Proverbs · chapter 26 · verse 5
Proverbs 26:5 in Kannada
ಮೂಢನ ಮೂರ್ಖ ತನಕ್ಕೆ ತಕ್ಕಂತೆ ಉತ್ತರಕೊಡು; ಇಲ್ಲವಾದರೆ ತನ್ನ ದೃಷ್ಟಿ ಯಲ್ಲಿ ಅವನು ಜ್ಞಾನಿಯಾದಾನು.
Moodhana moorkha tanakke takkante uttarakodu; illavaadare tanna drushti yalli avanu jnyaaniyaadaanu.
Proverbs 26:5 in English
- King James Version (KJV)
- Answer a fool according to his folly, lest he be wise in his own conceit.
- World English Bible (WEB)
- Answer a fool according to his folly, lest he be wise in his own eyes.
- American Standard Version (ASV)
- Answer a fool according to his folly, Lest he be wise in his own conceit.
- Bible in Basic English (BBE)
- Give a foolish man a foolish answer, or he will seem wise to himself.
- Darby Translation (DBY)
- Answer a fool according to his folly, lest he be wise in his own eyes.
- Webster's Bible (WBS)
- Answer a fool according to his folly, lest he be wise in his own conceit.
- Young's Literal Translation (YLT)
- Answer a fool according to his folly, Lest he be wise in his own eyes.
Read in context
- 3ಕುದುರೆಗೆ ಬಾರುಗೋಲು, ಕತ್ತೆಗೆ ಕಡಿ ವಾಣ, ಮೂಢನ ಬೆನ್ನಿಗೆ ಬೆತ್ತ.
- 4ಮೂಢನ ಮೂರ್ಖ ತನಕ್ಕೆ ತಕ್ಕಂತೆ ಉತ್ತರಿಸಬೇಡ; ಇಲ್ಲವಾದರೆ ನೀನು ಅವನಿಗೆ ಸಮಾನನಾದೀಯೇ.
- 5ಮೂಢನ ಮೂರ್ಖ ತನಕ್ಕೆ ತಕ್ಕಂತೆ ಉತ್ತರಕೊಡು; ಇಲ್ಲವಾದರೆ ತನ್ನ ದೃಷ್ಟಿ ಯಲ್ಲಿ ಅವನು ಜ್ಞಾನಿಯಾದಾನು.
- 6ಬುದ್ಧಿಹೀನನ ಮೂಲಕ ವರ್ತಮಾನ ಕಳುಹಿಸುವವನು ಪಾದಗಳನ್ನು ಕಡಿದು ಕೇಡನ್ನು ಕುಡಿಯುತ್ತಾನೆ.
- 7ಕುಂಟನ ಕಾಲು ಗಳು ಸಮವಲ್ಲ; ಹಾಗೆಯೇ ಬುದ್ಧಿಹೀನರ ಬಾಯಲ್ಲಿ ಸಾಮ್ಯವು ಇರುತ್ತದೆ.
Cross references
- Romans 12:16 ರೋಮಾಪುರದವರಿಗೆ 12:16ಒಬ್ಬರಿಗೊಬ್ಬರು ಒಂದೇ ಮನಸ್ಸುಳ್ಳುವರಾಗಿರ್ರಿ; ದೊಡ್ಡಸ್ತಿಕೆಗಳ ಮೇಲೆ ಮನಸ್ಸಿಡದೆ ದೀನರ ಸಂಗಡ ಬಳಿಕೆಯಾಗಿರ್ರಿ. ನಿಮ್ಮನ್ನು ನೀವೇ ಬುದ್ಧಿವಂತರೆಂದು ಭಾವಿಸಿಕೊಳ್ಳಬೇಡಿರಿ.
- Matthew 16:1–4 ಮತ್ತಾಯನು 16:1–4ಸದ್ದುಕಾಯರೊಂದಿಗೆ ಫರಿಸಾಯರು ಸಹ ಬಂದು ಆತನನ್ನು ಶೋಧಿಸುವದಕ್ಕಾಗಿ ಆಕಾಶದಲ್ಲಿ ತಮಗೆ ಒಂದು ಸೂಚಕಕಾರ್ಯವನ್ನು ತೋರಿಸಬೇಕೆಂದು ಅಪೇಕ್ಷಿಸಿದರು. ಆತನು ಪ್ರತ್ಯು ತ್ತರವಾಗಿ ಅವರಿಗೆ--ಸಾಯಂಕಾಲವಾದಾಗ ಆಕಾಶವು ಕೆಂಪಾಗಿದ್ದರೆ ಒಳ್ಳೆಯ ಹವಾಮಾನ ಇರುವದೆಂದೂ ಬೆಳಿಗ್ಗೆ ಆಕಾಶವು ಮೋಡಕವಿದು ಕೆಂಪಾಗಿದ್ದರೆ--ಈ ಹೊತ್ತು ಕೆಟ್ಟ ಹವಾಮಾನ ಇದೆಯೆಂದೂ ನೀವು ಅನ್ನುತ್ತೀರಿ. ಓ ಕಪಟಿಗಳೇ, ಆಕಾಶದಲ್ಲಾಗುವ ಸೂಚನೆ ಗಳನ್ನು ನೀವು ಗ್ರಹಿಸಬಲ್ಲಿರಿ; ಆದರೆ ಸಮಯಗಳ ಸೂಚನೆಗಳನ್ನು ನೀವು ಗ್ರಹಿಸಲಾರಿರಾ? ವ್ಯಭಿಚಾರಿ ಯಾದ ಈ ಕೆಟ್ಟ ಸಂತತಿಯು ಸೂಚಕಕಾರ್ಯವನ್ನು ಹುಡುಕುತ್ತದೆ; ಆದರೆ ಪ್ರವಾದಿಯಾದ ಯೋನನಲ್ಲಿ ಆದ ಸೂಚಕಕಾರ್ಯವೇ ಹೊರತು ಬೇರೆ ಯಾವ ಸೂಚಕಕಾರ್ಯವೂ ಇದಕ್ಕೆ ಕೊಡಲ್ಪಡುವದಿಲ್ಲ ಎಂದು ಹೇಳಿದನು. ತರುವಾಯ ಆತನು ಅವರನ್ನು ಬಿಟ್ಟು ಹೊರಟುಹೋದನು.
- Proverbs 3:7 ಜ್ಞಾನೋಕ್ತಿಗಳು 3:7ನಿನ್ನ ದೃಷ್ಟಿಯಲ್ಲಿ ಜ್ಞಾನಿಯಂತೆ ನೀನು ಇರಬೇಡ; ಕರ್ತನಿಗೆ ಭಯಪಟ್ಟು ಕೆಟ್ಟತನದಿಂದ ನೀನು ತೊಲಗಿಹೋಗು.
- Luke 12:13–21 ಲೂಕನು 12:13–21ಆಗ ಗುಂಪಿನಲ್ಲಿದ್ದ ಒಬ್ಬನು ಆತನಿಗೆ--ಬೋಧ ಕನೇ, ಆಸ್ತಿಯನ್ನು ಪಾಲುಮಾಡಿ ನನಗೆ ಕೊಡುವಂತೆ ನನ್ನ ಸಹೋದರನಿಗೆ ಹೇಳು ಅಂದನು. ಅದಕ್ಕೆ ಆತನು ಅವನಿಗೆ--ಮನುಷ್ಯನೇ, ನಿಮ್ಮ ಮೇಲೆ ನ್ಯಾಯಾಧಿಪತಿಯನ್ನಾಗಿ ಇಲ್ಲವೆ ಪಾಲುಮಾಡುವ ವನನ್ನಾಗಿ ನನ್ನನ್ನು ಯಾರು ಮಾಡಿದರು ಎಂದು ಕೇಳಿದನು. ಇದಲ್ಲದೆ ಆತನು ಅವರಿಗೆ--ಜಾಗ್ರತೆ ಯಾಗಿದ್ದು ಲೋಭಕ್ಕೆ ಎಚ್ಚರಿಕೆಯಾಗಿರ್ರಿ; ಯಾಕಂದರೆ ಒಬ್ಬ ಮನುಷ್ಯನಿಗೆ ಸಮೃದ್ಧಿಯಾದ ಆಸ್ತಿಯು ಅವನಿಗೆ ಜೀವಾಧಾರವಲ್ಲ ಅಂದನು. ಆತನು ಅವರಿಗೆ ಒಂದು ಸಾಮ್ಯವನ್ನು ಹೇಳಿದ್ದೇನಂದರೆ--ಒಬ್ಬಾ ನೊಬ್ಬ ಐಶ್ವರ್ಯವಂತನ ಭೂಮಿಯು ಸಮೃದ್ಧಿಯಾಗಿ ಬೆಳೆಯಿತು. ಆಗ ಅವನು ತನ್ನೊಳಗೆ--ನಾನೇನು ಮಾಡಲಿ? ನನಗಿರುವ ಬೆಳೆಯನ್ನು ತುಂಬಿಡುವದಕ್ಕೆ ನನಗೆ ಸ್ಥಳವಿಲ್ಲ ಎಂದು ಆಲೋಚಿಸಿ ಅವನು-- ನಾನು ಹೀಗೆ ಮಾಡುತ್ತೇನೆ; ನನ್ನ ಕಣಜಗಳನ್ನು ಕೆಡವಿ ದೊಡ್ಡವನ್ನಾಗಿ ಕಟ್ಟಿಸುತ್ತೇನೆ; ಅಲ್ಲಿ ನನ್ನ ಎಲ್ಲಾ ಬೆಳೆಯನ್ನೂ ನನ್ನ ಸರಕುಗಳನ್ನೂ ಕೂಡಿಸಿಟು ನಾನು ನನ್ನ ಆತ್ಮಕ್ಕೆ--ಆತ್ಮವೇ, ಅನೇಕ ವರುಷ ಗಳಿಗಾಗಿ ನಿನಗೆ ಬಹಳ ಸರಕು ಇಡಲ್ಪಟ್ಟಿದೆ; ನೀನು ವಿಶ್ರಮಿಸಿಕೋ, ತಿನ್ನು, ಕುಡಿ ಆನಂದವಾಗಿರು ಎಂದು ಹೇಳುವೆನು ಎಂದು ಅಂದುಕೊಂಡನು. ಆದರೆ ದೇವರು ಅವನಿಗೆ--ಬುದ್ಧಿಹೀನನೇ, ಈ ರಾತ್ರಿಯೇ ನಿನ್ನ ಪ್ರಾಣವು ನಿನ್ನಿಂದ ಕೇಳಲ್ಪಡುವದು; ಆಗ ನೀನು ಕೂಡಿಸಿಕೊಂಡವುಗಳು ಯಾರಿಗಾಗುವವು ಎಂದು ಹೇಳಿದನು. ತನಗೋಸ್ಕರ ಸಂಪತ್ತನ್ನು ಕೂಡಿಸಿಟ್ಟು ಕೊಂಡು ದೇವರ ಕಡೆಗೆ ಐಶ್ವರ್ಯವಂತನಾಗ ದಿರುವವನು ಇವನಂತೆಯೇ ಇರುವನು ಅಂದನು.
- Titus 1:13 ತೀತನಿಗೆ 1:13ಈ ಸಾಕ್ಷಿಯು ನಿಜವೇ; ಆದದರಿಂದ ಅವರು ನಂಬಿಕೆಯಲ್ಲಿ ಸ್ವಸ್ಥ ಚಿತ್ತರಾಗಿರುವಂತೆ ಅವ ರನ್ನು ಕಠಿಣವಾಗಿ ಖಂಡಿಸು.
- Matthew 21:23–27 ಮತ್ತಾಯನು 21:23–27ಆತನು ದೇವಾಲಯಕ್ಕೆ ಬಂದು ಬೋಧಿಸು ತ್ತಿದ್ದಾಗ ಪ್ರಧಾನಯಾಜಕರೂ ಜನರ ಹಿರಿಯರೂ ಆತನ ಬಳಿಗೆ ಬಂದು--ಯಾವ ಅಧಿಕಾರದಿಂದ ನೀನು ಇವುಗಳನ್ನು ಮಾಡುತ್ತೀ? ಮತ್ತು ಈ ಅಧಿಕಾರವನ್ನು ನಿನಗೆ ಕೊಟ್ಟವರು ಯಾರು ಎಂದು ಕೇಳಿದರು. ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವರಿಗೆ--ನಾನು ಸಹ ಒಂದು ವಿಷಯ ನಿಮ್ಮನ್ನು ಕೇಳುತ್ತೇನೆ; ಅದನ್ನು ನೀವು ನನಗೆ ಹೇಳಿದರೆ ನಾನು ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇ ನೆಂದು ನಿಮಗೆ ಹೇಳುವೆನು ಎಂದು ಹೇಳಿ--ಯೋಹಾನನ ಬಾಪ್ತಿಸ್ಮವು ಎಲ್ಲಿಂದ ಬಂತು? ಪರ ಲೋಕದಿಂದಲೋ ಇಲ್ಲವೆ ಮನುಷ್ಯರಿಂದಲೋ ಎಂದು ಕೇಳಿದಾಗ ಅವರು ತಮ್ಮತಮ್ಮೊಳಗೆ ತರ್ಕಿ ಸುತ್ತಾ--ಪರಲೋಕದಿಂದ ಎಂದು ಹೇಳಿದರೆ ಆತನು ನಮಗೆ--ನೀವು ಅವನನ್ನು ಯಾಕೆ ನಂಬಲಿಲ್ಲ ಎಂದು ಹೇಳಾನು. ಮನುಷ್ಯರಿಂದ ಎಂದು ನಾವು ಹೇಳಿ ದರೆ ಜನರಿಗೆ ಭಯಪಡುತ್ತೇವೆ; ಯಾಕಂದರೆ ಯೋಹಾನನು ಪ್ರವಾದಿಯೆಂದು ಎಲ್ಲರೂ ಎಣಿಸು ತ್ತಾರೆ ಎಂದು ಅಂದುಕೊಂಡರು. ತರುವಾಯ ಅವರು ಪ್ರತ್ಯುತ್ತರವಾಗಿ ಯೇಸುವಿಗೆ--ನಾವು ಹೇಳ ಲಾರೆವು ಅಂದರು. ಅದಕ್ಕೆ ಆತನು ಅವರಿಗೆ-- ನಾನು ಸಹ ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇನೆಂದು ನಿಮಗೆ ಹೇಳುವದಿಲ್ಲ.
- John 9:26–33 ಯೋಹಾನನು 9:26–33ಅವರು ತಿರಿಗಿ ಅವನಿಗೆ--ಆತನು ನಿನಗೆ ಏನು ಮಾಡಿದನು? ಆತನು ನಿನ್ನ ಕಣ್ಣುಗಳನ್ನು ಹೇಗೆ ತೆರೆದನು ಎಂದು ಹೇಳಿದ್ದಕ್ಕೆ ಅವನು ಪ್ರತ್ಯುತ್ತರವಾಗಿ ಅವರಿಗೆ--ನಾನು ನಿಮಗೆ ಆಗಲೇ ಹೇಳಿದ್ದೇನಲ್ಲಾ; ಆದರೆ ನೀವು ಕೇಳಲಿಲ್ಲ; ನೀವು ಅದನ್ನು ತಿರಿಗಿ ಯಾಕೆ ಕೇಳಬೇಕೆಂದಿದ್ದೀರಿ? ಆತನ ಶಿಷ್ಯರಾಗುವದಕ್ಕೆ ನಿಮಗೂ ಮನಸ್ಸಿದೆಯೋ ಅಂದನು. ಆಗ ಅವರು ಅವನನ್ನು ದೂಷಿಸಿ--ನೀನು ಅವನ ಶಿಷ್ಯನು; ಆದರೆ ನಾವು ಮೋಶೆಯ ಶಿಷ್ಯರು. ಮೋಶೆಯ ಸಂಗಡ ದೇವರು ಮಾತನಾಡಿದನೆಂದು ನಾವು ಬಲ್ಲೆವು; ಆದರೆ ಇವನು ಎಲ್ಲಿಯವನೋ ನಮಗೆ ಗೊತ್ತಿಲ್ಲ ಅಂದರು. ಆಗ ಆ ಮನುಷ್ಯನು ಪ್ರತ್ಯುತ್ತರವಾಗಿ ಅವರಿಗೆ--ಆತನು ನನ್ನ ಕಣ್ಣುಗಳನ್ನು ತೆರೆದರೂ ಆತನು ಎಲ್ಲಿಯ ವನೆಂದು ನಿಮಗೆ ತಿಳಿಯದೆ ಇರುವದು ಆಶ್ಚರ್ಯವಾದ ವಿಷಯವಲ್ಲವೇ? ದೇವರು ಪಾಪಿಗಳ ಪ್ರಾರ್ಥನೆ ಯನ್ನು ಕೇಳುವದಿಲ್ಲ; ಆದರೆ ಯಾವನಾದರೂ ದೇವ ರನ್ನು ಆರಾಧಿಸುವವನಾಗಿದ್ದು ಆತನ ಚಿತ್ತದಂತೆ ನಡೆದರೆ ಅವನ ಪ್ರಾರ್ಥನೆಯನ್ನು ಆತನು ಕೇಳು ತ್ತಾನೆಂದು ನಾವು ಬಲ್ಲೆವು. ಹುಟ್ಟುಕುರುಡನಾಗಿದ್ದ ಒಬ್ಬ ಮನುಷ್ಯನ ಕಣ್ಣುಗಳನ್ನು ಯಾವನಾದರೂ ತೆರೆದಿ ದ್ದದ್ದನ್ನು ಲೋಕಾದಿಯಿಂದ ಕೇಳಿರಲಿಲ್ಲ. ಈ ಮನುಷ್ಯನು ದೇವರ ಕಡೆಯಿಂದ ಬಂದವನಲ್ಲ ದಿದ್ದರೆ ಏನೂ ಮಾಡಲಾರದೆ ಇರುತ್ತಿದ್ದನು ಅಂದನು.
- Romans 11:25 ರೋಮಾಪುರದವರಿಗೆ 11:25ಸಹೋದರರೇ, ನಿಮ್ಮನ್ನು ನೀವೇ ಬುದ್ಧಿವಂತ ರೆಂಬದಾಗಿ ಎಣಿಸಿಕೊಳ್ಳದಂತೆ ಗುಪ್ತವಾಗಿದ್ದ ಒಂದು ಸಂಗತಿ ನಿಮಗೆ ತಿಳಿದಿರಬೇಕೆಂದು ಅಪೇಕ್ಷಿಸುತ್ತೇನೆ. ಅದೇನಂದರೆ, ಇಸ್ರಾಯೇಲ್ಯರಲ್ಲಿ ಒಂದು ಪಾಲು ಜನರಿಗೆ ಉಂಟಾದ ಕುರುಡುತನವು ಅನ್ಯಜನಗಳು ಸಂಪೂರ್ಣವಾಗಿ ದೇವರ ರಾಜ್ಯದಲ್ಲಿ ಸೇರುವ ತನಕ
- 1 Kings 22:24–28 1 ಅರಸುಗಳು 22:24–28ಆಗ ಕೆನಾನನ ಮಗನಾದ ಚಿದ್ಕೀಯನು ಸವಿಾ ಪಕ್ಕೆ ಬಂದು ವಿಾಕಾಯೆಹುವಿನ ಕೆನ್ನೆಯ ಮೇಲೆ ಹೊಡೆದು--ಕರ್ತನ ಆತ್ಮವು ನನ್ನನ್ನು ಬಿಟ್ಟು ನಿನ್ನ ಸಂಗಡ ಮಾತನಾಡಲು ಯಾವ ಮಾರ್ಗವಾಗಿ ಹೋಯಿತು ಅಂದನು. ಅದಕ್ಕೆ ವಿಾಕಾಯೆಹುವುಇಗೋ, ನಿನ್ನನ್ನು ಬಚ್ಚಿಟ್ಟುಕೊಳ್ಳಲು ಒಳಕೊಠಡಿ ಯೊಳಗೆ ನೀನು ಹೋಗುವ ದಿವಸದಲ್ಲಿ ನೋಡುವಿ ಅಂದನು. ಆಗ ಇಸ್ರಾಯೇಲಿನ ಅರಸನು ಹೇಳಿದ್ದೇ ನಂದರೆ -- ವಿಾಕಾಯೆಹುನನ್ನು ಹಿಡಿದು ಪಟ್ಟಣದ ಅಧಿಪತಿಯಾದ ಆಮೋನನ ಬಳಿಗೂ ಅರಸನ ಮಗ ನಾದ ಯೋವಾಷನ ಬಳಿಗೂ ಅವನನ್ನು ಹಿಂದಕ್ಕೆ ತಕ್ಕೊಂಡುಹೋಗಿ ನೀವು ಇವನನ್ನು ಸೆರೆಮನೆಯ ಲ್ಲಿಟ್ಟು ನಾನು ಸಮಾಧಾನವಾಗಿ ತಿರಿಗಿ ಬರುವ ವರೆಗೂ ಅವನಿಗೆ ಬಾಧೆಯ ರೊಟ್ಟಿಯನ್ನೂ ಬಾಧೆಯ ನೀರನ್ನೂ ಕೊಡಿರಿ ಎಂದು ಅರಸನು ಹೇಳುತ್ತಾನೆಂದು ಹೇಳಿರಿ ಅಂದನು. ಅದಕ್ಕೆ ವಿಾಕಾಯೆಹುವು ನೀನು ಸಮಾ ಧಾನದಿಂದ ತಿರಿಗಿ ನಿಜವಾಗಿ ಬಂದರೆ ಕರ್ತನು ನನ್ನ ಮುಖಾಂತರ ಮಾತನಾಡಿದ್ದಿಲ್ಲವೆಂದು ಜನರೇ, ನೀವೆ ಲ್ಲರೂ ಕೇಳಿರಿ ಅಂದನು.
- Proverbs 26:4 ಜ್ಞಾನೋಕ್ತಿಗಳು 26:4ಮೂಢನ ಮೂರ್ಖ ತನಕ್ಕೆ ತಕ್ಕಂತೆ ಉತ್ತರಿಸಬೇಡ; ಇಲ್ಲವಾದರೆ ನೀನು ಅವನಿಗೆ ಸಮಾನನಾದೀಯೇ.
- John 8:7 ಯೋಹಾನನು 8:7ಆದರೆ ಅವರು ಬಿಡದೆ ಆತನನ್ನು ಕೇಳುತ್ತಿರಲು ಆತನು ಮೇಲಕ್ಕೆ ನೋಡಿ--ನಿಮ್ಮೊಳಗೆ ಯಾವನು ಪಾಪವಿಲ್ಲದವನಾಗಿದ್ದಾನೋ ಅವನೇ ಮೊದಲು ಆಕೆಯ ಮೇಲೆ ಕಲ್ಲನ್ನು ಹಾಕಲಿ ಎಂದು ಅವರಿಗೆ ಹೇಳಿದನು.
- Proverbs 28:11 ಜ್ಞಾನೋಕ್ತಿಗಳು 28:11ತನ್ನ ಸ್ವಂತ ಅಭಿಪ್ರಾಯದಲ್ಲಿ ಐಶ್ವರ್ಯ ವಂತನು ಜ್ಞಾನಿಯಾಗಿದ್ದಾನೆ; ವಿವೇಕಿಯಾದ ಬಡವನು ಅವನನ್ನು ಪರೀಕ್ಷಿಸುತ್ತಾನೆ.