Proverbs · chapter 27 · verse 14
Proverbs 27:14 in Kannada
ಮುಂಜಾನೆ ಎದ್ದು ತನ್ನ ಸ್ನೇಹಿತನನ್ನು ದೊಡ್ಡ ಕೂಗಿನಿಂದ ಆಶೀರ್ವದಿಸುವವನಿಗೆ ಅದು ಶಾಪವೆಂದು ಎಣಿಸಲ್ಪಡುವದು.
Munjaane eddu tanna snehitanannu dodda koogininda aasheervadisuvavanige adu shaapavendu enisalpaduvadu.
Proverbs 27:14 in English
- King James Version (KJV)
- He that blesseth his friend with a loud voice, rising early in the morning, it shall be counted a curse to him.
- World English Bible (WEB)
- He who blesses his neighbor with a loud voice early in the morning, it will be taken as a curse by him.
- American Standard Version (ASV)
- He that blesseth his friend with a loud voice, rising early in the morning, It shall be counted a curse to him.
- Bible in Basic English (BBE)
- He who gives a blessing to his friend with a loud voice, getting up early in the morning, will have it put to his account as a curse.
- Darby Translation (DBY)
- He that blesseth his friend with a loud voice, rising early in the morning, it shall be reckoned a curse to him.
- Webster's Bible (WBS)
- He that blesseth his friend with a loud voice, rising early in the morning, it shall be counted a curse to him.
- Young's Literal Translation (YLT)
- Whoso is saluting his friend with a loud voice, In the morning rising early, A light thing it is reckoned to him.
Read in context
- 12ಜಾಣನು ಕೇಡನ್ನು ಮುಂದಾಗಿ ನೋಡಿ ಅಡಗಿಕೊಳ್ಳುತ್ತಾನೆ; ಬುದ್ಧಿಹೀನನು ಮುಂದೆ ಹೋಗಿ ಶಿಕ್ಷಿಸಲ್ಪಡುತ್ತಾನೆ.
- 13ಪರನಿಗಾಗಿ ಹೊಣೆಯಾದವನ ವಸ್ತ್ರವನ್ನು ತೆಗೆದು ಕೊಂಡು ಮತ್ತೊಬ್ಬನಿಗಾಗಿ ಅವನಿಂದ ಒತ್ತೆಯನ್ನು ತೆಗೆದುಕೋ.
- 14ಮುಂಜಾನೆ ಎದ್ದು ತನ್ನ ಸ್ನೇಹಿತನನ್ನು ದೊಡ್ಡ ಕೂಗಿನಿಂದ ಆಶೀರ್ವದಿಸುವವನಿಗೆ ಅದು ಶಾಪವೆಂದು ಎಣಿಸಲ್ಪಡುವದು.
- 15ದೊಡ್ಡ ಮಳೆಯ ದಿವಸದಲ್ಲಿ ಬಿಡದೆ ತೊಟ್ಟಿಕ್ಕುವಂತದ್ದೂ ಕಲಹ ಮಾಡುವ ಸ್ತ್ರೀಯೂ ಸಮಾನ.
- 16ಅವಳನ್ನು ಅಡಗಿಸು ವವನು ಗಾಳಿಯನ್ನೂ ತನ್ನನ್ನು ರಟ್ಟುಮಾಡುವ ಅವನ ಬಲಗೈಯ ತೈಲವನ್ನೂ ಅಡಗಿಸುತ್ತಾನೆ.
Cross references
- 2 Samuel 16:16–19 2 ಸಮುವೇಲನು 16:16–19ಅರ್ಕೀಯನಾದ ಹೂಷೈ ಯೆಂಬ ದಾವೀದನ ಸ್ನೇಹಿತನು ಅಬ್ಷಾಲೋಮನ ಬಳಿಗೆ ಬಂದು--ಅರಸನು ಬಾಳಲಿ, ಅರಸನು ಬಾಳಲಿ ಅಂದನು. ಅಬ್ಷಾಲೋಮನು ಅವನಿಗೆ--ಸ್ನೇಹಿತನ ಮೇಲೆ ನಿನಗಿದ್ದ ಪ್ರೀತಿ ಇಷ್ಟೇಯೇನು? ನೀನು ನಿನ್ನ ಸ್ನೇಹಿತನೊಡನೆ ಯಾಕೆ ಹೋಗಲಿಲ್ಲ ಅಂದನು. ಹೂಷೈ ಅಬ್ಷಾಲೋಮನಿಗೆ--ಹಾಗಲ್ಲ, ಆದರೆ ಕರ್ತನೂ ಈ ಜನವೂ ಇಸ್ರಾಯೇಲಿನ ಎಲ್ಲಾ ಜನರೂ ಯಾರನ್ನು ಆದುಕೊಳ್ಳುವರೋ ನಾನೂ ಅವನ ಪಕ್ಷದವನಾಗಿರುವೆನು; ನಾನು ಅವನ ಬಳಿಯಲ್ಲಿ ಇರುವೆನು. ಇದಲ್ಲದೆ ನಾನು ಯಾರನ್ನು ಸೇವಿಸತಕ್ಕದ್ದು? ಅವನ ಮಗನ ಸಮ್ಮುಖ ದಲ್ಲಿ ಅಲ್ಲವೇ? ನಾನು ನಿನ್ನ ತಂದೆಯ ಸಮ್ಮುಖದಲ್ಲಿ ಹೇಗೆ ಸೇವಿಸಿದೆನೋ ಹಾಗೆಯೇ ನಿನ್ನ ಸಮ್ಮುಖದಲ್ಲಿ ಇರುವೆನು ಅಂದನು.
- Acts 12:22–23 ಅಪೊಸ್ತಲರ ಕೃತ್ಯಗಳು 12:22–23ಆಗ ಜನರು--ಇದು ಮನುಷ್ಯನ ಸ್ವರವಲ್ಲ, ದೇವರ ಸ್ವರವೇ ಎಂದು ಅರ್ಭಟಿಸಿದರು. ಅವನು ದೇವರಿಗೆ ಮಹಿಮೆ ಸಲ್ಲಿಸದೆ ಹೋದದರಿಂದ ಕರ್ತನ ದೂತನು ಆ ಕ್ಷಣದಲ್ಲೇ ಅವನನ್ನು ಹೊಡೆದನು; ಆಗ ಅವನನ್ನು ಹುಳಗಳು ತಿಂದದ್ದರಿಂದ ಅವನು ಪ್ರಾಣ ಬಿಟ್ಟನು.
- Jeremiah 28:2–4 ಯೆರೆಮೀಯ 28:2–4ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನಾನು ಬಾಬೆಲಿನ ಅರಸನ ನೊಗವನ್ನು ಮುರಿದಿದ್ದೇನೆ. ಎರಡು ವರುಷದೊಳ ಗಾಗಿ ನಾನು ಬಾಬೆಲಿನ ಅರಸನಾದ ನೆಬೂಕ ದ್ನೆಚ್ಚರನು ಈ ಸ್ಥಳದಿಂದ ತಕ್ಕೊಂಡು ಬಾಬೆಲಿಗೆ ಒಯ್ದ ಕರ್ತನ ಆಲಯದ ಪಾತ್ರೆಗಳನ್ನೆಲ್ಲಾ ತಿರುಗಿಸುವೆನು. ಯೆಹೂ ದದ ಅರಸನಾದ ಯೆಹೋಯಾಕೀಮನ ಮಗನಾದ ಯೆಕೊನ್ಯನನ್ನೂ ಬಾಬೆಲಿಗೆ ಹೋದ ಯೆಹೂದದ ಸೆರೆಯವರೆಲ್ಲರನ್ನೂ ನಾನು ತಿರುಗಿ ಈ ಸ್ಥಳಕ್ಕೆ ಬರ ಮಾಡುವೆನೆಂದು ಕರ್ತನು ಅನ್ನುತ್ತಾನೆ; ಬಾಬೆಲಿನ ಅರಸನ ನೊಗವನ್ನು ಮುರಿದುಬಿಡುವೆನು.
- 2 Samuel 15:2–7 2 ಸಮುವೇಲನು 15:2–7ಇದಲ್ಲದೆ ಅಬ್ಷಾಲೋಮನು ಬೆಳಿಗ್ಗೆ ಎದ್ದು ಬಾಗಲ ಬಳಿಯಲ್ಲಿ ನಿಂತುಕೊಂಡು ವ್ಯಾಜ್ಯ ಉಂಟಾದವನು ಯಾವನಾದರೂ ನ್ಯಾಯ ಕ್ಕೋಸ್ಕರ ಅರಸನ ಬಳಿಗೆ ಬರುವವನಾಗಿದ್ದರೆ ಅವನನ್ನು ಕರೆದು--ನೀನು ಯಾವ ಪಟ್ಟಣದವನೆಂದು ಕೇಳು ವನು. ಅದಕ್ಕವನು--ನಿನ್ನ ಸೇವಕನು ಇಸ್ರಾಯೇಲ್ ಗೋತ್ರಗಳಲ್ಲಿ ಒಬ್ಬನೆಂದು ಹೇಳಿದರೆ ಅಬ್ಷಾಲೋ ಮನು ಅವನಿಗೆ--ನೋಡು, ನಿನ್ನ ಕಾರ್ಯಗಳು ಒಳ್ಳೆಯವೂ ಯುಕ್ತವೂ ಆದವುಗಳು; ಆದರೆ ಅರಸನ ಬಳಿಯಲ್ಲಿ ನಿನ್ನನ್ನು ವಿಚಾರಿಸುವದಕ್ಕೆ ಯಾವನೂ ಇಲ್ಲ. ಇದಲ್ಲದೆ ಅಬ್ಷಾಲೋಮನು--ನಾನು ದೇಶದ ಮೇಲೆ ನ್ಯಾಯಾಧಿಪತಿಯಾಗಿ ಮಾಡಲ್ಪಟ್ಟಿದ್ದರೆ ಎಷ್ಟೋ ಒಳ್ಳೆಯದು; ಆಗ ವ್ಯಾಜ್ಯವಾದರೂ ನ್ಯಾಯವಿಚಾರಣೆ ಯಾದರೂ ಇದ್ದ ಪ್ರತಿ ಮನುಷ್ಯನು ನನ್ನ ಬಳಿಗೆ ಬಂದರೆ ನಾನು ಅವನಿಗೆ ನೀತಿಯಿಂದ ನ್ಯಾಯ ತೀರಿಸುವೆನು ಅನ್ನುವನು. ಯಾವನಾದರೂ ತನಗೆ ವಂದಿಸುವದಕ್ಕೆ ತನ್ನ ಬಳಿಗೆ ಬಂದರೆ ತನ್ನ ಕೈಯನ್ನು ಚಾಚಿ ಅವನನ್ನು ಹಿಡಿದು ಮುದ್ದಿಟ್ಟುಕೊಳ್ಳುತ್ತಿದ್ದನು. ಈ ಪ್ರಕಾರ ಅಬ್ಷಾಲೋಮನು ನ್ಯಾಯಕ್ಕೋಸ್ಕರ ಅರಸನ ಬಳಿಗೆ ಬರುವ ಇಸ್ರಾಯೇಲ್ಯರೆಲ್ಲರಿಗೆ ಮಾಡಿ ದನು. ಈ ರೀತಿಯಲ್ಲಿ ಅಬ್ಷಾಲೋಮನು ಇಸ್ರಾ ಯೇಲ್ಯರಿಗೆ ಮಾಡಿದನು. ಹೀಗೆ ಅಬ್ಷಾಲೋಮನು ಇಸ್ರಾಯೇಲ್ಯರ ಹೃದಯಗಳನ್ನು ಕದ್ದುಕೊಂಡನು. ನಾಲ್ಕು ವರುಷಗಳಾದ ತರುವಾಯ ಅಬ್ಷಾಲೋ ಮನು ಅರಸನಿಗೆ--ನಾನು ಕರ್ತನಿಗೆ ಮಾಡಿಕೊಂಡಿದ್ದ ನನ್ನ ಪ್ರಮಾಣವನ್ನು ಹೆಬ್ರೋನಿನಲ್ಲಿ ಸಲ್ಲಿಸಲು ಹೋಗುವದಕ್ಕೆ ಅಪ್ಪಣೆಕೊಡಬೇಕು.
- 2 Samuel 17:7–13 2 ಸಮುವೇಲನು 17:7–13ಆಗ ಹೂಷೈ ಅಬ್ಷಾಲೋಮ ನಿಗೆ--ಅಹೀತೋಫೆಲನು ಹೇಳಿದ ಆಲೋಚನೆಯು ಈ ವೇಳೆಗೆ ಒಳ್ಳೇದಲ್ಲ. ನಿನ್ನ ತಂದೆಯೂ ಅವನ ಜನರೂ ಪರಾಕ್ರಮಶಾಲಿಗಳು; ಅವರು ಅಡವಿಯಲ್ಲಿ ಮರಿಗಳನ್ನು ಕಳಕೊಂಡ ಕರಡಿಯ ಹಾಗೆ ರೋಷ ವುಳ್ಳವರಾಗಿದ್ದಾರೆಂದು ನೀನು ಬಲ್ಲೆ. ಇದಲ್ಲದೆ ನಿನ್ನ ತಂದೆಯು ಶೂರನು; ಅವನು ರಾತ್ರಿಯಲ್ಲಿ ಜನರ ಸಂಗಡ ತಂಗುವದಿಲ್ಲ. ಇಗೋ, ಅವನು ಈಗ ಒಂದು ಗವಿಯಲ್ಲಾದರೂ ಒಂದು ಸ್ಥಳದಲ್ಲಾದರೂ ಅಡಗಿಕೊಂಡಿರುವನು. ಮೊದಲೇ ಇವರಲ್ಲಿ ಕೆಲವರು ಸತ್ತರೆ ಅದನ್ನು ಕೇಳು ವವರು ಅಬ್ಷಾಲೋಮನನ್ನು ಹಿಂಬಾಲಿಸುವ ಜನರಲ್ಲಿ ಸಂಹಾರವಾಯಿತೆಂದು ಹೇಳುವರು. ಆಗ ಸಿಂಹದ ಹೃದಯವುಳ್ಳ ಪರಾಕ್ರಮಶಾಲಿಯ ಹೃದಯವೂ ಸಹ ಸಂಪೂರ್ಣ ಕರಗುವದು. ಇದಲ್ಲದೆ ನಿನ್ನ ತಂದೆಯು ಶೂರನೆಂದೂ ಅವನ ಸಂಗಡ ಇರುವವರು ಪರಾ ಕ್ರಮಶಾಲಿಗಳೆಂದೂ ಇಸ್ರಾಯೇಲ್ಯರೆಲ್ಲರು ಬಲ್ಲರು. ನಾನು ಹೇಳುವ ಆಲೋಚನೆ ಏನಂದರೆ, ದಾನಿ ನಿಂದ ಬೇರ್ಷೆಬದ ವರೆಗೂ ಇರುವ ಸಮುದ್ರದ ಮರಳಿನಷ್ಟು ಅಸಂಖ್ಯವಾದ ಇಸ್ರಾಯೇಲ್ಯರು ನಿನ್ನ ಬಳಿಯಲ್ಲಿ ಕೂಡಿಸಲ್ಪಟ್ಟ ತರುವಾಯ ನೀನೇ ಯುದ್ಧಕ್ಕೆ ಹೋಗಬೇಕು. ಆಗ ನಾವು ಅವನನ್ನು ಕಂಡು ಕೊಳ್ಳುವ ಸ್ಥಳದಲ್ಲಿ ಅವನ ಮೇಲೆ ಬಂದು ಭೂಮಿಯ ಮೇಲೆ ಮಂಜು ಬೀಳುವ ಹಾಗೆ ಅವನ ಮೇಲೆ ಬೀಳುವೆವು. ಅವನೂ ಅವನ ಸಂಗಡವಿರುವ ಎಲ್ಲಾ ಜನರಲ್ಲಿ ಒಬ್ಬನಾದರೂ ಉಳಿಯುವದಿಲ್ಲ. ಅವನು ಒಂದು ವೇಳೆ ಒಂದು ಪಟ್ಟಣದಲ್ಲಿ ಹೊಕ್ಕರೆ ಇಸ್ರಾಯೇಲ್ಯರೆಲ್ಲರು ಆ ಪಟ್ಟಣಕ್ಕೆ ಹಗ್ಗಗಳನ್ನು ತಂದು ಹಾಕಿದ ತರುವಾಯ ನಾವು ಒಂದು ಹರಳಾದರೂ ಅಲ್ಲಿ ಕಾಣದ ಹಾಗೆ ಅದನ್ನು ನದಿಗೆ ಎಳೆದು ಹಾಕುವೆವು ಅಂದನು.
- 1 Kings 22:6 1 ಅರಸುಗಳು 22:6ಆಗ ಇಸ್ರಾಯೇಲಿನ ಅರಸನು ಹೆಚ್ಚು ಕಡಿಮೆ ನಾನೂರು ಮಂದಿ ಪ್ರವಾದಿಗಳನ್ನು ಕೂಡಿಸಿ--ನಾನು ಗಿಲ್ಯಾದಿನಲ್ಲಿರುವ ರಾಮೋತಿನ ಮೇಲೆ ಯುದ್ಧಕ್ಕೆ ಹೋಗಬಹುದೋ ಬೇಡವೋ ಎಂದು ಅವರನ್ನು ಕೇಳಿದನು. ಅದಕ್ಕವರು--ಹೋಗು; ಕರ್ತನು ಅದನ್ನು ಅರಸನ ಕೈಯಲ್ಲಿ ಒಪ್ಪಿಸಿಕೊಡುವನು ಅಂದರು.
- 1 Kings 22:13 1 ಅರಸುಗಳು 22:13ಆದರೆ ವಿಾಕಾಯೆಹುನನ್ನು ಕರೆಯಲು ಹೋದ ದೂತನು ಅವನಿಗೆ--ಇಗೋ, ಪ್ರವಾದಿಗಳ ವಾಕ್ಯಗಳು ಒಂದೇ ಬಾಯಿಂದ ಅರಸನಿಗೆ ಒಳ್ಳೇದನ್ನೇ ಪ್ರಕಟಿಸುತ್ತವೆ; ನಿನ್ನ ವಾಕ್ಯವು ಅವರಲ್ಲಿರುವ ಒಬ್ಬನ ವಾಕ್ಯದ ಹಾಗೆಯೇ ಇರಲಿ; ಒಳ್ಳೇ ಮಾತು ಆಡು ಅಂದನು.