Proverbs · chapter 24 · verse 22
Proverbs 24:22 in Kannada
ಅವರ ವಿಪತ್ತು ಫಕ್ಕನೆ ಸಂಭವಿಸುವದು; ಅವರಿಬ್ಬರ ನಾಶನವು ಯಾರಿಗೆ ತಿಳಿದೀತು?
Avara vipattu phakkane sambhavisuvadu; avaribbara naashanavu yaarige tilideetu?
Proverbs 24:22 in English
- King James Version (KJV)
- For their calamity shall rise suddenly; and who knoweth the ruin of them both?
- World English Bible (WEB)
- for their calamity will rise suddenly. Who knows what destruction may come from them both?
- American Standard Version (ASV)
- For their calamity shall rise suddenly; And the destruction from them both, who knoweth it?
- Bible in Basic English (BBE)
- For their downfall will come suddenly; and who has knowledge of the destruction of those in high positions?
- Darby Translation (DBY)
- For their calamity shall rise suddenly; and who knoweth the ruin of them both?
- Webster's Bible (WBS)
- For their calamity shall rise suddenly; and who knoweth the ruin of them both?
- Young's Literal Translation (YLT)
- For suddenly doth their calamity rise, And the ruin of them both — who knoweth!
Read in context
- 20ಕೆಡುಕನಿಗೆ ಪ್ರತಿ ಫಲವು ಇರುವದಿಲ್ಲ; ದುಷ್ಟರ ದೀಪವು ಆರಿಹೋಗು ವದು.
- 21ನನ್ನ ಮಗನೇ, ಕರ್ತನಿಗೂ ಅರಸನಿಗೂ ಭಯಪಡು; ಭಯಪಡದವರ ಗೊಡವೆಗೆ ಹೋಗ ಬೇಡ.
- 22ಅವರ ವಿಪತ್ತು ಫಕ್ಕನೆ ಸಂಭವಿಸುವದು; ಅವರಿಬ್ಬರ ನಾಶನವು ಯಾರಿಗೆ ತಿಳಿದೀತು?
- 23ಇವು ಸಹ ಜ್ಞಾನಿಗಳಿಗೆ ಸಂಬಂಧಪಟ್ಟಿವೆ. ನ್ಯಾಯವಿಚಾರಣೆ ಯಲ್ಲಿ ಪಕ್ಷಪಾತವು ಸರಿಯಲ್ಲ.
- 24ದುಷ್ಟನಿಗೆ--ನೀನು ನೀತಿವಂತನು ಎಂದು ಹೇಳುವವನನ್ನು ಜನರು ಶಪಿಸು ವರು, ಜನಾಂಗಗಳು ಅವನನ್ನು ಹೇಸಿಕೊಳ್ಳುವರು.
Cross references
- Psalm 90:11 ಕೀರ್ತನೆಗಳು 90:11ನಿನ್ನ ಕೋಪದ ಬಲವನ್ನು ತಿಳಿದ ವನಾರು? ನಿನ್ನ ಭಯದ ಪ್ರಕಾರವೇ ನಿನ್ನ ಉಗ್ರತೆ ಇದೆ.
- Numbers 16:31–35 ಅರಣ್ಯಕಾಂಡ 16:31–35ಇದಾದ ಮೇಲೆ ಅವನು ಹೇಳಬೇಕಾದವುಗಳನ್ನೆಲ್ಲಾ ಹೇಳಿ ಮುಗಿಸಿದಾಗಲೇ ಅವರ ಕೆಳಗಿರುವ ನೆಲವು ಸೀಳಿ ಭೂಮಿಯು ತನ್ನ ಬಾಯಿ ತೆರೆದು ಅವರನ್ನೂ ಅವರ ಮನೆಯವರನ್ನೂ ಕೋರಹನಿಗೆ ಸಂಬಂಧಪಟ್ಟ ಸಕಲ ಮನುಷ್ಯರನ್ನೂ ಅವರಿಗಿದ್ದದ್ದನ್ನೆಲ್ಲಾ ನುಂಗಿ ಬಿಟ್ಟಿತು. ಅವರು ತಮಗೆ ಸಂಬಂಧಪಟ್ಟವುಗಳೆ ಲ್ಲವುಗಳ ಸಂಗಡ ಸಜೀವಿಗಳಾಗಿ ಪಾತಾಳಕ್ಕೆ ಇಳಿದರು; ಭೂಮಿಯು ಅವರ ಮೇಲೆ ಮುಚ್ಚಿಕೊಂಡಿತು. ಹೀಗೆ ಅವರು ಸಭೆಯ ಮಧ್ಯದೊಳಗಿಂದ ನಾಶವಾದರು. ಆಗ ಅವರ ಸುತ್ತಲಿದ್ದ ಇಸ್ರಾಯೇಲ್ಯರೆಲ್ಲರು ಅವರ ಕೂಗಿಗೆ ಓಡಿಹೋದರು; ಅವರು--ಭೂಮಿಯು ನಮ್ಮನ್ನು ಸಹ ನುಂಗಿತೆಂದು ಹೇಳಿದರು. ಬೆಂಕಿಯು ಕರ್ತನ ಬಳಿಯಿಂದ ಹೊರಟು ಧೂಪ ವನ್ನು ಅರ್ಪಿಸಿದ ಇನ್ನೂರ ಐವತ್ತು ಮಂದಿಯನ್ನು ದಹಿಸಿಬಿಟ್ಟಿತು.
- 2 Samuel 18:7–8 2 ಸಮುವೇಲನು 18:7–8ಯುದ್ಧವು ಎಫ್ರಾ ಯಾಮ್ ಅಡವಿಯಲ್ಲಿತ್ತು. ಅಲ್ಲಿ ಇಸ್ರಾಯೇಲ್ಯರು ದಾವೀದನ ಸೇವಕರ ಮುಂದೆ ಸಂಹಾರವಾದರು. ಆ ಹೊತ್ತು ಅಲ್ಲಿ ದೊಡ್ಡ ಸಂಹಾರವಾಯಿತು; ಇಪ್ಪತ್ತು ಸಾವಿರ ಜನರು ಬಿದ್ದರು. ಅಲ್ಲಿನ ಯುದ್ಧವು ದೇಶವೆ ಲ್ಲಾದರ ಮೇಲೆ ವಿಸ್ತರಿಸಲ್ಪಟ್ಟಿತು. ಆ ಹೊತ್ತು ಜನರಲ್ಲಿ ಕತ್ತಿಗಿಂತ ಅಡವಿಯು ಹೆಚ್ಚಾದವರನ್ನು ನುಂಗಿಬಿಟ್ಟಿತು.
- 2 Chronicles 13:16–17 2 ಪೂರ್ವಕಾಲವೃತ್ತಾಂತ 13:16–17ಇಸ್ರಾಯೇಲಿನ ಮಕ್ಕಳು ಯೆಹೂದದವರ ಎದುರಿ ನಿಂದ ಓಡಿಹೋದರು. ದೇವರು ಅವರನ್ನು ಅವರ ಕೈಯಲ್ಲಿ ಒಪ್ಪಿಸಿದನು. ಅಬೀಯನೂ ಅವನ ಜನರೂ ಅವರಲ್ಲಿ ಬಹಳ ಮಂದಿಯನ್ನು ಹತಮಾಡಿ ದರು. ಇಸ್ರಾಯೇಲಿನವರಲ್ಲಿ ಐದು ಲಕ್ಷ ಮಂದಿ ಆಯಲ್ಪಟ್ಟವರು ಹತವಾದರು.
- Hosea 5:11 ಹೋಶೇಯ 5:11ಎಫ್ರಾಯಾಮು ಆಜ್ಞೆಯಂತೆ ಇಷ್ಟ ಪೂರ್ವಕವಾಗಿ ನಡೆದ ಕಾರಣ ಅವನು ನ್ಯಾಯತೀರ್ಪಿನೊಳಗೆ ಕುಂದಿ ಹೋಗಿ ಜಜ್ಜಲ್ಪಟ್ಟನು.
- Hosea 13:10–11 ಹೋಶೇಯ 13:10–11ನಾನೇ ನಿನ್ನ ಅರಸನಾಗಿ ರುವೆನು; ನಿನ್ನ ಎಲ್ಲಾ ಪಟ್ಟಣಗಳಲ್ಲಿ ನಿನ್ನನ್ನು ರಕ್ಷಿಸುವ ಬೇರೆಯ ವನು ಎಲ್ಲಿದ್ದಾನೆ? ಮತ್ತು--ರಾಜನನ್ನೂ ಪ್ರಧಾನ ರನ್ನೂ ನನಗೆ ದಯಪಾಲಿಸು ಎಂದು ನೀನು ಹೇಳಿದ ನ್ಯಾಯಾಧಿಪತಿಗಳು ಎಲ್ಲಿದ್ದಾರೆ? ನನ್ನ ಕೋಪದಲ್ಲಿ ನಿನಗೆ ಅರಸನನ್ನು ಕೊಟ್ಟೆನು, ನನ್ನ ರೌದ್ರದಲ್ಲಿ ಅವನನ್ನು ತೆಗೆದುಹಾಕಿದೆನು.
- 1 Samuel 31:1–7 1 ಸಮುವೇಲನು 31:1–7ಆದರೆ ಫಿಲಿಷ್ಟಿಯರು ಇಸ್ರಾಯೇಲ್ಯರ ಸಂಗಡ ಯುದ್ಧಮಾಡಿದರು. ಆಗ ಇಸ್ರಾಯೇಲ್ ಜನರು ಫಿಲಿಷ್ಟಿಯರ ಎದುರಿನಿಂದ ಓಡಿಹೋಗಿ ಗಿಲ್ಬೋವ ಬೆಟ್ಟದಲ್ಲಿ ಕೊಲ್ಲಲ್ಪಟ್ಟವರಾಗಿ ಬಿದ್ದರು. ಫಿಲಿಷ್ಟಿಯರು ಸೌಲನನ್ನೂ ಅವನ ಕುಮಾರ ರನ್ನೂ ಬೆನ್ನಟ್ಟಿ ಸೌಲನ ಕುಮಾರರಾದ ಯೋನಾತಾನ ನನ್ನೂ ಅಬೀನಾದಾಬನನ್ನೂ ಮಲ್ಕೀಷೂವನನ್ನೂ ಸಂಹರಿಸಿದರು. ಇದಲ್ಲದೆ ಯುದ್ಧವು ಸೌಲನಿಗೆ ಭಾರವಾಗಿತ್ತು. ಯಾಕಂದರೆ ಬಿಲ್ಲುಗಾರರು ಅವನನ್ನು ಬಾಣಗಳಿಂದ ಹೊಡೆದರು. ಅವನು ಅವರಿಂದ ಬಹು ಗಾಯಪಟ್ಟನು. ಆದಕಾರಣ ಅವನು ತನ್ನ ಆಯುಧ ಹಿಡಿಯುವವನಿಗೆ--ಈ ಸುನ್ನತಿ ಇಲ್ಲದವರು ಬಂದು ನನ್ನನ್ನು ತಿವಿದುಬಿಟ್ಟು ಅವಮಾನ ಮಾಡದ ಹಾಗೆ ನೀನು ನಿನ್ನ ಕತ್ತಿಯನ್ನು ಹಿರಿದು ನನ್ನನ್ನು ಅದರಿಂದ ತಿವಿ ಅಂದನು. ಆದರೆ ಅವನ ಆಯುಧ ಹಿಡಿಯು ವವನು ಬಹು ಭಯಪಟ್ಟದ್ದರಿಂದ ಹಾಗೆ ಮಾಡ ಲೊಲ್ಲದೆ ಹೋದನು. ಆಗ ಸೌಲನು ತಾನೇ ಕತ್ತಿ ಯನ್ನು ತಕ್ಕೊಂಡು ಅದರ ಮೇಲೆ ಬಿದ್ದನು. ಸೌಲನು ಸತ್ತು ಹೋದದ್ದನ್ನು ಅವನ ಆಯುಧ ಹಿಡಿಯುವವನು ನೋಡಿದಾಗ ಅವನೂ ಹಾಗೆಯೇ ತನ್ನ ಕತ್ತಿಯ ಮೇಲೆ ಬಿದ್ದು ಅವನ ಸಂಗಡ ಸತ್ತನು. ಹೀಗೆ ಆ ದಿನ ಸೌಲನೂ ಅವನ ಮೂವರು ಮಕ್ಕಳೂ ಅವನ ಆಯುಧ ಹಿಡಿಯುವವನೂ ಎಲ್ಲಾ ಜನರೂ ಸತ್ತರು. ಇಸ್ರಾಯೇಲ್ ಜನರು ಓಡಿಹೋದರೆಂದೂ ಸೌಲನೂ ಅವನ ಮಕ್ಕಳೂ ಸತ್ತರೆಂದೂ ತಗ್ಗಿಗೂ ಯೊರ್ದನಿಗೂ ಆಚೆಯಲ್ಲಿದ್ದ ಇಸ್ರಾಯೇಲ್ ಜನರು ಕಂಡಾಗ ಅವರು ತಮ್ಮ ಪಟ್ಟಣಗಳನ್ನು ಬಿಟ್ಟು ಓಡಿ ಹೋದರು. ಆಗ ಫಿಲಿಷ್ಟಿಯರು ಬಂದು ಅವುಗಳಲ್ಲಿ ವಾಸವಾಗಿದ್ದರು.
- Proverbs 20:2 ಜ್ಞಾನೋಕ್ತಿಗಳು 20:2ಅರಸನ ಭಯವು ಸಿಂಹದ ಗರ್ಜನೆಯಂತಿದೆ; ಅವನಿಗೆ ಕೋಪ ವನ್ನೆಬ್ಬಿಸುವವನು ತನ್ನ ಪ್ರಾಣಕ್ಕೆ ವಿರೋಧವಾಗಿ ಪಾಪ ಮಾಡುತ್ತಾನೆ.
- Proverbs 16:14 ಜ್ಞಾನೋಕ್ತಿಗಳು 16:14ಅರಸನ ಕೋಪವು ಮೃತ್ಯುವಿನ ದೂತರಂತೆ ಇರುತ್ತದೆ; ಜ್ಞಾನಿಯು ಅದನ್ನು ಶಮನಪಡಿಸುವನು.