Proverbs · chapter 4 · verse 2
Proverbs 4:2 in Kannada
ನಾನು ನಿಮಗೆ ಸುಬೋಧನೆಯನ್ನು ಮಾಡುವೆನು; ನೀವು ನನ್ನ ಕಟ್ಟಳೆಯನ್ನು ಬಿಡಬೇಡಿರಿ.
Naanu nimage subodhaneyannu maaduvenu; neevu nanna kattaleyannu bidabediri.
Proverbs 4:2 in English
- King James Version (KJV)
- For I give you good doctrine, forsake ye not my law.
- World English Bible (WEB)
- for I give you sound learning. Don’t forsake my law.
- American Standard Version (ASV)
- For I give you good doctrine; Forsake ye not my law.
- Bible in Basic English (BBE)
- For I give you good teaching; do not give up the knowledge you are getting from me.
- Darby Translation (DBY)
- for I give you good doctrine: forsake ye not my law.
- Webster's Bible (WBS)
- For I give you good doctrine, forsake ye not my law.
- Young's Literal Translation (YLT)
- For good learning I have given to you, My law forsake not.
Read in context
- 1ಮಕ್ಕಳಿರಾ, ತಂದೆಯ ಶಿಕ್ಷಣವನ್ನು ನೀವು ಕೇಳಿರಿ. ವಿವೇಕವನ್ನು ಗ್ರಹಿಸುವಂತೆ ನೋಡಿರಿ.
- 2ನಾನು ನಿಮಗೆ ಸುಬೋಧನೆಯನ್ನು ಮಾಡುವೆನು; ನೀವು ನನ್ನ ಕಟ್ಟಳೆಯನ್ನು ಬಿಡಬೇಡಿರಿ.
- 3ನಾನು ಕೋಮಲನೂ ನನ್ನ ತಾಯಿಯ ದೃಷ್ಟಿಯಲ್ಲಿ ಪ್ರಿಯನಾಗಿ ಒಬ್ಬನೇ ಆಗಿದ್ದು ನನ್ನ ತಂದೆಯ ಮಗ ನಾಗಿದ್ದೇನೆ.
- 4ಅವನು ಬೋಧಿಸಿ ನನಗೆ ಹೇಳಿದ್ದೇ ನಂದರೆ--ನನ್ನ ಮಾತುಗಳನ್ನು ನಿನ್ನ ಹೃದಯವು ಹಿಡಿದುಕೊಳ್ಳಲಿ; ನನ್ನ ಆಜ್ಞೆಗಳನ್ನು ಕೈಕೊಂಡು ಜೀವಿಸು.
Cross references
- 1 Timothy 4:6 1 ತಿಮೊಥೆಯನಿಗೆ 4:6ಈ ಸಂಗತಿಗಳನ್ನು ಸಹೋದರರಿಗೆ ತಿಳಿಸಿದರೆ ನೀನು ಅನುಸರಿಸುವ ನಂಬಿಕೆಯ ಮತ್ತು ಸುಬೋಧನೆಯ ವಾಕ್ಯಗಳಲ್ಲಿ ಪೋಷಣೆ ಹೊಂದುವವರಾಗಿ ಯೇಸು ಕ್ರಿಸ್ತನ ಒಳ್ಳೇ ಸೇವಕನಾಗಿರುವಿ.
- Titus 1:9 ತೀತನಿಗೆ 1:9ತಾನು ಸ್ವಸ್ಥ ಬೋಧನೆಯಿಂದ ಎಚ್ಚರಿಸುವದಕ್ಕೂ ಎದುರಿಸು ವವರು ಒಪ್ಪುವಂತೆ ಮಾಡುವದಕ್ಕೂ ಶಕ್ತನಾಗಿರುವಂತೆ ತನಗೆ ಕಲಿಸಲ್ಪಟ್ಟ ಪ್ರಕಾರ ವಿಶ್ವಾಸದ ವಾಕ್ಯವನ್ನು ದೃಢವಾಗಿ ಹಿಡಿದುಕೊಂಡವನಾಗಿರತಕ್ಕದ್ದು.
- Proverbs 8:6–9 ಜ್ಞಾನೋಕ್ತಿಗಳು 8:6–9ಕೇಳಿರಿ, ಉತ್ಕ್ರಷ್ಟ ವಾದ ಸಂಗತಿಗಳನ್ನು ನಾನು ಮಾತಾಡುವೆನು; ನ್ಯಾಯ ವಾದ ಸಂಗತಿಗಳಿಗಾಗಿ ನನ್ನ ತುಟಿಗಳನ್ನು ತೆರೆಯು ವೆನು. ನನ್ನ ಬಾಯಿಯು ಸತ್ಯವನ್ನು ಮಾತಾಡುವದು; ನನ್ನ ತುಟಿಗಳಿಗೆ ಕೆಟ್ಟತನವು ಅಸಹ್ಯವಾಗಿದೆ. ನನ್ನ ಬಾಯಿಯ ಮಾತುಗಳೆಲ್ಲಾ ನೀತಿಯಲ್ಲಿವೆ; ಮೂರ್ಖ ತನವಾಗಲಿ ವಕ್ರತೆಯಾಗಲಿ ಅವುಗಳಲ್ಲಿ ಇಲ್ಲ. ಗ್ರಹಿ ಸುವವನಿಗೆ ಅವು ಸ್ಪಷ್ಟವಾಗಿಯೂ ತಿಳುವಳಿಕೆಯನ್ನು ಕಂಡುಕೊಳ್ಳುವವನಿಗೆ ಅವು ನ್ಯಾಯವಾಗಿಯೂ ಇವೆ.
- Job 33:3 ಯೋಬನು 33:3ನನ್ನ ಮಾತುಗಳು ನನ್ನ ಹೃದಯದ ಯಥಾರ್ಥತೆಯಿಂದ ಇರುವವು ಮತ್ತು ನನ್ನ ತುಟಿಗಳು ವಿವೇಕವನ್ನು ಸ್ಪಷ್ಟವಾಗಿ ಉಚ್ಚರಿಸುತ್ತವೆ.
- Psalm 89:30–32 ಕೀರ್ತನೆಗಳು 89:30–32ಅವನ ಮಕ್ಕಳು ನನ್ನ ನ್ಯಾಯ ಪ್ರಮಾಣವನ್ನು ಬಿಟ್ಟು, ನನ್ನ ನ್ಯಾಯಗಳಲ್ಲಿ ನಡೆಯದೇ ಹೋದರೆ, ಅವರು ನನ್ನ ನೇಮಕಗಳನ್ನು ಮುರಿದು ನನ್ನ ಆಜ್ಞೆಗಳನ್ನು ಕೈಕೊಳ್ಳದೇ ಹೋದರೆ, ಕೋಲಿ ನಿಂದ ಅವರ ದ್ರೋಹವನ್ನೂ ಪೆಟ್ಟುಗಳಿಂದ ಅವರ ಅಕ್ರಮವನ್ನೂ ದಂಡಿಸುವೆನು.
- Deuteronomy 32:2 ಧರ್ಮೋಪದೇಶಕಾಂಡ 32:2ನನ್ನ ಬೋಧನೆಯು ಮಳೆಯಂತೆ ಸುರಿಯುವದು; ನನ್ನ ಮಾತು ಮಂಜಿನಂತೆಯೂ ಹುಲ್ಲಿನ ಮೇಲೆ ಬೀಳುವ ತುಂತುರಿನ ಹಾಗೆಯೂ ಪಲ್ಯದ ಮೇಲೆ ಬೀಳುವ ವೃಷ್ಟಿಗಳ ಹಾಗೆಯೂ ಬೀಳುವದು.
- Job 11:4 ಯೋಬನು 11:4ನೀನು--ನನ್ನ ಬೋಧನೆ ನಿರ್ಮ ಲವಾದದ್ದು, ನಿನ್ನ ಕಣ್ಣುಗಳ ಮುಂದೆ ನಾನು ಶುದ್ಧನಾಗಿ ದ್ದೇನೆ ಎಂದು ಹೇಳಿದ್ದೀ.
- 2 Chronicles 7:19 2 ಪೂರ್ವಕಾಲವೃತ್ತಾಂತ 7:19ಆದರೆ ನೀವು ಹಿಂದಿರುಗಿ ನಾನು ನಿಮ್ಮ ಮುಂದೆ ಇಟ್ಟ ನನ್ನ ಕಟ್ಟಳೆಗಳನ್ನೂ ಆಜ್ಞೆಗಳನ್ನೂ ತೊರೆದು ಅನ್ಯದೇವರುಗಳನ್ನು ಸೇವಿಸಿ ಅವುಗಳಿಗೆ ಅಡ್ಡಬಿದ್ದರೆ
- Proverbs 22:20–21 ಜ್ಞಾನೋಕ್ತಿಗಳು 22:20–21ಸತ್ಯದ ಮಾತುಗಳ ಸ್ಥಿರತೆಯನ್ನು ನಾನು ನಿನಗೆ ತಿಳಿಯಪಡಿಸುವಂತೆಯೂ ನಿನ್ನ ಕಡೆಗೆ ಕಳುಹಿ ಸಿದವರಿಗೆ ನೀನು ಸತ್ಯದ ಮಾತುಗಳನ್ನು ಉತ್ತರಿ ಸುವಂತೆಯೂ ಆಲೋಚನೆಗಳ ತಿಳುವಳಿಕೆಯಲ್ಲಿ ಶ್ರೇಷ್ಠವಾದ ಸಂಗತಿಗಳನ್ನು ನಿನಗೆ ಬರೆಯಲಿಲ್ಲವೋ?
- Psalm 49:1–3 ಕೀರ್ತನೆಗಳು 49:1–3ಎಲ್ಲಾ ಜನರೇ, ಇದನ್ನು ಕೇಳಿರಿ; ಭೂಲೋಕದ ನಿವಾಸಿಗಳಿರಾ, ಕೇಳಿರಿ; ಭೂಲೋಕದ ಜನರೇ, ಉಚ್ಚ ನೀಚ ಬಡವ ಬಲ್ಲಿದರೇ, ಕೇಳಿರಿ. ನನ್ನ ಬಾಯಿ ಜ್ಞಾನವನ್ನು ನುಡಿಯುವದು, ನನ್ನ ಹೃದಯದ ಧ್ಯಾನವು ವಿವೇಕವುಳ್ಳದ್ದಾಗಿರುವದು.
- 1 Chronicles 28:9 1 ಪೂರ್ವಕಾಲವೃತ್ತಾಂತ 28:9ಇದಲ್ಲದೆ ನನ್ನ ಮಗನಾದ ಸೊಲೊಮೋನನೇ, ನೀನು ನಿನ್ನ ತಂದೆಯ ದೇವ ರನ್ನು ತಿಳಿದು ಆತನನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಸೇವಿಸು. ಕರ್ತನು ಸಕಲ ಹೃದಯಗಳನ್ನು ಶೋಧಿಸಿ ಯೋಚನೆಗಳ ಕಲ್ಪನೆಯ ನ್ನೆಲ್ಲಾ ತಿಳಿದಿದ್ದಾನೆ. ನೀನು ಆತನನ್ನು ಹುಡುಕಿದರೆ ಆತನು ನಿನಗೆ ಸಿಕ್ಕುವನು; ನೀನು ಆತನನ್ನು ಬಿಟ್ಟು ಬಿಟ್ಟರೆ ಆತನು ನಿನ್ನನ್ನು ಎಂದೆಂದಿಗೂ ತೊರೆದುಬಿಡು ವನು.
- John 7:16–17 ಯೋಹಾನನು 7:16–17ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವ ರಿಗೆ--ನನ್ನ ಬೋಧನೆಯು ನನ್ನದಲ್ಲ; ಆದರೆ ನನ್ನನ್ನು ಕಳುಹಿಸಿದಾತನದೇ. ಯಾವನಾದರೂ ಆತನ ಚಿತದಂತೆ ಮಾಡಿದರೆ ಈ ಬೋಧನೆಯು ದೇವರದೋ ಅಥವಾ ನನ್ನಷ್ಟಕ್ಕೆ ನಾನೇ ಹೇಳುತ್ತೇನೋ ಎಂಬದು ಅವನಿಗೆ ತಿಳಿಯುವದು.