Proverbs · chapter 3 · verse 1
Proverbs 3:1 in Kannada
ನನ್ನ ಮಗನೇ, ನನ್ನ ಕಟ್ಟಳೆಯನ್ನು ಮರೆಯಬೇಡ. ನಿನ್ನ ಹೃದಯವು ನನ್ನ ಆಜ್ಞೆ ಗಳನ್ನು ಕಾಪಾಡಲಿ:
Nanna magane, nanna kattaleyannu mareyabeda. Ninna hrudayavu nanna aajnye galannu kaapaadali:
Proverbs 3:1 in English
- King James Version (KJV)
- My son, forget not my law; but let thine heart keep my commandments:
- World English Bible (WEB)
- My son, don’t forget my teaching, but let your heart keep my commandments,
- American Standard Version (ASV)
- My son, forget not my law; But let thy heart keep my commandments:
- Bible in Basic English (BBE)
- My son, keep my teaching in your memory, and my rules in your heart:
- Darby Translation (DBY)
- My son, forget not my teaching, and let thy heart observe my commandments;
- Webster's Bible (WBS)
- My son, forget not my law; but let thy heart keep my commandments;
- Young's Literal Translation (YLT)
- My son! my law forget not, And my commands let thy heart keep,
Read in context
- 1ನನ್ನ ಮಗನೇ, ನನ್ನ ಕಟ್ಟಳೆಯನ್ನು ಮರೆಯಬೇಡ. ನಿನ್ನ ಹೃದಯವು ನನ್ನ ಆಜ್ಞೆ ಗಳನ್ನು ಕಾಪಾಡಲಿ:
- 2ಆಗ ಹೆಚ್ಚಾದ ದಿನಗಳೂ ದೀರ್ಘಾಯುಷ್ಯವೂ ಸಮಾಧಾನವೂ ನಿನಗೆ ಕೂಡಿಸ ಲ್ಪಡುವವು.
- 3ಕರುಣೆಯೂ ಸತ್ಯವೂ ನಿನ್ನನ್ನು ಬಿಡದಿರಲಿ. ನಿನ್ನ ಕೊರಳಿನ ಸುತ್ತಲೂ ಅವುಗಳನ್ನು ಕಟ್ಟಿಕೋ; ನಿನ್ನ ಹೃದಯದ ಹಲಗೆಯ ಮೇಲೆ ಅವುಗಳನ್ನು ಬರೆ.
Cross references
- John 14:21–24 ಯೋಹಾನನು 14:21–24ನನ್ನ ಆಜ್ಞೆಗಳನ್ನು ಹೊಂದಿ ಅವುಗಳನ್ನು ಅನುಸರಿಸುವವನೇ ನನ್ನನ್ನು ಪ್ರೀತಿಸುವವನು; ನನ್ನನ್ನು ಪ್ರೀತಿಸುವವನನ್ನು ನನ್ನ ತಂದೆಯೂ ಪ್ರೀತಿಸುವನು. ನಾನು ಅವನನ್ನು ಪ್ರೀತಿಸಿ ಅವನಿಗೆ ನನ್ನನ್ನು ವ್ಯಕ್ತಪಡಿಸಿ ಕೊಳ್ಳುವೆನು ಎಂದು ಹೇಳಿದನು. ಯೂದನು (ಇಸ್ಕರಿಯೋತನಲ್ಲ)--ಕರ್ತನೇ, ನೀನು ಲೋಕಕ್ಕೆ ಕಾಣಿಸಿಕೊಳ್ಳದೆ ನಮಗೆ ಕಾಣಿಸಿ ಕೊಳ್ಳುವದು ಹೇಗೆ ಎಂದು ಆತನನ್ನು ಕೇಳಿದನು. ಯೇಸು ಪ್ರತ್ಯುತ್ತರವಾಗಿ ಅವನಿಗೆ--ಯಾವನಾ ದರೂ ನನ್ನನ್ನು ಪ್ರೀತಿಸುವದಾದರೆ ಅವನು ನನ್ನ ಮಾತುಗಳನ್ನು ಕೈಕೊಳ್ಳುವನು; ನನ್ನ ತಂದೆಯು ಅವ ನನ್ನು ಪ್ರೀತಿಸುವನು. ಇದಲ್ಲದೆ ನಾವು ಅವನ ಬಳಿಗೆ ಬಂದು ಅವನೊಂದಿಗೆ ನಮ್ಮ ನಿವಾಸವನ್ನು ಮಾಡಿ ಕೊಳ್ಳುವೆವು. ನನ್ನನ್ನು ಪ್ರೀತಿಸದವನು ನನ್ನ ಮಾತು ಗಳನ್ನು ಕೈಕೊಳ್ಳುವದಿಲ್ಲ; ನೀವು ಕೇಳಿದ ಮಾತು ನನ್ನದಲ್ಲ; ಆದರೆ ನನ್ನನ್ನು ಕಳುಹಿಸಿದ ನನ್ನ ತಂದೆಯ ಮಾತೇ.
- Proverbs 4:5 ಜ್ಞಾನೋಕ್ತಿಗಳು 4:5ಜ್ಞಾನವನ್ನೂ ವಿವೇಕವನ್ನೂ ಸಂಪಾದಿಸು; ಅವುಗಳನ್ನು ಮರೆಯದಿರು, ಅಲ್ಲದೆ ನನ್ನ ಬಾಯಿಯ ಮಾತುಗಳನ್ನು ನಿರಾಕರಿಸಬೇಡ.
- Deuteronomy 6:6–9 ಧರ್ಮೋಪದೇಶಕಾಂಡ 6:6–9ನಾನು ಈಹೊತ್ತು ನಿನಗೆ ಆಜ್ಞಾಪಿಸುವ ಈ ಮಾತುಗಳು ನಿನ್ನ ಹೃದಯದಲ್ಲಿ ಇರಬೇಕು. ಅವು ಗಳನ್ನು ನಿನ್ನ ಮಕ್ಕಳಿಗೆ ಅಭ್ಯಾಸಮಾಡಿಸಿ ನಿನ್ನ ಮನೆಯಲ್ಲಿ ಕೂತಿರುವಾಗಲೂ ಮಾರ್ಗದಲ್ಲಿ ಹೋಗುವಾಗಲೂ ಮಲಗುವಾಗಲೂ ಏಳುವಾಗಲೂ ಅವುಗಳ ವಿಷಯ ವಾಗಿ ಮಾತನಾಡಬೇಕು. ಅವುಗಳನ್ನು ಗುರುತಾಗಿ ನಿನ್ನ ಕೈ ಮೇಲೆ ಕಟ್ಟಿಕೊಳ್ಳಬೇಕು; ಅವು ನಿನ್ನ ಕಣ್ಣುಗಳ ನಡುವೆ ಹಣೆ ಕಟ್ಟಾಗಿರಬೇಕು. ಅವುಗಳನ್ನು ನಿನ್ನ ಮನೆಯ ಕಂಬಗಳ ಮೇಲೆಯೂ ನಿನ್ನ ಬಾಗಲುಗಳ ಮೇಲೆಯೂ ಬರೆಯಬೇಕು.
- Psalm 119:16 ಕೀರ್ತನೆಗಳು 119:16ನಿನ್ನ ನಿಯಮಗಳಲ್ಲಿ ಆನಂದಪಟ್ಟು, ನಿನ್ನ ವಾಕ್ಯವನ್ನು ಮರೆತುಬಿಡೆನು.
- Proverbs 1:8 ಜ್ಞಾನೋಕ್ತಿಗಳು 1:8ನನ್ನ ಮಗನೇ, ನಿನ್ನ ತಂದೆಯ ಶಿಕ್ಷಣವನ್ನು ಕೇಳು, ನಿನ್ನ ತಾಯಿಯ ಕಟ್ಟಳೆಯನ್ನು ತೊರೆಯಬೇಡ;
- Psalm 119:34 ಕೀರ್ತನೆಗಳು 119:34ನನಗೆ ಗ್ರಹಿಕೆಯನ್ನು ಕೊಡು; ಆಗ ನಿನ್ನ ನ್ಯಾಯಪ್ರಮಾಣವನ್ನು ಕೈಕೊಂಡು ಹೌದು, ಪೂರ್ಣಹೃದಯದಿಂದ ಅದನ್ನು ಕೈಕೊಳ್ಳುವೆನು.
- Psalm 119:93 ಕೀರ್ತನೆಗಳು 119:93ಎಂದೆಂದಿಗೂ ನಿನ್ನ ಕಟ್ಟಳೆಗಳನ್ನು ಮರೆತುಬಿಡೆನು; ಯಾಕಂದರೆ ಅವುಗಳಿಂದ ನನ್ನನ್ನು ಬದುಕಿಸಿದ್ದೀ.
- Jeremiah 31:33 ಯೆರೆಮೀಯ 31:33ಆದರೆ ನಾನು ಇಸ್ರಾಯೇಲಿನ ಮನೆತನದವರ ಸಂಗಡ ಮಾಡುವ ಒಡಂಬಡಿಕೆ ಇದೇ. ಆ ದಿನಗಳಾದ ಮೇಲೆ ನಾನು ನನ್ನ ನ್ಯಾಯಪ್ರಮಾಣವನ್ನು ಅವರೊಳಗೆ ಇಟ್ಟು ಅವರ ಹೃದಯದಲ್ಲಿ ಅದನ್ನು ಬರೆಯುವೆನು; ನಾನು ಅವರಿಗೆ ದೇವರಾಗಿರುವೆನು ಅವರು ನನಗೆ ಪ್ರಜೆ ಯಾಗಿರುವರು ಎಂದು ಕರ್ತನು ಅನ್ನುತ್ತಾನೆ.
- Deuteronomy 8:1 ಧರ್ಮೋಪದೇಶಕಾಂಡ 8:1ನೀವು ಬದುಕಿ ಅಭಿವೃದ್ಧಿಯಾಗಿ ಕರ್ತನು ನಿಮ್ಮ ಪಿತೃಗಳಿಗೆ ಪ್ರಮಾಣಮಾಡಿದ ದೇಶಕ್ಕೆ ಹೋಗಿ ಅದನ್ನು ಸ್ವತಂತ್ರಿಸಿಕೊಳ್ಳುವ ಹಾಗೆ ನಾನು ಈಹೊತ್ತು ನಿನಗೆ ಆಜ್ಞಾಪಿಸುವ ಆಜ್ಞೆಗಳನ್ನೆಲ್ಲಾ ಲಕ್ಷ್ಯವಿಟ್ಟು ಕೈಕೊಳ್ಳಬೇಕು.
- Psalm 119:11 ಕೀರ್ತನೆಗಳು 119:11ನಿನಗೆ ವಿರೋಧವಾಗಿ ಪಾಪ ಮಾಡದ ಹಾಗೆ ನನ್ನ ಹೃದಯದಲ್ಲಿ ನಿನ್ನ ವಾಕ್ಯವನ್ನು ಬಚ್ಚಿಟ್ಟಿದ್ದೇನೆ.
- Psalm 119:47–48 ಕೀರ್ತನೆಗಳು 119:47–48ನಾನು ಪ್ರೀತಿಮಾಡುವ ನಿನ್ನ ಆಜ್ಞೆಗಳಲ್ಲಿ ಆನಂದಪಡುವೆನು. ನಾನು ಪ್ರೀತಿ ಮಾಡುವ ನಿನ್ನ ಆಜ್ಞೆಗಳ ಕಡೆಗೆ ನನ್ನ ಕೈಗಳನ್ನೆತ್ತಿ, ನಿನ್ನ ನಿಯಮಗಳನ್ನು ಧ್ಯಾನ ಮಾಡುವೆನು.
- Psalm 119:153 ಕೀರ್ತನೆಗಳು 119:153ನನ್ನ ಸಂಕಟವನ್ನು ನೋಡಿ ನನ್ನನ್ನು ತಪ್ಪಿಸಿ ಬಿಡು; ನಿನ್ನ ನ್ಯಾಯಪ್ರಮಾಣವನ್ನು ಮರೆತುಬಿಡೆನು.