವು.
- Jeremiah 6:20 ಯೆರೆಮೀಯ 6:20ಶೇಬದಿಂದ ಸಾಂಬ್ರಾಣಿಯೂ ದೂರ ದೇಶದಿಂದ ಒಳ್ಳೇ ಸುಗಂಧವೂ ನನಗೆ ಬರುವದು ಯಾತಕ್ಕೆ? ನಿಮ್ಮ ದಹನಬಲಿಗಳು ಮೆಚ್ಚಿಕೆಯಾಗಲಿಲ್ಲ; ನಿಮ್ಮ ಬಲಿಗಳು ನನಗೆ ರುಚಿ ಇಲ್ಲ.
- 1 Samuel 15:21–23 1 ಸಮುವೇಲನು 15:21–23ಆದರೆ ಜನರು ನಿನ್ನ ದೇವರಾದ ಕರ್ತನಿಗೆ ಗಿಲ್ಗಾಲಿ ನಲ್ಲಿ ಬಲಿ ಕೊಡುವದಕ್ಕಾಗಿ ಕೊಳ್ಳೆಯಲ್ಲಿ ಸಂಪೂರ್ಣ ವಾಗಿ ನಾಶಮಾಡಬೇಕೆಂದಿರುವ ಕುರಿ ಪಶುಗಳಲ್ಲಿ ಮೇಲ್ತರವಾದವುಗಳನ್ನು ಹಿಡುಕೊಂಡು ಬಂದರು ಅಂದನು. ಅದಕ್ಕೆ ಸಮುವೇಲನು--ಕರ್ತನ ವಾಕ್ಯಕ್ಕೆ ವಿಧೇಯನಾದರೆ ಕರ್ತನಿಗೆ ಆಗುವ ಸಂತೋಷ ದಹನ ಬಲಿಗಳಲ್ಲಿಯೂ ಬಲಿಗಳಲ್ಲಿಯೂ ಆಗುವದೋ? ಇಗೋ, ಬಲಿಗಿಂತ ವಿಧೇಯವಾಗುವದು ಟಗರುಗಳ ಕೊಬ್ಬಿಗಿಂತ ಆಲೈಸುವದು ಉತ್ತಮವಾಗಿರುವದು. ಎದುರು ಬೀಳುವದು ಕಣಿ ಹೇಳುವಂತೆ ಪಾಪ ವಾಗಿದೆ, ಹಟವು ದುಷ್ಟತನ ಮತ್ತು ವಿಗ್ರಹಾರಾಧನೆಗಳ ಹಾಗೆ ಇದೆ. ನೀನು ಕರ್ತನ ವಾಕ್ಯವನ್ನು ತಿರಸ್ಕಾರ ಮಾಡಿದ್ದರಿಂದ ಆತನು ನಿನ್ನನ್ನು ಅರಸನಾಗಿರದ ಹಾಗೆ ತಿರಸ್ಕಾರ ಮಾಡಿಬಿಟ್ಟನು ಅಂದನು.
- Amos 5:21–22 ಆಮೋಸ 5:21–22ನಿಮ್ಮ ನಿಮ್ಮ ಪರಿಶುದ್ಧ ಸಭೆಗಳನ್ನು ನಾನು ಮೂಸುವದಿಲ್ಲ. ನೀವು ನನಗೆ ದಹನಬಲಿಗಳನ್ನೂ ಆಹಾರ ಅರ್ಪಣೆಗಳನ್ನೂ ಅರ್ಪಿಸಿದರೂ ನಾನು ಅವುಗಳನ್ನು ಅಂಗೀ ಕರಿಸುವದಿಲ್ಲ, ಇಲ್ಲವೆ ನಿಮ್ಮ ಕೊಬ್ಬಿದ ಪ್ರಾಣಿಗಳ ಸಮಾಧಾನದ ಬಲಿಗಳನ್ನು ಲಕ್ಷಿಸುವದಿಲ್ಲ.
- Isaiah 1:11–16 ಯೆಶಾಯ 1:11–16ನೀವು ಲೆಕ್ಕವಿಲ್ಲದಷ್ಟು ಯಜ್ಞಗಳನ್ನು ನನಗೆ ಅರ್ಪಿಸುವ ಉದ್ದೇಶವೇನು? ಎಂದು ಕರ್ತನು ನುಡಿಯುತ್ತಾನೆ. ಟಗರುಗಳ ದಹನಬಲಿಗಳು, ಪುಷ್ಟಿ ಪ್ರಾಣಿಗಳ ಕೊಬ್ಬು, ಇದೆಲ್ಲಾ ನನಗೆ ಸಾಕಾಯಿತು; ಹೋರಿ, ಕುರಿ, ಹೋತಗಳ ರಕ್ತಕ್ಕೆ ನಾನು ಸಂತೋಷಪಡುವ ದಿಲ್ಲ. ನೀವು ನನ್ನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳ ಬೇಕೆಂದು ಬರುತ್ತೀರಲ್ಲಾ; ನನ್ನ ಪ್ರಾಕಾರಗಳನ್ನು ತುಳಿ ಯಲು ಯಾರು ನಿಮ್ಮನ್ನು ಕೇಳಿಕೊಂಡರು? ಇನ್ನು ವ್ಯರ್ಥವಾದ ಕಾಣಿಕೆಗಳನ್ನು ತಾರದಿರಿ, ಧೂಪವು ನನಗೆ ಅಸಹ್ಯ, ಹುಣ್ಣಿಮೆಗಳೂ ಸಬ್ಬತ್ತುಗಳೂ ಸಭೆಗಳು ಕೂಡುವದೂ ಇವು ಬೇಡ; ದುಷ್ಟತನದಿಂದ ಕೂಡಿದ ವಿಶೇಷ ಕೂಟವನ್ನು ಸಹ ನಾನು ಸಹಿಸಲಾರೆನು. ನಿಮ್ಮ ಹುಣ್ಣಿಮೆಗಳನ್ನೂ ನೇಮಕವಾದ ಹಬ್ಬಗಳನ್ನೂ ನನ್ನ ಆತ್ಮವು ಹಗೆಮಾಡುತ್ತದೆ. ಅವು ನನಗೆ ಭಾರ, ಸಹಿಸಲು ಬೇಸರ. ನೀವು ನಿಮ್ಮ ಕೈಗಳನ್ನು ಚಾಚಲು ನಾನು ನನ್ನ ಕಣ್ಣುಗಳನ್ನು ನಿಮಗೆ ಮರೆಮಾಡುವೆನು; ಹೌದು, ನೀವು ಬಹು ಪ್ರಾರ್ಥನೆಗಳನ್ನು ಮಾಡಿ ದರೂ ನಾನು ಕೇಳೆನು, ನಿಮ್ಮ ಕೈಗಳು ರಕ್ತದಿಂದ ತುಂಬಿಯವೆ. ನಿಮ್ಮನ್ನು ತೊಳೆದುಕೊಂಡು ಶುದ್ಧ ಮಾಡಿಕೊಳ್ಳಿರಿ; ನನ್ನ ಕಣ್ಣೆದುರಿನಿಂದ ನಿಮ್ಮ ದುಷ್ಟ ಕೃತ್ಯಗಳನ್ನು ತೆಗೆದುಹಾಕಿರಿ, ಕೆಟ್ಟದ್ದನ್ನು ನಿಲ್ಲಿಸಿಬಿಡಿರಿ;
- Jeremiah 7:11–12 ಯೆರೆಮೀಯ 7:11–12ನನ್ನ ಹೆಸರಿನಲ್ಲಿ ಕರೆಯಲ್ಪಟ್ಟ ಈ ಆಲಯವು ನಿಮ್ಮ ಕಣ್ಣುಗಳಲ್ಲಿ ಕಳ್ಳರ ಗವಿಯಾಯಿತೋ? ಇಗೋ, ನಾನೇ ಅದನ್ನು ನೋಡಿದ್ದೇನೆಂದು ಕರ್ತನು ಅನ್ನುತ್ತಾನೆ. ಆದರೆ ಈಗ ಶಿಲೋವಿನಲ್ಲಿದ್ದ ನನ್ನ ಸ್ಥಳಕ್ಕೆ ಅಂದರೆ ನಾನು ಮೊದಲು ನನ್ನ ಹೆಸರನ್ನು ಇಟ್ಟಲ್ಲಿಗೆ ಹೋಗಿರಿ; ಅದಕ್ಕೆ ನಾನು ನನ್ನ ಜನರಾದ ಇಸ್ರಾಯೇಲಿನ ಕೆಟ್ಟತನದ ನಿಮಿತ್ತ ಏನು ಮಾಡಿದೆನೆಂದು ನೋಡಿರಿ.
- Psalm 50:8–13 ಕೀರ್ತನೆಗಳು 50:8–13ನಿನ್ನ ಬಲಿಗಳಿಗೋಸ್ಕರ ಇಲ್ಲವೆ ನಿನ್ನ ದಹನಬಲಿಗೋಸ್ಕರ ನಾನು ನಿನ್ನನ್ನು ಗದರಿಸುವ ದಿಲ್ಲ; ಅವು ಯಾವಾಗಲೂ ನನ್ನ ಮುಂದೆ ಇವೆ. ನಿನ್ನ ಮನೆಯಿಂದ ಹೋರಿಯನ್ನೂ ಇಲ್ಲವೆ ನಿನ್ನ ದೊಡ್ಡಿಗಳಿಂದ ಹೋತಗಳನ್ನೂ ತೆಗೆದುಕೊಳ್ಳೆನು. ಅಡವಿಯ ಮೃಗಗಳೆಲ್ಲವೂ ಬೆಟ್ಟಗಳಲ್ಲಿರುವ ಸಾವಿರ ಪಶುಗಳೂ ನನ್ನವೇ. ಬೆಟ್ಟಗಳ ಪಕ್ಷಿಗಳನ್ನೆಲ್ಲಾ ನಾನು ಬಲ್ಲೆನು; ಕಾಡುಮೃಗಗಳು ನನ್ನವುಗಳಾಗಿವೆ. ನಾನು ಹಸಿದಿದ್ದರೆ ನಿನಗೆ ಹೇಳೆನು; ಭೂಲೋಕವೂ ಅದರ ಪರಿಪೂರ್ಣತೆಯೂ ನನ್ನವೇ. ಹೋರಿಗಳ ಮಾಂಸವನ್ನು ತಿನ್ನುವೆನೋ ಇಲ್ಲವೆ ಹೋತಗಳ ರಕ್ತವನ್ನು ಕುಡಿಯುವೆನೋ?
- Proverbs 28:9 ಜ್ಞಾನೋಕ್ತಿಗಳು 28:9ನ್ಯಾಯಪ್ರಮಾಣವನ್ನು ಕೇಳದೆ ತನ್ನ ಕಿವಿಯನ್ನು ತಿರುಗಿಸಿಕೊಳ್ಳುವವನ ಪ್ರಾರ್ಥನೆಯು ಅಸಹ್ಯ.
- 1 Samuel 13:12–13 1 ಸಮುವೇಲನು 13:12–13ನಾನು ಕಂಡಿದ್ದರಿಂದ ಫಿಲಿಷ್ಟಿಯರು ಗಿಲ್ಗಾಲಿನಲ್ಲಿ ರುವ ನನ್ನ ಬಳಿಗೆ ಬರುವರು ಎಂದೂ ನಾನು ಕರ್ತನ ದಯೆ ಬೇಡಿಕೊಳ್ಳಲಿಲ್ಲವೆಂದೂ ಹೇಳಿ ಮುಂದಾಗಿ ದಹನಬಲಿಯನ್ನು ಅರ್ಪಿಸಿದೆನು ಅಂದನು. ಸಮು ವೇಲನು ಸೌಲನಿಗೆ--ನೀನು ಬುದ್ಧಿಹೀನವಾದ ಕೆಲಸ ಮಾಡಿದ್ದೀ; ನಿನ್ನ ದೇವರಾದ ಕರ್ತನು ನಿನಗೆ ಆಜ್ಞಾಪಿಸಿದ ಆಜ್ಞೆಯನ್ನು ಕೈಕೊಳ್ಳಲಿಲ್ಲ. ಕರ್ತನು ಇಸ್ರಾಯೇಲ್ಯರಲ್ಲಿ ನಿನ್ನ ರಾಜ್ಯವನ್ನು ಎಂದೆಂದಿಗೂ ಸ್ಥಿರಪಡಿಸುವದಕ್ಕೆ ಇದ್ದನು.