Proverbs · chapter 15 · verse 8
Proverbs 15:8 in Kannada
ದುಷ್ಟರ ಯಜ್ಞವು ಕರ್ತನಿಗೆ ಅಸಹ್ಯ; ಯಥಾರ್ಥವಂತರ ಪ್ರಾರ್ಥನೆಯು ಆತನ ಆನಂದವು.
Dushtara yajnyavu kartanige asahya; yathaarthavantara praarthaneyu aatana aanandavu.
Proverbs 15:8 in English
- King James Version (KJV)
- The sacrifice of the wicked [is] an abomination to the LORD: but the prayer of the upright [is] his delight.
- World English Bible (WEB)
- The sacrifice made by the wicked is an abomination to the LORD, but the prayer of the upright is his delight.
- American Standard Version (ASV)
- The sacrifice of the wicked is an abomination to Jehovah; But the prayer of the upright is his delight.
- Bible in Basic English (BBE)
- The offering of the evil-doer is disgusting to the Lord, but the prayer of the upright man is his delight.
- Darby Translation (DBY)
- The sacrifice of the wicked is an abomination to Jehovah; but the prayer of the upright is his delight.
- Webster's Bible (WBS)
- The sacrifice of the wicked [is] an abomination to the LORD: but the prayer of the upright [is] his delight.
- Young's Literal Translation (YLT)
- The sacrifice of the wicked [is] an abomination to Jehovah, And the prayer of the upright [is] His delight.
Read in context
- 6ನೀತಿವಂತನ ಮನೆಯಲ್ಲಿ ಬಹಳ ಸಂಪತ್ತು; ದುಷ್ಟನ ಆದಾಯಗಳಲ್ಲಿ ತೊಂದರೆ ಇರುವದು.
- 7ಜ್ಞಾನಿಗಳ ತುಟಿಗಳು ತಿಳುವ ಳಿಕೆಯನ್ನು ಚೆಲ್ಲುತ್ತವೆ; ಬುದ್ಧಿಹೀನರ ಹೃದಯವು ಹಾಗೆ ಮಾಡುವದೇ ಇಲ್ಲ.
- 8ದುಷ್ಟರ ಯಜ್ಞವು ಕರ್ತನಿಗೆ ಅಸಹ್ಯ; ಯಥಾರ್ಥವಂತರ ಪ್ರಾರ್ಥನೆಯು ಆತನ ಆನಂದವು.
- 9ದುಷ್ಟರ ಮಾರ್ಗವು ಕರ್ತನಿಗೆ ಅಸಹ್ಯ; ನೀತಿಯನ್ನು ಹಿಂಬಾಲಿಸುವವನನ್ನು ಆತನು ಪ್ರೀತಿಸು ತ್ತಾನೆ.
- 10ಮಾರ್ಗವನ್ನು ತೊರೆದುಬಿಟ್ಟವನಿಗೆ ಶಿಕ್ಷೆಯು ಕಠಿಣವಾಗಿದೆ; ಗದರಿಕೆಯನ್ನು ಹಗೆಮಾಡುವವನು ಸಾಯುವನು.
Cross references
- Proverbs 15:29 ಜ್ಞಾನೋಕ್ತಿಗಳು 15:29ಕರ್ತನು ದುಷ್ಟರಿಗೆ ದೂರ; ನೀತಿವಂತರ ಪ್ರಾರ್ಥನೆಯನ್ನು ಆತನು ಕೇಳುತ್ತಾನೆ.
- 1 Chronicles 29:17 1 ಪೂರ್ವಕಾಲವೃತ್ತಾಂತ 29:17ನನ್ನ ಕರ್ತನೇ, ನೀನು ಹೃದಯವನ್ನು ಶೋಧಿಸಿ ಯಥಾರ್ಥವಾದವು ಗಳಲ್ಲಿ ಸಂತೋಷವಾಗಿದ್ದೀ ಎಂದು ನಾನು ಬಲ್ಲೆನು. ನಾನು ಯಥಾರ್ಥವಾದ ಹೃದಯದಿಂದ ಇವುಗಳನ್ನೆಲ್ಲಾ ಮನಃಪೂರ್ವಕವಾಗಿ ಅರ್ಪಿಸಿದ್ದೇನೆ. ಇದಲ್ಲದೆ ಇಲ್ಲಿ ರುವ ನಿನ್ನ ಜನರು ನಿನಗೆ ಮನಃಪೂರ್ವಕವಾಗಿ ಅರ್ಪಿ ಸುವದನ್ನು ಈಗ ಸಂತೋಷವಾಗಿ ಕಂಡೆನು.
- Proverbs 21:27 ಜ್ಞಾನೋಕ್ತಿಗಳು 21:27ದುಷ್ಟರ ಯಜ್ಞವು ಅಸಹ್ಯ; ಹೀಗಾದರೆ ದುರ್ಬುದ್ಧಿ ಯಿಂದ ಅದನ್ನು ಅರ್ಪಿಸಿದರೆ ಇನ್ನೂ ಎಷ್ಟೋ ಅಸಹ್ಯ ಕರವಾಗಿದೆ.
- Jeremiah 6:20 ಯೆರೆಮೀಯ 6:20ಶೇಬದಿಂದ ಸಾಂಬ್ರಾಣಿಯೂ ದೂರ ದೇಶದಿಂದ ಒಳ್ಳೇ ಸುಗಂಧವೂ ನನಗೆ ಬರುವದು ಯಾತಕ್ಕೆ? ನಿಮ್ಮ ದಹನಬಲಿಗಳು ಮೆಚ್ಚಿಕೆಯಾಗಲಿಲ್ಲ; ನಿಮ್ಮ ಬಲಿಗಳು ನನಗೆ ರುಚಿ ಇಲ್ಲ.
- Isaiah 1:10–15 ಯೆಶಾಯ 1:10–15ಸೊದೋಮಿನ ಅಧಿಪತಿಗಳೇ, ನೀವು ಕರ್ತನ ಮಾತನ್ನು ಕೇಳಿರಿ; ಗೊಮೋರದ ಪ್ರಜೆಗಳೇ, ನಮ್ಮ ದೇವರ ನ್ಯಾಯಪ್ರಮಾಣಕ್ಕೆ ಕಿವಿಗೊಡಿರಿ. ನೀವು ಲೆಕ್ಕವಿಲ್ಲದಷ್ಟು ಯಜ್ಞಗಳನ್ನು ನನಗೆ ಅರ್ಪಿಸುವ ಉದ್ದೇಶವೇನು? ಎಂದು ಕರ್ತನು ನುಡಿಯುತ್ತಾನೆ. ಟಗರುಗಳ ದಹನಬಲಿಗಳು, ಪುಷ್ಟಿ ಪ್ರಾಣಿಗಳ ಕೊಬ್ಬು, ಇದೆಲ್ಲಾ ನನಗೆ ಸಾಕಾಯಿತು; ಹೋರಿ, ಕುರಿ, ಹೋತಗಳ ರಕ್ತಕ್ಕೆ ನಾನು ಸಂತೋಷಪಡುವ ದಿಲ್ಲ. ನೀವು ನನ್ನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳ ಬೇಕೆಂದು ಬರುತ್ತೀರಲ್ಲಾ; ನನ್ನ ಪ್ರಾಕಾರಗಳನ್ನು ತುಳಿ ಯಲು ಯಾರು ನಿಮ್ಮನ್ನು ಕೇಳಿಕೊಂಡರು? ಇನ್ನು ವ್ಯರ್ಥವಾದ ಕಾಣಿಕೆಗಳನ್ನು ತಾರದಿರಿ, ಧೂಪವು ನನಗೆ ಅಸಹ್ಯ, ಹುಣ್ಣಿಮೆಗಳೂ ಸಬ್ಬತ್ತುಗಳೂ ಸಭೆಗಳು ಕೂಡುವದೂ ಇವು ಬೇಡ; ದುಷ್ಟತನದಿಂದ ಕೂಡಿದ ವಿಶೇಷ ಕೂಟವನ್ನು ಸಹ ನಾನು ಸಹಿಸಲಾರೆನು. ನಿಮ್ಮ ಹುಣ್ಣಿಮೆಗಳನ್ನೂ ನೇಮಕವಾದ ಹಬ್ಬಗಳನ್ನೂ ನನ್ನ ಆತ್ಮವು ಹಗೆಮಾಡುತ್ತದೆ. ಅವು ನನಗೆ ಭಾರ, ಸಹಿಸಲು ಬೇಸರ. ನೀವು ನಿಮ್ಮ ಕೈಗಳನ್ನು ಚಾಚಲು ನಾನು ನನ್ನ ಕಣ್ಣುಗಳನ್ನು ನಿಮಗೆ ಮರೆಮಾಡುವೆನು; ಹೌದು, ನೀವು ಬಹು ಪ್ರಾರ್ಥನೆಗಳನ್ನು ಮಾಡಿ ದರೂ ನಾನು ಕೇಳೆನು, ನಿಮ್ಮ ಕೈಗಳು ರಕ್ತದಿಂದ ತುಂಬಿಯವೆ.
- Proverbs 28:9 ಜ್ಞಾನೋಕ್ತಿಗಳು 28:9ನ್ಯಾಯಪ್ರಮಾಣವನ್ನು ಕೇಳದೆ ತನ್ನ ಕಿವಿಯನ್ನು ತಿರುಗಿಸಿಕೊಳ್ಳುವವನ ಪ್ರಾರ್ಥನೆಯು ಅಸಹ್ಯ.
- Isaiah 61:8 ಯೆಶಾಯ 61:8ಕರ್ತನಾದ ನಾನು ನ್ಯಾಯವನ್ನು ಪ್ರೀತಿಮಾಡು ತ್ತೇನೆ, ಸುಲಿಗೆಯಿಂದಾದ ದಹನಬಲಿಯನ್ನು ಹಗೆ ಮಾಡುತ್ತೇನೆ. ಅವರ ಕೆಲಸವನ್ನು ಸತ್ಯದಲ್ಲಿ ನಡಿಸು ತ್ತೇನೆ; ಅವರ ಸಂಗಡ ನಿತ್ಯವಾದ ಒಡಂಬಡಿಕೆಯನ್ನು ಮಾಡಿಕೊಳ್ಳುತ್ತೇನೆ.
- John 4:24 ಯೋಹಾನನು 4:24ದೇವರು ಆತ್ಮನಾಗಿದ್ದಾನೆ; ಆತನನ್ನು ಆರಾಧಿಸುವ ವರು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸತಕ್ಕದ್ದು ಅಂದನು.
- Ecclesiastes 5:1 ಪ್ರಸಂಗಿ 5:1ದೇವರ ಆಲಯಕ್ಕೆ ನೀನು ಹೋಗುವಾಗ ನಿನ್ನ ಹೆಜ್ಜೆಯನ್ನು ಗಮನಿಸು; ಬುದ್ಧಿಹೀನರು ಅರ್ಪಿಸುವ ಯಜ್ಞಕ್ಕಿಂತ, ಹೆಚ್ಚಾಗಿ ಕಿವಿಗೊಡುವದಕ್ಕೆ ಸಿದ್ಧನಾಗಿರು. ಅವರು ತಿಳಿಯದೆ ಕೆಟ್ಟದ್ದನ್ನೇ ಮಾಡು ತ್ತಾರೆ.
- Psalm 17:1 ಕೀರ್ತನೆಗಳು 17:1ಓ ಕರ್ತನೇ, ನ್ಯಾಯವನ್ನು ಕೇಳು; ನನ್ನ ಮೊರೆಯನ್ನು ಆಲೈಸು; ನನ್ನ ಪ್ರಾರ್ಥನೆಗೆ ಕಿವಿಗೊಡು; ಅದು ಮೋಸದ ತುಟಿಗಳಿಂದ ಬಂದ ದ್ದಲ್ಲ.
- Isaiah 66:3 ಯೆಶಾಯ 66:3ಎತ್ತನ್ನು ಕೊಂದುಹಾಕುವವನು ಮನುಷ್ಯನನ್ನು ಹತ್ಯೆ ಮಾಡು ವವನ ಹಾಗಿದ್ದಾನೆ; ಕುರಿಮರಿಯನ್ನು ಬಲಿಯಾಗಿ ಕೊಡುವವನು ನಾಯಿಯ ಕುತ್ತಿಗೆಯನ್ನು ಕಡಿಯು ವವನ ಹಾಗಿದ್ದಾನೆ; ಕಾಣಿಕೆಯನ್ನು ಅರ್ಪಿಸುವವನು ಹಂದಿಯ ರಕ್ತವನ್ನು ಅರ್ಪಿಸುವವನ ಹಾಗಿದ್ದಾನೆ. ಧೂಪವನ್ನು ಸುಡುವವನು ವಿಗ್ರಹವನ್ನು ಆಶೀರ್ವದಿ ಸುವವನ ಹಾಗಿದ್ದಾನೆ. ಹೌದು, ಅವರು ಸ್ವಂತ ಮಾರ್ಗಗಳನ್ನು ಆದುಕೊಂಡಿದ್ದಾರೆ; ಅವರ ಪ್ರಾಣವು ಅವರ ಅಸಹ್ಯವಾದವುಗಳಲ್ಲಿ ಹರ್ಷಿಸುತ್ತವೆ.
- Jeremiah 7:21–23 ಯೆರೆಮೀಯ 7:21–23ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನಿಮ್ಮ ದಹನಬಲಿಗಳನ್ನು ನಿಮ್ಮ ಬಲಿಗಳ ಸಂಗಡ ಕೂಡಿಸಿ ಮಾಂಸವನ್ನು ತಿನ್ನಿರಿ. ನಾನು ನಿಮ್ಮ ಪಿತೃಗಳನ್ನು ಐಗುಪ್ತ ದೇಶದೊಳಗಿಂದ ಹೊರಗೆ ಬರಮಾಡಿದ ದಿನದಲ್ಲಿ ದಹನ ಬಲಿಗಳ ಮತ್ತು ಬಲಿಗಳ ಕುರಿತು ಅವರ ಸಂಗಡ ಮಾತಾಡಲಿಲ್ಲ, ಇಲ್ಲವೆ ಅವರಿಗೆ ಆಜ್ಞಾಪಿಸಲಿಲ್ಲ. ಆದರೆ ನಾನು ಅವರಿಗೆ--ನನ್ನ ಶಬ್ದಕ್ಕೆ ವಿಧೇಯರಾಗಿರಿ. ಆಗ ನಾನು ನಿಮ್ಮ ದೇವರಾಗಿರುವೆನು, ನೀವು ನನ್ನ ಜನರಾಗಿರುವಿರಿ; ನಿಮಗೆ ಒಳ್ಳೇದಾಗುವ ಹಾಗೆ ನಾನು ನಿಮಗೆ ಆಜ್ಞಾ ಪಿಸಿದ ಎಲ್ಲಾ ಮಾರ್ಗಗಳಲ್ಲಿ ನಡೆಯಿರಿ ಎಂದು ಆಜ್ಞಾ ಪಿಸಿ ಹೇಳಿದೆನು.