Proverbs · chapter 27 · verse 21
Proverbs 27:21 in Kannada
ಬೆಳ್ಳಿ ಬಂಗಾರ ಗಳ ಪುಟಕ್ಕೆ ಕುಲುಮೆ ಹೇಗೆಯೋ ಹಾಗೆಯೇ ತನ್ನ ಹೊಗಳಿಕೆಗೆ ಮನುಷ್ಯನಿದ್ದಾನೆ.
Belli bangaara gala putakke kulume hegeyo haageye tanna hogalikege manushyaniddaane.
Proverbs 27:21 in English
- King James Version (KJV)
- [As] the fining pot for silver, and the furnace for gold; so [is] a man to his praise.
- World English Bible (WEB)
- The crucible is for silver, and the furnace for gold; but man is refined by his praise.
- American Standard Version (ASV)
- The refining pot is for silver, and the furnace for gold; And a man is [tried] by his praise.
- Bible in Basic English (BBE)
- The heating-pot is for silver and the oven-fire for gold, and a man is measured by what he is praised for.
- Darby Translation (DBY)
- The fining-pot is for silver, and the furnace for gold; so let a man be to the mouth that praiseth him.
- Webster's Bible (WBS)
- [As] the fining-pot for silver, and the furnace for gold; so [is] a man to his praise.
- Young's Literal Translation (YLT)
- A refining pot [is] for silver, and a furnace for gold, And a man according to his praise.
Read in context
- 19ನೀರಿನಲ್ಲಿ ಮುಖವು ಪ್ರತಿಬಿಂಬಿಸುವಂತೆ ಮನುಷ್ಯನ ಹೃದಯವು ಮಾಡುತ್ತದೆ.
- 20ಪಾತಾಳಕ್ಕೂ ನಾಶನಕ್ಕೂ ತೃಪ್ತಿ ಇಲ್ಲವೇ ಇಲ್ಲ; ಹಾಗೆಯೇ ಮನುಷ್ಯ ಕಣ್ಣುಗಳು ಎಂದಿಗೂ ತೃಪ್ತಿಹೊಂದುವದಿಲ್ಲ.
- 21ಬೆಳ್ಳಿ ಬಂಗಾರ ಗಳ ಪುಟಕ್ಕೆ ಕುಲುಮೆ ಹೇಗೆಯೋ ಹಾಗೆಯೇ ತನ್ನ ಹೊಗಳಿಕೆಗೆ ಮನುಷ್ಯನಿದ್ದಾನೆ.
- 22ಬುದ್ಧಿಹೀನನನ್ನು ಒರಳಿನಲ್ಲಿ ಗೋಧಿಯೊಂದಿಗೆ ಒನಕೆಯಿಂದ ಕುಟ್ಟಿ ದರೂ ಅವನಿಂದ ಮೂರ್ಖತನವು ತೊಲಗುವದಿಲ್ಲ.
- 23ನಿನ್ನ ಹಿಂಡುಗಳ ಸ್ಥಿತಿಯನ್ನು ತಿಳಿದುಕೊಳ್ಳುವಂತೆ ಶ್ರದ್ಧೆವಹಿಸು; ನಿನ್ನ ಮಂದೆಗಳನ್ನು ಚೆನ್ನಾಗಿ ನೋಡಿಕೋ.
Cross references
- Proverbs 17:3 ಜ್ಞಾನೋಕ್ತಿಗಳು 17:3ಬೆಳ್ಳಿ ಬಂಗಾರ ಗಳನ್ನು ಪುಟ ಕುಲುಮೆಗಳು ಶೋಧಿಸುವವು, ಕರ್ತನು ಹೃದಯಗಳನ್ನು ಶೋಧಿಸುತ್ತಾನೆ.
- Zechariah 13:9 ಜೆಕರ್ಯ 13:9ಮೂರನೇ ಪಾಲನ್ನು ನಾನು ಬೆಂಕಿಯಲ್ಲಿ ಹಾಕಿ ಬೆಳ್ಳಿಯನ್ನು ಶುದ್ಧಮಾಡುವಂತೆ ಶುದ್ಧಮಾಡುವೆನು; ಬಂಗಾರವು ಶೋಧಿಸಲ್ಪಡುವ ಪ್ರಕಾರ ಅವರನ್ನು ಶೋಧಿಸುವೆನು; ಅವರು ನನ್ನ ಹೆಸರನ್ನು ಕರೆಯುವರು; ನಾನು ಅವರಿಗೆ ಉತ್ತರ ಕೊಡುವೆನು; ನಾನು--ಇದು ನನ್ನ ಜನವೆಂದು ಹೇಳುವೆನು; ಕರ್ತನು ನನ್ನ ದೇವರೆಂದು ಅವರು ಹೇಳುವರು ಎಂದು ಹೇಳುತ್ತಾನೆ.
- Psalm 66:10 ಕೀರ್ತನೆಗಳು 66:10ಓ ದೇವರೇ, ನೀನು ನಮ್ಮನ್ನು ಶೋಧಿಸಿದ್ದೀ. ಬೆಳ್ಳಿಯನ್ನು ಪುಟಕ್ಕೆ ಹಾಕುವ ಪ್ರಕಾರ ನಮ್ಮನ್ನು ಶೋಧಿಸಿದ್ದೀ.
- 1 Peter 1:7 1 ಪೇತ್ರನು 1:7ಭಂಗಾರವು ನಾಶವಾಗುವಂಥದ್ದಾಗಿದ್ದರೂ ಅದನ್ನು ಬೆಂಕಿಯಿಂದ ಶೋಧಿಸುವದುಂಟಷ್ಟೆ. ಭಂಗಾರಕ್ಕಿಂತ ಬಹು ಅಮೂಲ್ಯವಾಗಿರುವ ನಿಮ್ಮ ನಂಬಿಕೆಯು ಈ ಕಷ್ಟಗಳಿಂದ ಶೋಧಿತವಾಗಿ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ಕೀರ್ತಿ ಪ್ರಭಾವಮಾನ ಗಳನ್ನು ಉಂಟುಮಾಡುವದು.
- Malachi 3:3 ಮಲಾಕಿಯ 3:3ಆತನು ಬೆಳ್ಳಿಯನ್ನು ಕರಗಿಸಿ ಶುದ್ಧಮಾಡುವವನ ಹಾಗೆ ಕುಳಿತು ಲೇವಿಯ ಕುಮಾರರನ್ನು ಶುದ್ಧಮಾಡಿ ಬಂಗಾರದ ಹಾಗೆಯೂ ಬೆಳ್ಳಿಯ ಹಾಗೆಯೂ ಅವ ರನ್ನು ಶುದ್ಧಮಾಡುವನು.
- Psalm 12:6 ಕೀರ್ತನೆಗಳು 12:6ಕರ್ತನ ವಾಕ್ಯಗಳು ಶುದ್ಧವಾಕ್ಯಗಳಾಗಿವೆ: ಮಣ್ಣಿನ ಕುಲುಮೆಯಲ್ಲಿ ಏಳು ಸಾರಿ ಕರಗಿ ಪುಟಕ್ಕೆ ಹಾಕಿದ ಬೆಳ್ಳಿಯಂತೆ ಇವೆ.
- 1 Peter 4:12 1 ಪೇತ್ರನು 4:12ಪ್ರಿಯರೇ, ನಿಮ್ಮನ್ನು ಶೋಧಿಸುವದಕ್ಕೆ ಅಗ್ನಿ ಯಂತಿರುವ ಪರಿಶೋಧನೆಗಾಗಿ ನೀವು ಆಶ್ಚರ್ಯಪಡ ಬೇಡಿರಿ; ಅಪೂರ್ವವಾದ ಸಂಗತಿ ನಿಮಗೆ ಸಂಭವಿಸಿ ತೆಂದು ಯೋಚಿಸಬೇಡಿರಿ.
- 1 Samuel 18:7–8 1 ಸಮುವೇಲನು 18:7–8ಆ ಸ್ತ್ರೀಯರು ಹಾಡುತ್ತಾ ಒಬ್ಬರಿಗೊಬ್ಬರು--ಸೌಲನು ಸಾವಿರಗಳನ್ನೂ ದಾವೀ ದನು ಹತ್ತು ಸಾವಿರಗಳನ್ನೂ ಕೊಂದನೆಂದು ಪ್ರತ್ಯುತ್ತರ ಕೊಟ್ಟರು. ಸೌಲನಿಗೆ ಬಹು ಕೋಪವಾಯಿತು; ಆ ಮಾತು ಅವನಿಗೆ ವ್ಯಸನಕರವಾಗಿತ್ತು. ಇವರು ದಾವೀದ ನಿಗೆ ಹತ್ತು ಸಾವಿರಗಳನ್ನು ಹೇಳಿದ್ದಾರೆ; ನನಗೆ ಸಾವಿರ ಗಳನ್ನು ಹೇಳಿದ್ದಾರೆ; ಅವನಿಗೆ ರಾಜ್ಯವಲ್ಲದೆ ಇನ್ನು ಹೆಚ್ಚು ಬೇಕಾದದ್ದೇನು ಅಂದನು.
- 1 Samuel 18:15–16 1 ಸಮುವೇಲನು 18:15–16ಕರ್ತನು ಅವನ ಸಂಗಡ ಇದ್ದನು. ಅವನು ಮಹಾಬುದ್ಧಿವಂತನಾಗಿ ನಡೆಯುವದನ್ನು ಸೌಲನು ನೋಡಿ ಅವನಿಗೆ ಭಯ ಪಟ್ಟಿದ್ದನು. ಇಸ್ರಾಯೇಲ್ ಜನರೂ ಯೆಹೂದ ಜನರೂ ದಾವೀದನು ತಮ್ಮ ಮುಂದೆ ಹೋಗುತ್ತಾ ಬರುತ್ತಾ ಇರುವದರಿಂದ ಅವನನ್ನು ಪ್ರೀತಿ ಮಾಡಿದರು.
- 2 Samuel 15:6–12 2 ಸಮುವೇಲನು 15:6–12ಈ ಪ್ರಕಾರ ಅಬ್ಷಾಲೋಮನು ನ್ಯಾಯಕ್ಕೋಸ್ಕರ ಅರಸನ ಬಳಿಗೆ ಬರುವ ಇಸ್ರಾಯೇಲ್ಯರೆಲ್ಲರಿಗೆ ಮಾಡಿ ದನು. ಈ ರೀತಿಯಲ್ಲಿ ಅಬ್ಷಾಲೋಮನು ಇಸ್ರಾ ಯೇಲ್ಯರಿಗೆ ಮಾಡಿದನು. ಹೀಗೆ ಅಬ್ಷಾಲೋಮನು ಇಸ್ರಾಯೇಲ್ಯರ ಹೃದಯಗಳನ್ನು ಕದ್ದುಕೊಂಡನು. ನಾಲ್ಕು ವರುಷಗಳಾದ ತರುವಾಯ ಅಬ್ಷಾಲೋ ಮನು ಅರಸನಿಗೆ--ನಾನು ಕರ್ತನಿಗೆ ಮಾಡಿಕೊಂಡಿದ್ದ ನನ್ನ ಪ್ರಮಾಣವನ್ನು ಹೆಬ್ರೋನಿನಲ್ಲಿ ಸಲ್ಲಿಸಲು ಹೋಗುವದಕ್ಕೆ ಅಪ್ಪಣೆಕೊಡಬೇಕು. ಕರ್ತನು ನನ್ನನ್ನು ಯೆರೂಸಲೇಮಿಗೆ ತಿರಿಗಿ ನಿಜವಾಗಿಯೂ ಬರಮಾಡಿದರೆ ನಾನು ಕರ್ತನನ್ನು ಸೇವಿಸುವೆನೆಂದು ನಿನ್ನ ಸೇವಕನು ಅರಾಮ್ಯ ದೇಶದ ಗೆಷೂರಿನಲ್ಲಿ ವಾಸಿಸಿರುವಾಗ ಪ್ರಮಾಣಮಾಡಿಕೊಂಡಿದ್ದೆನು ಅಂದನು. ಅರಸನು ಅವನಿಗೆ--ಸಮಾಧಾನವಾಗಿ ಹೋಗು ಅಂದನು. ಆಗ ಅವನು ಎದ್ದು ಹೆಬ್ರೋನಿಗೆ ಹೋದನು. ಆದರೆ ಅಬ್ಷಾಲೋಮನು ಇಸ್ರಾಯೇಲಿನ ಎಲ್ಲಾ ಗೋತ್ರಗಳಿಗೆ ಪಾಳತಿಗಾರರನ್ನು ಕಳುಹಿಸಿ ಅವರಿಗೆ--ನೀವು ತುತೂರಿಯ ಶಬ್ದ ಕೇಳಿದಾಗ ಅಬ್ಷಾಲೋಮನು ಹೆಬ್ರೋನಿನಲ್ಲಿ ಆಳುತ್ತಾನೆಂದು ಹೇಳಿರಿ ಅಂದನು. ಅಬ್ಷಾಲೋಮನ ಸಂಗಡ ಯೆರೂಸಲೇಮಿನಿಂದ ಕರೆಯಲ್ಪಟ್ಟ ಇನ್ನೂರು ಮಂದಿ ಜನರು ಹೋದರು. ಆದರೆ ಅವರು ನಿರ್ವಂಚನೆ ಯುಳ್ಳವರಾಗಿ ಏನೂ ತಿಳಿಯದೆ ಇದ್ದರು. ಅಬ್ಷಾ ಲೋಮನು ಬಲಿಗಳನ್ನು ಅರ್ಪಿಸುತ್ತಿರುವಾಗ ದಾವೀ ದನ ಆಲೋಚನಾ ಕರ್ತನಾಗಿರುವ ಗೀಲೋವಿಯ ನಾದ ಅಹೀತೋಫೆಲನನ್ನು ಗೀಲೋವೆಂಬ ಅವನ ಪಟ್ಟಣದಿಂದ ಕರೇಕಳುಹಿಸಿದನು. ಅಬ್ಷಾಲೋಮನ ಸಂಗಡ ಕೂಡುವ ಜನರು ಆಗಾಗ್ಗೆ ಹೆಚ್ಚಿದ್ದರಿಂದ ಒಳಸಂಚಿನ ಗುಂಪು ಬಲವಾಯಿತು.
- 2 Samuel 14:25 2 ಸಮುವೇಲನು 14:25ಎಲ್ಲಾ ಇಸ್ರಾಯೇಲ್ಯರಲ್ಲಿ ಬಹಳ ಹೊಗಳಲ್ಪ ಡತಕ್ಕ ಅಬ್ಷಾಲೋಮನಿಗೆ ಸಮಾನನಾದ ಸೌಂದರ್ಯ ವುಳ್ಳವನು ಒಬ್ಬನೂ ಇರಲಿಲ್ಲ. ಅವನ ಅಂಗಾಲು ಮೊದಲ್ಗೊಂಡು ನಡುನೆತ್ತಿಯ ವರೆಗೂ ಅವನಲ್ಲಿ ಒಂದು ಕಳಂಕವಾದರೂ ಇಲ್ಲದೆ ಇತ್ತು.
- 1 Samuel 18:30 1 ಸಮುವೇಲನು 18:30ಆಗ ಫಿಲಿಷ್ಟಿಯರ ಪ್ರಧಾನರು ಹೊರಟರು, ಅವರು ಹೊರಟ ತರುವಾಯ ದಾವೀದನು ಸೌಲನ ಸಮಸ್ತ ಸೇವಕ ರಿಗಿಂತ ಹೆಚ್ಚು ಬುದ್ಧಿಯಿಂದ ನಡಕೊಂಡನು. ಆದದ ರಿಂದ ಅವನ ಹೆಸರು ಬಹಳ ಪ್ರಸಿದ್ಧವಾಗಿತ್ತು.