Proverbs · chapter 4 · verse 3
Proverbs 4:3 in Kannada
ನಾನು ಕೋಮಲನೂ ನನ್ನ ತಾಯಿಯ ದೃಷ್ಟಿಯಲ್ಲಿ ಪ್ರಿಯನಾಗಿ ಒಬ್ಬನೇ ಆಗಿದ್ದು ನನ್ನ ತಂದೆಯ ಮಗ ನಾಗಿದ್ದೇನೆ.
Naanu komalanoo nanna taayiya drushtiyalli priyanaagi obbane aagiddu nanna tandeya maga naagiddene.
Proverbs 4:3 in English
- King James Version (KJV)
- For I was my father’s son, tender and only [beloved] in the sight of my mother.
- World English Bible (WEB)
- For I was a son to my father, tender and an only child in the sight of my mother.
- American Standard Version (ASV)
- For I was a son unto my father, Tender and only beloved in the sight of my mother.
- Bible in Basic English (BBE)
- For I was a son to my father, a gentle and an only one to my mother.
- Darby Translation (DBY)
- For I was a son unto my father, tender and an only one in the sight of my mother.
- Webster's Bible (WBS)
- For I was my father's son, tender and only [beloved] in the sight of my mother.
- Young's Literal Translation (YLT)
- For, a son I have been to my father — tender, And an only one before my mother.
Read in context
- 1ಮಕ್ಕಳಿರಾ, ತಂದೆಯ ಶಿಕ್ಷಣವನ್ನು ನೀವು ಕೇಳಿರಿ. ವಿವೇಕವನ್ನು ಗ್ರಹಿಸುವಂತೆ ನೋಡಿರಿ.
- 2ನಾನು ನಿಮಗೆ ಸುಬೋಧನೆಯನ್ನು ಮಾಡುವೆನು; ನೀವು ನನ್ನ ಕಟ್ಟಳೆಯನ್ನು ಬಿಡಬೇಡಿರಿ.
- 3ನಾನು ಕೋಮಲನೂ ನನ್ನ ತಾಯಿಯ ದೃಷ್ಟಿಯಲ್ಲಿ ಪ್ರಿಯನಾಗಿ ಒಬ್ಬನೇ ಆಗಿದ್ದು ನನ್ನ ತಂದೆಯ ಮಗ ನಾಗಿದ್ದೇನೆ.
- 4ಅವನು ಬೋಧಿಸಿ ನನಗೆ ಹೇಳಿದ್ದೇ ನಂದರೆ--ನನ್ನ ಮಾತುಗಳನ್ನು ನಿನ್ನ ಹೃದಯವು ಹಿಡಿದುಕೊಳ್ಳಲಿ; ನನ್ನ ಆಜ್ಞೆಗಳನ್ನು ಕೈಕೊಂಡು ಜೀವಿಸು.
- 5ಜ್ಞಾನವನ್ನೂ ವಿವೇಕವನ್ನೂ ಸಂಪಾದಿಸು; ಅವುಗಳನ್ನು ಮರೆಯದಿರು, ಅಲ್ಲದೆ ನನ್ನ ಬಾಯಿಯ ಮಾತುಗಳನ್ನು ನಿರಾಕರಿಸಬೇಡ.
Cross references
- 1 Chronicles 22:5 1 ಪೂರ್ವಕಾಲವೃತ್ತಾಂತ 22:5ಇದ ಲ್ಲದೆ ದಾವೀದನು--ನನ್ನ ಮಗನಾದ ಸೊಲೊಮೋ ನನು ಹುಡುಗನಾಗಿಯೂ ಮೃದುವಾದವನಾಗಿಯೂ ಇದ್ದಾನೆ; ಕರ್ತನಿಗೆ ಕಟ್ಟಬೇಕಾದ ಮನೆಯೂ ಸಮಸ್ತ ದೇಶಗಳಲ್ಲಿ ಕೀರ್ತಿಯಲ್ಲಿಯೂ ಸೌಂದರ್ಯದ ಲ್ಲಿಯೂ ಅಧಿಕ ಘನವಾಗಿರಬೇಕು; ನಾನು ಅದ ಕ್ಕೋಸ್ಕರ ಈಗ ಸಿದ್ಧಮಾಡುವೆನೆಂದು ಹೇಳಿದನು. ಆದದರಿಂದ ದಾವೀದನು ಸಾಯುವದಕ್ಕಿಂತ ಮುಂಚೆ ಬಹಳವಾಗಿ ಸಿದ್ಧಮಾಡಿದನು.
- Romans 12:16 ರೋಮಾಪುರದವರಿಗೆ 12:16ಒಬ್ಬರಿಗೊಬ್ಬರು ಒಂದೇ ಮನಸ್ಸುಳ್ಳುವರಾಗಿರ್ರಿ; ದೊಡ್ಡಸ್ತಿಕೆಗಳ ಮೇಲೆ ಮನಸ್ಸಿಡದೆ ದೀನರ ಸಂಗಡ ಬಳಿಕೆಯಾಗಿರ್ರಿ. ನಿಮ್ಮನ್ನು ನೀವೇ ಬುದ್ಧಿವಂತರೆಂದು ಭಾವಿಸಿಕೊಳ್ಳಬೇಡಿರಿ.
- 1 Chronicles 29:1 1 ಪೂರ್ವಕಾಲವೃತ್ತಾಂತ 29:1ಇದಲ್ಲದೆ ಅರಸನಾದ ದಾವೀದನು ಸಮಸ್ತ ಸಭೆಗೆ ಹೇಳಿದ್ದೇನಂದರೆ -- ದೇವರು ಒಬ್ಬನನ್ನೇ ಆದುಕೊಂಡ ನನ್ನ ಮಗನಾದ ಸೊಲೊ ಮೋನನು ಚಿಕ್ಕವನಾಗಿಯೂ ಮೃದುವಾಗಿಯೂ ಇದ್ದಾನೆ. ಆದರೆ ಕೆಲಸವು ದೊಡ್ಡದು; ಈ ಅರಮನೆ ಯು ಮನುಷ್ಯರಿಗೋಸ್ಕರವಲ್ಲ, ಕರ್ತನಾದ ದೇವರಿ ಗೋಸ್ಕರವೇ.
- 2 Samuel 12:24–25 2 ಸಮುವೇಲನು 12:24–25ದಾವೀದನು ತನ್ನ ಹೆಂಡತಿಯಾದ ಬತ್ಷೆಬೆಯನ್ನು ಆದರಿಸಿ ಅವಳ ಬಳಿಗೆ ಹೋಗಿ ಅವಳ ಸಂಗಡ ಮಲಗಿದನು.ಅವಳು ಒಬ್ಬ ಮಗನನ್ನು ಹೆತ್ತಳು. ಅವನಿಗೆ ಸೊಲೊಮೋನನೆಂದು ಹೆಸರಿಟ್ಟನು. ಕರ್ತನು ಅವ ನನ್ನು ಪ್ರೀತಿಮಾಡಿದನು. ಪ್ರವಾದಿಯಾದ ನಾತಾ ನನ ಮುಖಾಂತರ ಕರ್ತನ ನಿಮಿತ್ತ ಅವನಿಗೆ ಯೆದೀದ್ಯ ನೆಂದು ಹೆಸರಿಟ್ಟನು.
- Jeremiah 10:23 ಯೆರೆಮೀಯ 10:23ಕರ್ತನೇ, ಮನುಷ್ಯನ ಮಾರ್ಗವು ತನ್ನಲ್ಲಿಲ್ಲವೆಂದೂ ತನ್ನ ಹೆಜ್ಜೆ ನೆಟ್ಟಗೆ ಮಾಡುವದು ನಡೆಯುವ ಮನುಷ್ಯನದಲ್ಲವೆಂದೂ ಬಲ್ಲೆನು.
- 1 Kings 1:13–17 1 ಅರಸುಗಳು 1:13–17ನೀನು ದಾವೀದನ ಬಳಿಗೆ ಹೋಗಿ ಅವ ನಿಗೆ--ಅರಸನಾದ, ನನ್ನ ಒಡೆಯನೇ, ನಿಶ್ಚಯವಾಗಿ ನನ್ನ ತರುವಾಯ ನಿನ್ನ ಮಗನಾದ ಸೊಲೊಮೋನನು ಆಳುವನೆಂದೂ ಅವನು ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವನೆಂದೂ ನಿನ್ನ ದಾಸಿಗೆ ಆಣೆ ಇಟ್ಟು ಹೇಳಲಿಲ್ಲವೋ? ಹೀಗಿರಲಾಗಿ ಅದೋನೀಯನು ಆಳುವದು ಯಾಕೆ ಎಂದು ಹೇಳು. ಇಗೋ, ನೀನು ಇನ್ನೂ ಅರಸನ ಸಂಗಡ ಮಾತ ನಾಡುತ್ತಿರುವಾಗ ನಾನು ನಿನ್ನ ಹಿಂದೆಯೇ ಒಳಗೆ ಬಂದು ನಿನ್ನ ಮಾತು ಗಳನ್ನು ಸ್ಥಿರಮಾಡುವೆನು ಅಂದನು. ಆಗ ಬತ್ಷೆಬೆಳು ಕೊಠಡಿಯೊಳಗೆ ಅರಸನ ಬಳಿಗೆ ಹೋದಳು. ಅರ ಸನು ಅತಿವೃದ್ಧನಾಗಿರುವದರಿಂದ ಶೂನೇಮ್ಯಳಾದ ಅಬೀಷಗ್ಳು ಅರಸನಿಗೆ ಸೇವೆಮಾಡುತ್ತಾ ಇದ್ದಳು. ಬತ್ಷೆಬೆಳು ಬಾಗಿ ಅರಸನಿಗೆ ವಂದನೆ ಮಾಡಿದಳು. ಅರಸನು--ನಿನಗೇನು ಬೇಕು ಅಂದನು. ಆಕೆಯು ಅವನಿಗೆ--ನನ್ನ ಒಡೆಯನೇ, ನಿಶ್ಚಯವಾಗಿ ನಿನ್ನ ತರುವಾಯ ನಿನ್ನ ಮಗನಾದ ಸೊಲೊಮೋನನು ಆಳುವನೆಂದೂ ಅವನು ನಿನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವನೆಂದೂ ನೀನು ನಿನ್ನ ದಾಸಿಗೆ ನಿನ್ನ ದೇವರಾದ ಕರ್ತನ ಹೆಸರಿನಲ್ಲಿ ಪ್ರಮಾಣಮಾಡಿದಿ.
- 1 Chronicles 3:5 1 ಪೂರ್ವಕಾಲವೃತ್ತಾಂತ 3:5ಯೆರೂಸ ಲೇಮಿನಲ್ಲಿ ಅವನಿಗೆ ಹುಟ್ಟಿದವರು ಯಾರಂದರೆ ಅವ್ಮೆಾಯೇಲನ ಮಗಳಾದ ಬತ್ಷೂವಳಿಂದ ಹುಟ್ಟಿದ ಶಿಮ್ಮನು, ಶೋಬಾಬನು, ನಾತಾನನು,
- Zechariah 12:10 ಜೆಕರ್ಯ 12:10ದಾವೀದನ ಮನೆತನದವರ ಮೇಲೆಯೂ ಯೆರೂಸಲೇಮಿನ ನಿವಾಸಿಗಳ ಮೇಲೆಯೂ ಕೃಪೆಯ ಆತ್ಮವನ್ನೂ ಬಿನ್ನಹಗಳ ಆತ್ಮವನ್ನೂ ಒಯ್ಯುವೆನು; ಇರಿದವರು ಆತನನ್ನು ದೃಷ್ಟಿಸಿ ನೋಡುವರು; ಒಬ್ಬನೇ ಮಗನ ನಿಮಿತ್ತ ಗೋಳಾಡುವವನ ಹಾಗೆ ಆತನ ನಿಮಿತ್ತ ಗೋಳಾಡುವರು; ಚೊಚ್ಚಲ ಮಗನ ನಿಮಿತ್ತ ವ್ಯಥೆಪಡುವವನ ಹಾಗೆ ಆತನ ನಿಮಿತ್ತ ವ್ಯಥೆಪಡು ವರು.