Proverbs · chapter 3 · verse 3
Proverbs 3:3 in Kannada
ಕರುಣೆಯೂ ಸತ್ಯವೂ ನಿನ್ನನ್ನು ಬಿಡದಿರಲಿ. ನಿನ್ನ ಕೊರಳಿನ ಸುತ್ತಲೂ ಅವುಗಳನ್ನು ಕಟ್ಟಿಕೋ; ನಿನ್ನ ಹೃದಯದ ಹಲಗೆಯ ಮೇಲೆ ಅವುಗಳನ್ನು ಬರೆ.
Karuneyoo satyavoo ninnannu bidadirali. Ninna koralina suttaloo avugalannu kattiko; ninna hrudayada halageya mele avugalannu bare.
Proverbs 3:3 in English
- King James Version (KJV)
- Let not mercy and truth forsake thee: bind them about thy neck; write them upon the table of thine heart:
- World English Bible (WEB)
- Don’t let kindness and truth forsake you. Bind them around your neck. Write them on the tablet of your heart.
- American Standard Version (ASV)
- Let not kindness and truth forsake thee: Bind them about thy neck; Write them upon the tablet of thy heart:
- Bible in Basic English (BBE)
- Let not mercy and good faith go from you; let them be hanging round your neck, recorded on your heart;
- Darby Translation (DBY)
- Let not loving-kindness and truth forsake thee; bind them about thy neck, write them upon the tablet of thy heart:
- Webster's Bible (WBS)
- Let not mercy and truth forsake thee: bind them about thy neck; write them upon the table of thy heart:
- Young's Literal Translation (YLT)
- Let not kindness and truth forsake thee, Bind them on thy neck, Write them on the tablet of thy heart,
Read in context
- 1ನನ್ನ ಮಗನೇ, ನನ್ನ ಕಟ್ಟಳೆಯನ್ನು ಮರೆಯಬೇಡ. ನಿನ್ನ ಹೃದಯವು ನನ್ನ ಆಜ್ಞೆ ಗಳನ್ನು ಕಾಪಾಡಲಿ:
- 2ಆಗ ಹೆಚ್ಚಾದ ದಿನಗಳೂ ದೀರ್ಘಾಯುಷ್ಯವೂ ಸಮಾಧಾನವೂ ನಿನಗೆ ಕೂಡಿಸ ಲ್ಪಡುವವು.
- 3ಕರುಣೆಯೂ ಸತ್ಯವೂ ನಿನ್ನನ್ನು ಬಿಡದಿರಲಿ. ನಿನ್ನ ಕೊರಳಿನ ಸುತ್ತಲೂ ಅವುಗಳನ್ನು ಕಟ್ಟಿಕೋ; ನಿನ್ನ ಹೃದಯದ ಹಲಗೆಯ ಮೇಲೆ ಅವುಗಳನ್ನು ಬರೆ.
- 4ಹೀಗೆ ನೀನು ದೇವರ ಮುಂದೆಯೂ ಮನುಷ್ಯನ ಮುಂದೆಯೂ ದಯೆಯನ್ನೂ ಒಳ್ಳೆಯ ವಿವೇಕವನ್ನೂ ಪಡೆದುಕೊಳ್ಳುವಿ.
- 5ಪೂರ್ಣಹೃದಯದಿಂದ ಕರ್ತನಲ್ಲಿ ಭರವಸವಿಡು; ನಿನ್ನ ಸ್ವಂತ ಬುದ್ಧಿಯ ಮೇಲೆ ಆಧಾರ ಮಾಡಿಕೊಳ್ಳಬೇಡ.
Cross references
- Proverbs 7:3 ಜ್ಞಾನೋಕ್ತಿಗಳು 7:3ಅವುಗ ಳನ್ನು ನಿನ್ನ ಬೆರಳುಗಳಿಗೆ ಕಟ್ಟಿಕೋ, ನಿನ್ನ ಹೃದಯದ ಹಲಗೆಯಲ್ಲಿ ಅವುಗಳನ್ನು ಬರೆ.
- 2 Corinthians 3:3 2 ಕೊರಿಂಥದವರಿಗೆ 3:3ನೀವು ಕ್ರಿಸ್ತನು ನಮ್ಮ ಕೈಯಿಂದ ಬರೆಯಿಸಿ ಕೊಟ್ಟ ಪತ್ರಿಕೆಯಾಗಿದ್ದೀರೆಂಬದು ಪ್ರತ್ಯಕ್ಷವಾಗಿಯೇ ಇದೆ; ಅದು ಮಸಿಯಿಂದ ಬರೆದದ್ದಲ್ಲ, ಆದರೆ ಜೀವವುಳ್ಳ ದೇವರ ಆತ್ಮನಿಂದಲೇ ಬರೆದದ್ದು; ಕಲ್ಲಿನ ಹಲಿಗೆಗಳ ಮೇಲೆಯಲ್ಲ, ಮನುಷ್ಯನ ಹೃದಯವೆಂಬ ಹಲಿಗೆಗಳ ಮೇಲೆ ಬರೆದದ್ದು.
- Hebrews 10:16 ಇಬ್ರಿಯರಿಗೆ 10:16ಹೇಗೆಂದರೆ ಆತನು ಮೊದಲು ಹೇಳಿದಂತೆ--ಆ ದಿನಗಳಾದ ಮೇಲೆ ನನ್ನ ಆಜ್ಞೆಗಳನ್ನು ಅವರ ಹೃದಯಗಳಲ್ಲಿ ಇಡುವೆನು, ಅವರ ಮನಸ್ಸುಗಳಲ್ಲಿ ಅವುಗಳನ್ನು ಬರೆಯುವೆನು. ನಾನು ಅವರ ಸಂಗಡ ಮಾಡಿಕೊಳ್ಳುವ ಒಡಂಬಡಿಕೆಯು ಇದೇ.
- Deuteronomy 11:18–21 ಧರ್ಮೋಪದೇಶಕಾಂಡ 11:18–21ಆದದರಿಂದ ಈ ನನ್ನ ವಾಕ್ಯಗಳನ್ನು ನಿಮ್ಮ ಹೃದಯದಲ್ಲಿಯೂ ಮನಸ್ಸಿನಲ್ಲಿಯೂ ಇಟ್ಟುಕೊಳ್ಳಿರಿ; ಅವುಗಳನ್ನು ಗುರುತಾಗಿ ನಿಮ್ಮ ಕೈಗಳಿಗೆ ಕಟ್ಟಿಕೊಳ್ಳಿರಿ; ಅವು ನಿಮ್ಮ ಕಣ್ಣುಗಳ ನಡುವೆ ಹಣೆಕಟ್ಟಾಗಿರಲಿ. ನಿಮ್ಮ ಮನೆಯಲ್ಲಿ ಕೂತಿರುವಾಗಲೂ ಮಾರ್ಗದಲ್ಲಿ ನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಅವುಗಳ ವಿಷಯ ಮಾತನಾಡಿ ಅವುಗಳನ್ನು ನಿಮ್ಮ ಮಕ್ಕಳಿಗೆ ಕಲಿಸಬೇಕು. ನಿನ್ನ ಮನೆಯ ಕಂಬಗಳ ಮೇಲೆಯೂ ನಿನ್ನ ಬಾಗಲುಗಳ ಮೇಲೆಯೂ ಅವು ಗಳನ್ನು ಬರೆಯಬೇಕು. ಹೀಗಾದರೆ ನಿಮ್ಮ ದಿವಸ ಗಳೂ ನಿಮ್ಮ ಮಕ್ಕಳ ದಿವಸಗಳೂ ಭೂಮಿಯಲ್ಲಿ ಆಕಾಶದ ದಿವಸಗಳ ಪ್ರಕಾರ ಕರ್ತನು ನಿಮ್ಮ ಪಿತೃಗಳಿಗೆ ಕೊಡುತ್ತೇನೆಂದು ಪ್ರಮಾಣಮಾಡಿದ ದೇಶದಲ್ಲಿ ಹೆಚ್ಚುವವು.
- Malachi 2:6 ಮಲಾಕಿಯ 2:6ಸತ್ಯದ ನ್ಯಾಯಪ್ರಮಾಣವು ಅವನ ಬಾಯಲ್ಲಿ ಇತ್ತು; ಅಕ್ರಮವು ಅವನ ತುಟಿಗಳಲ್ಲಿ ಸಿಕ್ಕಲಿಲ್ಲ. ಅವನು ಸಮಾಧಾನದಿಂದಲೂ ನ್ಯಾಯ ದಿಂದಲೂ ನನ್ನ ಸಂಗಡ ನಡೆದುಕೊಂಡು ಅನೇಕರನ್ನು ಅಕ್ರಮದಿಂದ ತಿರುಗಿಸಿದನು.
- Proverbs 6:21 ಜ್ಞಾನೋಕ್ತಿಗಳು 6:21ಅವುಗಳನ್ನು ಯಾವಾಗಲೂ ನಿನ್ನ ಹೃದಯಕ್ಕೆ ಬಂಧಿಸು. ನಿನ್ನ ಕಂಠಕ್ಕೆ ಕಟ್ಟಿಕೋ.
- Ephesians 5:1–2 ಎಫೆಸದವರಿಗೆ 5:1–2ಆದದರಿಂದ ನೀವು ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ ದೇವರನ್ನು ಅನುಸರಿಸುವ ವರಾಗಿರ್ರಿ. ಕ್ರಿಸ್ತನು ನಮ್ಮನ್ನು ಪ್ರೀತಿಸಿ ನಮಗೋಸ್ಕರ ತನ್ನನ್ನೇ ದೇವರಿಗೆ ಸುಗಂಧವಾಸನೆಯಾದ ಕಾಣಿಕೆ ಯಾಗಿಯೂ ಯಜ್ಞವಾಗಿಯೂ ಸಮರ್ಪಿಸಿಕೊಂಡ ಪ್ರಕಾರ ನೀವೂ ಪ್ರೀತಿಯಲ್ಲಿ ನಡೆದುಕೊಳ್ಳಿರಿ.
- Ephesians 5:9 ಎಫೆಸದವರಿಗೆ 5:9ಆತ್ಮನ ಫಲವು ಎಲ್ಲಾ ಉಪಕಾರದಲ್ಲಿಯೂ ನೀತಿಯಲ್ಲಿಯೂ ಸತ್ಯ ದಲ್ಲಿಯೂ ಇರುತ್ತದೆ.
- Proverbs 16:6 ಜ್ಞಾನೋಕ್ತಿಗಳು 16:6ಕನಿಕರ ಮತ್ತು ಸತ್ಯದಿಂದ ಅಕ್ರಮವು ಶುದ್ಧೀಕರಿಸಲ್ಪಡುತ್ತದೆ; ಕರ್ತನ ಭಯದ ಮೂಲಕ ಮನುಷ್ಯರು ಕೆಟ್ಟದ್ದರಿಂದ ತೊಲಗುತ್ತಾರೆ.
- Proverbs 1:9 ಜ್ಞಾನೋಕ್ತಿಗಳು 1:9ಅವು ನಿನ್ನ ತಲೆಗೆ ಕೃಪೆಯ ಆಭರಣವೂ ನಿನ್ನ ಕೊರಳಿನ ಸುತ್ತಲೂ ಸರಗಳಂತೆಯೂ ಇರುವವು.
- Psalm 25:10 ಕೀರ್ತನೆಗಳು 25:10ಆತನ ಒಡಂಬಡಿಕೆಯನ್ನೂ ಸಾಕ್ಷಿಗಳನ್ನೂ ಕೈಕೊಳ್ಳು ವವರಿಗೆ ಕರ್ತನ ದಾರಿಗಳೆಲ್ಲಾ ಕರುಣೆಯೂ ಸತ್ಯವೂ ಉಳ್ಳವು.
- Psalm 119:11 ಕೀರ್ತನೆಗಳು 119:11ನಿನಗೆ ವಿರೋಧವಾಗಿ ಪಾಪ ಮಾಡದ ಹಾಗೆ ನನ್ನ ಹೃದಯದಲ್ಲಿ ನಿನ್ನ ವಾಕ್ಯವನ್ನು ಬಚ್ಚಿಟ್ಟಿದ್ದೇನೆ.