Proverbs · chapter 28 · verse 17
Proverbs 28:17 in Kannada
ಒಬ್ಬ ಮನುಷ್ಯನ ರಕ್ತಕ್ಕೆ ಬಲಾತ್ಕಾರ ಮಾಡುವವನು ಕುಣಿಗೆ ಹಾರುವನು; ಅವನನ್ನು ಯಾವನೂ ತಡೆಯದಿರಲಿ.
Obba manushyana raktakke balaatkaara maaduvavanu kunige haaruvanu; avanannu yaavanoo tadeyadirali.
Proverbs 28:17 in English
- King James Version (KJV)
- A man that doeth violence to the blood of [any] person shall flee to the pit; let no man stay him.
- World English Bible (WEB)
- A man who is tormented by blood guilt will be a fugitive until death. No one will support him.
- American Standard Version (ASV)
- A man that is laden with the blood of any person Shall flee unto the pit; let no man stay him.
- Bible in Basic English (BBE)
- One who has been the cause of a man's death will go in flight to the underworld: let no man give him help.
- Darby Translation (DBY)
- A man laden with the blood of [any] person, fleeth to the pit: let no man stay him.
- Webster's Bible (WBS)
- A man that doeth violence to the blood of [any] person shall flee to the pit; let no man stay him.
- Young's Literal Translation (YLT)
- A man oppressed with the blood of a soul, Unto the pit fleeth, none taketh hold on him.
Read in context
- 15ಗರ್ಜಿಸುವ ಸಿಂಹದಂತೆಯೂ ಅಲೆದಾಡುವ ಕರಡಿಯಂತೆಯೂ ಬಡವರಾದ ಜನರನ್ನು ಆಳುವ ದುಷ್ಟನು ಇರುತ್ತಾನೆ.
- 16ವಿವೇಕ ಶೂನ್ಯನಾದ ಒಡೆಯನು ಮಹಾಹಿಂಸಕನು; ಲೋಭತನವನ್ನು ಹಗೆಮಾಡುವವನು ತನ್ನ ದಿನಗಳನ್ನು ದೀರ್ಘಮಾಡುತ್ತಾನೆ.
- 17ಒಬ್ಬ ಮನುಷ್ಯನ ರಕ್ತಕ್ಕೆ ಬಲಾತ್ಕಾರ ಮಾಡುವವನು ಕುಣಿಗೆ ಹಾರುವನು; ಅವನನ್ನು ಯಾವನೂ ತಡೆಯದಿರಲಿ.
- 18ಯಥಾರ್ಥ ವಾಗಿ ನಡೆಯುವವನು ರಕ್ಷಿಸಲ್ಪಡುವನು; ತನ್ನ ಮಾರ್ಗ ಗಳಲ್ಲಿ ವಕ್ರವಾಗಿ ನಡೆದುಕೊಳ್ಳುವವನು ತಟ್ಟನೆ ಬೀಳು ವನು.
- 19ತನ್ನ ಭೂಮಿಯನ್ನು ವ್ಯವಸಾಯ ಮಾಡುವ ವನಿಗೆ ಸಮೃದ್ಧಿಯಾದ ರೊಟ್ಟಿ ಇರುವದು; ಆದರೆ ವ್ಯರ್ಥ ಜನರನ್ನು ಹಿಂಬಾಲಿಸುವವನಿಗೆ ಸಾಕಾದಷ್ಟು ಬಡತನವು ಇರುವದು.
Cross references
- Genesis 9:6 ಆದಿಕಾಂಡ 9:6ಎಲ್ಲಾ ಮೃಗಗಳಿಂದ ಅದನ್ನು ವಿಚಾರಿಸುವೆನು. ಮನುಷ್ಯನ ಪ್ರಾಣವನ್ನು ಮನುಷ್ಯನಿಂದಲೂ ಅವ ನವನ ಸಹೋದರನಿಂದಲೂ ವಿಚಾರಿಸುವೆನು. ಯಾವನು ಮನುಷ್ಯನ ರಕ್ತವನ್ನು ಸುರಿಸುವನೋ ಅವನ ರಕ್ತವು ಮನುಷ್ಯನಿಂದಲೇ ಸುರಿಸಲ್ಪಡುವದು. ಯಾಕಂದರೆ ದೇವರು ತನ್ನ ಸ್ವರೂಪದಲ್ಲಿ ಮನುಷ್ಯ ನನ್ನು ಉಂಟುಮಾಡಿದನು.
- Exodus 21:14 ವಿಮೋಚನಕಾಂಡ 21:14ಒಬ್ಬನು ತನ್ನ ನೆರೆಯವನನ್ನು ಕೊಲ್ಲಬೇಕೆಂಬ ಉದ್ದೇಶ ಇಟ್ಟುಕೊಂಡು ಮೋಸತನದಿಂದ ಕೊಂದರೆ ಅವನು ಸಾಯುವಂತೆ ನೀನು ಅವನನ್ನು ನನ್ನ ಯಜ್ಞ ವೇದಿಯಿಂದ ತೆಗೆಯಬೇಕು.
- 1 Kings 21:19 1 ಅರಸುಗಳು 21:19ನೀನು ಅವನಿಗೆನೀನು ಕೊಂದುಹಾಕಿ ಸ್ವಾಧೀನಮಾಡಿಕೊಂಡಿಯಲ್ಲಾ. ಆದದರಿಂದ ನಾಯಿಗಳು ನಾಬೋತನ ರಕ್ತವನ್ನು ನೆಕ್ಕಿದ ಸ್ಥಳದಲ್ಲೇ ನಿನ್ನ ರಕ್ತವನ್ನು ನಿಶ್ಚಯವಾಗಿ ನೆಕ್ಕು ವವು ಎಂದು ಕರ್ತನು ಹೇಳುತ್ತಾನೆಂದು ಅಂದನು.
- 2 Chronicles 24:21–25 2 ಪೂರ್ವಕಾಲವೃತ್ತಾಂತ 24:21–25ಆದದರಿಂದ ಅವರು ಅವನಿಗೆ ವಿರೋಧವಾಗಿ ಒಳಸಂಚು ಮಾಡಿ ಕರ್ತನ ಆಲಯದ ಅಂಗಳದಲ್ಲಿ ಅರಸನ ಅಪ್ಪಣೆಯಂತೆ ಅವನನ್ನು ಕಲ್ಲೆಸೆದು ಕೊಂದರು. ಹಾಗೆಯೇ ಇವನ ತಂದೆಯಾದ ಯೆಹೋಯಾದನು ತನಗೆ ತೋರಿಸಿದ ಕೃಪೆಯನ್ನು ಜ್ಞಾಪಕಮಾಡದೆ ಅರಸನಾದ ಯೆಹೋವಾಷನು ಅವನ ಮಗನನ್ನು ಕೊಂದುಹಾಕಿದನು. ಇವನು ಸಾಯುವಾಗ--ಕರ್ತನು ನೋಡಿ ವಿಚಾರಿಸಲಿ ಎಂದು ಹೇಳಿದನು. ವರುಷಾಂತ್ಯದಲ್ಲಿ ಏನಾಯಿತಂದರೆ, ಅರಾಮಿನ ಸೈನ್ಯದವರು ಅವನಿಗೆ ವಿರೋಧವಾಗಿ ಹೊರಟು ಯೆಹೂದಕ್ಕೂ ಯೆರೂಸಲೇಮಿಗೂ ಬಂದು ಜನರ ಪ್ರಧಾನರನ್ನು ಅವರೊಳಗಿಂದ ನಾಶಮಾಡಿ ಅವರಿಂದ ತೆಗೆದುಕೊಂಡ ಕೊಳ್ಳೆಯನ್ನೆಲ್ಲಾ ದಮಸ್ಕದ ಅರಸನಿಗೆ ಕಳುಹಿಸಿದರು. ಅವರು ತಮ್ಮ ಪಿತೃಗಳ ದೇವರಾದ ಕರ್ತನನ್ನು ಬಿಟ್ಟದ್ದರಿಂದ ಅರಾಮ್ಯರು ಅಲ್ಪಜನವಾದ ಸೈನ್ಯದ ಸಂಗಡ ಬಂದಾಗ ಕರ್ತನು ಬಹು ಅಧಿಕ ವಾದ ಸೈನ್ಯವನ್ನು ಅವರ ಕೈಯಲ್ಲಿ ಒಪ್ಪಿಸಿದನು. ಹೀಗೆ ಅವರು ಯೆಹೋವಾಷನಿಗೆ ವಿರೋಧವಾಗಿ ನ್ಯಾಯ ತೀರ್ವಿಕೆ ಮಾಡಿದರು. ಅವನು ಕಠಿಣ ರೋಗದಲ್ಲಿ ಬಿದ್ದಿರುವಾಗ ಅವನನ್ನು ಬಿಟ್ಟುಹೋದರು. ಅವರು ಅವನನ್ನು ಬಿಟ್ಟತರುವಾಯ ಯಾಜಕನಾದ ಯೆಹೋ ಯಾದನ ಮಕ್ಕಳ ರಕ್ತಾಪರಾಧದ ನಿಮಿತ್ತವಾಗಿ ಅವನ ಸ್ವಂತ ಸೇವಕರು ಅವನಿಗೆ ವಿರೋಧವಾಗಿ ಒಳಸಂಚು ಮಾಡಿ ಅವನು ಸಾಯುವ ಹಾಗೆ ಅವನ ಮಂಚದ ಮೇಲೆ ಅವನನ್ನು ಕೊಂದುಹಾಕಿದರು. ಅವರು ಅವ ನನ್ನು ದಾವೀದನ ಪಟ್ಟಣದಲ್ಲಿ ಹೂಣಿಟ್ಟರು; ಆದರೆ ಅರಸುಗಳ ಸಮಾಧಿಗಳ ಬಳಿಯಲ್ಲಿ ಅವನನ್ನು ಹೂಣಿ ಡಲಿಲ್ಲ.
- 1 Kings 21:23 1 ಅರಸುಗಳು 21:23ಈಜೆಬೆಲ ಳನ್ನು ಕುರಿತು ಕರ್ತನು--ನಾಯಿಗಳು ಈಜೆಬೆಲಳನ್ನು ಇಜ್ರೇಲಿನ ಗೋಡೆಯ ಬಳಿಯಲ್ಲಿ ತಿನ್ನುವವು.
- Numbers 35:14–34 ಅರಣ್ಯಕಾಂಡ 35:14–34ಯೊರ್ದನಿನ ಈಚೆಯಲ್ಲಿ ಮೂರು ಪಟ್ಟಣಗಳನ್ನೂ ಕಾನಾನ್ ದೇಶದಲ್ಲಿ ಮೂರು ಪಟ್ಟಣ ಗಳನ್ನೂ ಆಶ್ರಯದ ಪಟ್ಟಣಗಳಾಗಿ ಕೊಡಬೇಕು. ಕೈತಪ್ಪಿ ಪ್ರಾಣಹತ್ಯ ಮಾಡುವವರೆಲ್ಲರು ಅಲ್ಲಿಗೆ ಓಡಿಹೋಗುವದಕ್ಕೆ ಈ ಆರು ಪಟ್ಟಣಗಳು ಇಸ್ರಾಯೇಲ್ ಮಕ್ಕಳಿಗೂ ಪರಕೀಯರಿಗೂ ಅವರಲ್ಲಿ ವಾಸಮಾಡುವವರಿಗೂ ಆಶ್ರಯಕ್ಕಾಗಿ ಇರಬೇಕು. ಒಬ್ಬನು ಕಬ್ಬಿಣದ ಆಯುಧದಿಂದ ಮತ್ತೊಬ್ಬನನ್ನು ಸಾಯುವ ಹಾಗೆ ಹೊಡೆದರೆ ಅವನು ಕೊಲೆಪಾತಕನು; ಆ ಕೊಲೆಪಾತಕನನ್ನು ನಿಜವಾಗಿಯೂ ಸಾಯಿಸಬೇಕು. ಒಬ್ಬನು ಮರಣವಾಗುವಂತೆ ಕಲ್ಲನ್ನು ಎಸೆದು ಮತ್ತೊಬ್ಬನನ್ನು ಸಾಯುವಹಾಗೆ ಹೊಡೆದರೆ ಅವನು ಕೊಲೆಪಾತಕನು; ಆ ಕೊಲೆಪಾತಕನನ್ನು ನಿಜವಾಗಿಯೂ ಸಾಯಿಸಬೇಕು. ಇಲ್ಲವೆ ಮರಣವಾಗುವಂತೆ ಮರದ ಆಯುಧವನ್ನು ಎಸೆದು ಒಬ್ಬನನ್ನು ಸಾಯುವ ಹಾಗೆ ಹೊಡೆದರೆ ಅವನು ಕೊಲೆಪಾತಕನು; ಆ ಕೊಲೆ ಪಾತಕನನ್ನು ನಿಜವಾಗಿಯೂ ಸಾಯಿಸಬೇಕು. ರಕ್ತ ಸೇಡು ತೀರಿಸಿಕೊಳ್ಳುವವನು ಕೊಲೆಪಾತಕನನ್ನು ತಾನೇ ಕೊಲ್ಲಬೇಕು; ಅವನನ್ನು ಸಂಧಿಸುವಾಗಲೇ ಕೊಲ್ಲ ಬೇಕು. ಒಬ್ಬನು ಮತ್ತೊಬ್ಬನನ್ನು ಹಗೆಮಾಡಿ ಸಾಯುವ ಹಾಗೆ ಹೊಡೆದರೆ ಇಲ್ಲವೆ ನೂಕುವದ ರಿಂದಲಾದರೂ ಹೊಂಚಿ ನೋಡಿಕೊಂಡು ಅವನ ಮೇಲೆ ಯಾವದನ್ನಾದರೂ ಬಲವಾಗಿ ಎಸೆದರೆ ಇಲ್ಲವೆ ಶತ್ರುತ್ವಮಾಡಿ ಅವನು ಸಾಯುವ ಹಾಗೆ ತನ್ನ ಕೈಯಿಂದ ಹೊಡೆದರೆ ಅವನು ಕೊಲೆಪಾತಕನೇ; ಹೊಡೆದವನನ್ನು ನಿಜವಾಗಿ ಸಾಯಿಸಬೇಕು; ರಕ್ತ ಸೇಡು ತೀರಿಸುವವನು ಅವನನ್ನು ಸಂಧಿಸುವಾಗಲೇ ಆ ಕೊಲೆ ಪಾತಕನನ್ನು ಕೊಲ್ಲಬೇಕು. ಆದರೆ ಶತ್ರುತ್ವವಿಲ್ಲದೆ ತಕ್ಷಣವೇ ಅವನನ್ನು ನೂಕುವದರಿಂದಲಾದರೂ ಸಮಯ ನೋಡಿಕೊಳ್ಳದೆ ಯಾವದಾದರೊಂದು ಆಯುಧವನ್ನು ಅವನ ಮೇಲೆ ಎಸೆದರೆ ಇಲ್ಲವೆ ಶತ್ರುತ್ವವಿಲ್ಲದೆಯೂ ಅವನ ಕೇಡನ್ನು ಹುಡುಕದೆಯೂ ಅವನನ್ನು ನೋಡದೆಯೂ ಮರಣ ವಾಗುವಂತೆ ಯಾವದಾದರೊಂದು ಕಲ್ಲನ್ನು ಅವನು ಸಾಯುವ ಹಾಗೆ ಅವನ ಮೇಲೆ ಬೀಳಮಾಡಿದರೆ ಸಭೆಯು ಈ ನ್ಯಾಯಗಳ ಪ್ರಕಾರ ಕೊಲ್ಲುವವನಿಗೂ ರಕ್ತ ಸೇಡು ತೀರಿಸುವವನಿಗೂ ನ್ಯಾಯತೀರಿಸಬೇಕು. ಸಭೆಯು ಕೊಂದವನನ್ನು ರಕ್ತದ ಸೇಡು ತೀರಿಸು ವವನ ಕೈಯಿಂದ ತಪ್ಪಿಸಿ ಅವನು ಓಡಿಹೋದ ಆಶ್ರಯದ ಪಟ್ಟಣಕ್ಕೆ ತಿರಿಗಿ ಸೇರಿಸಬೇಕು; ಪರಿಶುದ್ಧ ಎಣ್ಣೆಯಿಂದ ಅಭಿಷೇಕಿಸಲ್ಪಟ್ಟ ಪ್ರಧಾನಯಾಜಕನು ಸಾಯುವ ವರೆಗೂ ಅವನು ಅಲ್ಲೇ ವಾಸಮಾಡಲಿ. ಯಾವ ಸಮಯದಲ್ಲಾದರೂ ಕೊಲೆಪಾತಕನು ತಾನು ಓಡಿಹೋದ ಆಶ್ರಯದ ಪಟ್ಟಣದ ಮೇರೆ ಯನ್ನು ವಿಾರಿ ಹೊರಟರೆ ರಕ್ತದ ಸೇಡು ತೀರಿಸು ವವನು ಅವನನ್ನು ತನ್ನ ಆಶ್ರಯ ಪಟ್ಟಣದ ಮೇರೆಯ ಹೊರಗೆ ಕಂಡುಕೊಂಡು ಕೊಂದರೆ ಅವನಿಗೆ ರಕ್ತಾಪ ರಾಧವಿಲ್ಲ. ಅವನು ತನ್ನ ಆಶ್ರಯದ ಪಟ್ಟಣದ ಪ್ರಧಾನಯಾಜಕನು ಸಾಯುವ ವರೆಗೂ ವಾಸಮಾಡ ಬೇಕಾಗಿತ್ತು; ಪ್ರಧಾನ ಯಾಜಕನ ಮರಣದ ತರು ವಾಯ ಕೊಲೆಪಾತಕನು ತನ್ನ ಸ್ವಾಸ್ತ್ಯದ ದೇಶಕ್ಕೆ ಹೋಗಬಹುದು. ಹೀಗೆ ಇವು ನಿಮ್ಮ ಸಮಸ್ತ ನಿವಾಸಗಳಲ್ಲಿ ನಿಮ್ಮ ಸಂತತಿಗಳಿಗೆಲ್ಲಾ ನ್ಯಾಯದ ಕಟ್ಟಳೆಗಳಾಗಿರಬೇಕು. ಪ್ರಾಣಹತ್ಯ ಮಾಡುವ ಕೊಲೆಪಾತಕನನ್ನು ಸಾಕ್ಷಿಗಳ ಬಾಯಿಯ ಪ್ರಕಾರ ಕೊಲ್ಲಬೇಕು; ಸಾಯುವ ಹಾಗೆ ಯಾವ ಮನುಷ್ಯನಿಗಾದರೂ ವಿರೋಧವಾಗಿ ಒಬ್ಬನು ಸಾಕ್ಷಿ ಹೇಳಬಾರದು. ಸಾಯತಕ್ಕ ಕೊಲೆ ಪಾತಕನ ಪ್ರಾಣಕ್ಕೋಸ್ಕರ ಈಡನ್ನು ತಕ್ಕೊಳ್ಳಬೇಡಿರಿ; ಯಾಕಂದರೆ ಅವನು ನಿಜವಾಗಿಯೂ ಸಾಯಬೇಕು. ತನ್ನ ಆಶ್ರಯದ ಪಟ್ಟಣಕ್ಕೆ ಓಡಿಹೋದವನಿ ಗೋಸ್ಕರ ಅವನು ತಿರಿಗಿ ಬಂದು ಯಾಜಕನು ಸಾಯುವ ವರೆಗೂ ಸ್ವದೇಶದಲ್ಲಿ ವಾಸಮಾಡುವ ಹಾಗೆ ಈಡನ್ನು ತಕ್ಕೊಳ್ಳಬೇಡಿರಿ. ಹೀಗೆ ನೀವು ಇರುವ ದೇಶವನ್ನು ಅಪವಿತ್ರ ಮಾಡಬೇಡಿರಿ; ದೇಶವನ್ನು ಅಪವಿತ್ರಮಾಡು ವಂಥದ್ದು ರಕ್ತವೇ. ಅದರಲ್ಲಿ ಚೆಲ್ಲಲ್ಪಟ್ಟ ರಕ್ತದ ನಿಮಿತ್ತ ಅದನ್ನು ಚೆಲ್ಲಿದವನ ರಕ್ತದಿಂದಲ್ಲದೆ ದೇಶವು ಶುದ್ಧವಾ ಗುವದಿಲ್ಲ.ಆದದರಿಂದ ನೀವು ವಾಸಮಾಡುವ ದೇಶವನ್ನು ನೀವು ಅಶುದ್ಧಮಾಡಬೇಡಿರಿ; ಯಾಕಂದರೆ ನಾನು ಅದರೊಳಗೆ ವಾಸಿಸುತ್ತೇನೆ; ಕರ್ತನಾಗಿರುವ ನಾನೇ ಇಸ್ರಾಯೇಲ್ ಮಕ್ಕಳ ಮಧ್ಯದಲ್ಲಿ ವಾಸಿಸುತ್ತೇನೆ. ಆದದರಿಂದ ನೀವು ವಾಸಮಾಡುವ ದೇಶವನ್ನು ನೀವು ಅಶುದ್ಧಮಾಡಬೇಡಿರಿ; ಯಾಕಂದರೆ ನಾನು ಅದರೊಳಗೆ ವಾಸಿಸುತ್ತೇನೆ; ಕರ್ತನಾಗಿರುವ ನಾನೇ ಇಸ್ರಾಯೇಲ್ ಮಕ್ಕಳ ಮಧ್ಯದಲ್ಲಿ ವಾಸಿಸುತ್ತೇನೆ.
- Matthew 27:4–5 ಮತ್ತಾಯನು 27:4–5ಅವನು--ನಾನು ನಿರಪರಾಧದ ರಕ್ತವನ್ನು ಹಿಡುಕೊಟ್ಟು ಪಾಪಮಾಡಿದ್ದೇನೆ ಅಂದನು. ಅದಕ್ಕೆ ಅವರು--ಅದು ನಮಗೇನು? ನೀನೇ ಅದನ್ನು ನೋಡಿಕೋ ಅಂದರು. ಮತ್ತು ಅವನು ಆ ಬೆಳ್ಳಿಯ ನಾಣ್ಯಗಳನ್ನು ದೇವಾಲಯದಲ್ಲಿ ಬಿಸಾಡಿಬಿಟ್ಟು ಹೊರಟುಹೋಗಿ ಉರ್ಲು ಹಾಕಿಕೊಂಡನು.
- Acts 28:4 ಅಪೊಸ್ತಲರ ಕೃತ್ಯಗಳು 28:4ಆ ವಿಷಜಂತು ಅವನ ಕೈಯಿಂದ ಜೋತಾಡುವದನ್ನು ಆ ಅನಾಗರಿಕರು ನೋಡಿ--ಈ ಮನುಷ್ಯನು ಸಮುದ್ರದಿಂದ ತಪ್ಪಿಸಿ ಕೊಂಡರೂ ಪ್ರತೀಕಾರವು ಇವನನ್ನು ಬದುಕಗೊಡಿಸು ವದಿಲ್ಲ. ಇವನು ನಿಸ್ಸಂದೇಹವಾಗಿ ಕೊಲೆ ಪಾತಕನು ಎಂದು ತಮ್ಮತಮ್ಮಲ್ಲಿ ಮಾತನಾಡಿಕೊಂಡರು.
- 2 Kings 9:26 2 ಅರಸುಗಳು 9:26ನಾನೂ ನೀನೂ ಅವನ ತಂದೆಯಾದ ಅಹಾಬನ ಹಿಂದೆ ಕುದುರೆ ಏರಿಕೊಂಡು ಹೋಗುತ್ತಿರುವಾಗ ಕರ್ತನು ಈ ಭಾರವನ್ನು ಅವನ ಮೇಲೆ ಹೊರಿಸಿದನೆಂದು ಜ್ಞಾಪಕಮಾಡಿಕೋ. ಏನಂದರೆ--ನಾಬೋತನ ರಕ್ತವನ್ನೂ ಅವನ ಕುಮಾರರ ರಕ್ತವನ್ನೂ ನಿನ್ನೆ ನಾನು ನಿಶ್ಚಯವಾಗಿ ನೋಡಿದೆನಲ್ಲಾ ಎಂದು ಕರ್ತನು ಹೇಳುತ್ತಾನೆ. ಇದಲ್ಲದೆ--ಇದೇ ಹೊಲದಲ್ಲಿ ನಿನಗೆ ಮುಯ್ಯಿಗೆ ಮುಯ್ಯಿ ಕೊಡುವೆ ನೆಂದು ಕರ್ತನು ಹೇಳುತ್ತಾನೆ. ಆದದರಿಂದ ಕರ್ತನ ವಾಕ್ಯದ ಪ್ರಕಾರ ಅವನನ್ನು ಎತ್ತಿಕೊಂಡು ಆ ಹೊಲ ದಲ್ಲಿ ಹಾಕಿಬಿಡು ಅಂದನು.