Proverbs · chapter 27 · verse 20
Proverbs 27:20 in Kannada
ಪಾತಾಳಕ್ಕೂ ನಾಶನಕ್ಕೂ ತೃಪ್ತಿ ಇಲ್ಲವೇ ಇಲ್ಲ; ಹಾಗೆಯೇ ಮನುಷ್ಯ ಕಣ್ಣುಗಳು ಎಂದಿಗೂ ತೃಪ್ತಿಹೊಂದುವದಿಲ್ಲ.
Paataalakkoo naashanakkoo trupti illave illa; haageye manushya kannugalu endigoo truptihonduvadilla.
Proverbs 27:20 in English
- King James Version (KJV)
- Hell and destruction are never full; so the eyes of man are never satisfied.
- World English Bible (WEB)
- Sheol and Abaddon are never satisfied; and a man’s eyes are never satisfied.
- American Standard Version (ASV)
- Sheol and Abaddon are never satisfied; And the eyes of man are never satisfied.
- Bible in Basic English (BBE)
- The underworld and Abaddon are never full, and the eyes of man have never enough.
- Darby Translation (DBY)
- Sheol and destruction are insatiable; so the eyes of man are never satisfied.
- Webster's Bible (WBS)
- Hell and destruction are never full; so the eyes of man are never satisfied.
- Young's Literal Translation (YLT)
- Sheol and destruction are not satisfied, And the eyes of man are not satisfied.
Read in context
- 18ಅಂಜೂರದ ಮರವನ್ನು ಕಾಯುವವನು ಅದರ ಫಲವನ್ನು ತಿನ್ನುವನು; ಹಾಗೆಯೇ ತನ್ನ ಯಜಮಾನ ನಿಗಾಗಿ ಕಾಯುವವನು ಸನ್ಮಾನ ಹೊಂದುವನು.
- 19ನೀರಿನಲ್ಲಿ ಮುಖವು ಪ್ರತಿಬಿಂಬಿಸುವಂತೆ ಮನುಷ್ಯನ ಹೃದಯವು ಮಾಡುತ್ತದೆ.
- 20ಪಾತಾಳಕ್ಕೂ ನಾಶನಕ್ಕೂ ತೃಪ್ತಿ ಇಲ್ಲವೇ ಇಲ್ಲ; ಹಾಗೆಯೇ ಮನುಷ್ಯ ಕಣ್ಣುಗಳು ಎಂದಿಗೂ ತೃಪ್ತಿಹೊಂದುವದಿಲ್ಲ.
- 21ಬೆಳ್ಳಿ ಬಂಗಾರ ಗಳ ಪುಟಕ್ಕೆ ಕುಲುಮೆ ಹೇಗೆಯೋ ಹಾಗೆಯೇ ತನ್ನ ಹೊಗಳಿಕೆಗೆ ಮನುಷ್ಯನಿದ್ದಾನೆ.
- 22ಬುದ್ಧಿಹೀನನನ್ನು ಒರಳಿನಲ್ಲಿ ಗೋಧಿಯೊಂದಿಗೆ ಒನಕೆಯಿಂದ ಕುಟ್ಟಿ ದರೂ ಅವನಿಂದ ಮೂರ್ಖತನವು ತೊಲಗುವದಿಲ್ಲ.
Cross references
- Ecclesiastes 1:8 ಪ್ರಸಂಗಿ 1:8ಎಲ್ಲಾ ಕಾರ್ಯಗಳು ಪ್ರಯಾಸದಿಂದ ತುಂಬಿ ಯವೆ; ಅದನ್ನು ಮನುಷ್ಯನು ವಿವರಿಸಲಾರನು; ನೋಡುವದರಿಂದ ಕಣ್ಣು ತೃಪ್ತಿಗೊಳ್ಳದು. ಇಲ್ಲವೆ ಕೇಳು ವದರಿಂದ ಕಿವಿಯು ದಣಿಯದು.
- 1 John 2:16 1 ಯೋಹಾನನು 2:16ಲೋಕದಲ್ಲಿರುವವುಗಳೆಲ್ಲವು ಅಂದರೆ ಶರೀರದಾಶೆ, ಕಣ್ಣಿನಾಶೆ, ಜೀವನದ ಗರ್ವ ಇವು ತಂದೆಗೆ ಸಂಬಂಧ ಪಟ್ಟವುಗಳಲ್ಲ, ಲೋಕಕ್ಕೆ ಸಂಬಂಧಪಟ್ಟವುಗಳಾಗಿವೆ.
- Proverbs 30:15–16 ಜ್ಞಾನೋಕ್ತಿಗಳು 30:15–16ಕೊಡು, ಕೊಡು ಎಂದು ಕೂಗುವ ಇಬ್ಬರು ಹೆಣ್ಣುಮಕ್ಕಳು ಜಿಗಣೆಗೆ ಇವೆ. ಎಂದಿಗೂ ತೃಪ್ತಿಪಡದ ಮೂರು ಸಂಗತಿಗಳು ಇವೆ; ಹೌದು, ಸಾಕು ಎಂದು ಹೇಳದಿರುವ ನಾಲ್ಕು ಸಂಗತಿಗಳಿವೆ. ಯಾವವಂದರೆ: ಸಮಾಧಿ, ಬಂಜೆಯಾದ ಗರ್ಭ, ನೀರಿನಿಂದ ತುಂಬ ದಿದ್ದ ಭೂಮಿ, ಸಾಕೆಂದು ಹೇಳದೆ ಇರುವ ಬೆಂಕಿ.
- Ecclesiastes 6:7 ಪ್ರಸಂಗಿ 6:7ಮನುಷ್ಯನ ಪ್ರಯಾಸವೆಲ್ಲಾ ಅವನ ಹೊಟ್ಟೆಗಾಗಿಯೇ ಮತ್ತು ಅವನ ಅಪೇಕ್ಷೆ ತೃಪ್ತಿಹೊಂದುವದಿಲ್ಲ.
- Habakkuk 2:5 ಹಬಕ್ಕೂಕ 2:5ಹೌದು, ಅವನು ದ್ರಾಕ್ಷಾರಸದಿಂದ ಉಲ್ಲಂಘಿಸು ತ್ತಾನೆ. ಅಹಂಕಾರದ ಮನುಷ್ಯನಾಗಿದ್ದಾನೆ; ಮನೆಯಲ್ಲಿ ಇರುವದಿಲ್ಲ; ಇವನು ಪಾತಾಳದ ಹಾಗೆ ತನ್ನ ಆಶೆಯನ್ನು ದೊಡ್ಡದಾಗಿ ಮಾಡಿಕೊಂಡು ಮರಣದ ಹಾಗಿದ್ದಾನೆ, ತೃಪ್ತಿಯಾಗುವದಿಲ್ಲ; ಎಲ್ಲಾ ಜನಾಂಗಗಳನ್ನು ತನಗಾಗಿ ಕೂಡಿಸುತ್ತಾನೆ; ಎಲ್ಲಾ ಜನಗಳನ್ನು ತನಗಾಗಿ ದೊಡ್ಡ ಗುಂಪನ್ನಾಗಿ ಮಾಡಿಕೊಳ್ಳುತ್ತಾನೆ.
- Ecclesiastes 2:10–11 ಪ್ರಸಂಗಿ 2:10–11ನನ್ನ ಕಣ್ಣುಗಳು ಬಯಸಿದ್ದೆಲ್ಲವನ್ನು ಅವುಗಳಿಂದ ಹಿಂತೆಗೆಯಲಿಲ್ಲ, ಯಾವ ಸಂತೋಷಕ್ಕಾಗಿಯೂ ನನ್ನ ಹೃದಯವನ್ನು ನಾನು ತಡೆಯಲಿಲ್ಲ; ನನ್ನ ಎಲ್ಲಾ ಪ್ರಯಾಸದಲ್ಲಿ ನನ್ನ ಹೃದಯವು ಸಂತೋಷಿಸಿತು; ನನ್ನ ಪ್ರಯಾಸ ದಿಂದೆಲ್ಲಾ ನನಗಾದ ಪಾಲು ಇದೆ. ಆಗ ನನ್ನ ಕೈಗಳು ನಡಿಸಿದವುಗಳೆಲ್ಲವನ್ನು ನಾನು ಪ್ರಯಾಸ ಪಟ್ಟ ಪ್ರಯಾಸವನ್ನು ದೃಷ್ಟಿಸಿದೆನು; ಇಗೋ, ಎಲ್ಲವೂ ವ್ಯರ್ಥ ಮತ್ತು ಮನಸ್ಸಿಗೆ ಆಯಾಸಕರ. ಸೂರ್ಯನ ಕೆಳಗೆ ಯಾವ ಲಾಭವಿಲ್ಲ.
- Ecclesiastes 4:8 ಪ್ರಸಂಗಿ 4:8ಎರಡನೆಯವನಿಲ್ಲದ ಒಬ್ಬೊಂಟಿಗನು ಒಬ್ಬನಿದ್ದಾನೆ; ಹೌದು, ಅವನಿಗೆ ಮಗುವಾಗಲೀ ಸಹೋದರನಾಗಲೀ ಇಲ್ಲ; ಆದರೂ ಅವನ ಪ್ರಯಾಸಕ್ಕೆ ಕೊನೆಯಿಲ್ಲ. ಅಲ್ಲದೆ ಐಶ್ವರ್ಯ ದಿಂದ ಅವನ ಕಣ್ಣು ತೃಪ್ತಿಹೊಂದದು; ಮಾತ್ರವಲ್ಲದೆ ಅವನು--ನಾನು ಯಾರಿಗೋಸ್ಕರ ಕಷ್ಟಪಟ್ಟು ಪ್ರಾಣ ವನ್ನು ಅದಕ್ಕೆ ಸುಖವಿಲ್ಲದ ಹಾಗೆ ಕೊರೆತೆಪಡಿಸು ತ್ತೇನೆ; ಎಂದು ಅವನು ಅಂದುಕೊಳ್ಳುವನು. ಇದು ಕೂಡ ವ್ಯರ್ಥವೇ; ಹೌದು, ವ್ಯಥೆಯಿಂದಾದ ಪ್ರಯಾಸವೇ.
- Ecclesiastes 5:10–11 ಪ್ರಸಂಗಿ 5:10–11ಬೆಳ್ಳಿಯನ್ನು ಪ್ರೀತಿಸುವವನು ಬೆಳ್ಳಿಯಿಂದ ತೃಪ್ತ ನಾಗನು; ಸಮೃದ್ಧಿಯನ್ನು ಪ್ರೀತಿಸುವವನು ಅಭಿವೃದ್ಧಿ ಯಿಂದ ತೃಪ್ತನಾಗಲಾರನು; ಇದೂ ಕೂಡ ವ್ಯರ್ಥವೇ. ಸೊತ್ತುಗಳು ಹೆಚ್ಚಿದರೆ ಅದನ್ನು ತಿನ್ನುವವರು ಹೆಚ್ಚಾ ಗುವರು; ಅವುಗಳನ್ನು ತಮ್ಮ ಕಣ್ಣುಗಳಿಂದ ನೋಡು ವದೇ ಹೊರತು ಅವುಗಳ ಸ್ವಂತದವರಿಗೆ ಯಾವ ಪ್ರಯೋಜನವಿದೆ?
- Jeremiah 22:17 ಯೆರೆಮೀಯ 22:17ಆದರೆ ನಿನ್ನ ಕಣ್ಣುಗಳು ನಿನ್ನ ಹೃದಯವು ನಿನ್ನ ದುರ್ಲಾಭದ ಮೇಲೆ, ಅಪರಾಧವಿಲ್ಲದವನ ರಕ್ತ ಚೆಲ್ಲುವದರ ಮೇಲೆ ಮತ್ತು ಪೀಡೆಯನ್ನೂ ಬಲಾತ್ಕಾರವನ್ನೂ ಮಾಡುವದರ ಮೇಲೆಯೇ ಹೊರತು ಮತ್ತಾವದರ ಮೇಲೆಯೂ ಇರುವದಿಲ್ಲ.
- Proverbs 23:5 ಜ್ಞಾನೋಕ್ತಿಗಳು 23:5ಇಲ್ಲದಿರುವದರ ಮೇಲೆ ನಿನ್ನ ದೃಷ್ಟಿಯನ್ನು ಇಡುವಿಯಾ? ಐಶ್ವರ್ಯವು ನಿಸ್ಸಂದೇಹವಾಗಿ ರೆಕ್ಕೆಗಳನ್ನು ಕಟ್ಟಿಕೊಂಡು ಹದ್ದಿನಂತೆ ಆಕಾಶದ ಕಡೆಗೆ ಹಾರಿಹೋಗುತ್ತದೆ.
- Proverbs 15:11 ಜ್ಞಾನೋಕ್ತಿಗಳು 15:11ಪಾತಾಳವೂ ನಾಶನವೂ ಕರ್ತನ ಎದುರಿನಲ್ಲಿವೆ; ಹಾಗಾದರೆ ಮನುಷ್ಯರ ಹೃದಯಗಳು ಇನ್ನೂ ಎಷ್ಟೋ ಹೆಚ್ಚಾಗಿ ಆತನ ಮುಂದೆ ಇವೆಯಲ್ಲವೇ.
- Job 26:6 ಯೋಬನು 26:6ಆತನ ಮುಂದೆ ನರಕವು ಬೆತ್ತಲೆಯಾಗಿದೆ; ನಾಶನಕ್ಕೆ ಮರೆ ಇಲ್ಲ.