Proverbs · chapter 28 · verse 16
Proverbs 28:16 in Kannada
ವಿವೇಕ ಶೂನ್ಯನಾದ ಒಡೆಯನು ಮಹಾಹಿಂಸಕನು; ಲೋಭತನವನ್ನು ಹಗೆಮಾಡುವವನು ತನ್ನ ದಿನಗಳನ್ನು ದೀರ್ಘಮಾಡುತ್ತಾನೆ.
Viveka shoonyanaada odeyanu mahaahinsakanu; lobhatanavannu hagemaaduvavanu tanna dinagalannu deerghamaaduttaane.
Proverbs 28:16 in English
- King James Version (KJV)
- The prince that wanteth understanding [is] also a great oppressor: [but] he that hateth covetousness shall prolong [his] days.
- World English Bible (WEB)
- A tyrannical ruler lacks judgment. One who hates ill-gotten gain will have long days.
- American Standard Version (ASV)
- The prince that lacketh understanding is also a great oppressor; [But] he that hateth covetousness shall prolong his days.
- Bible in Basic English (BBE)
- The prince who has no sense is a cruel ruler; but he who has no desire to get profit for himself will have long life.
- Darby Translation (DBY)
- The prince void of intelligence is also a great oppressor: he that hateth covetousness shall prolong [his] days.
- Webster's Bible (WBS)
- The prince that wanteth understanding [is] also a great oppressor: [but] he that hateth covetousness shall prolong [his] days.
- Young's Literal Translation (YLT)
- A leader lacking understanding multiplieth oppressions, Whoso is hating dishonest gain prolongeth days.
Read in context
- 14ಯಾವಾಗಲೂ ಭಯದಿಂದ ಇರು ವವನು ಧನ್ಯನು; ತನ್ನ ಹೃದಯವನ್ನು ಕಠಿಣಪಡಿಸಿ ಕೊಳ್ಳುವವನು ಕೇಡಿಗೆ ಸಿಕ್ಕಿಬೀಳುವನು.
- 15ಗರ್ಜಿಸುವ ಸಿಂಹದಂತೆಯೂ ಅಲೆದಾಡುವ ಕರಡಿಯಂತೆಯೂ ಬಡವರಾದ ಜನರನ್ನು ಆಳುವ ದುಷ್ಟನು ಇರುತ್ತಾನೆ.
- 16ವಿವೇಕ ಶೂನ್ಯನಾದ ಒಡೆಯನು ಮಹಾಹಿಂಸಕನು; ಲೋಭತನವನ್ನು ಹಗೆಮಾಡುವವನು ತನ್ನ ದಿನಗಳನ್ನು ದೀರ್ಘಮಾಡುತ್ತಾನೆ.
- 17ಒಬ್ಬ ಮನುಷ್ಯನ ರಕ್ತಕ್ಕೆ ಬಲಾತ್ಕಾರ ಮಾಡುವವನು ಕುಣಿಗೆ ಹಾರುವನು; ಅವನನ್ನು ಯಾವನೂ ತಡೆಯದಿರಲಿ.
- 18ಯಥಾರ್ಥ ವಾಗಿ ನಡೆಯುವವನು ರಕ್ಷಿಸಲ್ಪಡುವನು; ತನ್ನ ಮಾರ್ಗ ಗಳಲ್ಲಿ ವಕ್ರವಾಗಿ ನಡೆದುಕೊಳ್ಳುವವನು ತಟ್ಟನೆ ಬೀಳು ವನು.
Cross references
- Exodus 18:21 ವಿಮೋಚನಕಾಂಡ 18:21ಇದಲ್ಲದೆ ನೀನು ಸಮಸ್ತ ಜನರೊಳಗೆ ಸಮರ್ಥರು ಅಂದರೆ ದೇವರಿಗೆ ಭಯ ಪಡುವವರೂ ಸತ್ಯವಂತರೂ ದುರಾಶೆಯನ್ನು ಹಗೆ ಮಾಡುವವರೂ ಆಗಿರುವ ಇಂಥವರನ್ನು ಸಾವಿರ ಜನರ ಮೇಲೆಯೂ ನೂರು ಜನರ ಮೇಲೆಯೂ ಐವತ್ತು ಜನರ ಮೇಲೆಯೂ ಹತ್ತು ಜನರ ಮೇಲೆಯೂ ಅಧಿಕಾರಿಗಳನ್ನಾಗಿ ನೇಮಿಸಬೇಕು.
- 1 Kings 12:10 1 ಅರಸುಗಳು 12:10ಆಗ ಅವನ ಸಂಗಡ ಬೆಳೆದ ಯೌವನಸ್ಥರು ಅವ ನಿಗೆ--ನಿನ್ನ ತಂದೆ ನಮ್ಮ ನೊಗವನ್ನು ಭಾರ ಮಾಡಿದನು; ಆದರೆ ನೀನು ಅದನ್ನು ನಮಗೆ ಹಗುರ ಮಾಡೆಂದು ನಿನ್ನ ಸಂಗಡ ಮಾತನಾಡಿದ ಈ ಜನರಿಗೆ--
- Ecclesiastes 4:1 ಪ್ರಸಂಗಿ 4:1ಹೀಗೆ ನಾನು ತಿರುಗಿಕೊಂಡು ಸೂರ್ಯನ ಕೆಳಗೆ ನಡೆಯುತ್ತಿರುವ ಹಿಂಸೆಗಳನ್ನೆಲ್ಲಾ ನಾನು ಯೋಚಿಸಿದೆನು; ಹಿಂಸಿಸಲ್ಪಟ್ಟವರ ಕಣ್ಣೀರನ್ನೂ ಅವರನ್ನು ಆದರಿಸುವವರು ಯಾರೂ ಇಲ್ಲದಿರುವ ದನ್ನೂ ನೋಡಿದೆನು; ಅವರನ್ನು ಹಿಂಸೆಪಡಿಸುವವರ ಕಡೆಗೆ ಶಕ್ತಿ ಇತ್ತು; ಆದರೆ ಇವರನ್ನು ಆದರಿಸುವವನು ಯಾವನೂ ಇಲ್ಲ.
- Isaiah 3:12 ಯೆಶಾಯ 3:12ನನ್ನ ಪ್ರಜೆಗಳನ್ನೋ ಹುಡುಗರು ಅವರನ್ನು ಭಾಧಿಸುವರು, ಅವರನ್ನು ಆಳುವವರು ಹೆಂಗಸರು. ಓ ನನ್ನ ಪ್ರಜೆಗಳೇ, ನಿಮ್ಮನ್ನು ನಡಿಸು ವವರು ದಾರಿತಪ್ಪಿಸುವವರಾಗಿದ್ದಾರೆ. ನೀವು ನಡೆ ಯುವ ದಾರಿಯನ್ನು ಹಾಳುಮಾಡಿದ್ದಾರೆ.
- 1 Kings 12:14 1 ಅರಸುಗಳು 12:14ನನ್ನ ತಂದೆಯು ನಿಮ್ಮ ನೊಗವನ್ನು ಭಾರವಾಗ ಮಾಡಿದನು; ನಾನು ಅದಕ್ಕೆ ಕೂಡಿಸುವೆನು; ನನ್ನ ತಂದೆಯು ನಿಮ್ಮನ್ನು ಕೊರಡೆಗಳಿಂದ ಶಿಕ್ಷಿಸಿದನು; ನಾನು ನಿಮ್ಮನ್ನು ಚೇಳುಗಳಿಂದ ಶಿಕ್ಷಿಸುವೆನು ಅಂದನು.
- Jeremiah 22:15–17 ಯೆರೆಮೀಯ 22:15–17ನೀನು ದೇವದಾರಿನಲ್ಲಿ ನಿನ್ನನ್ನು ಮುಚ್ಚಿ ಕೊಳ್ಳುವದರಿಂದ ದೊರೆತನ ಮಾಡುವಿಯೋ? ನಿನ್ನ ತಂದೆ ಉಂಡು, ಕುಡಿದು, ನ್ಯಾಯವನ್ನೂ ನೀತಿಯನ್ನೂ ಮಾಡಲಿಲ್ಲವೋ? ಆಗ ಅವನಿಗೆ ಒಳ್ಳೆಯದಾ ಗಲಿಲ್ಲವೋ? ಬಡವನ ಮತ್ತು ದರಿದ್ರನ ನ್ಯಾಯ ವನ್ನು ತೀರಿಸಿದನು. ಆಗ ಒಳ್ಳೇದಾಯಿತು; ನನ್ನನ್ನು ತಿಳುಕೊಳ್ಳುವದು ಇದೇ ಅಲ್ಲವೋ ಎಂದು ಕರ್ತನು ಅನ್ನುತ್ತಾನೆ. ಆದರೆ ನಿನ್ನ ಕಣ್ಣುಗಳು ನಿನ್ನ ಹೃದಯವು ನಿನ್ನ ದುರ್ಲಾಭದ ಮೇಲೆ, ಅಪರಾಧವಿಲ್ಲದವನ ರಕ್ತ ಚೆಲ್ಲುವದರ ಮೇಲೆ ಮತ್ತು ಪೀಡೆಯನ್ನೂ ಬಲಾತ್ಕಾರವನ್ನೂ ಮಾಡುವದರ ಮೇಲೆಯೇ ಹೊರತು ಮತ್ತಾವದರ ಮೇಲೆಯೂ ಇರುವದಿಲ್ಲ.
- Isaiah 33:15–16 ಯೆಶಾಯ 33:15–16ನೀತಿಯಲ್ಲಿ ನಡೆದು ಯಥಾರ್ಥವಾಗಿ ನುಡಿದು ದೋಚಿಕೊಂಡ ಲಾಭ ಬೇಡವೆಂದು ಲಂಚ ಮುಟ್ಟದಂತೆ ಕೈ ಒದರಿ ರಕ್ತಕ್ಕೆ ಕಿವಿಗೊಡದೆ ಕೆಟ್ಟದ್ದನ್ನು ನೋಡದಂತೆ ಕಣ್ಣು ಮುಚ್ಚಿಕೊಳ್ಳುವವನೇ ಉನ್ನತ ಸ್ಥಳದಲ್ಲಿ ವಾಸಿಸುವನು. ಬಂಡೆಗಳ ಕೋಟೆಗಳು ಅವನಿಗೆ ಆಶ್ರಯವಾಗಿ ರುವವು. ರೊಟ್ಟಿಯು ಅವನಿಗೆ ಕೊಡಲ್ಪಡುವದು, ನೀರು ತಪ್ಪುವದಿಲ್ಲ.
- Nehemiah 5:15 ನೆಹೆಮೀಯ 5:15ಆದರೆ ನನಗಿಂತ ಮುಂಚೆ ಇದ್ದ ಅಧಿಪತಿಗಳು ಜನರಿಗೆ ಭಾರವಾಗಿದ್ದು ನಾಲ್ವತ್ತು ಬೆಳ್ಳಿಯ ಶೇಕೆಲುಗಳ ಹೊರ ತಾಗಿ ಅವರಿಂದ ರೊಟ್ಟಿಯನ್ನೂ ದ್ರಾಕ್ಷಾರಸವನ್ನೂ ತೆಗೆದುಕೊಳ್ಳುತ್ತಾ ಇದ್ದರು. ಅವರ ಸೇವಕರು ಸಹ ಜನರನ್ನು ಆಳುತ್ತಾ ಇದ್ದರು. ಆದರೆ ದೇವರ ಭಯದ ನಿಮಿತ್ತ ನಾನು ಹೀಗೆ ಮಾಡಿದವನಲ್ಲ.
- Amos 4:1 ಆಮೋಸ 4:1ಸಮಾರ್ಯದ ಬೆಟ್ಟದಲ್ಲಿರುವ ಬಾಷಾನಿನ ಹಸುಗಳೇ, ಬಡವರನ್ನು ಬಲಾತ್ಕಾರ ಮಾಡಿ, ದರಿದ್ರರನ್ನು ಜಜ್ಜಿ ತಮ್ಮ ಯಜಮಾನರಿಗೆ --ಪಾನವನ್ನು ತರಿಸಿರಿ, ಕುಡಿಯೋಣ ಎಂದು ಹೇಳು ವವರೇ, ಈ ವಾಕ್ಯವನ್ನು ಕೇಳಿರಿ.