Proverbs · chapter 3 · verse 20
Proverbs 3:20 in Kannada
ಆತನ ತಿಳುವಳಿಕೆಯಿಂದ ಅಗಾಧಗಳು ಒಡೆದು ಮೇಘಗಳು ಇಬ್ಬನಿಯನ್ನು ಸುರಿಸುತ್ತವೆ.
Aatana tiluvalikeyinda agaadhagalu odedu meghagalu ibbaniyannu surisuttave.
Proverbs 3:20 in English
- King James Version (KJV)
- By his knowledge the depths are broken up, and the clouds drop down the dew.
- World English Bible (WEB)
- By his knowledge, the depths were broken up, and the skies drop down the dew.
- American Standard Version (ASV)
- By his knowledge the depths were broken up, And the skies drop down the dew.
- Bible in Basic English (BBE)
- By his knowledge the deep was parted, and dew came dropping from the skies.
- Darby Translation (DBY)
- By his knowledge the deeps were broken up, and the skies drop down the dew.
- Webster's Bible (WBS)
- By his knowledge the depths are broken up, and the clouds drop down the dew.
- Young's Literal Translation (YLT)
- By His knowledge depths have been rent, And clouds do drop dew.
Read in context
- 18ತನ್ನನ್ನು ಹಿಡಿದುಕೊಳ್ಳುವ ವರಿಗೆ ಆಕೆಯು ಜೀವದ ವೃಕ್ಷವಾಗಿದ್ದಾಳೆ; ಆಕೆಯನ್ನು ಭದ್ರವಾಗಿ ಇಟ್ಟುಕೊಳ್ಳುವ ಪ್ರತಿಯೊಬ್ಬನೂ ಧನ್ಯನು.
- 19ಕರ್ತನು ಜ್ಞಾನದಿಂದ ಭೂಮಿಯನ್ನು ಸ್ಥಾಪಿಸಿದನು; ವಿವೇಕದ ಮೂಲಕ ಆತನು ಆಕಾಶಗಳನ್ನು ಸ್ಥಿರಪಡಿಸಿ ದನು.
- 20ಆತನ ತಿಳುವಳಿಕೆಯಿಂದ ಅಗಾಧಗಳು ಒಡೆದು ಮೇಘಗಳು ಇಬ್ಬನಿಯನ್ನು ಸುರಿಸುತ್ತವೆ.
- 21ನನ್ನ ಮಗನೇ, ನಿನ್ನ ಕಣ್ಣುಗಳಿಂದ ಅವುಗಳು ತಪ್ಪಿಸಿಕೊಳ್ಳದೆ ಇರಲಿ. ಸುಜ್ಞಾನವನ್ನೂ ವಿವೇಕವನ್ನೂ ಇಟ್ಟುಕೋ.
- 22ಅವು ನಿನ್ನ ಪ್ರಾಣಕ್ಕೆ ಜೀವವೂ ಕೊರ ಳಿಗೆ ಸೊಬಗೂ ಆಗಿರುವವು.
Cross references
- Genesis 7:11 ಆದಿಕಾಂಡ 7:11ನೋಹನ ಜೀವಮಾನದ ಆರುನೂರನೆಯ ವರುಷದ ಎರಡನೆಯ ತಿಂಗಳಿನ ಅಂದರೆ ಅದೇ ತಿಂಗಳಿನ ಹದಿನೇಳನೆಯ ದಿವಸದಲ್ಲಿಯೇ ಮಹಾ ಅಗಾಧದ ಬುಗ್ಗೆಗಳೆಲ್ಲಾ ಒಡೆದವು. ಆಕಾಶದ ಕಿಟಕಿ ಗಳು ತೆರೆಯಲ್ಪಟ್ಟವು.
- Psalm 65:9–12 ಕೀರ್ತನೆಗಳು 65:9–12ನೀನು ಭೂಮಿಯನ್ನು ಕಟಾಕ್ಷಿಸಿ ಅದನ್ನು ತೋಯಿಸಿ ನೀರಿನಿಂದ ತುಂಬಿರುವಂತೆ ದೇವರ ನದಿ ಯಿಂದ ಅದನ್ನು ಚೆನ್ನಾಗಿ ಹದಗೊಳಿಸುತ್ತೀ; ಹೀಗೆ ಭೂಮಿಯನ್ನು ಸಿದ್ಧಮಾಡಿ ಮನುಷ್ಯರಿಗೆ ಧಾನ್ಯವನ್ನು ಒದಗಿಸುತ್ತೀ. ಉಳುವೆಯ ಸಾಲುಗಳನ್ನು ಸಮೃದ್ಧಿ ಯಾಗಿ ತ್ಯಾವಿಸುತ್ತೀ; ನೇಗಿಲ ಸಾಲುಗಳನ್ನು ಸಮಮಾಡುತ್ತೀ; ಸುರಿಯುವ ಮಳೆಯಿಂದ ಅದನ್ನು ಮೃದು ಮಾಡುತ್ತೀ; ಅದರ ಮೊಳಿಕೆಯನ್ನು ಆಶೀರ್ವದಿಸುತ್ತೀ. ವರುಷಕ್ಕೆ ನಿನ್ನ ಸುಭಿಕ್ಷಕಿರೀಟ ಇಡುತ್ತೀ; ನಿನ್ನ ಮಾರ್ಗಗಳಲ್ಲಿ ಸಮೃದ್ಧಿಯನ್ನು ಸುರಿಸುತ್ತೀ. ಅರ ಣ್ಯದ ಹುಲ್ಲುಗಾವಲುಗಳ ಮೇಲೂ ಸುರಿಯ ಮಾಡುತ್ತೀ; ಚಿಕ್ಕಗುಡ್ಡಗಳು ಎಲ್ಲಾ ಕಡೆಗಳಲ್ಲೂ ಉಲ್ಲಾ ಸಿಸುತ್ತವೆ.ಹುಲ್ಲುಗಾವಲುಗಳು ಮಂದೆಗಳನ್ನು ಹೊದ್ದುಕೊಳ್ಳುತ್ತವೆ; ಕಣಿವೆಗಳೂ ಧಾನ್ಯದಿಂದ ಮುಚ್ಚಿ ರುತ್ತವೆ, ಉತ್ಸಾಹಪಡುತ್ತವೆ ಮತ್ತು ಹಾಡುತ್ತವೆ.
- Genesis 27:28 ಆದಿಕಾಂಡ 27:28ಆದದರಿಂದ ದೇವರು ನಿನಗೆ ಆಕಾಶದ ಮಂಜನ್ನೂ ಸಾರವುಳ್ಳ ಭೂಮಿಯನ್ನೂ ಸಮೃದ್ಧಿಯಾದ ಧಾನ್ಯ ದ್ರಾಕ್ಷಾರಸವನ್ನೂ ಕೊಡಲಿ.
- Job 38:26–28 ಯೋಬನು 38:26–28ಅದು ಮನುಷ್ಯನಿಲ್ಲದ ಭೂಮಿಯ ಮೇಲೆಯೂ ಜನರಿಲ್ಲದ ಅರಣ್ಯದಲ್ಲಿಯೂ ಸುರಿಯುವದು; ಹಾಳು ಬೈಲು ಗಳಿಗೆ ತೃಪ್ತಿಯನ್ನು ಉಂಟು ಮಾಡುವದು; ಪಲ್ಯಗಳ ಮೊಳಿಕೆಯನ್ನು ಮೊಳಿಸುವದು. ಮಳೆಗೆ ತಂದೆ ಇದ್ದಾನೋ? ಇಲ್ಲವೆ ಮಂಜಿನ ಹನಿಗಳನ್ನು ಹುಟ್ಟಿಸು ವವನಾರು?
- Genesis 1:9 ಆದಿಕಾಂಡ 1:9ಆಗ ದೇವರು--ಆಕಾಶದ ಕೆಳಗಿರುವ ನೀರುಗಳು ಒಂದು ಸ್ಥಳದಲ್ಲಿ ಕೂಡಿಕೊಳ್ಳಲಿ ಮತ್ತು ಒಣನೆಲವು ಕಾಣಿಸಲಿ ಅಂದನು. ಅದು ಹಾಗೆಯೇ ಆಯಿತು.
- Job 38:8–11 ಯೋಬನು 38:8–11ಸಮುದ್ರವು ಗರ್ಭದೊಳಗಿಂದ ಹೊರಬಂದಂತೆ, ಅದು ಬೇಧಿಸಿಕೊಂಡು ಬಂದಾಗ ಸಮುದ್ರವನ್ನು ಬಾಗಲುಗಳಿಂದ ಮುಚ್ಚಿದವನಾರು? ನಾನು ಅದರ ವಸ್ತ್ರವಾಗಿ ಮೇಘವನ್ನೂ ಅದಕ್ಕೆ ಬಟ್ಟೆಯಾಗಿ ಅಂಧ ಕಾರವನ್ನೂ ಮಾಡಿದಾಗ ಅದಕ್ಕೆ ನನ್ನ ನೇಮವನ್ನು ನಿರ್ಣಯಿಸಿದೆನು; ಅದಕ್ಕೆ ಅಗುಳಿಗಳನ್ನೂ ಬಾಗಲು ಗಳನ್ನೂ ಇಟ್ಟೆನು. ಇಲ್ಲಿಯ ವರೆಗೆ ಬಂದು ಮುಂದುವರಿಯ ಕೂಡದು; ಇಲ್ಲಿ ನಿನ್ನ ತೆರೆಗಳ ಅಹಂಕಾರ ನಿಲ್ಲಲಿ ಅಂದೆನು.
- Job 36:27–28 ಯೋಬನು 36:27–28ಆತನು ನೀರಿನ ಹನಿಗಳನ್ನು ಕೂಡಿಸಿದಾಗ, ಅದರ ಮಂಜಿನ ಪ್ರಕಾರ ಮಳೆಯನ್ನು ಸುರಿಸುತ್ತವೆ. ಮೋಡಗಳು ಅದನ್ನು ಸುರಿಸಿ ಮನು ಷ್ಯನ ಮೇಲೆ ಸಮೃದ್ಧಿಯಾಗಿ ಸುರಿಯಮಾಡುತ್ತವೆ.
- Psalm 104:8–9 ಕೀರ್ತನೆಗಳು 104:8–9ಬೆಟ್ಟ ಗಳಿಗೆ ಏರಿ, ತಗ್ಗುಗಳಿಗೆ ಇಳಿದು, ನೀನು ಅವುಗಳಿಗೆ ಸ್ಥಾಪಿಸಿದ ಸ್ಥಳಕ್ಕೆ ಹೋದವು. ಅವು ದಾಟದ ಹಾಗೆಯೂ ಭೂಮಿಯನ್ನು ಮುಚ್ಚುವದಕ್ಕೆ ತಿರಿಗಿ ಬಾರದ ಹಾಗೆಯೂ ಮೇರೆಯನ್ನು ಇಟ್ಟಿದ್ದೀ.
- Genesis 27:37–39 ಆದಿಕಾಂಡ 27:37–39ಇಸಾಕನು ಪ್ರತ್ಯುತ್ತರವಾಗಿ ಏಸಾವನಿಗೆ--ಇಗೋ, ಅವನನ್ನು ನಿನಗೆ ದೊರೆಯಾಗಿ ಇಟ್ಟು ಅವನ ಸಹೋದರರೆಲ್ಲರನ್ನೂ ಅವನಿಗೆ ಸೇವಕ ರನ್ನಾಗಿ ಕೊಟ್ಟು ಧಾನ್ಯದಿಂದಲೂ ದ್ರಾಕ್ಷಾರಸ ದಿಂದಲೂ ಅವನನ್ನು ಪೋಷಿಸಿದ್ದೇನೆ. ಈಗ ನನ್ನ ಮಗನೇ, ನಿನಗೆ ನಾನು ಏನು ಮಾಡಲಿ ಅಂದನು. ಏಸಾವನು ತನ್ನ ತಂದೆಗೆ--ನನ್ನ ತಂದೆಯೇ, ಆ ಒಂದೇ ಆಶೀರ್ವಾದವು ನಿನಗೆ ಇದೆಯೋ? ತಂದೆಯೇ, ನನ್ನನ್ನೂ ಹೌದು, ನನ್ನನ್ನೂ ಆಶೀರ್ವದಿಸು ಎಂದು ಅವನು ಗಟ್ಟಿಯಾಗಿ ಕೂಗಿ ಅತ್ತನು. ಆಗ ಅವನ ತಂದೆಯಾದ ಇಸಾಕನು ಪ್ರತ್ಯುತ್ತರವಾಗಿ ಅವನಿಗೆ--ಇಗೋ, ನಿನ್ನ ನಿವಾಸವು ಭೂಮಿಯಸಾರ ದಿಂದಲೂ ಆಕಾಶದ ಮಂಜಿನಿಂದಲೂ ಇರುವದು.
- Deuteronomy 33:28 ಧರ್ಮೋಪದೇಶಕಾಂಡ 33:28ಇಸ್ರಾಯೇಲು ಒಂಟಿಯಾಗಿ ಭರವಸದಿಂದ ಸುರಕ್ಷಿತವಾಗಿ ವಾಸಿಸುವದು. ಧಾನ್ಯ ದ್ರಾಕ್ಷಾರಸಗಳ ದೇಶದಲ್ಲಿ ಯಾಕೋಬನ ಬುಗ್ಗೆ ಇರುವದು. ಅವನ ಆಕಾಶಗಳು ಸಹ ಮಂಜನ್ನು ಸುರಿಸುವವು.ಇಸ್ರಾಯೇಲೇ, ನೀನು ಸಂತೋಷವುಳ್ಳವನೂ ನಿನ್ನ ಸಹಾಯದ ಗುರಾಣಿಯೂ ನಿನ್ನ ಘನತೆಯ ಕತ್ತಿಯೂ ಆಗಿರುವ ಕರ್ತನಿಂದ ರಕ್ಷಿಸಲ್ಪಟ್ಟ ಓ ಜನವೇ, ನಿನ್ನ ಹಾಗೆ ಯಾರಿದ್ದಾರೆ? ನಿನ್ನ ಶತ್ರುಗಳು ನಿನಗೆ ಸುಳ್ಳುಗಾರರಾಗಿ ಕಂಡುಬರುವರು. ನೀನು ಅವರ ಉನ್ನತವಾದ ಸ್ಥಳಗಳ ಮೇಲೆ ನಡೆದು ಹೋಗುವಿ.
- Jeremiah 14:22 ಯೆರೆಮೀಯ 14:22ಅನ್ಯರ ವ್ಯರ್ಥ ವಿಗ್ರಹಗಳಲ್ಲಿ ಮಳೆ ಕೊಡಬಲ್ಲವು ಗಳು ಉಂಟೋ? ಅಥವಾ ಆಕಾಶವು ಜಡಿ ಮಳೆ ಯನ್ನು ಕೊಡುವದಕ್ಕಾಗುವದೋ? ನಮ್ಮ ದೇವ ರಾಗಿರುವ ಕರ್ತನು ನೀನೇ ಅಲ್ಲವೋ? ಆದದರಿಂದ ನಿನ್ನನ್ನು ನಿರೀಕ್ಷಿಸುವೆವು; ನೀನೇ ಇವುಗಳನ್ನೆಲ್ಲಾ ಮಾಡುತ್ತೀ.
- Joel 2:23 ಯೋವೇಲ 2:23ಹಾಗಾದರೆ ಚೀಯೋನಿನ ಮಕ್ಕಳೇ, ನಿಮ್ಮ ದೇವ ರಾದ ಕರ್ತನಲ್ಲಿ ಉಲ್ಲಾಸಿಸಿ, ಸಂತೋಷವಾಗಿರ್ರಿ; ನಿಮಗೆ ಮುಂಗಾರು ಮಳೆಯನ್ನು ಸರಿಯಾಗಿ ಕೊಡು ತ್ತಾನೆ; ಮುಂಗಾರು ಹಿಂಗಾರು ಮಳೆಗಳನ್ನು ಮುಂಚಿನ ಹಾಗೆ ನಿಮಗೆ ಸುರಿಸುತ್ತಾನೆ.