Skip to content
ThuthiThuthiThuthi
Proverbs · chapter 27 of 31 · 27 verses

Proverbs 27 in Kannada

ಜ್ಞಾನೋಕ್ತಿಗಳು 27

  1. ನಾಳೆಯ ವಿಷಯವಾಗಿ ಕೊಚ್ಚಿಕೊಳ್ಳಬೇಡ; ಒಂದು ದಿನವು ಯಾವದನ್ನು ಸಂಭವಿಸುವಂತೆ ಮಾಡುತ್ತದೋ ಅದು ನಿನಗೆ ತಿಳಿ ಯದು.

    Boast not thyself of to morrow; for thou knowest not what a day may bring forth.

  2. ನಿನ್ನ ಸ್ವಂತ ಬಾಯಲ್ಲ, ಮತ್ತೊಬ್ಬನು ನಿನ್ನನ್ನು ಹೊಗಳಲಿ; ನಿನ್ನ ಸ್ವಂತ ತುಟಿಗಳಲ್ಲ, ಪರನೇ ನಿನ್ನನ್ನು ಹೊಗಳಲಿ.

    Let another man praise thee, and not thine own mouth; a stranger, and not thine own lips.

  3. ಕಲ್ಲು ಭಾರ, ಮರಳು ಭಾರ; ಇವೆರಡ ಕ್ಕಿಂತ ಮೂಢನ ಕೋಪವು ಬಹಳ ಭಾರ.

    A stone [is] heavy, and the sand weighty; but a fool’s wrath [is] heavier than them both.

  4. ಕ್ರೋಧವು ಕ್ರೂರ. ಕೋಪವು ಘೋರ; ಮತ್ಸರದ ಮುಂದೆ ಯಾವನು ನಿಂತಾನು?

    Wrath [is] cruel, and anger [is] outrageous; but who [is] able to stand before envy?

  5. ರಹಸ್ಯವಾದ ಪ್ರೀತಿಗಿಂತಲೂ ಬಹಿರಂಗವಾದ ಗದರಿಕೆಯೇ ಲೇಸು.

    Open rebuke [is] better than secret love.

  6. ಸ್ನೇಹಿತನು ಮಾಡುವ ಗಾಯಗಳು ನಂಬಿಕೆಯುಳ್ಳವುಗಳಾಗಿವೆ; ಶತ್ರುವಿನ ಮುದ್ದುಗಳು ಮೋಸಕರವಾಗಿವೆ.

    Faithful [are] the wounds of a friend; but the kisses of an enemy [are] deceitful.

  7. ತೃಪ್ತಿ ಹೊಂದಿದವನು ಜೇನು ತುಪ್ಪವನ್ನೂ ಅಸಹ್ಯಿಸಿಕೊಳ್ಳು ತ್ತಾನೆ; ಹಸಿದವನಿಗೆ ಕಹಿಯಾದ ಪ್ರತಿಯೊಂದು ವಸ್ತುವು ಸಿಹಿಯಾಗಿದೆ.

    The full soul loatheth an honeycomb; but to the hungry soul every bitter thing is sweet.

  8. ತನ್ನ ಸ್ಥಳವನ್ನು ಬಿಟ್ಟು ಅಲೆಯುವ ಮನುಷ್ಯನು ತನ್ನ ಗೂಡನ್ನು ಬಿಟ್ಟು ಅಲೆಯುವ ಪಕ್ಷಿ ಯಂತೆ ಇದ್ದಾನೆ.

    As a bird that wandereth from her nest, so [is] a man that wandereth from his place.

  9. ತೈಲವೂ ಸುಗಂಧ ದ್ರವ್ಯವೂ ಹೃದಯವನ್ನು ಸಂತೋಷಪಡಿಸುತ್ತದೆ, ಹಾಗೆಯೇ ಆದರಣೆಯ ಸಲಹೆಯಿಂದ ಸ್ನೇಹಿತನ ಮಧುರತ್ವವು ಇರುತ್ತದೆ.

    Ointment and perfume rejoice the heart: so [doth] the sweetness of a man’s friend by hearty counsel.

  10. ನಿನ್ನ ಸ್ನೇಹಿತನನ್ನೂ ನಿನ್ನ ತಂದೆಯ ಸ್ನೇಹಿತನನ್ನೂ ತ್ಯಜಿಸಬೇಡ; ಅಲ್ಲದೆ ನಿನ್ನ ಇಕ್ಕಟ್ಟಿನ ದಿನದಲ್ಲಿ ನಿನ್ನ ಸಹೋದರನ ಮನೆಗೆ ಹೋಗಬೇಡ; ದೂರವಾಗಿರುವ ಸಹೋದರನಿಗಿಂತ ಹತ್ತಿರವಾಗಿರುವ ನೆರೆಯವನೇ ಲೇಸು.

    Thine own friend, and thy father’s friend, forsake not; neither go into thy brother’s house in the day of thy calamity: [for] better [is] a neighbour [that is] near than a brother far off.

  11. ನಿನ್ನನ್ನು ನಿಂದಿಸುವವರಿಗೆ ಉತ್ತರಿಸುವಂತೆ ನಿನ್ನ ಹೃದಯವನ್ನು ಸಂತೋಷಪಡಿಸುವ ಹಾಗೆ ನನ್ನ ಮಗನೇ, ಜ್ಞಾನಿಯಾಗಿರು.

    My son, be wise, and make my heart glad, that I may answer him that reproacheth me.

  12. ಜಾಣನು ಕೇಡನ್ನು ಮುಂದಾಗಿ ನೋಡಿ ಅಡಗಿಕೊಳ್ಳುತ್ತಾನೆ; ಬುದ್ಧಿಹೀನನು ಮುಂದೆ ಹೋಗಿ ಶಿಕ್ಷಿಸಲ್ಪಡುತ್ತಾನೆ.

    A prudent [man] foreseeth the evil, [and] hideth himself; [but] the simple pass on, [and] are punished.

  13. ಪರನಿಗಾಗಿ ಹೊಣೆಯಾದವನ ವಸ್ತ್ರವನ್ನು ತೆಗೆದು ಕೊಂಡು ಮತ್ತೊಬ್ಬನಿಗಾಗಿ ಅವನಿಂದ ಒತ್ತೆಯನ್ನು ತೆಗೆದುಕೋ.

    Take his garment that is surety for a stranger, and take a pledge of him for a strange woman.

  14. ಮುಂಜಾನೆ ಎದ್ದು ತನ್ನ ಸ್ನೇಹಿತನನ್ನು ದೊಡ್ಡ ಕೂಗಿನಿಂದ ಆಶೀರ್ವದಿಸುವವನಿಗೆ ಅದು ಶಾಪವೆಂದು ಎಣಿಸಲ್ಪಡುವದು.

    He that blesseth his friend with a loud voice, rising early in the morning, it shall be counted a curse to him.

  15. ದೊಡ್ಡ ಮಳೆಯ ದಿವಸದಲ್ಲಿ ಬಿಡದೆ ತೊಟ್ಟಿಕ್ಕುವಂತದ್ದೂ ಕಲಹ ಮಾಡುವ ಸ್ತ್ರೀಯೂ ಸಮಾನ.

    A continual dropping in a very rainy day and a contentious woman are alike.

  16. ಅವಳನ್ನು ಅಡಗಿಸು ವವನು ಗಾಳಿಯನ್ನೂ ತನ್ನನ್ನು ರಟ್ಟುಮಾಡುವ ಅವನ ಬಲಗೈಯ ತೈಲವನ್ನೂ ಅಡಗಿಸುತ್ತಾನೆ.

    Whosoever hideth her hideth the wind, and the ointment of his right hand, [which] bewrayeth [itself].

  17. ಕಬ್ಬಿಣವು ಕಬ್ಬಿಣವನ್ನು ಹದಮಾಡುತ್ತದೆ; ಹಾಗೆಯೇ ಒಬ್ಬನು ತನ್ನ ಸ್ನೇಹಿತನ ಬುದ್ಧಿಯನ್ನು ಚುರುಕು ಮಾಡುತ್ತಾನೆ.

    Iron sharpeneth iron; so a man sharpeneth the countenance of his friend.

  18. ಅಂಜೂರದ ಮರವನ್ನು ಕಾಯುವವನು ಅದರ ಫಲವನ್ನು ತಿನ್ನುವನು; ಹಾಗೆಯೇ ತನ್ನ ಯಜಮಾನ ನಿಗಾಗಿ ಕಾಯುವವನು ಸನ್ಮಾನ ಹೊಂದುವನು.

    Whoso keepeth the fig tree shall eat the fruit thereof: so he that waiteth on his master shall be honoured.

  19. ನೀರಿನಲ್ಲಿ ಮುಖವು ಪ್ರತಿಬಿಂಬಿಸುವಂತೆ ಮನುಷ್ಯನ ಹೃದಯವು ಮಾಡುತ್ತದೆ.

    As in water face [answereth] to face, so the heart of man to man.

  20. ಪಾತಾಳಕ್ಕೂ ನಾಶನಕ್ಕೂ ತೃಪ್ತಿ ಇಲ್ಲವೇ ಇಲ್ಲ; ಹಾಗೆಯೇ ಮನುಷ್ಯ ಕಣ್ಣುಗಳು ಎಂದಿಗೂ ತೃಪ್ತಿಹೊಂದುವದಿಲ್ಲ.

    Hell and destruction are never full; so the eyes of man are never satisfied.

  21. ಬೆಳ್ಳಿ ಬಂಗಾರ ಗಳ ಪುಟಕ್ಕೆ ಕುಲುಮೆ ಹೇಗೆಯೋ ಹಾಗೆಯೇ ತನ್ನ ಹೊಗಳಿಕೆಗೆ ಮನುಷ್ಯನಿದ್ದಾನೆ.

    [As] the fining pot for silver, and the furnace for gold; so [is] a man to his praise.

  22. ಬುದ್ಧಿಹೀನನನ್ನು ಒರಳಿನಲ್ಲಿ ಗೋಧಿಯೊಂದಿಗೆ ಒನಕೆಯಿಂದ ಕುಟ್ಟಿ ದರೂ ಅವನಿಂದ ಮೂರ್ಖತನವು ತೊಲಗುವದಿಲ್ಲ.

    Though thou shouldest bray a fool in a mortar among wheat with a pestle, [yet] will not his foolishness depart from him.

  23. ನಿನ್ನ ಹಿಂಡುಗಳ ಸ್ಥಿತಿಯನ್ನು ತಿಳಿದುಕೊಳ್ಳುವಂತೆ ಶ್ರದ್ಧೆವಹಿಸು; ನಿನ್ನ ಮಂದೆಗಳನ್ನು ಚೆನ್ನಾಗಿ ನೋಡಿಕೋ.

    Be thou diligent to know the state of thy flocks, [and] look well to thy herds.

  24. ಐಶ್ವರ್ಯವು ಶಾಶ್ವತವಲ್ಲ; ಕಿರೀಟವು ಪ್ರತಿಯೊಂದು ವಂಶಾವಳಿಗೆ ಇರುತ್ತದೋ?

    For riches [are] not for ever: and doth the crown [endure] to every generation?

  25. ಹುಲ್ಲು ಕಾಣುತ್ತದೆ; ಹಸಿ ಹುಲ್ಲು ತನ್ನನ್ನೇ ತೋರುತ್ತದೆ, ಬೆಟ್ಟಗಳ ಸೊಪ್ಪು ಕೂಡಿಸಲ್ಪಡುತ್ತದೆ.

    The hay appeareth, and the tender grass sheweth itself, and herbs of the mountains are gathered.

  26. ನಿನ್ನ ವಸ್ತ್ರಕ್ಕಾಗಿ ಕುರಿಮರಿಗಳು ಮತ್ತು ಹೊಲದ ಕ್ರಯಕ್ಕಾಗಿ ನಿನ್ನ ಆಡುಗಳು ಇವೆ.ನಿನ್ನ ಊಟಕ್ಕಾಗಿಯೂ ನಿನ್ನ ಮನೆಯವರ ಆಹಾರ ಕ್ಕಾಗಿಯೂ ನಿನ್ನ ದಾಸಿಯರ ಜೀವನಕ್ಕಾಗಿಯೂ ಆಡುಗಳ ಹಾಲು ಸಾಕಾಗುತ್ತದೆ.

    The lambs [are] for thy clothing, and the goats [are] the price of the field.

  27. ನಿನ್ನ ಊಟಕ್ಕಾಗಿಯೂ ನಿನ್ನ ಮನೆಯವರ ಆಹಾರ ಕ್ಕಾಗಿಯೂ ನಿನ್ನ ದಾಸಿಯರ ಜೀವನಕ್ಕಾಗಿಯೂ ಆಡುಗಳ ಹಾಲು ಸಾಕಾಗುತ್ತದೆ.

    And [thou shalt have] goats’ milk enough for thy food, for the food of thy household, and [for] the maintenance for thy maidens.

All chapters of Proverbs · Kannada Bible · Proverbs 27 in Tamil

Kannada Bible: Kannada Old Version, public domain.

King James Version: public domain.