Proverbs · chapter 23 · verse 34
Proverbs 23:34 in Kannada
ಹೌದು, ಸಮುದ್ರದ ಮಧ್ಯದಲ್ಲಿ ಮಲಗಿ ರುವವನಂತೆ ಇಲ್ಲವೆ ಹಡಗಿನ ಕಂಬದ ತುದಿಯಲ್ಲಿ ಇದ್ದವನಂತೆ ನೀನು ಇರುವಿ.ನೀನು--ಜನರು ನನ್ನನ್ನು ಹೊಡೆದರೂ ನಾನು ಅಸ್ವಸ್ಥನಾಗಲಿಲ್ಲ; ಅವರು ನನ್ನನ್ನು ಹೊಡೆದರೂ ನನಗೆ ನೋವಾಗಲಿಲ್ಲ; ಯಾವಾಗ ಎಚ್ಚತ್ತೇನು? ಪುನಃ ನಾನು ಅದನ್ನು ತಿರುಗಿ ಹುಡುಕೇನು ಎಂದು ಹೇಳುತ್ತೀ.
Haudu, samudrada madhyadalli malagi ruvavanante illave hadagina kambada tudiyalli iddavanante neenu iruvi.neenu--janaru nannannu hodedaroo naanu asvasthanaagalilla; avaru nannannu hodedaroo nanage novaagalilla; yaavaaga echchattenu? Punah naanu adannu tirugi hudukenu endu heluttee.
Proverbs 23:34 in English
- King James Version (KJV)
- Yea, thou shalt be as he that lieth down in the midst of the sea, or as he that lieth upon the top of a mast.
- World English Bible (WEB)
- Yes, you will be as he who lies down in the middle of the sea, or as he who lies on top of the rigging:
- American Standard Version (ASV)
- Yea, thou shalt be as he that lieth down in the midst of the sea, Or as he that lieth upon the top of a mast.
- Bible in Basic English (BBE)
- Yes, you will be like him who takes his rest on the sea, or on the top of a sail-support.
- Darby Translation (DBY)
- and thou shalt be as he that lieth down in the midst of the sea, and as he that lieth down upon the top of a mast:
- Webster's Bible (WBS)
- And thou shalt be as he that lieth down in the midst of the sea, or as he that lieth upon the top of a mast.
- Young's Literal Translation (YLT)
- And thou hast been as one lying down in the heart of the sea, And as one lying down on the top of a mast.
Read in context
- 32ಕೊನೆಗೆ ಅದು ಹಾವಿನಂತೆ ಮತ್ತು ವಿಷಸರ್ಪದಂತೆ ಕಚ್ಚುತ್ತದೆ.
- 33ನಿನ್ನ ಕಣ್ಣುಗಳು ಪರಸ್ತ್ರೀಯರನ್ನು ನೋಡಿ ದರೆ ನಿನ್ನ ಹೃದಯವು ವಕ್ರವಾದ ಭಾಷೆಯನ್ನು ಉಚ್ಚರಿ ಸುವದು.
- 34ಹೌದು, ಸಮುದ್ರದ ಮಧ್ಯದಲ್ಲಿ ಮಲಗಿ ರುವವನಂತೆ ಇಲ್ಲವೆ ಹಡಗಿನ ಕಂಬದ ತುದಿಯಲ್ಲಿ ಇದ್ದವನಂತೆ ನೀನು ಇರುವಿ.ನೀನು--ಜನರು ನನ್ನನ್ನು ಹೊಡೆದರೂ ನಾನು ಅಸ್ವಸ್ಥನಾಗಲಿಲ್ಲ; ಅವರು ನನ್ನನ್ನು ಹೊಡೆದರೂ ನನಗೆ ನೋವಾಗಲಿಲ್ಲ; ಯಾವಾಗ ಎಚ್ಚತ್ತೇನು? ಪುನಃ ನಾನು ಅದನ್ನು ತಿರುಗಿ ಹುಡುಕೇನು ಎಂದು ಹೇಳುತ್ತೀ.
- 35ನೀನು--ಜನರು ನನ್ನನ್ನು ಹೊಡೆದರೂ ನಾನು ಅಸ್ವಸ್ಥನಾಗಲಿಲ್ಲ; ಅವರು ನನ್ನನ್ನು ಹೊಡೆದರೂ ನನಗೆ ನೋವಾಗಲಿಲ್ಲ; ಯಾವಾಗ ಎಚ್ಚತ್ತೇನು? ಪುನಃ ನಾನು ಅದನ್ನು ತಿರುಗಿ ಹುಡುಕೇನು ಎಂದು ಹೇಳುತ್ತೀ.
Cross references
- 1 Thessalonians 5:2–7 1 ಥೆಸಲೊನೀಕದವರಿಗೆ 5:2–7ರಾತ್ರಿ ಕಾಲದಲ್ಲಿ ಕಳ್ಳನು ಹೇಗೆ ಬರುತ್ತಾನೋ ಹಾಗೆಯೇ ಕರ್ತನ ದಿನವು ಬರುವ ದೆಂದು ನೀವೇ ಚೆನ್ನಾಗಿ ತಿಳಿದಿದ್ದೀರಲ್ಲಾ. ಆದರೆ--ಸಮಾಧಾನವಾಗಿಯೂ ಸುರಕ್ಷಿತವಾಗಿಯೂ ಇರುತ್ತೇ ವೆಂದು ಜನರು ಹೇಳುತ್ತಿರುವಾಗಲೇ ಅವರ ಮೇಲೆ ನಾಶನವು ಗರ್ಭಿಣಿಗೆ ಪ್ರಸವವೇದನೆ ಬರುವ ಪ್ರಕಾರ ಬರುವದು; ಅವರು ಹೇಗೂ ತಪ್ಪಿಸಿಕೊಳ್ಳಲಾರರು. ಆದರೆ ಸಹೋದರರೇ, ಆ ದಿನವು ಕಳ್ಳನಂತೆ ನಿಮ್ಮ ಮೇಲೆ ಬರತಕ್ಕದ್ದಲ್ಲ; ನೀವು ಕತ್ತಲೆಯಲ್ಲಿರುವವರಲ್ಲ. ನೀವೆಲ್ಲರೂ ಬೆಳಕಿನ ಮಕ್ಕಳೂ ಹಗಲಿನ ಮಕ್ಕಳೂ ಆಗಿದ್ದೀರಷ್ಟೆ; ನಾವು ರಾತ್ರಿಯವರೂ ಅಲ್ಲ, ಕತ್ತಲೆ ಯವರೂ ಅಲ್ಲ. ಆದಕಾರಣ ನಾವು ಇತರರಂತೆ ನಿದ್ರೆಮಾಡದೆ ಎಚ್ಚರವಾಗಿರೋಣ, ಸ್ವಸ್ಥಚಿತ್ತರಾಗಿ ರೋಣ. ನಿದ್ರೆ ಮಾಡುವವರು ರಾತ್ರಿಯಲ್ಲಿ ನಿದ್ರೆ ಮಾಡುತ್ತಾರೆ. ಅಮಲೇರುವವರು ರಾತ್ರಿಯಲ್ಲಿ ಅಮ ಲೇರುತ್ತಾರೆ.
- Luke 21:34 ಲೂಕನು 21:34ಆದರೆ ನಿಮ್ಮ ಮೇಲೆ ಆ ದಿವಸವು ಫಕ್ಕನೆ ಬಾರದಂತೆ ನೀವು ಅತಿ ಭೋಜನದಿಂದಲೂ ಅಮಲಿನಿಂದಲೂ ಈ ಜೀವನದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗದಂತೆ ನಿಮ್ಮ ವಿಷಯದಲಿ ಜಾಗರೂಕರಾಗಿರ್ರಿ.
- 1 Samuel 30:16–17 1 ಸಮುವೇಲನು 30:16–17ಇವನು ದಾವೀದನನ್ನು ಕರಕೊಂಡು ಅಲ್ಲಿಗೆ ಹೋದಾಗ ಅವರು ಭೂಮಿಯ ಮೇಲೆ ಎಲ್ಲೆಲ್ಲಿಯೂ ಫಿಲಿಷ್ಟಿಯರ ದೇಶ ದಲ್ಲಿಯೂ ಯೆಹೂದ ದೇಶದಲ್ಲಿಯೂ ವ್ಯಾಪಿಸಿ ಕೊಂಡು ಎಲ್ಲಾ ಕೊಳ್ಳೆತಕ್ಕೊಂಡು ಬಂದದರಿಂದ ತಿಂದು ಕುಡಿದು ನಾಟ್ಯವಾಡಿಕೊಂಡಿದ್ದರು. ಆಗ ದಾವೀದನು ಅವರನ್ನು ಬೆಳಗಿನ ಜಾವದಿಂದ ಮಾರ ನೆಯ ದಿವಸದ ಸಾಯಂಕಾಲದವರೆಗೂ ಸಂಹರಿಸುತ್ತಾ ಇದ್ದನು. ಆದರೆ ಅವರಲ್ಲಿ ಒಂಟೆಗಳ ಮೇಲೆ ಏರಿ ಓಡಿಹೋದ ನಾನೂರು ಮಂದಿ ಯೌವನಸ್ಥರ ಹೊರತು ಒಬ್ಬನಾದರೂ ತಪ್ಪಿಸಿಕೊಂಡದ್ದಿಲ್ಲ.
- 1 Kings 16:9 1 ಅರಸುಗಳು 16:9ಆದರೆ ತಿರ್ಚದಲ್ಲಿ ತನ್ನ ಮನೆಯ ಉಗ್ರಾಣಿಕ ನಾದ ಅರ್ಚನ ಮನೆಯಲ್ಲಿ ಅವನು ಕುಡಿದು ಮತ್ತನಾಗಿ ತಿರ್ಚದಲ್ಲಿರುವಾಗ ಅರ್ಧ ರಥಗಳಿಗೆ ಅಧಿಪತಿಯಾಗಿ ರುವ ಅವನ ಸೇವಕನಾದ ಜಿಮ್ರಿ ಅವನಿಗೆ ವಿರೋಧ ವಾಗಿ ಒಳಸಂಚು ಮಾಡಿದನು.
- Matthew 24:38 ಮತ್ತಾಯನು 24:38ನೋಹನು ನಾವೆಯಲ್ಲಿ ಸೇರಿದ ದಿವಸದ ವರೆಗೆ ಪ್ರಳಯವು ಬರುವದಕ್ಕಿಂತ ಮುಂಚಿನ ಆ ದಿವಸಗಳಲ್ಲಿ ಜನರು ತಿನ್ನುತ್ತಾ ಕುಡಿಯುತ್ತಾ ಮದುವೆ ಮಾಡಿಕೊಳ್ಳುತ್ತಾ ಮದುವೆ ಮಾಡಿಕೊಡುತ್ತಾ ಇದ್ದರು.
- Luke 17:27–29 ಲೂಕನು 17:27–29ನೋಹನು ನಾವೆಯಲ್ಲಿ ಸೇರಿದ ದಿನದ ವರೆಗೂ ಅವರು ತಿನ್ನುತ್ತಾ ಕುಡಿಯುತ್ತಾ ಮದುವೆಮಾಡಿಕೊಳ್ಳುತ್ತಾ ಮತ್ತು ಮದುವೆಮಾಡಿ ಕೊಡುತ್ತಾ ಇದ್ದರು. ಆಗ ಜಲಪ್ರಳಯವು ಬಂದು ಅವರೆಲ್ಲರನ್ನು ನಾಶಮಾಡಿತ್ತು. ಅದೇ ಪ್ರಕಾರ ಲೋಟನ ದಿವಸಗಳಲ್ಲಿಯೂ ಇತ್ತು. ಅವರು ತಿನ್ನು ತ್ತಿದ್ದರು, ಕುಡಿಯುತ್ತಿದ್ದರು; ಅವರು ಕೊಂಡುಕೊಳ್ಳು ತ್ತಿದ್ದರು, ಮಾರುತ್ತಿದ್ದರು; ಅವರು ನೆಡುತ್ತಿದ್ದರು ಮತ್ತು ಕಟ್ಟುತ್ತಿದ್ದರು. ಆದರೆ ಲೋಟನು ಸೊದೋಮಿನಿಂದ ಹೊರಗೆ ಹೋದ ದಿನವೇ ಆಕಾಶದಿಂದ ಬೆಂಕಿಯೂ ಗಂಧಕವೂ ಸುರಿದು ಎಲ್ಲರನ್ನು ನಾಶಪಡಿಸಿದವು.
- 2 Samuel 13:28 2 ಸಮುವೇಲನು 13:28ಆದರೆ ಅಬ್ಷಾಲೋಮನು ತನ್ನ ಸೇವಕರಿಗೆ--ನೀವು ನೋಡಿಕೊಳ್ಳಿರಿ; ಅಮ್ನೋನನ ಹೃದಯವು ದ್ರಾಕ್ಷಾರಸ ದಿಂದ ಸಂಭ್ರಮವಾಗಿರುವಾಗ ನಾನು ನಿಮಗೆ ಅಮ್ನೋನ ನನ್ನು ಹೊಡೆಯಿರಿ ಎಂದು ಹೇಳುತ್ತಲೇ ಅವನನ್ನು ಕೊಂದುಹಾಕಿರಿ; ಭಯಪಡಬೇಡಿರಿ ನಾನು ನಿಮಗೆ ಆಜ್ಞಾಪಿಸಿದ್ದೇನಲ್ಲಾ. ಬಲವಾಗಿರಿ; ಪರಾಕ್ರಮಿಗಳಾ ಗಿರ್ರಿ; ಎಂದು ಆಜ್ಞಾಪಿಸಿ ಹೇಳಿದನು.
- 1 Samuel 25:33–38 1 ಸಮುವೇಲನು 25:33–38ನಿನ್ನ ಬುದ್ಧಿಮಾತು ಆಶೀರ್ವದಿಸಲ್ಪಡಲಿ. ನಾನು ರಕ್ತ ಚೆಲ್ಲುವದನ್ನೂ ನನ್ನ ಕೈಯಿಂದ ನಾನೇ ಮುಯ್ಯಿ ತೀರಿಸದಂತೆಯೂ ಈ ಹೊತ್ತು ನನ್ನನ್ನು ಆಟಂಕಪಡಿ ಸಿದ ನಿನಗೆ ಆಶೀರ್ವಾದವಾಗಲಿ. ನಿನಗೆ ಕೇಡು ಮಾಡದ ಹಾಗೆ ನನಗೆ ಆಟಂಕ ಮಾಡಿದ ಇಸ್ರಾ ಯೇಲಿನ ದೇವರಾದ ಕರ್ತನ ಜೀವದಾಣೆ, ನೀನು ಬೇಗನೆ ಬಂದು ನನ್ನನ್ನು ಎದುರುಗೊಳ್ಳದೆ ಹೋಗಿದ್ದರೆ ಉದಯವಾಗುವಷ್ಟರಲ್ಲಿ ನಾಬಾಲನಿಗೆ ಒಬ್ಬನಾದರೂ ಉಳಿಯುತ್ತಿರಲಿಲ್ಲ ಅಂದನು. ಅವಳು ತನಗೆ ತಂದ ದ್ದನ್ನು ದಾವೀದನು ಅವಳ ಕೈಯಿಂದ ತಕ್ಕೊಂಡು ಅವಳಿಗೆ--ನೀನು ಸಮಾಧಾನವಾಗಿ ನಿನ್ನ ಮನೆಗೆ ಹೋಗು; ಇಗೋ, ನಾನು ನಿನ್ನ ಮಾತನ್ನು ಕೇಳಿ ನಿನ್ನ ವಿಜ್ಞಾಪನೆಯನ್ನು ಅಂಗೀಕರಿಸಿದೆನು ಅಂದನು. ತರುವಾಯ ಅಬೀಗೈಲಳು ನಾಬಾಲನ ಬಳಿಗೆ ಬಂದಾಗ ಇಗೋ, ಅರಸನ ಔತಣಕ್ಕೆ ಸಮಾನವಾದ ಔತಣ ಅವನ ಮನೆಯಲ್ಲಿತ್ತು. ಅವನು ಬಹಳವಾಗಿ ಕುಡಿದದ್ದರಿಂದ ಅವನ ಹೃದಯವು ಅವನಲ್ಲಿ ಉಲ್ಲಾಸ ಗೊಂಡಿತ್ತು. ಆದಕಾರಣ ಅವಳು ಉದಯವಾಗುವ ವರೆಗೆ ಅವನಿಗೆ ಕಡಿಮೆಯಾದದ್ದನ್ನಾಗಲಿ ಹೆಚ್ಚಾದದ್ದ ನ್ನಾಗಲಿ ತಿಳಿಸಲಿಲ್ಲ. ಉದಯದಲ್ಲಿ ನಾಬಾಲನಿಗೆ ದ್ರಾಕ್ಷಾರಸದ ಅಮಲು ಇಳಿದಾಗ ಅವನ ಹೆಂಡತಿಯು ಈ ಮಾತುಗಳನ್ನು ಅವನಿಗೆ ತಿಳಿಸಲು ಏನಾಯಿತಂದರೆ, ಅವನ ಹೃದಯವು ಅವನಲ್ಲಿ ಸತ್ತು ಅವನು ಕಲ್ಲಿನ ಹಾಗಾದನು. ಹೆಚ್ಚು ಕಡಿಮೆ ಹತ್ತು ದಿವಸಗಳಾದ ತರುವಾಯ ಏನಾಯಿತಂದರೆ, ಕರ್ತನು ನಾಬಾಲನನ್ನು ಹೊಡೆದದ್ದರಿಂದ ಅವನು ಸತ್ತನು.
- Exodus 15:8 ವಿಮೋಚನಕಾಂಡ 15:8ನಿನ್ನ ಮೂಗಿನ ಬಿರುಸಾದ ಗಾಳಿ ಯಿಂದ ನೀರುಗಳು ಒಟ್ಟುಗೂಡಿದವು. ಪ್ರವಾಹಗಳು ರಾಶಿಯಂತೆ ನಿಂತವು; ಸಮುದ್ರದ ಅಗಾಧಗಳ ನೀರು ಗಟ್ಟಿಯಾದವು.
- Joel 1:5 ಯೋವೇಲ 1:5ಅಮಲೇರಿದವರೇ, ನೀವು ಎಚ್ಚತ್ತು ಅಳಿರಿ; ದ್ರಾಕ್ಷಾರಸ ಕುಡಿಯುವವರೆಲ್ಲರೇ, ಹೊಸ ದ್ರಾಕ್ಷಾ ರಸದ ನಿಮಿತ್ತ ಗೋಳಾಡಿರಿ; ಅದು ನಿಮ್ಮ ಬಾಯಿ ಯೊಳಗಿಂದ ತೆಗೆಯಲ್ಪಟ್ಟಿದೆ.
- 1 Kings 20:16–22 1 ಅರಸುಗಳು 20:16–22ಅವರು ಮಧ್ಯಾಹ್ನದಲ್ಲಿ ಹೊರಟರು; ಆದರೆ ಬೆನ್ಹದದನೂ ಅವನ ಸಹಾಯ ಕರಾದ ಮೂವತ್ತೆರಡು ಮಂದಿ ಅರಸುಗಳೂ ಕೂಡ ಡೇರೆಗಳಲ್ಲಿ ಅಮಲೇರುವ ಹಾಗೆ ಕುಡಿಯುತ್ತಾ ಇದ್ದರು. ಪ್ರಾಂತಗಳ ಪ್ರಧಾನರ ಸೇವಕರು ಮೊದಲು ಸೈನ್ಯವಾಗಿ ಹೊರಡುವಾಗ ಬೆನ್ಹದದನು ಮನುಷ್ಯರನ್ನು ಕಳುಹಿಸಿದನು. ಅವರು ತಿರಿಗಿ ಬಂದು --ಸಮಾರ್ಯದಿಂದ ಮನುಷ್ಯರು ಬಂದಿದ್ದಾರೆಂದು ಅವನಿಗೆ ತಿಳಿಸಿದರು. ಆಗ ಅವನು--ಅವರು ಸಮಾಧಾನಕ್ಕೋಸ್ಕರ ಹೊರಟು ಬಂದಿದ್ದರೆ ಅವರನ್ನು ಜೀವಿತರಾಗಿ ಹಿಡಿಯಿರಿ; ಯುದ್ಧಕ್ಕೋಸ್ಕರ ಹೊರಟು ಬಂದಿದ್ದರೆ ಅವರನ್ನು ಜೀವಿತರಾಗಿ ಹಿಡಿಯಿರಿ ಅಂದನು. ಪ್ರಾಂತಗಳ ಪ್ರಧಾನರ ಯೌವನಸ್ಥರೂ ಅವರ ಹಿಂದೆ ಬಂದ ಸೈನಿಕರೂ ಪಟ್ಟಣದಿಂದ ಹೊರಗೆ ಬಂದಾಗ ಪ್ರತಿ ಮನುಷ್ಯನು ತನಗೆ ಎದುರು ಬಿದ್ದವರನ್ನು ಕೊಂದುಹಾಕಿದನು. ಆಗ ಅರಾಮ್ಯರು ಓಡಿಹೋದರು; ಇಸ್ರಾಯೇಲ್ಯರು ಅವರನ್ನು ಹಿಂದಟ್ಟಿದರು; ಅರಾಮಿನ ಅರಸನಾದ ಬೆನ್ಹದದನು ಕುದುರೆ ಹತ್ತಿಕೊಂಡು ಕುದುರೆ ರಾಹುತರ ಸಂಗಡ ತಪ್ಪಿಸಿಕೊಂಡನು. ಇದಲ್ಲದೆ ಇಸ್ರಾಯೇಲಿನ ಅರಸನು ಹೊರಟು ಕುದುರೆಗಳನ್ನೂ ರಥಗಳನ್ನೂ ಹೊಡೆದು ರಾಮ್ಯರನ್ನು ಮಹಾ ಸಂಹಾರದಿಂದ ಹೊಡೆದುಬಿಟ್ಟನು. ಪ್ರವಾದಿಯು ಇಸ್ರಾಯೇಲಿನ ಅರಸನ ಬಳಿಗೆ ಬಂದು ಅವನಿಗೆ--ನೀನು ಹೋಗಿ ಬಲಗೊಂಡು ನೀನು ಮಾಡುವದನ್ನು ತಿಳುಕೊಂಡು ನೋಡು; ಯಾಕಂದರೆ ವರುಷಾಂತರದಲ್ಲಿ ಅರಾಮಿನ ಅರಸನು ನಿನಗೆ ವಿರೋಧವಾಗಿ ಬರುವನು ಅಂದನು.