Proverbs · chapter 28 · verse 7
Proverbs 28:7 in Kannada
ಕಟ್ಟಳೆಯನ್ನು ಕೈಕೊಳ್ಳು ವವನು ಜ್ಞಾನಿಯಾದ ಮಗನು; ದುಂದುಗಾರ ಸಂಗ ಡಿಗನು ತನ್ನ ತಂದೆಯನ್ನು ಅವಮಾನಪಡಿಸುತ್ತಾನೆ.
Kattaleyannu kaikollu vavanu jnyaaniyaada maganu; dundugaara sanga diganu tanna tandeyannu avamaanapadisuttaane.
Proverbs 28:7 in English
- King James Version (KJV)
- Whoso keepeth the law [is] a wise son: but he that is a companion of riotous [men] shameth his father.
- World English Bible (WEB)
- Whoever keeps the law is a wise son; but he who is a companion of gluttons shames his father.
- American Standard Version (ASV)
- Whoso keepeth the law is a wise son; But he that is a companion of gluttons shameth his father.
- Bible in Basic English (BBE)
- He who keeps the law is a wise son, but he who keeps company with feasters puts shame on his father.
- Darby Translation (DBY)
- Whoso observeth the law is a son that hath understanding; but he that is a companion of profligates bringeth shame to his father.
- Webster's Bible (WBS)
- He who keepeth the law [is] a wise son: but he that is a companion of riotous [men] shameth his father.
- Young's Literal Translation (YLT)
- Whoso is keeping the law is an intelligent son, And a friend of gluttons, Doth cause his father to blush.
Read in context
- 5ನ್ಯಾಯ ತೀರ್ಪನ್ನು ದುಷ್ಟರು ಗ್ರಹಿಸುವದಿಲ್ಲ; ಕರ್ತನನ್ನು ಹುಡುಕುವವರು ಎಲ್ಲವುಗಳನ್ನು ಗ್ರಹಿಸುತ್ತಾರೆ.
- 6ಐಶ್ವರ್ಯವಂತನಾಗಿದ್ದರೂ ತನ್ನ ಮಾರ್ಗದಲ್ಲಿ ವಕ್ರ ವಾಗಿರುವವನಿಗಿಂತ ತನ್ನ ಯಥಾರ್ಥತೆಯಲ್ಲಿ ನಡೆ ಯುವ ದರಿದ್ರನು ಶ್ರೇಷ್ಠನು.
- 7ಕಟ್ಟಳೆಯನ್ನು ಕೈಕೊಳ್ಳು ವವನು ಜ್ಞಾನಿಯಾದ ಮಗನು; ದುಂದುಗಾರ ಸಂಗ ಡಿಗನು ತನ್ನ ತಂದೆಯನ್ನು ಅವಮಾನಪಡಿಸುತ್ತಾನೆ.
- 8ಬಡ್ಡಿಯಿಂದಲೂ ಅನ್ಯಾಯದ ಲಾಭದಿಂದಲೂ ತನ್ನ ಆಸ್ತಿಯನ್ನು ವೃದ್ಧಿಗೊಳಿಸುವವನು ಬಡವರ ಮೇಲೆ ದಯೆತೋರಿಸುವವನಿಗೆ ಅದನ್ನು ಕೂಡಿಸುವನು.
- 9ನ್ಯಾಯಪ್ರಮಾಣವನ್ನು ಕೇಳದೆ ತನ್ನ ಕಿವಿಯನ್ನು ತಿರುಗಿಸಿಕೊಳ್ಳುವವನ ಪ್ರಾರ್ಥನೆಯು ಅಸಹ್ಯ.
Cross references
- Proverbs 29:3 ಜ್ಞಾನೋಕ್ತಿಗಳು 29:3ಜ್ಞಾನವನ್ನು ಪ್ರೀತಿಸುವವನು ತನ್ನ ತಂದೆಯನ್ನು ಹರ್ಷಗೊಳಿಸುತ್ತಾನೆ; ವೇಶ್ಯೆಯ ರೊಂದಿಗೆ ಸಹವಾಸ ಮಾಡುವವನು ತನ್ನ ಆಸ್ತಿಯನ್ನು ವೆಚ್ಚಮಾಡುತ್ತಾನೆ.
- Proverbs 29:15 ಜ್ಞಾನೋಕ್ತಿಗಳು 29:15ಬೆತ್ತ ಬೆದ ರಿಕೆಗಳು ಜ್ಞಾನವನ್ನುಂಟುಮಾಡುತ್ತವೆ; ಶಿಕ್ಷಿಸದೆ ಬಿಟ್ಟ ಹುಡುಗನು ತನ್ನ ತಾಯಿಗೆ ಅವಮಾನವನ್ನು ತರುತ್ತಾನೆ.
- 1 Peter 4:3–4 1 ಪೇತ್ರನು 4:3–4ಬಂಡುತನ ದುರಾಶೆ ಕುಡಿಕತನ ದುಂದೌತನ ಮದ್ಯಪಾನಗೋಷ್ಠಿ ಅಸಹ್ಯವಾದ ವಿಗ್ರಹಾರಾಧನೆ ಗಳು ಇವುಗಳನ್ನು ನಡಿಸುವದರಲ್ಲಿಯೂ ಅನ್ಯಜನರಿಗೆ ಇಷ್ಟವಾದದ್ದನ್ನು ಮಾಡುವದರಲ್ಲಿಯೂ ನಮ್ಮ ಜೀವಿತ ದಲ್ಲಿ ಕಳೆದುಹೋದ ಕಾಲವೇ ಸಾಕು. ತಾವು ಮಾಡುವ ಅಪರಿಮಿತವಾದ ಪಟಿಂಗತನದಲ್ಲಿ ನೀವು ಅವರೊಂದಿಗೆ ಸೇರದೆ ಇದ್ದದ್ದಕ್ಕೆ ಅವರು ಆಶ್ಚರ್ಯ ಪಟ್ಟು ನಿಮ್ಮನ್ನು ದೂಷಿಸುತ್ತಾರೆ.
- Proverbs 19:26 ಜ್ಞಾನೋಕ್ತಿಗಳು 19:26ತಂದೆಯನ್ನು ನಷ್ಟಪಡಿಸಿ ತಾಯಿಯನ್ನು ಓಡಿಸುವವನು ನಾಚಿಕೆಯನ್ನುಂಟು ಮಾಡಿ ನಿಂದೆಯನ್ನು ತರುತ್ತಾನೆ.
- Proverbs 28:24 ಜ್ಞಾನೋಕ್ತಿಗಳು 28:24ತನ್ನ ತಂದೆ ತಾಯಿಯನ್ನಾಗಲಿ ದೋಚಿಕೊಂಡು--ಇದು ದೋಷವಲ್ಲ ಎಂದು ಹೇಳುವವನು ಕೆಡುಕನಿಗೆ ಜೊತೆಗಾರನು.
- Proverbs 2:1–6 ಜ್ಞಾನೋಕ್ತಿಗಳು 2:1–6ನನ್ನ ಮಗನೇ, ನನ್ನ ಮಾತುಗಳನ್ನು ನೀನು ಅಂಗೀಕರಿಸಿ ನನ್ನ ಆಜ್ಞೆಗಳನ್ನು ನಿನ್ನಲ್ಲಿ ಬಚ್ಚಿಟ್ಟುಕೊಂಡರೆ ನೀನು ಜ್ಞಾನಕ್ಕೆ ಕಿವಿಗೊಡು ವಂತೆಯೂ ತಿಳುವಳಿಕೆಗೆ ನಿನ್ನ ಹೃದಯವನ್ನು ತಿರು ಗಿಸುವಂತೆಯೂ ಹೌದು, ತಿಳುವಳಿಕೆಗಾಗಿ ಮೊರೆ ಯಿಟ್ಟು ವಿವೇಕಕ್ಕಾಗಿ ನಿನ್ನ ಸ್ವರವನ್ನು ಎತ್ತಿ ಬೆಳ್ಳಿ ಯಂತೆ ನೀನು ಅದನ್ನು ಹುಡುಕಿ ಬಚ್ಚಿಡಲ್ಪಟ್ಟ ಸಂಪ ತ್ತಿನಂತೆ ಅದಕ್ಕಾಗಿ ಹುಡುಕಿದರೆ, ನೀನು ಕರ್ತನ ಭಯವನ್ನು ತಿಳಿದುಕೊಳ್ಳುವಿ. ದೇವರ ಜ್ಞಾನವನ್ನು ಕಂಡುಕೊಳ್ಳುವಿ. ಜ್ಞಾನವನ್ನು ಕರ್ತನೇ ಕೊಡುತ್ತಾನೆ; ಆತನ ಬಾಯಿಂದಲೇ ತಿಳುವಳಿಕೆಯೂ ವಿವೇಕವೂ ಹೊರಟು ಬರುತ್ತವೆ.
- Proverbs 23:19–22 ಜ್ಞಾನೋಕ್ತಿಗಳು 23:19–22ನನ್ನ ಮಗನೇ, ಕೇಳಿ ಜ್ಞಾನವಂತನಾಗು; ನ್ಯಾಯಮಾರ್ಗ ದಲ್ಲಿ ನಿನ್ನ ಹೃದಯವನ್ನು ನಡಿಸು. ಮದ್ಯಪಾನ ಮಾಡುವವರಲ್ಲಿಯೂ ಅತಿಮಾಂಸ ಭಕ್ಷಕರಲ್ಲಿಯೂ ಇರಬೇಡ. ಕುಡುಕರೂ ಹೊಟ್ಟೇಬಾಕರೂ ದುರ್ಗ ತಿಗೆ ಬರುವರು; ತೂಕಡಿಕೆಯು ಒಬ್ಬನಿಗೆ ಹಳೇ ಬಟ್ಟೆ ಗಳನ್ನು ಹೊದಿಸುವದು. ನಿನ್ನನ್ನು ಪಡೆದ ತಂದೆಯ ಮಾತಿಗೆ ಕಿವಿಗೊಡು; ನಿನ್ನ ತಾಯಿ ಮುಪ್ಪಿನವಳಾದಾಗ ಆಕೆಯನ್ನು ಅಸಡ್ಡೆಮಾಡಬೇಡ.
- Luke 15:13 ಲೂಕನು 15:13ಕೆಲವೇ ದಿನಗಳಲ್ಲಿ ಕಿರೀ ಮಗನು ಎಲ್ಲವನ್ನೂ ಕೂಡಿಸಿಕೊಂಡು ದೂರದೇಶಕ್ಕೆ ಪ್ರಯಾಣಮಾಡಿ ಅಲ್ಲಿ ದುಂದುಗಾರನಾಗಿ ಜೀವಿಸಿ ತನ್ನ ಆಸ್ತಿಯನ್ನು ಹಾಳುಮಾಡಿಬಿಟ್ಟನು.
- Proverbs 3:1–35 ಜ್ಞಾನೋಕ್ತಿಗಳು 3:1–35ನನ್ನ ಮಗನೇ, ನನ್ನ ಕಟ್ಟಳೆಯನ್ನು ಮರೆಯಬೇಡ. ನಿನ್ನ ಹೃದಯವು ನನ್ನ ಆಜ್ಞೆ ಗಳನ್ನು ಕಾಪಾಡಲಿ: ಆಗ ಹೆಚ್ಚಾದ ದಿನಗಳೂ ದೀರ್ಘಾಯುಷ್ಯವೂ ಸಮಾಧಾನವೂ ನಿನಗೆ ಕೂಡಿಸ ಲ್ಪಡುವವು. ಕರುಣೆಯೂ ಸತ್ಯವೂ ನಿನ್ನನ್ನು ಬಿಡದಿರಲಿ. ನಿನ್ನ ಕೊರಳಿನ ಸುತ್ತಲೂ ಅವುಗಳನ್ನು ಕಟ್ಟಿಕೋ; ನಿನ್ನ ಹೃದಯದ ಹಲಗೆಯ ಮೇಲೆ ಅವುಗಳನ್ನು ಬರೆ. ಹೀಗೆ ನೀನು ದೇವರ ಮುಂದೆಯೂ ಮನುಷ್ಯನ ಮುಂದೆಯೂ ದಯೆಯನ್ನೂ ಒಳ್ಳೆಯ ವಿವೇಕವನ್ನೂ ಪಡೆದುಕೊಳ್ಳುವಿ. ಪೂರ್ಣಹೃದಯದಿಂದ ಕರ್ತನಲ್ಲಿ ಭರವಸವಿಡು; ನಿನ್ನ ಸ್ವಂತ ಬುದ್ಧಿಯ ಮೇಲೆ ಆಧಾರ ಮಾಡಿಕೊಳ್ಳಬೇಡ. ನಿನ್ನ ಎಲ್ಲಾ ಮಾರ್ಗಗಳಲ್ಲಿ ಆತನನ್ನು ಸನ್ಮಾನಿಸು. ಆಗ ಆತನು ನಿನ್ನ ಮಾರ್ಗಗಳನ್ನು ಸರಾಗಮಾಡುವನು. ನಿನ್ನ ದೃಷ್ಟಿಯಲ್ಲಿ ಜ್ಞಾನಿಯಂತೆ ನೀನು ಇರಬೇಡ; ಕರ್ತನಿಗೆ ಭಯಪಟ್ಟು ಕೆಟ್ಟತನದಿಂದ ನೀನು ತೊಲಗಿಹೋಗು. ಅದು ನಿನ್ನ ದೇಹಕ್ಕೆ ಆರೋಗ್ಯವೂ ಎಲುಬುಗಳಿಗೆ ಸಾರವೂ ಆಗಿರುವದು. ನಿನ್ನ ಆಸ್ತಿಯಿಂದಲೂ ಅಭಿವೃದ್ಧಿಯ ಎಲ್ಲಾ ಪ್ರಥಮ ಫಲಗಳಿಂದಲೂ ಕರ್ತನನ್ನು ಸನ್ಮಾನಿಸು. ಹೀಗೆ ನಿನ್ನ ಕಣಜಗಳು ಸಮೃದ್ಧಿಯಿಂದ ತುಂಬಲ್ಪಡುವವು, ಹೊಸ ದ್ರಾಕ್ಷಾರಸದಿಂದ ನಿನ್ನ ತೊಟ್ಟಿಗಳು ತುಂಬಿ ತುಳುಕುವವು. ನನ್ನ ಮಗನೇ, ಕರ್ತನ ಶಿಕ್ಷೆಯನ್ನು ತಾತ್ಸಾರ ಮಾಡಬೇಡ. ಮಾತ್ರವಲ್ಲದೆ ಆತನ ತಿದ್ದುವಿಕೆಗೆ ಬೇಸರ ಗೊಳ್ಳಬೇಡ; ತಾನು ಮೆಚ್ಚುವ ಮಗನನ್ನು ತಂದೆಯು ಶಿಕ್ಷಿಸುವಂತೆ ಕರ್ತನು ಯಾರನ್ನು ಪ್ರೀತಿಸುತ್ತಾನೋ ಅವನನ್ನು ಆತನು ತಿದ್ದುವನು. ಜ್ಞಾನವನ್ನು ಕಂಡು ಕೊಳ್ಳುವವನೂ ವಿವೇಕವನ್ನು ಸಂಪಾದಿಸಿಕೊಳ್ಳುವವನೂ ಧನ್ಯನು. ಅದರ ವ್ಯಾಪಾರವೂ ಬೆಳ್ಳಿಯ ವ್ಯಾಪಾರಕ್ಕಿಂತಲೂ ಅದರ ಲಾಭವು ಸೋಸಿದ ಬಂಗಾರಕ್ಕಿಂತಲೂ ಉತ್ತಮವಾಗಿದೆ. ಅದು ಮಾಣಿಕ್ಯಗಳಿಗಿಂತಲೂ ಬಹು ಅಮೂಲ್ಯವುಳ್ಳದ್ದಾಗಿದ್ದು ನಿನ್ನ ಇಷ್ಟ ವಸ್ತುಗಳೆಲ್ಲವೂ ಅದಕ್ಕೆ ಸಮವಾಗುವದಿಲ್ಲ. ಆಕೆಯ ಬಲಗೈಯಲ್ಲಿ ದೀರ್ಘಾಯುಷ್ಯವೂ ಎಡಗೈಯಲ್ಲಿ ಐಶ್ವರ್ಯವೂ ಘನತೆಯೂ ಇವೆ. ಅವಳ ಮಾರ್ಗ ಗಳು ಸಂತೋಷಕರವೂ ಎಲ್ಲಾ ದಾರಿಗಳು ಸಮಾ ಧಾನಕರವೂ ಆಗಿವೆ. ತನ್ನನ್ನು ಹಿಡಿದುಕೊಳ್ಳುವ ವರಿಗೆ ಆಕೆಯು ಜೀವದ ವೃಕ್ಷವಾಗಿದ್ದಾಳೆ; ಆಕೆಯನ್ನು ಭದ್ರವಾಗಿ ಇಟ್ಟುಕೊಳ್ಳುವ ಪ್ರತಿಯೊಬ್ಬನೂ ಧನ್ಯನು. ಕರ್ತನು ಜ್ಞಾನದಿಂದ ಭೂಮಿಯನ್ನು ಸ್ಥಾಪಿಸಿದನು; ವಿವೇಕದ ಮೂಲಕ ಆತನು ಆಕಾಶಗಳನ್ನು ಸ್ಥಿರಪಡಿಸಿ ದನು. ಆತನ ತಿಳುವಳಿಕೆಯಿಂದ ಅಗಾಧಗಳು ಒಡೆದು ಮೇಘಗಳು ಇಬ್ಬನಿಯನ್ನು ಸುರಿಸುತ್ತವೆ. ನನ್ನ ಮಗನೇ, ನಿನ್ನ ಕಣ್ಣುಗಳಿಂದ ಅವುಗಳು ತಪ್ಪಿಸಿಕೊಳ್ಳದೆ ಇರಲಿ. ಸುಜ್ಞಾನವನ್ನೂ ವಿವೇಕವನ್ನೂ ಇಟ್ಟುಕೋ. ಅವು ನಿನ್ನ ಪ್ರಾಣಕ್ಕೆ ಜೀವವೂ ಕೊರ ಳಿಗೆ ಸೊಬಗೂ ಆಗಿರುವವು. ನಿನ್ನ ಮಾರ್ಗದಲ್ಲಿ ನೀನು ನಿರ್ಭಯವಾಗಿ ನಡೆಯುವಿ, ನಿನ್ನ ಪಾದವು ಎಡವುವದಿಲ್ಲ. ನೀನು ಮಲಗುವಾಗ ನಿನಗೆ ಹೆದರಿಕೆ ಇರುವದಿಲ್ಲ, ಹೌದು, ನೀನು ಮಲಗಿಕೊಳ್ಳುವಿ. ನಿನ್ನ ನಿದ್ರೆಯು ಸುಖವಾಗಿರುವದು. ಆಕಸ್ಮತ್ತಾದ ಭಯ ಕ್ಕಾಗಲಿ ಇಲ್ಲವೆ ಅವರ ಮೇಲೆ ಬರುವ ದುಷ್ಟರ ನಾಶನಕ್ಕಾಗಲಿ ನೀನು ಭಯಪಡದಿರು. ಕರ್ತನೇ ನಿನಗೆ ಭರವಸನಾಗಿದ್ದು ನಿನ್ನ ಪಾದವು ತೆಗೆಯಲ್ಪಡ ದಂತೆ ಆತನು ಕಾಪಾಡುವನು. ನಿನಗೆ ಸಾಧ್ಯವಿರುವಾಗ ಹೊಂದತಕ್ಕವರಿಗೆ ಒಳ್ಳೆ ಯದು ಮಾಡುವದನ್ನು ತಪ್ಪಿಸಬೇಡ. ಕೊಡತಕ್ಕದ್ದು ನಿನ್ನಲ್ಲಿರುವಾಗ--ಹೋಗಿ ಬಾ, ನಾಳೆ ನಿನಗೆ ಕೊಡು ವೆನು ಎಂದು ನಿನ್ನ ನೆರೆಯವನಿಗೆ ಹೇಳಬೇಡ. ನಿನ್ನ ನೆರೆಯವನು ಭದ್ರತೆಯಿಂದ ನಿನ್ನ ಪಕ್ಕದಲ್ಲಿ ಜೀವಿ ಸುತ್ತಿರುವಾಗ ಅವನಿಗೆ ವಿರೋಧವಾಗಿ ಕೇಡನ್ನು ಕಲ್ಪಿಸ ಬೇಡ. ಒಬ್ಬನು ನಿನಗೆ ಯಾವ ಕೇಡನ್ನೂ ಮಾಡ ದಿದ್ದರೆ ಅವನೊಂದಿಗೆ ಯಾವ ಕಾರಣವಿಲ್ಲದೆ ಜಗಳ ವಾಡಬೇಡ. ಬಲಾತ್ಕಾರಿಯ ವಿಷಯದಲ್ಲಿ ನೀನು ಹೊಟ್ಟೇಕಿಚ್ಚುಪಡಬೇಡ, ಅವನ ಮಾರ್ಗಗಳಲ್ಲಿ ಯಾವದನ್ನೂ ನೀನು ಆರಿಸಿಕೊಳ್ಳಬೇಡ. ವಕ್ರ ಬುದ್ಧಿಯವನು ಕರ್ತನಿಗೆ ಅಸಹ್ಯನಾಗಿದ್ದಾನೆ; ಆದರೆ ಆತನ ಗುಟ್ಟು ನೀತಿವಂತರೊಂದಿಗೆ ಇದೆ. ಕರ್ತನ ಶಾಪವು ದುಷ್ಟರ ಮನೆಯಲ್ಲಿದೆ; ಆದರೆ ನ್ಯಾಯಸ್ಥರ ನಿವಾಸವನ್ನು ಆತನು ಆಶೀರ್ವದಿಸುತ್ತಾನೆ. ಆತನು ನಿಶ್ಚಯವಾಗಿಯೂ ಪರಿಹಾಸ್ಯಕರನ್ನು ತಿರಸ್ಕರಿಸುತ್ತಾನೆ; ಆದರೆ ದೀನರಿಗೆ ಆತನು ಕೃಪೆಯನ್ನು ಕೊಡುತ್ತಾನೆ.ಜ್ಞಾನಿಯು ಮಹಿಮೆಗೆ ಬಾಧ್ಯನಾಗುವನು, ಜ್ಞಾನ ಹೀನರ ಏಳಿಗೆಯು ಅವಮಾನವಾಗುವದು. ಜ್ಞಾನಿಯು ಮಹಿಮೆಗೆ ಬಾಧ್ಯನಾಗುವನು, ಜ್ಞಾನ ಹೀನರ ಏಳಿಗೆಯು ಅವಮಾನವಾಗುವದು.
- Luke 15:30 ಲೂಕನು 15:30ಆದರೆ ನಿನ್ನ ಬದುಕನ್ನು ಸೂಳೆಯ ರೊಂದಿಗೆ ನುಂಗಿಬಿಟ್ಟ ಈ ನಿನ್ನ ಮಗನು ಬಂದ ಕೂಡಲೆ ಅವನಿಗೋಸ್ಕರ ಕೊಬ್ಬಿದ ಕರುವನ್ನು ನೀನು ಕೊಯ್ಸಿದ್ದೀ ಅಂದನು.