Proverbs · chapter 26 · verse 4
Proverbs 26:4 in Kannada
ಮೂಢನ ಮೂರ್ಖ ತನಕ್ಕೆ ತಕ್ಕಂತೆ ಉತ್ತರಿಸಬೇಡ; ಇಲ್ಲವಾದರೆ ನೀನು ಅವನಿಗೆ ಸಮಾನನಾದೀಯೇ.
Moodhana moorkha tanakke takkante uttarisabeda; illavaadare neenu avanige samaananaadeeye.
Proverbs 26:4 in English
- King James Version (KJV)
- Answer not a fool according to his folly, lest thou also be like unto him.
- World English Bible (WEB)
- Don’t answer a fool according to his folly, lest you also be like him.
- American Standard Version (ASV)
- Answer not a fool according to his folly, Lest thou also be like unto him.
- Bible in Basic English (BBE)
- Do not give to the foolish man a foolish answer, or you will be like him.
- Darby Translation (DBY)
- Answer not a fool according to his folly, lest thou also be like unto him.
- Webster's Bible (WBS)
- Answer not a fool according to his folly, lest thou also be like him.
- Young's Literal Translation (YLT)
- Answer not a fool according to his folly, Lest thou be like to him — even thou.
Read in context
- 2ಅಲೆದಾಡುವ ಪಕ್ಷಿಯಂತೆಯೂ ಹಾರಾ ಡುವ ಬಾನಕ್ಕಿಯಂತೆಯೂ ಕಾರಣವಿಲ್ಲದ ನಾಶವು ಬರುವದಿಲ್ಲ.
- 3ಕುದುರೆಗೆ ಬಾರುಗೋಲು, ಕತ್ತೆಗೆ ಕಡಿ ವಾಣ, ಮೂಢನ ಬೆನ್ನಿಗೆ ಬೆತ್ತ.
- 4ಮೂಢನ ಮೂರ್ಖ ತನಕ್ಕೆ ತಕ್ಕಂತೆ ಉತ್ತರಿಸಬೇಡ; ಇಲ್ಲವಾದರೆ ನೀನು ಅವನಿಗೆ ಸಮಾನನಾದೀಯೇ.
- 5ಮೂಢನ ಮೂರ್ಖ ತನಕ್ಕೆ ತಕ್ಕಂತೆ ಉತ್ತರಕೊಡು; ಇಲ್ಲವಾದರೆ ತನ್ನ ದೃಷ್ಟಿ ಯಲ್ಲಿ ಅವನು ಜ್ಞಾನಿಯಾದಾನು.
- 6ಬುದ್ಧಿಹೀನನ ಮೂಲಕ ವರ್ತಮಾನ ಕಳುಹಿಸುವವನು ಪಾದಗಳನ್ನು ಕಡಿದು ಕೇಡನ್ನು ಕುಡಿಯುತ್ತಾನೆ.
Cross references
- Proverbs 26:5 ಜ್ಞಾನೋಕ್ತಿಗಳು 26:5ಮೂಢನ ಮೂರ್ಖ ತನಕ್ಕೆ ತಕ್ಕಂತೆ ಉತ್ತರಕೊಡು; ಇಲ್ಲವಾದರೆ ತನ್ನ ದೃಷ್ಟಿ ಯಲ್ಲಿ ಅವನು ಜ್ಞಾನಿಯಾದಾನು.
- 1 Peter 3:9 1 ಪೇತ್ರನು 3:9ಅಪಕಾರಕ್ಕೆ ಅಪಕಾರವನ್ನೂ ನಿಂದೆಗೆ ನಿಂದೆಯನ್ನು ಮಾಡದೆ ಆಶೀರ್ವದಿಸಿರಿ. ಇದಕ್ಕಾಗಿ ದೇವರು ನಿಮ್ಮನ್ನು ಕರೆದನಲ್ಲಾ; ಹೀಗೆ ಮಾಡುವವರಾದ ನೀವು ಆಶೀರ್ವಾದವನ್ನು ಬಾಧ್ಯವಾಗಿ ಹೊಂದುವಿ ರೆಂದು ನಿಮಗೆ ತಿಳಿದದೆಯಲ್ಲಾ.
- Jude 1:9 ಯೂದನು 1:9ಆದರೂ ಪ್ರಧಾನ ದೇವದೂತನಾದ ಮಿಕಾಯೇಲನು ಮೋಶೆಯ ಶವದ ವಿಷಯದಲ್ಲಿ ಸೈತಾನನೊಂದಿಗೆ ವ್ಯಾಜ್ಯವಾಡಿ ವಾಗ್ವಾದ ಮಾಡಿದಾಗ ಅವನು ಸೈತಾನನನ್ನು ದೂಷಿಸುವದಕ್ಕೆ ಧೈರ್ಯ ಗೊಳ್ಳದೆ--ಕರ್ತನು ನಿನ್ನನ್ನು ಗದರಿಸಲಿ ಅಂದನು.
- Proverbs 17:14 ಜ್ಞಾನೋಕ್ತಿಗಳು 17:14ಒಬ್ಬನು ನೀರನ್ನು ಹೊರಬಿಡುವಂತೆ ಕಲಹದ ಪ್ರಾರಂಭವು ಇರುವದು. ಆದಕಾರಣ ಆ ಕಲಹಕ್ಕೆ ಕೈ ಹಾಕುವದಕ್ಕಿಂತ ಮುಂಚೆ ಅದನ್ನು ಬಿಟ್ಟುಬಿಡು.
- 1 Kings 12:14 1 ಅರಸುಗಳು 12:14ನನ್ನ ತಂದೆಯು ನಿಮ್ಮ ನೊಗವನ್ನು ಭಾರವಾಗ ಮಾಡಿದನು; ನಾನು ಅದಕ್ಕೆ ಕೂಡಿಸುವೆನು; ನನ್ನ ತಂದೆಯು ನಿಮ್ಮನ್ನು ಕೊರಡೆಗಳಿಂದ ಶಿಕ್ಷಿಸಿದನು; ನಾನು ನಿಮ್ಮನ್ನು ಚೇಳುಗಳಿಂದ ಶಿಕ್ಷಿಸುವೆನು ಅಂದನು.
- 2 Kings 14:8–10 2 ಅರಸುಗಳು 14:8–10ಆಗ ಅಮಚ್ಯನು ಇಸ್ರಾಯೇಲ್ಯರ ಅರಸನಾದ ಯೇಹುವಿನ ಮಗನಾಗಿರುವ ಯೆಹೋವಾಹಾಜನ ಮಗನಾದ ಯೋವಾಷನ ಬಳಿಗೆ ಸೇವಕರನ್ನು ಕಳು ಹಿಸಿ--ನಾವು ಒಬ್ಬರ ಮುಖವನ್ನು ಒಬ್ಬರು ನೋಡುವ ಹಾಗೆ ಬಾ ಎಂದು ಹೇಳಿದನು. ಆದರೆ ಇಸ್ರಾಯೇಲಿನ ಅರಸನಾದ ಯೆಹೋವಾಷನು ಯೆಹೂದದ ಅರಸ ನಾಗಿರುವ ಅಮಚ್ಯನಿಗೆ ಹೇಳಿ ಕಳುಹಿಸಿದ್ದೇನಂದರೆಲೆಬನೋನಿನಲ್ಲಿದ್ದ ಮುಳ್ಳು ಗಿಡವು ಲೆಬನೋನಿನ ಲ್ಲಿರುವ ದೇವದಾರಿಗೆ -- ನನ್ನ ಮಗನಿಗೆ ಹೆಂಡತಿ ಯಾಗಿರಲು ನೀನು ನಿನ್ನ ಮಗಳನ್ನು ಕೊಡು ಎಂದು ಹೇಳಿ ಕಳುಹಿಸಿತು. ಆದರೆ ಲೆಬನೋನಿನಲ್ಲಿದ್ದ ಅಡವಿಯ ಮೃಗವು ಹಾದು ಹೋಗುತ್ತಿರುವಾಗ ಆ ಮುಳ್ಳು ಗಿಡವನ್ನು ತುಳಿಯಿತು. ನೀನು ಎದೋಮ್ಯ ರನ್ನು ಹೊಡೆದೇ ಹೊಡೆದದ್ದರಿಂದ ನಿನ್ನ ಹೃದಯವು ನಿನ್ನನ್ನು ಹೆಚ್ಚಿಸುವಂತೆ ಮಾಡಿತು. ಹೆಚ್ಚಳಪಡು; ಮನೆಯಲ್ಲಿ ಕಾದಿರು; ನಿನ್ನ ಕೇಡಿಗಾಗಿ ನೀನು ಯಾಕೆ ಜಗಳವಾಡಬೇಕು? ನೀನೂ ನಿನ್ನ ಸಂಗಡ ಯೆಹೂ ದವೂ ಬಿದ್ದು ಹೋಗುವಿರಲ್ಲಾ ಅಂದನು. ಆದರೆ ಅಮಚ್ಯನು ಕೇಳದೆ ಹೋದನು.
- 2 Samuel 19:41–43 2 ಸಮುವೇಲನು 19:41–43ಇಗೋ, ಇಸ್ರಾಯೇಲ್ ಜನರೆಲ್ಲರೂ ಅರಸನ ಬಳಿಗೆ ಬಂದು ಅರಸನಿಗೆ--ನಮ್ಮ ಸಹೋದರರಾದ ಯೆಹೂದ ಜನರು ಕಳ್ಳತನವಾಗಿ ನಿನ್ನನ್ನು ಕರ ತಂದದ್ದೇನು? ಅರಸನನ್ನೂ ಅವನ ಮನೆಯವರನ್ನೂ ಅವನ ಸಂಗಡ ಇರುವ ದಾವೀದನ ಎಲ್ಲಾ ಜನರನ್ನೂ ಯೊರ್ದನನ್ನು ದಾಟಿಸಿದ್ದೇನು ಅಂದರು. ಆಗ ಯೆಹೂದ ಜನರೆಲ್ಲರೂ ಇಸ್ರಾಯೇಲ್ ಜನರಿಗೆ ಪ್ರತ್ಯುತ್ತರವಾಗಿ--ಅರಸನು ನಮಗೆ ಸವಿಾಪ ಬಂಧು ವಾದದರಿಂದ; ಈ ಕಾರ್ಯಕ್ಕೋಸ್ಕರ ನೀವು ಕೋಪ ವಾಗಿರುವದೇನು? ನಾವು ಅರಸನ ಖರ್ಚಿನಿಂದ ಏನಾದರೂ ಊಟ ಮಾಡಿದೆವೋ? ಅವನು ನಮಗೆ ಏನಾದರೂ ಕೊಟ್ಟನೋ ಅಂದರು.ಆದರೆ ಇಸ್ರಾ ಯೇಲ್ ಜನರು ಯೆಹೂದ ಜನರಿಗೆ ಪ್ರತ್ಯುತ್ತರ ವಾಗಿ--ಅರಸನಲ್ಲಿ ನಮಗೆ ಹತ್ತು ಪಾಲುಂಟು; ನಿಮಗಿಂತ ನಮಗೆ ದಾವೀದನ ಬಾಧ್ಯತೆಯು ಅಧಿಕವಾಗಿದೆ. ನಮ್ಮ ಅರಸನನ್ನು ತಿರಿಗಿ ಕರಕೊಂಡು ಬರುವದರ ವಿಷಯದಲ್ಲಿ ಮೊದಲು ಮಾತನಾಡಿ ದವರು ನಾವಲ್ಲವೋ? ಹಾಗಾದರೆ ನಮ್ಮನ್ನು ಯಾಕೆ ಅಲ್ಪವಾಗಿ ಎಣಿಸಿದಿರಿ ಅಂದರು. ಆದರೆ ಇಸ್ರಾಯೇಲ್ ಜನರ ಮಾತುಗಳಿಗಿಂತ ಯೆಹೂದ ಜನರ ಮಾತುಗಳು ಕಠಿಣವಾಗಿದ್ದವು. ಆದರೆ ಇಸ್ರಾ ಯೇಲ್ ಜನರು ಯೆಹೂದ ಜನರಿಗೆ ಪ್ರತ್ಯುತ್ತರ ವಾಗಿ--ಅರಸನಲ್ಲಿ ನಮಗೆ ಹತ್ತು ಪಾಲುಂಟು; ನಿಮಗಿಂತ ನಮಗೆ ದಾವೀದನ ಬಾಧ್ಯತೆಯು ಅಧಿಕವಾಗಿದೆ. ನಮ್ಮ ಅರಸನನ್ನು ತಿರಿಗಿ ಕರಕೊಂಡು ಬರುವದರ ವಿಷಯದಲ್ಲಿ ಮೊದಲು ಮಾತನಾಡಿ ದವರು ನಾವಲ್ಲವೋ? ಹಾಗಾದರೆ ನಮ್ಮನ್ನು ಯಾಕೆ ಅಲ್ಪವಾಗಿ ಎಣಿಸಿದಿರಿ ಅಂದರು. ಆದರೆ ಇಸ್ರಾಯೇಲ್ ಜನರ ಮಾತುಗಳಿಗಿಂತ ಯೆಹೂದ ಜನರ ಮಾತುಗಳು ಕಠಿಣವಾಗಿದ್ದವು.
- Judges 12:1–6 ನ್ಯಾಯಸ್ಥಾಪಕರು 12:1–6ಎಫ್ರಾಯಾಮಿನ ಜನರು ಕೂಡಿಕೊಂಡು ಉತ್ತರಕ್ಕೆ ಹೋಗಿ ಯೆಪ್ತಾಹನಿಗೆ--ನೀನು ಅಮ್ಮೋನನ ಮಕ್ಕಳ ಮೇಲೆ ಯುದ್ಧಮಾಡುವದಕ್ಕೆ ಹೋದಾಗ ನಮ್ಮನ್ನು ಯಾಕೆ ನಿನ್ನ ಸಂಗಡ ಹೋಗಲು ಕರೇಕಳುಹಿಸಲಿಲ್ಲ? ನಾವು ನಿನ್ನನ್ನೂ ನಿನ್ನ ಮನೆಯನ್ನೂ ಬೆಂಕಿಯಿಂದ ಸುಟ್ಟು ಬಿಡುವೆವು ಅಂದರು. ಯೆಪ್ತಾ ಹನು ಅವರಿಗೆ--ನನಗೂ ನಮ್ಮ ಜನಕ್ಕೂ ಅಮ್ಮೋನನ ಮಕ್ಕಳ ಸಂಗಡ ದೊಡ್ಡ ವ್ಯಾಜ್ಯವಿರುವಾಗ ನಾನು ನಿಮ್ಮನ್ನು ಕರೆದೆನು; ಆದರೆ ನೀವು ನನ್ನನ್ನು ಅವರ ಕೈಯಿಂದ ಬಿಡಿಸಿ ರಕ್ಷಿಸಲಿಲ್ಲ. ನೀವು ನನ್ನನ್ನು ರಕ್ಷಿಸುವದಿ ಲ್ಲವೆಂದು ನಾನು ಕಂಡು ನನ್ನ ಪ್ರಾಣವನ್ನು ಕೈಯಲ್ಲಿ ಹಿಡುಕೊಂಡು ಅಮ್ಮೋನನ ಮಕ್ಕಳಿಗೆ ವಿರೋಧವಾಗಿ ಹೋದೆನು; ಕರ್ತನು ಅವರನ್ನು ನನ್ನ ಕೈಯಲ್ಲಿ ಒಪ್ಪಿಸಿ ಕೊಟ್ಟನು. ನೀವು ನನ್ನ ಸಂಗಡ ಯುದ್ಧಮಾಡುವದಕ್ಕೆ ಈಹೊತ್ತು ನನಗೆ ವಿರೋಧವಾಗಿ ಯಾಕೆ ಬಂದಿರಿ ಅಂದನು. ಆಗ ಯೆಪ್ತಾಹನು ಗಿಲ್ಯಾದ್ ಜನರೆಲ್ಲರನ್ನು ಕೂಡಿಸಿ ಎಫ್ರಾಯಾಮ್ಯರ ಸಂಗಡ ಯುದ್ಧ ಮಾಡಿ ದನು. ಗಿಲ್ಯಾದ್ಯರಾದ ನೀವು ಎಫ್ರಾಯಾಮ್ ಮನಸ್ಸೆ ಯವರೊಳಗಿಂದ ತಪ್ಪಿಸಿಕೊಂಡ ಎಫ್ರಾಯಾಮ್ಯರು ಎಂದು ಎಫ್ರಾಯಾಮ್ಯರು ಹೇಳಿದ್ದರಿಂದ ಗಿಲ್ಯಾದ್ಯರು ಎಫ್ರಾಯಾಮ್ಯರನ್ನು ಹೊಡೆದರು. ಗಿಲ್ಯಾದ್ಯರು ಎಫ್ರಾಯಾಮ್ಯರ ಮುಂದುಗಡೆ ಇರುವ ಯೊರ್ದನಿನ ರೇವುಗಳನ್ನು ಹಿಡಿದರು. ಆಗ ಏನಾಯಿತಂದರೆ--ಎಫ್ರಾಯಾಮ್ಯರಲ್ಲಿ ತಪ್ಪಿಸಿಕೊಂಡ ಯಾವನಾದರೂ ಬಂದು--ದಾಟುತ್ತೇನೆ ಎಂದು ಹೇಳಿದರೆ; ಗಿಲ್ಯಾ ದ್ಯರು--ನೀನು ಎಫ್ರಾಯಾಮ್ಯನೋ? ಎಂದು ಅವ ನನ್ನು ಕೇಳಿದಾಗ ಅವನು--ಅಲ್ಲ ಅಂದರೆ ಅವನಿಗೆ ನೀವು--ಷಿಬ್ಬೋಲೆತ್ ಅನ್ನಬೇಕು ಅಂದರು. ಆಗ ಅವನು ಹಾಗೆ ಹೇಳಲಾರದೆ ಸಿಬ್ಬೋಲೆತ್ ಅನ್ನುವನು. ಆಗ ಅವನನ್ನು ಹಿಡಿದು ಯೊರ್ದನಿನ ರೇವುಗಳ ಬಳಿಯಲ್ಲಿ ಕೊಂದುಹಾಕಿದರು. ಹೀಗೆ ಆ ಕಾಲದಲ್ಲಿ ಎಫ್ರಾಯಾಮ್ಯರೊಳಗೆ ನಾಲ್ವತ್ತೆರಡು ಸಾವಿರ ಜನರು ಸತ್ತುಹೋದರು.
- 1 Kings 12:16 1 ಅರಸುಗಳು 12:16ಅರಸನು ಅವರ ಮಾತನ್ನು ಕೇಳದೆ ಹೋದನೆಂದು ಸಮಸ್ತ ಇಸ್ರಾಯೇಲ್ಯರು ನೋಡಿದಾಗ ಜನರು ಅರಸನಿಗೆ ಪ್ರತ್ಯುತ್ತರವಾಗಿ ದಾವೀದನಲ್ಲಿ ನಮಗೆ ಭಾಗವೇನು? ಇಷಯನ ಮಗನಲ್ಲಿ ನಮಗೆ ಬಾಧ್ಯತೆ ಏನು? ಇಸ್ರಾ ಯೇಲ್ಯರೇ, ನಿಮ್ಮ ಡೇರೆಗಳಿಗೆ ಹೋಗಿರಿ; ದಾವೀ ದನೇ, ಈಗ ನಿನ್ನ ಮನೆಯನ್ನು ನೋಡಿಕೋ ಎಂದು ಹೇಳಿ ಇಸ್ರಾಯೇಲ್ಯರು ತಮ್ಮ ತಮ್ಮ ಡೇರೆಗಳಿಗೆ ಹೋದರು.
- Isaiah 36:21 ಯೆಶಾಯ 36:21ಅದರೆ ಅವರು ಅವನಿಗೆ ಒಂದು ಮಾತನ್ನಾದರೂ ಉತ್ತರ ಕೊಡದೆ ಸುಮ್ಮನಿದ್ದರು. ಯಾಕಂದರೆ ಅವನಿಗೆ ಉತ್ತರ ಕೊಡಬೇಡಿರೆಂದು ಅರಸನ ಆಜ್ಞೆಯಾಗಿತ್ತು.ಆಗ ಹಿಲ್ಕೀಯನ ಮಗನೂ ಮನೆಯ ಮೇಲ್ವಿಚಾರಕನೂ ಆಗಿದ್ದ ಎಲ್ಯಾಕೀಮನು ಮತ್ತು ಲೇಖಕನಾದ ಶೆಬ್ನ, ಆಸಾಫನ ಮಗನೂ ಬರೆಯುವವನೂ ಆದ ಯೋವ ಎಂಬವರು ತಮ್ಮ ಬಟ್ಟೆಗಳನ್ನು ಹರಿದು ಕೊಂಡು ಹಿಜ್ಕೀಯನ ಬಳಿಗೆ ಬಂದು ಅವನಿಗೆ ರಬ್ಷಾಕೆಯ ಮಾತುಗಳನ್ನು ತಿಳಿಸಿದರು.
- 1 Peter 2:21–23 1 ಪೇತ್ರನು 2:21–23ಇದ ಕ್ಕಾಗಿಯೇ ನೀವು ಕರೆಯಲ್ಪಟ್ಟಿರಿ; ಕ್ರಿಸ್ತನು ಸಹ ನಮಗೋಸ್ಕರ ಬಾಧೆಯನ್ನನುಭವಿಸಿ ನೀವು ತನ್ನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು ನಮಗೆ ಮಾದರಿಯನ್ನು ಬಿಟ್ಟು ಹೋದನು. ಆತನು ಯಾವ ಪಾಪವನ್ನೂ ಮಾಡಲಿಲ್ಲ, ಆತನ ಬಾಯಲ್ಲಿ ಯಾವ ವಂಚನೆಯೂ ಸಿಕ್ಕಲಿಲ್ಲ. ಬೈಯುವವರನ್ನು ಆತನು ಪ್ರತಿಯಾಗಿ ಬೈಯಲಿಲ್ಲ; ಆತನು ಬಾಧೆಯನ್ನನು ಭವಿಸಿದಾಗ ಯಾರನ್ನೂ ಬೆದರಿಸದೆ ನ್ಯಾಯವಾಗಿ ತೀರ್ಪುಮಾಡುವಾತನಿಗೆ ತನ್ನನ್ನು ಒಪ್ಪಿಸಿದನು.