Psalms · chapter 35 · verse 15
Psalm 35:15 in Kannada
ನನ್ನ ಆಪತ್ತಿನಲ್ಲಿ ಅವರು ಸಂತೋಷಪಟ್ಟು ಕೂಡಿಕೊಂಡರು; ಹೌದು, ನಾನರಿ ಯದ ದೂಷಕರು ನನಗೆ ವಿರೋಧವಾಗಿ ಕೂಡಿ ಕೊಂಡರು; ಸುಮ್ಮನಿರದೆ ನನ್ನನ್ನು ಸುಲುಕೊಂಡರು.
Nanna aapattinalli avaru santoshapattu koodikondaru; haudu, naanari yada dooshakaru nanage virodhavaagi koodi kondaru; summanirade nannannu sulukondaru.
Psalm 35:15 in English
- King James Version (KJV)
- But in mine adversity they rejoiced, and gathered themselves together: [yea], the abjects gathered themselves together against me, and I knew [it] not; they did tear [me], and ceased not:
- World English Bible (WEB)
- But in my adversity, they rejoiced, and gathered themselves together. The attackers gathered themselves together against me, and I didn’t know it. They tore at me, and didn’t cease.
- American Standard Version (ASV)
- But in mine adversity they rejoiced, and gathered themselves together: The abjects gathered themselves together against me, and I knew [it] not; They did tear me, and ceased not:
- Bible in Basic English (BBE)
- But they took pleasure in my trouble, and came together, yes, low persons came together against me without my knowledge; they never came to an end of wounding me.
- Darby Translation (DBY)
- But at my halting they rejoiced, and gathered together: the slanderers gathered themselves together against me, and I knew [it] not; they did tear [me], and ceased not:
- Webster's Bible (WBS)
- But in my adversity they rejoiced, and assembled themselves: [yes] , the abjects assembled themselves against me, and I knew [it] not; they did tear [me] , and ceased not:
- Young's Literal Translation (YLT)
- And — in my halting they have rejoiced, And have been gathered together, Gathered against me were the smiters, And I have not known, They have rent, and they have not ceased;
Read in context
- 13ನಾನಾ ದರೋ ಅವರು ಅಸ್ವಸ್ಥವಾದಾಗ, ಗೋಣೀ ತಟ್ಟು ಹೊದ್ದುಕೊಂಡು ನನ್ನ ಪ್ರಾಣವನ್ನು ಉಪವಾಸದಿಂದ ಕುಂದಿಸಿದೆನು; ನನ್ನ ಪ್ರಾರ್ಥನೆಯು ನನ್ನ ಎದೆಗೆ ತಿರುಗಿತು.
- 14ಅವನು ನನಗೆ ಸ್ನೇಹಿತನೂ ಇಲ್ಲವೆ ಸಹೋದರನೂ ಆದ ಹಾಗೆ ನಡೆದುಕೊಂಡೆನು; ತಾಯಿಗಾಗಿ ದುಃಖಪಡುವವನ ಹಾಗೆ ಭಾರವುಳ್ಳವ ನಾಗಿ ಬೊಗ್ಗಿಕೊಂಡೆನು.
- 15ನನ್ನ ಆಪತ್ತಿನಲ್ಲಿ ಅವರು ಸಂತೋಷಪಟ್ಟು ಕೂಡಿಕೊಂಡರು; ಹೌದು, ನಾನರಿ ಯದ ದೂಷಕರು ನನಗೆ ವಿರೋಧವಾಗಿ ಕೂಡಿ ಕೊಂಡರು; ಸುಮ್ಮನಿರದೆ ನನ್ನನ್ನು ಸುಲುಕೊಂಡರು.
- 16ಔತಣಗಳಲ್ಲಿ ಗೇಲಿಮಾಡುವ ಕಪಟಿಗಳ ಸಂಗಡ ನನ್ನ ಮೇಲೆ ತಮ್ಮ ಹಲ್ಲುಗಳನ್ನು ಕಡಿಯುತ್ತಾರೆ.
- 17ಕರ್ತನೇ, ಎಷ್ಟರ ವರೆಗೆ ನೀನು ನೋಡುವಿ? ಅವರ ನಾಶನಗಳಿಂದಲೂ ಸಿಂಹಗಳಿಂದಲೂ ನನ್ನ ಪ್ರಿಯವಾದ ಪ್ರಾಣವನ್ನು ತಪ್ಪಿಸು.
Cross references
- Jeremiah 20:10 ಯೆರೆಮೀಯ 20:10ಅನೇಕರ ಚಾಡಿಯನ್ನು ಕೇಳಿದೆನು; ಸುತ್ತಲೂ ಭಯವದೆ--ತಿಳಿಸಿರಿ, ಆಗ ಅದನ್ನು ನಾವು ತಿಳಿಸುತ್ತೇವೆ ಎಂದು ಅನ್ನುತ್ತಾರೆ; ನನ್ನ ಆಪ್ತರೆಲ್ಲರೂ ನಾನು ಕುಂಟುವದನ್ನು ನೋಡಿಕೊಳ್ಳುತ್ತಾ--ಒಂದು ವೇಳೆ ಅವನು ಮೋಸ ಗೊಂಡಾನು; ಆಗ ನಾವು ಅವನನ್ನು ಗೆದ್ದು ಅವನಲ್ಲಿ ಮುಯ್ಯಿ ತೀರಿಸಿಕೊಳ್ಳುವೆವು ಅನ್ನುತ್ತಾರೆ.
- Mark 14:65 ಮಾರ್ಕನು 14:65ತರು ವಾಯ ಕೆಲವರು ಆತನ ಮೇಲೆ ಉಗುಳಿ ಆತನ ಮುಖವನ್ನು ಮುಚ್ಚಿ ಆತನನ್ನು ಗುದ್ದುವದಕ್ಕೆ ಆರಂಭಿಸಿ ಆತನಿಗೆ--ಪ್ರವಾದನೆ ಹೇಳು ಅಂದರು. ಆಳು ಗಳು ಆತನನ್ನು ಹೊಡೆದರು.
- Psalm 71:10–11 ಕೀರ್ತನೆಗಳು 71:10–11ನನ್ನ ಶತ್ರುಗಳು ನನಗೆ ವಿರೋಧವಾಗಿ ಮಾತನಾಡುತ್ತಾರೆ; ನನ್ನ ಪ್ರಾಣಕ್ಕೆ ಹೊಂಚು ಹಾಕುವ ವರು ಕೂಡಿಕೊಂಡು ಆಲೋಚನೆ ಮಾಡುತ್ತಾ-- ದೇವರು ಅವನನ್ನು ಕೈ ಬಿಟ್ಟಿದ್ದಾನೆ; ಅವನನ್ನು ಹಿಂಸಿಸಿ, ಹಿಡಿದುಕೊಳ್ಳಿರಿ; ಅವನನ್ನು ಬಿಡಿಸುವವನು ಯಾರೂ ಇಲ್ಲ ಎಂದು ಅವರು ಅನ್ನುತ್ತಾರೆ.
- Matthew 27:27–30 ಮತ್ತಾಯನು 27:27–30ತರುವಾಯ ಅಧಿಪತಿಯ ಸೈನಿಕರು ಯೇಸುವನ್ನು ಸಾಮಾನ್ಯವಾದ ಕೋಣೆಯೊಳಕ್ಕೆ ತೆಗೆದುಕೊಂಡು ಹೋಗಿ ಸೈನಿಕರ ಪೂರ್ಣ ತಂಡವನ್ನು ಆತನ ಮುಂದೆ ಕೂಡಿಸಿದರು. ಮತ್ತು ಅವರು ಆತನ ಬಟ್ಟೆಗಳನ್ನು ತೆಗೆದು ರಕ್ತವರ್ಣದ ನಿಲುವಂಗಿಯನ್ನು ಆತನಿಗೆ ತೊಡಿಸಿದರು. ತರುವಾಯ ಅವರು ಒಂದು ಮುಳ್ಳಿನ ಕಿರೀಟವನ್ನು ಹೆಣೆದು ಅದನ್ನು ಆತನ ತಲೆಯ ಮೇಲಿಟ್ಟು ಬಲಗೈಯಲ್ಲಿ ಒಂದು ಬೆತ್ತವನ್ನು ಕೊಟ್ಟು ಆತನ ಮುಂದೆ ಮೊಣಕಾಲೂರಿ--ಯೆಹೂದ್ಯರ ಅರಸನೇ, ವಂದನೆ ಎಂದು ಹೇಳಿ ಆತನನ್ನು ಹಾಸ್ಯಮಾಡಿದರು. ಅವರು ಆತನ ಮೇಲೆ ಉಗುಳಿ ಆ ಬೆತ್ತವನ್ನು ತಕ್ಕೊಂಡು ಆತನ ತಲೆಯ ಮೇಲೆ ಹೊಡೆದರು.
- Psalm 7:2 ಕೀರ್ತನೆಗಳು 7:2ಇಲ್ಲವಾದರೆ ಅವನು ನನ್ನ ಪ್ರಾಣವನ್ನು ಸಿಂಹದಂತೆ ಹರಿದು ತುಂಡು ತುಂಡು ಮಾಡುವನು.
- Matthew 27:39–44 ಮತ್ತಾಯನು 27:39–44ಅಲ್ಲಿ ಹೋಗುತ್ತಿದ್ದವರು ಆತನನ್ನು ದೂಷಿಸಿ ತಮ್ಮ ತಲೆಗಳನ್ನು ಅಲ್ಲಾಡಿಸುತ್ತಾ-- ದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಕಟ್ಟುವವನೇ, ನಿನ್ನನ್ನು ನೀನೇ ರಕ್ಷಿಸಿಕೋ; ಮತ್ತು ನೀನು ದೇವಕುಮಾರನಾಗಿದ್ದರೆ ಶಿಲುಬೆಯಿಂದ ಕೆಳಗೆ ಇಳಿದು ಬಾ ಅಂದರು. ಅದೇ ಮೇರೆಗೆ ಪ್ರಧಾನ ಯಾಜಕರೂ ಶಾಸ್ತ್ರಿಗಳೂ ಹಿರಿಯರೂ ಆತನಿಗೆ ಹಾಸ್ಯ ಮಾಡಿ-- ಇವನು ಬೇರೆಯವರನ್ನು ರಕ್ಷಿಸಿದನು, ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರನು.ಇವನು ಇಸ್ರಾಯೇಲಿನ ಅರಸನಾಗಿದ್ದರೆ ಈಗಲೇ ಶಿಲುಬೆಯಿಂದ ಕೆಳಗಿಳಿದು ಬರಲಿ; ಆಗ ನಾವು ಅವನನ್ನು ನಂಬುವೆವು; ಇವನು ದೇವರಲ್ಲಿ ವಿಶ್ವಾಸವಿಟ್ಟವನು; ದೇವರಿಗೆ ಇಷ್ಟವಿದ್ದರೆ ಆತನು ಇವನನ್ನು ಈಗ ಬಿಡಿಸಲಿ; ಯಾಕಂದರೆ ಆತನು--ನಾನು ದೇವಕುಮಾರನು ಎಂದು ಹೇಳಿದ್ದಾನೆ ಅಂದರು. ಆತನ ಜೊತೆಗೆ ಶಿಲುಬೆಗೆ ಹಾಕಲ್ಪಟ್ಟಿದ್ದ ಕಳ್ಳರು ಸಹ ಅದೇ ರೀತಿಯಾಗಿ ಆತನನ್ನು ನಿಂದಿಸಿದರು.
- Psalm 38:17 ಕೀರ್ತನೆಗಳು 38:17ನಾನು ಕೆಡಲ್ಪಡುವ ಸ್ಥಿತಿಯಲ್ಲಿದ್ದೇನೆ; ನನ್ನ ವ್ಯಸನವು ಯಾವಾಗಲೂ ನನ್ನ ಮುಂದೆ ಅದೆ.
- Job 16:9 ಯೋಬನು 16:9ಆತನು ತನ್ನ ಕೋಪದಲ್ಲಿ ನನ್ನನ್ನು ಹರಿದುಬಿಡುತ್ತಾನೆ; ನನ್ನನ್ನು ಹಗೆಮಾಡುತ್ತಾನೆ. ತನ್ನ ಹಲ್ಲುಗಳನ್ನು ನನ್ನ ಮೇಲೆ ಕಡಿಯುತ್ತಾನೆ; ನನ್ನ ವೈರಿಯು ತನ್ನ ಕಣ್ಣುಗಳನ್ನು ನನ್ನ ಮೇಲೆ ಮಸೆಯುತ್ತಾನೆ.
- Psalm 69:12 ಕೀರ್ತನೆಗಳು 69:12ಬಾಗಲಲ್ಲಿ ಕೂತು ಕೊಳ್ಳುವವರು ನನಗೆ ವಿರೋಧವಾಗಿ ಮಾತನಾಡು ತ್ತಾರೆ; ನಾನು ಮದ್ಯಪಾನಿಗಳಿಗೆ ಸಂಗೀತವಾದೆನು.
- 1 Corinthians 13:6 1 ಕೊರಿಂಥದವರಿಗೆ 13:6ಅನ್ಯಾಯದಲ್ಲಿ ಸಂತೋಷಪಡದೆ ಸತ್ಯದಲ್ಲಿಯೇ ಸಂತೋಷಪಡುತ್ತದೆ.
- Psalm 41:8 ಕೀರ್ತನೆಗಳು 41:8ಕೆಟ್ಟ ರೋಗವು ಅವನನ್ನು ಹಿಡಿದದೆ, ಈಗ ಅವನು ಮಲಗಿಕೊಂಡವನಾಗಿ ಎಂದಿಗೂ ಏಳನು ಎಂದು ಅವರು ಅನ್ನುತ್ತಾರೆ.
- Psalm 22:16 ಕೀರ್ತನೆಗಳು 22:16ನಾಯಿ ಗಳು ನನ್ನನ್ನು ಸುತ್ತಿಕೊಂಡಿವೆ; ದುರ್ಮಾರ್ಗಿಗಳ ಸಭೆಯು ನನ್ನನ್ನು ಮುತ್ತಿಕೊಂಡಿದೆ; ಅವರು ನನ್ನ ಕೈಗಳನ್ನೂ ಕಾಲುಗಳನ್ನೂ ತಿವಿದಿದ್ದಾರೆ.