Proverbs · chapter 24 · verse 17
Proverbs 24:17 in Kannada
ನಿನ್ನ ಶತ್ರು ಬಿದ್ದರೆ ಸಂತೋಷಿಸಬೇಡ; ಅವನು ಎಡವಿದರೆ ನಿನ್ನ ಹೃದಯವು ಹರ್ಷಿಸದಿರಲಿ;
Ninna shatru biddare santoshisabeda; avanu edavidare ninna hrudayavu harshisadirali;
Proverbs 24:17 in English
- King James Version (KJV)
- Rejoice not when thine enemy falleth, and let not thine heart be glad when he stumbleth:
- World English Bible (WEB)
- Don’t rejoice when your enemy falls. Don’t let your heart be glad when he is overthrown,
- American Standard Version (ASV)
- Rejoice not when thine enemy falleth, And let not thy heart be glad when he is overthrown;
- Bible in Basic English (BBE)
- Do not be glad at the fall of your hater, and let not your heart have joy at his downfall:
- Darby Translation (DBY)
- Rejoice not when thine enemy falleth, and let not thy heart be glad when he stumbleth;
- Webster's Bible (WBS)
- Rejoice not when thy enemy falleth, and let not thy heart be glad when he stumbleth:
- Young's Literal Translation (YLT)
- In the falling of thine enemy rejoice not, And in his stumbling let not thy heart be joyful,
Read in context
- 15ದುಷ್ಟನೇ, ನೀತಿವಂತನ ನಿವಾಸಕ್ಕೆ ಹೊಂಚುಹಾಕಬೇಡ; ಅವನ ವಿಶ್ರಾಂತಿಯ ಸ್ಥಳವನ್ನು ಸೂರೆಮಾಡಬೇಡ;
- 16ನೀತಿ ವಂತನು ಏಳು ಸಾರಿ ಬಿದ್ದರೂ ಮತ್ತೆ ಏಳುತ್ತಾನೆ; ಆದರೆ ದುಷ್ಟನು ಕೇಡಿಗೆ ಬೀಳುವನು.
- 17ನಿನ್ನ ಶತ್ರು ಬಿದ್ದರೆ ಸಂತೋಷಿಸಬೇಡ; ಅವನು ಎಡವಿದರೆ ನಿನ್ನ ಹೃದಯವು ಹರ್ಷಿಸದಿರಲಿ;
- 18ಕರ್ತನು ಅದನ್ನು ನೋಡಿದಾಗ ಅದು ಆತನಿಗೆ ಇಷ್ಟವಿಲ್ಲದ್ದರಿಂದ ಆತನು ಅವನ ಕಡೆಯಿಂದ ತನ್ನ ಕೋಪವನ್ನು ತಿರುಗಿಸಾನು.
- 19ಕೆಟ್ಟವರ ಮೇಲೆ ಉರಿಗೊಳ್ಳಬೇಡ; ಇಲ್ಲವೆ ದುಷ್ಟ ರಿಗಾಗಿ ಅಸೂಯೆಪಡಬೇಡ;
Cross references
- Obadiah 1:12 ಓಬದ್ಯ 1:12ಆದರೆ ನಿನ್ನ ಸಹೋದರನ ದಿನದಲ್ಲಿ ಅವನು ಅನ್ಯನಾದ ದಿನದಲ್ಲಿ ನೀನು ನೋಡಬಾರ ದಾಗಿತ್ತು; ಯೆಹೂದನ ಮಕ್ಕಳ ಮೇಲೆ ಅವರ ನಾಶನದ ದಿವಸದಲ್ಲಿ ಸಂತೋಷಿಸಬಾರದಾಗಿತ್ತು; ಕಷ್ಟದ ದಿನದಲ್ಲಿ ಅಹಂಕಾರವಾಗಿ ಮಾತನಾಡಬಾರದಾಗಿತ್ತು;
- Job 31:29 ಯೋಬನು 31:29ನನ್ನನ್ನು ಹಗೆಮಾಡುವವನ ನಾಶಕ್ಕೆ ನಾನು ಸಂತೋಷಪಟ್ಟು, ಅವನನ್ನು ಕೇಡು ಕಂಡು ಹಿಡಿಯಿ ತೆಂದು ಗರ್ವಪಟ್ಟರೆ,
- 1 Corinthians 13:6–7 1 ಕೊರಿಂಥದವರಿಗೆ 13:6–7ಅನ್ಯಾಯದಲ್ಲಿ ಸಂತೋಷಪಡದೆ ಸತ್ಯದಲ್ಲಿಯೇ ಸಂತೋಷಪಡುತ್ತದೆ. ಎಲ್ಲವನ್ನೂ ಸಹಿಸಿಕೊಳ್ಳುತ್ತದೆ, ಎಲ್ಲವನ್ನೂ ನಂಬುತ್ತದೆ, ಎಲ್ಲವನ್ನೂ ನಿರೀಕ್ಷಿಸುತ್ತದೆ, ಎಲ್ಲವನ್ನೂ ತಾಳಿಕೊಳ್ಳುತ್ತದೆ.
- Proverbs 17:5 ಜ್ಞಾನೋಕ್ತಿಗಳು 17:5ಬಡವರನ್ನು ಹಾಸ್ಯಮಾಡುವವನು ತನ್ನ ಸೃಷ್ಟಿ ಕರ್ತ ನನ್ನೇ ನಿಂದಿಸುತ್ತಾನೆ; ವಿಪತ್ತುಗಳಿಗೆ ಸಂತೋಷಿಸು ವವನು ಶಿಕ್ಷೆಯನ್ನು ಹೊಂದಲೇಬೇಕು.
- 2 Samuel 16:5–14 2 ಸಮುವೇಲನು 16:5–14ಅರಸನಾದ ದಾವೀದನು ಬಹುರೀಮಿನ ವರೆಗೂ ಬಂದಾಗ ಇಗೋ, ಸೌಲನ ಗೋತ್ರದವನಾದಂಥ ಗೇರನ ಮಗನಾದ ಶಿಮ್ಮಿಯೆಂಬ ಹೆಸರುಳ್ಳ ಒಬ್ಬ ಮನುಷ್ಯನು ಅಲ್ಲಿಂದ ಹೊರಟು ದೂಷಿಸುತ್ತಾ ನಡೆದು ಬಂದನು. ಎಲ್ಲಾ ಜನರೂ ಎಲ್ಲಾ ಪರಾಕ್ರಮಶಾಲಿ ಗಳೂ ದಾವೀದನ ಬಲ ಮತ್ತು ಎಡ ಪಾರ್ಶ್ವಗಳಲ್ಲಿ ರುವಾಗ ಅವನು ಅರಸನಾದ ದಾವೀದನ ಮೇಲೆಯೂ ಅವನ ಎಲ್ಲಾ ಊಳಿಗದವರ ಮೇಲೆಯೂ ಕಲ್ಲುಗಳನ್ನು ಎಸೆದನು. ಶಿಮ್ಮಿ ಅವನನ್ನು ದೂಷಿಸುತ್ತಾ--ರಕ್ತದ ಮನುಷ್ಯನೇ, ಬೆಲಿಯಾಳನ ಮನುಷ್ಯನೇ, ಹೊರಟು ಬಾ, ಹೊರಟು ಬಾ. ಕರ್ತನು ಸೌಲನ ಮನೆಯವರ ರಕ್ತವನ್ನು ಸೌಲನಿಗೆ ಪ್ರತಿಯಾಗಿ ಅರಸನಾದ ನಿನ್ನ ಮೇಲೆ ತಿರಿಗಿ ಬರಮಾಡಿ ರಾಜ್ಯವನ್ನು ನಿನ್ನ ಮಗನಾದ ಅಬ್ಷಾಲೋಮನ ಕೈಯಲ್ಲಿ ಒಪ್ಪಿಸಿಕೊಟ್ಟನು; ನೀನು ರಕ್ತದ ಮನುಷ್ಯನಾದದರಿಂದ ಇಗೋ, ನಿನ್ನ ಕೇಡಿನಲ್ಲಿ ಸಿಕ್ಕಿಕೊಂಡಿ ಅಂದನು. ಆಗ ಚೆರೂಯಳ ಮಗನಾದ ಅಬೀಷೈಯು ಅರಸನಿಗೆ--ಈ ಸತ್ತ ನಾಯಿ, ಅರಸನಾದ ನನ್ನ ಒಡೆಯನನ್ನು ದೂಷಿಸುವದೇನು? ನಾನೇ ದಾಟಿಹೋಗಿ ಅವನ ತಲೆಯನ್ನು ತೆಗೆದುಕೊಳ್ಳಲು ಅಪ್ಪಣೆಯಾಗಲಿ ಅಂದನು. ಆದರೆ ಅರಸನು--ಚೆರೂಯಳ ಮಕ್ಕಳೇ, ನನಗೂ ನಿಮಗೂ ಏನು? ಅವನು ನನ್ನನ್ನು ದೂಷಿಸಲಿ; ಯಾಕಂದರೆ--ದಾವೀದ ನನ್ನು ದೂಷಿಸು ಎಂದು ಕರ್ತನು ಅವನಿಗೆ ಹೇಳಿದ್ದಾನೆ; ಹಾಗಾದರೆ ಯಾಕೆ ಹೀಗೆ ಮಾಡುತ್ತೀ ಎಂದು ಹೇಳುವ ವನಾರು ಅಂದನು. ದಾವೀದನು ಅಬೀಷೈಗೂ ತನ್ನ ಎಲ್ಲಾ ಸೇವಕರಿಗೂ--ಇಗೋ, ನನ್ನ ಹೊಟ್ಟೆಯಲ್ಲಿ ಹುಟ್ಟಿದ ನನ್ನ ಮಗನು ನನ್ನ ಪ್ರಾಣವನ್ನು ಹುಡುಕಿದರೆ ಎಷ್ಟೋ ಅಧಿಕವಾಗಿ ಈ ಬೆನ್ಯಾವಿಾನ್ಯನಾದವನು ಹೀಗೆ ಮಾಡುವದು ಯಾವ ದೊಡ್ಡಮಾತು? ಅವ ನನ್ನು ಬಿಟ್ಟುಬಿಡಿರಿ; ಅವನು ದೂಷಿಸಲಿ; ಯಾಕಂದರೆ ಕರ್ತನು ಅವನಿಗೆ ಹಾಗೆಯೇ ಹೇಳಿದ್ದಾನೆ. ಒಂದು ವೇಳೆ ಕರ್ತನು ನನ್ನ ಶ್ರಮೆಯನ್ನು ನೋಡಿ ಈ ದಿನ ದಲ್ಲಿ ಅವನು ಮಾಡಿದ ದೂಷಣೆಗೆ ಪ್ರತಿಯಾಗಿ ನನಗೆ ಒಳ್ಳೆಯದನ್ನು ಮಾಡಬಹುದು ಅಂದನು. ದಾವೀದನೂ ಅವನ ಸೇವಕರೂ ದಾರಿ ಹಿಡಿದು ಹೋಗುವಾಗ ಶಿಮ್ಮಿ ಬೆಟ್ಟದ ಪಾರ್ಶ್ವವಾಗಿ ಬಂದು ಅವನಿಗೆದುರಾಗಿ ನಡೆದು ದೂಷಿಸಿ ಅವನ ಕಡೆಗೆ ಮಣ್ಣನ್ನು ತೂರಿ ಕಲ್ಲುಗಳನ್ನು ಎಸೆದನು. ಅರಸನೂ ಅವನ ಸಂಗಡಲಿರುವ ಎಲ್ಲಾ ಜನರೂ ನಡೆದು ದಣಿದದ್ದರಿಂದ ಅಲ್ಲಿ ವಿಶ್ರಮಿಸಿಕೊಂಡರು.
- Psalm 42:10 ಕೀರ್ತನೆಗಳು 42:10ನನ್ನ ವೈರಿಗಳು--ನಿನ್ನ ದೇವರು ಎಲ್ಲಿ ಎಂದು ದಿನವೆಲ್ಲಾ ನನಗೆ ಹೇಳಿ ನನ್ನನ್ನು ನಿಂದಿಸಿದ್ದರಿಂದ ನನ್ನ ಎಲುಬುಗಳು ಮುರಿದಹಾಗಿವೆ.ನನ್ನ ಪ್ರಾಣವೇ, ಕುಗ್ಗಿಹೋಗಿರುವದೇನು? ಯಾಕೆ ನನ್ನಲ್ಲಿ ವ್ಯಾಕುಲಪಡುತ್ತೀ? ದೇವರನ್ನು ನಿರೀಕ್ಷಿಸು. ನನ್ನ ಮುಖದ ಲಕ್ಷಣವೂ ನನ್ನ ದೇವರೂ ಆಗಿರುವಾತನನ್ನು ನಾನು ಇನ್ನೂ ಕೊಂಡಾಡುವೆನು.
- Psalm 35:19 ಕೀರ್ತನೆಗಳು 35:19ನನ್ನ ಶತ್ರುಗಳು ನನ್ನ ವಿಷ ಯದಲ್ಲಿ ಸುಳ್ಳಾಗಿ ಸಂತೋಷಪಡದೆ ಇರಲಿ; ಇಲ್ಲವೆ ನನ್ನನ್ನು ಕಾರಣವಿಲ್ಲದೆ ಹಗೆಮಾಡುವವರು ಕಣ್ಣು ಸನ್ನೆಮಾಡದೆ ಇರಲಿ.
- Psalm 35:15 ಕೀರ್ತನೆಗಳು 35:15ನನ್ನ ಆಪತ್ತಿನಲ್ಲಿ ಅವರು ಸಂತೋಷಪಟ್ಟು ಕೂಡಿಕೊಂಡರು; ಹೌದು, ನಾನರಿ ಯದ ದೂಷಕರು ನನಗೆ ವಿರೋಧವಾಗಿ ಕೂಡಿ ಕೊಂಡರು; ಸುಮ್ಮನಿರದೆ ನನ್ನನ್ನು ಸುಲುಕೊಂಡರು.
- Judges 16:25 ನ್ಯಾಯಸ್ಥಾಪಕರು 16:25ತರುವಾಯ ಅವರ ಹೃದಯಗಳು ಸಂಭ್ರಮವಾಗಿ ರುವಾಗ--ನಮ್ಮ ಮುಂದೆ ವಿನೋದ ಮಾಡುವ ಹಾಗೆ ಸಂಸೋನನನ್ನು ಕರಕೊಂಡು ಬನ್ನಿರಿ ಅಂದರು. ಅವರು ಸಂಸೋನನನ್ನು ಸೆರೆಮನೆಯಿಂದ ಕರತಂದಾಗ ಅವನು ಅವರ ಮುಂದೆ ವಿನೋದ ಮಾಡಿದನು; ಅವರು ಅವನನ್ನು ಸ್ತಂಭಗಳ ನಡುವೆ ನಿಲ್ಲಿಸಿದ್ದರು.